यदादित्यगतं तेजो जगद्भासयतेऽखिलम् ।
यच्चन्द्रमसि यच्चाग्नौ तत्तेजो विद्धि मामकम् ॥
yadādityagataṃ tejo jagadbhāsayate'khilam |
yaccandramasi yaccāgnau tattejo viddhi māmakam ||
Swami Sivananda (1887–1963)Bhagavad Gita
12. That light which residing in the sun, illumines the whole world, that which is in the
moon and in the fire—know that light to be Mine.
Bannanje Govindacharya (1936–2020)Bhagavad Gita Pravachana
ಯತ್ ಆದಿತ್ಯಗತಮ್ ತೇಜಃ ಜಗತ್ ಭಾಸಯತೇ ಅಖಿಲಮ್ |
ಯತ್ ಚಂದ್ರಮಸಿ ಯತ್ ಚ ಅಗ್ನೌ ತತ್ ತೇಜಃ ವಿದ್ಧಿ ಮಾಮಕಮ್ -ಸೂರ್ಯನಲ್ಲಿದ್ದು ವಿಶ್ವವನ್ನೆಲ್ಲಾ ಬೆಳಗುವ
ಬೆಳಕು, ಚಂದ್ರನಲ್ಲಿ, ಬೆಂಕಿಯಲ್ಲಿ ಕೂಡಾ, ಅದು ನನ್ನದೇ ಬೆಳಕೆಂದು ತಿಳಿ.
ಹಿಂದೆ-ಸೂರ್ಯನಾಗಲೀ, ಚಂದ್ರನಾಗಲೀ, ಅಗ್ನಿಯಾಗಲೀ ನನ್ನನ್ನು ಬೆಳಗಿಸುವುದಿಲ್ಲ ಎಂದಿದ್ದ ಕೃಷ್ಣ, ಇಲ್ಲಿ
ಸೂರ್ಯ ಬೆಳಗುವುದು, ಚಂದ್ರ ಬೆಳಗುವುದು, ಅಗ್ನಿ ಬೆಳಗುವುದು -ಎಲ್ಲವೂ ನನ್ನಿಂದ ಎನ್ನುತ್ತಾನೆ. ಎಲ್ಲಾ ಬೆಳಕಿನ
ಮೂಲ ಬೆಳಕು ಭಗವಂತ. ಬೆಳಕಿನ ಮೂಲಗಳೆಂದರೆ ಸೂರ್ಯ, ಚಂದ್ರ, ನಕ್ಷತ್ರ, ಮಿಂಚು, ವಿದ್ಯುತ್ ಹಾಗೂ
ಅಗ್ನಿ. ಈ ಎಲ್ಲಾ ಬೆಳಕಿನ ಪುಂಜಗಳಿಗೆ ಬೆಳಕನ್ನು ಕೊಡುವನು ಆ ಭಗವಂತ. ಅಂದರೆ "ಸೂರ್ಯನಿಂದ ಹಿಡಿದು,
ಚಂದ್ರ ತಾರೆಗಳಾಗಲೀ, ಆಕಾಶದಲ್ಲಿ ಬೆಳಗುವ ಮಿಂಚಿರಲೀ, ಅಥವಾ ಉರಿಯುವ ಅಗ್ನಿಯಾಗಲೀ, ಈ ಎಲ್ಲಾ
ಬೆಳಕಿನ ಪುಂಜಗಳು ಬೆಳಗುವುದು ಭಗವಂತನೆಂಬ ಮೂಲ ಬೆಳಕಿನಿಂದ. ಯಾವ ಬೆಳಕು ನಮ್ಮ
ಸ್ವರೂಪದೊಳಗೆ. ಅಣೋರಣೀಯವಾಗಿ ನಿಂತು. ನಮ್ಮನ್ನು ನಡೆಸುತ್ತಿದೆಯೋ, ಅದೇ ಬೆಳಕು
ಮಹತೋಮಹಿಯಾಗಿ ಇಡೀ ಬ್ರಹ್ಮಾಂಡವನ್ನು ಬೆಳಗಿಸುತ್ತಿದೆ. ಒಟ್ಟಿನಲ್ಲಿ ಎಲ್ಲಾ ಬೆಳಕುಗಳ ಮೂಲ ತೇಜಸ್ಸು ಆ
ಭಗವಂತ. ಉಪನಿಷತ್ಕಾರರು ಇಂತಹ ಮಹಾ ಬೆಳಕಿನ ಬಗ್ಗೆ ವಿವರಿಸುತ್ತಾ ಹೇಳುತ್ತಾರೆ: “..ಯದೇತದ್
ವಿದ್ಯುತೋ ವ್ಯದ್ಯುತದಾ ಇತಿ.” ಎಂದು (ಕೇನ-೪.೪). ಅವರು ಇಲ್ಲಿ ಈ ಬೆಳಕನ್ನು 'ಆ-ಇತಿ' ಎನ್ನುತ್ತಾರೆ.
ಅಂದರೆ ಇದೊಂದು 'ವಿಸ್ಮಯ' ಎಂದರ್ಥ. ತಿಳಿಯುವ ತನಕ ಆಶ್ಚರ್ಯ, ತಿಳಿದ ಮೇಲೆ ಆನಂದ.
ಉಪಾಸನೆಯ ದೃಷ್ಟಿಯಲ್ಲಿ ಈ ಶ್ಲೋಕವನ್ನು ನೋಡಿದರೆ: ಸೂರ್ಯನಲ್ಲಿರುವ ತೇಜಸ್ಸು-ನಾರಾಯಣನ
ತೇಜಸ್ಸು, ಚಂದ್ರನಲ್ಲಿರುವ ತೇಜಸ್ಸು-ಧನ್ವಂತರಿಯ ತೇಜಸ್ಸು, ಅಗ್ನಿಯಲ್ಲಿರುವ ತೇಜಸ್ಸು-ಪರಶುರಾಮನ
ತೇಜಸ್ಸು. ಹೀಗೆ ಪ್ರತಿಯೊಂದು ಬೆಳಕಿನ ಮೂಲ ಬೆಳಕು ಭಗವಂತ ಎಂದು ನಾವು ಈ ಶ್ಲೋಕದಿಂದ ಉಪಾಸನೆ
Bibek Debroy (1955–2024)The Bhagavad Gita
(12)
‘The energy in the sun that lights up the entire world, that in the moon and
that too in the fire, know that energy to be mine.’