12.4

सन्नियम्येन्द्रियग्रामं सर्वत्र समबुद्धयः ।
ते प्राप्नुवन्ति मामेव सर्वभूतहिते रताः ॥
sanniyamyendriyagrāmaṃ sarvatra samabuddhayaḥ |
te prāpnuvanti māmeva sarvabhūtahite ratāḥ ||
Swami Sivananda (1887–1963)Bhagavad Gita
4. Having restrained all the senses, even-minded everywhere, intent on the welfare of all beings—verily they also come unto Me.
Sri Vishwesha Tirtharu (1931–2019)Gitasaroddhara
12.1–12.5 · ಶ್ರೀತತ್ತ್ವ ಉಪಾಸನೆ
ಶ್ರೀತತ್ತ್ವದ ಉಪಾಸನೆ ಹಾಂ ಪರಮಾತ್ಮನ ಭಕ್ತಿಹಾಗೂ ಅವನ ಉವಾಸನೆಯಿಂದಲೇ ಮುಕ್ತಿಎಂಬುದು ಈವರೆಗಿನ ಭಕ್ತಿಯೋಗದ ವಿಸ್ಸತನಿರೂಪಣೆಯಿಂದ ಸ್ಪಷ್ಟವಾಗಿದೆ. ಆದರೂ ಪರಮಾತ್ಮನ ಉಪಾಸನೆಯ ಬದಲು ಜಗತ್ತಿನ ಮೂಲಕಾರಣವಾದ ಜಡಪ್ರಕೃತಿಯ ಅಭಿಮಾನಿಯಾದ ಚಿತ್‌ವ್ರಕೃತಿ ಎನಿಸಿರುವ ಶ್ರೀತತ್ತ್ವದ ಉವಾಸನೆಯಿಂದಲೂ ಮುಕ್ತಿಯು ದೊರೆಯಬಹುದೆ? ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ವರಮವುರುಷನಾದ ಶ್ರೀನಾರಾಯಣನು ಮತ್ತು ಜಗನ್ಮಾತೆಯೂ ಮಂಗಲದೇವತೆಯೂ ಆದ ಲಕ್ಷ್ಮೀದೇವಿಯು ಇವರಿಬ್ಬರೂ ಸಮಾನವ್ಯಾಪ್ತಿ ಯುಳ್ಳ ನಿತ್ಯಮುಕ್ತರಾದ ಜಗತ್ತಿನ ಪರತತ್ತ್ವಗಳೆನಿಸಿದ್ದಾರೆ. ಹ 6111... 1. | ಬ್ಲ ಇಂ ನಾ ಇವರಿಬ್ಬರಲ್ಲಿ ಯಾರ ಉವಾಸನೆಯಿಂದಲೂ ಮುಕ್ತಿ ಯನ್ನು ವಡೆಯಬಹು ದೆಂಬ ಶಂಕೆಯು ಮೂಡುವುದು ಸಹಜವಾಗಿದೆ. ಅದರಲ್ಲಿಯೂ ಜಗತ್ತಿನ ತಂದೆಯಾದ ಶ್ರೀಹರಿ ಯನ್ನು ಪ್ರಸನ್ನ ಗೊಳಿಸುವುದಕ್ಕಿಂತ ಜಗನ್ಮಾತೆಯನ್ನು ಬೇಗನೆ ಒಲಿಸಬಹು ದಾದುದರಿಂದ ಈ ಸುಲಭೋವಾಯವನ್ನೇ ಏಕೆ ಅನುಸರಿಸಬಾರದು? ಎಂಬ ಭಾವನೆಯೂ ಸಹಜವಾಗಿ ಉಂಟಾಗುತ್ತದೆ. ಈ ಸಂದೇಹವನೇ ಅರ್ಜುನನೂ ಶ್ರೀಕೃಷ್ಣನಲ್ಲಿ ತೋಡಿಕೊಳ್ಳುತಾನೆ. ರ ಕ (ಸಲ! ಓ ಗಸಿ ಆ ಅದ್ಯ ದಾದ ್‌್‌್‌್‌ “ಬನ ಏವಂ ಸತತಯುಕ್ತಾ ಯೇಭಕ್ತಾ ಸ್ತಾ ಕ ಪರ್ಯುಪಾಸತೇ | ಯೇ ಚಾಷ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾಃ ॥ ಅವ್ಪಕತತ ದ ಅರ್ಥಾತ್‌ ಶ್ರೀತತ್ನ್ನದ ಉಪಾಸನೆಯನ್ನು ಮಾಡಿದರೂ ಕ್‌ ಕ್‌ ಆಟದಿ ಯ್‌ ತ ಗ ಗಗ ಗಳಗ [| ಪರಮಾತ್ಮನ ಉಪಾಸನೆ ಮತ್ತು ಸಾಕ್ಟಾತ್ಕಾರವಿಲ್ಲದೆ ಮುಕ್ತಿಯನ್ನು ಸರ್ವಥಾ ವಡೆಯಲು ಶಕ್ಕವಿಲ್ಲ. ತನ್ನನ್ನು ಉಪಾಸನೆ ಮಾಡಿದರೂ ಪರಮವುರುಷನ ಆರಾಧನೆಯನ್ನು ಮಾಡದ ವ್ಯಕ್ತಿಯಲ್ಲಿ ದೇವಿಯೂ ಪ್ರಸನ್ನಳಾಗುವುದಿಲ್ಲ. ದೇವಿಯ ಉವಾಸನೆಯು ಕ್ಲಿಷ್ಟವಾದ ಭಗವದುಪಾಸನೆಯ ಮಾರ್ಗವನ್ನು ಸುಲಭಗೊಳಿಸುವುದರಿಂದ ಮೋಕ್ಷಾರ್ಥಿಗಳು ಅದನ್ನು ಸ್ವಾಗತಿಸಬಹು ದಾದರೂ ಅದರಿಂದಲೇಮುಕ್ತಿಯನ್ನುಪಡೆಯಲು ಸಾಧ್ಯವಿಲ್ಲ. ಆದುದರಿಂದ ಚಿತ್‌ವ್ರಕೃತಿಯನ್ನು ಉವಾಸಿಸಿ ಅದರ ಮೂಲಕವಾಗಿ ಪರಮಪುರುಷನ ಉಪಾಸನೆಯನ್ನು ಗೈಯುವ ಈ ಬಳಸು ದಾರಿಯನ್ನು ಅನುಸರಿಸುವುದಕ್ಕಿಂತ ನೇರವಾಗಿ ತನ್ನನ್ನೇ ಆರಾಧಿಸುವ ಸುಲಭ ಮಾರ್ಗವನ್ನೇ ಹಿಡಿಯುವಂತೆ ಶ್ರೀಕೃಷ್ಣನು ಉಪದೇಶಿಸುವನು. ಕ್ಲೇಶೋನಧಿಕತರಸ್ತೇಷಾಂ ಅವೃಕ್ತಾ ಸಕ್ತಚೇತಸಾಮ್‌ । ಜಗತ್ತಿನ ತಂದೆ ತಾಯಂದಿರಾದ ಪರಮಾತ್ಮ ಮತ್ತು ಚಿತ್‌ಪ್ರಕೃತಿ ಇವೆರಡು ಪರತತ್ವ್ವಗಳನ್ನು ಚಿಂತಿಸಿಕೊಂಡು ಲಕ್ಷ್ಮೀಪತಿಯಾದ ಶ್ರೀಹರಿಯ ಪೂಜೋ ಪಾಸನೆಗಳಿಂದಲೇ ಮೋಕ್ಷಪದವಿಯನ್ನು ಪಡೆಯಲು ಪ್ರಯತ್ನಿಸುವುದು ಸರಿಯಾದ ಹಾಗೂ ಸುಲಭವಾದ ಮಾರ್ಗವಾಗಿದೆ. ಒಂದು ದೃಷ್ಟಿಯಿಂದ ನಾವೆಲ್ಲರೂ ಲಕ್ಷ್ಮಿಯ ಆರಾಧಕರೇ ಎಂದೆನ್ನಬಹುದು. ಪರಮಾತ್ಮನನ್ನು ಮರೆತು ಜೀವನವಿಡೀ ಲಕ್ಷ್ಮಿಯ ಅರ್ಥಾತ್‌ ಸಂಪತ್ತಿನ ಧ್ಯಾನದಲ್ಲಿಯೇ ನಾವು ಮುಳುಗಿದ್ದೇವೆ. ಆದರೆ ದೇವನನ್ನು ಮರೆತು ಬರೇ ಸಂವತ್ತಿನ ಚಿಂತನದಲ್ಲೇ ತಲ್ಲೀನರಾದ ನಮಗೆ ಸಿರಿದೇವಿಯು ಒಲಿದಾಳೆಯೆ? ಸಿರಿಯೊಡೆಯನನ್ನು ತೊರೆದ ನಮ್ಮಿಂದ ಸಿರಿಯೂ ದೂರವಿರುವುದು ಸಹಜವೇ ಆಗಿದೆ. ವಿಷ್ಣುನಾ ಸಹಿತಾ ಧ್ಯಾತಾಸಾ ಹಿ ತುಪ್ಪಿಂ ಪರಾಂ ವ್ರಜೇತ್‌ । ವಿಷ್ಣುವಿನ ಜೊತೆಗೆ ಪೂಜಿಸಿದರೇನೇ ಲಕ್ಷ್ಮಿಗೆ ಪರಮ ಸಂತೋಷವಂತೆ. ಪರಮಾತ್ಮನನ್ನು ಮರೆತು ಜೀವನವಿಡೀ ಬರಿಸಿರಿ-ಸಂಪತ್ತುಗಳ ವೂಜೆಯನ್ನೇ ನಡೆಸುವ ನಾವು ಭೂತಿ ಮತ್ತು ಭಗವಂತ ಇವೆರಡನ್ನೂ ಕಳೆದುಕೊಳ್ಳುತ್ತೇವೆ. ಅಂತೂ ಲಕ್ಷ್ಮೀ ಉಪಾಸನೆಗಿಂತಲೂ ಲಕ್ಷ್ಮೀನಾರಾಯಣನ ಉಪಾಸನೆಯೇ ಜೀವನದ ವರಮಪುರುಷಾರ್ಥವನ್ನು ಪಡೆಯುವ ಶ್ರೇಷ್ಠವಾದ ಸಾಧನವೆಂದು ಈ ಭಾಗದತಾತ್ಚರ್ಯವಾಗಿದೆ.
12.2–12.4 · ಅವ್ಯಕ್ತವು ನಿರ್ಗುಣ ವಸ್ತುವೆ
ಅವ್ಯಕ್ತವು ನಿರ್ಗುಣ ಬ್ರಹ್ಮವೆ? ಕೆಲವರು ಇಲ್ಲಿ ನಗುಣ-ನಿರ್ಗುಣಗಳ ಗೊಂದಲವನ್ನು ತರುವ ಪ್ರಯತ್ನ ಮಾಡುತ್ತಾರೆ. ಜ್ಞಾನ, ಶಕ್ತಿ ಕ್ರಿಯಾ ಮೊದಲಾದ ಮಹಾ ಗುಣಗಳಿಂದಕೂಡಿದ ಬ್ರಹ್ಮನು ನಗುಣನೆಂದೂ ಈ ಗುಣಧರ್ಮಗಳಿಂದ ರಹಿತವಾದ ಅಪರಿಚ್ಚಿನ್ನ ಚೈತನ್ಯವೇ ನಿರ್ಗುಣವೆಂದೂ ಬ್ರಹ್ಮವನ್ನು ಇವರು ಎರಡು ವಿಧವಾಗಿ ವಿಂಗಡಿಸುತ್ತಾರೆ. ನಿರ್ಗುಣೋಪಾಸನೆಯು ಶ್ರೇಷ್ಠವಾದರೂ ಕ್ಲಿಷ್ಣವಾಗಿರುವು ದರಿಂದ ಸಗುಣೋಪಾಸನೆಯ ಸುಲಭ ಮಾರ್ಗವನ್ನು ಕೃಷ್ಣನು ಬೋಧಿಸಿರುವು ದಾಗಿ ಗೀತೆಯ ಆಶಯವನ್ನು ವಿವರಿಸುತ್ತಾರೆ. ವರಬ್ರಹ್ಮನನ್ನು ಸಗುಣ, ನಿರ್ಗುಣ ಎಂಬುದಾಗಿ ವಿಭಜಿಸಿ ಒಂದು ಪರಮ ಸತ್ಯವೆಂದೂ ಇನ್ನೊಂದು ಮಾಯಿಕವೆಂದೂ ಹೇಳುವುದು ಸರಿಯಲ್ಲ. ಉವನಿವತ್ತಿನಲ್ಲಿ ಎಲ್ಲಿಯೂ ಬ್ರಹ್ಮನನ್ನು ಈ ವಿಧವಾಗಿ ವಿಂಗಡಿಸಿರುವುದು ಕಂಡುಬರುವುದಿಲ್ಲ. ಒಬ್ಬನೇ ಬ್ರಹ್ಮನು ನಗುಣನೂ ನಿರ್ಗುಣನೂ ಆಗಿರುವನು. ಸತ್ತ್ವ ರಜಸ್ಸು ತಮನ್ನು ಮುಂತಾ ದಪ್ರಾಕೃತ ಗುಣಗಳಿಂದವಿರಹಿತನೂ ಜ್ಞಾನ ಆನಂದಾ ದಿ ಚೈತನ್ಯಮ ಯ ಸದ್ಗುಣಭರಿತನೂ ಆದ ವರಮಾತೃನೊಬ್ಬನೇ ಸಗುಣನೂ ನಿರ್ಗುಣನೂ ಆಗಿರುವನು. ಅಪ್ರಾಕೃತ ಗುಣಗಳ ದೃಷ್ಟಿಯಿಂದ ಸಗುಣನೆಂದೂ ಪ್ರಾಕೃತ ಗುಣಗಳ ದೃಷ್ಟಿಯಿಂದ ನಿರ್ಗುಣನೆಂದೂ ಒಬ್ಬನನ್ನೇಕರೆಯಲಾಗುತ್ತದೆ. ಏಕೋ ದೇವಃ ಸರ್ವಭೂತೇಷು ಗೂಢ: ಸರ್ವವ್ಯಾಪೀ ಸರ್ವಭೂತಾಂತರಾತ್ಮಾ| ಕರ್ಮಾಧ್ಯಕ್ಷ ಸರ್ವಲೊಕಾಧಿವಾಸಃ ಸಾಕ್ಷೀ ಚೇತಾಕೇವಲೋ ನಿರ್ಗುಣಶ್ಚ॥ -ಶ್ವೇತಾಶ್ವತರೊ ಪನಿಷತ್‌ ಎಂದು ಉಪನಿಷತ್ತಿನಲ್ಲಿ ಸರ್ವವ್ಯಾಪಿಯೂ ಸರ್ವಭೂತಾಂತರಾತ್ಮನೂ ದೇವನೂ ಆದ ಸಗುಣವಸ್ತುವನ್ನೇ ನಿರ್ಗುಣವೆಂದು ಕರೆಯಲಾಗಿದೆ. ಹೀಗಿರುವಾಗ ಸಗುಣನು ಬೇರೆ ನಿರ್ಗುಣನು ಬೇರೆ ಎಂದು ಪರಬ್ರಹ್ಮ ವಸ್ತುವನ್ನು ಭಿನ್ನವಿಭಿನ್ನ ಗೊಳಿಸಿ ಜಗಜ್ಜನ್ಮಾದಿಕರ್ತವೂ ನರ್ವಜ್ಞವೂ ಸರ್ವಶಕ್ತಿ ಯೂಆದ ಸಗುಣಬ್ರಹ್ಮವನ್ನು ಮಾಯಿಕವೆಂದು ಪರಿಕಲ್ಪಿಸುವುದು ಮಹಾ ಅಪಲಾಪವೆನಿನು ಅವ್ಯಕ್ತೊ ೇವಾಸಕರು ಹಾಗೂ ಭಗವದುವಾಸಕರು ಇವರಿಬ್ಬರಲ್ಲಿ ಯಾರು ಶ್ರೇಷ್ಠರು ಎಂಬ ಅರ್ಜುನನ ಪ್ರಶ್ನೆಯನ್ನು ಉತ್ತರಿಸುವವ್ರಸ್ತುತ ಸಂದರ್ಭದಲ್ಲಿ ಮಯ್ಯಾವೇಶ್ಯ ಮನೋ ಯೇ ಮಾಂ ನಿತ್ಯಯುಕ್ತಾ ಉಪಾಸತೇ॥ ಶ್ರದ್ಧಯಾಪರಯೋಪೇತಾ ಸ್ತೇಮೇ ಯುಕ್ತತಮಾ ಮತಾಃ ॥ ಎಂದು ಅವ್ಯಕ್ತವನ್ನು ಉವಾಸಿಸುವುದಕ್ಕಿಂತ ತನ್ನನ್ನು ಆರಾಧಿಸುವವರೇ ಶ್ರೇಷ್ಠರು ಎಂದು ಹೇಳುತ್ತಾನೆ. ನಿರ್ಗುಣವೇ ಪರಮ ಸತ್ಯವಾಗಿದ್ದ ವಕ್ಷ ದಲ್ಲಿ ಸಗುಣರಾದ ತನ್ನ ಉಪಾಸಕರೇ ಯುಕ್ತತಮರೆಂಬ ಶ್ರೀಕೃಷ್ಣನ ಮಾತು ಹೇಗೆ ಸುಸಂಗತವಾಗುವುದು? ಶ್ರೀಕೃಷ್ಣನು ನಿರ್ಗುಣತತ್ತ್ವವಲ್ಲವೆಂದೂ ಸಗುಣನೂ ಸರ್ವಜ್ಞನೂ ಆದ ಪುರುಷೋತ್ತಮನೇ ಶ್ರೀಕೃಷ್ಣನೆಂದೂ ಸರ್ವವಿದಿತವಾದ ಅಂಶವಾಗಿದೆ. ಯೇ ತ್ವಕ್ಷರಮನಿರ್ದೇಶ್ಯಂ ಅವ್ಯಕ್ತಂ ಪರ್ಯುಪಾಸತೇ । ತೇ ಪ್ರಾಪ್ನುವಂತಿ ಮಾಮೇವ... | ಎಂಬುದಾಗಿ ಅವೃಕ್ತವನ್ನು ಉವಾಸಿಸುವವರೂ ತನ್ನನ್ನೇ ಹೊಂದುವರೆಂಬ ಶ್ರೀಕೃಷ್ಣನ ವಚನವನ್ನಂತೂ ನಿರ್ಗುಣೋಪಾಸನೆಯೇ ಅವ್ಯಕ್ತೋಪಾಸನೆ ಯಾಗಿರುವ ವಕ್ಷದಲ್ಲಿ ಸರ್ವಥಾ ಯೋಚಿಸಲು ಶಕ್ಕವಿಲ್ಲ. ನಿರ್ಗುಣೋಪಾಸಕನು ಸಗುಣನಾದ ಕೃಷ್ಣನನ್ನು ಹೇಗೆ ಹೊಂದಬಲ್ಲನು? ನೈರ್ಗುಣ್ಯವಾದದ ತತ್ತ್ವನಿರೂವಣೆಯಂತೆ ನಿರ್ಗುಣೋವಾಸನೆಯಿಂದ ಸಾಧಕರು ವರಬ್ರಹ್ಮ ಭಾವವನ್ನು ಹೊಂದುವರಲ್ಲದೆ ಸಗುಣವ್ರಾಪ್ತಿಯನ್ನು ಅದರ ಫಲವಾಗಿ ಅಂಗೀಕರಿಸಲಾಗಿಲ್ಲ. ಅಂತೂ ಇಲ್ಲಿ ನಿರೂಪಿಸಲಾದ ಅವ್ಯಕ್ತೊ ೇೀಪಾಸನೆಯ ಫಲವನ್ನು ಪರಿಶೀಲಿಸುವಾಗಲೂ ಅವ್ಯಕ್ತೊ ೇಪಾಸನೆಗಿಂತ ಭಗವದುವಾಸನೆಗೆ ನೀಡಲಾದ ಪ್ರಾಶಸ್ತ್ಯವನ್ನು ಗಮನಿಸುವಾಗಲೂ ಸಗುಣ, ನಿರ್ಗಣವಿಚಾರಗಳಿಗೆ ಇಲ್ಲಿ ಅವಕಾಶವಿಲ್ಲವೆಂದೂ ಶ್ರೀತತ್ತ್ವಹಾಗೂ ವರಮಾತೃತತ್ತ್ವಗಳ ಉವಾಸನೆಗಳ ವಿವೇಚನೆಗೇ ಈ ಭಾಗ ಸಂಬಂಧಿಸಿದೆಯೆಂಬುದೂ ಸ್ಪಷ್ಟವಾಗುತ್ತ ದೆ.
Bannanje Govindacharya (1936–2020)Bhagavad Gita Pravachana
12.3–12.4
ಯೇತು ಅಕ್ಷರಮ್‌ ಅನಿರ್ದೇಶ್ಯಮ್‌ ಅವ್ಯಕ್ತಮ್‌ ಪರ್ಯುಪಾಸತೇ | ಸರ್ವತ್ರಗಮ್‌ ಆಚಿಂತ್ಯಮ್‌ ಚ ಕೂಟಸ್ಥಮ್‌ ಅಚಲಮ್‌ ಧ್ರುವಮ್‌ ॥ ಸನ್ನಿಯಮ್ಯಇಂದ್ರಿಯ ಗ್ರಾಮಮ್‌ ಸರ್ವತ್ರ ಸಮ ಬುದ್ಧಯಃ | ತೇ ಪ್ರಾಪ್ನುವಂತಿ ಮಾಮ್‌ ಏವ ಸರ್ವ ಭೂತ ಹಿತೇ ರತಾಃ --ಅವ್ಯಕ್ತವೂ ಅಳಿವಿರದ ತತ್ವ. ಮಾತಿಗೆ ನಿಲುಕದ, ಚಿಂತನೆಗೆ ಎಟುಕದ ತತ್ವ. ಆಗಸದಲ್ಲಿ ನೆಲೆಸಿ ಎಲ್ಲೆಡೆಯೂ ತುಂಬಿರುವಂತಾದ್ದು. ನೆಲೆಗೆಡದ ನಿರ್ವಿಕಾರವಾದ ತತ್ವ. ಇಂದ್ರಿಯಗಳ ಗಡಣವನ್ನು ಬಿಗಿಹಿಡಿದು ಎಲ್ಲೆಡೆಯೂ ಸಮದೃಷ್ಟಿಯಿಂದ ಎಲ್ಲಾ ಪ್ರಾಣಿಗಳಿಗೆ ಒಳಿತನ್ನು ಬಯಸುತ್ತಾ ಇಂತಹ ಅವ್ಯಕ್ತತತ್ವವನ್ನು ಸೇವಿಸುವವರೂ ಕೂಡಾ ನನ್ನನ್ನೇ ಸೇರುತ್ತಾರೆ. ಅವ್ಯಕ್ತತತ್ವ ಲಕ್ಷ್ಮಿಯ ಉಪಾಸನೆಯ ಬಗ್ಗೆ ಇಲ್ಲಿ ಕೃಷ್ಣ ವಿವರಿಸುತ್ತಾನೆ. ಲೋಕನೀತಿಗೂ ಭಗವಂತನ ಉಪಾಸನೆಯಲ್ಲೂ ಒಂದು ವ್ಯತ್ಯಾಸವಿದೆ. ಲೋಕದಲ್ಲಿ ಸಾಮಾನ್ಯವಾಗಿ ತಾಯಿ ಯಾವಾಗಲೂ ತನ್ನ ಮಕ್ಕಳ ತಪ್ಪನ್ನು ಕ್ಷಮಿಸುತ್ತಾಳೆ ಮತ್ತು ತಂದೆ ಶಿಕ್ಷಿಸುತ್ತಾನೆ. ಆದರೆ ತಾಯಿ ಶ್ರೀಲಕ್ಷ್ಮಿ ಉಪಾಸನೆ ಮತ್ತು ಭಗವಂತನ ಉಪಾಸನೆಯಲ್ಲಿ ಇದು S308. ಉಪಾಸನೆಯಲ್ಲಿ ಏನಾದರೂ ಲೋಪ ದೋಷಗಳಾದರೆ ಮಾತೆ ಕ್ಷಮಿಸಲಾರಳು, ಆದರೆ ಭಗವಂತ ಕ್ಷಮಿಸುತ್ತಾನೆ. ಈ ಕಾರಣಕ್ಕಾಗಿ ಅವ್ಯಕ್ತಳಾದ ಅಕ್ಷರಳ ಉಪಾಸನೆ ಕಷ್ಟ. ಇಲ್ಲಿ ಕೃಷ್ಣ ಮಾತೆ ಲಕ್ಷ್ಮಿಯನ್ನು ಉಪಾಸನೆ ಮಾಡುವವರು ತಿಳಿದಿರಬೇಕಾದ ಅಂಶಗಳನ್ನು ವಿವರಿಸುತ್ತಾನೆ. ಈ ವಿವರಣೆಯನ್ನು ಅನೇಕ ವಿಶೇಷಣಗಳನ್ನು ಬಳಸಿ ಈ ಶ್ಲೋಕದಲ್ಲಿ ವಿವರಿಸಲಾಗಿದೆ. ಅಳಿವಿರದ ದೇಹವುಳ್ಳ ಆಕೆ ಅಕ್ಷರಳು; ನಮ್ಮ ಬುದ್ದಿಗೆ ಗೋಚರವಾಗದ ಪ್ರಕೃತಿ ಅನಿರ್ದೇಶ್ಯಳು; ಎಂದೂ ವ್ಯಕ್ತವಾಗದ ಲಕ್ಷ್ಮಿ ಅವ್ಯಕ್ತಳು. ಈ ಎಲ್ಲಾ ಗುಣಗಳು ಭಗವಂತನಿಗೂ ಅನ್ವಯವಾಗುತ್ತದೆ. ಜಗತ್ತಿನ ಸೃಷ್ಟಿಗೆ ಮೂಲ ತತ್ವವಾದ ಆಕಾಶದಲ್ಲಿ ನೆಲೆಸಿ, ಇಡೀ ವಿಶ್ವದ ವಿಸ್ತಾರಕ್ಕೆ ಕಾರಣಳಾದವಳು ಲಕ್ಷ್ಮಿ. ಸ್ಥಿರ ಮತ್ತು ಶಾಶ್ವತವಾಗಿರುವ ಆಕೆ ಸದಾ ಭಗವಂತನ ಪಾದವನ್ನು ಸೇವಿಸುತ್ತಿರುತ್ತಾಳೆ. ಇಂತಹ ಶಕ್ತಿ ದೇವತೆಯನ್ನು ಉಪಾಸನೆ ಮಾಡಲು ಕಠೋರವಾದ ಇಂದ್ರಿಯ ನಿಗ್ರಹ ಅಗತ್ಯ. ಎಲ್ಲವನ್ನೂ ಸಮಬುದ್ಧಿಯಿಂದ ಕಾಣುತ್ತಾ, ಯಾವುದೇ ನ್ಯೂನತೆ ಇಲ್ಲದೆ ಉಪಾಸನೆ ಮಾಡುವುದು ಇಲ್ಲಿ ಅತ್ಯಗತ್ಯ. [ಉದಾಹರಣೆಗೆ ಲಲಿತ ಸಹಸ್ರನಾಮ ಪಾರಾಯಣ. ಇಲ್ಲಿ ಸ್ವಲ್ಪ ಲೋಪದೋಷವಾದರೂ ಕೂಡಾ ಅದರಿಂದ ಅನರ್ಥವಾಗುತ್ತದೆ.]. ಈ ರೀತಿ ಅತ್ಯಂತ ನಿಯಮಬದ್ಧವಾಗಿ ಅವ್ಯಕ್ತತತ್ವದ ಉಪಾಸನೆಯಿಂದ ಭಗವಂತನನ್ನು ಸೇರಲು ಸಾಧ್ಯ. ಆದರೆ ಇದು ಸುಲಭ ದಾರಿ ಅಲ್ಲ ಎನ್ನುತ್ತಾನೆ ಕೃಷ್ಣ.
Bibek Debroy (1955–2024)The Bhagavad Gita
(4) ‘...Controlling properly the senses and looking upon everything equally, acting for the welfare of all beings, they attain only me.’