11.19

अनादिमध्यान्तमनन्तवीर्य-
मनन्तबाहुं शशिसूर्यनेत्रम् ।
पश्यामि त्वां दीप्तहुताशवक्त्रं
स्वतेजसा विश्वमिदं तपन्तम् ॥
anādimadhyāntamanantavīrya-
manantabāhuṃ śaśisūryanetram |
paśyāmi tvāṃ dīptahutāśavaktraṃ
svatejasā viśvamidaṃ tapantam ||
Swami Sivananda (1887–1963)Bhagavad Gita
19. I see Thee without beginning, middle or end, infinite in power, of endless arms, the sun and the moon being Thy eyes, the burning fire Thy mouth, heating the entire universe with Thy radiance.
Bannanje Govindacharya (1936–2020)Bhagavad Gita Pravachana
ಅನಾದಿ ಮಧ್ಯಾಂತಮ್‌ ಅನಂತವೀರ್ಯಮ್‌ ಅನಂತಬಾಹುಮ್‌ ಶಶಿಸೂರ್ಯನೇತ್ರಮ್‌ | ಪಶ್ಯಾಮಿ ತ್ವಾಮ್‌ ದೀಪ್ತ ಹುತಾಶ ವಕ್ರಂ ಸ್ವತೇಜಸಾ ವಿಶ್ವಮ್‌ ಇದಮ್‌ ತಪಂತಮ್‌ -ಗುಣಗಳಿಗೆ ಬುಡವಿಲ್ಲ; ನಡುವಿಲ್ಲ; ತುದಿಯಿಲ್ಲ. ಆಳವನ್ನು ಅಳೆದವರಿಲ್ಲ. ಎಣಿಕೆಯಿರದ ತೋಳುಗಳು. ಸೂರ್ಯಚಂದ್ರರನು ಹುಟ್ಟಿಸಿದ ಕಣ್ಣುಗಳು. ಉರಿವ ಬೆಂಕಿಯನುಗುಳುವ ಬಾಯಿ. ಕಾಣುತ್ತಿದ್ದೇನೆ ತನ್ನ ಥಟ್ಟುರಿಯಿಂದ ಈ ಜಗವ ಸುಟ್ಟುರಿವ ನಿನ್ನನ್ನು ನಿನ್ನ ಗುಣಗಳಿಗೆ ಆದಿ ಅಂತ ನಡುವೆಂಬುದಿಲ್ಲ. ನೀನು ಅನಂತವೀರ್ಯ. ಆದಿ ಅಂತವಿಲ್ಲದ ಪರಾಕ್ರಮ ನಿನ್ನದು. ನಾಶವಿಲ್ಲದ ಅನಂತ ಅವಯವಗಳು. ನಿನ್ನ ಕಣ್ಣುಗಳಿಂದ ಹುಟ್ಟಿದ ಆ ಸೂರ್ಯ ಚಂದ್ರರು; ಉಗುಳುವ ಬೆಂಕಿಯ ಜ್ವಾಲೆ ನಿನ್ನ ಬಾಯಿಯಲ್ಲಿ. ನಿನ್ನ ತೇಜಸ್ಸಿನಿಂದ ಇಡೀ ವಿಶ್ವ ಸುಟ್ಟುರಿದಂತಿದೆ.
Bibek Debroy (1955–2024)The Bhagavad Gita
(19) ‘I behold you without beginning, middle and end, infinite in strength, with uncountable arms, the sun and moon your eyes, face like ignited fire, scorching this universe with your energy.’