अनपेक्षः शुचिर्दक्ष उदासीनो गतव्यथः ।
सर्वारम्भपरित्यागी यो मद्भक्तः स मे प्रियः ॥
anapekṣaḥ śucirdakṣa udāsīno gatavyathaḥ |
sarvārambhaparityāgī yo madbhaktaḥ sa me priyaḥ ||
Sri Madhvacharya (1238–1317)Bhagavad Gita Tatparya Nirnaya
अवैष्णवसर्वारम्भपरित्यागी। सर्वारम्भाभिमानत्यागेन फलत्यागेन भगवत्समर्पणरूपेण च त्यागी।
‘सर्वकर्मफलत्यागं प्राहुस्त्यागं विचक्षणाः’
‘मयि सर्वाणि कर्माणि सन्नस्याध्यात्मचेतसा’ इत्यादेः॥16॥
Swami Sivananda (1887–1963)Bhagavad Gita
16. He who is free from wants, pure, expert, unconcerned, and untroubled, renouncing all
undertakings or commencements—he who is (thus) devoted to Me, is dear to Me.
Sri Vishwesha Tirtharu (1931–2019)Gitasaroddhara
12.13–12.20 · ಭಕ್ತಶೀಲ ಸಂವರ್ಧನೆ
ಸಾಧಕನಲ್ಲಿ ಶೀಲಸಂವರ್ಧನೆ
ಸಾಧಕನು ನಿಷ್ಕುಮಕರ್ಮಾಚರಣ, ವೈರಾಗ್ಯಮತ್ತುಪ್ರಯತ್ನಗಳ ಜೊತೆಗೆ
ತನ್ನಲ್ಲಿ ಸದ್ಗುಣಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು. ನಮ್ಮಲ್ಲಿ
ಸದ್ಗುಣಗಳನ್ನು ವಿಕಸಿತಗೊಳಿಸುವುದೂ ಪರಮಾತ್ಮನ ಸಾಕ್ಚಾತ್ಕಾರಕ್ಕೆ
ಆವಶ್ಯಕವಾಗಿದೆ. ಮುಕ್ತಿಯನ್ನು ಹೊಂದಲಿರುವ ಆತ್ಮರೆಲ್ಲರೂ ಸ್ವತಃ
ಸದ್ಗುಣರೂಪಿಗಳೇ ಆಗಿರುವರು. ಅಜ್ಞಾನದಿಂದ ಆವೃತವಾದ, ಆದರೆ
ಸ್ವಾಭಾವಿಕವಾಗಿ ಸದ್ಗುಣಾತ್ಮಕವಾದ ತಮ್ಮ ಚೈತನ್ಯವನ್ನು ಅವಿಷ್ಕಾರಗೊಳಿಸು
ವುದೇ ಮುಕ್ತಿ ಎಂದು ಶಾಸ್ತ್ರಗಳಲ್ಲಿ ಹೇಳಿದೆ. ಹೀಗೆ ನಮ್ಮ ಮೂಲಭೂತ
ಸದ್ಗುಣಗಳ ಅಭಿವ್ಯಕ್ತಿಯಾಗಲು ಅದಕ್ಕೆ ಅನುಕೂಲವೆನಿಸುವ ಪ್ರವೃತ್ತಿಗಳೇ ನಮ್ಮ
ಜೀವನದಲ್ಲಿ ವ್ಯಾಪಿಸಿಕೊಂಡಿರಬೇಕು. ಆತನಸ್ವಾಭಾವಿಕಧರ್ಮಗಳೆನಿಸಿದಸತ್ವ,
ಜ್ಞಾನ, ದಯೆ, ತ್ಯಾಗ ಮುಂತಾದ ಸ್ವರೂಪ ಸದ್ಗುಣಗಳಿಗೆ ತೀರ ವ್ಯತಿರಿಕ್ತವೂ
ವಿರೋಧಿಯೂ ಆದಪ್ರವೃತ್ತಿಯನ್ನು ನಮ್ಮಲ್ಲಿ ರೂಢಿಸಿಕೊಂಡಲ್ಲಿ ನಮ್ಮ ಆತ್ಮವು
ಇನ್ನೂ ಹೆಚ್ಚುಘನವಾದ ಆವರಣಕ್ಕೆ ಒಳಪಟ್ಟಂತಾಗುವುದು. ಅಸತ್ಯ, ಕ್ರೌರ್ಯ,
ಹಿಂಸೆ, ವಂಚನೆ ಮೊದಲಾದ ದುರ್ಗುಣಗಳು ಆತ್ಮಸ್ವರೂಪಕ್ಕೆ ತೀರ
ವಿಸಂಗತಗಳಾದ ವಿರೋಧಿ ಭಾವಗಳಾಗಿವೆ. ಇಂತಹ ದುರ್ಗುಣಗಳಿಗೆ ನಮ್ಮ
ಜೀವನದಲ್ಲಿ ಅವಕಾಶ ದೊರೆಯುವುದರಿಂದ ನಮ್ಮ ಆತ್ಮವನ್ನು ಕುಗ್ಗಿಸಿ ಅಜ್ಞಾನ
ಪ್ರಕೃತಿಗಳ ವಿಜೃಂಭಣೆಯನ್ನು ಇನ್ನೂ ಹೆಚ್ಚಿಸಿದಂತಾಗುತ್ತದೆ.
ಅದರಂತೆ ನಮ್ಮಲ್ಲಿ ದುರ್ಗುಣಗಳು ಹೆಚ್ಚಿದರೆ ಅನಂತಗುಣರೂಪಿಯಾದ
ಭಗವಂತನ ಧ್ಯಾನ ಸಾಕ್ಷಾತ್ಯಾರಗಳನ್ನು ಪಡೆಯುವ ಅರ್ಹತೆಯನ್ನೇ ನಾವು
ಕಳೆದುಕೊಂಡಂತಾಗುವುದು. ನಮ್ಮ ನಿತ್ಯವ್ಯವಹಾರಗಳೆಲ್ಲವೂ ದುರ್ಗುಣ
ದುರಾಚಾರಗಳಿಂದ ದೂಷಿತವಾಗಿದ್ದರೆ, ಸುಗುಣಮೂರ್ತಿಯಾದ ಪರಮಾತ್ಮನ
ಸಾಮ್ಯಪ್ರಾಪ್ತಿಯೆನ್ನಲಾಗುವ ಮುಕ್ತಿಯನ್ನು ಪಡೆಯಲು ನಾವು ಹೇಗೆ
ಅರ್ಹರಾಗಬಲ್ಲೆವು? ಆದುದರಿಂದ ನಮ್ಮ ಮೂಲಭೂತಸ್ಥಿತಿಯೆನಿಸಿದ ನಮ್ಮ
ಆತ್ಮದಸ್ವಾಭಾವಿಕ ಗುಣಧರ್ಮಗಳಿಗೂ ನಮ್ಮ ಪರಮಪ್ರಾಪ್ಯಸ್ಥಾನವಾಗಿರುವ
ಪರಮಾತ್ಮ ಸ್ವರೂಪಗುಣಗಳಿಗೂ ತೀರ ವಿರೋಧಿಯಾದ ಮನೋಧರ್ಮ
ಗಳಿಗೆ ನಮ್ಮ ಜೀವನದಲ್ಲಿ ಸರ್ವಥಾ ಅವಕಾಶವಿರಬಾರದು. ಇದರಿಂದ
ಭಗವಂತನಿಂದನಾವುಇನ್ನೂ ಹೆಚ್ಚು ದೂರ ಉಳಿಯುವ ಮತ್ತು ಆತ್ಮವಿಕಾಸಕ್ಕೆ
ಅಡಚಣೆಯಾಗುವ ದುರಂತ ಸನ್ನಿವೇಶವು ಒದಗುವುದು. ಆದುದರಿಂದ
ಅನಂತಗುಣಮೂರ್ತಿಯಾದ ಪರಮಾತ್ಮನ ಸಾಕ್ಷಾತ್ಕಾರದಿಂದ ನಮ್ಮಲ್ಲಿಯೇ
ಸಹಜವಾಗಿ ಹುದುಗಿರುವ ಚೇತನಾತ್ಮಕ ಸದ್ಗುಣಪ್ರಭೆಗಳಿಂದ ನಾವು
ಬೆಳಗಬೇಕಾದರೆ ನಮ್ಮ ಲೌಕಿಕ ಜೀವನವು ನೀತಿಶೀಲಸಂಪನ್ನವಾಗಿರಬೇಕು.
ನಮ್ಮ ವ್ಯವಹಾರಗಳೆಲ್ಲ ಸದ್ಗುಣಮಯವಾಗಿರಬೇಕು. ಸಾಧಕನು ತನ್ನಲ್ಲಿ
ಅಳವಡಿಸಿಕೊಳ್ಳಬೇಕಾದ ಈ ಗುಣಗಳ ಯಾದಿಯನ್ನು ಹನ್ನೆರಡನೆಯ
ಅಧ್ಯಾಯದಕೊನೆಯಲ್ಲಿ ಬರುವ,
ಅದ್ವೇಷ್ಟಾಸರ್ವಭೂತಾನಾಂ ಮೈತ್ರಃ ಕರುಣಏವಚ।
ಮುಂತಾದ ಶ್ಲೋಕಗಳಲ್ಲಿ ನಾವು ಕಾಣಬಹುದು. ಅದ್ವೇಷ, ಮೈತ್ರಿ, ಕರುಣೆ,
ನಿರ್ಮಮತೆ, ನಿರಹಂಕಾರ, ಸಹನೆ, ಅಲಂಬುದ್ಧಿ ಮೊದಲಾದವುಗಳೇನಮ್ಮಲ್ಲಿ
ಅಳವಡಿಸಿಕೊಳ್ಳಬೇಕಾದ ಸದ್ಗುಣಗಳಾಗಿವೆ. ಭಕ್ತನಲ್ಲಿ ಈ ಗುಣಗಳು
ತುಂಬಿರುತ್ತವೆ. ಇಂತಹ ಗುಣಶಾಲಿಯೇ ತನಗೆ ಅತ್ಯಂತ ಪ್ರೀತಿಪಾತ್ರನೆಂದು
ಸ್ವಾಮಿಯು ಅರುಹಿದ್ದಾನೆ. ಲೋಕದ ಯಾವುದೇ ವ್ಯವಹಾರದಿಂದ
ಉದ್ವಿಗ್ನನಾಗದೆ, ಯಾರಿಗೂ ಹೆದರದೆ ಭಕ್ತನು ತನ್ನ ಕರ್ತವ್ಯವನ್ನು
ನಿರ್ವಹಿಸುತ್ತಾನೆ. ಅದರಂತೆ ಅವನಿಂದಲೂ ಜನರಿಗೆ ಯಾವ ಭಯ, ಅಪಾಯ
ಉಪದ್ರವಗಳೂ ಇಲ್ಲ. ಸರ್ವರಿಗೂ ಅಭಯ ನೀಡಿತಾನೂ ನಿರ್ಭಯವಾಗಿ,
ಉಳಿದವರೂನಿರುದ್ದಿಗ್ಗರಾಗಿರುವಂತಹ ಸನ್ನಿವೇಶವನ್ನು ಭಕ್ತನು ನಿರ್ಮಿಸುತ್ತಾನೆ.
ಆತನು "ಸರ್ವಾರಂಭ ಪರಿತ್ಯಾಗಿ' ಅಂದರೆ ಪರಮಾತ್ಮನ ಪ್ರೀತಿಕರವಾಗದ ಕೇವಲ
ಸ್ವಫಲಾಪೇಕ್ಷೆಯ ಕರ್ಮಗಳಿಂದ ದೂರವಾಗಿರುತ್ತಾನೆ. ಅವನಿಗೆ
ಸುಖದುಃಖಗಳಿರಡರಲ್ಲಿಯೂ ಸಮದೃಷ್ಟಿ ಇರುತ್ತದೆ. ಸುಖದಂತೆ ದುಃಖವೂ
ಅವನಿಗೆ ಅಪೇಕ್ಷಿತವೇ. ತನ್ನ ದುಷ್ಕೃತ್ಯಗಳ ಫಲರೂಪವಾದ ದುಃಖತಾಪಗಳನ್ನು
ಅನುಭವಿಸಿತನ್ನ ಪಾತಕಗಳನ್ನು ಪರಿಹರಿಸಿಕೊಳ್ಳಲು ಭಕ್ತನು ತವಕಿಸುತ್ತಾನೆ. ತನ್ನ
ಆತ್ಮಶುದ್ಧಿಗೆ ಸಹಾಯಕವೆಂದು ದುಃಖದ ಸನ್ನಿವೇಶವನ್ನು ಸಂತೋಷ
ಸಮಾರಂಭವೆಂಬಂತೆ ಉತ್ಸಾಹದಿಂದ ಆತನು ಸ್ವಾಗತಿಸುತ್ತಾನೆ. ಅದರಂತೆ ಭಕ್ತನು
ದುಃಖದಂತೆ ಸುಖವನ್ನು ಉಪೇಕ್ಷಾಬುದ್ಧಿಯಿಂದ ನೋಡುವನು. ದುಃಖವು
ಕ್ಲೇಶರೂವವಾಗಿರುವಂತೆ ಸುಖವೂ ಅನಂತಕ್ಷೇಶಕರವಾಗಿದೆ. ಒಂದು ಸುಖದ
ತುಣುಕಿಗಾಗಿ ಮಾನೆಔನು ಅದೆಷ್ಟು ದೈನ್ಯ ಸಂಕಟಗಳನ್ನು ಅನುಭವಿಸುತ್ತಾನೆ!
ಸಮಚಿತ್ತನಾದ ಭಕ್ತನ ದೃಷ್ಟಿಯಲ್ಲಿ ವೈಷಯಿಕ ಸುಖಹಾಗೂಸಾಂಸಾರಿಕ ಕ್ಲೇಶ
ಇವೆರಡಕ್ಕೂ ಒಂದೇ ಬೆಲೆ. ಎರಡನ್ನೂ ಹೇಯಭಾವನೆಯಿಂದಲೇ ಆತನು
ನಿರೀಕ್ಷಿಸುತ್ತಿರುವುದರಿಂದ ಆತನು ಸಮದುಃಖ ಸುಖನೆನಿಸುತ್ತಾನೆ.
ಸ್ತುತಿನಿಂದೆಗಳೆರಡರಲ್ಲಿಯೂ ನಿರ್ವಿಕಾರನಾಗಿರುವುದೂ ಒಂದು ಅಪೂರ್ವವಾದ
ಮಹತ್ವದ ಗುಣವಾಗಿದೆ. ಉಳದ ಎಲ್ಲ ಗುಣಗಳಿದ್ದರೂ ಸ್ಪುತಿನಿಂದಗಳಿಂದ
ವಿಕಾರವಶನಾಗದ ವ್ಯಕ್ತಿಯು ದೊರೆಯುವುದು ವಿರಳ. ಸರ್ವಸಂಗ
ಪರತ್ಯಾಗಿಗಳಿಗೂನಿಸ್ಚೃಹ ಸೇವಾಜೀವಿಗಳಿಗೂಸ್ತುತಿಯ ಮೋಹವನ್ನು ಮೀರಿ
ನಿಲ್ಲಲಾಗುವುದಿಲ್ಲ. ತನ್ನತ್ಯಾಗಸೇವೆಗಳನ್ನು ಸ್ತುತಿಸುವಾಗಎಂತಹತ್ಯಾಗತಪಸ್ವಿಯ
ಮುಖವೂ ಅರಳುತ್ತದೆ. ಫಲಾಶೆ ಇಲ್ಲದೆ ಕೇವಲ ಹರಿ ಪ್ರೀತಿಯ ಅಪೇಕ್ಷೆಯಿಂದ
ಸ್ವಕರ್ತವ್ಯಬುದ್ಧಿಯಿಂದ ನಡೆಯುವ ಕರ್ಮ ಯೋಗಿಯಾದ ಭಕ್ತನಿಗೆ
ಸ್ತುತಿನಿಂದೆಗಳೆರಡೂ ಸಮಾನವೇ ಆಗುವವು. ಇಂತಹ ದಿವ್ಯಸದ್ಗುಣಗಳನ್ನೆಲ್ಲ
ವಡೆಯಲು ಸಾಧಕನು ವ್ರಯತ್ನಿಸಿದಲ್ಲಿ ಅಧ್ಯಾತ್ಮನಿಧಿಯು ಅವನ
ಹಸ್ತಗತವಾಗುವುದರಲ್ಲಿವಿಲಂಬವಾಗುವುದಿಲ್ಲ.
ಯೇತು ಧರ್ಮ್ಯಾಮೃತಮಿದಂ ಯಥೋಕ್ತಂ ಪರ್ಯುಪಾಸತೇ।
ಈ ಸದ್ಗು ಣಗಳು ಧರ್ಮ ಹಾಗೂ ಅಮೃತಗಳಾಗಿವೆ.
Bannanje Govindacharya (1936–2020)Bhagavad Gita Pravachana
ಅನಪೇಕ್ಷಃ ಶುಚಿಃ ದಕ್ಷಃ ಉದಾಸೀನಃ ಗತವ್ಯಥಃ
ಸರ್ವಾರಂಭಪರಿತ್ಯಾಗೀ ಯಃ ಮತ್ ಭಕ್ತಃ ಸಃ ಮೇ ಪ್ರಿಯಃ -ಏನನ್ನೂ ಬಯಸದವನು, ಚೊಕ್ಕವಾಗಿ
ಚುರುಕಾಗಿರುವವನು, ಯಾವುದನ್ನೂ ಹಚ್ಚಿಕೊಳ್ಳದವನು, ಕಂಗೆಡದವನು, ಭಗವಂತನ ಆರಾಧನೆಯಲ್ಲದ
ಯಾವ ತೊಡಗುವಿಕೆಯಲ್ಲೂ ತೊಡಗದವನು,[ಎಲ್ಲವನ್ನೂ ಭಗವಂತನಿಗೆ ಅರ್ಪಿಸಿ ನಾನು-ನನ್ನದು ಎಂಬ
ಹಮ್ಮು ತೊರೆದವನು], ಇಂತಹ ನನ್ನ ಭಕ್ತ ನನಗೆ ಅಚ್ಚುಮೆಚ್ಚು.
ತನ್ನ ಭಕ್ತನಲ್ಲಿರಬೇಕಾದ, ಭಕ್ತಿಗೆ ಪೂರಕವಾದ ಆರು ಗುಣಗಳನ್ನು ಕೃಷ್ಣ ಈ ಶ್ಲೋಕದಲ್ಲಿ ವಿವರಿಸಿದ್ದಾನೆ.
(೧) ಅನಪೇಕ್ಷಃ : ಅದು ಬೇಕು ಇದು ಬೇಕು ಎಂದು ಬಯಸದೇ ಇರುವುದು. ಯಾವುದರಿಂದ ತಾತ್ಕಾಲಿಕ ಸುಖ
ಬರುತ್ತದೋ ಅದರ ಹಿಂದೆ ಹೋಗದೆ, ಶಾಶ್ವತವಾದ ಮೋಕ್ಷ ಮಾರ್ಗದಲ್ಲಿ ನಡೆಯುವುದು. ಏನು ಸಿಕ್ಕಿತೋ
ಅದರಲ್ಲಿ ಸಂತೋಷಪಡುವುದು-ಇದು ಅನಪೇಕ್ಷಃ.
(೨) ಶುಚಿಃ : ನಿರ್ಮಲ ಮತ್ತು ನಿರಾಳವಾಗಿರುವುದು. ಇದೇ ಮಡಿ. ಬಾಯಲ್ಲಿ ಕೆಟ್ಟ ಮಾತು, ಮನಸ್ಸಿನಲ್ಲಿ ಕೆಟ್ಟ
ಯೋಚನೆ, ಮೈಯಲ್ಲಿ ಕೊಳೆ-ಇದು ಮೈಲಿಗೆ. ಮೊದಲು ನಾವು ನಮ್ಮ ಮನಸ್ಸಿನ ಕೊಳೆ ತೊಳೆದುಕೊಳ್ಳಬೇಕು.
ಇದಕ್ಕೆ ಪೂರಕವಾಗಿ ಬಾಹ್ಯ ಶುದ್ಧಿ. ಇದಕ್ಕಾಗಿ ಶಾಂತಿ ಪಾಠದಲ್ಲಿ ಹೀಗೆ ಹೇಳುತ್ತೇವೆ: “ಓಂ ಭದ್ರಂ ಕರ್ಣೇಭಿಃ
ಶೃಣುಯಾಮ ದೇವಾಃ ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ” ಎಂದು. ನಾವು ಒಳ್ಳೆಯದನ್ನು ನೋಡೋಣ,
ಒಳ್ಳೆಯದನ್ನು ಮಾತನಾಡೋಣ, ಒಳ್ಳೆಯದನ್ನು ಯೋಚಿಸೋಣ ಎಂದು. ಇದು ನಿಜವಾದ ಮಡಿ.
ಮಡಿಯ ಬಗ್ಗೆ ಹೆಚ್ಚು ಪ್ರಸಿದ್ಧವಾದ ಎರಡು ಶ್ಲೋಕಗಳಿವೆ:
ಅಪವಿತ್ರಃ ಪವಿತ್ರೋವ ಸರ್ವಾವಸ್ಥಾಂ ಗತೋಪಿವಾ |
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||
ಮತ್ತು
ಅತಿನೀಲಘನಶ್ಯಾಮಂ ನಲಿನಾಯತಲೋಚನಂ |
ಸ್ಮರಾಮಿ ಪುಂಡರೀಕಾಕ್ಷಂ ತೇನ ಸ್ನಾತೋ ಭಾವಾಮ್ಯಹಂ॥
ಇಲ್ಲಿ ಪುಂಡರೀಕಾಕ್ಷನನ್ನು ಸ್ಮರಣೆ ಮಾಡಬೇಕು ಎಂದು ಹೇಳಿದ್ದಾರೆ. ಇದೊಂದು ಭಗವಂತನ ವಿಶೇಷ ನಾಮ.
ಪುಂಡರೀಕಾಕ್ಷ ಎಂದರೆ ಕೆಂದಾವರೆಯಂತಹ ಕಣ್ಣುಳ್ಳವನು ಎಂದರ್ಥ. ಭಗವಂತನ ಕಣ್ಣು ಯಾವಾಗಲೂ
ಕೆಂದಾವರೆ ಎಸಳಿನಂತೆ ಅರಳಿ ನಳನಳಿಸುತ್ತಿರುತ್ತದೆ. ಸಾಮಾನ್ಯವಾಗಿ ನಮಗೆ ಅತ್ಯಂತ ಸಂತೋಷವಾದಾಗ
ನಮ್ಮ ಕಣ್ಣು ಅರಳುತ್ತವೆ. ಆದರೆ ಭಗವಂತ ಸದಾ ಸಂತೋಷದ ಬುಗ್ಗೆ. ಭಗವಂತ ಪ್ರೀತಿಯಿಂದ ಕಣ್ಣರಳಿಸಿ
ನನ್ನನ್ನು ನೋಡುತ್ತಿದ್ದಾನೆ. ಅವನ ಕಣ್ಣಿನಿಂದ ಹರಿದುಬರುತ್ತಿರುವ ಅನುಗ್ರಹದ ರಸಧಾರೆಯಲ್ಲಿ ನಾನು
ಮೀಯುತ್ತಿದ್ದೇನೆ. ಅವನ ಅನುಗ್ರಹದ ಕೃಪಾದೃಷ್ಟಿ ನನ್ನ ಮೇಲೆ ಹರಿದಿದೆ. ನಾನು ಅದರಲ್ಲಿ ಮಿಂದೆ ಎನ್ನುವ
ಅನುಸಂಧಾನ ಶುಚಿ. ಹೀಗೆ ನಾವು ಭಗವಂತನ ಅನುಗ್ರಹದಿಂದ ಒಳಗೂ ಹೊರಗೂ ಮಡಿಯಾಗಬೇಕು.
(೩) ದಕ್ಷಃ : ನಮ್ಮಲ್ಲಿ ಮನಸ್ಸನ್ನು ಭಗವಂತನೆಡೆಗೆ ಹರಿಸುವ ದಕ್ಷತೆ ಇರಬೇಕು. ಆತ ನಮ್ಮ ಬಾಹ್ಯ ಪ್ರಯತ್ನಕ್ಕೆ
ಒಲಿಯಲಾರ. ನಾವು ಅಂತರಂಗದಿಂದ ಆತನೆಡೆಗೆ ಹೋಗಬೇಕು. ಬಾಹ್ಯ ಕ್ರಿಯೆ ನಮ್ಮ ಅಂತರಂಗದ ಸಾಧನೆಗೆ
ಪೂರಕ ಅಷ್ಟೆ. ಭಗವಂತನನ್ನು ಹೇಗೆ ಸೇರಬಹುದು ಎನ್ನುವ ತಿಳುವಳಿಕೆ, ಜಾಣತನ ನಮ್ಮಲ್ಲಿರಬೇಕು.
(೪) ಉದಾಸೀನ : ಅಂತರ್ಯಾಮಿಯಾಗಿರುವುದು. ಯಾವುದೇ ಬಾಹ್ಯ ಕ್ರಿಯೆಗೆ ಒತ್ತು ಬೇಡ, ಆಗ್ರಹ ಬೇಡ.
ಉದಾಹರಣೆಗೆ- ನಿಮ್ಮ ಕುಟುಂಬದಲ್ಲಿ ಯಾರೋ ಒಬ್ಬರು ತಮ್ಮ ಯಾವುದೋ ಒಂದು ಫಲಾಪೇಕ್ಷೆಯನ್ನು
ಈಡೇರಿಸಿಕೊಳ್ಳಲು ಯಾವುದೋ ಒಂದು ಪೂಜೆ ಮಾಡಿಸುತ್ತಿದ್ದಾರೆ. ಅಂಥಹ ಸಂದರ್ಭದಲ್ಲಿ ಫಲಾಪೇಕ್ಷೆಯಿಂದ
ಭಗವದಾರಾಧನೆ ತಪ್ಪು ಎಂದು ಅದನ್ನು ವಿರೋಧಿಸಿ ನಿಲ್ಲುವುದು ಒಳ್ಳೆಯದಲ್ಲ. ಏನೇ ಇರಲಿ ಅದು ಭಗವಂತನ
ಸೇವೆ; ಅದು ಭಗವಂತನನ್ನು ಸೇರಲಿ ಎಂದು ಪ್ರಾರ್ಥಿಸಿ. ಎಲ್ಲರೊಂದಿಗಿದ್ದು ಯಾವುದೇ ಆಗ್ರಹವಿಲ್ಲದೆ ಬದುಕಲು
ಕಲಿಯಿರಿ.
(೫) ಗತವ್ಯಥಃ : ಏನೇ ಆದರೂ ಬೇಸರಿಸಿಕೊಳ್ಳದೆ ಸದಾ ಆನಂದವಾಗಿರುವುದು.
(೬) ಸರ್ವಾರಂಭಪರಿತ್ಯಾಗಿ : ಭಗವಂತನ ಪಾರಮ್ಯಕ್ಕೆ ವಿರುದ್ಧವಾದ ಯಾವ ಆರಂಭಕ್ಕೂ ತೊಡಗದಿರುವುದು.
ಎಲ್ಲಾ ಆರಂಭವನ್ನು ಫಲಕಾಮನೆಯಿಂದ ಮಾಡುವುದನ್ನು ಬಿಡು. ಎಲ್ಲವನ್ನೂ ಕೊನೆಗೆ ಕೃಷ್ಣಾರ್ಪಣಮಸ್ತು
ಎಂದು ಭಗವಂತನಲ್ಲಿ ಅರ್ಪಿಸು.
“ಯಾರು ಈ ಗುಣಗಳೊಂದಿಗೆ ನನ್ನನ್ನು ಪ್ರೀತಿಸುತ್ತಾರೋ ಅಂತಹ ಭಕ್ತ ನನಗೆ ಅಚ್ಚುಮೆಚ್ಚು” ಎನ್ನುತ್ತಾನೆ ಕೃಷ್ಣ.
Bibek Debroy (1955–2024)The Bhagavad Gita
(16)
‘Without desire,17 pure, enterprising, neutral, without pain and one who has
renounced all fruit,18 such a devotee is dear to me.’