पुरुषः प्रकृतिस्थो हि भुङ्क्ते प्रकृतिजान्गुणान् ।
कारणं गुणसङ्गोऽस्य सदसद्योनिजन्मसु ॥
puruṣaḥ prakṛtistho hi bhuṅkte prakṛtijānguṇān |
kāraṇaṃ guṇasaṅgo'sya sadasadyonijanmasu ||
Sri Madhvacharya (1238–1317)Bhagavad Gita Tatparya Nirnaya
‘पुरुषः प्रकृतिस्थः’ इत्यत्र पुरुषशब्दो जीवे। उभयोरपि पुरुषशब्देन पूर्वं प्रस्तुतत्वात्।
यथायोग्यमुपपत्तेः।
कार्यकारणसम्बन्धं भोगं च मिथ्येति वदतां निवारणायाह। ‘पुरुषः प्रकृतिस्थो हि’ इत्यनुभवविरोधं
दर्शयति तेषाम्।
न हि ज्ञानाज्ञानसुखदुःखादिविषयस्यान्तरानुभवस्य भ्रान्तित्वं क्वचिद् दृष्टम्। न चास्य मिथ्यात्वे
किञ्चिन्मानम्। शरीरमारभ्यैव ह्यपरोक्षभ्रमो दृष्टः। तत्रापि बलवत्प्रमाणविरोधादेव भ्रान्तित्वं
कल्प्यम्। साक्षिसिद्धस्यापि भ्रान्तित्वाङ्गीकारे येन सर्वस्य भ्रान्तित्वमभ्रान्तित्वं चात्मनोऽवगतं तदपि
प्रमाणमात्मैव। व्यवहारतोऽप्यस्तीत्यत्र प्रमाणाभावाद् भ्रान्तिरभ्रान्तिर्वा न किञ्चित् सिद्ध्यति।
अनुभवो भ्रान्त इत्युक्ते भ्रान्तित्वे प्रमाणं तत्प्रामाण्यं च कुतः सिद्ध्येत्? व्यवहारतः सर्वमङ्गीकुर्म
इत्युक्ते व्यवहारो व्यवहर्ता च कुतः सिद्धः? प्रतीति इत्युक्ते सैव कुतः? स्वत इत्युक्ते स्वस्याभ्रान्तित्वे
प्रतीतिं विनैव प्रतीतिरस्तीति भ्रान्तिः स्यात्। स्वभावोऽपि स्यात्। स्वयमस्तीति च भ्रमः स्यात्।
निरालम्बनो भ्रमो नोपपद्यत इत्यस्यापि भ्रमत्वोपपत्तेः। तत्प्रमाणमप्यप्रमाणमेव। प्रमाणत्वभ्रम इति
न सिद्धिमिति न किञ्चित् सिद्ध्यति। भ्रम इत्यस्यैव भ्रमत्वेऽन्यस्याभ्रमत्वमेव भवति।
सुखदुःखादिविषयं ज्ञानमात्मस्वरूपमेवेति तस्य भ्रमत्वे छद्मनाविनैव शून्यवादो भवति। नहि
वृत्तिज्ञानविषयमज्ञानाधिकं तेषामपि। भ्रमस्य चाविद्याकार्यत्वाङ्गीकारात्। आत्मस्वरूपस्याप्य-
विद्याकार्यत्वं स्यात्। दुर्घटित्वं भूषणमित्युक्ते दुर्घटित्वं सुघटित्वं चोभयं भूषणमस्माकमित्युत्तरम्।
नहि प्रमाणसिद्धस्य दुर्घटित्वे सुघटित्वे वाऽपवादो दृष्टः। दुर्घटित्वं भूषणमिति
वदद्भिरात्मनोऽप्यविद्यात्वमङ्गीकृत्य तदयुक्तमित्युक्ते तत्रापि भूषणत्वं किमिति नाङ्गीक्रीयते?
अतिसुकरत्वात्। न चात्मनोऽप्यविद्यात्वं वदतां तेषामुत्तरम्। अतोऽनन्तदोषदुष्टत्वाद्धीति प्रसिद्धैव
भगवता निराकृताः।
अस्य - जीवस्य सदसद्योनिजन्मसु कारणं सत्त्वादिगुणसङ्गः॥21॥
Swami Sivananda (1887–1963)Bhagavad Gita
22. The soul seated in Nature experiences the qualities born of Nature; attachment to the
qualities is the cause of his birth in good and evil wombs.
Sri Vishwesha Tirtharu (1931–2019)Gitasaroddhara
13.21–13.23 · ಅನಾದಿತತ್ತ್ವಗಳ ವಿವೇಚನೆ
ಅನಾದಿ ತತ್ತ ಳೆ ವಿವೇಚನೆ
ಪ್ರಪಂಚದ | ಬಗ್ಗೆ ವಿಶದವಾದ ನಿರ್ಣೀತವಾದ ಜ್ಞಾನವುಂಟಾಗಲು
ಅನುಕೂಲವಾಗುವಂತೆ ಪ್ರಪಂಚವನ್ನು ವಿಭಜಿಸಿ ಪೃಥಕ್ಕರಿಸಿ ಶ್ರೀಕೃಷ್ಣನು
ನಿರೂಪಿಸುತ್ತಾನೆ. ಜಗತ್ತಿನಲ್ಲಿ ಪ್ರಕೃತಿ ಮತ್ತು ಜೀವರೆಂದು ಅನಾದಿಯಾದ
ಎರಡು ತತ್ತ್ವಗಳಿವೆ. ಜಡತತ್ತ್ವವಾದ ಪ್ರಕೃತಿಯು ಅನಾದಿಯಾಗಿದ್ದರೂ ಅದು
ವಿಕಾರಶೀಲವಾಗಿದೆ. ಅದರ ಪರಿಣತಿಯೇ ಈ ಸ್ಥೂಲವಾದ ಜಡಪ್ರಪಂಚ
ವಾಗಿದೆ. ಈ ವಿಕಾರವರಿಣಾಮಗಳಿಗೆ ಪ್ರಕೃತಿಯು ಆಧಾರವಾಗಿದ್ದರೆ, ಪ್ರಾಕೃತಿಕ
ಪದಾರ್ಥಗಳಿಂದ ಜನಿಸುವ ಸುಖದುಃಖಗಳ ಭೋಕ್ತಾರನೇ ಜೀವನಾಗಿರು
ವನು.
ಕಾರ್ಯಕಾರಣಕತೃ ತೇ ಹೇತುಃ ಪ್ರಕೃತಿರುಚ್ಛತೇ [
ಪುರುಷಃ ಸುಖದುಃಖಾನಾಂ ಭೋಕ್ಷಃ ತೇ ಹೇತುರುಚ್ಛತೇ 1
ಇವೆರಡನ್ನೂ ಮೀರಿನಿಂತಿರುವ ಇನ್ನೊಬ್ಬಮಹಾಚೇತನನು ಈ ಜಗತ್ತಿನಲ್ಲಿ
ನೆಲೆಸಿದ್ದಾನೆ. ಅವನೇ ಪರಮಾತ್ಮನು. ಅವನಲ್ಲಿ ಪ್ರಕೃತಿಯಲ್ಲಿರುವಂತೆ ವಿಕಾರ
ಮಾರ್ಪಾಡುಗಳಾಗಲಿ ಜೀವರಲ್ಲಿ ಇರುವಂತೆ ವಿಕಾಸ ಸಂಕೋಚಗಳಾಗಲಿ
ಇರುವುದಿಲ್ಲ. ನಿರ್ವಿಕಾರನೂ ನಿತ್ಯಾನಂದನೂ ಆದ ವರಮಪುರುವನು
ಜೀವಪ್ರಕ್ಕತಿಗಳಿಗಿಂತ ಭಿನ್ನನಾಗಿ ಈ ದೇಹದಲ್ಲಿಯೂ ಬ್ರಹ್ಮಾಂಡದಲ್ಲಿಯೂ
ಇರುವನು.
ಪರಮಾತ್ಮೇತಿ ಚಾಪ್ರ್ಯಕ್ತೋ ದೇಹೇಜಸ್ಥಿನ್ ಪುರುಷಃ ಪರಃ |
“ಹಿಂದೆನಿರೂಪಿಸಿದ ಪ್ರಕೃತಿಜೀವರಿಗಿಂತ ಬೇರೆಯಾದ ಪುರುಷನು ಸರ್ವ
ಕ್ರಿಯಾಪ್ರವರ್ತಕನಾಗಿ ಈ ದೇಹದಲ್ಲಿದ್ದಾನೆ. ಅವನೇ ವರಮಾತ್ಮನೆನಸಿದ್ದಾನೆ.''
ಇವನು ಸರ್ವವ್ಯಾಪಿಯಾದ ಆಕಾಶದಂತೆ ಅರಿಪ್ರನಾಗಿರುವನು. ಭೂಮಂಡಲ
ವೆಲ್ಲಸೂರ್ಯನಿಂದ ಪ್ರಕಾಶಿತವಾಗುವಂತೆ ಪ್ರಕೃತಷ್ರಾಕೃತಾತ್ಮಕವಾದ ಪ್ರವಂಚನೆಲ್ಲ
ಇವನಶಕ್ತಿಯಿಂದಲೇನವುಗೆಕಾಣುತ್ತದೆ. ಹೀಗೆ ಜಡ-ಜೀವ-ಪರಮಾತ್ಮಎಂಬ
ಮೂರು ಅನಾದಿತತ್ತ್ವಗಳಿಂದ ಜಗತ್ತುವಿಭಕ್ತವಾಗಿರುವುದು ಸುಸ್ಪಷ್ಟವಿದೆ. ಈ
ಮೂರು ಅನಾದಿ ವಸ್ತುಗಳನ್ನು ಆಧರಿಸಿಯೇ ಶ್ರೀಮಧ್ವಾಚಾರ್ಯರು
ಪಂಚಭೇದಗಳನ್ನು ನಿರೂಪಿಸಿದ್ದಾರೆ.
ಪ್ರಪಂಚದ ಈ ತಾತ್ತ್ವಿಕ ವಿವೇಚನೆಯು ಏಕೆ ಬೇಕೆಂದು ಕೆಲವರು
ಆಕ್ಷೇಪಿಸುವರು. ಪ್ರಪಂಚದಲ್ಲಿ ತತ್ತ್ವಗಳೆಷ್ಟಿವೆ? ಇದು ತತ್ತ್ವವೆ? ಅತತ್ತ್ವವೆ?
ಎಂದು ಮುಂತಾದ ಸೂಕ್ಷ್ಮವಿವೇಚನೆಯಿಂದ ಪ್ರತ್ಯಕ್ಷ ಜೀವನಕ್ಕೆ ಏನೂ
ಲಾಭವಿಲ್ಲ. ಸಮುದ್ರತೀರದಲ್ಲಿ ಉರಿಬಿಸಿಲಿನಲ್ಲಿ ಕುಳಿತು ಅದರ ಮಳಲನ್ನು
ಎಣಿಸಿದಂತೆ ಈ ಲೌಕಿಕ ಚರ್ಚೆಯು ಬರೇ ನಿರರ್ಥಕ ಪ್ರಯಾಸವೇ ಆಗಿದೆ.
ಸುಖಶಾ ಂತಿಮಯಜೀವನಕ್ಕೆ ಆವಶ್ಯಕಗಳಾ ದ ನೀತಿ, ಸದ್ದು ಣ ಗಳನ್ನು ಮಾತ್ರ ಈ
ಜಗತ್ತಿಗೆ ಉಪದೇಶಿಸಿದರೆ ಸಾಕು. ಈ ಒಣ ಚರ್ಚೆಯಿಂದ ದೂರ ಉಳಿದಷ್ಟು
ಜಗತ್ತಿಗೆ ಕ್ಲೇಮ ಎಂದು ಭಾವಿಸುವವರು ಬಹಳ ಮಂದಿ ಇದ್ದಾರೆ. ಈ ಬಗ್ಗೆ
ಗೌತಮಬುದ್ಧನು ಹೇಳಿದ ಕತೆಯನ್ನು ಉದಾಹರಿಸಲಾಗುತ್ತದೆ. ಸಾಂಸಾರಿಕ
ಕ್ಲೇಶಗಳಿಂದ ಬಳಲಿ ಧರ್ಮೋಪದೇಶವನ್ನು ಪಡೆಯಲು ಗೌತಮಬುದ್ಧನ
ಬಳಿಗೆ ಬಂದ ಶಿಷ್ಯನೊಬ್ಬನು ಜೀವ-ಜಗತ್ತುಗಳಿಗೆ ಸಂಬಂಧಿಸಿದ ಕೆಲವುತಾತ್ತ್ವಿಕ
ಪ್ರಶ್ನೆಗಳನ್ನು ಮುಂದಿಟ್ಟು ಅದರ ಉತ್ತರವನ್ನು ಕೊಡಲೇಬೇಕೆಂದು ಗೌತಮ
ಬುದ್ಧನಲ್ಲಿ ಹಠ ಹಿಡಿಯುವನು. ಆಗ ಗೌತಮಬುದ್ಧನು ಹೇಳುವ ಉದಾಹರಣೆ
ಇದು: ವಿಷಲಿಪ್ತವಾದ ಬಾಣವು ಚುಚ್ಚಿ ಅದರ ತೀವ್ರವೇದನೆಯನ್ನು
ಸಹಿಸಲಾರದೆ ಒಬ್ಬ ವ್ಯಕ್ತಿಯು ವೈದ್ಯನ ಬಳಿಗೆ ಬರುವನು. ವೈದ್ಯನು ನೀಡುವ
ಔಷಧವನ್ನು ಸ್ವೀಕರಿಸುವ ಬದಲು ಅವನು ಕರಾರು ಹಾಕುತ್ತಾನೆ- ಆ ಬಾಣದ
ರೂಪವೇನು, ಬಣ್ಣವೇನು? ಬಾಣವನ್ನು ಯಾವುದರಿಂದ ನಿರ್ಮಿಸಲಾಗಿದೆ?
ಔಷಧವನ್ನು ಸ್ವೀಕರಿಸುವ ಮುಂಚೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲೇಬೇಕು
ಎಂದು. ತಾತ್ತ್ವಿಕ ವಿವೇಚನೆಗಳು ಇದರಂತೆಯೇ ನಿತ್ಯಜೀವನದ
ಕ್ಲೇಶಪರಿಹಾರಕ್ಕೆ ಅನವಶ್ಯಕವಾಗಿದ್ದು, ವೈದ್ಯನಲ್ಲಿ ರೋಗಿಯು ಕೇಳುವ
ತಲೆಹರಟೆಯ ಪ್ರಶ್ನೆಯಂತೆ ತತ್ತ್ವವಿವೇಚನೆಯು ವೃಥಾ ಕಾಲಹರಣವೆಂದು
ಗೌತಮಬುದ್ಧನ ಆಶಯವಾಗಿದೆ. ಈಗಲೂ ಇದನ್ನು ಅನುಮೋದಿಸುವವರು
ಬಹಳ ಜನರಿರುವರು. ಆದರೆ ಇವರೆಲ್ಲರೂ ಇತರ ಆರ್ಥಿಕ ರಾಜಕೀಯ
ವಿಷಯಗಳಲ್ಲಿ ಸೂಕ್ಷ್ಮ ವಿವೇಚನೆಯ ಆವಶ್ಯಕತೆಯನ್ನು ಒಪ್ಪತ್ತಾರೆ. ಸಮಸ್ಯೆಯ
ಮೂಲಭೂತ ಅಂಶಗಳನ್ನು ತಿಳಿಯದೆ ಮಾಡಿಕೊಳ್ಳುವ ಪರಿಹಾರಕಾ ರ್ಯವು
ವಿಪರೀತ ಸ್ಥಿತಿಗೆ ಕಾರಣವಾಗುತ್ತದೆಂಬುದನ್ನು ಎಲ್ಲರೂ ಅಂಗೀಕರಿಸುತ್ತಾರೆ.
ದೇಸರಚನೆಯ ಸ್ಥಿತಿಯನ್ನು ಸರಿಯಾಗಿ ತಿಳಿಯದ, ಔಷಧದ
ಗುಣಧರ್ಮಗಳನ್ನು ಅರಿಯದ ವೈದ್ಯರಿಂದ ಚಿಕಿತ್ಸೆಯನ್ನು ಯಾರೂ
ಪಡೆದುಕೊಳ್ಳರು. ಚಿಕ್ಕ ಪುಟ್ಟ ವ್ಯವಹಾರ ಕೈಗೊಳ್ಳುವಾಗಲೂ ಅದರ
ಪೂರ್ವಾಪರಗಳನ್ನು ಅರಿಯಲು ಆತುರರಾಗಿರುವ ನಾವು, ನಮ್ಮ ಇರವಿನ
ನಿಜಸ್ಥಿತಿಯನ್ನು ತಿಳಿದುಕೊಳ್ಳುವುದೂ ಅನವಶ್ಯಕವಾದ ಸಂಗತಿಷನಿಸುವುದೆ?
ನಮ್ಮ ಜೀವನದ ಹಿನ್ನೆಲೆಯನ್ನೂ ಜಗತ್ತಿನ ಮೂಲಭೂತ ತತ್ತ್ವವನ್ನೂ
ಅರಿತುಕೊಳ್ಳುವುದರಿಂದ ನಮ್ಮ ಜೀವನವನ್ನು ಹೇಗೆ ರೂಪಿಸ ಬೇಕೆನ್ನುವುದರ
ತಿಳುವಳಿಕೆಯು ನಮಗೆ ಮೂಡುವದು. ನಮ್ಮ ಸಾಂಸಾರಿಕ ವೇದನೆಯ
ಮೂಲವೆಲ್ಲಿದೆ ಎಂಬುದರ ಅರ್ಥವೂನಮಗಾಗುವುದು. ದೇವರ ಅಸ್ತಿತ್ವವನ್ನು
ಮನಗಂಡು, ಅದರ ಆಧಾರದಲ್ಲಿ ರೂಪುಗೊಳಿಸುವ ಬಾಳುವೆಗೂ
ಪರಮಾತ್ಮನಲ್ಲಿ ವಿಶ್ವಾಸವಿಲ್ಲದ ಭೌತಿಕಪ್ರಧಾನತೆಯ ಜೀವನಕ್ಕೂ ಮಹದಂತರ
ವಿರಲು ಸಾಧ್ಯವಿದೆ. ನಮ್ಮ ಜೀವನದ ರೀತಿ, ಧೋರಣೆಗಳ ದಿಶೆಗಳನ್ನೇ
ಬದಲಿನಬಲ್ಲ, ನಮ್ಮ ನಡತೆಗಳಿಗೆ ಹೊಸ ಹೊನ ಮೌಲ್ಯಗಳನ್ನು ಕಲ್ಪಿಸುವಂತಹ
ತಾತ್ತ್ವಿಕ ವಿವೇಜನೆಗಳನ್ನು ಅಷ್ಟು ಲಘುವಾದ ದೃಷ್ಟಿಯಲ್ಲಿ ಹೀಕೈಸುವುದು
ಸರಿಯಲ್ಲ. ನಮ್ಮ ಬಾಳುವೆಯನ್ನು ರೂಪಿಸುವ ಮೊದಲು, ಅದರ
ಹಿನ್ನೆಲೆಯೆನಿಸಿದ ಎಲ್ಲ ಸಂಗತಿಗಳನ್ನೂ ಸರಿಯಾಗಿ ವಿಮರ್ಶಿಸಿ, ನಿರ್ಧರಿಸಿ
ಒಂದು ನಿರ್ದಿಷ್ಟ ಧೋರಣೆಯನ್ನು ಸ್ವೀಕರಿಸಲು ವೂರ್ಣ ಅವಕಾಶವೂ
ಸ್ವಾತಂತ್ರ್ಯವೂ ಮಾನವನಿಗೆ ದೊರೆಯಲೇಬೇಕು. ಆದುದರಿಂದಲೇ ಸ್ವತಂತ್ರ
ದೃಷ್ಟಿಯ ತಾತ್ತ್ವಿಕ ವಿಮರ್ಶೆಯ ವಿವಿಧ ಪದ್ಧತಿ, ಪರಂಪರೆಗಳು ಭಾರತದಲ್ಲಿ
ಉದಯವಾಗಲು ಅವಕಾಶ ದೊರೆತಿದೆ. ಈ ದೃಷ್ಟಿಯಿಂದಲೇ ಶ್ರೀಕೃಷ್ಣನು ಜಡ,
ಜೀವ, ಪರಮಾತ್ಮರ ನೈಜ ಸ್ವರೂಪವನ್ನೂ ಅವುಗಳಲ್ಲಿರುವ ಪ್ರತ್ಯೇಕತೆ ಹಾಗೂ
ಪರಸ್ಪರ ಸಂಬಂಧವನ್ನೂ ತನ್ನ ಸರ್ವಗ್ರಾಹಿ ದೃಷ್ಟಿಯಿಂದ ವಿಶದೀಕರಿಸಿದ್ದಾನೆ.
Bannanje Govindacharya (1936–2020)Bhagavad Gita Pravachana
ಪುರುಷಃ ಪ್ರಕೃತಿಸ್ಥಃ ಹಿ ಭುಂಕ್ತೇ ಪ್ರಕೃತಿಜಾನ್ ಗುಣಾನ್ |
ಕಾರಣಮ್ ಗುಣಸಂಗಃ ಅಸ್ಯ ಸತ್ ಅಸತ್ ಯೋನಿ ಜನ್ಮಸು -ಪ್ರಕೃತಿಯ ಕಟ್ಟಿಗೊಳಗಾದ ಜೀವ, ಪ್ರಕೃತಿ
ಕಾರ್ಯಗಳಾದ ಸುಖ-ದುಃಖಾದಿಗಳನ್ನು ಅನುಭವಿಸುತ್ತಾನೆ. ಒಳ್ಳೆಯ ಮತ್ತು ಕೆಟ್ಟ ಬಸಿರಿನಲ್ಲಿ ಹುಟ್ಟಿಬರಲು
ಜೀವನಿಗೆ ತ್ರಿಗುಣಗಳ ನಂಟೇ ಕಾರಣ.
ಪ್ರಕೃತಿ ನಿರ್ಮಿತವಾದ ದೇಹದಲ್ಲಿ ಭಗವಂತನಿದ್ದಾನೆ, ದೇವತೆಗಳಿದ್ದಾರೆ. ಆದರೆ ದೇಹದಲ್ಲಿದ್ದು ಸುಖ-ದುಃಖದ
ಭೋಗವನ್ನು ಅನುಭವಿಸುವವನು-ಜೀವ. ದೇಹ ಪ್ರಕೃತಿಯ ಗುಣದಿಂದ ನಿರ್ಮಾಣವಾಗಿರುತ್ತದೆ. ಜೀವ ತನ್ನ
ಸ್ವಭಾವಕ್ಕನುಗುಣವಾಗಿ, ಪೂರ್ವ ಜನ್ಮದ ಕರ್ಮಫಲಕ್ಕನುಗುಣವಾಗಿ ಈ ಜನ್ಮದಲ್ಲಿ ದೇಹವನ್ನು ಪಡೆಯುತ್ತದೆ
ಹಿಂದೆ ಹೇಳಿದಂತೆ ಜೀವ ತನ್ನ ದೇಹವನ್ನು ಬಿಟ್ಟು ಹೊರಬರುವಾಗ ಯಾವುದನ್ನು ಗಾಢವಾಗಿ ನೆನೆಯುತ್ತದೋ -
ಅದಕ್ಕನುಗುಣವಾಗಿ ಅದರ ಮುಂದಿನ ಜನ್ಮ ನಿರ್ಧಾರವಾಗುತ್ತದೆ. ಉತ್ತಮ ಅಥವಾ ಹೀನ ಯೋನಿಯಲ್ಲಿ
ಹುಟ್ಟಿಬರಲು ಜೀವನಿಗೆ ತ್ರಿಗುಣಗಳ ನಂಟೇ ಕಾರಣ.
Bibek Debroy (1955–2024)The Bhagavad Gita
(21)
‘Because purusha is established in prakriti and enjoys prakriti’s qualities.34
And its35 good and evil birth is because of its association with these
qualities.’