11.53

नाहं वेदैर्न तपसा न दानेन न चेज्यया ।
शक्य एवंविधो द्रष्टुं दृष्टवानसि मां यथा ॥
nāhaṃ vedairna tapasā na dānena na cejyayā |
śakya evaṃvidho draṣṭuṃ dṛṣṭavānasi māṃ yathā ||
Swami Sivananda (1887–1963)Bhagavad Gita
53. Neither by the Vedas, nor by austerity, nor by gift, nor by sacrifice, can I be seen in this form as thou hast seen Me (so easily).
Bannanje Govindacharya (1936–2020)Bhagavad Gita Pravachana
11.52–11.53
ಭಗವಾನುವಾಚ-ಭಗವಂತ ಹೇಳಿದನು: ಸುದುರ್ದರ್ಶಮ್‌ ಇದಮ್‌ ರೂಪಮ್‌ ದೃಷ್ಟವಾನ್‌ ಅಸಿ ಯತ್‌ ಮಮ | ದೇವಾಃ ಅಪಿ ಅಸ್ಯ ರೂಪಸ್ಯ ನಿತ್ಯಮ್‌ ದರ್ಶನ ಕಾಂಕ್ಷಿಣಃ || ನ ಅಹಂ ವೇದೈಃ ನ ತಪಸಾ ನ ದಾನೇನ ನ ಚ ಇಜ್ಯಿಯಾ | ಶಕ್ಯಃ ಏವಂ ವಿಧಃ ದ್ರಷ್ಟುಮ್‌ ದೃಷ್ಟವಾನ್‌ ಅಸಿ ಮಾಮ್‌ ಯಥಾ --ನೀನು ಕಂಡ ನನ್ನ ಈ ರೂಪ ಸುಲಭವಾಗಿ ಕಾಣಬರುವಂತದಲ್ಲ. ದೇವತೆಗಳು ಕೂಡಾ ಈ ರೂಪವನ್ನು ಕಾಣಲೆಂದು ಅನುಗಾಲ ಕಾಯುತ್ತಿರುತ್ತಾರೆ. ನೀನು ಕಂಡ ಹಾಗೆ ಈ ಬಗೆಯ ನನ್ನನ್ನು ಕಾಣಲು ಬರಿದೆ ವೇದಗಳನ್ನೋದುವುದರಿಂದ ಸಾಧ್ಯವಿಲ್ಲ. ಇಲ್ಲ ತಪಸ್ಸಿನಿಂದ, ಇಲ್ಲ ದಾನದಿಂದ, ಇಲ್ಲ ಯಜ್ಞದಿಂದಲೂ. ಭಗವಂತ ಅರ್ಜುನನಿಗೆ ಕಾಣಿಸಿದ ತನ್ನ ಅಪೂರ್ವ ರೂಪ ಬಹಳ ದುರ್ಲಭರೂಪ. ಇಂತಹ ಅಪೂರ್ವ ರೂಪವನ್ನು ಕಾಣಲು ದೇವತೆಗಳೂ ಕೂಡಾ ಆಸೆಯಿಂದ ಅನುಗಾಲ ಕಾಯುತ್ತಿರುತ್ತಾರೆ. ಕೃಷ್ಣ ಇಲ್ಲಿ ಮತ್ತೆ ಒತ್ತು ಕೊಟ್ಟು ಹಿಂದೆ ಹೇಳಿದ ವಿಚಾರವನ್ನು ಮರಳಿ ಹೇಳುತ್ತಾನೆ. “ಸ್ವಸಾಮರ್ಥ್ಯದಿಂದ(ವೇದಾಧ್ಯಾಯನ, ಯಜ್ಞ, ದಾನ, ತಪಸ್ಸು ಇತ್ಯಾದಿ ಕರ್ಮಗಳನ್ನು ಮಾಡುವ ಮುಖೇನ) ನನ್ನ ಈ ವಿಶಿಷ್ಠ ರೂಪವನ್ನು ಕಾಣಲು ಸಾಧ್ಯವಿಲ್ಲ”ಎನ್ನುತ್ತಾನೆ ಕೃಷ್ಣ.
Bibek Debroy (1955–2024)The Bhagavad Gita
(53) ‘Not through the Vedas, nor austerities, nor donations, nor even yajnas, is it possible to see me in the form that you have seen me in.’