श्रीभगवानुवाच ।
मय्यावेश्य मनो ये मां नित्ययुक्ता उपासते ।
श्रद्धया परयोपेताः ते मे युक्ततमा मताः ॥
śrībhagavānuvāca |
mayyāveśya mano ye māṃ nityayuktā upāsate |
śraddhayā parayopetāḥ te me yuktatamā matāḥ ||
· ·
श्रीभगवानुवाच ।
मय्यावेश्य मनो ये मां नित्ययुक्ता उपासते ।
श्रद्धया परयोपेताः ते मे युक्ततमा मताः ॥
śrībhagavānuvāca |
mayyāveśya mano ye māṃ nityayuktā upāsate |
śraddhayā parayopetāḥ te me yuktatamā matāḥ ||
श्रीभगवानुवाच ।
मय्यावेश्य मनो ये मां नित्ययुक्ता उपासते ।
श्रद्धया परयोपेतास्ते मे युक्ततमा मताः ॥
śrībhagavānuvāca |
mayyāveśya mano ye māṃ nityayuktā upāsate |
śraddhayā parayopetāste me yuktatamā matāḥ ||
श्रीभगवानुवाच ।
मय्यावेश्य मनो ये मां नित्ययुक्ता उपासते ।
श्रद्धया परयोपेतास्ते मे युक्ततमा मताः ॥
śrībhagavānuvāca |
mayyāveśya mano ye māṃ nityayuktā upāsate |
śraddhayā parayopetāste me yuktatamā matāḥ ||
Sri Madhvacharya (1238–1317)Bhagavad Gita Tatparya Nirnaya
युक्ततमाः साधकतमाः॥02॥
Swami Sivananda (1887–1963)Bhagavad Gita
2. Those who, fixing their minds on Me, worship Me, ever steadfast and endowed with
supreme faith, these are the best in Yoga in My opinion.
Sri Vishwesha Tirtharu (1931–2019)Gitasaroddhara
12.1–12.5 · ಶ್ರೀತತ್ತ್ವ ಉಪಾಸನೆ
ಶ್ರೀತತ್ತ್ವದ ಉಪಾಸನೆ
ಹಾಂ
ಪರಮಾತ್ಮನ ಭಕ್ತಿಹಾಗೂ ಅವನ ಉವಾಸನೆಯಿಂದಲೇ ಮುಕ್ತಿಎಂಬುದು
ಈವರೆಗಿನ ಭಕ್ತಿಯೋಗದ ವಿಸ್ಸತನಿರೂಪಣೆಯಿಂದ ಸ್ಪಷ್ಟವಾಗಿದೆ. ಆದರೂ
ಪರಮಾತ್ಮನ ಉಪಾಸನೆಯ ಬದಲು ಜಗತ್ತಿನ ಮೂಲಕಾರಣವಾದ
ಜಡಪ್ರಕೃತಿಯ ಅಭಿಮಾನಿಯಾದ ಚಿತ್ವ್ರಕೃತಿ ಎನಿಸಿರುವ ಶ್ರೀತತ್ತ್ವದ
ಉವಾಸನೆಯಿಂದಲೂ ಮುಕ್ತಿಯು ದೊರೆಯಬಹುದೆ? ಎಂಬ ಪ್ರಶ್ನೆಯು
ಉದ್ಭವಿಸುತ್ತದೆ. ವರಮವುರುಷನಾದ ಶ್ರೀನಾರಾಯಣನು ಮತ್ತು
ಜಗನ್ಮಾತೆಯೂ ಮಂಗಲದೇವತೆಯೂ ಆದ ಲಕ್ಷ್ಮೀದೇವಿಯು ಇವರಿಬ್ಬರೂ
ಸಮಾನವ್ಯಾಪ್ತಿ ಯುಳ್ಳ ನಿತ್ಯಮುಕ್ತರಾದ ಜಗತ್ತಿನ ಪರತತ್ತ್ವಗಳೆನಿಸಿದ್ದಾರೆ.
ಹ 6111... 1. | ಬ್ಲ ಇಂ ನಾ
ಇವರಿಬ್ಬರಲ್ಲಿ ಯಾರ ಉವಾಸನೆಯಿಂದಲೂ ಮುಕ್ತಿ ಯನ್ನು ವಡೆಯಬಹು
ದೆಂಬ ಶಂಕೆಯು ಮೂಡುವುದು ಸಹಜವಾಗಿದೆ. ಅದರಲ್ಲಿಯೂ ಜಗತ್ತಿನ
ತಂದೆಯಾದ ಶ್ರೀಹರಿ ಯನ್ನು ಪ್ರಸನ್ನ ಗೊಳಿಸುವುದಕ್ಕಿಂತ ಜಗನ್ಮಾತೆಯನ್ನು
ಬೇಗನೆ ಒಲಿಸಬಹು ದಾದುದರಿಂದ ಈ ಸುಲಭೋವಾಯವನ್ನೇ ಏಕೆ
ಅನುಸರಿಸಬಾರದು? ಎಂಬ ಭಾವನೆಯೂ ಸಹಜವಾಗಿ ಉಂಟಾಗುತ್ತದೆ. ಈ
ಸಂದೇಹವನೇ ಅರ್ಜುನನೂ ಶ್ರೀಕೃಷ್ಣನಲ್ಲಿ ತೋಡಿಕೊಳ್ಳುತಾನೆ.
ರ ಕ (ಸಲ! ಓ ಗಸಿ ಆ ಅದ್ಯ ದಾದ ್್್್ “ಬನ
ಏವಂ ಸತತಯುಕ್ತಾ ಯೇಭಕ್ತಾ ಸ್ತಾ ಕ ಪರ್ಯುಪಾಸತೇ |
ಯೇ ಚಾಷ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾಃ ॥
ಅವ್ಪಕತತ ದ ಅರ್ಥಾತ್ ಶ್ರೀತತ್ನ್ನದ ಉಪಾಸನೆಯನ್ನು ಮಾಡಿದರೂ
ಕ್ ಕ್ ಆಟದಿ ಯ್ ತ ಗ ಗಗ ಗಳಗ [|
ಪರಮಾತ್ಮನ ಉಪಾಸನೆ ಮತ್ತು ಸಾಕ್ಟಾತ್ಕಾರವಿಲ್ಲದೆ ಮುಕ್ತಿಯನ್ನು ಸರ್ವಥಾ
ವಡೆಯಲು ಶಕ್ಕವಿಲ್ಲ. ತನ್ನನ್ನು ಉಪಾಸನೆ ಮಾಡಿದರೂ ಪರಮವುರುಷನ
ಆರಾಧನೆಯನ್ನು ಮಾಡದ ವ್ಯಕ್ತಿಯಲ್ಲಿ ದೇವಿಯೂ ಪ್ರಸನ್ನಳಾಗುವುದಿಲ್ಲ.
ದೇವಿಯ ಉವಾಸನೆಯು ಕ್ಲಿಷ್ಟವಾದ ಭಗವದುಪಾಸನೆಯ ಮಾರ್ಗವನ್ನು
ಸುಲಭಗೊಳಿಸುವುದರಿಂದ ಮೋಕ್ಷಾರ್ಥಿಗಳು ಅದನ್ನು ಸ್ವಾಗತಿಸಬಹು
ದಾದರೂ ಅದರಿಂದಲೇಮುಕ್ತಿಯನ್ನುಪಡೆಯಲು ಸಾಧ್ಯವಿಲ್ಲ. ಆದುದರಿಂದ
ಚಿತ್ವ್ರಕೃತಿಯನ್ನು ಉವಾಸಿಸಿ ಅದರ ಮೂಲಕವಾಗಿ ಪರಮಪುರುಷನ
ಉಪಾಸನೆಯನ್ನು ಗೈಯುವ ಈ ಬಳಸು ದಾರಿಯನ್ನು ಅನುಸರಿಸುವುದಕ್ಕಿಂತ
ನೇರವಾಗಿ ತನ್ನನ್ನೇ ಆರಾಧಿಸುವ ಸುಲಭ ಮಾರ್ಗವನ್ನೇ ಹಿಡಿಯುವಂತೆ
ಶ್ರೀಕೃಷ್ಣನು ಉಪದೇಶಿಸುವನು.
ಕ್ಲೇಶೋನಧಿಕತರಸ್ತೇಷಾಂ ಅವೃಕ್ತಾ ಸಕ್ತಚೇತಸಾಮ್ ।
ಜಗತ್ತಿನ ತಂದೆ ತಾಯಂದಿರಾದ ಪರಮಾತ್ಮ ಮತ್ತು ಚಿತ್ಪ್ರಕೃತಿ ಇವೆರಡು
ಪರತತ್ವ್ವಗಳನ್ನು ಚಿಂತಿಸಿಕೊಂಡು ಲಕ್ಷ್ಮೀಪತಿಯಾದ ಶ್ರೀಹರಿಯ ಪೂಜೋ
ಪಾಸನೆಗಳಿಂದಲೇ ಮೋಕ್ಷಪದವಿಯನ್ನು ಪಡೆಯಲು ಪ್ರಯತ್ನಿಸುವುದು
ಸರಿಯಾದ ಹಾಗೂ ಸುಲಭವಾದ ಮಾರ್ಗವಾಗಿದೆ. ಒಂದು ದೃಷ್ಟಿಯಿಂದ
ನಾವೆಲ್ಲರೂ ಲಕ್ಷ್ಮಿಯ ಆರಾಧಕರೇ ಎಂದೆನ್ನಬಹುದು. ಪರಮಾತ್ಮನನ್ನು
ಮರೆತು ಜೀವನವಿಡೀ ಲಕ್ಷ್ಮಿಯ ಅರ್ಥಾತ್ ಸಂಪತ್ತಿನ ಧ್ಯಾನದಲ್ಲಿಯೇ ನಾವು
ಮುಳುಗಿದ್ದೇವೆ. ಆದರೆ ದೇವನನ್ನು ಮರೆತು ಬರೇ ಸಂವತ್ತಿನ ಚಿಂತನದಲ್ಲೇ
ತಲ್ಲೀನರಾದ ನಮಗೆ ಸಿರಿದೇವಿಯು ಒಲಿದಾಳೆಯೆ? ಸಿರಿಯೊಡೆಯನನ್ನು
ತೊರೆದ ನಮ್ಮಿಂದ ಸಿರಿಯೂ ದೂರವಿರುವುದು ಸಹಜವೇ ಆಗಿದೆ.
ವಿಷ್ಣುನಾ ಸಹಿತಾ ಧ್ಯಾತಾಸಾ ಹಿ ತುಪ್ಪಿಂ ಪರಾಂ ವ್ರಜೇತ್ ।
ವಿಷ್ಣುವಿನ ಜೊತೆಗೆ ಪೂಜಿಸಿದರೇನೇ ಲಕ್ಷ್ಮಿಗೆ ಪರಮ ಸಂತೋಷವಂತೆ.
ಪರಮಾತ್ಮನನ್ನು ಮರೆತು ಜೀವನವಿಡೀ ಬರಿಸಿರಿ-ಸಂಪತ್ತುಗಳ ವೂಜೆಯನ್ನೇ
ನಡೆಸುವ ನಾವು ಭೂತಿ ಮತ್ತು ಭಗವಂತ ಇವೆರಡನ್ನೂ ಕಳೆದುಕೊಳ್ಳುತ್ತೇವೆ.
ಅಂತೂ ಲಕ್ಷ್ಮೀ ಉಪಾಸನೆಗಿಂತಲೂ ಲಕ್ಷ್ಮೀನಾರಾಯಣನ ಉಪಾಸನೆಯೇ
ಜೀವನದ ವರಮಪುರುಷಾರ್ಥವನ್ನು ಪಡೆಯುವ ಶ್ರೇಷ್ಠವಾದ ಸಾಧನವೆಂದು ಈ
ಭಾಗದತಾತ್ಚರ್ಯವಾಗಿದೆ.
12.2–12.4 · ಅವ್ಯಕ್ತವು ನಿರ್ಗುಣ ವಸ್ತುವೆ
ಅವ್ಯಕ್ತವು ನಿರ್ಗುಣ ಬ್ರಹ್ಮವೆ?
ಕೆಲವರು ಇಲ್ಲಿ ನಗುಣ-ನಿರ್ಗುಣಗಳ ಗೊಂದಲವನ್ನು ತರುವ ಪ್ರಯತ್ನ
ಮಾಡುತ್ತಾರೆ. ಜ್ಞಾನ, ಶಕ್ತಿ ಕ್ರಿಯಾ ಮೊದಲಾದ ಮಹಾ ಗುಣಗಳಿಂದಕೂಡಿದ
ಬ್ರಹ್ಮನು ನಗುಣನೆಂದೂ ಈ ಗುಣಧರ್ಮಗಳಿಂದ ರಹಿತವಾದ ಅಪರಿಚ್ಚಿನ್ನ
ಚೈತನ್ಯವೇ ನಿರ್ಗುಣವೆಂದೂ ಬ್ರಹ್ಮವನ್ನು ಇವರು ಎರಡು ವಿಧವಾಗಿ
ವಿಂಗಡಿಸುತ್ತಾರೆ. ನಿರ್ಗುಣೋಪಾಸನೆಯು ಶ್ರೇಷ್ಠವಾದರೂ ಕ್ಲಿಷ್ಣವಾಗಿರುವು
ದರಿಂದ ಸಗುಣೋಪಾಸನೆಯ ಸುಲಭ ಮಾರ್ಗವನ್ನು ಕೃಷ್ಣನು ಬೋಧಿಸಿರುವು
ದಾಗಿ ಗೀತೆಯ ಆಶಯವನ್ನು ವಿವರಿಸುತ್ತಾರೆ. ವರಬ್ರಹ್ಮನನ್ನು ಸಗುಣ,
ನಿರ್ಗುಣ ಎಂಬುದಾಗಿ ವಿಭಜಿಸಿ ಒಂದು ಪರಮ ಸತ್ಯವೆಂದೂ ಇನ್ನೊಂದು
ಮಾಯಿಕವೆಂದೂ ಹೇಳುವುದು ಸರಿಯಲ್ಲ. ಉವನಿವತ್ತಿನಲ್ಲಿ ಎಲ್ಲಿಯೂ
ಬ್ರಹ್ಮನನ್ನು ಈ ವಿಧವಾಗಿ ವಿಂಗಡಿಸಿರುವುದು ಕಂಡುಬರುವುದಿಲ್ಲ. ಒಬ್ಬನೇ
ಬ್ರಹ್ಮನು ನಗುಣನೂ ನಿರ್ಗುಣನೂ ಆಗಿರುವನು. ಸತ್ತ್ವ ರಜಸ್ಸು ತಮನ್ನು
ಮುಂತಾ ದಪ್ರಾಕೃತ ಗುಣಗಳಿಂದವಿರಹಿತನೂ ಜ್ಞಾನ ಆನಂದಾ ದಿ ಚೈತನ್ಯಮ ಯ
ಸದ್ಗುಣಭರಿತನೂ ಆದ ವರಮಾತೃನೊಬ್ಬನೇ ಸಗುಣನೂ ನಿರ್ಗುಣನೂ
ಆಗಿರುವನು. ಅಪ್ರಾಕೃತ ಗುಣಗಳ ದೃಷ್ಟಿಯಿಂದ ಸಗುಣನೆಂದೂ ಪ್ರಾಕೃತ
ಗುಣಗಳ ದೃಷ್ಟಿಯಿಂದ ನಿರ್ಗುಣನೆಂದೂ ಒಬ್ಬನನ್ನೇಕರೆಯಲಾಗುತ್ತದೆ.
ಏಕೋ ದೇವಃ ಸರ್ವಭೂತೇಷು ಗೂಢ:
ಸರ್ವವ್ಯಾಪೀ ಸರ್ವಭೂತಾಂತರಾತ್ಮಾ|
ಕರ್ಮಾಧ್ಯಕ್ಷ ಸರ್ವಲೊಕಾಧಿವಾಸಃ
ಸಾಕ್ಷೀ ಚೇತಾಕೇವಲೋ ನಿರ್ಗುಣಶ್ಚ॥
-ಶ್ವೇತಾಶ್ವತರೊ ಪನಿಷತ್
ಎಂದು ಉಪನಿಷತ್ತಿನಲ್ಲಿ ಸರ್ವವ್ಯಾಪಿಯೂ ಸರ್ವಭೂತಾಂತರಾತ್ಮನೂ ದೇವನೂ
ಆದ ಸಗುಣವಸ್ತುವನ್ನೇ ನಿರ್ಗುಣವೆಂದು ಕರೆಯಲಾಗಿದೆ. ಹೀಗಿರುವಾಗ
ಸಗುಣನು ಬೇರೆ ನಿರ್ಗುಣನು ಬೇರೆ ಎಂದು ಪರಬ್ರಹ್ಮ ವಸ್ತುವನ್ನು
ಭಿನ್ನವಿಭಿನ್ನ ಗೊಳಿಸಿ ಜಗಜ್ಜನ್ಮಾದಿಕರ್ತವೂ ನರ್ವಜ್ಞವೂ ಸರ್ವಶಕ್ತಿ ಯೂಆದ
ಸಗುಣಬ್ರಹ್ಮವನ್ನು ಮಾಯಿಕವೆಂದು ಪರಿಕಲ್ಪಿಸುವುದು ಮಹಾ ಅಪಲಾಪವೆನಿನು
ಅವ್ಯಕ್ತೊ ೇವಾಸಕರು ಹಾಗೂ ಭಗವದುವಾಸಕರು ಇವರಿಬ್ಬರಲ್ಲಿ ಯಾರು
ಶ್ರೇಷ್ಠರು ಎಂಬ ಅರ್ಜುನನ ಪ್ರಶ್ನೆಯನ್ನು ಉತ್ತರಿಸುವವ್ರಸ್ತುತ ಸಂದರ್ಭದಲ್ಲಿ
ಮಯ್ಯಾವೇಶ್ಯ ಮನೋ ಯೇ ಮಾಂ
ನಿತ್ಯಯುಕ್ತಾ ಉಪಾಸತೇ॥
ಶ್ರದ್ಧಯಾಪರಯೋಪೇತಾ
ಸ್ತೇಮೇ ಯುಕ್ತತಮಾ ಮತಾಃ ॥
ಎಂದು ಅವ್ಯಕ್ತವನ್ನು ಉವಾಸಿಸುವುದಕ್ಕಿಂತ ತನ್ನನ್ನು ಆರಾಧಿಸುವವರೇ
ಶ್ರೇಷ್ಠರು ಎಂದು ಹೇಳುತ್ತಾನೆ. ನಿರ್ಗುಣವೇ ಪರಮ ಸತ್ಯವಾಗಿದ್ದ ವಕ್ಷ ದಲ್ಲಿ
ಸಗುಣರಾದ ತನ್ನ ಉಪಾಸಕರೇ ಯುಕ್ತತಮರೆಂಬ ಶ್ರೀಕೃಷ್ಣನ ಮಾತು ಹೇಗೆ
ಸುಸಂಗತವಾಗುವುದು? ಶ್ರೀಕೃಷ್ಣನು ನಿರ್ಗುಣತತ್ತ್ವವಲ್ಲವೆಂದೂ ಸಗುಣನೂ
ಸರ್ವಜ್ಞನೂ ಆದ ಪುರುಷೋತ್ತಮನೇ ಶ್ರೀಕೃಷ್ಣನೆಂದೂ ಸರ್ವವಿದಿತವಾದ
ಅಂಶವಾಗಿದೆ.
ಯೇ ತ್ವಕ್ಷರಮನಿರ್ದೇಶ್ಯಂ ಅವ್ಯಕ್ತಂ ಪರ್ಯುಪಾಸತೇ ।
ತೇ ಪ್ರಾಪ್ನುವಂತಿ ಮಾಮೇವ... |
ಎಂಬುದಾಗಿ ಅವೃಕ್ತವನ್ನು ಉವಾಸಿಸುವವರೂ ತನ್ನನ್ನೇ ಹೊಂದುವರೆಂಬ
ಶ್ರೀಕೃಷ್ಣನ ವಚನವನ್ನಂತೂ ನಿರ್ಗುಣೋಪಾಸನೆಯೇ ಅವ್ಯಕ್ತೋಪಾಸನೆ
ಯಾಗಿರುವ ವಕ್ಷದಲ್ಲಿ ಸರ್ವಥಾ ಯೋಚಿಸಲು ಶಕ್ಕವಿಲ್ಲ. ನಿರ್ಗುಣೋಪಾಸಕನು
ಸಗುಣನಾದ ಕೃಷ್ಣನನ್ನು ಹೇಗೆ ಹೊಂದಬಲ್ಲನು? ನೈರ್ಗುಣ್ಯವಾದದ
ತತ್ತ್ವನಿರೂವಣೆಯಂತೆ ನಿರ್ಗುಣೋವಾಸನೆಯಿಂದ ಸಾಧಕರು ವರಬ್ರಹ್ಮ
ಭಾವವನ್ನು ಹೊಂದುವರಲ್ಲದೆ ಸಗುಣವ್ರಾಪ್ತಿಯನ್ನು ಅದರ ಫಲವಾಗಿ
ಅಂಗೀಕರಿಸಲಾಗಿಲ್ಲ. ಅಂತೂ ಇಲ್ಲಿ ನಿರೂಪಿಸಲಾದ ಅವ್ಯಕ್ತೊ ೇೀಪಾಸನೆಯ
ಫಲವನ್ನು ಪರಿಶೀಲಿಸುವಾಗಲೂ ಅವ್ಯಕ್ತೊ ೇಪಾಸನೆಗಿಂತ ಭಗವದುವಾಸನೆಗೆ
ನೀಡಲಾದ ಪ್ರಾಶಸ್ತ್ಯವನ್ನು ಗಮನಿಸುವಾಗಲೂ ಸಗುಣ, ನಿರ್ಗಣವಿಚಾರಗಳಿಗೆ
ಇಲ್ಲಿ ಅವಕಾಶವಿಲ್ಲವೆಂದೂ ಶ್ರೀತತ್ತ್ವಹಾಗೂ ವರಮಾತೃತತ್ತ್ವಗಳ ಉವಾಸನೆಗಳ
ವಿವೇಚನೆಗೇ ಈ ಭಾಗ ಸಂಬಂಧಿಸಿದೆಯೆಂಬುದೂ ಸ್ಪಷ್ಟವಾಗುತ್ತ ದೆ.
Bannanje Govindacharya (1936–2020)Bhagavad Gita Pravachana
ಭಗವಾನ್ ಉವಾಚ-ಭಗವಂತ ಹೇಳಿದನು:
ಮಯಿ ಆವೇಶ್ಯ ಮನಃ ಯೇ ಮಾಮ್ ನಿತ್ಯ ಯುಕ್ತಾಃ ಉಪಾಸತೇ |
ಶ್ರದ್ಧಯಾ ಪರಯಾ ಉಪೇತಾಃ ತೇ ಮೇ ಯುಕ್ತಃ ತಮಾಃ ಮತಾಃ -ನನ್ನಲ್ಲಿ ಬಗೆಯಿಟ್ಟವರು, ತುಂಬು
ನಂಬಿಕೆಯಿಂದ ಕೂಡಿ. ನನ್ನನ್ನೇ ಸೇವಿಸುವ ನಿರಂತರ ಸಾಧಕರು-ಅತ್ಯಂತ ಪರಿಪೂರ್ಣರೆಂದು
ಪರಿಗಣಿತರಾಗುತ್ತಾರೆ.
ಕೃಷ್ಣ ಅರ್ಜುನನ ಪ್ರಶ್ನೆಗೆ ಉತ್ತರ ಕೊಡುತ್ತಾ ಹೇಳುತ್ತಾನೆ: “ಶ್ರದ್ಧೆಯಿಂದ ಯಾರು ನನ್ನನ್ನು ಉಪಾಸನೆ
ಮಾಡುತ್ತಾರೋ ಅವರು ಭಗವಂತನ ಸಾಧಕರಲ್ಲಿ ಶ್ರೇಷ್ಠರು” ಎಂದು. ಇಲ್ಲಿ ಶ್ರದ್ಧೆ ಎಂದರೆ ನಂಬಿಕೆ.
ಸಾಧನೆಯಲ್ಲಿ ಬಹಳ ಮುಖ್ಯವಾದದ್ದು ಶ್ರದ್ಧೆ. ಶ್ರದ್ಧೆ ಇಲ್ಲದೆ ಉಪಾಸನೆ ಮಾಡಿ ಉಪಯೋಗವಿಲ್ಲ. ಇದು
ಮನಃಶಾಸ್ತ್ರ. ಇದಕ್ಕೆ ಲೌಕಿಕವಾದ ಉದಾಹರಣೆ: ರೋಗಿ ಮತ್ತು ವೈದ್ಯರು. ಒಂದು ವೇಳೆ ರೋಗಿಗೆ ತನ್ನನ್ನು
ಪರೀಕ್ಷಿಸಿ ಔಷಧ ಕೊಡುವ ವೈದ್ಯನ ಮೇಲೆ ನಂಬಿಕೆ ಇಲ್ಲದಿದ್ದರೆ, ತೆಗೆದುಕೊಳ್ಳುವ ಔಷಧ ಆತನಲ್ಲಿ ಕೆಲಸ
ಮಾಡುವುದಿಲ್ಲ. ಗಾಢವಾದ ನಂಬಿಕೆ ಇದ್ದರೆ-ವೈದ್ಯ ಯಾವ ಕಾಯಿಲೆಗೆ ಯಾವ ಮದ್ದು ಕೊಟ್ಟರೂ ರೋಗ
ಗುಣವಾಗುತ್ತದೆ! ಇದು ವೈಜ್ಞಾನಿಕವಾಗಿ ಕೂಡಾ ಸಾಬೀತಾಗಿರುವ ವಿಷಯ. ಆದ್ದರಿಂದ ಕೇವಲ ಕಣ್ಮುಚ್ಚಿ-
ನಂಬಿಕೆ ಇಲ್ಲದೆ ಉಪಾಸನೆ ಮಾಡಿದರೆ ಉಪಯೋಗವಿಲ್ಲ. ದೃಢವಾದ ಶ್ರದ್ಧೆಯಿಂದ, ತಿಳಿದು, ಭಗವಂತನ
ಗುಣರೂಪವನ್ನು ಧ್ಯಾನ ಮಾಡುವುದು ಶ್ರೇಷ್ಠ ಭಕ್ತಿ ಎನಿಸುತ್ತದೆ. ಪೂರ್ಣ ಶ್ರದ್ಧೆಯಿಂದ ಯಾವ ರೂಪದಿಂದಲೂ,
ಯಾವ ನಾಮದಿಂದಲೂ ಭಗವಂತನನ್ನು ಉಪಾಸನೆ ಮಾಡಬಹುದು. ಭಗವಂತನ ರೂಪವಲ್ಲದ
ರೂಪವೊಂದಿಲ್ಲ, ಭಗವಂತನ ನಾಮವಲ್ಲದ ನಾಮವೊಂದಿಲ್ಲ. ಪೂರ್ಣ ಶ್ರದ್ಧೆ ಇದ್ದಾಗ ನಾಮ-ರೂಪ
ಸಮಸ್ಯೆಯಾಗುವುದಿಲ್ಲ. ಹೀಗಾಗಿ ಭಗವಂತ ಹೇಳುತ್ತಾನೆ: “ನನ್ನ ರೂಪ ಮತ್ತು ಗುಣ ವಿಶೇಷವನ್ನು ಯಾರು
ಶ್ರದ್ಧೆಯಿಂದ ಉಪಾಸನೆ ಮಾಡುತ್ತಾರೋ ಅವರು ಸಾಧಕರಲ್ಲಿ ಶ್ರೇಷ್ಠರು” ಎಂದು.
Bibek Debroy (1955–2024)The Bhagavad Gita
(2)
Bhagavan3 said:
‘Those who worship me with minds fixed on me and always united in me
with supreme devotion, in my view, they are the best yogis.’