अर्जुन उवाच ।
एवं सततयुक्ता ये भक्तास्त्वां पर्युपासते ।
ये चाप्यक्षरमव्यक्तं तेषां के योगवित्तमाः ॥
arjuna uvāca |
evaṃ satatayuktā ye bhaktāstvāṃ paryupāsate |
ye cāpyakṣaramavyaktaṃ teṣāṃ ke yogavittamāḥ ||
Sri Madhvacharya (1238–1317)Bhagavad Gita Tatparya Nirnaya
‘श्रिये जातः श्रिय आ निरीयाय श्रियं वयो जरितृभ्यो दधाति।
श्रियं वसाना अमृतत्वमायन् भवन्ति सत्या समिथा मितद्रौ’
‘उपासिता मुक्तिदा सद्य एव ह्यस्येशाना जगतो विष्णुपत्नी।
‘या श्रीर्लक्ष्मीरौपला चाम्बिकेति ह्रीश्चेत्युक्ता संविदग्र्या सुविद्या’ - इत्यादिश्रुतिभ्यः
‘श्रीः सुतुष्टाहरेस्तोषं जनयेत् क्षिप्रमेव तु।
अतुष्टा तदतुष्टिं च तस्माद् ध्येयैव स सदा।
अव्यक्तं प्रकृतिं प्राहुः कूटस्थं चाक्षरं च ताम्।
प्रधानमिति च प्राहुर्महापुरुष इत्यपि।
तां ब्रह्म महदित्याहुः परं जीवं परां चितिम्।
तस्यास्तु परमो विष्णुर्यो ब्रह्म परमं महत्’
इति ब्रह्माण्डवचनाच्चाव्यक्तोपासनान्मोक्षाशङ्कया पृच्छति। ‘कूटस्थोऽक्षर उच्यते’ इत्युत्तरवचनात्
‘कूटस्थमचलम्’ इत्यत्राप्युक्तेरव्यक्तशब्दश्चित्प्रकृतिवाची। अन्यथा ‘ये त्वां पर्युपासते, ये चाप्यक्षरम्,
तेषां के योगवित्तमाः’इति भेदेन प्रश्नानुपपत्तिः।
‘परं ब्रह्म परं धाम पवित्रं परमं भवान्’ इति तेनैवोक्तत्वात्।
ये तु ‘ते मे युक्ततमा मताः’ ‘मय्येव मन आधत्स्व’ इत्यादौ
भगवतोक्तेऽप्यव्यक्तोपासकानामाधिक्यं वदन्ति ते त्वपलापकत्वादेवातिसाहसिका इति सुशोच्या एव।
‘न चलेत् स्वात् पदाद् यस्मादचला श्रीस्ततो मता’ इत्याग्नेये।
‘सूक्ष्मत्वादप्रसिद्धत्वाद् गुणबाहुल्यतस्तथा।
अनिर्देश्यौ तथाऽव्यक्तावचिन्त्यौ श्रीश्च माधवः’ इति नारदीये।
‘अविष्णुज्ञैरतद्भक्तैस्तदुपासविवर्जितैः।
शपेदुपासिताऽप्येषा श्रीस्तांस्तद्धरितत्त्ववित्।
तद्भक्तस्तमुपास्यैव श्रियं ध्यायीत नित्यदा।
तेन तुष्टा तु साऽच्छिद्रं दद्याद् विष्णोरुपासनम्।
ततस्तद्दर्शनान्मुक्तिं यात्यसौ नात्र संशयः।
तथाऽपि सर्वपरमां सर्वदोषविवर्जिताम्।
ज्ञात्वा श्रियं तत्परमं तत्पतिं पुरुषोत्तमम्।
विज्ञायोपासते नित्यं ते हि युक्ततमा मताः।
यतः क्लेशोऽधिकस्तेषां पृथक् श्रियमुपासताम्।
विष्णुना सहिता ध्याता साऽपि तुष्टिं परां व्रजेत्।
अन्यथा तु पुनर्विष्णोः श्रीपतित्वेन चिन्तनम्।
अच्छिद्रमेव कर्तव्यमिति मुक्तिश्चिराद्भवेत्।
तस्मादक्लेशतो मुक्तिः क्षिप्रं विष्णुमुपासताम्’ इति परमश्रुतिः॥01॥
Swami Sivananda (1887–1963)Bhagavad Gita
1. Those devotees who, ever steadfast, thus worship Thee and those also who worship the
Imperishable and the Unmanifested—which of them are better versed in Yoga?
COMMENTARY: The twelfth discourse indicates that Bhakti Yoga is much easier than
Jnana Yoga or the Yoga of knowledge.
Sri Vishwesha Tirtharu (1931–2019)Gitasaroddhara
12.1–12.5 · ಶ್ರೀತತ್ತ್ವ ಉಪಾಸನೆ
ಶ್ರೀತತ್ತ್ವದ ಉಪಾಸನೆ
ಹಾಂ
ಪರಮಾತ್ಮನ ಭಕ್ತಿಹಾಗೂ ಅವನ ಉವಾಸನೆಯಿಂದಲೇ ಮುಕ್ತಿಎಂಬುದು
ಈವರೆಗಿನ ಭಕ್ತಿಯೋಗದ ವಿಸ್ಸತನಿರೂಪಣೆಯಿಂದ ಸ್ಪಷ್ಟವಾಗಿದೆ. ಆದರೂ
ಪರಮಾತ್ಮನ ಉಪಾಸನೆಯ ಬದಲು ಜಗತ್ತಿನ ಮೂಲಕಾರಣವಾದ
ಜಡಪ್ರಕೃತಿಯ ಅಭಿಮಾನಿಯಾದ ಚಿತ್ವ್ರಕೃತಿ ಎನಿಸಿರುವ ಶ್ರೀತತ್ತ್ವದ
ಉವಾಸನೆಯಿಂದಲೂ ಮುಕ್ತಿಯು ದೊರೆಯಬಹುದೆ? ಎಂಬ ಪ್ರಶ್ನೆಯು
ಉದ್ಭವಿಸುತ್ತದೆ. ವರಮವುರುಷನಾದ ಶ್ರೀನಾರಾಯಣನು ಮತ್ತು
ಜಗನ್ಮಾತೆಯೂ ಮಂಗಲದೇವತೆಯೂ ಆದ ಲಕ್ಷ್ಮೀದೇವಿಯು ಇವರಿಬ್ಬರೂ
ಸಮಾನವ್ಯಾಪ್ತಿ ಯುಳ್ಳ ನಿತ್ಯಮುಕ್ತರಾದ ಜಗತ್ತಿನ ಪರತತ್ತ್ವಗಳೆನಿಸಿದ್ದಾರೆ.
ಹ 6111... 1. | ಬ್ಲ ಇಂ ನಾ
ಇವರಿಬ್ಬರಲ್ಲಿ ಯಾರ ಉವಾಸನೆಯಿಂದಲೂ ಮುಕ್ತಿ ಯನ್ನು ವಡೆಯಬಹು
ದೆಂಬ ಶಂಕೆಯು ಮೂಡುವುದು ಸಹಜವಾಗಿದೆ. ಅದರಲ್ಲಿಯೂ ಜಗತ್ತಿನ
ತಂದೆಯಾದ ಶ್ರೀಹರಿ ಯನ್ನು ಪ್ರಸನ್ನ ಗೊಳಿಸುವುದಕ್ಕಿಂತ ಜಗನ್ಮಾತೆಯನ್ನು
ಬೇಗನೆ ಒಲಿಸಬಹು ದಾದುದರಿಂದ ಈ ಸುಲಭೋವಾಯವನ್ನೇ ಏಕೆ
ಅನುಸರಿಸಬಾರದು? ಎಂಬ ಭಾವನೆಯೂ ಸಹಜವಾಗಿ ಉಂಟಾಗುತ್ತದೆ. ಈ
ಸಂದೇಹವನೇ ಅರ್ಜುನನೂ ಶ್ರೀಕೃಷ್ಣನಲ್ಲಿ ತೋಡಿಕೊಳ್ಳುತಾನೆ.
ರ ಕ (ಸಲ! ಓ ಗಸಿ ಆ ಅದ್ಯ ದಾದ ್್್್ “ಬನ
ಏವಂ ಸತತಯುಕ್ತಾ ಯೇಭಕ್ತಾ ಸ್ತಾ ಕ ಪರ್ಯುಪಾಸತೇ |
ಯೇ ಚಾಷ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾಃ ॥
ಅವ್ಪಕತತ ದ ಅರ್ಥಾತ್ ಶ್ರೀತತ್ನ್ನದ ಉಪಾಸನೆಯನ್ನು ಮಾಡಿದರೂ
ಕ್ ಕ್ ಆಟದಿ ಯ್ ತ ಗ ಗಗ ಗಳಗ [|
ಪರಮಾತ್ಮನ ಉಪಾಸನೆ ಮತ್ತು ಸಾಕ್ಟಾತ್ಕಾರವಿಲ್ಲದೆ ಮುಕ್ತಿಯನ್ನು ಸರ್ವಥಾ
ವಡೆಯಲು ಶಕ್ಕವಿಲ್ಲ. ತನ್ನನ್ನು ಉಪಾಸನೆ ಮಾಡಿದರೂ ಪರಮವುರುಷನ
ಆರಾಧನೆಯನ್ನು ಮಾಡದ ವ್ಯಕ್ತಿಯಲ್ಲಿ ದೇವಿಯೂ ಪ್ರಸನ್ನಳಾಗುವುದಿಲ್ಲ.
ದೇವಿಯ ಉವಾಸನೆಯು ಕ್ಲಿಷ್ಟವಾದ ಭಗವದುಪಾಸನೆಯ ಮಾರ್ಗವನ್ನು
ಸುಲಭಗೊಳಿಸುವುದರಿಂದ ಮೋಕ್ಷಾರ್ಥಿಗಳು ಅದನ್ನು ಸ್ವಾಗತಿಸಬಹು
ದಾದರೂ ಅದರಿಂದಲೇಮುಕ್ತಿಯನ್ನುಪಡೆಯಲು ಸಾಧ್ಯವಿಲ್ಲ. ಆದುದರಿಂದ
ಚಿತ್ವ್ರಕೃತಿಯನ್ನು ಉವಾಸಿಸಿ ಅದರ ಮೂಲಕವಾಗಿ ಪರಮಪುರುಷನ
ಉಪಾಸನೆಯನ್ನು ಗೈಯುವ ಈ ಬಳಸು ದಾರಿಯನ್ನು ಅನುಸರಿಸುವುದಕ್ಕಿಂತ
ನೇರವಾಗಿ ತನ್ನನ್ನೇ ಆರಾಧಿಸುವ ಸುಲಭ ಮಾರ್ಗವನ್ನೇ ಹಿಡಿಯುವಂತೆ
ಶ್ರೀಕೃಷ್ಣನು ಉಪದೇಶಿಸುವನು.
ಕ್ಲೇಶೋನಧಿಕತರಸ್ತೇಷಾಂ ಅವೃಕ್ತಾ ಸಕ್ತಚೇತಸಾಮ್ ।
ಜಗತ್ತಿನ ತಂದೆ ತಾಯಂದಿರಾದ ಪರಮಾತ್ಮ ಮತ್ತು ಚಿತ್ಪ್ರಕೃತಿ ಇವೆರಡು
ಪರತತ್ವ್ವಗಳನ್ನು ಚಿಂತಿಸಿಕೊಂಡು ಲಕ್ಷ್ಮೀಪತಿಯಾದ ಶ್ರೀಹರಿಯ ಪೂಜೋ
ಪಾಸನೆಗಳಿಂದಲೇ ಮೋಕ್ಷಪದವಿಯನ್ನು ಪಡೆಯಲು ಪ್ರಯತ್ನಿಸುವುದು
ಸರಿಯಾದ ಹಾಗೂ ಸುಲಭವಾದ ಮಾರ್ಗವಾಗಿದೆ. ಒಂದು ದೃಷ್ಟಿಯಿಂದ
ನಾವೆಲ್ಲರೂ ಲಕ್ಷ್ಮಿಯ ಆರಾಧಕರೇ ಎಂದೆನ್ನಬಹುದು. ಪರಮಾತ್ಮನನ್ನು
ಮರೆತು ಜೀವನವಿಡೀ ಲಕ್ಷ್ಮಿಯ ಅರ್ಥಾತ್ ಸಂಪತ್ತಿನ ಧ್ಯಾನದಲ್ಲಿಯೇ ನಾವು
ಮುಳುಗಿದ್ದೇವೆ. ಆದರೆ ದೇವನನ್ನು ಮರೆತು ಬರೇ ಸಂವತ್ತಿನ ಚಿಂತನದಲ್ಲೇ
ತಲ್ಲೀನರಾದ ನಮಗೆ ಸಿರಿದೇವಿಯು ಒಲಿದಾಳೆಯೆ? ಸಿರಿಯೊಡೆಯನನ್ನು
ತೊರೆದ ನಮ್ಮಿಂದ ಸಿರಿಯೂ ದೂರವಿರುವುದು ಸಹಜವೇ ಆಗಿದೆ.
ವಿಷ್ಣುನಾ ಸಹಿತಾ ಧ್ಯಾತಾಸಾ ಹಿ ತುಪ್ಪಿಂ ಪರಾಂ ವ್ರಜೇತ್ ।
ವಿಷ್ಣುವಿನ ಜೊತೆಗೆ ಪೂಜಿಸಿದರೇನೇ ಲಕ್ಷ್ಮಿಗೆ ಪರಮ ಸಂತೋಷವಂತೆ.
ಪರಮಾತ್ಮನನ್ನು ಮರೆತು ಜೀವನವಿಡೀ ಬರಿಸಿರಿ-ಸಂಪತ್ತುಗಳ ವೂಜೆಯನ್ನೇ
ನಡೆಸುವ ನಾವು ಭೂತಿ ಮತ್ತು ಭಗವಂತ ಇವೆರಡನ್ನೂ ಕಳೆದುಕೊಳ್ಳುತ್ತೇವೆ.
ಅಂತೂ ಲಕ್ಷ್ಮೀ ಉಪಾಸನೆಗಿಂತಲೂ ಲಕ್ಷ್ಮೀನಾರಾಯಣನ ಉಪಾಸನೆಯೇ
ಜೀವನದ ವರಮಪುರುಷಾರ್ಥವನ್ನು ಪಡೆಯುವ ಶ್ರೇಷ್ಠವಾದ ಸಾಧನವೆಂದು ಈ
ಭಾಗದತಾತ್ಚರ್ಯವಾಗಿದೆ.
Bannanje Govindacharya (1936–2020)Bhagavad Gita Pravachana
ಅರ್ಜುನಃ ಉವಾಚ -ಅರ್ಜುನ ಕೇಳಿದನು:
ಏವಮ್ ಸತತ ಯುಕ್ತಾಃ ಯೇ ಭಕ್ತಾಃ ತ್ವಾಮ್ ಪರ್ಯುಪಾಸತೇ।
ಯೇ ಚ ಅಪಿ ಅಕ್ಷರಮ್ ಅವ್ಯಕ್ತಮ್ ತೇಷಾಮ್ ಕೇ ಯೋಗವಿತ್ತಮಾಃ -ಹೀಗೆ ನಿರಂತರ ಸಾಧನೆಯಿಂದ
ನಿನ್ನನ್ನು ಸೇವಿಸುವವರು ಭಕ್ತರು ಮತ್ತು ಅಳಿವಿರದ ಅವ್ಯಕ್ತತತ್ವ(ಶ್ರೀತತ್ವ)ದ ಉಪಾಸಕರು. ಇವರಲ್ಲಿ ಯಾರು
ಹೆಚ್ಚಿನವರು.
ಈ ಶ್ಲೋಕವನ್ನು ಮೇಲ್ನೋಟದಲ್ಲಿ ನೋಡಿದರೆ ಭಗವಂತನ ವಿಶಿಷ್ಟರೂಪದ ಉಪಾಸನೆ ಮತ್ತು ಯಾವುದೇ
ರೂಪಗಳಿಂದ ವ್ಯಕ್ತವಾಗದ ನಿರಾಕಾರ ಭಗವಂತನ ಉಪಾಸನೆ-ಇವೆರಡರಲ್ಲಿ ಯಾವುದು ಸೂಕ್ತ ಎಂದು
ಕೇಳಿದಂತೆ ಕಾಣುತ್ತದೆ. ಆದರೆ ಈ ಶ್ಲೋಕದಲ್ಲಿ ಅರ್ಜುನ ಕೇಳುತ್ತಿರುವ ಮೂಲ ಪ್ರಶ್ನೆಯೇ ಬೇರೆ. ಇದನ್ನು
ಮಧ್ವಾಚಾರ್ಯರು ವಿಶಿಷ್ಟವಾಗಿ ವಿವರಿಸಿದ್ದಾರೆ.
ಭಗವಂತನ ಚಿಂತನೆ ಮಾಡುವವರೆಲ್ಲಾ ಭಗವದ್ ಭಕ್ತರಾಗಿರಬೇಕೆಂದೇನಿಲ್ಲ. = ಭಗವಂತನ ಚಿಂತನೆ
ಮಾಡುವುದಕ್ಕೆ ಬೇಕಾಗಿರುವ ಮೂಲದ್ರವ್ಯ ಪ್ರೀತಿ. ಜ್ಞಾನಪೂರ್ವಕವಾದ ಪ್ರೀತಿಯೇ-ಭಕ್ತಿ. ಹಿಂದಿನ ಕಾಲದಲ್ಲಿ
ಪ್ರತಿಯೊಬ್ಬರ ಮನೆಯ ದೇವರ ಕೋಣೆಯಲ್ಲೊಂದು ವಿಗ್ರಹವಿರುತ್ತಿತ್ತು. ಅವರವರ ಉಪಾಸನೆಗೆ ಯಾವುದು
ಇಷ್ಟವೋ ಅಂತಹ ಇಷ್ಟದೇವತೆಯ ವಿಗ್ರಹ. ನಾವು ಈ ಅಂಶವನ್ನು ವಿಶ್ಲೇಷಿಸಿದರೆ ಏಕೆ ಈ ರೀತಿ ಪ್ರತಿಮೆಯನ್ನು
ಇಟ್ಟು ಪೂಜಿಸುತ್ತಿದ್ದರು ಎನ್ನುವುದು ತಿಳಿಯುತ್ತದೆ. ಇಲ್ಲಿ ಮೊದಲು ನಾವು ನಮ್ಮ ಮನಸ್ಸು ಹೇಗೆ ಕೆಲಸ
ಮಾಡುತ್ತದೆ ಎನ್ನುವ ವಿಚಾರವನ್ನು ತಿಳಿದುಕೊಳ್ಳಬೇಕು. ಕಣ್ಣಿನಿಂದ ನೋಡದ್ದನ್ನು ಮನಸ್ಸು ಗ್ರಹಿಸುವುದಿಲ್ಲ.
ಉದಾಹರಣೆಗೆ ಭಗವಂತ “ಅತ್ಯಂತ ಸುಂದರ' ಎಂದು ತಿಳಿದು ನಾವು ಕಣ್ಣುಮುಚ್ಚಿ ಧ್ಯಾನಕ್ಕೆಕುಳಿತರೆ, ನಮ್ಮ
ಮನಸ್ಸು ನಾವು ನೋಡಿದ ಯಾವುದೋ ಒಬ್ಬ ಸುಂದರ ಮನುಷ್ಯನನ್ನು ನಮಗೆ ತೋರಿಸುತ್ತದೆ! ಇದಕ್ಕಾಗಿ
ಹಿಂದಿನವರು ಭಗವಂತನಿಗೆ ನಮ್ಮಂತೆ ಕರಚರಣಗಳಿವೆ, ಆದರೆ ಆತ ಯಾವ ಮನುಷ್ಯರಂತೆಯೂ ಇಲ್ಲ
ಎನ್ನುವಂತೆ ಆತನ ಪ್ರತಿಮೆಯನ್ನು ಕಡೆದರು. ಈ ಪ್ರತಿಮೆಯನ್ನು ನೆನಪಿನಲ್ಲಿಟ್ಟುಕೊಂಡು ಕಣ್ಣುಮುಚ್ಚಿ
ಭಗವಂತನ ಗುಣಾನುಸಂಧಾನ ಮಾಡಿದರೆ, ನಮಗೆ ಕೇವಲ ಆ ಮೂರ್ತಿ ಕಾಣಿಸುತ್ತದೆಯೇ ಹೊರತು ನಮ್ಮ
ಪರಿಚಯದ ವ್ಯಕ್ತಿಯಲ್ಲ. ಇದರಿಂದ ಧ್ಯಾನ ಸುಲಭಸಾಧ್ಯವಾಗುತ್ತದೆ. ಮನಸ್ಸು ಯಾವುದೋ ವ್ಯಕ್ತಿಯನ್ನು
ಚಿಂತಿಸದೆ ಪ್ರತಿಮೆಯ ರೂಪದಲ್ಲಿ ಭಗವಂತನನ್ನು ಕಾಣಲಾರಂಭಿಸುತ್ತದೆ. ಈ ಕಾರಣಕ್ಕಾಗಿ ಭಗವಂತನ
ಚಿಂತನೆ ಮಾಡಲು ಒಂದು ರೂಪ ಅಗತ್ಯ.
ನಮಗೆ ತಿಳಿದಂತೆ ಮಾತೆ ಶ್ರೀಲಕ್ಷ್ಮಿಯನ್ನು ಶ್ರೀತತ್ವ, ಅಕ್ಷರಳು, ಅವ್ಯಕ್ತಳು, ಪ್ರಕೃತಿ, ಹ್ರೀ, ಇತ್ಯಾದಿ ಅನೇಕ
ಹೆಸರಿನಿಂದ ಕರೆಯುತ್ತಾರೆ. ಭಗವದ್ಗೀತೆಯಲ್ಲೇ ಅನೇಕ ಕಡೆ ಈ ರೀತಿಯ ಸಂಬೋಧನೆ ಕಾಣಸಿಗುತ್ತವೆ.
ಕಠೋಪನಿಷತ್ತಿನಲ್ಲಿ ಹೇಳುವಂತೆ "ಮಹತಃ ಪರಮವ್ಯಕ್ತಮವ್ಯಕ್ತಾತ್ಫುರುಷಃ ಪರಃ" . ಅಂದರೆ ಮಹತತ್ವಕ್ಕಿಂತ
ಅವ್ಯಕ್ತ ತತ್ವ ಹಿರಿದು, ಅವ್ಯಕ್ತ ತತ್ವಕ್ಕಿಂತ ಪುರುಷನಾದ ಭಗವಂತ ಹಿರಿಯ. ಇಲ್ಲಿ ಸ್ಪಷ್ಟವಾಗಿ ನಮಗೆ
ತಿಳಿವುದೇನೆಂದರೆ-ಅವ್ಯಕ್ತಳು, ಅಕ್ಷರಳು ಎಂದರೆ ಮಾತೆ ಶ್ರೀಲಕ್ಷ್ಮಿ.
ನಿರಂತರವಾಗಿ ಮನಸ್ಸಿನಲ್ಲಿ ನೀನು ಹೇಳಿರುವ ಗುಣಗಳ ಅನುಸಂಧಾನ ಮಾಡುತ್ತಾ, ಶಾಸ್ತ್ರಗಳ ಮೂಲಕ ನಿನ್ನ
ಮಹಿಮೆಯನ್ನು, ನಿನ್ನ ರೂಪ ವಿಶೇಷಗಳನ್ನು ತಿಳಿದುಕೊಂಡು, ಅದರಲ್ಲಿ ಭಕ್ತಿಯನ್ನು ಬೆಳೆಸಿಕೊಂಡು, ನಿನ್ನ
ಉಪಾಸನೆ ಮಾಡಿದರೆ ಒಳ್ಳೆಯದೋ; ಅಥವಾ ಕ್ಷರಾತೀತ(ಅಕ್ಷರ)ಳಾದ ಶ್ರೀತತ್ವದ ಉಪಾಸನೆ ಒಳ್ಳೆಯದೋ.
ಯಾವ ದಾರಿ ಹೆಚ್ಚು ಸೂಕ್ತ-ಎನ್ನುವುದು ಅರ್ಜುನನ ಪ್ರಶ್ನೆ
Bibek Debroy (1955–2024)The Bhagavad Gita
(1)
Arjuna said:
‘In this way, there are devotees who are always immersed in you and
worship you and there are those who think of the unmanifest and the
indestructible.1 Who among these is the best yogi?’2