सत्कारमानपूजार्थं तपो दम्भेन चैव यत् ।
क्रियते तदिह प्रोक्तं राजसं चलमध्रुवम् ॥
satkāramānapūjārthaṃ tapo dambhena caiva yat |
kriyate tadiha proktaṃ rājasaṃ calamadhruvam ||
Swami Sivananda (1887–1963)Bhagavad Gita
18. The austerity which is practised with the object of gaining good reception, honour and
worship and with hypocrisy, is here said to be Rajasic, unstable and transitory.
Bannanje Govindacharya (1936–2020)Bhagavad Gita Pravachana
ಸತ್ ಕಾರ ಮಾನ ಪೂಜಾ ಅರ್ಥಂ ತಪಃ ಡಂಭೇನ ಚ ಏವ ಯತ್ |
ಕ್ರಿಯತೇ ತತ್ ಇಹ ಪ್ರೋಕ್ಷಮ್ ರಾಜಸಂ ಚಲಮ್ ಅಧ್ರುವಮ್ - ಮನ್ನಣೆ, ಹೊಗಳಿಕೆ ಮತ್ತು ಗೌರವಗಳಿಗಾಗಿ
ಬೂಟಾಟಿಕೆಯಿಂದ ಆಚರಿಸುವ, ನೆಲೆ ಇಲ್ಲದ, ಬಾಳಿಕೆಯಿಲ್ಲದ ತಪಸ್ಸು ರಾಜಸ ಎನ್ನಿಸುತ್ತದೆ
ಭಗವಂತನ ಅನುಸಂಧಾನವಿಲ್ಲದೆ, ತನಗೆ ಜನ ಸತ್ಕಾರ ಮಾಡಲಿ ಎಂದು ಸನ್ಮಾನದ ಆಸೆಯಿಂದ ಮಾಡುವ
ಎಲ್ಲಾ ತಪಸ್ಸು ರಾಜಸ ತಪಸ್ಸು. ಈ ರೀತಿ ಡಂಭಾಚಾರದಿಂದ ಮಾಡುವ ತಪಸ್ಸು ಪರಲೋಕಕ್ಕೆ ಸಲ್ಲುವುದಿಲ್ಲ.
ಚಪಲದಿಂದ ಮಾಡಿದ ಇಂತಹ ಕಾರ್ಯದ ಫಲ ಇಹದಲ್ಲೂ ಶಾಶ್ವತವಲ್ಲ.
ಈ ಶ್ಲೋಕದಲ್ಲಿ ಏವ ಮತ್ತು ಚ-ಕಾರ ಒಟ್ಟಿಗೆ ಬಂದಿದೆ. ಇದು ನಮಗೆ ವಿಶೇಷ ಸಂದೇಶವನ್ನು ಕೊಡುತ್ತದೆ.
ಸತ್ಕಾರಕ್ಕಾಗಿಯೂ, ಮಾನಕ್ಕಾಗಿಯೂ, ಡಂಭಕ್ಕಾಗಿಯೂ ಮಾಡುವ ಕ್ರಿಯೆ ರಾಜಸ ಎನಿಸಿದರೆ ; ಭಗವದರ್ಪಣ
ಬುದ್ಧಿಯಿಂದ ಮಾಡಿ ಬಯಸದೇ ಸತ್ಕಾರ ಬಂದರೆ, ನಾಲ್ಕು ಜನರಿಗೆ ತಿಳುವಳಿಕೆ ಬರಲಿ ಎಂದು ಜ್ಞಾನ ದಾನದ
ಭಾವನೆಯಿಂದ ಪ್ರಚಾರ ಮಾಡಿದರೆ-ಅದು ರಾಜಸವಾಗುವುದಿಲ್ಲ. ಇದನ್ನು ತಿಳಿಸುವುದಕ್ಕೋಸ್ಕರ ಇಲ್ಲಿ ಚ
ಮತ್ತು ಎವಕಾರ ಬಳಸಲಾಗಿದೆ.
Bibek Debroy (1955–2024)The Bhagavad Gita
(18)
‘Austerities performed with the objective of obtaining praise, respect or
worship, and based on insolence, are said to be of the rajas-type and in
this,31 are temporary and uncertain.’