15.10

उत्क्रामन्तं स्थितं वापि भुञ्जानं वा गुणान्वितम् ।
विमूढा नानुपश्यन्ति पश्यन्ति ज्ञानचक्षुषः ॥
utkrāmantaṃ sthitaṃ vāpi bhuñjānaṃ vā guṇānvitam |
vimūḍhā nānupaśyanti paśyanti jñānacakṣuṣaḥ ||
Swami Sivananda (1887–1963)Bhagavad Gita
10. The deluded do not see Him who departs, stays and enjoys; but they who possess the eye of knowledge behold Him.
Sri Vishwesha Tirtharu (1931–2019)Gitasaroddhara
15.7–15.11 · ಮಮೈವಾಂಶೋ ಜೀವಲೋಕೇ
ಮಮೈವಾಂಶೋ ಜೀವಲೋಕೇ ಈ ಜಗದ್‌ವೃಕ್ಷದ ಸಾರಸರ್ವಸ್ವವೇ ಪರಮಾತ್ಮನಾಗಿದ್ದು ಅವನಿಲ್ಲದೆ ಈ ಜಗತ್ತಿಗೆ ಅಸ್ತಿತ್ವಪ್ರವೃತ್ತಿಗಳೇ ಇಲ್ಲ. ಅವನ ಶಕ್ತಿಗುಣಗಳು ಅವಾರ ಅಪರಿಮಿತ. ಈಃ ವಿಶ್ವವೆಲ್ಲ ಅವನ ಶಕ್ತಿಯ ಅನಂತಸೂರ್ಯ ಮಂಡಲದಮುಂದೆ ಒಂದು ಚಿಕ್ಕ ಕಿಡಿ. ಪಾದೋಸಸ್ಯ ವಿಶ್ವಾ ಭೂತಾನಿ - ಪುರುಷಸೂಕ್ತ ಅವನು ಜ್ಞಾನಗುಣಗಳ ಅನಂತಸಾಗರನಾಗಿದ್ದರೆ ಜೀವನು ಬರೇ ಒಂದು ಬಿಂದು. ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ । ಬ್ರಹ್ಮ ಮತ್ತು ಜಗತ್ತಿಗೂ ಜೀವ ಮತ್ತು ಈಶ್ವರನಿಗೂ ಇಂತಹ ಮಹದಂತರವಿದೆ. ಪರಮಾತ್ಮನ ಅನಂತಗುಣಗಳ ದೃಷ್ಟಿಯಲ್ಲಿ ಜೀವನು ಬರೇ ಅಂಶಮಾತ್ರ. ಅವನ ಪೂರ್ಣತೆಯ ಮುಂದೆ ಜೀವಮತ್ತು ಜಗತ್ತಿನ ಅಲ್ಪತೆಯ ದರ್ಶನವಾಗುವುದು. ಜೀವರು ಬ್ರಹ್ಮನ ಒಂದು ಭಾಗವೆಂದೂ ಕೆಲವರ ಕಲ್ಪನೆ ಇದೆ. ಪ್ರಕೃತಿಯ ಹಿಡಿತಕ್ಕೆ ಸಿಲುಕಿ ದುಃಖ, ಅಜ್ಞಾನ, ಮೋಹಗಳಿಗೆ ಒಳಗಾಗಿ ಸಂಕಟಗ್ರಸ್ತನಾದ ಜೀವನು ಪ್ರಕೃತಿಗೆ ಅತೀತನಾದ ಪರಮಾತ್ಮನ ಒಂದು ಭಾಗವಾಗಿರುವುದು ಹೇಗೆ ಸಾಧ್ಯ? ಅಪೂರ್ಣರೂ ವಿಕಾರವಶರೂ ಆದ ಜೀವರೆಲ್ಲರೂ ಬ್ರಹ್ಮನ ತುಣುಕುಗಳಾಗಿದ್ದಲ್ಲಿ ಅವನ ಪೂರ್ಣತೆ, ನಿರ್ವಿಕಾರತೆಗಳಿಗೆ ತಿಲಾಂಜಲಿಯನ್ನೇ ಇತ್ತಂತಾಗುವುದು. ಅಖಂಡ ಬ್ರ್ಟನಿಗೆ ಅನೇಕ ಅಂಶಗಳನ್ನು ಒಪ್ಪಿ ಅವುಗಳನ್ನೆಲ್ಲ ಪ್ರಕೃತಿಯ ಬವಣೆಗೆ ಒಳಪಡಿಸುವುದೆಂದರೆ ಪರಬ್ರಹ್ಮತತ್ತ್ವ ವನ್ನೇ ನಿರಾಕರಿಸಿದಂತಾಗುವುದು. ಆದುದರಿಂದ ಜೀವನು ಬ್ರಹ್ಮನ ಅನಂತಗುಣರಾಶಿಗಳ ಎದುರಿಗೆ ಒಂದು ಕಣಮಾತ್ರವೆಂಬ ಅಭಿಪ್ರಾಯ ದಿಂದಲೇ ಜೀವನನ್ನು ಬ್ರಹ್ಮನ ಅಂಶನೆಂದು ಇಲ್ಲಿ ಉಲ್ಲೇಖಿಸಲಾಗಿದೆ. ತನ್ನಲ್ಲಿರುವ ಹಣವು ಲಕ್ಷಾಧೀಶರಾದ ಶ್ರೀಮಂತರ ಸಂಪತ್ತಿ ನ ಒಂದಂಶ ಮಾತ್ರವೆಂದರೆ ಅವರ ತಿಜೋರಿಯಲ್ಲಿರುವ ಹಣದ ಒಂದು ಭಾಗವು ಈತನಲ್ಲಿದೆ ಎಂದು ಯಾರೂ ಭಾವಿಸುವುದಿಲ್ಲ. ತನ್ನ ಮತ್ತು ಆ ಶ್ರೀಮಂತರಸಂಪತ್ತುಗಳಲ್ಲಿರುವ ಅಂತರವನ್ನು ಸ್ಪಷ್ಟಪಡಿಸಲು "ಅಂಶ' ಪದವನ್ನು ಇಲ್ಲಿ ಬಳನಲಾಗಿದೆ. ಜೀವನು ಭಗವಂತನ ಅಂಶನೆಂಬುದನ್ನು ಈ ದೃಷ್ಟಿಯಿಂದಲೇ ನಾವು ಅರ್ಥಮಾಡಿಕೊಳ್ಳಬೇಕು. ಇರಲಿ, ಈ ಅಲ್ಪಶಕ್ತಿಯ ಜೀವನು ತನ್ನ ಕೈ ಮೀರಿದ ಪ್ರಕೃತಿಯ ಬಂಧನದಿಂದ ಬಿಡುಗಡೆ ಹೊಂದಲು ಶಕ್ತಿಯ ಮಹಾಮೇರುವಾದ ಅನಂತಗುಣಸಾಗರನಾದ ಪರಮಾತ್ಮನ ಆಸರೆಯನ್ನು ಪಡೆಯಲೇಬೇಕು. ಜಗತ್ತಿನ ಭೌತಿಕಸುಖಸಾಮಗ್ರಿಯನ್ನೇ ಹುಡುಕುವ ಬದಲು ಭಗವಂತನನ್ನೇ ಅರಸಬೇಕು. ನಮ್ಮ ಸಕಲ ಕ್ರಿಯೆಗಳಲ್ಲಿಯೂ ನಮ್ಮ ಜೊತೆಗಾರನಾಗಿ, ನಮ್ಮ ಸಾರಥಿಯಾಗಿ, ಪರಮಾತ್ಮನು ನಮ್ಮೊಡನಿದ್ದರೂ ನಮ್ಮ ಅಪರಿಪಕ್ವ ಮನಸ್ಸಿಗೆ ಅವನ ಜ್ಞಾನವು ಉದಯಿಸುವುದಿಲ್ಲ. ಯತಂತೋಶಪ್ಯಕ್ಕತಾತ್ಥಾನೋ ನೈನಂ ಪಠ್ಯಂತ್ಯಚೇತಸಃ | ಕರ್ಮಯೋಗ ಭಕ್ತಿಯೋಗಗಳಿಂದ ಹೃದಯಸಂಸ್ಕಾರವನ್ನು ಪಡೆದವನೇ ಪರಮಾತ್ಮನನ್ನು ಕಾಣುವ ಭಾಗ್ಯಶಾಲಿಯೆನಿಸುವನು. ಒಂದು ಕೊಡ ನೀರಿ ನಲ್ಲಿದ್ದ ಸಕ್ಕರೆಯನ್ನು ವಿಜ್ಞಾನಿ ಪೃಥಕ್ಕರಿಸಿ ತೆಗೆಯಬಲ್ಲನು. ಸಾಮಾನ್ಯಜನರು ಅದರಲ್ಲಿಯ ಸಕ್ಕರೆಯನ್ನು ಹೇಗೆ ತೋರಿಸಬಲ್ಲರು? ಭಗವಂತನು ನಮ್ಮ ಸಹಚಾರಿಯಾಗಿದ್ದ ರೂ ನಮ್ಮ ದೃಷ್ಟಿ ಯು ಆಕಡೆ ಹರಿಯುವುದೇ ಇಲ್ಲ. ಪರಾಂಚಿ ಖಾನಿ ವೃತ್ಯಣತ್‌ ಸ್ವಯಂಭೂಃ ತಸ್ಮಾತ್‌ ಪರಾಕ್‌ ಪಶ್ಯತಿ ನಾಂತರಾತೃ ನ್‌। -ಕಠೋಪನಿಷತ್‌ ನಮ್ಮ ಇಂದ್ರಿಯಗಳಲ್ಲವೂ ಬಹಿರ್ಮುಖಗಳಾಗಿದ್ದು ನಮ್ಮಲ್ಲಿ ಬಾಹ್ಯ ದೃಷ್ಟಿಯೇ ಅತಿಯಾಗಿದೆ. ಅಂತರ್ದ್ಯಷ್ಟಿಯನ್ನು ಬೆಳೆಸಿಕೊಳ್ಳುವ ಪ್ರಯತ್ನದಲ್ಲಿ ಜನರು ಬಹಳ ಹಿಂದುಳಿದಿದ್ದಾರೆ. ಇಂದ್ರಿಯಗಳ ಸಹಜವಾದ ಪ್ರವಾಹದ ತಕ್ಕ ವಿರುದ್ಧವಾಗಿ ಈಸಬಲ್ಲ ಧೀರನೇ ಈ ಅಂತರ್ದ್ಯಷ್ಟಿಯನ್ನು ಪಡೆಯು ವಲ್ಲಿಯಶಸ್ವಿಯಾದಾನು. ಅಂತೂ ಈ ಜಗದ್ವಕ್ಷದಲ್ಲಿ ಬೀಡುಬಿಟ್ಟಿರುವನಾವು ಅದರ ಆಂತರ, ಬಾಹ್ಯಗಳನ್ನೆಲ್ಲ ಅರಿತು ಅದರ ಆಧಾರಶಕ್ತಿಯನ್ನು ಅರಿಯಲು ಪೂರ್ಣಪ್ರಯತ್ನವನ್ನು ಕೈಗೊಂಡು ಜೀವನದಸಾರ್ಥಕತೆಯನ್ನು ಪಡೆಯಬೇಕು.
Bannanje Govindacharya (1936–2020)Bhagavad Gita Pravachana
ಉತ್‌ ಕ್ರಾಮಂತಮ್‌ ಸ್ಥಿತಮ್‌ ವಾ ಅಪಿ ಭುಂಜಾನಮ್‌ ವಾ ಗುಣ ಅನ್ವಿತಮ್‌ | ವಿಮೂಢಾಃ ನ ಅನುಪಶ್ಯಂತಿ ಪಶ್ಯಂತಿ ಜ್ಞಾನ ಚಕ್ಷುಷಃ -ದೇಹ ತೊರೆದು ತೆರಳುವ, ದೇಹದಲ್ಲಿರುವ, ಅಥವಾ ಒಳಿತಿನ ಸಾರವನ್ನು ಸವಿಯುವ ಇವನನ್ನು ತಿಳಿಗೇಡಿಗಳು ತಿಳಿಯಲಾರರು. ತಿಳಿಗಣ್ಣು ತೆರೆದವರು ತಿಳಿಯಬಲ್ಲರು. ಈ ಶ್ಲೋಕದಲ್ಲಿ ಬಳಸಿರುವ 'ಗುಣಾನ್ವಿತಮ್‌' ಎನ್ನುವ ಪದ ಸ್ಪಷ್ಟವಾಗಿ ನಮಗೆ ತಿಳಿಸುತ್ತದೆ-ಇದು ಭಗವಂತನನ್ನು ಹೇಳುವ ಶ್ಲೋಕ ಎಂದು. ಜೀವನನ್ನು ದೇಹಕ್ಕೆ ತರುವ, ಎಚ್ಚರ ಕನಸು ನಿದ್ದೆ ಎನ್ನುವ ಮೂರು ಅವಸ್ಥೆಗಳಲ್ಲಿ ಜೀವನಿಗೆ ವಿಷಯ ಭೋಗವನ್ನು ಕೊಡುವ ಭಗವಂತ-ತಾನು ಸದಾ ಶುಭ ಭೋಗವನ್ನುಣ್ಣುವವ. ದೇಹದಿಂದ ಹೊರ ಹೋಗುವಾಗ, ದೇಹದಲ್ಲಿರುವಾಗ-ಎಲ್ಲವನ್ನು ಮಾಡಿಸುವವ ಆ ಭಗವಂತ. ಆತ ನಮ್ಮೊಳಗೇ ಇದ್ದರೂ ಕೂಡಾ ವಿಮೂಢರಿಗೆ ಇದು ತಿಳಿಯುವುದಿಲ್ಲ. ಜ್ಞಾನದ ಕಣ್ಣುತೆರೆದವರು ಮಾತ್ರ ಇದನ್ನು ತಿಳಿಯಬಲ್ಲರು. ಇಲ್ಲಿ ಕೃಷ್ಣ 'ವಿಮೂಢ' ಮತ್ತು 'ಜ್ಞಾನಚಕಷಃ' ಎನ್ನುವ ಎರಡು ವಿಶೇಷ ಪದಗಳನ್ನು ಬಳಸಿದ್ದಾನೆ. 'ಮೂಢರು' ಎಂದರೆ ಸತ್ಯವನ್ನು ತಪ್ಪಾಗಿ ತಿಳಿದವರು. ಇವರು ಯಥಾರ್ಥಜ್ಞಾನ ಮರೆಯಾಗಿ ವಿಪರೀತಜ್ಞಾನದಲ್ಲೇ ಬದುಕುತ್ತಿರುತ್ತಾರೆ. 'ವಿ-ಮೂಢ' ಎಂದರೆ ಎಂದೂ ತಮ್ಮ ತಪ್ಪನ್ನು ತಿಳಿಯದೇ, ತಪ್ಪನ್ನೇ ಸರಿಯೆಂದು ಸದಾ ವಿಪರೀತ ಜ್ಞಾನದಲ್ಲೇ ಬದುಕುವವರು. ಇವರಿಗೆ ಭಗವಂತನನ್ನು ಎಂದೆಂದಿಗೂ ತಿಳಿಯಲು ಸಾಧ್ಯವಿಲ್ಲ. ಭಗವಂತನನ್ನು ಕಾಣುವ ಕ್ಷಮತೆ ಉಳ್ಳವರು ಜ್ಞಾನಚಕ್ಷುಷರು. ಅಂದರೆ ಶಾಸ್ತ್ರವನ್ನು ಓದಿ ಅದರಿಂದ ಅರಿವಿನ ಒಳಗಣ್ಣು ತೆರೆದವರು. ಇವರು ಭಗವಂತನನ್ನು ತಿಳಿಯಬಲ್ಲರು ಮತ್ತು ತಮ್ಮ ಸ್ವರೂಪಭೂತವಾದ ಕಣ್ಣಿನಿಂದ ಭಗವಂತನನ್ನು ಕಾಣಬಲ್ಲರು.
Bibek Debroy (1955–2024)The Bhagavad Gita
(10) ‘The deluded do not see the establishment and also the enjoyment and progress, with the qualities as attributes.17 Those with eyes of wisdom, see this.’