सत्त्वानुरूपा सर्वस्य श्रद्धा भवति भारत ।
श्रद्धामयोऽयं पुरुषो यो यच्छ्रद्धः स एव सः ॥
sattvānurūpā sarvasya śraddhā bhavati bhārata |
śraddhāmayo'yaṃ puruṣo yo yacchraddhaḥ sa eva saḥ ||
Sri Madhvacharya (1238–1317)Bhagavad Gita Tatparya Nirnaya
सत्त्वानुरूपा -जीवानुरूपा। अतो ये सात्त्विकश्रद्धास्ते सात्त्विका इति ज्ञायन्ते। अन्येऽन्य इति
श्रद्धामयः - श्रद्धारूपः।
‘श्रद्धा स्वरूपं जीवस्य तस्माच्छ्राद्धाविभेदतः।
उत्तमाधममध्यास्तु जीवा ज्ञेयाः पृथक् पृथक्।
स्वरूपभूता श्रद्धैव तमोगानां य मोक्षिणाम्।
शिष्यते संसृतिस्थानां श्रद्धारूपं मनोऽपरम्।
तत्रस्वरूपश्रद्धैव व्यज्यते प्रायशः क्वचित्।
सात्विकस्य तमोरूपा श्रद्धाऽन्तःकरणात्मिका।
सात्त्विकी तामसस्यापि भूयस्त्वात् तद्विविच्यते॥03॥
Swami Sivananda (1887–1963)Bhagavad Gita
3. The faith of each is in accordance with his nature, O Arjuna! The man consists of his faith;
as a man’s faith is, so is he.
Sri Vishwesha Tirtharu (1931–2019)Gitasaroddhara
ಧರ್ಮ ಮತ್ತು ನಿತ್ಯವ್ಯವಹಾರ
ಧರ್ಮ ಮತ್ತುನಿತ್ಯವ್ಯವಹಾರ
ಸ್ಯಾ ರಜಸ್ಸು ತಮಸ್ಸುಗಳು ನಮ್ಮ ಜೀವನ, ವ್ಯವಹಾರಗಳಲ್ಲಿ ಬೀರುವ
ಪ್ರಭಾವದವಿವರಣೆಯನ್ನು ಹದಿನೇಳನೆಯ ಅಧ್ಯಾಯದಲ್ಲಿ ಮಾಡಿದೆ. ಅತನ
ಮೂಲಭೂತ ಸ್ವಭಾವಕ್ಕನುಸರಿಸಿ ನಮ್ಮ ಪ್ರವೃತ್ತಿಗಳಲ್ಲಿಯೂ ವೈವಿಧ್ಯ
ಪುಂಟಾಗುತ್ತದೆ.
ಸತ್ತ್ವಾನುರೂಪಾ ಸರ್ವಸ್ಯ
ಶ್ರದ್ಧಾ ಭವತಿ ಭಾರತ।
ನಮ್ಮ ಈ ಬಾಹ್ಯ ವಿಚಾರ, ವರ್ತನೆ, ನಂಬಿಕೆಗಳಿಗೆ ಆತ್ಮನ ವ್ಯಕ್ತಿತ್ವವೇ
ಮೂಲಕಾರಣವಾಗಿದೆ. ರಾಜಸ, ತಾಮಸ ವೃತ್ತಿಗಳಿಂದ ನಮ್ಮ
ವ್ಯವಹಾರಗಳೆಲ್ಲವೂ ದೂಷಿತವಾಗುವವು. ನಮ್ಮ ಲೌಕಿಕ ಹಾಗೂ ಧಾರ್ಮಿಕ
ವ್ಯವಹಾರಗಳೆರಡರಲ್ಲಿಯೂ ಸತ್ತ್ವ ರಜಸ್ಸು ತಮಸ್ಸುಗಳು ತಮ್ಮ
ಮುದ್ರೆಯನ್ನು ಒತ್ತಬಲ್ಲವು. ಲೌಕಿಕವ್ಯವಹಾರಗಳಲ್ಲಿಯೂತಾತ್ರ್ವಿಕವೃತ್ತಿಯು
ಅನುಸ್ಯೂತವಾದಾಗ ಅವು ಧರ್ಮಗಳೇ ಎನಿಸುವವು. ಧರ್ಮಾಚಾರಗಳೂ
ರಾಜಸ, ತಾಮಸ ಭಾವನೆಗಳಿಂದ ಕಲುಷಿತಗೊಂಡರೆ ಅವೇ
ಅಧರ್ಮಗಳಾಗಬಲ್ಲವು. ತುಲಾಧಾರ, ಧರ್ಮವ್ಯಾಧರು ನಡೆಸಿದ ವ್ಯಾಪಾರ
ವ್ಯವಹಾರಗಳು ಧರ್ಮವೆನಿಸಿದ್ದ ರೆ, ರಾವಣ, ಜರಾಸಂಧರಂತಹವರು ಮಾಡಿದ
ತವಸ್ಸು ಅಧರ್ಮವಾಗಿದೆ.
ಧರ್ಮೋ ಭವತೃಧರ್ಮೋಪಪಿ
ಕೃತೋ ಭಕ್ಷಿಸ್ತವಾಚ್ಯುತ।
ಪಾಪಂ ಭವತಿ ಧರ್ಮೋಪಿ
ಯೋನ ಭಕ್ತಃ ಕೃತೋ ಹರೇ॥
-ಸದಾಚಾರಸ್ಥ ಶೆ
""ಭಗವದ್ಭಕ್ತರಾದ ಸಜ್ಜನರು ಮಾಡಿದ ಧರ್ಮಭಿನ್ನವಾದ ವ್ಯವಹಾರವೂ
ಧರ್ಮವಾಗಬಲ್ಲದು. ಅಭಕ್ತರಾದ ದುಷ್ಟ ಜನರು ಆಚರಿಸಿದ ಧರ್ಮವೂ
ಪಾತಕವಾಗುವುದು'' ತುಲಾಧಾರರಂತಹವರು ಮಾಡಿದ ವ್ಯಾಪಾರವೂ
ಧರ್ಮವಾಗಿದ್ದರೆ, ಇಂದು ಜನರು ರೋಭವೃತ್ತಿ ಯಿಂದಮಾಡುವ ವ್ಯಾವಾರವೇ
ಅಧರ್ಮವಾಗುತ್ತಿದೆ. ನಮ್ಮ ಭೋಜನಾದಿ ವ್ಯವಹಾರಗಳೂ ದಾನ, ತವನ್ನು
ಯಜ್ಞಗಳೂಸತ್ತ್ವ ರಜ, ತಮಗಳಿಂದ ವೈವಿಧ್ಯವನ್ನು ವಡೆಯುವವ. ಆಹಾರ,
ನಿದ್ರೆ. ಕಾಮ ವ್ಯವಹಾರಗಳು ಪಶುಗಳಿಗಿರುವಂತೆ ಮಾನವನಿಗೂ ಇವೆ. ಅವನ್ನು
ಮಾನವನು ಬಿಡಲೂ ಸಾಧ್ಯವಿಲ್ಲ. ಧಾರ್ಮಿಕನಾಗಲು ಈ ವ್ಯವಹಾರಗಳನ್ನು
ಬಿಡಬೇಕೆಂದು ಇಲ್ಲ. ಪಶುಗಳು ಯಾವುದೇ ನೀತಿ, ನಿರ್ಬಂಧಗಳಿಲ್ಲದೆ
ಸ್ವಚ್ಚಂದವಾಗಿ ಆಹಾರ- ನಿದ್ರಾದಿಗಳನ್ನು ಸೇವಿಸುವವು. ಅವೇ ವ್ಯವಹಾರಗಳಲ್ಲಿ
ಒಂದು ಶಿಸ್ತನ್ನು ಒಂದು ನಿಯಮವನ್ನು ಜೋಡಿಸಿದಾಗಲೇ ನಾವು
ಧಾರ್ಮಿಕರಾಗುವೆವು. ಧರ್ಮವೆಂದರೆ ಲೌಕಿಕ ವ್ಯವಹಾರಗಳ
ಪರಿವರ್ಜನೆಯಲ್ಲ. ಪಶುಗಳೂ ನಡೆಸುವಂತಹ ಈ ವ್ಯವಹಾರಗಳಲ್ಲಿ
ಧರ್ಮನೀತಿಗಳನ್ನು ಜೋಡಿಸಿದಾಗಲೇ ನಾವು ಮಾನವರಾಗಬಲ್ಲೆವು.
ಡಾರ್ವಿನ್ ವಾದದಂತೆ ವಶುಗಳೇ ವಿಕಾಸವನ್ನು ಹೊಂದಿ ಮಾನವರಾಗಿ
ಪರಿವರ್ತಿತರಾಗಿರುವರೆಂದು ವಿಜ್ಞಾನಿಗಳು ಹೇಳುತ್ತಿದ್ದರೆ, ಮಾನವರೇ
ಪಶುಗಳಾಗಿ ಪರಿವರ್ತನೆಗೊಂಡು ಆ ವಾದದ ತಿರುವು ಮುರುವು
ನಡೆದಿದೆಯೇನೋ ಎನ್ನುವ ರೀತಿಯ ಕಪಿಚೇಷ್ಟೆ ಪಶುವರ್ತನೆಗಳನ್ನು
ಜಗತ್ತಿನಲ್ಲಿ ನಾವು ಎಲ್ಲೆಡೆಗಳಲ್ಲಿಯೂ ನೋಡುತ್ತಿರುವೆವು.
Bannanje Govindacharya (1936–2020)Bhagavad Gita Pravachana
ಸತ್ವ ಅನುರೂಪಾ ಸರ್ವಸ್ಯ ಶ್ರದ್ಧಾ ಭವತಿ ಭಾರತ |
ಶ್ರದ್ಧಾ ಮಯಃ ಅಯಮ್ ಪುರುಷಃ ಯಃ ಯತ್ ಶ್ರದ್ಧ ಸಃ ಏವ ಸಃ -ಭಾರತ, ಸ್ವಭಾವಕ್ಕೆ ತಕ್ಕಂತೆ ಎಲ್ಲರ
ನಂಬಿಕೆಯೂ ಇರುತ್ತದೆ. ಈ ಜೀವ ನಂಬಿಕೆಯ ಸ್ವರೂಪವೇ. ಅವನ ನಂಬಿಕೆ ಎಂತಹದ್ದೋ ಅವನು ಅಂತವನು.
ಜೀವದ ಸ್ವರೂಪಕ್ಕೆ ಅನುಗುಣವಾಗಿಯೇ ಮೂಲ ಶ್ರದ್ಧೆ ಇರುವುದು. ಆದರೆ ಕೆಲವೊಮ್ಮೆ ಅದು ವ್ಯಕ್ತವಾಗದೇ
ಇರಬಹುದು. ಇದು ವ್ಯಕ್ತವಾಗದೇ ಇದ್ದಾಗ, ಮನಸ್ಸಿನಲ್ಲಿ ಯಾವ ಬಾಹ್ಯ ಪ್ರಭಾವ ಶ್ರದ್ಧೆ ಇದೆಯೋ ಅದೇ ಅವನ
ನಂಬಿಕೆಯಾಗುತ್ತದೆ. ಮನುಷ್ಯ ಶ್ರದ್ಧೆಯ ಕೈಗೊಂಬೆ. ಯಾರ ಸ್ವರೂಪ ಶ್ರದ್ಧೆ ಸಾತ್ವಿಕವೋ ಅವನು ಸಾತ್ವಿಕ;
ಯಾರ ಸ್ವರೂಪ ಶ್ರದ್ಧೆ ರಾಜಸವೋ ಅವನು ರಾಜಸ; ಯಾರ ಸ್ವರೂಪ ಶ್ರದ್ಧೆ ತಾಮಸವೋ ಅವನು ತಾಮಸ.
ಹಾಗಾಗಿ ಜೀವರಲ್ಲಿ ಮೂರು ವಿಧ: ಸಾತ್ವಿಕ ಶ್ರದ್ಧೆ ಇರುವ ಜೀವ-ಸಾತ್ವಿಕ ಜೀವ; ರಾಜಸ ಶ್ರದ್ಧೆ ಇರುವ ಜೀವ-
ರಾಜಸ ಜೀವ; ತಾಮಸ ಶ್ರದ್ಧೆ ಇರುವ ಜೀವ-ತಾಮಸ ಜೀವ. ನಾವು ಧ್ಯಾನದಿಂದ ಮನಸ್ಸನ್ನು ಸ್ಥಗನಗೊಳಿಸಿ,
ತುರಿಯ ಸ್ಥಿತಿಯನ್ನು ತಲುಪಿದಾಗ ಬಾಹ್ಯ ಶ್ರದ್ಧೆ ಕಣ್ಮರೆಯಾಗಿ ಕೇವಲ ಸ್ವರೂಪ ಶ್ರದ್ಧೆ ವ್ಯಕ್ತವಾಗುತ್ತದೆ.
Bibek Debroy (1955–2024)The Bhagavad Gita
(3)
‘O descendant of Bharata!5 Everyone’s faith follows his inner nature. This
being6 is full of faith. The kind of faith one has makes the person.’