15.19

यो मामेवमसम्मूढो जानाति पुरुषोत्तमम् ।
स सर्वविद्भजति मां सर्वभावेन भारत ॥
yo māmevamasammūḍho jānāti puruṣottamam |
sa sarvavidbhajati māṃ sarvabhāvena bhārata ||
Swami Sivananda (1887–1963)Bhagavad Gita
19. He who, undeluded, knows Me thus as the highest Purusha, he, knowing all, worships Me with his whole being (heart), O Arjuna!
Bannanje Govindacharya (1936–2020)Bhagavad Gita Pravachana
ಸಃ ಸರ್ವವಿತ್‌.. ಭಜತಿ ಮಾಮ್‌. ಸರ್ವಭಾವೇನ ಭಾರತ -ಭ್ರಾಂತಿಯಳಿದು, ಹೀಗೆ ನನ್ನನ್ನು ಪುರುಷೋತ್ತಮನೆಂದು ತಿಳಿದವನು ಎಲ್ಲವನ್ನೂ ತಿಳಿದವನು. ಓ ಭಾರತಾ, ಎಲ್ಲಾ ಬಗೆಯಿಂದಲೂ ಅವನು ನನ್ನನ್ನೇ ಆರಾಧಿಸುತ್ತಾನೆ. ಯಃ ಮಾಮ್‌ ಏವಮ್‌ ಅಸಮ್ಮೂಢಃ ಜಾನಾತಿ ಪುರುಷೋತ್ತಮಮ್‌ | ಇಲ್ಲಿ ಹೇಳಿರುವ ವಿಚಾರಗಳನ್ನು ತಿಳಿದು ನಮಗೇನು ಲಾಭ ಎಂದು ಪ್ರಶ್ನೆ ಮಾಡುವವರಿಗೆ ಕೃಷ್ಣನ ಉತ್ತರ ಈ ಶ್ಲೋಕದಲ್ಲಿದೆ. ಕೃಷ್ಣ ಹೇಳುತ್ತಾನೆ: “ನನ್ನನ್ನು ಪುರುಷೋತ್ತಮ ಎಂದು ಅಹಂಕಾರವಿಲ್ಲದೆ, ಸ್ವಚ್ಛವಾದ ಮನಸ್ಸಿನಿಂದ, ಕೋಪವನ್ನು ಗೆದ್ದು, ಮೋಹವಳಿದು ತಿಳಿದವನು- ಎಲ್ಲವನ್ನೂ ತಿಳಿದವನು” ಎಂದು. ನಮಗೆ ಭಗವಂತನ ಅಸ್ತಿತ್ವ ಅರ್ಥವಾಗಬೇಕಾದರೆ ಮೊದಲು ಜಡಕ್ಕಿಂತ ಭಿನ್ನವಾದ 'ನಾನು' ಎನ್ನುವ ಚೇತನ ಈ ದೇಹದಲ್ಲಿದೆ. ಎಂದು ಅರ್ಥವಾಗಬೇಕು(೩॥೩೯೮7655 of self). ಹೀಗೆ ಆತ್ಮಸಾಕ್ಷಾತ್ಕಾರವಾದ ಮೇಲೆ, ಭಗವಂತನ ಬಿಂಬ ಸಾಕ್ಷಾತ್ಕಾರವಾಗುತ್ತದೆ. ಯಾರು ಭಗವಂತನನ್ನು ತಿಳಿಯುತ್ತಾನೋ, ಅವನು ಎಲ್ಲವನ್ನೂ ತಿಳಿಯಬಲ್ಲ. ಹೀಗಾಗಿ ನಾವು ಪ್ರಾಣಿಗಳಿಗಿಂತ ಬಿನ್ನವಾಗಿ ಜ್ಞಾನಿಗಳಾಗಿ ಬದುಕಬೇಕು. ಹೀಗೆ ಬದುಕಿದಾಗ ನಮಗೆ ದೇವರ ಮೇಲಿನ ಅಚಲ ಭಕ್ತೆ ಗಟ್ಟಿಗೊಳ್ಳುತ್ತದೆ. ಜ್ಞಾನಿ. ಎನಿಸಿದವ ತನ್ನ ಸರ್ವಸ್ವವನ್ನು ಕಳೆದುಕೊಂಡರೂ ಕೂಡಾ, “ಅದು ಭಗವಂತನ ಕರುಣೆ' ಎಂದು ಸ್ವೀಕರಿಸುತ್ತಾನೆ. ಅಜ್ಞಾನಿಯಲ್ಲಿ ಈ ದೃಢ ಭಕ್ತಿ ಇರದು. ಈ ರೀತಿ ದೃಢಭಕ್ತಿ ಮೂಡಬೇಕಾದರೆ ನಾವು “ಭಾರತ'ರಾಗಬೇಕು. ನಿರಂತರ ಜ್ಞಾನ ತೃಷೆ, ಜ್ಞಾನಿಗಳಲ್ಲಿ ಭಕ್ತಿ, ಭಗವದ್‌ ಭಕ್ತರಲ್ಲೇ ಹಿರಿಯರಾದ ಪ್ರಾಣದೇವರಲ್ಲಿ ಭಕ್ತಿ- ನಮ್ಮನ್ನು ಭಾರತರನ್ನಾಗಿ ಮಾಡಬಲ್ಲದು.
Bibek Debroy (1955–2024)The Bhagavad Gita
(19) ‘O descendant of Bharata!29 Without delusion, he who knows me as the Supreme Being, he is omniscient and worships me in every way.’