15.1

श्रीभगवानुवाच ।
ऊर्ध्वमूलमधःशाखमश्वत्थं प्राहुरव्ययम् ।
छन्दांसि यस्य पर्णानि यस्तं वेद स वेदवित् ॥
śrībhagavānuvāca |
ūrdhvamūlamadhaḥśākhamaśvatthaṃ prāhuravyayam |
chandāṃsi yasya parṇāni yastaṃ veda sa vedavit ||
Sri Madhvacharya (1238–1317)Bhagavad Gita Tatparya Nirnaya
‘पृथङ्मूलं हरिस्तस्य जगद्वृक्षस्य भूमिवत्। सत्त्वादियुक्ते चिदचित्प्रकृती मूलभागवत्॥ अत्रापि चिदचिद्योगो वृक्षवत् सम्प्रकीर्तितः। पृथिवीदेवतावत् तद्धरिर्मृद्वदचेतना। उत्तमत्वात् तु मूलानामूर्ध्वमूलस्त्वयं स्मृतः। नीचास्तमो महदहंबुद्धयो भूतसंयुताः॥ शाखास्छन्दांसि पर्णानि काममोक्षफले ह्यतः॥01॥
Swami Sivananda (1887–1963)Bhagavad Gita
1. They (the wise) speak of the indestructible peepul tree, having its root above and branches below, whose leaves are the metres or hymns; he who knows it is a knower of the Vedas.
Sri Vishwesha Tirtharu (1931–2019)Gitasaroddhara
ಜಗದ ಅಶ್ವತ್ಥ ಸ್ವರೂಪ
ಜಗದ್‌ ವೃಕ್ಷದ ಸ್ವರೂಪ ಇಷ್ಟರವರೆಗೆ ವ್ಯಷ್ಟಿರೂಪದಿಂದ ಪ್ರಪಂಚವನ್ನು ನಿರೂಪಿಸಿ ಇನ್ನು ಹದಿನೈದನೆಯ ಅಧ್ಯಾಯದಲ್ಲಿ ಸಮಷ್ಟಿರೂಪದಲ್ಲಿ ಸರ್ವಸಂಗ್ರಾಹಕವಾಗಿ ಜಗತ್ತಿನ ವರ್ಣನೆಯನ್ನು ಮಾಡಲಾಗಿದೆ. ಜಡ-ಜೀವ-ಪರಮಾತ್ಮರೆಂದು ಮೂರುವಿಧವಾಗಿ ವಿಂಗಡಿಸಲಾದ ಈ ವಿಶ್ವದಲ್ಲಿ ಪರಮಾತ್ಮನೇ ಸರ್ವೋತ್ತಮ ವಾದ ವಸ್ತು. ಅದರಂತೆ ಜೀವವರ್ಗದಲ್ಲಿ ಶ್ರೀತತ್ತ್ವವು ಶ್ರೇಷ್ಠವಾಗಿದ್ದರೆ ಜಡವರ್ಗದಲ್ಲಿ ಪ್ರಕೃತಿಯು ಪ್ರಧಾನವಾಗಿ ಪರಿಗಣಿತವಾಗಿದೆ. ಇಡೀ ವಿಶ್ವವು ಈ ಮೂರು ತತ್ವ್ವಗಳಲ್ಲಿ ಪ್ರತಿಷ್ಠಿತವಾಗಿದ್ದು. ಇವುಗಳಿಂದಲೇ ಜಗತ್ತಿನ ನಿರ್ಮಾಣವಾಗಿದೆ. ಮಡಿಕೆಗೆ ಮಣ್ಣಿನಂತೆ ಜಡಪ್ರಕೃತಿಯು ಜಗತ್ತಿಗೆ ಉಪಾದಾನ ವಸ್ತುವಾಗಿದ್ದರೆ, ಚಿತ್‌ಪ್ರಕೃತಿ ಎನಿಸಿದ ಲಕ್ಷ್ಮೀದೇವಿಯು ಅಭಿಮಾನ ದೇವತೆಯಾಗಿಯೂ ಪರಮಪುರುಷನಾದ ಶ್ರೀ ನಾರಾಯಣನು ಅಂತ ರ್ಯಾಮಿಯಾಗಿಯೂ ಈ ಜಗತ್ತಿನ ಕರ್ತಾರರಾಗಿದ್ದಾರೆ. ಗೀತೆಯು ಜಗತ್ತನ್ನು ಒಂದು ಮಹಾವೃಕ್ಷಕ್ಕಿ ಹೋಲಿಸಿ ಪರಮಾತ್ಮ, ಶ್ರೀತತ್ವಹಾಗೂ ಪ್ರಕೃತಿ ಈಮೂರು ಈ ವೃಕ್ಷದ ಮೂಲಗಳೆಂದು ವರ್ಣಿಸಿದೆ. ಪಂಚಭೂತಗಳೂ ಅವುಗಳ ಅಭಿಮಾನಿಗಳಾದ ದೇವತೆಗಳೂ ಈ ಜಗದ್ವ್ಯಕ್ಷದ ರೆಂಬೆ ಕೊಂಬೆಗಳು. ಪರಮಾತ್ಮನ ಭಕ್ತಿ ಆರಾಧನೆಗಳಿಂದಲೇ ಜಗತ್ತಿಗೆತೃಪ್ತಿ ಹಾಗೂ ಬೆಳವಣಿಗೆಯಿದೆ. ಮರದ ಬುಡಕ್ಕಿನೀರೆರೆಯದೆ ಕೊಂಬೆಗಳಿಗೆ ಮಾತ್ರನೀರು ಹಾಕುವಂತಹಹುಚ್ಚು ಪ್ರವೃತ್ತಿಯಲ್ಲಿ ನಾವು ತೊಡಗಿದ್ದೇವೆ. ಜಗತ್ತಿನ ಮೂಲಶಕ್ತಿಯಾದ ಪರಮಾತ್ಮನನ್ನು ಮರೆತು ಪಾಂಚಭೌತಿಕ ಆರಾಧನೆಯಲ್ಲಿಯೂ ಇತರ ದೇವತೆಗಳ ಪೂಜೆಯಲ್ಲಿಯೂ ನಾವು ತತ್ಪರರಾಗಿರುವೆವು. ಮರದ ಬುಡಕ್ಕೆ ನೀರೆರೆಯುವುದರಿಂದ ಅದರ ಶಾಖೋಪಶಾಖೆಗಳು ಫಲಪುಷ್ಪಭರಿತವಾಗಿ ಸಮೃದ್ಧಿಯಿಂದ ಎದ್ದು ನಿಲ್ಲುವಂತೆ ಪರಮಾತ್ಮನಿಗೆ ಗೈಯುವ ಪೂಜೆ ಆರಾಧನೆಗಳಿಂದಸಕಲ ದೇವತೆಗಳೂ ಸರ್ವಭೂತಗಳೂ ತೃಪ್ತಿಹೊಂದುವವು. ಯಥಾ ಹಿ ಸ್ಕಂಧಶಾಖಾನಾಂ ತರೋರ್ಮೂಲಾವಸೇಚನಮ್‌ । ಏವಮಾರಾಧನಂ ವಿಷ್ಣೋಃ ಸರ್ವೇಷಾಮಾತ್ಮನಶ್ಚ ಹಿ ॥ - ಭಾಗವತ ವಿಷಯ ಪದಾರ್ಥಗಳೇ ಈ ವಿಶ್ವವೃಕ್ಷದ ಚಿಗುರೆಲೆಗಳಾಗಿದ್ದರೆ ವೇದಗಳೇ ಇದರ ಎಲೆಗಳಾಗಿವೆ. ವೈಷಯಿಕ ವಸ್ತುಗಳು ತಮ್ಮ ಆಕರ್ಷಕ ವರ್ಣಗಳಿಂದ ಚಿಗುರೆಲೆಗಳಂತೆ ನಮ್ಮ ಮನಸ್ಸ ನ್ನು ಸೆಳೆಯುತ್ತವೆ. ಆದರೆ ಅವುಗಳಲ್ಲಿ ಅಂತಹ ಸತ್ತ್ವರುಚಿಗಳಿಲ್ಲ. ಜಗತ್ತಿನ ಶ್ರೇಷ್ಠ ಫಲಗಳನ್ನು ಸವಿಯಬಯಸುವವರು ಈ ವಿಷಯಕಿಸಲಯಗಳನ್ನು ಕಿತ್ತು ಹರಿದು ದುರುಪಯೋಗಪಡಿಸಿದಲ್ಲಿ ಮುಂದೆ ದೊರೆಯಬಹುದಾದ ಮಧುರಫಲಗಳಿಗೆ ಎರವಾಗುತ್ತಾರೆ. ಬೆಳೆದಎಲೆಗಳಂತಿ ರುವವೈದಿಕತತ್ತ್ವಜ್ಞಾನವೇ ಜೀವನದ ಮಹಾಫಲವನ್ನು ನಮಗೆ ಒದಗಿಸುವುದು. ಛಂದಾಂಸಿ ಯಸ್ಕ ಪರ್ಣಾನಿ। ಎಲೆಗಳಿಲ್ಲದ ಒಣಗಿದ ಮರದಿಂದ ಹಣ್ಣುಗಳನ್ನು ನಾವುನಿರೀಕ್ಷಿಸಲಾರೆವು. ವೈದಿಕತತ್ತ್ವಜ್ಞಾನಕ್ಕೆ ಎರವಾದ ತುಷ್ಕಜೀವನದಲ್ಲಿ ಮೋಕ್ಷದ ಅಮೃತವಲವನ್ನು ಅದೆಂತು ಕಾಣಬಲ್ಲೆವು? ಹೀಗೆ ಭೋಗಸಾಧನಗಳಿಂದಲೂ ಯೋಗಸಾಮಗ್ರಿ ಗಳಿಂದಲೂ ತುಂಬಿದ ವೈವಿಧ್ಯಪೂರ್ಣವಾದ ಈ ವಿಶಾಲವಿಶ್ವವ್ಯಕ್ಷವನ್ನುನಾವು ನಿರೀಕ್ಷಿ ಸಬೇಕು. ಕಾರ್ಯಕಾರಣಗಳನ್ನು ವ್ಯಾಪಿಸಿನಿಂತ ಈ ಪಾರಲೌಕಿಕ ಪ್ರಪಂಚದ ವಿಸ್ತಾರವಾದ ಬೆಳವಣಿಗೆಯು ನಮ್ಮನ್ನು ಅಚ್ಚರಿಗೊಳಿಸುವುದು. ಅದರ ಆದಿ ಮಧ್ಯ ಅಂತ್ಯಗಳನ್ನು ತಿಳಿಯಲೂ ಅದರ ವಿಸ್ತಾರವನ್ನು ಅಳೆಯಲೂ ನಮ್ಮಿಂದ ಆಗುತ್ತಿಲ್ಲ. ಈ ಜಗತ್ತನ್ನು ವಿಶ್ಲೇಷಿಸಿನೋಡಿ ಇದರಲ್ಲಿ ಅಡಕವಾಗಿರುವಪ್ರತೃತಿ, ಜೀವ ಪರಮಾತ್ಮರನ್ನು ವಿಭಜಿಸಿ ನೋಡಿದಾಗಲೇ ನಾವು ಸರಿಯಾದ ತತ್ತ್ವಜ್ಞಾನವನ್ನು ವಡೆಯುವೆವು. ಜ್ಞಾನದ ಹರಿತವಾದ ಚೂರಿಯಿಂದ ಈ ಜಗತ್ತನ್ನು ಬಿಡಿಸಿ ಬಿಡಿಸಿ ನಿರೀಕ್ಷಿಸಿದಾಗಲೇ ಜಗತ್ತನ್ನು ಎಲ್ಲೆಡೆಗಳಲ್ಲಿಯೂ ವ್ಯಾಪಿಸಿರುವ ಸೂಕ್ಷ್ಮನಾದ ಜಗನ್ಮೂಲನಾದ ಪರಮಾತ್ಮನನ್ನು ಅರಿಯುವೆವು. ವಿಷಯಪದಾರ್ಥಗಳ ಸಂಪರ್ಕದಿಂದ ಮೊಂಡಾದ ಬುದ್ಧಿಯು ಜಗತ್ತನ್ನು ಪೃಥಕ್ಕರಿಸಿ ನೋಡುವ ವಿವೇಕ ಶಕ್ತಿಯನ್ನು ಕಳೆದುಕೊಂಡಿರುತ್ತದೆ. ವಿಷಯಾಸಕ್ತಿಯಿಂದ ರಹಿತವಾದ ಸುದೃಢವಾದ ಜ್ಞಾನದಿಂದ ಪ್ರಪಂಚದ ವಸ್ತುಗಳನ್ನೆಲ್ಲ ಬಿಡಿಬಿಡಿಯಾಗಿ ಬೇರ್ಪಡಿಸಿ ಅರಿತು ಇವುಗಳಲ್ಲಿ ಹುದುಗಿರುವ ಪ್ರಧಾನವಾದ ಭಗವತ್ತತ್ತ್ವವನ್ನು ತಿಳಿಯಬೇಕು. ಹಾಲಲ್ಲಿ ಬೆಣ್ಣೆಯು ಹುದುಗಿರುವಂತೆ ಕಲ್ಲು ಮಣ್ಣುಗಳಲ್ಲಿ ಚಿನ್ನವು ಅಡಗಿರುವಂತೆ ಈ ದೈಶ ಹ ವಂಚೆದನ್ನೆಲ್ಲ ಭಗವಂತನು ಅವ್ಯಕ್ತರೂಪದಿಂದ ವ್ಯಾಪಿಸಿರುವನು. ಎಲ್ಲ ಕಡೆಗಳಲ್ಲಿಯೂ ಅಡಗಿರುವ ಪರಮಾತ್ಮನನ್ನು ಹುಡುಕುವುದರಿಂದಲೇ ನಮ್ಮ ಜ್ಞಾನವು ಪರಿಪೂರ್ಣತೆಯನ್ನು ಪಡೆಯುವುದು. ವಿಶ್ವವಕ್ಷದ ಆಧಾರಭೂಮಿಯೂ ವಿಶ್ವವೃಕ್ಷದ ತಾಖೋಪಶಾಖೆಗಳಲ್ಲೆಲ್ಲ ಹರಡಿ ಅದರ ವೋಷಕಶಕ್ತಿಯೂ ಆಗಿರುವ ಪರಮಾತ್ಮನನ್ನೇ ಅರಿಯದ ಜ್ಞಾನದಲ್ಲಿ ಸಮಗ್ರತೆಯೆಲ್ಲಿ? ಮಣ್ಣಲ್ಲಿ ಬೆರೆತಿರುವ ಚಿನ್ನವನ್ನು ಕಂಡುಹಿಡಿಯುವ ಕೌಶಲ ಸೂಕ್ಷ್ಮದೃಷ್ಟಿಗಳಿಂದಲೇ ಜಗತ್ತಿನಲ್ಲಿರುವ ಬ್ರಹ್ಮವನ್ನು ನಾವು ಅನ್ವೇಷಿಸಬಲ್ಲಿವು. ಅನಂತಶಕ್ತಿಶಾಲಿಯೂ ಪರಿಪೂರ್ಣ ಗುಣಾಕರನೂ ಆದ ಪರಮಾತ್ಮನ ದರ್ಶನದಿಂದಲೇ ನಮ್ಮ ಜೀವನದ ಅನಾದಿಯಾದ ಈ ಹೋರಾಟ, ಕ್ಷೇತ, ವಿಕಾರಗಳಿಗೆ ಚಿರವಿಶ್ರಾಂತಿಯು ದೊರೆಯುವುದು. ಅವನನ್ನು ಹೊಂದುವುದ ರಿಂದಲೇನಾವು ಈ ಪ್ರಪಂಚಯಾತ್ರೆಯ ಗುರಿಯನ್ನು ತಲುಪಿದಂತಾಗುವುದು.
Bannanje Govindacharya (1936–2020)Bhagavad Gita Pravachana
ಭಗವಾನ್‌ ಉವಾಚ-ಭಗವಂತ ಹೇಳಿದನು: ಊರ್ಧ್ವಮೂಲಮ್‌ ಅಧಃ ಶಾಖಮ್‌ ಅಶ್ವತ್ಥಮ್‌ ಪ್ರಾಹುಃ ಅವ್ಯಯಮ್‌ | ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸಃ ವೇದವಿತ್‌ -ಮೇಲಿರುವ ಭಗವಂತ ಮತ್ತು ಪ್ರಕೃತಿ ವಿಶ್ವದ ಬುಡಕಟ್ಟು. ಕೆಳಗಿನ ಜೀವ-ಜಡಗಳು ಇದರ ಟೊಂಗೆ-ಟಿಸಿಲು. ಇದು ಎಂದೆಂದೂ ಇರುವ,[ಅ*ಶ್ವಃ*ತ್ಥ- ಇಂದು ಇದ್ದಂತೆ ನಾಳೆ ಇರದ],[ಅಶ್ವ*ತ್ಫಕುದುರೆಯಂತೆ ನಿರಂತರ ಚಲನಶೀಲವಾದ] ಅರಳಿಯ ಮರ. ವೇದಗಳು ಇದರ ಎಲೆಗಳು. ಇದನ್ನು ಬಲ್ಲವನು ವೇದಗಳನ್ನು ಬಲ್ಲವನು. ಉಪನಿಷತ್ತಿನ ಸಾರವೇ ಭಗವದ್ಗೀತೆ ಎನ್ನುವುದಕ್ಕೆ ಈ ಶ್ಲೋಕವೇ ಸಾಕ್ಷೆ. ಕಠೋಪನಿಷತ್ತಿನಲ್ಲಿ ಹೀಗೆ ಹೇಳಿದ್ದಾರೆ: “ಊರ್ಧ್ವಮೂಲೋ ಅವಾಕ್‌ ಶಾಖಃ ಏಷೋ ಅಶ್ವತ್ಥಃ ಸನಾತನಃ” ಎಂದು. ಇಲ್ಲಿ ಅದನ್ನು “ಊರ್ಧ್ವಮೂಲಮ್‌ ಅಧಃ ಶಾಖಮ್‌ ಅಶ್ವತ್ಥಮ್‌ ಪ್ರಾಹುಃ ಅವ್ಯಯಮ್‌” ಎಂದು ಹೇಳಿದ್ದಾರೆ. ಇದು ವಿಷಯ ಗರ್ಭಿತವಾದ ಸಾಲು. ಇಲ್ಲಿರುವ ಒಂದೊಂದು ಪದದಲ್ಲೂ ತತ್ವಶಾಸ್ತ್ರದ ಅನೇಕ ವಿಷಯಗಳು ಅಡಗಿವೆ. ನೇರವಾಗಿ ಈ ಸಾಲನ್ನು ಕನ್ನಡಕ್ಕೆ ಭಾಷಾಂತರಿಸಿದರೆ “ಈ ವಿಶ್ವವೇ ಒಂದು ಅರಳಿ ಮರ. ಇದರ ಬುಡ ಇರುವುದು ಮೇಲೆ, ಟೊಂಗೆ-ಟಿಸಿಲುಗಳಿರುವುದು ಕೆಳಗೆ” ಎಂದಾಗುತ್ತದೆ. ಮೇಲ್ನೋಟಕ್ಕೆ ಈ ಸಾಲನ್ನು ನೋಡಿದರೆ ನಮಗೆ ಏನೂ ಅರ್ಥವಾಗುವುದಿಲ್ಲ. "ಶೀರ್ಷಾಸನ ಮಾಡುತ್ತಿರುವ ಅರಳಿ ಮರ'- ಏನಿದು? ಅದರಲ್ಲೂ ಅಶ್ವತ್ಥ ಮರವನ್ನೇ ಕೃಷ್ಣ ಏಕೆ ಹೇಳಿದ? ಹಣ್ಣನ್ನೂ ಕೊಡದ, ಹೂವನ್ನೂ ಬಿಡದ, ಮನೆಕಟ್ಟಲೂ ಸಹಾಯಕವಲ್ಲದ ಈ ಮರದ ಪ್ರಸ್ತಾಪ ಏಕೆ? ಇದು ಅರ್ಥವಾಗಬೇಕಾದರೆ ನಾವು ‘WIT ಪದದ ಹಿಂದಿರುವ ಅರ್ಥವನ್ನು ಹುಡುಕಬೇಕು. ಮೇಲ್ನೋಟದ ಅರ್ಥದಿಂದ ಒಂದೊಂದಾಗಿ ಎಳೆ-ಎಳೆಯಾಗಿ ಒಳಹೊಗಬೇಕು. (೧) ಅಶ್ವತ್ಥ ಅನ್ನು ವುದಕ್ಕೆ ಸ್ಥೂಲ ಅರ್ಥ ಅರಳಿ ಮರ. ಪ್ರಪಂಚದಲ್ಲಿರುವ ಎಲ್ಲಾ ಮರಗಳಿಗಿಂತ ಈ ಮರ ಭಿನ್ನ. ಗಾಳಿಯ ಸುಳಿಯೇ ಇಲ್ಲದೆ ಎಲ್ಲಾ ಮರಗಳೂ ಸ್ಥಬ್ಧವಾಗಿರುವಾಗ , ಸಣ್ಣ ಗಾಳಿಯ ಎಳೆ ಬಂದರೆ ಯಾವ ಮರವೂ ಅಲ್ಲಾಡುವುದಿಲ್ಲ. ಆದರೆ ಅಶ್ವತ್ಸಮರದ ಎಲೆಗಳು ಗಿಲಿ-ಗಿಲಿ ಎಂದು ಹಂದಾಡಲು ಆರಂಭಿಸುತ್ತವೆ. ಅಶ್ವತ್ಥಕ್ಕೆ ಸಂಸ್ಕೃತದಲ್ಲಿ ಚಲಧರಃ' ಎಂದೂ ಕರೆಯುತ್ತಾರೆ. ಅಂದರೆ ಯಾವಾಗಲೂ ಚಲನಶೀಲವಾದ ಎಲೆಗಳುಳ್ಳ ಮರ ಎಂದರ್ಥ. ಇದೇ ಪ್ರಪಂಚಕ್ಕೂ ಮತ್ತು ಅಶ್ವತ್ಥಮರಕ್ಕೂ ಇರುವ ಸಾಮ್ಯ. ಪ್ರಪಂಚ ಕೂಡಾ ಯಾವಾಗಲೂ ಚಲನಶೀಲ. ಅದು ಸದಾ ಚಲಿಸುತ್ತಾ ಬದಲಾಗುತ್ತಾ ಇರುತ್ತದೆ. (೨) 3 +3: ಇಲ್ಲಿ ಅಶ್ವ ಎಂದರೆ ಕುದುರೆ. ಪ್ರಪಂಚ ಅಶ್ವದ ಹಾಗೆ ಇರುವಂತಹದ್ದು. ಕುದುರೆಯನ್ನು ಗಮನಿಸಿದರೆ ನಮಗೆ ಈ ಅರ್ಥ ತಿಳಿಯುತ್ತದೆ. ಇತರ ಪ್ರಾಣಿಗಳಿಗೂ ಕುದುರೆಗೂ ಒಂದು ವ್ಯತ್ಯಾಸವಿದೆ. ಎಲ್ಲಾ ಪ್ರಾಣಿಗಳೂ ವಿಶ್ರಾಮದ ಕಾಲದಲ್ಲಿ ನಿಶ್ಚಲವಾಗಿ ನಿಲ್ಬಬಲ್ಲವು. ಆದರೆ ಕುದುರೆ ಒಂದು ಕ್ಷಣವೂ ನಿಶ್ಚಲವಾಗಿ ನಿಲ್ಲದು. ಈ ಜಗತ್ತೂ ಕೂಡಾ ಅಶ್ವದಂತೆ. ಇದು ಎಂದೂ ಸ್ಥಿರವಾಗಿ ನಿಲ್ಲುವುದಿಲ್ಲ. (2) ಅಶ್ವತ್ಥ -ಇಲ್ಲಿ 'ಶ್ವ' ಅಂದರೆ ನಾಳೆ, द" ಅಂದರೆ ಇರುವಂಥದ್ದು. ಅಶ್ವತ್ಥ ಅಂದರೆ “ನ ಶ್ವ ತಿಷ್ಠತಿ”. ಇಂದು ಇದೆ ಆದರೆ ನಾಳೆ ಇರುತ್ತದೆ ಎನ್ನುವ ಖಾತರಿ ಇಲ್ಲ. ಅಂದರೆ ಈ ಪ್ರಪಂಚ ಕ್ಷಣಿಕ. ಕಠೋಪನಿಷತ್ತಿನಲ್ಲಿ ಯಮ- ನಚಿಕೇತನಲ್ಲಿ “ನಿನಗೆ ಯಾವ ಸುಖಭೋಗ ಬೇಕಿದ್ದರೂ ಕೊಡುತ್ತೇನೆ” ಎಂದಾಗ, ನಚಿಕೇತ ಹೇಳುತ್ತಾನೆ: “ಶ್ಟೋಭಾವಾ ಮರ್ತ್ಯಸ್ಯ ಯದಂತಕ್ಕೆತತ್‌.. ಸರ್ವೇಂದ್ರಿಯಾಣಾಂ ಜರಯಂತಿ ತೇಜಃ” ಎಂದು(೧-೨೬). “ಸದಾ ಬದಲಾಗುತ್ತಿರುವ ಕ್ಷಣಿಕವಾದ ಈ ಪ್ರಪಂಚದಲ್ಲಿ, ನಮ್ಮನ್ನು ಕಿತ್ತು ತಿನ್ನುವ ಭೋಗ ನನಗೆ ಬೇಡ, ಬದಲಿಗೆ ಜ್ಞಾನವನ್ನು ಕೊಡು” ಎಂದು ನಚಿಕೇತ ಕೇಳುತ್ತಾನೆ. ಬದಲಾವಣೆಯೇ ಜಗದ ನಿಯಮ. (೪) ಅಶ್ವತ್ಥದ ಶಾಸ್ತ್ರೀಯ ನಿರ್ವಚನ ಅರ್ಥವನ್ನು ನೋಡಿದರೆ(60/7101001080/)- ಅಶು*ವಾ*ತ*ಥ. ಇಲ್ಲಿ ಅಶು*ವಾ ಎಂದರೆ ಎಲ್ಲಕ್ಕಿಂತ ವೇಗವಾಗಿ ಹೋಗುವಂತಹದ್ದು-ಅದು ಭಗವಂತ. ಅದಕ್ಕಾಗಿ ಭಗವಂತನನ್ನು "ಅಶ್ವ' ಎಂದೂ ಕರೆಯುತ್ತಾರೆ. ಕುದುರೆ ಮುಖದ ಹಯಗ್ರೀವ ರೂಪದಲ್ಲಿ ಭಗವಂತ ಸಮಸ್ತ ವೇದ ವಿದ್ಯೆಯನ್ನು ಪ್ರಪಂಚಕ್ಕೆ ಕೊಟ್ಟ. ಎಲ್ಲವನ್ನೂ ಎಲ್ಲಕ್ಕೆಂತ ಮೊದಲು ತಿಳಿದ ಭಗವಂತ ಈ ಜಗತ್ತಿನಲ್ಲಿ, ಇದರ ಒಳಗೂ ಹೊರಗೂ ನಿಯಮನ ಮಾಡುವುದಕ್ಕೋಸ್ಕರ 'ಅಶ್ವ' ನಾಮಕನಾಗಿ ಕೂತಿದ್ದಾನೇತ್ಛ). ಈತ ಇಡೀ ಪ್ರಪಂಚದಲ್ಲಿ 'ತತ'(ತುಂಬಿದ್ದಾನೆ) ಮತ್ತು ಕೊನೆಗೆ ಇಡೀ ಜಗತ್ತು ಆತನಿಗೆ ಥಂ.(ಥಂ ಆಹಾರ -ಇಡೀ ಜಗತ್ತನ್ನು ಕಬಳಿಸುವ ಶಕ್ತಿ, ಇದು ಪ್ರಳಯದ ವಿವರಣೆ). ಇವು ನಾವು ‘VIZ ಎನ್ನುವ ಪದದಲ್ಲಿ ಕಾಣಬಹುದಾದ ಅರ್ಥ. ಈ ರೀತಿ ಒಂದು ಪದದಲ್ಲಿ ಅನೇಕ ವಿಷಯಗಳನ್ನು ತುಂಬಿಸಲು ಬೇರೆ ಯಾವ ಭಾಷೆಯಲ್ಲೂ ಸಾಧ್ಯವಿಲ್ಲ. ಅದಕ್ಕಾಗಿ ಸಂಸ್ಕೃತವನ್ನು ಗರ್ಭಿಣಿ (ಅರ್ಥಗರ್ಭಿತ) ಭಾಷೆ ಎನ್ನುತ್ತಾರೆ. ಇಲ್ಲಿ ಹೇಳಿದ ಮರದ ಕಲ್ಪನೆ ಮತ್ತು ವಿವರಣೆ ಬೈಬಲ್‌ ನಲ್ಲಿ ಕೂಡಾ ಕಾಣಬಹುದು. ಅಲ್ಲಿ ಅವರು ಮರಕ್ಕೆ “The Garden of Eden” ಎಂದಿದ್ದಾರೆ. ಅಲ್ಲಿ ಹೇಳುತ್ತಾರೆ: but of the tree of the knowledge of good and evil, you shall not eat of it; for in the day that you eat of it you will surely die." ಅಂದರೆ: “ಈ ಮರ ಹಣ್ಣು ಬಿಡುತ್ತದೆ; ಈ ಹಣ್ಣನ್ನು ತಿಂದರೆ ನೀನು ಸಾಯುತ್ತೀಯ” ಎಂದು. ಇಲ್ಲಿ ಹಣ್ಣು ಅಂದರೆ ಅದು ಕರ್ಮಫಲ. ಕರ್ಮಫಲ ಅಪೇಕ್ಷೆ(66118೧6) ಮಾಡುವವ ಸಾವಿಲ್ಲದ ಮೋಕ್ಷವನ್ನು ಪಡೆಯಲಾರ. ಆತ ನಿರಂತರ ಹುಟ್ಟು ಸಾವಿನ ಚಕ್ರದಲ್ಲಿ ಸುತ್ತುತ್ತಾನೆ ಎನ್ನುವುದು ಈ ಸಾಲಿನ ಒಳಾರ್ಥ. “ಪ್ರಾಹುಃ ಅವ್ಯಯಮ್‌” ಎನ್ನುವಲ್ಲಿ करे ಎಂದರೆ ತಿಳಿದು ಹೇಳುವುದು. “ವೇದಕಾಲದ ಖುಷಿಗಳು ಈ ಪ್ರಪಂಚ ಒಂದು ಅಶ್ವತ್ಥ ಎಂದು ತಿಳಿದು ಹೇಳಿದ್ದಾರೆ” ಎನ್ನುತ್ತಾನೆ ಕೃಷ್ಣ. “ಈ ಪ್ರಪಂಚ ನಶ್ವರ, ಒಂದು ದಿನ ನಾಶವಾಗುವಂತಹದ್ದು” ಎಂದು ಹೇಳಿ, ತಕ್ಷಣ ಕೃಷ್ಣ ಹೇಳುತ್ತಾನೆ-“ಇದು ಅವ್ಯಯ” ಎಂದು! ಅಂದರೆ ನಾಶವಿಲ್ಲದ್ದು! ಇದು ಅರ್ಥವಾಗಬೇಕಾದರೆ ನಾವು ಸಮುದ್ರ ತಡಿಯಲ್ಲಿ ಹೋಗಿ ಕುಳಿತು ಅಲ್ಲಿ ಬರುವ ತೆರೆಗಳನ್ನು ಗಮನಿಸಬೇಕು. ಪ್ರತಿಯೊಂದು ತೆರೆಯೂ ಕೂಡಾ ಅಬ್ಬರದಿಂದ ಬರುತ್ತದೆ. ಅಲ್ಲಿ ಯಾವ ತೆರೆಯೂ ಶಾಶ್ವತವಲ್ಲ. ಎಲ್ಲಾ ತೆರೆಯೂ ಕ್ಷಣಿಕ. ಆದರೆ ಸಮುದ್ರದಲ್ಲಿ ತೆರೆ ಇಲ್ಲದ ಕ್ಷಣವಿಲ್ಲ. ಅದು ಅವ್ಯಯ. ಅದೇ ರೀತಿ ಒಂದು ಪ್ರಪಂಚ ನಾಶವಾಗುತ್ತದೆ, ಇನ್ನೊಂದು ಪ್ರಪಂಚ ಹುಟ್ಟುತ್ತದೆ. ಪ್ರಪಂಚ ನಾಶವಾಗಬಹುದು ಆದರೆ ಪ್ರಪಂಚದ ಪ್ರವಾಹ ನಿರಂತರ. ಒಂದು ಪ್ರಳಯದ ನಂತರ ಇನ್ನೊಂದು ಸೃಷ್ಟಿ; ಸೃಷ್ಟಿಯ ನಂತರ ಪ್ರಳಯ-ಇದು ನಿರಂತರ. ಆದ್ದರಿಂದ ಪ್ರಪಂಚ ಅವ್ಯಯ; ಜೀವ ಅನಾದಿ ಅನಂತ; ಹುಟ್ಟು ಸಾವು ನಿರಂತರ. ಜೀವ-ಜಡಗಳ ಸಮಾಗಮ ಜನನ; ಅದರ ಬೇರ್ಪಡುವಿಕೆ ಮರಣ. ಇಲ್ಲಿ ಎಲ್ಲವೂ ನಿರಂತರ ಬದಲಾವಣೆಯನ್ನು ಕಾಣುತ್ತದೆ. ಒಟ್ಟಿನಲ್ಲಿ ಈ ಜಗತ್ತು ಅಳಿವಿರದ ಅಶ್ವತ್ಥ. QQ “5 ಮರದ ಮೂಲ ಮೇಲಿದೆ(ಊರ್ಧ್ವಮೂಲ)” ಎಂದಿದ್ದಾರೆ. ಮೇಲೆ ಅಂದರೆ ಎಲ್ಲಕ್ಕೆಂತ ಹಿರಿದಾದ ಭಗವಂತ. ಈ ಪ್ರಪಂಚ ಅನ್ನುವ ಮರಕ್ಕೆ ಮೂಲ ಆ ಭಗವಂತ. ಪ್ರಪಂಚದ ಮೂಲದಲ್ಲಿ ಎಲ್ಲಕ್ಕಿಂತ ಎತ್ತರದಲ್ಲಿ ತಂದೆ-ತಾಯಿಯಾಗಿ ಲಕ್ಷ್ಮೀ-ನಾರಾಯಣರಿದ್ದಾರೆ. ಜಡಪ್ರಕೃತಿಯಿಂದ ಈ ಮರ ವಿಕಸನವಾಗುತ್ತದೆ. ಭಗವಂತನಿಂದ ಚತುರ್ಮುಖಬ್ರಹ್ಮ(ಮಹತತ್ವ), ವಾಯು, ಗರುಡ-ಶೇಷ-ರುದ್ರರು(ಆಹಂಕಾರ ತತ್ವ), ಇಂದ್ರಾದಿ ದೇವತೆಗಳು, ಅವಾಂತರ ದೇವತೆಗಳು, ಗಂಧರ್ವರು, ಮನುಷ್ಯರು, ಪ್ರಾಣಿಗಳು, ಪಕ್ಷಿಗಳು, ಹೀಗೆ ಒಂದರ ನಂತರ ಒಂದು ಶಾಖೆಗಳು ಸೃಷ್ಟಿಯಾದವು. ಇವೆಲ್ಲವೂ ಸೇರಿ ಒಂದು ಮರವಾಯಿತು. ಇಲ್ಲಿ "ಅಧಃ ಶಾಖಮ್‌' ಅಂದರೆ ಮೇಲಿನಿಂದ ಕೆಳಕ್ಕೆ ಬೆಳೆಯುವುದು. ಇದು ದೇವತಾ ತಾರತಮ್ಯವನ್ನು ಸೂಚಿಸುತ್ತದೆ ಮರದ ಟೊಂಗೆ-ಟಿಸಿಲಿನ ನಂತರ ಅದರ ಎಲೆಗಳು. “ಈ ಮರದ ಎಲೆಗಳೇ ವೇದಗಳು” ಎನ್ನುತ್ತಾನೆ ಕೃಷ್ಣ. ನಮಗೆ ತಿಳಿದಂತೆ ಪ್ರಪಂಚಕ್ಕೆ ಎರಡು ಮುಖ. ಒಂದು ನಾಮಾತ್ಮಕ ಪ್ರಪಂಚ, ಇನ್ನೊಂದು ರೂಪಾತ್ಮಕ ಪ್ರಪಂಚ. ಇಲ್ಲಿ ರೂಪಾತ್ಮಕ ಪ್ರಪಂಚ ಟೊಂಗೆ-ಟಿಸಿಲುಗಳಾದರೆ, ನಾಮಾತ್ಮಕ ಪ್ರಪಂಚ ಮರದ ಎಲೆ. ಮೊಟ್ಟ ಮೊದಲು ನಾಮಾತ್ಮಕ ಪ್ರಪಂಚದಲ್ಲಿ ಸೃಷ್ಟಿಯಾದದ್ದು ವೇದಗಳು. ವಸ್ತುವಿಗೆ ಒಂದು ಹೆಸರು ಕೊಟ್ಟಿರುವುದು ಈ ವೇದದಲ್ಲಿರುವ ವೈದಿಕ ಶಬ್ದಗಳು. ಸರ್ವೇಷಾಂ ತ ಸ ನಾಮಾನಿ ಕರ್ಮಾಣಿ ಚ ಪೃಥಕ್‌ ಪೃಥಕ್‌ ವೇದಶಬ್ದೇಭ್ಯ OTT? ಪೃಥಕ್‌ ಸಂಸ್ಥಾಶ್ಚ ನಿರ್ಮಮೇ [ಮನುಸ್ಮೃತಿ ೧-೨೧॥ ವೇದದಲ್ಲಿ ಏನು ಶಬ್ದಗಳಿವಿಯೋ ಅವು ಮೂಲತಃ ಭಗವಂತನ ನಾಮಗಳು. ಅದನ್ನೇ ಲೋಕಕ್ಕೆ ಬಳಸಿದರು. ಈ ರೀತಿ ಶಬ್ದಗಳ ಸೃಷ್ಟಿಯಾಯಿತು. ಅದೇ ಛಂದಸ್ಸು. ವೇದ ಮಂತ್ರಗಳು-ವೇದವಾಹ್ಮಯಗಳೇ ಈ ಮರದ ಎಲೆಗಳು. ಏಕೆ ವೇದವನ್ನು ಇಲ್ಲಿ ಎಲೆಗೆ ಹೋಲಿಸಿದರು ಎಂದರೆ, ಒಂದು ಮರ ಹೂ-ಹಣ್ಣು ಕೊಡಬೇಕಾದರೆ ಅಲ್ಲಿ ಫಲಪ್ರದತ್ವ ಇರುವುದು ಎಲೆಗೆ. ಹಾಗೇ ನಮಗೆ ಅಧ್ಯಾತ್ಮ ಸಾಧನೆಯ ಫಲವನ್ನು ಕೊಡತಕ್ಕವು ವೇದಗಳು. ಈ ಕಾರಣಕ್ಕಾಗಿ ಮರವನ್ನು ವಿಶ್ವಕ್ಕೆ ಹೋಲಿಸಿದರೆ, ಮರದ ಎಲೆಯನ್ನು ವೇದಗಳಿಗೆ ಹೋಲಿಸಿದ ಕೃಷ್ಣ. ಪ್ರಳಯಕಾಲದಲ್ಲಿ ಮರ ನಾಶವಾಗುತ್ತದೆ. ಆದರೆ ಮರದ ಎಲೆ ನಾಶವಾಗುವುದಿಲ್ಲ. ಆದ್ದರಿಂದ 'ಪ್ರಳಯ ಕಾಲದಲ್ಲಿ ಭಗವಂತ ಆಲದ ಎಲೆಯ ಮೇಲೆ ಮಲಗಿರುತ್ತಾನೆ'-ಎನ್ನುತ್ತಾರೆ. ವೇದ ನಿತ್ಯ ಅದಕ್ಕೆ ನಾಶವಿಲ್ಲ. ಎಲೆಯ ಮೇಲೆ ಭಗವಂತ ಮಲಗಿದ ಎಂದರೆ ವೇದ ವಾಚ್ಯನಾಗಿ ಮಲಗಿದ ಎಂದರ್ಥ. ಪ್ರಳಯಕಾಲದಲ್ಲಿ ವೇದಗಳಿದ್ದವು ಎನ್ನುವುದು ಇದರಿಂದ ತಿಳಿಯುತ್ತದೆ. ಇಲ್ಲಿ ನಮಗೆ ಒಂದು ಪ್ರಶ್ನೆ ಬರಬಹುದು. ಯಾವ ವಸ್ತುವೂ ಇಲ್ಲದೇ ಇದ್ದಾಗ ವೇದಗಳಿದ್ದವು ಅಂದರೆ ಏನು ಅರ್ಥ? ಅಗ್ನಿಮೀಳೇ ಪುರೋಹಿತಂ... ಎನ್ನುವಲ್ಲಿ ಅಗ್ನಿಯೂ ಇಲ್ಲ, ಪುರೋಹಿತನೂ ಇಲ್ಲ. ಹೀಗಿರುವಾಗ ಯಾರು ವೇದವನ್ನು ಹೇಳುವವರು ಮತ್ತು ವೇದಗಳು ಪ್ರಳಯ ಕಾಲದಲ್ಲಿ ಯಾರನ್ನು ಹೇಳುತ್ತವೆ? ಪ್ರಳಯ ಕಾಲದಲ್ಲಿ ವೇದಗಳಿಗೆ ಭಗವಂತನೊಬ್ಬನೇ ಅರ್ಥ. ಇನ್ಯಾವ ಅರ್ಥವೂ ಇಲ್ಲ. ಹಾಗಾಗಿ ವೇದದಲ್ಲಿನ ಸರ್ವ ಶಬ್ದವೂ ಭಗವಂತನನ್ನು ಹೇಳುತ್ತವೆ. “ನಾಮಾನಿ ಸರ್ವಾಣಿ ಯಮಾ ವಿಷಂತಿ ತಮ್‌ ವೈ ವಿಷ್ಣುಂ ಪರಮ ಉದಾಹರಂತಿ”- ಯಾರಲ್ಲಿ ಎಲ್ಲಾ ಶಬ್ದಗಳು ಪ್ರವೇಶ ಮಾಡುತ್ತವೋ-ಅವನು ವಿಷ್ಣು. ಆತ ಸರ್ವ ಶಬ್ದವಾಚ್ಯ. ವಿಷ್ಣು ಅಂದರೆ “ವಿಷಂತಿ ಸರ್ವಾಣಿ ನಾಮಾನಿ ಅತ್ರ”. ಐತರೇಯ ಅರಣ್ಯಕದಲ್ಲಿ ಹೇಳುವಂತೆ: “ಸರ್ವೇ ಘೋಷಾಃ ಸರ್ವೇ ವೇದಾಃ ಸರ್ವಾಃ ರಚಃ ಎಕೈವ ವ್ಯಾಹೃತಿಃ...” ಪ್ರಕೃತಿಯಲ್ಲಿನ ಸರ್ವಶಬ್ದಗಳು, ಸರ್ವ ನಾದಗಳು ಭಗವಂತನನ್ನು ಹೇಳುತ್ತವೆ. ಹೀಗಾಗಿ ಪ್ರಳಯ ಕಾಲದಲ್ಲಿ ವೇದಾಭಿಮಾನಿನಿ ಲಕ್ಷ್ಮಿ ವೇದವನ್ನು ಹಾಡುತ್ತಿರುತ್ತಾಳೆ(ಶ್ರುತಿಗೀತ) ಮತ್ತು ಭಗವಂತ ಕೇಳುತ್ತಿರುತ್ತಾನೆ. ಇದು ನಾಮಾತ್ಮಕ ಪ್ರಪಂಚದ ಪರಿಕಲ್ಪನೆ. ಕೃಷ್ಣ ಹೇಳುತ್ತಾನೆ. “ಇಲ್ಲಿ ಹೇಳಿದ ವಿಚಾರವನ್ನು ಯಾರು ತಿಳಿಯುತ್ತಾರೋ ಅವರು ಸಮಸ್ತ ವೇದವನ್ನು ತಿಳಿದಂತೆ” ಎಂದು.
Bibek Debroy (1955–2024)The Bhagavad Gita
(1) Bhagavan1 said: ‘They say the asbvattha tree,2 with a root above and branches below, is indestructible. He who knows that its leaves are the metres3 knows the truth.’