13.2

श्रीभगवानुवाच ।
इदं शरीरं कौन्तेय क्षेत्रमित्यभिधीयते ।
एतद्यो वेत्ति तं प्राहुः क्षेत्रज्ञ इति तद्विदः ॥
śrībhagavānuvāca |
idaṃ śarīraṃ kaunteya kṣetramityabhidhīyate |
etadyo vetti taṃ prāhuḥ kṣetrajña iti tadvidaḥ ||
Sri Madhvacharya (1238–1317)Bhagavad Gita Tatparya Nirnaya
13.2–13.19
मद्भावाय - मयि भावाय॥01-18॥
Swami Sivananda (1887–1963)Bhagavad Gita
2. This body, O Arjuna, is called the Field; he who knows it is called the Knower of the Field by those who know of them, that is, by the sages.
Sri Vishwesha Tirtharu (1931–2019)Gitasaroddhara
13.2–13.7 · ಕ್ಷೇತ್ರಜ್ಞನು ಯಾರು
`ಕ್ಷೇತ್ರಜ್ಞನು ಯಾರು? ಇನ್ನು ಮುಂದೆ ಗೀತೆಯಲ್ಲಿ ಕ್ಷೇತ್ರ-ಕ್ಷೇತ್ರಜ್ಞರನಿರೂವಣೆಯಿದೆ. ಈ ಪ್ರಕೃತಿ- ಪ್ರಾಕೃತರೂಪವಾದ ಸಮಗ್ರ ಬ್ರಹ್ಮಾಂಡವೇ ಕ್ಷೇತ್ರವಾಗಿದೆ. ಭಗವಂತನಿಂದ ಅಧಿಷ್ಠಿತವಾದ ಸ್ಥಾನವನ್ನೇ ಲೋಕದಲ್ಲಿ ಕ್ಷೇತ್ರವೆಂದು ಕರೆಯಲಾಗುವುದು. ಇಡೀ ಬ್ರಹ್ಮಾಂಡವನ್ನೇ ಭಗವಂತನು ವ್ಯಾಪಿಸಿ ನೆಲೆಸಿರುವುದರಿಂದ ಅದೆಲ್ಲವೂ ಕ್ಷೇತ್ರವಾಗಿದೆ. ಈ ವಿಶ್ವವು ಪರಮಾತ್ಮನಿಗೆ ಶರೀರದಂತಿದೆ. ಭಗವಂತನು ಜಗತ್ತಿಗೆ ಆತ್ಮದಂತಿದ್ದಾನೆ. ಶರೀರದ ಪ್ರತಿಯೊಂದು ಕ್ರಿಯೆಗೂ ಆತ್ಮದ ಅಧಿಷ್ಠಾನವು ಅವಶ್ಯವಿರುವಂತೆ ಪರಮಾತ್ಮನ ಅನುಪ್ರವೇಶದಿಂದಲೇ ವಿಶ್ವದ ಎಲ್ಲ ಪ್ರವೃತ್ತಿ ವ್ಯವಹಾರಗಳು ನಡೆದಿವೆ. ಭಗವಂತನು ವಿಶ್ವಾತ್ಮನನಿಸಿದ್ದರೆ ವಿಶ್ವವು ಭಗವಂತನ ಶರೀರವೆನಿಸಿದೆ. ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ । ಕ್ಷೇತ್ರಜ್ಞಂ ಚಾಪಿ ಮಾಂ ವಿದ್ದಿ। ಪರಬ್ರಹ್ಮನ ಶರೀರದಂತಿರುವ ವಿಶ್ವವೇ ಕ್ಷೇತ್ರವು. ಇದನ್ನು ಸರ್ವಾಂಶ ಗಳಿಂದಲೂ ತಿಳಿದಿರುವ ಸರ್ವಜ್ಞನಾದ ಪರಮಾತ್ಮನೇ ಕ್ಷೇತ್ರಜ್ಞನೆಂದೂ ಆ ಭಗವಂತನಸ್ವರೂಪವೇತಾನೆಂದೂ ಶ್ರೀಕೃಷ್ಣನು ಹೇಳಿರುವನು. ನಮ್ಮ ದೇಹವೇಕ್ಷೇತ್ರವೆಂದೂ ಇದರ ಅಭಿಮಾನಿಯಾದ ಜೀವನುಕ್ಷೇತ್ರಜ್ಞ ನಾಗಿದ್ದು ಅವನಿಗೂ ವರಬ್ರಹ್ಮನಿಗೂ ಅಭೇದವನ್ನು ಇಲ್ಲಿ ಹೇಳಲಾಗುತ್ತದೆ ಎಂದೂ ಕೆಲವರ ನಿರೂಪಣೆಇದೆ. ಗೀತೆಯಲ್ಲಿಯೇಮಾಡಿರುವಕ್ಷೇತ್ರಶಬ್ದದ ಅರ್ಥವ್ಯಾಪ್ತಿಯನ್ನು ವರಿಶೀಲಿಸಿದಲ್ಲಿ ನಮ್ಮ ದೇಹೇಂದ್ರಿಯಗಳನ್ನು ಮಾತ್ರ ಅರ್ಡವಾಪಿಯನು ವರಿಶೀಲಿಸಿದಲಿ ನಮ ದೇಹೇಂದಿಯಗಳನು ಮಾ ಇಲ್ಲಿಪರಿಗೃಹಿಸಲು ಶಕ್ಕವಾಗಲಾರದು. ಮಹಾಭೂತಾನೃಹಂಕಾರೋ ಬುದ್ದಿರವೃಕ್ತಮೇವ ಚ| ಏತತ್‌ ಕ್ಷೇತ್ರಂ ಸಮಾಸೇನ ಸವಿಕಾರಮುದಾಹೃತಮ್‌ । ಪ್ರಕೃತಿ, ಅಹಂಕಾರತತ್ತ್ವ ಪಂಚಭೂತಗಳು ಮುಂತಾದ ಪ್ರಕೃತಿ ವಿಕಾರಾತ್ಮಕವಾದ ಈ ಚರಾಚರ ವಿಶ್ವವೆಲ್ಲವೂ ಕ್ಷೇತ್ರವೆಂಬ ವಿಸ್ತತ ಅರ್ಥದಲ್ಲಿ ಕ್ಷೇತ್ರಶಬ್ದದ ವ್ಯಾಖ್ಯೆಯನ್ನು ಇಲ್ಲಿ ಮಾಡಲಾಗಿದೆ. ಜಗದಂತರ್ಯಾಮಿಯಾಗಿ ಬ್ರಹ್ಮಾ ಡದ ಒಳಹೊರಗನ್ನೆ ಲ್ಲ. ಅರಿತಿರುವ ಪರಮಾತ್ಮ ನೇಕ್ಷೇತ್ರಜ್ಞನೆಂದೂ ತನ್ನ ಶರೀರವನ್ನೇ ಸಮಗ್ರವಾಗಿ ಅರಿಯದ ಈ ಬಡಪಾಯಿ ಜೀವನು ಕೇತ್ರಜ್ಞನಲ್ಲವೆಂದೂ ಇದರಿಂದಸುಸ್ಪಷ್ಟವಾಗುತದೆ. ಭಾಗವತದಲ್ಲಿಯೂ ದ್ರ ದರಾ ದ್‌್‌ ಆಸೆಗೆ ಆ ಟ್‌ ಓಟ್‌ ಬ 0 ನ” ರ ಟದ ಕೇತಜ ಆತಾ ಪರುಪಃ ಪರಾಣಃ ಕ್ಷೇತ್ರಜ್ಞ ಆತ್ಮಾ ಪುರುಷಃ ಪುರಾಣಃ ಸಾಕ್ಷಾತ್‌ ಸ್ವಯಂಜ್ಯೋತಿರಜಃ ಪರೇಶಃ | ನಾರಾಯಣೋ ಭಗವಾನ್‌ ವಾಸುದೇವಃ ಸ್ವಮಾಯಯಾಜತತ್ಮನ್ಯವಧೀಯಮಾನಃ ॥ ಜೀವನಿಂದ ಪ್ರತ್ಯೇಕವಾದ ಸರ್ವಜ್ಞನಾದ ಶ್ರೀನಾರಾಯಣನೇ ಕ್ಷೇತ್ರಜ್ಞ ನೆಂದು ನಿಸಂದಿಗ್ನವಾಣಿಯಲ್ಲಿ ಹೇಳಿದೆ.
Bannanje Govindacharya (1936–2020)Bhagavad Gita Pravachana
ಭಗವಾನ್‌ ಉವಾಚ-ಭಗವಂತ ಹೇಳಿದನು: ಇದಮ್‌ ಶರೀರಮ್‌ ಕೌಂತೇಯ ಕ್ಷೇತ್ರಮ್‌ ಇತಿ ಅಭಿಧೀಯತೇ | ಏತತ್‌ ಯಃ ವೇತ್ತಿ ತಮ್‌ ಪ್ರಾಹುಃ ಕ್ಷೇತ್ರಜ್ಞಃ ಇತಿ ತತ್‌ ವಿದಃ -ಭಗವಂತನ ಶರೀರದಂತಿರುವ ಈ ಚರಾಚರ ವಿಶ್ವ "ಕ್ಷೇತ್ರ' ಎನಿಸಿದೆ. ಇದನ್ನು ಅರಿತವನನ್ನು ಬಲ್ಲವರು *ಕ್ಷೇತ್ರಜ್ಞ' ಎನ್ನುತ್ತಾರೆ. Fed) ಅನ್ನುವ ಪದಕ್ಕೆ ಒಂದು ನಿಶ್ಚಿತ ಅರ್ಥವಿಲ್ಲ. ಈ ಶ್ಲೋಕದಲ್ಲಿ ಕ್ಷೇತ್ರಂ ಅನ್ನುವ ಪದವನ್ನು ಯಾವ ರೀತಿ ಅರ್ಥಮಾಡಿಕೊಳ್ಳಬೇಕು ಎನ್ನುವ ಸುಳಿವನ್ನು ಕೃಷ್ಣ ಕೊಟ್ಟಿದ್ದಾನೆ. ಕ್ಷೇತ್ರ ಎಂದರೆ "ಇದಂ ಶರೀರಂ' ಎಂದಿದ್ದಾನೆ ಕೃಷ್ಣ. ಆದ್ದರಿಂದ ಇಲ್ಲಿ ಕ್ಷೇತ್ರ ಎಂದರೆ ಜೀವ ವಾಸಮಾಡುವ ನೆಲೆಮನೆ, ಪಿಂಡಾಂಡದಿಂದ- ಬ್ರಹ್ಮಾಂಡದ ತನಕ ಎಲ್ಲವೂ ಹೌದು. ಈ ಬ್ರಹ್ಮಾಂಡಕ್ಕೆ 'ಕ್ಷೇತ್ರ ಮತ್ತು ಶರೀರ' ಅನ್ನು ವುದು OPED) (epithet). ಇಂತಹ ಕ್ಷೇತ್ರವನ್ನು ಯಾರು ಸಮಗ್ರವಾಗಿ ತಿಳಿದಿದ್ದಾನೋ ಅವನು ಕ್ಷೇತ್ರಜ್ಞ. ಯಾರೀತ? ಮುಂದಿನ ಶ್ಲೋಕದಲ್ಲಿ
Bibek Debroy (1955–2024)The Bhagavad Gita
(1) Bhagavan1 said: ‘O son of Kunti!2 This body is known as the kshetra.’3 He who knows this is called the kshetrajna by those who have the knowledge.’4