16.20

आसुरीं योनिमापन्ना मूढा जन्मनि जन्मनि ।
मामप्राप्यैव कौन्तेय ततो यान्त्यधमां गतिम् ॥
āsurīṃ yonimāpannā mūḍhā janmani janmani |
māmaprāpyaiva kaunteya tato yāntyadhamāṃ gatim ||
Sri Madhvacharya (1238–1317)Bhagavad Gita Tatparya Nirnaya
16.6–16.20
‘येऽति मानेन मन्यन्ते परमेशोऽहमित्यपि। मिथ्या जगदिदं सर्वं भ्रमजत्वान्न तिष्ठति। मिथ्यात्वान्नेश्वरोऽस्यास्ति परेभ्यो न च जायते। स्वस्मिन्नपि तथाऽन्यस्मिन् नियन्ताऽन्य इतीरिते। प्रद्विषन्त्यसुरास्ते तु सर्वे यान्त्यधरं तमः। अयोग्येशत्वकामाच्च लोभाच्चात्मसमर्पणे। तत्त्ववेदिषु कोपाच्च तमस्तेषां न दुर्लभम्। अक्षागमानुमानां च स्वोक्तेरपि विरोधिनः। यस्मात् तेऽतोऽसुरा ज्ञेया एवमन्येऽपि तादृशाः। ये तु विष्णुं परं ज्ञात्वा यजन्तेऽनन्यदेवताः। प्रत्यक्षाद्यविसंवादिज्ञानादेव विमुक्तिगाः’ इति ब्रह्मवैवर्ते। ‘निबन्धाय’ - नीचस्थानेऽन्धेतमसि बन्धाय। ‘सर्गाणां सुबहुत्वेऽपि शुभाशुभफलाधिकौ। देवासुराख्यौ द्वावेव गन्धर्वाद्यास्तदन्तरा। मुक्तिगा एव विज्ञेया देवा एव विमुक्तिगाः’ इति च। ‘विमोक्षाय’ इत्यत्र वीत्युपसर्गादेव च मोक्षे ननात्वं ज्ञायते। ‘देवासुरनरत्वाद्या जीवानां तु निसर्गतः। निसर्गो नान्यथैतेषां केनचित् क्वचिदेव वा। देवाः शापबलादेव प्रह्लादादित्वमागताः। अतः पुनश्च देवत्वं ते यान्ति निजमेव तु। हेतुतः सोऽन्यथाभावो रक्तता स्फटिके यथा। अतो नित्यश्च नाप्येष स्वभावविनिवर्तकः। किन्त्वाक्रम्यैव तं तिष्ठेद् देवसर्गस्ततो हि सः। अशोच्य एव विज्ञेयो मोक्षयोग्यो हरेः प्रियः’ इति॥06-20॥
Swami Sivananda (1887–1963)Bhagavad Gita
20. Entering into demoniacal wombs and deluded birth after birth, not attaining Me, they thus fall, O Arjuna, into a condition still lower than that!
Sri Vishwesha Tirtharu (1931–2019)Gitasaroddhara
ಈಶ್ವರನಿಷ್ಠೆಯ ಆವಶ್ಯಕತೆ
ಈಶರನಿಷೆಯ ಆವಶಕತೆ ಯ. ಛ್ರಿ ರ್ಸ್‌ “ಜೆ ಇಂತಹ ಲಸ್ತಿಕಭಾವನೆಯೇಇಲ್ಲದ ರಾಷ್ಟ್ರಗಳಲ್ಲಿಯೂ ತಕ್ಕಮಟ್ಟಿಗೆ ನೀತಿ ಶಿಸ್ತುಗಳ ಪರಿಪಾಲನೆಯಾಗುತ್ತಿಲ್ಲವೆ? ದೇವರನ್ನು ಒಪ್ಪುವ ರಾಷ್ಟ್ರಗಳಿಗಿಂತ ನಿರೀಶ್ವರವಾದಿ ದೇಶಗಳು ಲೌಕಿಕ ಸುವ್ಯವಸ್ಥೆಯಲ್ಲಿ ಏನೂ ಹಿಂದೆ ಬಿದ್ದಿಲ್ಲ. ಆದುದರಿಂದ ಸಮಾಜದಲ್ಲಿ ನೀತಿ-ನಿಯಮಗಳನ್ನು ಕಾಪಾಡಲು ಧಾರ್ಮಿಕಭಾವನೆಯು ಅನಿವಾರ್ಯವೇನೂ ಅಲ್ಲವೆನ್ನುವ ಆಕ್ಷೇಪವನ್ನು ಕೆಲವರು ಮುಂದೆಮಾಡಬಹುದು. ನಿಜ, ಇಂದು ಕಾಯಿದೆ, ಸುವ್ಯವಸ್ಥೆಗಳ ವಿಷಯದಲ್ಲಿ ಆಸ್ತಿಕ, ನಾಸ್ತಿಕ ರಾಷ್ಟ್ರಗಳಲ್ಲಿ ಅಂತಹ ಅಂತರವೇನೂ ಕಾಣಸಿಗುವುದಿಲ್ಲ. ಶೀಲ ನೀತಿ, ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮ ಕರ್ತವ್ಯವೆಂಬಹಳೆಯ ಸಂಸ್ಕಾರ ಪ್ರಭಾವಕ್ಕೆ ಎಲ್ಲಮಾನವರೂ ಒಳಗಾದವರೇ. ಈ ಸಂಸ್ಕಾರದ ಮೂಲವೇನು? ಈ ನೀತಿ, ಸದ್ಗುಣಗಳನ್ನು ಏಕೆ ಅನುಸರಿಸಬೇಕು?) ಎನ್ನು ವ ಸ್ವತಂತ್ರ ಜಿಜ್ಞಾ; ಸೆಯನ್ನು ಯಾರೂ ಮಾಡಿದಂತಿಲ್ಲ. ಭೌತಿಕ ದೃಷ್ಟಿಯಿಂದ, ಕೇವಲ ತರ್ಕದ ಬಲದಿಂದ ವಿಚಾರಮಾಡಿದಲ್ಲಿ ಈ ರೂಢಿ ಸಂಸ್ಕಾರಗಳೆಲ್ಲ ಛಿನ್ನಭಿನ್ನಗಳಾಗುವವು. ಈಗ ಈ ಮಾನವೀಯವಾದ ಸುಸಂಸ್ಕಾರದ ಬಲದಿಂದ ಒಂದು ರೀತಿಯ ನೀತಿ, ವ್ಯವಸ್ಥೆಗಳನ್ನು ತಕ್ಕಮಟ್ಟಿಗೆ ಕಾವಾಡಲು ಎಲ್ಲ ದೇಶಗಳೂ ಶಕ್ತಗಳಾಗಿದ್ದರೂ ಈಶ್ವರೀಯ ಭಾವನೆಯಿಲ್ಲದೆ ಇದು ಭದ್ರವಾಗಿ ನೆಲೆನಿಲ್ಲಲಾರದು. ಕುತರ್ಕದ ಕೋಲಾಹದಿಂದ ಈ ಸಂಸ್ಥಾರಭಾವನೆಗಳು ಅಸ್ಪವ್ಯಸ್ತಗೊಂಡರೆ ಸಮಾಜದ ಸುವ್ಯವಸ್ಥೆ ಎಲ್ಲ ಬುಡಮೇಲಾಗಬಹುದು. ಈಶ್ವರನಿಷ್ಠೆಯ ತಳಹದಿ ಇಲ್ಲದೆಯೂ ಕಂಡು ಬರುತ್ತಿರುವ ಲೋಕ ವ್ಯವಸ್ಥೆಯು ಬರೇ ತಾತ್ಕಾಲಿಕವಾಗಿದ್ದು ಅದನ್ನು ದೃಢಮೂಲವೆಂದು ನಾವು ಭಾವಿಸಲಾಗದು. ಉಸುಕಿನ ಮನೆಗಳಂತೆ ಅದು ಯಾವಾಗಲಾದರೂ ಕುಸಿದು ಬೀಳಬಹುದು. ಅದಕ್ಕಾಗಿಯೇ ಶಸ್ತರನಿಷ್ಠೆಯು ನಮ್ಮ ಜೀವನದಸುದೃಢತಳಹದಿಯಾಗಬೇಕೆಂದು ಗೀತೆಯು ಕರೆಯಿತ್ತಿದೆ. ಇಲ್ಲಿ ಇನ್ನೂ ಒಂದು ಪ್ರಶ್ನೆ ಉದ್ಭವಿಸುತ್ತದೆ. ಪರಮಾತ್ಮನಲ್ಲಿ ಭಕ್ತಿ ಭಾವನೆಯು ಇದ್ದಲ್ಲಿ ಎಲ್ಲವೂ ಸರಿಹೋಗುವುದೆಂದು ನಂಬಲು ಸಾಧ್ಯವಿಲ್ಲ. ಧಾರ್ಮಿಕರಾದವರೂ ಬೇಕಾದಷ್ಟು ಅಕೃತ್ವ ಮಾಡುವುದನ್ನು ನಾವು ನೋಡುತ್ತ ಲಿರುವೆವು. ಬಾಯಿಯಲ್ಲಿ ರಾಮಮಂತ್ರವಿದ್ದರೂ ಕೃತಿಯಲ್ಲಿ ಕುತಂತ್ರವೇ ವ್ಯಾಪಿಸಿರುವ ಜನರನ್ನು ಸಾಕಷ್ಟು ಸಂಖ್ಯೆಯಲ್ಲಿನಾವು ಕಾಣಬಹುದು. ಪೂಜಾ, ಜಪ್ತ ಪಾರಾಯಣಗಳಲ್ಲಿಯೇೆಚ್ಚು ವೇಳೆಯನ್ನುಕಳೆಯುವವರೂದ್ರೋಹ, ವಂಚನೆಗಳಿಂದ ಪರರ ಸೊತ್ತನ್ನು ಎತ್ತಿಹಾಕುವ ನಿದರ್ಶನಗಳು ಕಡಿಮೆ ಇಲ್ಲ. ಹೀಗಿರುವಾಗ ದೈವೀಭಾವನೆಯಿಂದ ಸಮಾಜದ ನೈತಿಕ ಸುಧಾರಣೆಯಾಗುವು ದೆಂಬುದನ್ನು ಹೇಗೆ ಒಪ್ಪುವುದು? ಈ ಲಕ್ಷೀಪವುವಾಸ್ತವವಿದ. ಆದರೆಕೆಲವುಧಾರ್ಮಿಕಮಸ್ಯರಕೃತಿಗಳಿಂದಲೇ ಧರ್ಮದ ಅವಕ್ಕಕತೆಯನ್ನು ಪ್ರಶ್ನಿಸುವುದು ಉಚಿತವಾಗದು. ನಿಜವಾದ ಧರ್ಮನಿಷ್ಠೆಯ ಅಭಾವದಿಂದಲೇ ಈ ಆಭಾಸಗಳು ನಡೆದಿವೆ. ನಿಜವಾದ ಭಗವದ್ದಕ್ತನು ಎಂದಿಗೂ ಹೇಯ ಕೃತಿಗಿಳಿಯಲಾರ. ಭಕ್ತಿ ಮತ್ತು ಧರ್ಮ ನಿಷ್ಠೆಯನ್ನು ಕೇವಲ ಬಾಹ್ಯ ಪ್ರದರ್ಶನಗಳಿಂದ ನಿರ್ಧರಿಸಲಾಗದು. ಪೂಜಾ-ಪಾರಾಯಣಗಳಿಂದಲೇ ಒಬ್ಬನ ಆಂತರಂಗಿಕ ಭಕ್ತಿ ಯನ್ನು ಅಳೆಯಲು ಸಾಧ್ಯವಿಲ್ಲ. ಧರ್ಮದ ಸೋಗಿನಲ್ಲಿ ತಮ್ಮ ಅವ್ಯವಹಾರಗಳನ್ನು ಮುಚ್ಚಲು ಪ್ರಯತ್ನಿಸುವ ಡಾಂಭಿಕರಿಂದ ಕೂಡಿದ ಪ್ರಪಂಚದಲ್ಲಿ ನಿಜವಾದ ಧಾರ್ಮಿಕರನ್ನು ಗುರುತಿಸುವುದು ಕಠಿಣವೇ ಆಗಿದೆ. ಮನೆಯಲ್ಲಿ ಯಾರಾದರೂ ಮೃತರಾದರೆ ಆಳುವುದು ಕೆಲವು ಸಮಾಜಗಳಲ್ಲಿ ರೂಢಿ ಇದೆ. ಅದಕ್ಕಾಗಿ ಕೆಲವು ಜನರಿಗೆ ಹೊಟ್ಟೆ ತುಂಬ ಊಟ ಹಾಕಿ, ಕೂಲಿ ಕೊಟ್ಟು ಅಳಿಸುತ್ತಾರೆ. ಅದು ಹೃದಯದಿಂದ ಉಕ್ಕಿ ಬರುವ ನಿಜವಾದ ಅಳುವಲ್ಲ. ಕೆಲವರ ಧರ್ಮಾಚರಣೆಯೂ ಇದೇ ಬಗೆಯದು. ಕೂಲಿಯ ಅಳುವಿನಂತೆ, ದೇಶಾವರಿ ನಗುವಿನಂತೆ ಇವರದು ಧರ್ಮದ ವಿಡಂಬನೆ ಮಾತ್ರ. ಇದನ್ನೇ ನಿಜವಾದ ಧರ್ಮನಿಷ್ಠೆ ಎಂದು ನಾವು ಭಾವಿಸಬಾರದು. ಯಾರ ಹೃದಯಾಂತರಾಳದಲ್ಲಿ ಪರಮಾತ್ಮಭಕ್ತಿಯು ನಿರೂಢವಾಗಿದೆಯೋ ಯಾರ ಜೀವನವ್ಯವಹಾರವು ಧಾರ್ಮಿಕ ಭಾವನೆಯಿಂದ ಓತಪ್ರೋತವಾಗಿದೆಯೋ ಅಂತಹ ನಿಜವಾದ ಧರ್ಮಶೀಲರ ಜೀವನವು ಪರಿಶುದ್ಧವೂ ಸದ್ಗುಣಸಂಪನ್ನವೂ ಆಗಿರುತ್ತದೆ. ಈಶ್ವರನನ್ನು ನಾವು ಒಪ್ಪಿಕೊಂಡಿದ್ದರೂ ಆ ನಿಷ್ಠೆಯು ದೃಢವಾಗಿ ನಮ್ಮ ಅಂತರಂಗದಲ್ಲಿ ಬೇರೂರದಿರುವುದರಿಂದ, ನಾಸ್ತಿಕ್ಯ ವಿಚಾರದ ಸ್ವಚ್ಛಂದ ವೃತ್ತಿಯು ನಮ್ಮ ಜೀವನದಲ್ಲಿ ಕಂಡುಬರುತ್ತಿದೆ. ನಿಜವಾದ ಭಗವದ್ಭಕ್ತಿಯು ದೇಶದಲ್ಲಿ ಹಬ್ಬಿದರೆ ಜನಜೀವನದ ರೀತಿ-ನೀತಿಗಳಲ್ಲಿಯೇ ಕ್ರಾಂತಿಕಾರಕ ಪರಿವರ್ತನೆಯಾಗುವುದರಲ್ಲಿ ಸಂದೇಹವಿಲ್ಲ. ಈಗಸಾಧಾರಣಸ್ಥಿತಿಯಲ್ಲಿರುವ ಭಕ್ತಿಭಾವನೆಯೂ ಜನರಹೃದಯದಲ್ಲಿ ನೈತಿಕ ಮೂಲ್ಯಾಂಕನ ಮಾಡಿ ಆಸುರೀ ವೃತ್ತಿಯ ವೇಗವನ್ನು ಕುಂಠಿತಗೊಳಿಸಲು ಎಷ್ಟೋ ಸಹಾಯಕವಾಗಿದೆ. ಈ ಭಕ್ತಿಭಾವನೆಯನ್ನೇ ಬೆಳೆಸಿ ಅದರಲ್ಲಿ ನೈಜತೆಯನ್ನೂ ದೃಢತೆಯನ್ನೂ ನಿರ್ಮಿಸಿದಲ್ಲಿ ಅದರಸತ್ಪರಿಣಾಮವೇ ಅನ್ಯಾದೃಶವಾಗುವುದು. ಪರಮಾತ್ಮನನ್ನು ತಿರಸ್ಕರಿಸಿ, ಲೋಕವ್ಯವಸ್ಥೆಯ ಭಂಜಕರಾಗಿ ನಡೆಯುವ ಆಸುರೀವೃತ್ತಿಯ ಜನರಿಗೆ ಒದಗುವ ದುರ್ಗತಿಯನ್ನು ಪರಮಾತ್ಮನು ವಿವರಿಸುತ್ತಾನೆ. ಆಸುರೀಂ ಯೋನಿಮಾಪನ್ನಾ ಮೂಢಾ ಜನ್ಮನಿ ಜನ್ಮನಿ | ಮಾಮಪ್ರಾಪ್ಕೈವ ಕೌಂತೇಯ ತತೋ ಯಾಂತ್ಯಧಮಾಂ ಗತಿಮ್‌ ॥ ತಮ್ಮ ದುಷ್ಟಕೃತಿಗಳಿಂದ ವರಮಾತ್ಮನಿಂದ ಹೆಚ್ಚೆಚ್ಚುದೂರಸರಿಯುವ ಈ ಅಧಮಾತ್ಮರು ಅವನತಿಯ ದಾರಿಯಲ್ಲಿಯೇನಡೆದು, ಕೊನೆಗೆ ಪರಮಾತ್ಮನನ್ನು ಹೊಂದುವಸಂಭವವನ್ನೇ ಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ತಮ್ಮ ಆತ್ಮವನ್ನೇ ಗಹನ ಅಂಧಕಾರದಲ್ಲಿ ಕೆಡಹುತ್ತಾರೆ. ಆಸುರೀ ಪ್ರವೃತ್ತಿಯ ಜನರು ಈ ರೀತಿಯಾಗಿ ವರಮಾತ್ಮನ ಅವಕೃಪೆಗೆ ಗುರಿಯಾಗಿ ಅಧಃಪಾತದ ಚರಮಸೀಮೆಯನ್ನು ಪಡೆಯುವಂತೆ, ದೈವೀ ಸಂಪತ್ತನ್ನು ಗಳಿಸಿದ ಸಾತ್ತ್ವಿಕವೃತ್ತಿಯ ಸಜ್ಜನಸಮಾಜವು ಆಧ್ಯಾತ್ಮಿಕ ಸೋವಾನಪಥದಲ್ಲಿ ಕ್ರಮಕ್ರಮವಾಗಿ ಮುಂದುವರಿದು, ಪರಮಾತ್ಮನ ಪ್ರಸಾದದ ಮಹೋನ್ನತ ವ್ರಾಸಾದದಲ್ಲಿ ಮುಕ್ತಿಯ ಮಹಾನಂದವನ್ನು ಅನುಭವಿಸುವುದು. ಸಜ್ಜನ ದುರ್ಜನರಿಗೆ ಒದಗುವ ಈ ಗತಿವೈವಿಧ್ಯ ಪರಮಾತ್ಮನ ಈ ಅಬಾಧಿತಶಾಸನದಲ್ಲಿ ದುಷ್ಕತಿಗಳಿಗೆ ದೊರೆಯುವ ನಿಗ್ರಹದ ನಿಯಮ ಮತ್ತು ಶಿಷ್ಠಕೃತಗಳಿಗೆ ನಿಶ್ಚಯವಾಗಿ ದೊರೆಯುವ ಅನುಗ್ರಹದ ಆಶ್ವಾಸನೆ ಇವುಗಳು ಮಾನವನ ಭೌತಿಕ ಪ್ರವೃತ್ತಿ ಮತ್ತು ಕಾಮನೆಗಳಿಗೆ ಒಂದು ಮೇರೆಯನ್ನು ಹಾಕಿ, ಲೋಕದ ಪ್ರಗತಿ, ಪ್ರವರ್ತನೆಗಳಿಗೆ ಅನುಕೂಲವಾಗುವಂತೆ ಅವುಗಳ ಗತಿವಿಧಿಯನ್ನು ಏರ್ಪಡಿಸಿ ಸುವೃವಸ್ತಿತವೂ ಸುನಿಯಂತ್ರವೂ ಆದ ಜೀವನಯೋಜನೆಯನ್ನು ರೂಪಿಸಿವೆ.
Bannanje Govindacharya (1936–2020)Bhagavad Gita Pravachana
ಆಸುರೀಂ ಯೋನಿಮ್‌ ಆಪನ್ನಾಃ ಮೂಢಾಃ ಜನ್ಮನಿಜನ್ಮನಿ | ಮಾಮ್‌ ಅಪ್ರಾಪ್ಯ ಏವ ಕೌಂತೇಯ ತತಃ ಯಾಂತಿ ಅಧಮಾಂ ಗತಿಮ್‌-ಕೌಂತೇಯಾ, ಕೆಡುನಡೆಯ ಬಸಿರಿನಲ್ಲಿ ಮರಳಿಮರಳಿ ಹುಟ್ಟಿಬಂದ ಆ ತಿಳಿಗೇಡಿಗಳು ಕೊನೆಗೂ ನನ್ನನ್ನು ಸೇರದೆಯೇ, ಅಲ್ಲಿಂದ ಮತ್ತೆ ಅಧೋಗತಿಯನ್ನು ಪಡೆಯುತ್ತಾರೆ. ಈ ರೀತಿ ಹೀನ ಮನೆತನದಲ್ಲಿ ಮರಳಿಮರಳಿ ಹುಟ್ಟಿ ಬರುವ ಈ DID ಪ್ರತೀ ಜನ್ಮದಲ್ಲೂ ಮೂಢರಾಗುತ್ತಾ ಹೋಗುತ್ತಾರೆ. ಪ್ರತೀ ಜನ್ಮದಲ್ಲೂ ಇವರ ಭಗವಂತನ ಮೇಲಿನ ದ್ವೇಷ ಪರಾಕಾಷ್ಠೆಗೆ ಹೋಗುತ್ತದೆ. ಅಹಂಕಾರ, ಮದ, ದರ್ಪ, ಕಾಮ ಕ್ರೋಧ ಮಿತಿಮೀರಿ ಇವರು ತಾವಾಗಿಯೇ ಅಧಃಪಾತವನ್ನು ಹೊಂದುತ್ತಾರೆ. ಇವರೆಂದೂ ಭಗವಂತನನ್ನು ಸೇರುವುದಿಲ್ಲ. ಇವರು ತಮ್ಮ ಜೀವಸ್ವಭಾವದ ಗತಿಗನುಗುಣವಾಗಿ ತಾಮಸಲೋಕವನ್ನು ಸೇರುತ್ತಾರೆ. ಆಸುರೀ ಜನರ ಜೀವ ಸ್ವಭಾವ, ಅವರ ನಡೆ-ನುಡಿ-ಯೋಚನೆ-ಕೃತಿಯ ಬಗ್ಗೆ ಸುಂದರವಾಗಿ ಕೃಷ್ಣ ವಿವರಿಸಿದ. ಇದರಿಂದ ನಮಗೆ ಲೋಕದಲ್ಲಿ ಲೋಕಕಂಟಕರು ಏಕಿದ್ದಾರೆ? ಅವರು ಮುಂದೆ ಯಾವ ಗತಿಯನ್ನು ಪಡೆಯುತ್ತಾರೆ ಎನ್ನುವ ವಿಚಾರ ತಿಳಿಯುತ್ತದೆ. ನಮಗರಿವಿಲ್ಲದೆ ನಮ್ಮನ್ನು ಆಸುರೀ ಗುಣ ಕಾಡಿದಾಗ ನಾವು ಜ್ಞಾನದ ಅರಿವಿನಿಂದ ಭಗವಂತನಲ್ಲಿ ಮೊರೆ ಹೊಕ್ಕು, ಅದರಿಂದ ಬಿಡುಗಡೆಗೆ ಇಚ್ಚಿಸಲು ಈ ಅಧ್ಯಾಯ ಸಹಕರಿಸುತ್ತದೆ. ಜೀವದ ಸ್ವಭಾವ ಎಂದೂ ಬದಲಾಗುವುದಿಲ್ಲ. ಜೀವಕ್ಕೆ ಸ್ವತಂತ್ರ ಕರ್ತೃತ್ವ ಇಲ್ಲ. ಆದರೆ ಜೀವಕ್ಕೆ ಇಚ್ಛಾಪೂರ್ವಕ ಕೃತಿ ಇದೆ. ಇದಕ್ಕನುಗುಣವಾಗಿ ನಿರಂತರ ದೈವೀ ಸ್ವಭಾವವನ್ನು ಬೆಳಸಿಕೊಂಡು-ಭಗವಂತನನ್ನು ಸೇರುವ ಪ್ರಯತ್ನವನ್ನು ನಾವು ಮಾಡಬೇಕು. ಅದಕ್ಕೆ ಫಲ ಸಿಗುವುದು ಬಿಡುವುದು ಭಗವಂತನ ಇಚ್ಛೆ-ಅದಕ್ಕಾಗಿ ನಾವು ತಲೆಕೆಡಿಸಿಕೊಳ್ಳಬಾರದು. ಒಳ್ಳೆಯದನ್ನು ಇಚ್ಚಿಸು, ಒಳ್ಳೆಯವನಾಗಿ ಇದ್ದದ್ದರಲ್ಲಿ ತೃಪ್ತಿಪಟ್ಟು ಬದುಕು. ನಿನ್ನ ರಕ್ಷಣೆಯ ಭಾರ ಭಗವಂತನದು, ಆತ ನಿನ್ನನ್ನು ರಕ್ಷಿಸಿಯೇ ರಕ್ಷಿಸುತ್ತಾನೆ.
Bibek Debroy (1955–2024)The Bhagavad Gita
(20) ‘O son of Kunti!25 From birth to birth, the deluded don’t attain me and, obtaining demonic births, go down even further.’26