12.9

अथ चित्तं समाधातुं न शक्नोषि मयि स्थिरम् ।
अभ्यासयोगेन ततो मामिच्छाप्तुं धनञ्जय ॥
atha cittaṃ samādhātuṃ na śaknoṣi mayi sthiram |
abhyāsayogena tato māmicchāptuṃ dhanañjaya ||
Swami Sivananda (1887–1963)Bhagavad Gita
9. If thou art unable to fix thy mind steadily on Me, then by the Yoga of constant practice do thou seek to reach Me, O Arjuna!
Sri Vishwesha Tirtharu (1931–2019)Gitasaroddhara
12.9–12.10 · ಧ್ಯಾನಮಾರ್ಗದ ಮೆಟ್ಟಿಲುಗಳು
ಧ್ಯಾನಮಾರ್ಗದ ಮೆಟ್ಟಲುಗಳು ಮುಕ್ತಿಹಾಗೂ ಸಾಕ್ಟಾತ್ಕಾರಗಳಿಗೆ ಪ್ರಧಾನಕಾರಣವಾದ ಭಕ್ತಿ ಪುರಸ್ಸರವಾದ ನಿರಂತರ ಭಗವದ್‌ಧ್ಯಾನವನ್ನು ಮಾಡಲು ಸಾಧಾರಣ ಜನರಿಗೆ ಸಾಧ್ಯವಾಗುವು ದಿಲ್ಲ. ಅಂತಹ ಆಳವಾದ ಭಕ್ತಿಯಾಗಲೀ ಹೃದಯ ಬಲವಾಗಲೀ ವಿಷಯ ವೈರಾಗ್ಯವಾಗಲೀ ಇಲ್ಲದ ನಮಗೆ ಈ ಅಖಂಡ ಧ್ಯಾನವನ್ನು ಮಾಡಲು ಸಾಧ್ಯವಾಗದಿದ್ದರೂ ಆ ಬಗ್ಗೆ ತೀವ್ರ ಅಭ್ಯಾಸವನ್ನಾದರೂ ಮಾಡಬೇಕು. ಹಸಿ ಕಟ್ಟಿಗೆಯಲ್ಲಿ ಹೊಗೆಯನ್ನಲ್ಲದೇ ಬೆಂಕಿಯನ್ನು ನಾವುಕಾಣಲಾರೆವು. ತುಪ್ಪದಲ್ಲಿ ಅದ್ದಿದ ಒಣಗಿದ ಬತ್ತಿಯಲ್ಲಿ ಮಾತ್ರ ದೀಪ ಉರಿಯಬಲ್ಲದು. ವಿಷಯಜಲದಲ್ಲಿ ಮಿಂದ ಹಸಿ ಅಂತಃಕರಣದಲ್ಲಿ ರಾಗ-ಮೋಹಗಳ ಹೊಗೆಯಲ್ಲದೆ ಜ್ಞಾನದ ಕಿಡಿಯು ವ್ರಜ್ವಲಿಸಲಾರದು. ತಪಸ್ಸು ಮತ್ತು ಸತ್ಯರ್ಮಗಳಿಂದ ಸಂಸ್ಕಾರ ಹೊಂದಿದ, ಭಕ್ತಿಯ ಫೃತಧಾರೆಯಲ್ಲಿ ಮಿಂದ ಅಂತಚರಣದಲ್ಲಿ ಮಾತ್ರ ಜ್ಞಾನಜ್ಯೋತಿಯು ಬೆಳಗಬಲ್ಲದು. ಆದುದರಿಂದ ವಿಷಯದಲ್ಲಿವಿರಕ್ಷಿಯನ್ನೂ ಪರಮಾತ್ಮನಲ್ಲಿ ಭಕ್ತಿಯನ್ನೂ ಅಭಿವೃದ್ಧಿಗೊಳಿಸಲು ತೀವ್ರ ಪ್ರಯತ್ನವನ್ನಾದರೂ ನಿರಂತರವಾಗಿ ಮಾಡಬೇಕು. ಅಥ ಚಿತ್ತಂ ಸಮಾಧಾತುಂ ನಶಕ್ನೋಪಿ ಮಯಿ ಸ್ಥಿರಂ | ಅಭ್ಯಾಸಯೋಗೇನತತೋ ಮಾಮಿಚ್ಛಾನವಪ್ಪುಂ ಧನಂಜಯ ॥ ಅಭ್ಯಾಸೇನಪೃಸಮರ್ಥೋಸಿ ಮತ್ಕರ್ಮಪರಮೋ ಭವ। ಈತೀವ್ರಾಭ್ಯಾಸವನ್ನು ಕೈಗೊಳ್ಳುವ ಮಾನಸಿಕ ಸಂಸ್ಕಾರವನ್ನು ಪಡೆದಿರದಿದ್ದರೆ ಭಗವತ್‌ಪ್ರೀತಿಯ ಉದ್ದೇಶದಿಂದ ನಿಷ್ಠುಮನೆಯಿಂದ ಕರ್ಮಾಚರಣೆಯನ್ನೆಸ ಗುವ ಕರ್ಮಯೋಗದ ಸಿದ್ಧಿಯನ್ನಾದರೂ ನಾವು ಹೊಂದಿರಬೇಕು. ಕರ್ಮಯೋಗವು. ಅಂತಚರಣಶಕ್ತಿಯನ್ನು ಹೆಚ್ಚಿಸಿ ಧ್ಯಾನಯೋಗದ ಪ್ರಯತ್ನವನ್ನು ಕೈಗೊಳ್ಳಲು ನಮ್ಮನ್ನು ಅಣಿಗೊಳಿಸುವುದು. ಇಂತಹ ನಿಷ್ಕಾಮಕರ್ಮಯೋಗದ ಅವಸ್ಥೆಯನ್ನು ನಾವುತಲುಪಿರದಿದ್ದರೆ ನಾವು ವಿವಿಧ ಅಪೇಕ್ಷೆಗಳಿಂದ ಕೈಗೊಂಡಿರುವ ನಾನಾ ವಿಧ ವ್ಯವಹಾರಗಳ ಮಧ್ಯದಲ್ಲಿಯೂ ಪದೇ ಪದೇ ಭಗವಂತನ ಸ್ಥರಣೆ ಮಾಡುತ್ತ ನಮ್ಮ ಕರ್ಮಗಳನ್ನು ಅವನಿಗೆ ಅರ್ಪಿಸುವ ಸಮರ್ಪಣ ಮನೋಭಾವವನ್ನಾದರೂ ನಮ್ಮ ಹೃದಯದಲ್ಲಿ ಜಾಗೃತಗೊಳಿಸಬೇಕು. ಪ್ರಾರಂಭದಿಂದ ಕೊನೆಯವರೆಗೂ ನಮ್ಮ ಸಕಲ ಕ್ರಿಯಾವ್ಯವಹಾರಗಳಲ್ಲಿ ನಿಷ್ಠುಮನೆ ಹಾಗೂ ಭಗವದರ್ಪಣಭಾವವನ್ನು ಸಂಪೂರ್ಣವಾಗಿ ಅನುಸ್ಕೂತಗೊಳಿಸಲು ನಮಗೆ ಶಕ್ಕವಾಗದಿದ್ದರೂ ಮಧ್ಯ ದಲ್ಲಾದರೂ ಆ ಬೆಳಕು ನುಸುಳಿಬರಲು ಅವಕಾಶವಿದ್ದರೆ ನಮ್ಮ ಜೀವನದಲ್ಲಿ ಗಾಢಾಂಧಕಾರವು ವ್ಯಾಪಿಸಲಾರದು. ನಮ್ಮ ಎಲ್ಲ ವ್ಯವಹಾರಗಳಲ್ಲಿಯೂ ಭಗವಂತನ ವ್ಯಾಪ್ತಿಯನ್ನು ನಾಧಿಸಲಾಗದಿದ್ದರೂ ಜೀವನದಲ್ಲಿ ಭಗವಂತನ ಸಂಬಂಧಸ್ಥಾವನೆಯಂತಹ 4 ಚಿಕ್ಕ ಪ್ರಯತ್ನವನ್ನಾದರೂ ನಾವು ಏಕೆ ಮಾಡಬಾರದು? ಹೀಗೆ ಗೀತೆಯು ಭಿನ್ನ ಭಿನ್ನ ಹಂತಗಳಲ್ಲಿ ನಾವು ಮಾಡಬಹುದಾದಂತಹಸಾಧನೆಯ ಸಾಮಗ್ರಿಯನ್ನು ನಮಗೆ ಎಟಕುವಂತಹ ರೀತಿಯಲ್ಲಿ ವಿವರಿಸಿದೆ. ಭಗವತ್‌ಸಂಬಂಧ ಸ್ಥಾಪನೆ, ನಿಷ್ಕುಮ ಕರ್ಮಯೋಗ ಧ್ಯಾನದಮಹಾ ಪ್ರಯತ್ನ ಅಖಂಡಧ್ಯಾನಇವೇಗೀತೆಯು ಬೋಧಿಸಿದನಾಲ್ಕು ಮೆಟ್ಟ ಲುಗಳಾಗಿದ್ದು ಕ್ರಮ ಕ್ರಮವಾಗಿ ಇವುಗಳನ್ನೇರಿ ನಮ್ಮ ಆತೃವಸ್ಥೆತ್ತರಿಸಲು ಪ್ರಯತ್ನಿಸಬೇಕು.
Bannanje Govindacharya (1936–2020)Bhagavad Gita Pravachana
ಅಥ ಚಿತ್ತಮ್‌ ಸಮಾಧಾತುಮ್‌ ನ ಶಕ್ನೋಷಿ ಮಯಿ ಸ್ಥಿರಮ್‌। ಅಭ್ಯಾಸಯೋಗೇನ ತತಃ ಮಾಮ್‌ ಇಚ್ಛಾ ಆಪ್ತುಂ ಧನಂಜಯ -ಧನಂಜಯಾ, ಒಂದೊಮ್ಮೆ ನನ್ನಲ್ಲಿ ಒಳಬಗೆಯನ್ನು ಗಟ್ಟಿಗೊಳಿಸಲು ಸಾಧ್ಯವಾಗದಿದ್ದರೆ, ಆಗ ಮರಳಿಮರಳಿ ಅಭ್ಯಾಸದ ಬಳಕೆಯಿಂದ ನನ್ನನ್ನು ಸೇರುವ ಬಯಕೆಯನ್ನು ಬೆಳೆಸಿಕೋ. ಮನಸ್ಸಿನಲ್ಲಿ ಭಗವಂತನ ಬಗ್ಗೆ ಭಕ್ತಿ ಇದೆ, ಬುದ್ಧಿಯಲ್ಲಿ ಜ್ಞಾನಪೂರ್ಣ ಭಕ್ತಿಯ ಅಂಕುರವಿದೆ. ಆದರೂ ಕೂಡಾ ಸ್ಥಿರವಾದ ಸ್ಮರಣೆ ಬರುತ್ತಿಲ್ಲ, ಮನಸ್ಸು ಗಟ್ಟಿಯಾಗಿ ನೆಲೆಗೊಳ್ಳುತ್ತಿಲ್ಲ ಆಗ ಏನು ಮಾಡುವುದು? ಶಾಸ್ತ್ರದಲ್ಲಿ ಹೇಳುವಂತೆ: ಸ್ಮರ್ತವ್ಯಃ ಸತತಂ ವಿಷ್ಣುಃ ವಿಸ್ಮರ್ತವ್ಯೋ ನ ಜಾತುಚಿತ್‌ | ಸರ್ವೇ ವಿಧಿ ನಿಷೆಧಾಸ್ಸ್ಯುಹುಃ ಏತಯೋರೇವ ಕಿಂಕರಾಃ || ಅಂದರೆ 'ನಾವು ನಿರಂತರ ಭಗವಂತನನ್ನು ನೆನಪಿನಲ್ಲಿಡಬೇಕು, ಎಂದೂ ಭಗವಂತನನ್ನು ಮರೆಯಬಾರದು". ಸಮಸ್ತ ವಿಧಿನಿಷೇಧ ಹೇಳುವುದು ಕೂಡಾ ಇದನ್ನೇ. ಮನಸ್ಸು ನಿರಂತರ ಭಗವಂತನಲ್ಲಿ ನಿಲ್ಲದೇ ಈ ಅಖಂಡ ಸ್ಮರಣೆ ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಎನ್ನುವುದನ್ನು ಕೃಷ್ಣ ವಿವರಿಸುತ್ತಾನೆ. ಮನಸ್ಸನ್ನು ಏಕಾಗ್ರತೆಯೆಡೆಗೆ ಕೊಂಡೊಯ್ಯುವ ಶಕ್ತಿ ಕೊಡು ಎಂದು ನನ್ನನ್ನು ಪ್ರಾರ್ಥಿಸು. ಅಧ್ಯಾತ್ಮದ ದಾರಿಯಲ್ಲಿ ಏನು ಇಚ್ಛೆ ಮಾಡಿದರೂ ಅದನ್ನು ಪೂರೈಸುವ ಜವಾಬ್ದಾರಿ ನನ್ನದು” ಎನ್ನುವ ಭರವಸೆ ಕೃಷ್ಣನದು. ಅಭ್ಯಾಸ ಮತ್ತು ಇಚ್ಛೆ ಇದ್ದರೆ ಖಂಡಿತವಾಗಿ ಏಕಾಗ್ರತೆ ಸಾಧ್ಯ. ನಾವು ಹೇಗೆ ಮಕ್ಕಳಿಗೆ ತರಬೇತಿಕೊಟ್ಟು, ಅಭ್ಯಾಸ ಮಾಡಿಸಿ ಕಲಿಸುತ್ತೇವೋ, ಹಾಗೆ ನಮ್ಮ ಮನಸ್ಸನ್ನು ರಮಿಸಿರಮಿಸಿ ಬುದ್ಧಿವಾದ ಹೇಳಿ ಅಭ್ಯಾಸಮಾಡಿಸಬೇಕು. ಹೀಗೆ ಮಾಡಿದಾಗ ಮನಸ್ಸು ಅದನ್ನು ರೂಢಿ ಮಾಡಿಕೊಳ್ಳುತ್ತದೆ. ಮೊದಲು ನಾವು ಲೌಕಿಕ ಸಂಪತ್ತಿನ ಬೆನ್ನುಹತ್ತುವುದನ್ನು ಬಿಟ್ಟು, ಭಗವಂತನೆಂಬ ಅಮೂಲ್ಯ ಧನವನ್ನು ಗೆಲ್ಲುವ ಧನಂಜಯರಾಗಬೇಕು.
Bibek Debroy (1955–2024)The Bhagavad Gita
(9) ‘O Dhananjaya!10 If you cannot steady your mind and fix it on me, then practise yoga11 and wish to attain me.’