17.17

श्रद्धया परया तप्तं तपस्तत्त्रिविधं नरैः ।
अफलाकाङ्क्षिभिर्युक्तैः सात्त्विकं परिचक्षते ॥
śraddhayā parayā taptaṃ tapastattrividhaṃ naraiḥ |
aphalākāṅkṣibhiryuktaiḥ sāttvikaṃ paricakṣate ||
Sri Madhvacharya (1238–1317)Bhagavad Gita Tatparya Nirnaya
युक्तैः - भगवदर्पणादियुक्तैः। युक्तैरिति दानादिषु सर्वत्र समम्॥17॥
Swami Sivananda (1887–1963)Bhagavad Gita
17. This threefold austerity practised by steadfast men with the utmost faith, desiring no reward, they call Sattwic.
Bannanje Govindacharya (1936–2020)Bhagavad Gita Pravachana
ಶ್ರದ್ಧಯಾ ಪರಯಾ ತಪ್ಪಂ ತಪಃ ತತ್‌ ತ್ರಿವಿಧಂ ನರೈಃ | ಅಫಲ ಆಕಾಂಕ್ಷೆಭಿಃ AE: ಸಾತ್ವಿಕಂ ಪರಿಚಕ್ಷತೇ -ಈ ಮೂರೂ ಬಗೆಯ ತಪಸ್ಸನ್ನು ತುಂಬು ನಂಬಿಕೆಯಿಂದ, ಫಲದ ಬಯಕೆಯಿಲ್ಲದೆ, ಭಗವದರ್ಪಣಭಾವದಿಂದ ಆಚರಿಸಿದಾಗ ಅದನ್ನು ಸಾತ್ವಿಕ ತಪಸ್ಸು ಎನ್ನುತ್ತಾರೆ. ತಪಸ್ಸಿನ ಹಿಂದೆ ಶ್ರೇಷ್ಠವಾದ ಶ್ರದ್ಧೆ-ಪ್ರಾಮಾಣಿಕತೆ ಇದ್ದರೆ ಅದು ಸಾತ್ವಿಕ ತಪಸ್ಸಾಗುತ್ತದೆ. ಭಗವಂತನ ಪಾರಮ್ಯದ ಎಚ್ಚರದಿಂದ, ಭಗವಂತ ಪ್ರೀತನಾಗಲಿ ಎನ್ನುವ ಅನುಸಂಧಾನದಿಂದ ಮಾಡುವ ಪ್ರತಿಯೊಂದು ಕ್ರಿಯೆ-ಸಾತ್ವಿಕ ಕ್ರಿಯೆ. ಎನಿಸುತ್ತದೆ. ಉದಾಹರಣೆಗೆ ಗುರುವಿಗೆ ನಮಸ್ಕರಿಸುವಾಗ ಆ ಗುರುವಿನ ಅಂತರ್ಗತನಾಗಿರುವ ಭಗವಂತನಿಗೆ ನಮಸ್ಕರಿಸುತ್ತಿದ್ದೇನೆ ಎನ್ನುವ ಅನುಸಂಧಾನ. ಹೀಗೆ ನಮ್ಮ ಪ್ರತಿಯೊಂದು ಕ್ರಿಯೆಯ ಹಿಂದೆ ಭಗವದರ್ಪಣ ಬುದ್ದಿ ಇರಬೇಕು. ಮಂತ್ರಗಳು ಹೇಳುವುದೂ ಇದನ್ನೇ . “ಅನೇನ ಭಗವಾನ್‌ ಗೋಪಾಲಕೃಷ್ಣ ಪ್ರಿಯತಃ-ಶ್ರೀ ಕೃಷ್ಣಾರ್ಪಣ ಮಸ್ತು” ಎಂದು ಹೇಳುವಾಗ ನಮ್ಮಲ್ಲಿ ಕೂಡಾ ಪೂರ್ಣ ಅರ್ಪಣಾ ಭಾವ ತುಂಬಿರಬೇಕು. ಇಂತಹ ತಪಸ್ಸು ಸಾತ್ವಿಕ ತಪಸ್ಸೆನಿಸುತ್ತದೆ
Bibek Debroy (1955–2024)The Bhagavad Gita
(17) ‘These three types of austerities performed single-mindedly by men, without attachment to fruits and with supreme faith, are said to be of the sattva-type.’