अभ्यासेऽप्यसमर्थोऽसि मत्कर्मपरमो भव ।
मदर्थमपि कर्माणि कुर्वन्सिद्धिमवाप्स्यसि ॥
abhyāse'pyasamartho'si matkarmaparamo bhava |
madarthamapi karmāṇi kurvansiddhimavāpsyasi ||
Sri Madhvacharya (1238–1317)Bhagavad Gita Tatparya Nirnaya
12.10–12.12
‘वैष्णवान्येव कर्माणि यः करोति सदा नरः।
जपार्चामार्जनादीनि स्वाश्रमोक्तानि यानि च।
स तत्कर्मेति विज्ञेयो योऽन्यदेवादिपूजनम्।
कृत्वा हरावर्पयति स तु तद्योगमात्रवान्।
तत्र पूर्वो विशिष्टः स्यादादिमध्यान्ततः स्मृतेः।
अवान्तरे च नियमाद्विष्णोस्तद्दासताऽस्य यत्।
मनसा वर्ततेऽन्योऽपि यथाशक्ति हरिस्मृतेः।
पूर्वोक्तयोग्यो भवति यदि नित्यं तदिच्छति।
असम्यग् ज्ञानिनो ध्यानाज्ज्ञानमेव विशिष्यते।
ज्ञात्वा ध्यानं ततस्तस्मात् तत्फलेच्छाविवर्जितम्।
तस्माज्ज्ञानाद्भवेन्मुक्तिस्त्यागध्यानायुतात् स्फुटम्’ इति च॥
शान्तिः - मुक्तिः॥10-12॥
Swami Sivananda (1887–1963)Bhagavad Gita
10. If thou art unable to practise even this Abhyasa Yoga, be thou intent on doing actions for
My sake; even by doing actions for My sake, thou shalt attain perfection.
Sri Vishwesha Tirtharu (1931–2019)Gitasaroddhara
12.9–12.10 · ಧ್ಯಾನಮಾರ್ಗದ ಮೆಟ್ಟಿಲುಗಳು
ಧ್ಯಾನಮಾರ್ಗದ ಮೆಟ್ಟಲುಗಳು
ಮುಕ್ತಿಹಾಗೂ ಸಾಕ್ಟಾತ್ಕಾರಗಳಿಗೆ ಪ್ರಧಾನಕಾರಣವಾದ ಭಕ್ತಿ ಪುರಸ್ಸರವಾದ
ನಿರಂತರ ಭಗವದ್ಧ್ಯಾನವನ್ನು ಮಾಡಲು ಸಾಧಾರಣ ಜನರಿಗೆ ಸಾಧ್ಯವಾಗುವು
ದಿಲ್ಲ. ಅಂತಹ ಆಳವಾದ ಭಕ್ತಿಯಾಗಲೀ ಹೃದಯ ಬಲವಾಗಲೀ ವಿಷಯ
ವೈರಾಗ್ಯವಾಗಲೀ ಇಲ್ಲದ ನಮಗೆ ಈ ಅಖಂಡ ಧ್ಯಾನವನ್ನು ಮಾಡಲು
ಸಾಧ್ಯವಾಗದಿದ್ದರೂ ಆ ಬಗ್ಗೆ ತೀವ್ರ ಅಭ್ಯಾಸವನ್ನಾದರೂ ಮಾಡಬೇಕು. ಹಸಿ
ಕಟ್ಟಿಗೆಯಲ್ಲಿ ಹೊಗೆಯನ್ನಲ್ಲದೇ ಬೆಂಕಿಯನ್ನು ನಾವುಕಾಣಲಾರೆವು. ತುಪ್ಪದಲ್ಲಿ
ಅದ್ದಿದ ಒಣಗಿದ ಬತ್ತಿಯಲ್ಲಿ ಮಾತ್ರ ದೀಪ ಉರಿಯಬಲ್ಲದು.
ವಿಷಯಜಲದಲ್ಲಿ ಮಿಂದ ಹಸಿ ಅಂತಃಕರಣದಲ್ಲಿ ರಾಗ-ಮೋಹಗಳ
ಹೊಗೆಯಲ್ಲದೆ ಜ್ಞಾನದ ಕಿಡಿಯು ವ್ರಜ್ವಲಿಸಲಾರದು. ತಪಸ್ಸು ಮತ್ತು
ಸತ್ಯರ್ಮಗಳಿಂದ ಸಂಸ್ಕಾರ ಹೊಂದಿದ, ಭಕ್ತಿಯ ಫೃತಧಾರೆಯಲ್ಲಿ ಮಿಂದ
ಅಂತಚರಣದಲ್ಲಿ ಮಾತ್ರ ಜ್ಞಾನಜ್ಯೋತಿಯು ಬೆಳಗಬಲ್ಲದು. ಆದುದರಿಂದ
ವಿಷಯದಲ್ಲಿವಿರಕ್ಷಿಯನ್ನೂ ಪರಮಾತ್ಮನಲ್ಲಿ ಭಕ್ತಿಯನ್ನೂ ಅಭಿವೃದ್ಧಿಗೊಳಿಸಲು
ತೀವ್ರ ಪ್ರಯತ್ನವನ್ನಾದರೂ ನಿರಂತರವಾಗಿ ಮಾಡಬೇಕು.
ಅಥ ಚಿತ್ತಂ ಸಮಾಧಾತುಂ ನಶಕ್ನೋಪಿ ಮಯಿ ಸ್ಥಿರಂ |
ಅಭ್ಯಾಸಯೋಗೇನತತೋ ಮಾಮಿಚ್ಛಾನವಪ್ಪುಂ ಧನಂಜಯ ॥
ಅಭ್ಯಾಸೇನಪೃಸಮರ್ಥೋಸಿ ಮತ್ಕರ್ಮಪರಮೋ ಭವ।
ಈತೀವ್ರಾಭ್ಯಾಸವನ್ನು ಕೈಗೊಳ್ಳುವ ಮಾನಸಿಕ ಸಂಸ್ಕಾರವನ್ನು ಪಡೆದಿರದಿದ್ದರೆ
ಭಗವತ್ಪ್ರೀತಿಯ ಉದ್ದೇಶದಿಂದ ನಿಷ್ಠುಮನೆಯಿಂದ ಕರ್ಮಾಚರಣೆಯನ್ನೆಸ
ಗುವ ಕರ್ಮಯೋಗದ ಸಿದ್ಧಿಯನ್ನಾದರೂ ನಾವು ಹೊಂದಿರಬೇಕು.
ಕರ್ಮಯೋಗವು. ಅಂತಚರಣಶಕ್ತಿಯನ್ನು ಹೆಚ್ಚಿಸಿ ಧ್ಯಾನಯೋಗದ
ಪ್ರಯತ್ನವನ್ನು ಕೈಗೊಳ್ಳಲು ನಮ್ಮನ್ನು ಅಣಿಗೊಳಿಸುವುದು. ಇಂತಹ
ನಿಷ್ಕಾಮಕರ್ಮಯೋಗದ ಅವಸ್ಥೆಯನ್ನು ನಾವುತಲುಪಿರದಿದ್ದರೆ ನಾವು ವಿವಿಧ
ಅಪೇಕ್ಷೆಗಳಿಂದ ಕೈಗೊಂಡಿರುವ ನಾನಾ ವಿಧ ವ್ಯವಹಾರಗಳ ಮಧ್ಯದಲ್ಲಿಯೂ
ಪದೇ ಪದೇ ಭಗವಂತನ ಸ್ಥರಣೆ ಮಾಡುತ್ತ ನಮ್ಮ ಕರ್ಮಗಳನ್ನು ಅವನಿಗೆ
ಅರ್ಪಿಸುವ ಸಮರ್ಪಣ ಮನೋಭಾವವನ್ನಾದರೂ ನಮ್ಮ ಹೃದಯದಲ್ಲಿ
ಜಾಗೃತಗೊಳಿಸಬೇಕು. ಪ್ರಾರಂಭದಿಂದ ಕೊನೆಯವರೆಗೂ ನಮ್ಮ ಸಕಲ
ಕ್ರಿಯಾವ್ಯವಹಾರಗಳಲ್ಲಿ ನಿಷ್ಠುಮನೆ ಹಾಗೂ ಭಗವದರ್ಪಣಭಾವವನ್ನು
ಸಂಪೂರ್ಣವಾಗಿ ಅನುಸ್ಕೂತಗೊಳಿಸಲು ನಮಗೆ ಶಕ್ಕವಾಗದಿದ್ದರೂ ಮಧ್ಯ
ದಲ್ಲಾದರೂ ಆ ಬೆಳಕು ನುಸುಳಿಬರಲು ಅವಕಾಶವಿದ್ದರೆ ನಮ್ಮ ಜೀವನದಲ್ಲಿ
ಗಾಢಾಂಧಕಾರವು ವ್ಯಾಪಿಸಲಾರದು. ನಮ್ಮ ಎಲ್ಲ ವ್ಯವಹಾರಗಳಲ್ಲಿಯೂ
ಭಗವಂತನ ವ್ಯಾಪ್ತಿಯನ್ನು ನಾಧಿಸಲಾಗದಿದ್ದರೂ ಜೀವನದಲ್ಲಿ ಭಗವಂತನ
ಸಂಬಂಧಸ್ಥಾವನೆಯಂತಹ 4 ಚಿಕ್ಕ ಪ್ರಯತ್ನವನ್ನಾದರೂ ನಾವು ಏಕೆ
ಮಾಡಬಾರದು? ಹೀಗೆ ಗೀತೆಯು ಭಿನ್ನ ಭಿನ್ನ ಹಂತಗಳಲ್ಲಿ ನಾವು
ಮಾಡಬಹುದಾದಂತಹಸಾಧನೆಯ ಸಾಮಗ್ರಿಯನ್ನು ನಮಗೆ ಎಟಕುವಂತಹ
ರೀತಿಯಲ್ಲಿ ವಿವರಿಸಿದೆ. ಭಗವತ್ಸಂಬಂಧ ಸ್ಥಾಪನೆ, ನಿಷ್ಕುಮ ಕರ್ಮಯೋಗ
ಧ್ಯಾನದಮಹಾ ಪ್ರಯತ್ನ ಅಖಂಡಧ್ಯಾನಇವೇಗೀತೆಯು ಬೋಧಿಸಿದನಾಲ್ಕು
ಮೆಟ್ಟ ಲುಗಳಾಗಿದ್ದು ಕ್ರಮ ಕ್ರಮವಾಗಿ ಇವುಗಳನ್ನೇರಿ ನಮ್ಮ ಆತೃವಸ್ಥೆತ್ತರಿಸಲು
ಪ್ರಯತ್ನಿಸಬೇಕು.
Bannanje Govindacharya (1936–2020)Bhagavad Gita Pravachana
ಅಭ್ಯಾಸೇ ಅಪಿ ಅಸಮರ್ಥಃ ಅಸಿ ಮತ್ ಕರ್ಮ ಪರಮಃ ಭವ |
ಮತ್ ಅರ್ಥಮ್ ಅಪಿ ಕರ್ಮಾಣಿ ಕುರ್ವನ್ ಸಿದ್ಧಿಮ್ OTF, A -ಧ್ಯಾನದ ಅಭ್ಯಾಸವೂ ಅಸಾಧ್ಯವಾದರೆ ನನ್ನ
ಆರಾಧನಾ ರೂಪವಾದ ಕರ್ಮಗಳಲ್ಲೇ ತೊಡಗು. ಕರ್ಮವನ್ನು ನನ್ನ ಪೂಜೆಯೆಂದು ಮಾಡಿಯೂ
ಸಿದ್ಧಿಪಡೆಯಬಲ್ಲೆ.
ಕೆಲವರಿಗೆ ಎಷ್ಟೇ ಅಭ್ಯಾಸ ಮಾಡಿದರೂ ಏಕಭಕ್ತಿ ಸಾಧ್ಯವಾಗುವುದಿಲ್ಲ. ಅಧ್ಯಾತ್ಮ ಮಾರ್ಗದ ಸಾಧನೆಯಲ್ಲಿ
ಮನಸ್ಸಿಗೆ ಒಂದು ಜನ್ಮದ ಅಭ್ಯಾಸ ಸಾಕಾಗುವುದಿಲ್ಲ. ಕೆಲವೊಮ್ಮೆ ಇಡೀ ಜನ್ಮ ಅಭ್ಯಾಸ ಮಾಡಿದರೂ
ಏಕಾಗ್ರತೆ ಬಾರದೇ ಇರಬಹುದು. ಇಂತವರಿಗೆ ಕರುಣಾಳು ಕೃಷ್ಣ ಹೇಳುತ್ತಾನೆ: “ನೀನು ಮಾಡುವ ಕರ್ಮವನ್ನು
ಸ್ವಾರ್ಥಕ್ಕಾಗಿ ಮಾಡದೆ, ಭಗವಂತನ ಪೂಜೆ ಅನ್ನುವ ಅನುಸಂಧಾನದಿಂದ ಮಾಡು” ಎಂದು. ತನ್ನ ದೈನಂದಿನ
ಪ್ರತೀ ಕರ್ಮವನ್ನು ಅರ್ಪಣಾಭಾವದಿಂದ ಭಗವಂತನ ಪೂಜೆ ಎಂದು ಮಾಡಿ, ಅಧ್ಯಾತ್ಮ ಮಾರ್ಗದಲ್ಲಿ ಸಿದ್ಧಿ
ಪಡೆಯಬಹುದು.
Bibek Debroy (1955–2024)The Bhagavad Gita
(10)
‘If you don’t succeed in the practice, then do only my deeds.12 Even if you
do acts for my pleasure, you attain liberation.’