यस्मान्नोद्विजते लोको लोकान्नोद्विजते च यः ।
हर्षामर्षभयोद्वेगैर्मुक्तो यः स च मे प्रियः ॥
yasmānnodvijate loko lokānnodvijate ca yaḥ |
harṣāmarṣabhayodvegairmukto yaḥ sa ca me priyaḥ ||
Swami Sivananda (1887–1963)Bhagavad Gita
15. He by whom the world is not agitated and who cannot be agitated by the world, and who
is freed from joy, envy, fear and anxiety—he is dear to Me.
Sri Vishwesha Tirtharu (1931–2019)Gitasaroddhara
12.13–12.20 · ಭಕ್ತಶೀಲ ಸಂವರ್ಧನೆ
ಸಾಧಕನಲ್ಲಿ ಶೀಲಸಂವರ್ಧನೆ
ಸಾಧಕನು ನಿಷ್ಕುಮಕರ್ಮಾಚರಣ, ವೈರಾಗ್ಯಮತ್ತುಪ್ರಯತ್ನಗಳ ಜೊತೆಗೆ
ತನ್ನಲ್ಲಿ ಸದ್ಗುಣಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ನಮ್ಮಲ್ಲಿ
ಸದ್ಗುಣಗಳನ್ನು ವಿಕಸಿತಗೊಳಿಸುವುದೂ ಪರಮಾತ್ಮನ ಸಾಕ್ಚಾತ್ಕಾರಕ್ಕೆ
ಆವಶ್ಯಕವಾಗಿದೆ. ಮುಕ್ತಿಯನ್ನು ಹೊಂದಲಿರುವ ಆತ್ಮರೆಲ್ಲರೂ ಸ್ವತಃ
ಸದ್ಗುಣರೂಪಿಗಳೇ ಆಗಿರುವರು. ಅಜ್ಞಾನದಿಂದ ಆವೃತವಾದ, ಆದರೆ
ಸ್ವಾಭಾವಿಕವಾಗಿ ಸದ್ಗುಣಾತ್ಮಕವಾದ ತಮ್ಮ ಚೈತನ್ಯವನ್ನು ಅವಿಷ್ಕಾರಗೊಳಿಸು
ವುದೇ ಮುಕ್ತಿ ಎಂದು ಶಾಸ್ತ್ರಗಳಲ್ಲಿ ಹೇಳಿದೆ. ಹೀಗೆ ನಮ್ಮ ಮೂಲಭೂತ
ಸದ್ಗುಣಗಳ ಅಭಿವ್ಯಕ್ತಿಯಾಗಲು ಅದಕ್ಕೆ ಅನುಕೂಲವೆನಿಸುವ ಪ್ರವೃತ್ತಿಗಳೇ ನಮ್ಮ
ಜೀವನದಲ್ಲಿ ವ್ಯಾಪಿಸಿಕೊಂಡಿರಬೇಕು. ಆತನಸ್ವಾಭಾವಿಕಧರ್ಮಗಳೆನಿಸಿದಸತ್ವ,
ಜ್ಞಾನ, ದಯೆ, ತ್ಯಾಗ ಮುಂತಾದ ಸ್ವರೂಪ ಸದ್ಗುಣಗಳಿಗೆ ತೀರ ವ್ಯತಿರಿಕ್ತವೂ
ವಿರೋಧಿಯೂ ಆದಪ್ರವೃತ್ತಿಯನ್ನು ನಮ್ಮಲ್ಲಿ ರೂಢಿಸಿಕೊಂಡಲ್ಲಿ ನಮ್ಮ ಆತ್ಮವು
ಇನ್ನೂ ಹೆಚ್ಚುಘನವಾದ ಆವರಣಕ್ಕೆ ಒಳಪಟ್ಟಂತಾಗುವುದು. ಅಸತ್ಯ, ಕ್ರೌರ್ಯ,
ಹಿಂಸೆ, ವಂಚನೆ ಮೊದಲಾದ ದುರ್ಗುಣಗಳು ಆತ್ಮಸ್ವರೂಪಕ್ಕೆ ತೀರ
ವಿಸಂಗತಗಳಾದ ವಿರೋಧಿ ಭಾವಗಳಾಗಿವೆ. ಇಂತಹ ದುರ್ಗುಣಗಳಿಗೆ ನಮ್ಮ
ಜೀವನದಲ್ಲಿ ಅವಕಾಶ ದೊರೆಯುವುದರಿಂದ ನಮ್ಮ ಆತ್ಮವನ್ನು ಕುಗ್ಗಿಸಿ ಅಜ್ಞಾನ
ಪ್ರಕೃತಿಗಳ ವಿಜೃಂಭಣೆಯನ್ನು ಇನ್ನೂ ಹೆಚ್ಚಿಸಿದಂತಾಗುತ್ತದೆ.
ಅದರಂತೆ ನಮ್ಮಲ್ಲಿ ದುರ್ಗುಣಗಳು ಹೆಚ್ಚಿದರೆ ಅನಂತಗುಣರೂಪಿಯಾದ
ಭಗವಂತನ ಧ್ಯಾನ ಸಾಕ್ಷಾತ್ಯಾರಗಳನ್ನು ಪಡೆಯುವ ಅರ್ಹತೆಯನ್ನೇ ನಾವು
ಕಳೆದುಕೊಂಡಂತಾಗುವುದು. ನಮ್ಮ ನಿತ್ಯವ್ಯವಹಾರಗಳೆಲ್ಲವೂ ದುರ್ಗುಣ
ದುರಾಚಾರಗಳಿಂದ ದೂಷಿತವಾಗಿದ್ದರೆ, ಸುಗುಣಮೂರ್ತಿಯಾದ ಪರಮಾತ್ಮನ
ಸಾಮ್ಯಪ್ರಾಪ್ತಿಯೆನ್ನಲಾಗುವ ಮುಕ್ತಿಯನ್ನು ಪಡೆಯಲು ನಾವು ಹೇಗೆ
ಅರ್ಹರಾಗಬಲ್ಲೆವು? ಆದುದರಿಂದ ನಮ್ಮ ಮೂಲಭೂತಸ್ಥಿತಿಯೆನಿಸಿದ ನಮ್ಮ
ಆತ್ಮದಸ್ವಾಭಾವಿಕ ಗುಣಧರ್ಮಗಳಿಗೂ ನಮ್ಮ ಪರಮಪ್ರಾಪ್ಯಸ್ಥಾನವಾಗಿರುವ
ಪರಮಾತ್ಮ ಸ್ವರೂಪಗುಣಗಳಿಗೂ ತೀರ ವಿರೋಧಿಯಾದ ಮನೋಧರ್ಮ
ಗಳಿಗೆ ನಮ್ಮ ಜೀವನದಲ್ಲಿ ಸರ್ವಥಾ ಅವಕಾಶವಿರಬಾರದು. ಇದರಿಂದ
ಭಗವಂತನಿಂದನಾವುಇನ್ನೂ ಹೆಚ್ಚು ದೂರ ಉಳಿಯುವ ಮತ್ತು ಆತ್ಮವಿಕಾಸಕ್ಕೆ
ಅಡಚಣೆಯಾಗುವ ದುರಂತ ಸನ್ನಿವೇಶವು ಒದಗುವುದು. ಆದುದರಿಂದ
ಅನಂತಗುಣಮೂರ್ತಿಯಾದ ಪರಮಾತ್ಮನ ಸಾಕ್ಷಾತ್ಕಾರದಿಂದ ನಮ್ಮಲ್ಲಿಯೇ
ಸಹಜವಾಗಿ ಹುದುಗಿರುವ ಚೇತನಾತ್ಮಕ ಸದ್ಗುಣಪ್ರಭೆಗಳಿಂದ ನಾವು
ಬೆಳಗಬೇಕಾದರೆ ನಮ್ಮ ಲೌಕಿಕ ಜೀವನವು ನೀತಿಶೀಲಸಂಪನ್ನವಾಗಿರಬೇಕು.
ನಮ್ಮ ವ್ಯವಹಾರಗಳೆಲ್ಲ ಸದ್ಗುಣಮಯವಾಗಿರಬೇಕು. ಸಾಧಕನು ತನ್ನಲ್ಲಿ
ಅಳವಡಿಸಿಕೊಳ್ಳಬೇಕಾದ ಈ ಗುಣಗಳ ಯಾದಿಯನ್ನು ಹನ್ನೆರಡನೆಯ
ಅಧ್ಯಾಯದಕೊನೆಯಲ್ಲಿ ಬರುವ,
ಅದ್ವೇಷ್ಟಾಸರ್ವಭೂತಾನಾಂ ಮೈತ್ರಃ ಕರುಣಏವಚ।
ಮುಂತಾದ ಶ್ಲೋಕಗಳಲ್ಲಿ ನಾವು ಕಾಣಬಹುದು. ಅದ್ವೇಷ, ಮೈತ್ರಿ, ಕರುಣೆ,
ನಿರ್ಮಮತೆ, ನಿರಹಂಕಾರ, ಸಹನೆ, ಅಲಂಬುದ್ಧಿ ಮೊದಲಾದವುಗಳೇನಮ್ಮಲ್ಲಿ
ಅಳವಡಿಸಿಕೊಳ್ಳಬೇಕಾದ ಸದ್ಗುಣಗಳಾಗಿವೆ. ಭಕ್ತನಲ್ಲಿ ಈ ಗುಣಗಳು
ತುಂಬಿರುತ್ತವೆ. ಇಂತಹ ಗುಣಶಾಲಿಯೇ ತನಗೆ ಅತ್ಯಂತ ಪ್ರೀತಿಪಾತ್ರನೆಂದು
ಸ್ವಾಮಿಯು ಅರುಹಿದ್ದಾನೆ. ಲೋಕದ ಯಾವುದೇ ವ್ಯವಹಾರದಿಂದ
ಉದ್ವಿಗ್ನನಾಗದೆ, ಯಾರಿಗೂ ಹೆದರದೆ ಭಕ್ತನು ತನ್ನ ಕರ್ತವ್ಯವನ್ನು
ನಿರ್ವಹಿಸುತ್ತಾನೆ. ಅದರಂತೆ ಅವನಿಂದಲೂ ಜನರಿಗೆ ಯಾವ ಭಯ, ಅಪಾಯ
ಉಪದ್ರವಗಳೂ ಇಲ್ಲ. ಸರ್ವರಿಗೂ ಅಭಯ ನೀಡಿತಾನೂ ನಿರ್ಭಯವಾಗಿ,
ಉಳಿದವರೂನಿರುದ್ದಿಗ್ಗರಾಗಿರುವಂತಹ ಸನ್ನಿವೇಶವನ್ನು ಭಕ್ತನು ನಿರ್ಮಿಸುತ್ತಾನೆ.
ಆತನು "ಸರ್ವಾರಂಭ ಪರಿತ್ಯಾಗಿ' ಅಂದರೆ ಪರಮಾತ್ಮನ ಪ್ರೀತಿಕರವಾಗದ ಕೇವಲ
ಸ್ವಫಲಾಪೇಕ್ಷೆಯ ಕರ್ಮಗಳಿಂದ ದೂರವಾಗಿರುತ್ತಾನೆ. ಅವನಿಗೆ
ಸುಖದುಃಖಗಳಿರಡರಲ್ಲಿಯೂ ಸಮದೃಷ್ಟಿ ಇರುತ್ತದೆ. ಸುಖದಂತೆ ದುಃಖವೂ
ಅವನಿಗೆ ಅಪೇಕ್ಷಿತವೇ. ತನ್ನ ದುಷ್ಕೃತ್ಯಗಳ ಫಲರೂಪವಾದ ದುಃಖತಾಪಗಳನ್ನು
ಅನುಭವಿಸಿತನ್ನ ಪಾತಕಗಳನ್ನು ಪರಿಹರಿಸಿಕೊಳ್ಳಲು ಭಕ್ತನು ತವಕಿಸುತ್ತಾನೆ. ತನ್ನ
ಆತ್ಮಶುದ್ಧಿಗೆ ಸಹಾಯಕವೆಂದು ದುಃಖದ ಸನ್ನಿವೇಶವನ್ನು ಸಂತೋಷ
ಸಮಾರಂಭವೆಂಬಂತೆ ಉತ್ಸಾಹದಿಂದ ಆತನು ಸ್ವಾಗತಿಸುತ್ತಾನೆ. ಅದರಂತೆ ಭಕ್ತನು
ದುಃಖದಂತೆ ಸುಖವನ್ನು ಉಪೇಕ್ಷಾಬುದ್ಧಿಯಿಂದ ನೋಡುವನು. ದುಃಖವು
ಕ್ಲೇಶರೂವವಾಗಿರುವಂತೆ ಸುಖವೂ ಅನಂತಕ್ಷೇಶಕರವಾಗಿದೆ. ಒಂದು ಸುಖದ
ತುಣುಕಿಗಾಗಿ ಮಾನೆಔನು ಅದೆಷ್ಟು ದೈನ್ಯ ಸಂಕಟಗಳನ್ನು ಅನುಭವಿಸುತ್ತಾನೆ!
ಸಮಚಿತ್ತನಾದ ಭಕ್ತನ ದೃಷ್ಟಿಯಲ್ಲಿ ವೈಷಯಿಕ ಸುಖಹಾಗೂಸಾಂಸಾರಿಕ ಕ್ಲೇಶ
ಇವೆರಡಕ್ಕೂ ಒಂದೇ ಬೆಲೆ. ಎರಡನ್ನೂ ಹೇಯಭಾವನೆಯಿಂದಲೇ ಆತನು
ನಿರೀಕ್ಷಿಸುತ್ತಿರುವುದರಿಂದ ಆತನು ಸಮದುಃಖ ಸುಖನೆನಿಸುತ್ತಾನೆ.
ಸ್ತುತಿನಿಂದೆಗಳೆರಡರಲ್ಲಿಯೂ ನಿರ್ವಿಕಾರನಾಗಿರುವುದೂ ಒಂದು ಅಪೂರ್ವವಾದ
ಮಹತ್ವದ ಗುಣವಾಗಿದೆ. ಉಳದ ಎಲ್ಲ ಗುಣಗಳಿದ್ದರೂ ಸ್ಪುತಿನಿಂದಗಳಿಂದ
ವಿಕಾರವಶನಾಗದ ವ್ಯಕ್ತಿಯು ದೊರೆಯುವುದು ವಿರಳ. ಸರ್ವಸಂಗ
ಪರತ್ಯಾಗಿಗಳಿಗೂನಿಸ್ಚೃಹ ಸೇವಾಜೀವಿಗಳಿಗೂಸ್ತುತಿಯ ಮೋಹವನ್ನು ಮೀರಿ
ನಿಲ್ಲಲಾಗುವುದಿಲ್ಲ. ತನ್ನತ್ಯಾಗಸೇವೆಗಳನ್ನು ಸ್ತುತಿಸುವಾಗಎಂತಹತ್ಯಾಗತಪಸ್ವಿಯ
ಮುಖವೂ ಅರಳುತ್ತದೆ. ಫಲಾಶೆ ಇಲ್ಲದೆ ಕೇವಲ ಹರಿ ಪ್ರೀತಿಯ ಅಪೇಕ್ಷೆಯಿಂದ
ಸ್ವಕರ್ತವ್ಯಬುದ್ಧಿಯಿಂದ ನಡೆಯುವ ಕರ್ಮ ಯೋಗಿಯಾದ ಭಕ್ತನಿಗೆ
ಸ್ತುತಿನಿಂದೆಗಳೆರಡೂ ಸಮಾನವೇ ಆಗುವವು. ಇಂತಹ ದಿವ್ಯಸದ್ಗುಣಗಳನ್ನೆಲ್ಲ
ವಡೆಯಲು ಸಾಧಕನು ವ್ರಯತ್ನಿಸಿದಲ್ಲಿ ಅಧ್ಯಾತ್ಮನಿಧಿಯು ಅವನ
ಹಸ್ತಗತವಾಗುವುದರಲ್ಲಿವಿಲಂಬವಾಗುವುದಿಲ್ಲ.
ಯೇತು ಧರ್ಮ್ಯಾಮೃತಮಿದಂ ಯಥೋಕ್ತಂ ಪರ್ಯುಪಾಸತೇ।
ಈ ಸದ್ಗು ಣಗಳು ಧರ್ಮ ಹಾಗೂ ಅಮೃತಗಳಾಗಿವೆ.
Bannanje Govindacharya (1936–2020)Bhagavad Gita Pravachana
ಸ್ಮಾತ್ ನ ಉದ್ವಿಜತೇ ಲೋಕಃ ಲೋಕಾತ್ ನ ಉದ್ವಿಜತೇಚಯಃ |
ಹರ್ಷ ಅಮರ್ಷ ಭಯ ಉದ್ವೇಗೈಃ ಮುಕ್ತಃ ಯಃ ಸಃ ಚ ಮೇ ಪ್ರಿಯಃ -ಯಾರಿಂದಲೂ ನೋಯದವನು,
ಯಾರನ್ನೂ ನೋಯಿಸದವನು, ಹಮ್ಮಿನಿಂದ ಕೇಡಿಗೆಳೆಸದವನು, ರೇಗದವನು, ಅಂಜದವನು,
ತಲ್ಲಣಗೊಳ್ಳದವನು-ಅವನು ನನಗೆ ಅಚ್ಚುಮೆಚ್ಚು.
ನಮ್ಮನ್ನು... ನೋಡಿ. ಇನ್ನೊಬ್ಬರು. ಉದ್ವೇಗಗೊಳ್ಳಬಾರದು.. ಹಾಗೂ ನಾವು ಇನ್ನೊಬ್ಬರನ್ನು
ಉದ್ವೇಗಗೊಳಿಸಬಾರದು. ಯಾರೂ ನಮ್ಮನ್ನು ನೋಡಿ ಅಸಹನೆ-ಅತೃಪ್ಪಿ ತಾಳಬಾರದು ಮತ್ತು ಇನ್ನೊಬ್ಬರನ್ನು
ನೋಡಿ ನಾವು ಅಸಹನೆ ತಾಳಬಾರದು. ನಾವು ಪ್ರಪಂಚವನ್ನು ಬೇಷರತ್ತಾಗಿ ಪ್ರೀತಿಸಿದಾಗ ಇದನ್ನು ಸಾಧಿಸಲು
ಸಾಧ್ಯ. ಭಗವಂತ ಮೆಚ್ಚುವ ಕೆಲಸ ಮಾಡಿದಾಗ ಭಗವಂತ ನಮ್ಮನ್ನು ಪ್ರೀತಿಸುತ್ತಾನೆ. ಭಗವಂತ
ಪ್ರೀತಿಸುವವರನ್ನು ಇಡೀ ಪ್ರಪಂಚವೇ ಪ್ರೀತಿಸುತ್ತದೆ.
ನಾವು ಹರ್ಷ ಅಮರ್ಷ ಭಯ ಮತ್ತು ಉದ್ವೇಗದಿಂದ ಮುಕ್ತರಾಗಬೇಕು. ಮಾಡಬಾರದ್ದನ್ನು ಮಾಡುವುದರಲ್ಲಿ
ಹಿಗ್ಗು ಹರ್ಷ; ಇನ್ನೊಬ್ಬರು ಮಾಡಬೇಕಾದ್ದನ್ನು ಮಾಡಿದಾಗ ಅದನ್ನು ನೋಡಿ ಹೊಟ್ಟೆಕಿಚ್ಚು ಪಡುವುದು ಅಮರ್ಷ.
ಸಾಧಕ ಹರ್ಷ ಅಮರ್ಷದಿಂದ ಮುಕ್ತನಾಗಿರಬೇಕು. ಹೆದರುವಂತಹ ಕೆಲಸ ಮಾಡಬೇಡ ಮತ್ತು ತಪ್ಪು
ಮಾಡದಿದ್ದಾಗ ಭಯಬೇಡ. ಇನ್ನೊಬ್ಬರನ್ನು ನಾವು ಸಂಶಯ ದೃಷ್ಟಿಯಿಂದ ನೋಡಿದರೆ ಅವರೂ ನಮ್ಮನ್ನು
ಸಂಶಯ ದೃಷ್ಟಿಯಿಂದ ನೋಡುತ್ತಾರೆ. ನಾವು ಇನ್ನೊಬ್ಬರನ್ನು ನಂಬದಿದ್ದಾಗ ಅವರೂ ನಮ್ಮನ್ನು ನಂಬುವುದಿಲ್ಲ.
ಇದರಿಂದ ಉದ್ವೇಗ(7605100). ಉದ್ವೇಗದಿಂದ ಅನೇಕ ವಿಧದ ರೋಗಗಳು ನಮ್ಮ ದೇಹದಲ್ಲಿ ಮನೆ
ಮಾಡುತ್ತವೆ. ನಾವು ಭಗವಂತನನ್ನು ನಂಬಿ ನಿಸ್ವಾರ್ಥವಾಗಿ, ನಿಶ್ಚಿಂತೆಯಿಂದ ಬದುಕಲು ಕಲಿಯಬೇಕು.
“ಜೀವನದಲ್ಲಿ ಎಲ್ಲರನ್ನು ಪ್ರೀತಿಸುವ ಸಾಧಕ; ಹರ್ಷ ಅಮರ್ಷ ಭಯ ಮತ್ತು ಉದ್ವೇಗವನ್ನು ಗೆದ್ದ ಸಾಧಕ ನನಗೆ
ಪ್ರಿಯ” ಎನ್ನುತ್ತಾನೆ ಕೃಷ್ಣ.
Bibek Debroy (1955–2024)The Bhagavad Gita
(15)
‘He from whom other people are not disturbed and he who is not disturbed
by other people and he who is free from delight, dissatisfaction,16 fear and
concern, is dear to me.’