15.18

यस्मात्क्षरमतीतोऽहमक्षरादपि चोत्तमः ।
अतोऽस्मि लोके वेदे च प्रथितः पुरुषोत्तमः ॥
yasmātkṣaramatīto'hamakṣarādapi cottamaḥ |
ato'smi loke vede ca prathitaḥ puruṣottamaḥ ||
Sri Madhvacharya (1238–1317)Bhagavad Gita Tatparya Nirnaya
‘क्षराक्षरात्मनोर्यस्मादुत्तमः स सदाऽनयोः। पुरुषोत्तमनाम्नाऽतः प्रसिद्धो लोकवेदयोः’ इति नारायणश्रुतिः॥18॥
Swami Sivananda (1887–1963)Bhagavad Gita
18. As I transcend the perishable and am even higher than the imperishable, I am declared as the highest Purusha in the world and in the Vedas.
Sri Vishwesha Tirtharu (1931–2019)Gitasaroddhara
15.16–15.18 · ಪುರುಷೋತ್ತಮಯೋಗ
ಪುರುಷೋತ್ತಮಯೋಗ ಸಮಗ್ರ ಪ್ರವಂಚವನ್ನು ಜೀವ, ಜಡ, ಪರಮಾತ್ಮರೆಂದು ವಿಭಜಿಸಿದಂತೆ ಜೀವ-ಪರಮಾತ್ಮರ ಅನ್ಯೋನ್ಯ ಸಂಬಂಧದ ಸ್ಪಷ್ಟವಾದ ತಿಳುವಳಿಕೆಯು ಮೂಡುವ ಉದ್ದೇಶದಿಂದ ಚೇತನವರ್ಗದ ವಿಭಾಗವನ್ನು ಹದಿನೈದನೆಯ ಅಧ್ಯಾಯದಕೊನೆಯಲ್ಲಿ ಮಾಡಲಾಗಿದೆ. ಕ್ಷರಪುರುಷ್ಕ ಅಕ್ಷರಪುರುಷ ಮತ್ತು ಪುರುಷೋತ್ತಮರೆಂದು ಚೇತನರು ಮೂರುವಿಧ. ಈ ಪ್ರಾಕೃತವಾದ ಭೌತಿಕತರೀರವನ್ನು ಹೊಂದಿ ಸಂಸಾರದ ಜನನ ಮರಣ ಚಕ್ರದಲ್ಲಿ ತಿರುಗುವಸಕಲ ಜೀವರೂ ಕ್ಚರಪುರುಷರು. ಅನಾದಿಯಾದ ಜಡಪ್ರಕೃತಿಯ ಅಭಿಮಾನಿನಿಯಾಗಿ ಪರಮಾತ್ಮನ ಜಗದ್ವ್ವಾಪಾರದಲ್ಲಿ ಪ್ರಧಾನ ಸಹಕಾರಿಣಿಯಾದ ಅಪ್ರಾಕೃತ ಚೈತನ್ಯಾತ್ಮಕ ಶರೀರವುಳ್ಳ ಆಕಾಶದಂತೆ ನಿರ್ವಿಕಾರಳಾದ ಜಗನ್ಮಾತೆಯೇ ಅಕ್ಷರಪುರುಷ, ಇವರೆಲ್ಲರಿಗೂ ಅಧಿಪತಿಯಾದ ಪರಮಾತ್ಮನೇ ಪುರುಷೋತ್ತ ಮನು. ಚೇತನರ ವಿಭಾಗವನ್ನು ನಾವು ಈ ರೀತಿ ತಿಳಿದುಕೊಳ್ಳಬೇಕು. ದ್ವಾವಿಮೌ ಪುರುಷೌ ಲೋಕೇ ಕ್ಚರಶ್ಪಾಕ್ಷರ ಏವ ಚ॥ ಕ್ದರಃ ಸರ್ವಾಣಿ ಭೂತಾನಿ ಕೂಟಸ್ಕೋನರ ಉಚ್ಛತೇ ॥ ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ ॥ ವರಮಾತೃ, ಚಿತ್‌ಪ್ರಕೃತಿ ಇವರಿಬ್ಬರು ಜೀವವರ್ಗದ ತಂದೆ-ತಾಯಿ ಗಳಾಗಿದ್ದು ಜೀವವರ್ಗವೆಲ್ಲ ಅವರ ಪ್ರತ್ರಪರಿವಾರವೇಆಗಿದೆ. ಸ ತ್ಸೈಲೋಕ್ಕ ಕುಟುಂಬಹಾಲನಪರಃ । ದ ಮಂಗಲಾಷ್ಠಕ ಇಡೀ ಜಗತ್ತು ಪುರುಷೋತ್ತಮನ ಭವ್ಯಕುಟುಂಬವಾಗಿದೆ. ನಾವೆಲ್ಲರೂ ಈ ಕುಟುಂಬದಘಟಕರು. ಇದರಪೋಷಣೆ-ಪಾಲನೆಗಳನ್ನು ಮಾಡುವ ಪುರುಷೋ ತ್ರಮನು ವಿಶ್ವದ ಅಧಿದೇವತೆಯು. ಅವನ ಈ ಪ್ರಭುತ್ವವನ್ನು ಒಪ್ಪುವವರೆಲ್ಲರೂ ಪರಸ್ಪರಸಹೋದರರೆಂಬ ಭಾವನೆಯಿಂದ ನಾವು ವರ್ತಿಸಬೇಕು. ಕ್ಷರ-ಅಕ್ಷರರೆಂದರೆ ಜಡ ಜೀವರೆಂದು ಕೆಲವರ ಅಭಿಪ್ರಾಯವಿದೆ. ಈ ಶ್ಲೋಕದಲ್ಲಿರುವ ವುರುಷರಬ್ಧವನ್ನು ಗಮನಿಸಿದಾಗ ಇದು ಜೇತನ ವರ್ಗದ ವಿಭಾಗವೆಂದೇನಮಗೆ ಅನಿಸುತ್ತದೆ. ಏನೇ ಇರಲಿ, ಸಕಲ ಚೇತನರಿಂದಾಗಲಿ, ಜೀವ ಜಡಗಳಿಂದಾಗಲಿ ಭಿನ್ನನೂ ಉತ್ತಮನೂ ಆದ ಮಹಾನ್‌ ಆತ್ಮನೇ ಭಗವಂತನೆಂಬುದೂ ಅವನೇ ಶ್ರೀಕೃಷ್ಣನೆಂಬುದೂ ಇಲ್ಲಿ ಸ್ಪಷ್ಟವಿದೆ. ಉತ್ತಮಃ ಪುರುಷಸ್ತ್ವನ್ಯಃ ಅತೋಸಸ್ಕಿ ಲೋಕೇ ವೇದೇಚ ಪ್ರಥಿತಃ ಪುರುಷೋತ್ತಮಃ | ಈ ಶ್ಲೋಕಗಳು, ಸಕಲ ಚೇತನರಿಗಿಂತಲೂ ಭಗವಂತನಿಗೆ ಪ್ರತ್ಯೇಕವಾದ ಅಸ್ತಿತ್ವವನ್ನು ಪ್ರತಿಪಾದಿಸುತ್ತಿವೆಯಲ್ಲದೆ, ಸರ್ವರೋಕಧಾರಕನೂ ಸರ್ವೋ ತ್ತಮನೂ ಆದ ಆತನೇ ಶ್ರೀಕೃಷ್ಣನೆಂದೂ ಸ್ಪಷ್ಟಪಡಿಸುತ್ತವೆ. ಶ್ರೀಕೃಷ್ಣನು ಜಡ ಡೇವರಿಂದ ಅತೀತನಾದ ಪರಬ್ರಹ್ಮನಲ್ಲವೆಂದೂ ಕೆಲವರ ವಾದವಿದೆ. ಪರಬ್ರಹ್ಮನು ನಿರ್ಗುಣನಾಗಿರುವುದರಿಂದ ಗುಣಶಾಲಿಯಾದ ಕೃಷ್ಣನು ಪರಬ್ರಹ್ಮನಾಗಲಾರನು. ಪರಬ್ರಹ್ಮನಮಾಯೆಯ ಶಿಶುವೇ ೃತ್ಯನೆಂದು ಇವರ. ಆಶಯವಾಗಿದೆ. ಈ ಜಡ-ಜೀವರನ್ನು ಮೀರಿನಿಂತಿರುವ ಪುರುಷೋತ್ತಮನೇ ಶ್ರೀಕೃಷ್ಣನೆಂದು ಸಾರುವ ಈ ಭಾಗವು ಮೇಲಿನ ಭ್ರಮೆಯನ್ನು ಪೂರ್ಣವಾಗಿ ನಿರಸನ ಮಾಡಿದೆ. ಪುರುಷೋತ್ತಮ ತತ್ತ್ವವನ್ನು ಸಾರಿಹೇಳುವ ಈ ಭಾಗವು ಗೀತೆಯ ಸಾರಸಂದೇಶವಾಗಿದೆ. ಶ್ರೀಮಧ್ವಾಚಾರ್ಯರಿಗೆ ಬಹಳ ಪ್ರಿಯವಾದ ಭಾಗವಿದು. ಇದನ್ನು ಆಧರಿಸಿಯೇ ಭಗವಂತನ ಸರ್ವೋತ್ತಮತ್ತ್ವದ ಸಂದೇಶವನ್ನು ಅವರು ಘೋಷಿಸಿದ್ದಾರೆ. ಜೀವ-ಪರಮಾತ್ಮರ ಸಂಬಂಧವನ್ನೂ ಜೀವ-ಜಗತ್ತುಗಳನ್ನು ನಿಯಂತ್ರಿಸುವ ಪರಮಾತ್ಮನ ಮಹಾಶಕ್ತಿಯನ್ನೂ ನಿಸಂದಿಗೃಭಾಷೆಯಲ್ಲಿ ಇದು ಬೋಧಿಸಿದೆ. ಶ್ರೀಶಂಕರಾಚಾರ್ಯರೂ ಈ ಭಾಗವನ್ನು ಸಕಲ ಶಾಸ್ತ್ರದ ಸಾರವೆಂದು ಘೋಷಿಸಿರುವರು. ಸರ್ವೋ ಹಿ ಗೀತಾಶಾಸ್ತ್ರಾರ್ಥೋಂಸ್ಥಿನ್ನಧ್ಯಾಯೇ। ಸಮಾಸೇನೋಕ್ತಃ 1 ನ ಕೇವಲಂ ಗೀತಾಶಾಸ್ತ್ರಾರ್ಥ ಏವ, ಕಿಂತು ಸರ್ವಶ್ಚ ವೇದಾರ್ಥ ಇಹ ಪರಿಸಮಾಪ್ರಃ ॥ ಆದುದರಿಂದ ಗೀತೆಯ ಹೃದಯವೆನಿಸಿದ ವುರುಷೋತ್ತಮಯೋಗದ ಸಂದೇಶದಂತೆ ಈ ಜಗತ್ತನ್ನು ಶ್ರೀಹರಿಯ .ಅಧಿರಾಜ್ಯವೆಂದು ಭಾವಿಸಿ, ಆ ಸಾರ್ವಭೌಮ ದೇವತೆಯನ್ನು ಮರೆಯದೇ ಅವನ ನಿಷ್ಠ ಪ್ರಜೆಗಳಾಗಿ ನಮ್ಮ ಜೀವನವನ್ನು ರೂಪಿಸಲು ಯತ್ನಿಸುವುದು ಸಂಶಯಾತೀತವಾದ ನಿರಾಬಾಧ ವಾದಮಾರ್ಗವಾಗಿದೆ.
Bannanje Govindacharya (1936–2020)Bhagavad Gita Pravachana
ಸ್ಮಾತ್‌ ಕ್ಷರಮ್‌ ಅತೀತಃ ಅಹಮ್‌ ಅಕ್ಷರಾತ್‌ ಅಪಿ ಚ ಉತ್ತಮಃ | ಅತಃ ಅಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷ ಉತ್ತಮಃ -ನಾನು ಕ್ಷರವನ್ನು ಮೀರಿನಿಂತವನು. ಅಕ್ಷರಕ್ಕಿಂತಲೂ ಹಿರಿಯನು. ಅದಕೆಂದೇ ಲೋಕದಲ್ಲೂ ವೇದದಲ್ಲೂ 'ಪುರುಷೋತ್ತಮ' ಎಂದೇ ಹೆಸರಾಗಿದ್ದೇನೆ. ಹಿಂದಿನ ಶ್ಲೋಕದಲ್ಲಿ “ಯಾರು ಕ್ಷರಾಕ್ಷರಗಳಿಂದ ಅತೀತನೋ ಅವನು ಪುರುಷೋತ್ತಮ” ಎಂದು ಹೇಳಿದ ಕೃಷ್ಣ, ಇಲ್ಲಿ ನೇರವಾಗಿ “ಆ ಬೇರೆಯಾದ ಪುರುಷೋತ್ತಮ ನಾನೇ” ಎಂದು ಸ್ಪಷ್ಟವಾಗಿ ಹೇಳುತ್ತಾನೆ. ಮಧ್ವಾಚಾರ್ಯರು ವಿಷ್ಣುತತ್ವ ನಿರ್ಣಯದ ಮಂಗಳಾಚರಣೆಯಲ್ಲಿ ಹೇಳುತ್ತಾರೆ: “ಸದಾಗಮೈಕ ವಿಜ್ಞೇಯಂ, ಸಮತೀತ ಕ್ಷರಾಕ್ಷರಂ, ನಾರಾಯಣಂ ಸದಾ ವಂದೇ, ನಿರ್ದೋಷ ಅಶೇಷ ಸದ್ಗುಣಂ” ಎಂದು. ಇಲ್ಲಿ ಕ್ಷರ ಮತ್ತು ಅಕ್ಷರದಿಂದ ಅತೀತನಾದ ಭಗವಂತನನ್ನು ಅವರು “ಸಮತೀತ ಕ್ಷರಾಕ್ಷರಂ” ಎಂದು ಕರೆದಿದ್ದಾರೆ. ಈ ಶ್ಲೋಕದಲ್ಲಿ ಕ್ಷರದಿಂದ ಅತೀತ ಮತ್ತು ಅಕ್ಷರದಿಂದ ಉತ್ತಮ ಎಂದಿದೆ. ಇಲ್ಲಿ ಅತೀತ ಎಂದರೆ ಉತ್ತಮ. ಆದರೂ ಅತೀತ ಮತ್ತು ಉತ್ತಮ ಎಂದು ಎರಡು ಪದ ಬಳಕೆ ಮಾಡಿದ್ದಾರೆ. ಇದು ಒಂದು ವಿಶೇಷ ಅರ್ಥವನ್ನು ಕೊಡುತ್ತದೆ. ಕ್ಷರಪುರುಷನ ಅಸ್ತಿತ್ವದ ವ್ಯಾಪ್ತಿ ಈ ಬ್ರಹ್ಮಾಂಡದ ಒಳಗೆ. ಆದರೆ ಲಕ್ಷ್ಮೀ ನಾರಾಯಣರು ಈ ಬ್ರಹ್ಮಾಂಡವನ್ನು ಮೀರಿ ನಿಂತವರು. ಇದನ್ನು “ಅತೀತ' ಪದ ವಿವರಿಸುತ್ತದೆ. ಭಗವಂತ ಅಕ್ಷರಳಾದ ಲಕ್ಷ್ಮಿಗಿಂತಲೂ ಉತ್ತಮ. ಈ ಶ್ಲೋಕದಲ್ಲಿ ‘Wd ಮತ್ತು “ಚ-ಕಾರವನ್ನು' ಒಟ್ಟಿಗೆ ಬಳಸಲಾಗಿದೆ. ಇದು ಭಗವಂತನ ಸರ್ವಶ್ರೇಷ್ಠತ್ವವನ್ನು ಹೇಳುತ್ತದೆ. ಆತನಿಗಿಂತ ಶ್ರೇಷ್ಠವಾದ ತತ್ವ ಇನ್ನೊಂದಿಲ್ಲ. ಪುರುಷೋತ್ತಮ ಪದದ ಎಲ್ಲಾ ಮುಖದ ಅರ್ಥ ಕೇವಲ ಭಗವಂತನಲ್ಲಿ ಮಾತ್ರ ಅನ್ವಯವಾಗುತ್ತದೆ. ಕೃಷ್ಣ ಹೇಳುತ್ತಾನೆ: “ಲೋಕದಲ್ಲಿ ಮತ್ತು ವೇದದಲ್ಲಿ ಪುರುಷೋತ್ತಮ ಎಂದು ಕರೆದಿರುವುದು ನನ್ನನ್ನು” ಎಂದು. ಇಲ್ಲಿ ಲೋಕ ಎಂದರೆ ಪೌರುಷೇಯವಾದ ಪುರಾಣ ಗ್ರಂಥಗಳು. ಉದಾಹರಣೆಗೆ: ರಾಮಾಯಣ, ಮಹಾಭಾರತ, ಪಂಚರಾತ್ರ, ಪುರಾಣ, ಇತ್ಯಾದಿ. ಹೀಗೆ “ಪುರುಷೋತ್ತಮ” ಎನ್ನುವುದು ಪರಮ ಮುಖ್ಯವಾಗಿ ಕೇವಲ ಭಗವಂತನಿಗೆ ಮಾತ್ರ ಅನ್ವಯ.
Bibek Debroy (1955–2024)The Bhagavad Gita
(18) ‘Because I am beyond destruction and superior even to the indestructible, therefore, I am known as the Supreme Being27 in this world28 and in the Vedas.’