13.21

कार्यकारणकर्तृत्वे हेतुः प्रकृतिरुच्यते ।
पुरुषः सुखदुःखानां भोक्तृत्वे हेतुरुच्यते ॥
kāryakāraṇakartṛtve hetuḥ prakṛtirucyate |
puruṣaḥ sukhaduḥkhānāṃ bhoktṛtve heturucyate ||
Sri Madhvacharya (1238–1317)Bhagavad Gita Tatparya Nirnaya
‘स्वदेहेन्द्रियहेतुत्वं यज्जीवस्य स्वकर्मभिः। आवृत्य विष्णुतत्त्वं तद्धेतुश्चित्प्रकृतिर्मता। जीवस्य सुखदुःखानां भोगशक्तिप्रदः सदा। परमः पुरुषो विष्णुः सर्वकर्ताऽपि सन् सदा। विशेषकर्ता केषांचिदुक्तो यद्वद् विकुण्ठपः। उच्यते सर्वपालोऽपि विशेषेण स्वकर्मणा’ इति च। परमेश्वरस्यैव सर्वकर्तृत्वेऽपि भोक्तृत्वदाने देव्या अल्पप्रवृत्तिरिति दर्शयितुं ‘उच्यते’ इति स्थानद्वयेऽप्युक्तम्। कर्तृत्वेऽपि स एव मुख्यहेतुः। तथाऽपि भूक्तृत्वापेक्षया तस्या अधिकप्रवृत्तिरिति ‘कर्तृत्वे हेतुः प्रकृतिरुच्यते’ इति सर्वहेतुत्वेऽपि विष्णोः प्रकृतेर्जीवं प्रति भोक्तृत्वदानेऽल्पप्रवृत्तिरिति ‘पुरुषो भोक्तृत्वे हेतुरुच्यते’ इति विशेषहेतोरेवमुच्यते। एवं मुख्यतस्तु सर्वहेतुत्वं विष्णोरेवेति भावः ॥ 20 ॥
Swami Sivananda (1887–1963)Bhagavad Gita
21. In the production of the effect and the cause, Nature (matter) is said to be the cause; in the experience of pleasure and pain, the soul is said to be the cause.
Sri Vishwesha Tirtharu (1931–2019)Gitasaroddhara
13.21–13.23 · ಅನಾದಿತತ್ತ್ವಗಳ ವಿವೇಚನೆ
ಅನಾದಿ ತತ್ತ ಳೆ ವಿವೇಚನೆ ಪ್ರಪಂಚದ | ಬಗ್ಗೆ ವಿಶದವಾದ ನಿರ್ಣೀತವಾದ ಜ್ಞಾನವುಂಟಾಗಲು ಅನುಕೂಲವಾಗುವಂತೆ ಪ್ರಪಂಚವನ್ನು ವಿಭಜಿಸಿ ಪೃಥಕ್ಕರಿಸಿ ಶ್ರೀಕೃಷ್ಣನು ನಿರೂಪಿಸುತ್ತಾನೆ. ಜಗತ್ತಿನಲ್ಲಿ ಪ್ರಕೃತಿ ಮತ್ತು ಜೀವರೆಂದು ಅನಾದಿಯಾದ ಎರಡು ತತ್ತ್ವಗಳಿವೆ. ಜಡತತ್ತ್ವವಾದ ಪ್ರಕೃತಿಯು ಅನಾದಿಯಾಗಿದ್ದರೂ ಅದು ವಿಕಾರಶೀಲವಾಗಿದೆ. ಅದರ ಪರಿಣತಿಯೇ ಈ ಸ್ಥೂಲವಾದ ಜಡಪ್ರಪಂಚ ವಾಗಿದೆ. ಈ ವಿಕಾರವರಿಣಾಮಗಳಿಗೆ ಪ್ರಕೃತಿಯು ಆಧಾರವಾಗಿದ್ದರೆ, ಪ್ರಾಕೃತಿಕ ಪದಾರ್ಥಗಳಿಂದ ಜನಿಸುವ ಸುಖದುಃಖಗಳ ಭೋಕ್ತಾರನೇ ಜೀವನಾಗಿರು ವನು. ಕಾರ್ಯಕಾರಣಕತೃ ತೇ ಹೇತುಃ ಪ್ರಕೃತಿರುಚ್ಛತೇ [ ಪುರುಷಃ ಸುಖದುಃಖಾನಾಂ ಭೋಕ್ಷಃ ತೇ ಹೇತುರುಚ್ಛತೇ 1 ಇವೆರಡನ್ನೂ ಮೀರಿನಿಂತಿರುವ ಇನ್ನೊಬ್ಬಮಹಾಚೇತನನು ಈ ಜಗತ್ತಿನಲ್ಲಿ ನೆಲೆಸಿದ್ದಾನೆ. ಅವನೇ ಪರಮಾತ್ಮನು. ಅವನಲ್ಲಿ ಪ್ರಕೃತಿಯಲ್ಲಿರುವಂತೆ ವಿಕಾರ ಮಾರ್ಪಾಡುಗಳಾಗಲಿ ಜೀವರಲ್ಲಿ ಇರುವಂತೆ ವಿಕಾಸ ಸಂಕೋಚಗಳಾಗಲಿ ಇರುವುದಿಲ್ಲ. ನಿರ್ವಿಕಾರನೂ ನಿತ್ಯಾನಂದನೂ ಆದ ವರಮಪುರುವನು ಜೀವಪ್ರಕ್ಕತಿಗಳಿಗಿಂತ ಭಿನ್ನನಾಗಿ ಈ ದೇಹದಲ್ಲಿಯೂ ಬ್ರಹ್ಮಾಂಡದಲ್ಲಿಯೂ ಇರುವನು. ಪರಮಾತ್ಮೇತಿ ಚಾಪ್ರ್ಯಕ್ತೋ ದೇಹೇಜಸ್ಥಿನ್‌ ಪುರುಷಃ ಪರಃ | “ಹಿಂದೆನಿರೂಪಿಸಿದ ಪ್ರಕೃತಿಜೀವರಿಗಿಂತ ಬೇರೆಯಾದ ಪುರುಷನು ಸರ್ವ ಕ್ರಿಯಾಪ್ರವರ್ತಕನಾಗಿ ಈ ದೇಹದಲ್ಲಿದ್ದಾನೆ. ಅವನೇ ವರಮಾತ್ಮನೆನಸಿದ್ದಾನೆ.'' ಇವನು ಸರ್ವವ್ಯಾಪಿಯಾದ ಆಕಾಶದಂತೆ ಅರಿಪ್ರನಾಗಿರುವನು. ಭೂಮಂಡಲ ವೆಲ್ಲಸೂರ್ಯನಿಂದ ಪ್ರಕಾಶಿತವಾಗುವಂತೆ ಪ್ರಕೃತಷ್ರಾಕೃತಾತ್ಮಕವಾದ ಪ್ರವಂಚನೆಲ್ಲ ಇವನಶಕ್ತಿಯಿಂದಲೇನವುಗೆಕಾಣುತ್ತದೆ. ಹೀಗೆ ಜಡ-ಜೀವ-ಪರಮಾತ್ಮಎಂಬ ಮೂರು ಅನಾದಿತತ್ತ್ವಗಳಿಂದ ಜಗತ್ತುವಿಭಕ್ತವಾಗಿರುವುದು ಸುಸ್ಪಷ್ಟವಿದೆ. ಈ ಮೂರು ಅನಾದಿ ವಸ್ತುಗಳನ್ನು ಆಧರಿಸಿಯೇ ಶ್ರೀಮಧ್ವಾಚಾರ್ಯರು ಪಂಚಭೇದಗಳನ್ನು ನಿರೂಪಿಸಿದ್ದಾರೆ. ಪ್ರಪಂಚದ ಈ ತಾತ್ತ್ವಿಕ ವಿವೇಚನೆಯು ಏಕೆ ಬೇಕೆಂದು ಕೆಲವರು ಆಕ್ಷೇಪಿಸುವರು. ಪ್ರಪಂಚದಲ್ಲಿ ತತ್ತ್ವಗಳೆಷ್ಟಿವೆ? ಇದು ತತ್ತ್ವವೆ? ಅತತ್ತ್ವವೆ? ಎಂದು ಮುಂತಾದ ಸೂಕ್ಷ್ಮವಿವೇಚನೆಯಿಂದ ಪ್ರತ್ಯಕ್ಷ ಜೀವನಕ್ಕೆ ಏನೂ ಲಾಭವಿಲ್ಲ. ಸಮುದ್ರತೀರದಲ್ಲಿ ಉರಿಬಿಸಿಲಿನಲ್ಲಿ ಕುಳಿತು ಅದರ ಮಳಲನ್ನು ಎಣಿಸಿದಂತೆ ಈ ಲೌಕಿಕ ಚರ್ಚೆಯು ಬರೇ ನಿರರ್ಥಕ ಪ್ರಯಾಸವೇ ಆಗಿದೆ. ಸುಖಶಾ ಂತಿಮಯಜೀವನಕ್ಕೆ ಆವಶ್ಯಕಗಳಾ ದ ನೀತಿ, ಸದ್ದು ಣ ಗಳನ್ನು ಮಾತ್ರ ಈ ಜಗತ್ತಿಗೆ ಉಪದೇಶಿಸಿದರೆ ಸಾಕು. ಈ ಒಣ ಚರ್ಚೆಯಿಂದ ದೂರ ಉಳಿದಷ್ಟು ಜಗತ್ತಿಗೆ ಕ್ಲೇಮ ಎಂದು ಭಾವಿಸುವವರು ಬಹಳ ಮಂದಿ ಇದ್ದಾರೆ. ಈ ಬಗ್ಗೆ ಗೌತಮಬುದ್ಧನು ಹೇಳಿದ ಕತೆಯನ್ನು ಉದಾಹರಿಸಲಾಗುತ್ತದೆ. ಸಾಂಸಾರಿಕ ಕ್ಲೇಶಗಳಿಂದ ಬಳಲಿ ಧರ್ಮೋಪದೇಶವನ್ನು ಪಡೆಯಲು ಗೌತಮಬುದ್ಧನ ಬಳಿಗೆ ಬಂದ ಶಿಷ್ಯನೊಬ್ಬನು ಜೀವ-ಜಗತ್ತುಗಳಿಗೆ ಸಂಬಂಧಿಸಿದ ಕೆಲವುತಾತ್ತ್ವಿಕ ಪ್ರಶ್ನೆಗಳನ್ನು ಮುಂದಿಟ್ಟು ಅದರ ಉತ್ತರವನ್ನು ಕೊಡಲೇಬೇಕೆಂದು ಗೌತಮ ಬುದ್ಧನಲ್ಲಿ ಹಠ ಹಿಡಿಯುವನು. ಆಗ ಗೌತಮಬುದ್ಧನು ಹೇಳುವ ಉದಾಹರಣೆ ಇದು: ವಿಷಲಿಪ್ತವಾದ ಬಾಣವು ಚುಚ್ಚಿ ಅದರ ತೀವ್ರವೇದನೆಯನ್ನು ಸಹಿಸಲಾರದೆ ಒಬ್ಬ ವ್ಯಕ್ತಿಯು ವೈದ್ಯನ ಬಳಿಗೆ ಬರುವನು. ವೈದ್ಯನು ನೀಡುವ ಔಷಧವನ್ನು ಸ್ವೀಕರಿಸುವ ಬದಲು ಅವನು ಕರಾರು ಹಾಕುತ್ತಾನೆ- ಆ ಬಾಣದ ರೂಪವೇನು, ಬಣ್ಣವೇನು? ಬಾಣವನ್ನು ಯಾವುದರಿಂದ ನಿರ್ಮಿಸಲಾಗಿದೆ? ಔಷಧವನ್ನು ಸ್ವೀಕರಿಸುವ ಮುಂಚೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲೇಬೇಕು ಎಂದು. ತಾತ್ತ್ವಿಕ ವಿವೇಚನೆಗಳು ಇದರಂತೆಯೇ ನಿತ್ಯಜೀವನದ ಕ್ಲೇಶಪರಿಹಾರಕ್ಕೆ ಅನವಶ್ಯಕವಾಗಿದ್ದು, ವೈದ್ಯನಲ್ಲಿ ರೋಗಿಯು ಕೇಳುವ ತಲೆಹರಟೆಯ ಪ್ರಶ್ನೆಯಂತೆ ತತ್ತ್ವವಿವೇಚನೆಯು ವೃಥಾ ಕಾಲಹರಣವೆಂದು ಗೌತಮಬುದ್ಧನ ಆಶಯವಾಗಿದೆ. ಈಗಲೂ ಇದನ್ನು ಅನುಮೋದಿಸುವವರು ಬಹಳ ಜನರಿರುವರು. ಆದರೆ ಇವರೆಲ್ಲರೂ ಇತರ ಆರ್ಥಿಕ ರಾಜಕೀಯ ವಿಷಯಗಳಲ್ಲಿ ಸೂಕ್ಷ್ಮ ವಿವೇಚನೆಯ ಆವಶ್ಯಕತೆಯನ್ನು ಒಪ್ಪತ್ತಾರೆ. ಸಮಸ್ಯೆಯ ಮೂಲಭೂತ ಅಂಶಗಳನ್ನು ತಿಳಿಯದೆ ಮಾಡಿಕೊಳ್ಳುವ ಪರಿಹಾರಕಾ ರ್ಯವು ವಿಪರೀತ ಸ್ಥಿತಿಗೆ ಕಾರಣವಾಗುತ್ತದೆಂಬುದನ್ನು ಎಲ್ಲರೂ ಅಂಗೀಕರಿಸುತ್ತಾರೆ. ದೇಸರಚನೆಯ ಸ್ಥಿತಿಯನ್ನು ಸರಿಯಾಗಿ ತಿಳಿಯದ, ಔಷಧದ ಗುಣಧರ್ಮಗಳನ್ನು ಅರಿಯದ ವೈದ್ಯರಿಂದ ಚಿಕಿತ್ಸೆಯನ್ನು ಯಾರೂ ಪಡೆದುಕೊಳ್ಳರು. ಚಿಕ್ಕ ಪುಟ್ಟ ವ್ಯವಹಾರ ಕೈಗೊಳ್ಳುವಾಗಲೂ ಅದರ ಪೂರ್ವಾಪರಗಳನ್ನು ಅರಿಯಲು ಆತುರರಾಗಿರುವ ನಾವು, ನಮ್ಮ ಇರವಿನ ನಿಜಸ್ಥಿತಿಯನ್ನು ತಿಳಿದುಕೊಳ್ಳುವುದೂ ಅನವಶ್ಯಕವಾದ ಸಂಗತಿಷನಿಸುವುದೆ? ನಮ್ಮ ಜೀವನದ ಹಿನ್ನೆಲೆಯನ್ನೂ ಜಗತ್ತಿನ ಮೂಲಭೂತ ತತ್ತ್ವವನ್ನೂ ಅರಿತುಕೊಳ್ಳುವುದರಿಂದ ನಮ್ಮ ಜೀವನವನ್ನು ಹೇಗೆ ರೂಪಿಸ ಬೇಕೆನ್ನುವುದರ ತಿಳುವಳಿಕೆಯು ನಮಗೆ ಮೂಡುವದು. ನಮ್ಮ ಸಾಂಸಾರಿಕ ವೇದನೆಯ ಮೂಲವೆಲ್ಲಿದೆ ಎಂಬುದರ ಅರ್ಥವೂನಮಗಾಗುವುದು. ದೇವರ ಅಸ್ತಿತ್ವವನ್ನು ಮನಗಂಡು, ಅದರ ಆಧಾರದಲ್ಲಿ ರೂಪುಗೊಳಿಸುವ ಬಾಳುವೆಗೂ ಪರಮಾತ್ಮನಲ್ಲಿ ವಿಶ್ವಾಸವಿಲ್ಲದ ಭೌತಿಕಪ್ರಧಾನತೆಯ ಜೀವನಕ್ಕೂ ಮಹದಂತರ ವಿರಲು ಸಾಧ್ಯವಿದೆ. ನಮ್ಮ ಜೀವನದ ರೀತಿ, ಧೋರಣೆಗಳ ದಿಶೆಗಳನ್ನೇ ಬದಲಿನಬಲ್ಲ, ನಮ್ಮ ನಡತೆಗಳಿಗೆ ಹೊಸ ಹೊನ ಮೌಲ್ಯಗಳನ್ನು ಕಲ್ಪಿಸುವಂತಹ ತಾತ್ತ್ವಿಕ ವಿವೇಜನೆಗಳನ್ನು ಅಷ್ಟು ಲಘುವಾದ ದೃಷ್ಟಿಯಲ್ಲಿ ಹೀಕೈಸುವುದು ಸರಿಯಲ್ಲ. ನಮ್ಮ ಬಾಳುವೆಯನ್ನು ರೂಪಿಸುವ ಮೊದಲು, ಅದರ ಹಿನ್ನೆಲೆಯೆನಿಸಿದ ಎಲ್ಲ ಸಂಗತಿಗಳನ್ನೂ ಸರಿಯಾಗಿ ವಿಮರ್ಶಿಸಿ, ನಿರ್ಧರಿಸಿ ಒಂದು ನಿರ್ದಿಷ್ಟ ಧೋರಣೆಯನ್ನು ಸ್ವೀಕರಿಸಲು ವೂರ್ಣ ಅವಕಾಶವೂ ಸ್ವಾತಂತ್ರ್ಯವೂ ಮಾನವನಿಗೆ ದೊರೆಯಲೇಬೇಕು. ಆದುದರಿಂದಲೇ ಸ್ವತಂತ್ರ ದೃಷ್ಟಿಯ ತಾತ್ತ್ವಿಕ ವಿಮರ್ಶೆಯ ವಿವಿಧ ಪದ್ಧತಿ, ಪರಂಪರೆಗಳು ಭಾರತದಲ್ಲಿ ಉದಯವಾಗಲು ಅವಕಾಶ ದೊರೆತಿದೆ. ಈ ದೃಷ್ಟಿಯಿಂದಲೇ ಶ್ರೀಕೃಷ್ಣನು ಜಡ, ಜೀವ, ಪರಮಾತ್ಮರ ನೈಜ ಸ್ವರೂಪವನ್ನೂ ಅವುಗಳಲ್ಲಿರುವ ಪ್ರತ್ಯೇಕತೆ ಹಾಗೂ ಪರಸ್ಪರ ಸಂಬಂಧವನ್ನೂ ತನ್ನ ಸರ್ವಗ್ರಾಹಿ ದೃಷ್ಟಿಯಿಂದ ವಿಶದೀಕರಿಸಿದ್ದಾನೆ.
Bannanje Govindacharya (1936–2020)Bhagavad Gita Pravachana
ಕಾರ್ಯ ಕಾರಣ ಕರ್ತೃ್ಯತ್ವೇ ಹೇತುಃ ಪ್ರಕೃತಿಃ ಉಚ್ಯತೇ | ಪುರುಷಃ ಸುಖಃ ದುಃಖಾನಾಂ ಭೋಕ್ರತ್ವೇ ಹೇತುಃ ಉಚ್ಯತೇ -ದೇಹ ಮತ್ತು ಇಂದ್ರಿಯಗಳ ನಿರ್ಮಾಣದಲ್ಲಿ ಜಡಪ್ರಕೃತಿ[ಚೇತನಪ್ರಕೃತಿಯಾದ ಶ್ರೀ BF] ಕಾರಣವೆನಿಸಿದೆ. ಸುಖ-ದುಃಖಗಳ ಅನುಭವದಲ್ಲಿ ಜೀವ[ಪರಮಾತ್ಮ) ಕಾರಣಭೂತನಾಗಿದ್ದಾನೆ. ಈ ಶ್ಲೋಕದಲ್ಲಿ ಎರಡು ವಿಚಾರವನ್ನು ಕೃಷ್ಣ ಬಿಡಿಸಿ ತೋರಿದ್ದಾನೆ. ನಮಗೆ ಒಂದು ದೇಹವಿದೆ. ದೇಹದಲ್ಲಿ ಸುಖ- ದುಃಖ ಭೋಗವನ್ನು ಅನುಭವಿಸಲು ಐದು ಇಂದ್ರಿಯಗಳಿವೆ. ಹೀಗೆ ಶರೀರ, ಶರೀರದಲ್ಲಿ ಇಂದ್ರಿಯಗಳು- ಇಂದ್ರಿಯಗಳ ಮೂಲಕ ಸುಖ-ದುಃಖ ಭೋಗ-ಇದು ಜೀವನ. ಜೀವನಿಗೆ ಅವನು ಹಿಂದೆ ಮಾಡಿದ ಕರ್ಮಕ್ಕನುಗುಣವಾಗಿ ಕಾರ್ಯ ಕಾರಣಗಳ ಕರ್ತ್ಯತ್ವ. ಅಂದರೆ ನಮ್ಮ ಕರ್ಮಕ್ಕನುಗುಣವಾಗಿ ಭಗವಂತ ಈ ಜನ್ಮದಲ್ಲಿ ಒಂದು ರೂಪವನ್ನು ಕೊಟ್ಟ. ಈ ನಮ್ಮ ದೇಹ ರೂಪುಗೊಳ್ಳಲು ಅಧಿಷ್ಠಾನಕಾರಣ ನಮ್ಮ ತಂದೆ ತಾಯಿ. ನಮ್ಮ ದೇಹ ಜಡಪ್ರಕೃತಿಯಿಂದಾಗಿದೆ. ತಾಯಿಯ ಹೊಟ್ಟೆಯಲ್ಲಿ ನಮಗೆ ಈ ರೂಪವನ್ನು ಕೊಟ್ಟವಳು ಜಗನ್ಮಾತೆ ಶ್ರೀಲಕ್ಷ್ಮಿ. ಭಗವಂತನಿಗೆ ಅಂಗವಾಗಿ ಲಕ್ಷ್ಮಿ ದೇಹ ರಚನೆ ಮಾಡುತ್ತಾಳೆ. ಈ ರೀತಿ ದೇಹದ ಅಂಗಾಂಗ ಮತ್ತು ಇಂದ್ರಿಯಗಳನ್ನು ಪಡೆದ ಜೀವ, ಅದರಿಂದ ಸುಖ-ದುಃಖದ ಭೋಗವನ್ನು ಅನುಭವಿಸುತ್ತದೆ. ಪರಮಪುರುಷ ಭಗವಂತ ಜೀವನಿಗೆ ಸುಖ-ದುಃಖದ ಅನುಭವವನ್ನು ಕೊಡುತ್ತಾನೆ. ಹೀಗಾಗಿ ದೇಹರಚನೆಯಲ್ಲಿ ಚೇತನ ಮತ್ತು ಜಡ ಪ್ರಕೃತಿ ಒಳಗೊಂಡರೆ, ಭಗವಂತ ಜೀವನಿಗೆ ಭೋಕೃತ್ವದ ಅನುಭವವನ್ನು ಸ್ವಯಂ ಅಂತರ್ಯಾಮಿಯಾಗಿ ನಿಂತು ನೀಡುತ್ತಾನೆ.
Bibek Debroy (1955–2024)The Bhagavad Gita
(20) ‘Prakriti is said to be the reason behind cause and effect.32 Purusha said to be33 for happiness and unhappiness in enjoyment.’