13.23

उपद्रष्टानुमन्ता च भर्ता भोक्ता महेश्वरः ।
परमात्मेति चाप्युक्तो देहेऽस्मिन्पुरुषः परः ॥
upadraṣṭānumantā ca bhartā bhoktā maheśvaraḥ |
paramātmeti cāpyukto dehe'sminpuruṣaḥ paraḥ ||
Sri Madhvacharya (1238–1317)Bhagavad Gita Tatparya Nirnaya
स्वतन्त्रकारणं तु परम एवेत्याह - उपद्रष्टाऽनुमन्तेति। ‘सर्वेभ्य उपरो द्रष्टायदुपद्रष्टृनामकः। स्वातन्त्र्यात् स्वानुकूल्येन मत्या प्रेरयति स्म यत्। अनुमन्तेति कथितः स्वयं प्रभुरजो हरिः। महाशक्तिर्यतो विष्णुर्महेश्वर इतीरितः। परमत्वाच्च तस्यैव ह्यनुमन्तृत्वमुच्यते। स एव सर्वेदेहेषु देहिनोऽन्यो व्यवस्थितः’ इति च। ‘मां विद्धि सर्वक्षेत्रेषु’ इति देहेऽप्युक्तः। तेनाहमेव स इति दर्शयति॥22॥
Swami Sivananda (1887–1963)Bhagavad Gita
23. The Supreme Soul in this body is also called the spectator, the permitter, the supporter, the enjoyer, the great Lord and the Supreme Self.
Sri Vishwesha Tirtharu (1931–2019)Gitasaroddhara
13.21–13.23 · ಅನಾದಿತತ್ತ್ವಗಳ ವಿವೇಚನೆ
ಅನಾದಿ ತತ್ತ ಳೆ ವಿವೇಚನೆ ಪ್ರಪಂಚದ | ಬಗ್ಗೆ ವಿಶದವಾದ ನಿರ್ಣೀತವಾದ ಜ್ಞಾನವುಂಟಾಗಲು ಅನುಕೂಲವಾಗುವಂತೆ ಪ್ರಪಂಚವನ್ನು ವಿಭಜಿಸಿ ಪೃಥಕ್ಕರಿಸಿ ಶ್ರೀಕೃಷ್ಣನು ನಿರೂಪಿಸುತ್ತಾನೆ. ಜಗತ್ತಿನಲ್ಲಿ ಪ್ರಕೃತಿ ಮತ್ತು ಜೀವರೆಂದು ಅನಾದಿಯಾದ ಎರಡು ತತ್ತ್ವಗಳಿವೆ. ಜಡತತ್ತ್ವವಾದ ಪ್ರಕೃತಿಯು ಅನಾದಿಯಾಗಿದ್ದರೂ ಅದು ವಿಕಾರಶೀಲವಾಗಿದೆ. ಅದರ ಪರಿಣತಿಯೇ ಈ ಸ್ಥೂಲವಾದ ಜಡಪ್ರಪಂಚ ವಾಗಿದೆ. ಈ ವಿಕಾರವರಿಣಾಮಗಳಿಗೆ ಪ್ರಕೃತಿಯು ಆಧಾರವಾಗಿದ್ದರೆ, ಪ್ರಾಕೃತಿಕ ಪದಾರ್ಥಗಳಿಂದ ಜನಿಸುವ ಸುಖದುಃಖಗಳ ಭೋಕ್ತಾರನೇ ಜೀವನಾಗಿರು ವನು. ಕಾರ್ಯಕಾರಣಕತೃ ತೇ ಹೇತುಃ ಪ್ರಕೃತಿರುಚ್ಛತೇ [ ಪುರುಷಃ ಸುಖದುಃಖಾನಾಂ ಭೋಕ್ಷಃ ತೇ ಹೇತುರುಚ್ಛತೇ 1 ಇವೆರಡನ್ನೂ ಮೀರಿನಿಂತಿರುವ ಇನ್ನೊಬ್ಬಮಹಾಚೇತನನು ಈ ಜಗತ್ತಿನಲ್ಲಿ ನೆಲೆಸಿದ್ದಾನೆ. ಅವನೇ ಪರಮಾತ್ಮನು. ಅವನಲ್ಲಿ ಪ್ರಕೃತಿಯಲ್ಲಿರುವಂತೆ ವಿಕಾರ ಮಾರ್ಪಾಡುಗಳಾಗಲಿ ಜೀವರಲ್ಲಿ ಇರುವಂತೆ ವಿಕಾಸ ಸಂಕೋಚಗಳಾಗಲಿ ಇರುವುದಿಲ್ಲ. ನಿರ್ವಿಕಾರನೂ ನಿತ್ಯಾನಂದನೂ ಆದ ವರಮಪುರುವನು ಜೀವಪ್ರಕ್ಕತಿಗಳಿಗಿಂತ ಭಿನ್ನನಾಗಿ ಈ ದೇಹದಲ್ಲಿಯೂ ಬ್ರಹ್ಮಾಂಡದಲ್ಲಿಯೂ ಇರುವನು. ಪರಮಾತ್ಮೇತಿ ಚಾಪ್ರ್ಯಕ್ತೋ ದೇಹೇಜಸ್ಥಿನ್‌ ಪುರುಷಃ ಪರಃ | “ಹಿಂದೆನಿರೂಪಿಸಿದ ಪ್ರಕೃತಿಜೀವರಿಗಿಂತ ಬೇರೆಯಾದ ಪುರುಷನು ಸರ್ವ ಕ್ರಿಯಾಪ್ರವರ್ತಕನಾಗಿ ಈ ದೇಹದಲ್ಲಿದ್ದಾನೆ. ಅವನೇ ವರಮಾತ್ಮನೆನಸಿದ್ದಾನೆ.'' ಇವನು ಸರ್ವವ್ಯಾಪಿಯಾದ ಆಕಾಶದಂತೆ ಅರಿಪ್ರನಾಗಿರುವನು. ಭೂಮಂಡಲ ವೆಲ್ಲಸೂರ್ಯನಿಂದ ಪ್ರಕಾಶಿತವಾಗುವಂತೆ ಪ್ರಕೃತಷ್ರಾಕೃತಾತ್ಮಕವಾದ ಪ್ರವಂಚನೆಲ್ಲ ಇವನಶಕ್ತಿಯಿಂದಲೇನವುಗೆಕಾಣುತ್ತದೆ. ಹೀಗೆ ಜಡ-ಜೀವ-ಪರಮಾತ್ಮಎಂಬ ಮೂರು ಅನಾದಿತತ್ತ್ವಗಳಿಂದ ಜಗತ್ತುವಿಭಕ್ತವಾಗಿರುವುದು ಸುಸ್ಪಷ್ಟವಿದೆ. ಈ ಮೂರು ಅನಾದಿ ವಸ್ತುಗಳನ್ನು ಆಧರಿಸಿಯೇ ಶ್ರೀಮಧ್ವಾಚಾರ್ಯರು ಪಂಚಭೇದಗಳನ್ನು ನಿರೂಪಿಸಿದ್ದಾರೆ. ಪ್ರಪಂಚದ ಈ ತಾತ್ತ್ವಿಕ ವಿವೇಚನೆಯು ಏಕೆ ಬೇಕೆಂದು ಕೆಲವರು ಆಕ್ಷೇಪಿಸುವರು. ಪ್ರಪಂಚದಲ್ಲಿ ತತ್ತ್ವಗಳೆಷ್ಟಿವೆ? ಇದು ತತ್ತ್ವವೆ? ಅತತ್ತ್ವವೆ? ಎಂದು ಮುಂತಾದ ಸೂಕ್ಷ್ಮವಿವೇಚನೆಯಿಂದ ಪ್ರತ್ಯಕ್ಷ ಜೀವನಕ್ಕೆ ಏನೂ ಲಾಭವಿಲ್ಲ. ಸಮುದ್ರತೀರದಲ್ಲಿ ಉರಿಬಿಸಿಲಿನಲ್ಲಿ ಕುಳಿತು ಅದರ ಮಳಲನ್ನು ಎಣಿಸಿದಂತೆ ಈ ಲೌಕಿಕ ಚರ್ಚೆಯು ಬರೇ ನಿರರ್ಥಕ ಪ್ರಯಾಸವೇ ಆಗಿದೆ. ಸುಖಶಾ ಂತಿಮಯಜೀವನಕ್ಕೆ ಆವಶ್ಯಕಗಳಾ ದ ನೀತಿ, ಸದ್ದು ಣ ಗಳನ್ನು ಮಾತ್ರ ಈ ಜಗತ್ತಿಗೆ ಉಪದೇಶಿಸಿದರೆ ಸಾಕು. ಈ ಒಣ ಚರ್ಚೆಯಿಂದ ದೂರ ಉಳಿದಷ್ಟು ಜಗತ್ತಿಗೆ ಕ್ಲೇಮ ಎಂದು ಭಾವಿಸುವವರು ಬಹಳ ಮಂದಿ ಇದ್ದಾರೆ. ಈ ಬಗ್ಗೆ ಗೌತಮಬುದ್ಧನು ಹೇಳಿದ ಕತೆಯನ್ನು ಉದಾಹರಿಸಲಾಗುತ್ತದೆ. ಸಾಂಸಾರಿಕ ಕ್ಲೇಶಗಳಿಂದ ಬಳಲಿ ಧರ್ಮೋಪದೇಶವನ್ನು ಪಡೆಯಲು ಗೌತಮಬುದ್ಧನ ಬಳಿಗೆ ಬಂದ ಶಿಷ್ಯನೊಬ್ಬನು ಜೀವ-ಜಗತ್ತುಗಳಿಗೆ ಸಂಬಂಧಿಸಿದ ಕೆಲವುತಾತ್ತ್ವಿಕ ಪ್ರಶ್ನೆಗಳನ್ನು ಮುಂದಿಟ್ಟು ಅದರ ಉತ್ತರವನ್ನು ಕೊಡಲೇಬೇಕೆಂದು ಗೌತಮ ಬುದ್ಧನಲ್ಲಿ ಹಠ ಹಿಡಿಯುವನು. ಆಗ ಗೌತಮಬುದ್ಧನು ಹೇಳುವ ಉದಾಹರಣೆ ಇದು: ವಿಷಲಿಪ್ತವಾದ ಬಾಣವು ಚುಚ್ಚಿ ಅದರ ತೀವ್ರವೇದನೆಯನ್ನು ಸಹಿಸಲಾರದೆ ಒಬ್ಬ ವ್ಯಕ್ತಿಯು ವೈದ್ಯನ ಬಳಿಗೆ ಬರುವನು. ವೈದ್ಯನು ನೀಡುವ ಔಷಧವನ್ನು ಸ್ವೀಕರಿಸುವ ಬದಲು ಅವನು ಕರಾರು ಹಾಕುತ್ತಾನೆ- ಆ ಬಾಣದ ರೂಪವೇನು, ಬಣ್ಣವೇನು? ಬಾಣವನ್ನು ಯಾವುದರಿಂದ ನಿರ್ಮಿಸಲಾಗಿದೆ? ಔಷಧವನ್ನು ಸ್ವೀಕರಿಸುವ ಮುಂಚೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲೇಬೇಕು ಎಂದು. ತಾತ್ತ್ವಿಕ ವಿವೇಚನೆಗಳು ಇದರಂತೆಯೇ ನಿತ್ಯಜೀವನದ ಕ್ಲೇಶಪರಿಹಾರಕ್ಕೆ ಅನವಶ್ಯಕವಾಗಿದ್ದು, ವೈದ್ಯನಲ್ಲಿ ರೋಗಿಯು ಕೇಳುವ ತಲೆಹರಟೆಯ ಪ್ರಶ್ನೆಯಂತೆ ತತ್ತ್ವವಿವೇಚನೆಯು ವೃಥಾ ಕಾಲಹರಣವೆಂದು ಗೌತಮಬುದ್ಧನ ಆಶಯವಾಗಿದೆ. ಈಗಲೂ ಇದನ್ನು ಅನುಮೋದಿಸುವವರು ಬಹಳ ಜನರಿರುವರು. ಆದರೆ ಇವರೆಲ್ಲರೂ ಇತರ ಆರ್ಥಿಕ ರಾಜಕೀಯ ವಿಷಯಗಳಲ್ಲಿ ಸೂಕ್ಷ್ಮ ವಿವೇಚನೆಯ ಆವಶ್ಯಕತೆಯನ್ನು ಒಪ್ಪತ್ತಾರೆ. ಸಮಸ್ಯೆಯ ಮೂಲಭೂತ ಅಂಶಗಳನ್ನು ತಿಳಿಯದೆ ಮಾಡಿಕೊಳ್ಳುವ ಪರಿಹಾರಕಾ ರ್ಯವು ವಿಪರೀತ ಸ್ಥಿತಿಗೆ ಕಾರಣವಾಗುತ್ತದೆಂಬುದನ್ನು ಎಲ್ಲರೂ ಅಂಗೀಕರಿಸುತ್ತಾರೆ. ದೇಸರಚನೆಯ ಸ್ಥಿತಿಯನ್ನು ಸರಿಯಾಗಿ ತಿಳಿಯದ, ಔಷಧದ ಗುಣಧರ್ಮಗಳನ್ನು ಅರಿಯದ ವೈದ್ಯರಿಂದ ಚಿಕಿತ್ಸೆಯನ್ನು ಯಾರೂ ಪಡೆದುಕೊಳ್ಳರು. ಚಿಕ್ಕ ಪುಟ್ಟ ವ್ಯವಹಾರ ಕೈಗೊಳ್ಳುವಾಗಲೂ ಅದರ ಪೂರ್ವಾಪರಗಳನ್ನು ಅರಿಯಲು ಆತುರರಾಗಿರುವ ನಾವು, ನಮ್ಮ ಇರವಿನ ನಿಜಸ್ಥಿತಿಯನ್ನು ತಿಳಿದುಕೊಳ್ಳುವುದೂ ಅನವಶ್ಯಕವಾದ ಸಂಗತಿಷನಿಸುವುದೆ? ನಮ್ಮ ಜೀವನದ ಹಿನ್ನೆಲೆಯನ್ನೂ ಜಗತ್ತಿನ ಮೂಲಭೂತ ತತ್ತ್ವವನ್ನೂ ಅರಿತುಕೊಳ್ಳುವುದರಿಂದ ನಮ್ಮ ಜೀವನವನ್ನು ಹೇಗೆ ರೂಪಿಸ ಬೇಕೆನ್ನುವುದರ ತಿಳುವಳಿಕೆಯು ನಮಗೆ ಮೂಡುವದು. ನಮ್ಮ ಸಾಂಸಾರಿಕ ವೇದನೆಯ ಮೂಲವೆಲ್ಲಿದೆ ಎಂಬುದರ ಅರ್ಥವೂನಮಗಾಗುವುದು. ದೇವರ ಅಸ್ತಿತ್ವವನ್ನು ಮನಗಂಡು, ಅದರ ಆಧಾರದಲ್ಲಿ ರೂಪುಗೊಳಿಸುವ ಬಾಳುವೆಗೂ ಪರಮಾತ್ಮನಲ್ಲಿ ವಿಶ್ವಾಸವಿಲ್ಲದ ಭೌತಿಕಪ್ರಧಾನತೆಯ ಜೀವನಕ್ಕೂ ಮಹದಂತರ ವಿರಲು ಸಾಧ್ಯವಿದೆ. ನಮ್ಮ ಜೀವನದ ರೀತಿ, ಧೋರಣೆಗಳ ದಿಶೆಗಳನ್ನೇ ಬದಲಿನಬಲ್ಲ, ನಮ್ಮ ನಡತೆಗಳಿಗೆ ಹೊಸ ಹೊನ ಮೌಲ್ಯಗಳನ್ನು ಕಲ್ಪಿಸುವಂತಹ ತಾತ್ತ್ವಿಕ ವಿವೇಜನೆಗಳನ್ನು ಅಷ್ಟು ಲಘುವಾದ ದೃಷ್ಟಿಯಲ್ಲಿ ಹೀಕೈಸುವುದು ಸರಿಯಲ್ಲ. ನಮ್ಮ ಬಾಳುವೆಯನ್ನು ರೂಪಿಸುವ ಮೊದಲು, ಅದರ ಹಿನ್ನೆಲೆಯೆನಿಸಿದ ಎಲ್ಲ ಸಂಗತಿಗಳನ್ನೂ ಸರಿಯಾಗಿ ವಿಮರ್ಶಿಸಿ, ನಿರ್ಧರಿಸಿ ಒಂದು ನಿರ್ದಿಷ್ಟ ಧೋರಣೆಯನ್ನು ಸ್ವೀಕರಿಸಲು ವೂರ್ಣ ಅವಕಾಶವೂ ಸ್ವಾತಂತ್ರ್ಯವೂ ಮಾನವನಿಗೆ ದೊರೆಯಲೇಬೇಕು. ಆದುದರಿಂದಲೇ ಸ್ವತಂತ್ರ ದೃಷ್ಟಿಯ ತಾತ್ತ್ವಿಕ ವಿಮರ್ಶೆಯ ವಿವಿಧ ಪದ್ಧತಿ, ಪರಂಪರೆಗಳು ಭಾರತದಲ್ಲಿ ಉದಯವಾಗಲು ಅವಕಾಶ ದೊರೆತಿದೆ. ಈ ದೃಷ್ಟಿಯಿಂದಲೇ ಶ್ರೀಕೃಷ್ಣನು ಜಡ, ಜೀವ, ಪರಮಾತ್ಮರ ನೈಜ ಸ್ವರೂಪವನ್ನೂ ಅವುಗಳಲ್ಲಿರುವ ಪ್ರತ್ಯೇಕತೆ ಹಾಗೂ ಪರಸ್ಪರ ಸಂಬಂಧವನ್ನೂ ತನ್ನ ಸರ್ವಗ್ರಾಹಿ ದೃಷ್ಟಿಯಿಂದ ವಿಶದೀಕರಿಸಿದ್ದಾನೆ.
Bannanje Govindacharya (1936–2020)Bhagavad Gita Pravachana
ಉಪದ್ರಷ್ಟಾ ಅನುಮಂತಾ ಚ ಭರ್ತಾ ಭೋಕ್ತಾ ಮಹೇಶ್ವರಃ | ಪರಮಾತ್ಮ ಇತಿ ಚ ಅಪಿ ಉಕ್ತಃ ದೇಹೇ ಅಸ್ಮಿನ್‌ ಪುರುಷಃ ಪರಃ -ಎಲ್ಲದರ ಮೇಲಿದ್ದು ಎಲ್ಲವನು ನೋಡುವವನು, ತನ್ನಿಷ್ಟದಂತೆ ಎಲ್ಲವನು ನಡೆಸುವವನು, ಎಲ್ಲವನು ಹೊತ್ತವನು, ಸಾರವನುಣ್ಣುವವನು-ಸರ್ವಶಕ್ತನಾದ ಪರಮಾತ್ಮ. ಅವನೇ ಈ ದೇಹದಲ್ಲಿ ಜೀವನ ಜೊತೆಗಿರುವ ಪರಮಪುರುಷ. ಚಿತ್‌ ಪ್ರಕೃತಿ ಜಡಪ್ರಕೃತಿಯಿಂದ ದೇಹ ನಿರ್ಮಿಸುವಾಗ, ಜೀವ ಆ ದೇಹದಲ್ಲಿದ್ದು ಇಂದ್ರಿಯಗಳ ಮುಖೇನ ಸುಖ ದುಃಖವನ್ನು ಭೋಗಿಸುವಾಗ- ಎಲ್ಲದಕ್ಕೂ ಪ್ರೇರಕನಾಗಿ, ಎಲ್ಲವುದಕ್ಕಿಂತ ಎತ್ತರದಲ್ಲಿದ್ದು ಎಲ್ಲವನ್ನೂ ಹತ್ತಿರದಿಂದ ಸಾಕ್ಷಾತ್‌ ಕಾಣುವ ಭಗವಂತ ಪರಮಪುರುಷ. ಆತ ನಮ್ಮ ಕರ್ಮವನ್ನು ಬಲ್ಲವನು. ಯಾವ ರೀತಿಯ ಕರ್ಮದಿಂದ ಏನಾಗಬೇಕು ಎಂದು ತಿಳಿದವನು. ಆತ ಒಳಗೆ ಕೂತು ಪ್ರೇರಣೆ ಮಾಡುವುದರಿಂದ ಈ ದೇಹ ನಿಂತಿದೆ. ಆತ ಹೊರಟು ಹೋದರೆ ದೇಹ ಬಿದ್ದು ಹೋಗುತ್ತದೆ. ಆತ ನಮ್ಮೊಳಗಿದ್ದು ಯಾವ ದುಃಖದ ಸ್ಪರ್ಶವೂ ಇಲ್ಲದೆ ಸದಾ ಆನಂದದಿಂದಿರುವ ಆನಂದ ಭೋಕ್ತ.
Bibek Debroy (1955–2024)The Bhagavad Gita
(22) ‘The Supreme Being in this body is known as one who witnesses, one who allows, one who sustains, one who enjoys, the supreme lord and the paramatman.’