15.9

श्रोत्रं चक्षुः स्पर्शनं च रसनं घ्राणमेव च ।
अधिष्ठाय मनश्चायं विषयानुपसेवते ॥
śrotraṃ cakṣuḥ sparśanaṃ ca rasanaṃ ghrāṇameva ca |
adhiṣṭhāya manaścāyaṃ viṣayānupasevate ||
Sri Madhvacharya (1238–1317)Bhagavad Gita Tatparya Nirnaya
भुङ्क्ते हरिः शुभान् भोगानिन्द्रियेषु व्यवस्थितः। पूर्णानन्दोऽपि भगवान् क्रीडया भुङ्क्त एव तु॥09॥
Swami Sivananda (1887–1963)Bhagavad Gita
9. Presiding over the ear, the eye, touch, taste and smell, as well as the mind, he enjoys the objects of the senses.
Sri Vishwesha Tirtharu (1931–2019)Gitasaroddhara
15.7–15.11 · ಮಮೈವಾಂಶೋ ಜೀವಲೋಕೇ
ಮಮೈವಾಂಶೋ ಜೀವಲೋಕೇ ಈ ಜಗದ್‌ವೃಕ್ಷದ ಸಾರಸರ್ವಸ್ವವೇ ಪರಮಾತ್ಮನಾಗಿದ್ದು ಅವನಿಲ್ಲದೆ ಈ ಜಗತ್ತಿಗೆ ಅಸ್ತಿತ್ವಪ್ರವೃತ್ತಿಗಳೇ ಇಲ್ಲ. ಅವನ ಶಕ್ತಿಗುಣಗಳು ಅವಾರ ಅಪರಿಮಿತ. ಈಃ ವಿಶ್ವವೆಲ್ಲ ಅವನ ಶಕ್ತಿಯ ಅನಂತಸೂರ್ಯ ಮಂಡಲದಮುಂದೆ ಒಂದು ಚಿಕ್ಕ ಕಿಡಿ. ಪಾದೋಸಸ್ಯ ವಿಶ್ವಾ ಭೂತಾನಿ - ಪುರುಷಸೂಕ್ತ ಅವನು ಜ್ಞಾನಗುಣಗಳ ಅನಂತಸಾಗರನಾಗಿದ್ದರೆ ಜೀವನು ಬರೇ ಒಂದು ಬಿಂದು. ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ । ಬ್ರಹ್ಮ ಮತ್ತು ಜಗತ್ತಿಗೂ ಜೀವ ಮತ್ತು ಈಶ್ವರನಿಗೂ ಇಂತಹ ಮಹದಂತರವಿದೆ. ಪರಮಾತ್ಮನ ಅನಂತಗುಣಗಳ ದೃಷ್ಟಿಯಲ್ಲಿ ಜೀವನು ಬರೇ ಅಂಶಮಾತ್ರ. ಅವನ ಪೂರ್ಣತೆಯ ಮುಂದೆ ಜೀವಮತ್ತು ಜಗತ್ತಿನ ಅಲ್ಪತೆಯ ದರ್ಶನವಾಗುವುದು. ಜೀವರು ಬ್ರಹ್ಮನ ಒಂದು ಭಾಗವೆಂದೂ ಕೆಲವರ ಕಲ್ಪನೆ ಇದೆ. ಪ್ರಕೃತಿಯ ಹಿಡಿತಕ್ಕೆ ಸಿಲುಕಿ ದುಃಖ, ಅಜ್ಞಾನ, ಮೋಹಗಳಿಗೆ ಒಳಗಾಗಿ ಸಂಕಟಗ್ರಸ್ತನಾದ ಜೀವನು ಪ್ರಕೃತಿಗೆ ಅತೀತನಾದ ಪರಮಾತ್ಮನ ಒಂದು ಭಾಗವಾಗಿರುವುದು ಹೇಗೆ ಸಾಧ್ಯ? ಅಪೂರ್ಣರೂ ವಿಕಾರವಶರೂ ಆದ ಜೀವರೆಲ್ಲರೂ ಬ್ರಹ್ಮನ ತುಣುಕುಗಳಾಗಿದ್ದಲ್ಲಿ ಅವನ ಪೂರ್ಣತೆ, ನಿರ್ವಿಕಾರತೆಗಳಿಗೆ ತಿಲಾಂಜಲಿಯನ್ನೇ ಇತ್ತಂತಾಗುವುದು. ಅಖಂಡ ಬ್ರ್ಟನಿಗೆ ಅನೇಕ ಅಂಶಗಳನ್ನು ಒಪ್ಪಿ ಅವುಗಳನ್ನೆಲ್ಲ ಪ್ರಕೃತಿಯ ಬವಣೆಗೆ ಒಳಪಡಿಸುವುದೆಂದರೆ ಪರಬ್ರಹ್ಮತತ್ತ್ವ ವನ್ನೇ ನಿರಾಕರಿಸಿದಂತಾಗುವುದು. ಆದುದರಿಂದ ಜೀವನು ಬ್ರಹ್ಮನ ಅನಂತಗುಣರಾಶಿಗಳ ಎದುರಿಗೆ ಒಂದು ಕಣಮಾತ್ರವೆಂಬ ಅಭಿಪ್ರಾಯ ದಿಂದಲೇ ಜೀವನನ್ನು ಬ್ರಹ್ಮನ ಅಂಶನೆಂದು ಇಲ್ಲಿ ಉಲ್ಲೇಖಿಸಲಾಗಿದೆ. ತನ್ನಲ್ಲಿರುವ ಹಣವು ಲಕ್ಷಾಧೀಶರಾದ ಶ್ರೀಮಂತರ ಸಂಪತ್ತಿ ನ ಒಂದಂಶ ಮಾತ್ರವೆಂದರೆ ಅವರ ತಿಜೋರಿಯಲ್ಲಿರುವ ಹಣದ ಒಂದು ಭಾಗವು ಈತನಲ್ಲಿದೆ ಎಂದು ಯಾರೂ ಭಾವಿಸುವುದಿಲ್ಲ. ತನ್ನ ಮತ್ತು ಆ ಶ್ರೀಮಂತರಸಂಪತ್ತುಗಳಲ್ಲಿರುವ ಅಂತರವನ್ನು ಸ್ಪಷ್ಟಪಡಿಸಲು "ಅಂಶ' ಪದವನ್ನು ಇಲ್ಲಿ ಬಳನಲಾಗಿದೆ. ಜೀವನು ಭಗವಂತನ ಅಂಶನೆಂಬುದನ್ನು ಈ ದೃಷ್ಟಿಯಿಂದಲೇ ನಾವು ಅರ್ಥಮಾಡಿಕೊಳ್ಳಬೇಕು. ಇರಲಿ, ಈ ಅಲ್ಪಶಕ್ತಿಯ ಜೀವನು ತನ್ನ ಕೈ ಮೀರಿದ ಪ್ರಕೃತಿಯ ಬಂಧನದಿಂದ ಬಿಡುಗಡೆ ಹೊಂದಲು ಶಕ್ತಿಯ ಮಹಾಮೇರುವಾದ ಅನಂತಗುಣಸಾಗರನಾದ ಪರಮಾತ್ಮನ ಆಸರೆಯನ್ನು ಪಡೆಯಲೇಬೇಕು. ಜಗತ್ತಿನ ಭೌತಿಕಸುಖಸಾಮಗ್ರಿಯನ್ನೇ ಹುಡುಕುವ ಬದಲು ಭಗವಂತನನ್ನೇ ಅರಸಬೇಕು. ನಮ್ಮ ಸಕಲ ಕ್ರಿಯೆಗಳಲ್ಲಿಯೂ ನಮ್ಮ ಜೊತೆಗಾರನಾಗಿ, ನಮ್ಮ ಸಾರಥಿಯಾಗಿ, ಪರಮಾತ್ಮನು ನಮ್ಮೊಡನಿದ್ದರೂ ನಮ್ಮ ಅಪರಿಪಕ್ವ ಮನಸ್ಸಿಗೆ ಅವನ ಜ್ಞಾನವು ಉದಯಿಸುವುದಿಲ್ಲ. ಯತಂತೋಶಪ್ಯಕ್ಕತಾತ್ಥಾನೋ ನೈನಂ ಪಠ್ಯಂತ್ಯಚೇತಸಃ | ಕರ್ಮಯೋಗ ಭಕ್ತಿಯೋಗಗಳಿಂದ ಹೃದಯಸಂಸ್ಕಾರವನ್ನು ಪಡೆದವನೇ ಪರಮಾತ್ಮನನ್ನು ಕಾಣುವ ಭಾಗ್ಯಶಾಲಿಯೆನಿಸುವನು. ಒಂದು ಕೊಡ ನೀರಿ ನಲ್ಲಿದ್ದ ಸಕ್ಕರೆಯನ್ನು ವಿಜ್ಞಾನಿ ಪೃಥಕ್ಕರಿಸಿ ತೆಗೆಯಬಲ್ಲನು. ಸಾಮಾನ್ಯಜನರು ಅದರಲ್ಲಿಯ ಸಕ್ಕರೆಯನ್ನು ಹೇಗೆ ತೋರಿಸಬಲ್ಲರು? ಭಗವಂತನು ನಮ್ಮ ಸಹಚಾರಿಯಾಗಿದ್ದ ರೂ ನಮ್ಮ ದೃಷ್ಟಿ ಯು ಆಕಡೆ ಹರಿಯುವುದೇ ಇಲ್ಲ. ಪರಾಂಚಿ ಖಾನಿ ವೃತ್ಯಣತ್‌ ಸ್ವಯಂಭೂಃ ತಸ್ಮಾತ್‌ ಪರಾಕ್‌ ಪಶ್ಯತಿ ನಾಂತರಾತೃ ನ್‌। -ಕಠೋಪನಿಷತ್‌ ನಮ್ಮ ಇಂದ್ರಿಯಗಳಲ್ಲವೂ ಬಹಿರ್ಮುಖಗಳಾಗಿದ್ದು ನಮ್ಮಲ್ಲಿ ಬಾಹ್ಯ ದೃಷ್ಟಿಯೇ ಅತಿಯಾಗಿದೆ. ಅಂತರ್ದ್ಯಷ್ಟಿಯನ್ನು ಬೆಳೆಸಿಕೊಳ್ಳುವ ಪ್ರಯತ್ನದಲ್ಲಿ ಜನರು ಬಹಳ ಹಿಂದುಳಿದಿದ್ದಾರೆ. ಇಂದ್ರಿಯಗಳ ಸಹಜವಾದ ಪ್ರವಾಹದ ತಕ್ಕ ವಿರುದ್ಧವಾಗಿ ಈಸಬಲ್ಲ ಧೀರನೇ ಈ ಅಂತರ್ದ್ಯಷ್ಟಿಯನ್ನು ಪಡೆಯು ವಲ್ಲಿಯಶಸ್ವಿಯಾದಾನು. ಅಂತೂ ಈ ಜಗದ್ವಕ್ಷದಲ್ಲಿ ಬೀಡುಬಿಟ್ಟಿರುವನಾವು ಅದರ ಆಂತರ, ಬಾಹ್ಯಗಳನ್ನೆಲ್ಲ ಅರಿತು ಅದರ ಆಧಾರಶಕ್ತಿಯನ್ನು ಅರಿಯಲು ಪೂರ್ಣಪ್ರಯತ್ನವನ್ನು ಕೈಗೊಂಡು ಜೀವನದಸಾರ್ಥಕತೆಯನ್ನು ಪಡೆಯಬೇಕು.
Bannanje Govindacharya (1936–2020)Bhagavad Gita Pravachana
ಶ್ರೋತ್ರಮ್‌ ಚಕ್ಷುಃ ಸ್ಪರ್ಶನಮ್‌ ಚ ರಸನಮ್‌ ಘ್ರಾಣಮ್‌ ಏವ ಚ | ಅಧಿಷ್ಠಾಯ ಮನಃ ಚ ಅಯಮ್‌ ವಿಷಯಾನ್‌ ಉಪಸೇವತೇ--ಿವಿ, ಕಣ್ಣು, ತೊಗಲು, ನಾಲಿಗೆ, ಮೂಗು ಮತ್ತು ಮನಸ್ಸಿನಲ್ಲಿ ನೆಲೆನಿಂತು 'ಇವನು' ವಿಷಯಗಳನ್ನು ಸವಿಯುತ್ತಾನೆ. ಭಗವಂತ ನಮ್ಮ ಪ್ರತಿಯೊಂದು ಇಂದ್ರಿಯದಲ್ಲಿ ನಿಯಾಮಕನಾಗಿ ಆಯಾ ರೂಪದಲ್ಲಿ ನಿಂತು, ವಿಷಯಗಳನ್ನು ದುಃಖದ ९१९८०९८ ಗ್ರಹಿಸುತ್ತಾನೆ ಮತ್ತು ನಮಗೆ ವಿಷಯದ ಅನುಭವವನ್ನು ಕೊಡುತ್ತಾನೆ. ಈ ಶ್ಲೋಕ ಭಗವಂತನನ್ನು ಹೇಳುವುದರಿಂದ ಇಲ್ಲಿ "ಉಪ-ಸೇವತೆ' ಮತ್ತು “ಅಧಿಷ್ಠಾಯ' ಎನ್ನುವ ಎರಡು ವಿಶೇಷ ಪದಗಳನ್ನು ಬಳಸಿದ್ದಾರೆ. ಉಪ ಅಂದರೆ -ಉಪರಿಎತ್ತರ. ನಾವು ಸುಖ-ದುಃಖದಲ್ಲಿ ಮುಳುಗಿ ವಿಷಯ ಭೋಗಿಸಿದರೆ, ಭಗವಂತ ಎಲ್ಲವನ್ನೂ ಮೀರಿನಿಂತು ದುಃಖದ ಲೇಪವಿಲ್ಲದೆ ಎಲ್ಲವನ್ನೂ ಅನುಭವಿಸುತ್ತಾನೆ. ಭಗವಂತ ಆಯಾ ಇಂದ್ರಿಯದಲ್ಲಿ ವಿಶೇಷ ರೂಪದಲ್ಲಿ ಸನ್ನಿಹಿತನಾಗಿ ನಿಯಮಿಸುವುದರಿಂದ ಇಲ್ಲಿ 'ಅಧಿಷ್ಠಾಯ' ಎನ್ನುವ ಪದವನ್ನು ಬಳಸಲಾಗಿದೆ. ಏವ ಮತ್ತು ಚ ಇವೆರಡನ್ನು ಈ ಶ್ಲೋಕದಲ್ಲಿ ಒಟ್ಟಾಗಿ ಬಳಸಲಾಗಿದೆ. ಇದು ಭಗವಂತನ ವಿಶೇಷ ಗುಣವನ್ನು ಬಿಂಬಿಸುತ್ತದೆ. ಆ-ಈ*-ವ*ಚ-ಏವಚ( set of ೩009೪೫೦೧೨-ಸ೦ಕ್ಷೇಪ-ಪದ)- ಅಂದರೆ ಯಾವುದೇ ದೋಷವಿಲ್ಲದ, ಸರ್ವಗುಣಗಳಿಂದ ಸಮುಚ್ಚಿತವಾದ ಜ್ಞಾನಾನಂದಮಯ ಭಗವಂತ.
Bibek Debroy (1955–2024)The Bhagavad Gita
(9) ‘This16 is established in the ears, the eyes, touch, the tongue, the nose and also the mind and enjoys objects.’