15.11

यतन्तो योगिनश्चैनं पश्यन्त्यात्मन्यवस्थितम् ।
यतन्तोऽप्यकृतात्मानो नैनं पश्यन्त्यचेतसः ॥
yatanto yoginaścainaṃ paśyantyātmanyavasthitam |
yatanto'pyakṛtātmāno nainaṃ paśyantyacetasaḥ ||
Swami Sivananda (1887–1963)Bhagavad Gita
11. The Yogis striving (for perfection) behold Him dwelling in the Self; but, the unrefined and unintelligent, even though striving, see Him not.
Sri Vishwesha Tirtharu (1931–2019)Gitasaroddhara
15.7–15.11 · ಮಮೈವಾಂಶೋ ಜೀವಲೋಕೇ
ಮಮೈವಾಂಶೋ ಜೀವಲೋಕೇ ಈ ಜಗದ್‌ವೃಕ್ಷದ ಸಾರಸರ್ವಸ್ವವೇ ಪರಮಾತ್ಮನಾಗಿದ್ದು ಅವನಿಲ್ಲದೆ ಈ ಜಗತ್ತಿಗೆ ಅಸ್ತಿತ್ವಪ್ರವೃತ್ತಿಗಳೇ ಇಲ್ಲ. ಅವನ ಶಕ್ತಿಗುಣಗಳು ಅವಾರ ಅಪರಿಮಿತ. ಈಃ ವಿಶ್ವವೆಲ್ಲ ಅವನ ಶಕ್ತಿಯ ಅನಂತಸೂರ್ಯ ಮಂಡಲದಮುಂದೆ ಒಂದು ಚಿಕ್ಕ ಕಿಡಿ. ಪಾದೋಸಸ್ಯ ವಿಶ್ವಾ ಭೂತಾನಿ - ಪುರುಷಸೂಕ್ತ ಅವನು ಜ್ಞಾನಗುಣಗಳ ಅನಂತಸಾಗರನಾಗಿದ್ದರೆ ಜೀವನು ಬರೇ ಒಂದು ಬಿಂದು. ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ । ಬ್ರಹ್ಮ ಮತ್ತು ಜಗತ್ತಿಗೂ ಜೀವ ಮತ್ತು ಈಶ್ವರನಿಗೂ ಇಂತಹ ಮಹದಂತರವಿದೆ. ಪರಮಾತ್ಮನ ಅನಂತಗುಣಗಳ ದೃಷ್ಟಿಯಲ್ಲಿ ಜೀವನು ಬರೇ ಅಂಶಮಾತ್ರ. ಅವನ ಪೂರ್ಣತೆಯ ಮುಂದೆ ಜೀವಮತ್ತು ಜಗತ್ತಿನ ಅಲ್ಪತೆಯ ದರ್ಶನವಾಗುವುದು. ಜೀವರು ಬ್ರಹ್ಮನ ಒಂದು ಭಾಗವೆಂದೂ ಕೆಲವರ ಕಲ್ಪನೆ ಇದೆ. ಪ್ರಕೃತಿಯ ಹಿಡಿತಕ್ಕೆ ಸಿಲುಕಿ ದುಃಖ, ಅಜ್ಞಾನ, ಮೋಹಗಳಿಗೆ ಒಳಗಾಗಿ ಸಂಕಟಗ್ರಸ್ತನಾದ ಜೀವನು ಪ್ರಕೃತಿಗೆ ಅತೀತನಾದ ಪರಮಾತ್ಮನ ಒಂದು ಭಾಗವಾಗಿರುವುದು ಹೇಗೆ ಸಾಧ್ಯ? ಅಪೂರ್ಣರೂ ವಿಕಾರವಶರೂ ಆದ ಜೀವರೆಲ್ಲರೂ ಬ್ರಹ್ಮನ ತುಣುಕುಗಳಾಗಿದ್ದಲ್ಲಿ ಅವನ ಪೂರ್ಣತೆ, ನಿರ್ವಿಕಾರತೆಗಳಿಗೆ ತಿಲಾಂಜಲಿಯನ್ನೇ ಇತ್ತಂತಾಗುವುದು. ಅಖಂಡ ಬ್ರ್ಟನಿಗೆ ಅನೇಕ ಅಂಶಗಳನ್ನು ಒಪ್ಪಿ ಅವುಗಳನ್ನೆಲ್ಲ ಪ್ರಕೃತಿಯ ಬವಣೆಗೆ ಒಳಪಡಿಸುವುದೆಂದರೆ ಪರಬ್ರಹ್ಮತತ್ತ್ವ ವನ್ನೇ ನಿರಾಕರಿಸಿದಂತಾಗುವುದು. ಆದುದರಿಂದ ಜೀವನು ಬ್ರಹ್ಮನ ಅನಂತಗುಣರಾಶಿಗಳ ಎದುರಿಗೆ ಒಂದು ಕಣಮಾತ್ರವೆಂಬ ಅಭಿಪ್ರಾಯ ದಿಂದಲೇ ಜೀವನನ್ನು ಬ್ರಹ್ಮನ ಅಂಶನೆಂದು ಇಲ್ಲಿ ಉಲ್ಲೇಖಿಸಲಾಗಿದೆ. ತನ್ನಲ್ಲಿರುವ ಹಣವು ಲಕ್ಷಾಧೀಶರಾದ ಶ್ರೀಮಂತರ ಸಂಪತ್ತಿ ನ ಒಂದಂಶ ಮಾತ್ರವೆಂದರೆ ಅವರ ತಿಜೋರಿಯಲ್ಲಿರುವ ಹಣದ ಒಂದು ಭಾಗವು ಈತನಲ್ಲಿದೆ ಎಂದು ಯಾರೂ ಭಾವಿಸುವುದಿಲ್ಲ. ತನ್ನ ಮತ್ತು ಆ ಶ್ರೀಮಂತರಸಂಪತ್ತುಗಳಲ್ಲಿರುವ ಅಂತರವನ್ನು ಸ್ಪಷ್ಟಪಡಿಸಲು "ಅಂಶ' ಪದವನ್ನು ಇಲ್ಲಿ ಬಳನಲಾಗಿದೆ. ಜೀವನು ಭಗವಂತನ ಅಂಶನೆಂಬುದನ್ನು ಈ ದೃಷ್ಟಿಯಿಂದಲೇ ನಾವು ಅರ್ಥಮಾಡಿಕೊಳ್ಳಬೇಕು. ಇರಲಿ, ಈ ಅಲ್ಪಶಕ್ತಿಯ ಜೀವನು ತನ್ನ ಕೈ ಮೀರಿದ ಪ್ರಕೃತಿಯ ಬಂಧನದಿಂದ ಬಿಡುಗಡೆ ಹೊಂದಲು ಶಕ್ತಿಯ ಮಹಾಮೇರುವಾದ ಅನಂತಗುಣಸಾಗರನಾದ ಪರಮಾತ್ಮನ ಆಸರೆಯನ್ನು ಪಡೆಯಲೇಬೇಕು. ಜಗತ್ತಿನ ಭೌತಿಕಸುಖಸಾಮಗ್ರಿಯನ್ನೇ ಹುಡುಕುವ ಬದಲು ಭಗವಂತನನ್ನೇ ಅರಸಬೇಕು. ನಮ್ಮ ಸಕಲ ಕ್ರಿಯೆಗಳಲ್ಲಿಯೂ ನಮ್ಮ ಜೊತೆಗಾರನಾಗಿ, ನಮ್ಮ ಸಾರಥಿಯಾಗಿ, ಪರಮಾತ್ಮನು ನಮ್ಮೊಡನಿದ್ದರೂ ನಮ್ಮ ಅಪರಿಪಕ್ವ ಮನಸ್ಸಿಗೆ ಅವನ ಜ್ಞಾನವು ಉದಯಿಸುವುದಿಲ್ಲ. ಯತಂತೋಶಪ್ಯಕ್ಕತಾತ್ಥಾನೋ ನೈನಂ ಪಠ್ಯಂತ್ಯಚೇತಸಃ | ಕರ್ಮಯೋಗ ಭಕ್ತಿಯೋಗಗಳಿಂದ ಹೃದಯಸಂಸ್ಕಾರವನ್ನು ಪಡೆದವನೇ ಪರಮಾತ್ಮನನ್ನು ಕಾಣುವ ಭಾಗ್ಯಶಾಲಿಯೆನಿಸುವನು. ಒಂದು ಕೊಡ ನೀರಿ ನಲ್ಲಿದ್ದ ಸಕ್ಕರೆಯನ್ನು ವಿಜ್ಞಾನಿ ಪೃಥಕ್ಕರಿಸಿ ತೆಗೆಯಬಲ್ಲನು. ಸಾಮಾನ್ಯಜನರು ಅದರಲ್ಲಿಯ ಸಕ್ಕರೆಯನ್ನು ಹೇಗೆ ತೋರಿಸಬಲ್ಲರು? ಭಗವಂತನು ನಮ್ಮ ಸಹಚಾರಿಯಾಗಿದ್ದ ರೂ ನಮ್ಮ ದೃಷ್ಟಿ ಯು ಆಕಡೆ ಹರಿಯುವುದೇ ಇಲ್ಲ. ಪರಾಂಚಿ ಖಾನಿ ವೃತ್ಯಣತ್‌ ಸ್ವಯಂಭೂಃ ತಸ್ಮಾತ್‌ ಪರಾಕ್‌ ಪಶ್ಯತಿ ನಾಂತರಾತೃ ನ್‌। -ಕಠೋಪನಿಷತ್‌ ನಮ್ಮ ಇಂದ್ರಿಯಗಳಲ್ಲವೂ ಬಹಿರ್ಮುಖಗಳಾಗಿದ್ದು ನಮ್ಮಲ್ಲಿ ಬಾಹ್ಯ ದೃಷ್ಟಿಯೇ ಅತಿಯಾಗಿದೆ. ಅಂತರ್ದ್ಯಷ್ಟಿಯನ್ನು ಬೆಳೆಸಿಕೊಳ್ಳುವ ಪ್ರಯತ್ನದಲ್ಲಿ ಜನರು ಬಹಳ ಹಿಂದುಳಿದಿದ್ದಾರೆ. ಇಂದ್ರಿಯಗಳ ಸಹಜವಾದ ಪ್ರವಾಹದ ತಕ್ಕ ವಿರುದ್ಧವಾಗಿ ಈಸಬಲ್ಲ ಧೀರನೇ ಈ ಅಂತರ್ದ್ಯಷ್ಟಿಯನ್ನು ಪಡೆಯು ವಲ್ಲಿಯಶಸ್ವಿಯಾದಾನು. ಅಂತೂ ಈ ಜಗದ್ವಕ್ಷದಲ್ಲಿ ಬೀಡುಬಿಟ್ಟಿರುವನಾವು ಅದರ ಆಂತರ, ಬಾಹ್ಯಗಳನ್ನೆಲ್ಲ ಅರಿತು ಅದರ ಆಧಾರಶಕ್ತಿಯನ್ನು ಅರಿಯಲು ಪೂರ್ಣಪ್ರಯತ್ನವನ್ನು ಕೈಗೊಂಡು ಜೀವನದಸಾರ್ಥಕತೆಯನ್ನು ಪಡೆಯಬೇಕು.
Bannanje Govindacharya (1936–2020)Bhagavad Gita Pravachana
ಯತಂತಃ ಯೋಗಿನಃ ಚ ಎನಮ್‌ ಪಶ್ಯಂತಿ ಆತ್ಮನಿ ಅವಸ್ಥಿತಮ್‌ | ಯತಂತಃ ಅಪಿ ಅಕೃತ ಆತ್ಮಾನಃ ನ ಏನಮ್‌ ಪಶ್ಯಂತಿ ಅಚೇತಸಃ -ಪ್ರಯತ್ನಶೀಲರಾದ ಸಾಧಕರು- ತಮ್ಮೊಳಗಿರುವ “ಇವನನ್ನು' ಕಾಣುತ್ತಾರೆ. ತಿಳಿಯಾದ ತಿಳಿವಿರದ ತಿಳಿಗೇಡಿಗಳು ಪ್ರಯತ್ನಿಸಿಯೂ ಇವನನ್ನು ಕಾಣಲಾರರು. ಭಗವಂತನನ್ನು ಕಾಣಬೇಕಾದರೆ ಕೇವಲ ಶಾಸ್ತ್ರಾಭ್ಯಾಸ ಮಾಡಿದರೆ ಸಾಲದು. ಜ್ಞಾನ ಪಡೆದು ಜ್ಞಾನದಿಂದ ನಿರಂತರ ಸಾಧನೆ ಅಗತ್ಯ. ಧ್ಯಾನ ಯೋಗದಿಂದ ನಿರಂತರ ಭಗವಂತನನ್ನು ಕಾಣುವ ಪ್ರಯತ್ನ ಮಾಡಿದಾಗ- ಆತ್ಮಸಾಕ್ಷಾತ್ಕಾರವಾಗುತ್ತದೆ[ಧ್ಯಾನದ ಕುರಿತು ಅಧ್ಯಾಯ ಆರರಲ್ಲಿ ಈಗಾಗಲೇ ನಾವು ಸಾಕಷ್ಟು ಚರ್ಚಿಸಿದ್ದೇವೆ]. ಭಗವಂತನನ್ನು ಕಾಣಲು ನಮ್ಮ ಪ್ರಯತ್ನದೊಂದಿಗೆ ಆತನ ಅನುಗ್ರಹವೂ ಬೇಕು. ಇಲ್ಲದಿದ್ದರೆ ಯಾವ ಮಹಾಪ್ರಯತ್ನದಿಂದಲೂ ಭಗವಂತನನ್ನು ಕಾಣಲು ಸಾಧ್ಯವಿಲ್ಲ. ಉದಾಹರಣೆಗೆ ನಾವು ಹೊಲವನ್ನು ಚೆನ್ನಾಗಿ ಉತ್ತು, ಹದಗೊಳಿಸಿ, ಗೊಬ್ಬರ ಹಾಕಿ ಉತ್ತಮ ದರ್ಜೆಯ ಬೀಜ ಬಿತ್ತಬಹುದು, ಆದರೆ ಮಳೆ ಸರಿಯಾಗಿ ಬಾರದಿದ್ದರೆ? ಅತಿ ಮಳೆ ಬಂದು ಕೊಚ್ಚಿಕೊಂಡು ಹೋದರೆ? ಇದೆಲ್ಲವೂ ದೈವಾನುಗ್ರಹ. ಅದಕ್ಕಾಗಿ ನಿರಂತರ ಪ್ರಯತ್ನದೊಂದಿಗೆ ಭಗವಂತನಲ್ಲಿ ಶರಣಾಗತಿ ಬಹಳ ಮುಖ್ಯ. “ನನ್ನ ಮನಸ್ಸನ್ನು ಸ್ವಚ್ಛಮಾಡು, ಸ್ವಚ್ಛವಾದ ಮನಸ್ಸಿನಲ್ಲಿ ನೀನು ಬಂದು ನೆಲೆಸು” ಎಂದು ಆ ಭಗವಂತನನ್ನು ಪ್ರಾರ್ಥಿಸಬೇಕು. ಶುದ್ಧವಾದ ಸಾತ್ವಿಕ ಮನಸ್ಸಿಗೆ 'ವಸುದೇವ' ಎನ್ನುತ್ತಾರೆ. ಆ ವಸುದೇವನಿಗೆ ಕಾಣಿಸಿಕೊಳ್ಳುವ ಭಗವಂತ ವಾಸುದೇವ. ಸಮಸ್ತಶಾಸ್ತ್ರ ಓದಿ ಅಶುದ್ಧಮನಸ್ಸಿನವನಾಗಿದ್ದರೆ (ಅಕೃತಾತ್ಮ-ಅಶುದ್ಧ ಬುದ್ಧಯಃ)- ಎಷ್ಟೇ ಪ್ರಯತ್ನ ಮಾಡಿದರೂ ಭಗವಂತ ಒಲಿಯಲಾರ. ಇದನ್ನೇ 'ಮಡಿ' ಎನ್ನುವುದು. ಮಾನಸಿಕವಾಗಿ ಮಡಿಯಾಗಿ ನಾವು ಪ್ರಯತ್ನ ಮಾಡಬೇಕು. “ನಿರಂತರ ಜ್ಞಾನಪೂರ್ವಕ ಪ್ರಯತ್ನದಿಂದ ನಿನ್ನ ಅತ್ಯಂತ ಸಮೀಪವಿರುವ, ನಿನ್ನಂತರಂಗದೊಳಗೆ ನಿನ್ನ ಜೀವಸ್ವರೂಪದೊಳಗಿರುವ ಭಗವಂತನನ್ನು ಕಾಣು” ಎನ್ನುತ್ತಾನೆ. ಕೃಷ್ಣ. ಹಿಂದಿನ ಶ್ಲೋಕದಲ್ಲಿ ಅಯಮೌ(ಎದುರಿಗಿರುವ) ಎಂದ ಕೃಷ್ಣ, ಇಲ್ಲಿ "ಏನಮ್‌'(ನಿನ್ನ ಅತ್ಯಂತ ಸಮೀಪವಿರುವ) ಎಂದ. ನಾವು ಭಗವಂತನನ್ನು ಎಲ್ಲೋ ಹುಡುಕುವುದು ಬೇಡ. ಆತ ನಮ್ಮ ಜೀವ ಸ್ವರೂಪದೊಳಗೇ ಬಿಂಬ ರೂಪನಾಗಿ ನೆಲೆಸಿದ್ದಾನೆ. ಆತನ ನೆಲೆಯಾದ ನಮ್ಮ ಜೀವಸ್ವರೂಪವನ್ನು ತಿಳಿದಾಗ ಆತ ನಮಗೆ ಕಾಣಿಸುತ್ತಾನೆ.
Bibek Debroy (1955–2024)The Bhagavad Gita
(11) ‘Careful18 yogis, established in the atman, see this. Despite care, those who are not established in the atman and are without consciousness don’t see this.’