कर्षयन्तः शरीरस्थं भूतग्राममचेतसः ।
मां चैवान्तःशरीरस्थं तान्विद्ध्यासुरनिश्चयान् ॥
karṣayantaḥ śarīrasthaṃ bhūtagrāmamacetasaḥ |
māṃ caivāntaḥśarīrasthaṃ tānviddhyāsuraniścayān ||
·
कर्षयन्तः शरीरस्थं भूतग्राममचेतसः ।
मां चैवान्तःशरीरस्थं तान्विद्ध्यासुरनिश्चयान् ॥
karṣayantaḥ śarīrasthaṃ bhūtagrāmamacetasaḥ |
māṃ caivāntaḥśarīrasthaṃ tānviddhyāsuraniścayān ||
कर्शयन्तः शरीरस्थं भूतग्राममचेतसः ।
मां चैवान्तःशरीरस्थं तान्विद्ध्यासुरनिश्चयान् ॥
karśayantaḥ śarīrasthaṃ bhūtagrāmamacetasaḥ |
māṃ caivāntaḥśarīrasthaṃ tānviddhyāsuraniścayān ||
Sri Madhvacharya (1238–1317)Bhagavad Gita Tatparya Nirnaya
17.5–17.6
अशास्त्रविहितं घोरं तप्यन्ते ये तपो जनाः।
ढम्बाहङ्कारसंयुक्ताः कामरागबलान्विताः।
अकृषानपि लक्ष्म्यादीन् देवान् विष्णुपरायणान्।
विष्णुं च सर्वदेहस्थं कृषत्वेन विजानते।
तेषामल्पगुणत्वेन कल्पनात् ते तमो ध्रुवम्।
यांति ज्ञेयाश्च ते दैत्याः पिशाचा वाऽथ राक्षसाः॥05-06॥
17.4–17.7
अन्नैश्चैवाथ यज्ञाद्यैः प्रायो ज्ञेया इमे नराः।
सात्त्विका सात्त्विकान् कुर्युर्यस्मादन्ये तथेतरान्॥7॥
ओंतत् सदिति यद्विष्णोर्नामत्रयमुदाहृतम्।
प्रसिद्धिं वैदिकं यस्मात् कर्म तद्विषयं हि सत्।
तत्राश्रद्धाकृतं तस्मादसदित्येव कीर्त्यते।
विप्रावेदाश्च यज्ञाश्च यस्मादोताः परस्परम्।
विहिता विष्णुना तेन विष्णुरोमिति कीर्तितः।
ओतमस्मिन्निदं सर्वमिति चोक्तः स ओमिति।
तस्मादोमिति यज्ञादीन् प्रवर्तन्ते हि वैदिकाः।
अनोङ्कृतं ह्यासुरं स्याद् यत् तस्मादोङ्कृतं त्वपि।
ओङ्कारार्थहरेः सम्यगज्ञानादासुरं भवेत्।
फलं त्वनभिसन्धाय तद्ब्रह्म स्यान्ममास्पदम्।
इति यत् क्रियते कर्म तन्नामाऽतो जनार्दनः।
अभिसन्धितं हि तत् प्रोक्तं ततं वा स्वगुणैः सदा’ इत्यादि च
‘मयं प्रधानमुद्दिष्टं स्वरूपं कार्यमेव च’ इति शब्दनिर्णये।
शास्त्रविहितमपि भगवच्छ्रद्धाविहीनमसदेवेति वक्ष्यति ‘अश्रद्धया हुतम्’ इति।
भगवच्छ्रद्धाविरहितत्वादेव चाशास्त्रविहितं भवति।
‘विष्णुभक्तिविधानार्थं सर्वं शास्त्रं प्रवर्तते’ इति पैङ्गिश्रुतिः॥04-07॥
Swami Sivananda (1887–1963)Bhagavad Gita
6. Senseless, torturing all the elements in the body and Me also, who dwells in the
body,—know thou these to be of demoniacal resolves.
Bannanje Govindacharya (1936–2020)Bhagavad Gita Pravachana
17.5–17.6
ಅಶಾಸ್ತ್ರ ವಿಹಿತಂ ಘೋರಂ ತಪ್ಯಂತೇ ಯೇ ತಪಃ ಜನಾಃ |
ಡಂಭ ಅಹಂಕಾರ ಸಂಯುಕ್ತಾಃ ಕಾಮ ರಾಗ ಬಲ ಅನ್ವಿತಾಃ
ಕರ್ಶಯಂತಃ ಶರೀರಸ್ಥಂ ಭೂತಗ್ರಾಮಮ್ ಅಚೇತಸಃ |
ಮಾಂ ಚ ಏವ ಅಂತಃ ಶರೀರಸ್ಥಂ ತಾನ್ ವಿದ್ಧಿ ಆಸುರನಿಶ್ಚಯಾನ್ -- ಕೆಲವು ಜನರು ಶಾಸ್ತ್ರದ ಕಟ್ಟಳೆ ಮೀರಿ
ಕೆಟ್ಟ ತಪವನ್ನಾಚರಿಸುತ್ತಾರೆ; ಬೂಟಾಟಿಕೆಯಿಂದ ಮತ್ತು ಹಮ್ಮಿನಿಂದ. ಆಸೆ-ಆಸಕ್ತಿಗಳೇ ಅವರ ಸಾಧನೆಗೆ
ಬೆಂಬಲ. ಇಂತಹ ತಿಳಿಗೇಡಿಗಳು ತಮ್ಮ ದೇಹದಲ್ಲಿರುವ ಭೂತ ಸಮೂಹವನ್ನು [ದೇಹವನ್ನು ನಿಯಮಿಸುವ
ದೇವತಾಗಣವನ್ನು। ಕಡೆಗಣಿಸುತ್ತಾರೆ. ದೇಹದೊಳಗಿರುವ ನನ್ನ ಹಿರಿಮೆಯನ್ನು ಅಲ್ಲಗಳೆಯುತ್ತಾರೆ. ಅಂತವರು
ತಾಮಸ ಸ್ವಭಾವದವರು ಎಂದು ತಿಳಿ.
ಶ್ರದ್ಧೆಯಲ್ಲೇ ಅತ್ಯಂತ ನೀಚವಾದ ತಾಮಸ ಶ್ರದ್ಧೆ ಹೇಗಿರುತ್ತದೆ ಎನ್ನುವುದನ್ನು ಕೃಷ್ಣ ಇಲ್ಲಿ ವಿವರಿಸುತ್ತಾನೆ.
ಕೆಲವರು ಶಾಸ್ತ್ರದ ಕಟ್ಟಳೆ ಮೀರಿ ತಪಸ್ಸನ್ನಾಚರಿಸುತ್ತಾರೆ. ಆ ತಪಸ್ಸಿನ ಹಿಂದಿರುವ ಉದ್ದೇಶ ಘೋರ. ಇಲ್ಲಿ
ತಪಸ್ಸು ಅಂದರೆ ಕೇವಲ ಖುಷಿ-ಮುನಿಗಳು ಮಾಡುವ ತಪಸ್ಸು ಮಾತ್ರವಲ್ಲ. ಶ್ರದ್ಧೆಯಿಂದ ಮಾಡುವ ಯಾವ
ಕ್ರಿಯೆಯೂ ತಪಸ್ಸಾಗಬಹುದು[ಈ ಕುರಿತು ಹೆಚ್ಚಿನ ವಿವರಣೆಯನ್ನು ಈ ಅಧ್ಯಾಯದ ಮುಂದಿನ ಭಾಗ(ಶ್ಲೋಕ
೧೪-೧೯)ದಲ್ಲಿ ಕಾಣಬಹುದು]. ತಪಸ್ಸು ಮಾಡುವಾಗ ನಾವು ನನಗೆ ಒಳ್ಳೆಯದಾಗಲಿ ಎಂದು ತಪಸ್ಸು
ಮಾಡಬಹುದು ಅಥವಾ ಲೋಕಕ್ಕೆ ಒಳ್ಳೆಯದಾಗಲಿ ಎಂದು ತಪಸ್ಸು ಮಾಡಬಹುದು. ಉದಾಹರಣೆಗೆ ಗಾಯತ್ರಿ:
ಇಲ್ಲಿ “ಯೋ ಯೋನಃ ಪ್ರಚೋದಯಾತ್” ಎನ್ನುವಲ್ಲಿ “ನಮಗೆಲ್ಲರಿಗೂ ಒಳ್ಳೆಯ ಬುದ್ದಿ ಕೊಡು ದೇವರೇ”
ಎನ್ನುವ ಸಾತ್ವಿಕ ಶ್ರದ್ಧೆ ಇದೆ. ಲೋಕದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಮಾಡುವ ತಪಸ್ಸು ಸಾತ್ವಿಕ
ತಪಸ್ಸು. ಇದನ್ನು ಬಿಟ್ಟು. “ನನಗೆ ಮಾತ್ರ ಒಳ್ಳೆಯದನ್ನು ಕೊಡು” ಎಂದು ಮಾಡುವ ಪೂಜೆ ರಾಜಸ.
“ಇನ್ನೊಬ್ಬರು ಹಾಳಾಗಬೇಕು-ನಾನು ಒಳ್ಳೆಯದಾಗಬೇಕು” ಎಂದು ಮಾಡುವ ಪೂಜೆ. ತಾಮಸ. ಇವು
ಲೋಕಕಂಟಕವಾದ ಘೋರ ಶ್ರದ್ಧೆ
ಶಾಸ್ತ್ರವಿಹಿತವಾದ ತಪಸ್ಸು ಎಂದರೆ: ಭಗವಂತನ ಪಾರಮ್ಯವನ್ನು ಅರಿತು, ಇನ್ನೊಬ್ಬರ ಬಗ್ಗೆ ಕೆಟ್ಟ ಯೋಚನೆ
ಮಾಡದೆ, ಲೋಕದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಮಾಡುವ ತಪಸ್ಸು. "ಸರ್ವೋತ್ಕರ್ಷೆ ದೇವ ದೇವಸ್ಯ
ವಿಷ್ಣೋ ಮಹಾ ತಾತ್ಪರ್ಯಂ'- ಸಮಸ್ತ ಶಾಸ್ತ್ರಗಳ ತಾತ್ಪರ್ಯ- “ಭಗವಂತ ಸರ್ವೋತ್ತಮ' ಎನ್ನುವುದು. ಇದನ್ನು
ಒಪ್ಪಿಕೊಳ್ಳದೇ ಇರುವುದು ಶಾಸ್ತ್ರ ವಿರುದ್ಧ. ಇದನ್ನು ಒಪ್ಪಿಕೊಂಡು ಲೋಕಕ್ಕೆ ಕೆಟ್ಟದಾಗಲಿ ಎನ್ನುವ ಭಾವನೆ
ಮನದಲ್ಲಿ ಮೂಡಿದರೆ ಅದೂ ಕೂಡಾ ಅಶಾಸ್ತ್ರವಿಹಿತವಾಗುತ್ತದೆ. ಯಾವುದು ಶಾಸ್ತ್ರವಿಹಿತ ಅಲ್ಲವೋ ಅದು
ಭಗವಂತನಿಗೆ ಪ್ರಿಯವಲ್ಲ. ಇನ್ನೊಬ್ಬರ ಬಗ್ಗೆ ಕೆಟ್ಟದ್ದನ್ನು ಬಯಸಿ, ಸ್ವಾರ್ಥದಿಂದ ಮಾಡುವ ಕರ್ಮ 'ಘೋರ ಕ್ರಿಯೆ'
ಎನಿಸುತ್ತದೆ ಎನ್ನುವ ಎಚ್ಚರವನ್ನು ಕೃಷ್ಣ ಇಲ್ಲಿ ಕೊಟ್ಟಿದ್ದಾನೆ. ಇಂತಹ ಕ್ರಿಯೆಯ ಹಿಂದೆ ಡಂಭಾಚಾರ ಮತ್ತು
ಅಹಂಕಾರವಿರುತ್ತದೆ. ಇದನ್ನು ದೇವತೆಗಳು ಎಂದೂ ಸ್ವೀಕರಿಸುವುದಿಲ್ಲ.
ಕೆಲವರು ತಮ್ಮ ದೈಹಿಕ ಬಲದಿಂದ ಇನ್ನೊಬ್ಬರನ್ನು ಬಗ್ಗುಬಡಿಯಬೇಕು ಎನ್ನುವ ದುಷ್ಟ ಉದ್ದೇಶವಿಟ್ಟು
ತಪವನ್ನಾಚರಿಸುತ್ತಾರೆ. ಯಾರು ತಮ್ಮ ಕಾಮನೆಗಳಿಗೆ ಅಡ್ಡಿಪಡಿಸುತ್ತಾರೋ, ತಮ್ಮ ಇಷ್ಟಾನಿಷ್ಠಗಳಿಗೆ
ಸ್ಪಂದಿಸುವುದಿಲ್ಲವೋ, ಅಂಥವರನ್ನು ಮುಗಿಸಬೇಕು ಎನ್ನುವ ಕೆಟ್ಟ ಚಿಂತನೆ ಇವರ ಮನಸ್ಸಿನಲ್ಲಿರುತ್ತದೆ. ಹೀಗೆ
ಡಂಭದಿಂದ, ಅಹಂಕಾರದಿಂದ, ಸಂಕುಚಿತ ಕಾಮದಿಂದ, ಸ್ವಾರ್ಥದಿಂದ, Brey BOT ಕ್ರಿಯೆ ಮಾಡುವವರು
ತಿಳಿಗೇಡಿಗಳು. ಇವರು ತಮ್ಮ ದೇಹವನ್ನು ದಂಡನೆ ಮಾಡಿ ತಪಸ್ಸನ್ನಾಚರಿಸುತ್ತಾರೆ.ಆದರೆ ಅವರಿಗೆ ತಮ್ಮ
ದೇಹದಲ್ಲಿರುವ ಭೂತಗ್ರಾಮದ(ದೇವತೆಗಳ ಸಮೂಹದ) ಎಚ್ಚರವಿರುವುದಿಲ್ಲ. ಸಮಸ್ತ ದೇವತಾಗಣವನ್ನು
ನಿರ್ಲಕ್ಷ್ಯ ಮಾಡಿ, ದೇವತೆಗಳ ಒಳಗಿರುವ ಭಗವಂತನನ್ನೂ ನಿರ್ಲಕ್ಷ್ಯ ಮಾಡಿ, ದೇಹದಂಡನೆ ಮಾಡಿಕೊಂಡು
ಅನುಷ್ಠಾನ ಮಾಡುವ ಇವರು ಅಸುರರೆನಿಸುತ್ತಾರೆ. ಇವರು 'ಇಂದ್ರಿಯ ಕರ್ಮವೇ ಸರ್ವಸ್ವ-ಅದರಿಂದಾಚೆಗೆ
ಏನೂ ಇಲ್ಲ' ಎಂದು ತಿಳಿದಿರುತ್ತಾರೆ.
ಕೃಷ್ಣನ ಈ ವಿವರಣೆಯನ್ನು ನೋಡಿದಾಗ ನಮ್ಮ-ನಿಮ್ಮೊಳಗಿರುವ ಈ ಅಸುರ(ಪ್ರಭಾವದಿಂದ ಬೆಳೆದ
ಅಂಧಃಶ್ರದ್ಧ) ಎಷ್ಟು ಭಯಾನಕ ಎನ್ನುವ ಅಂಶ ನಮಗೆ ತಿಳಿಯುತ್ತದೆ. ಇದನ್ನು ನಾವು ನಮ್ಮ ಪ್ರತಿಯೊಂದು
ಕ್ರಿಯೆಯಲ್ಲೂ ಗುರುತಿಸಿಕೊಂಡು ತಿದ್ದಿಕೊಳ್ಳಬೇಕು. ಇದಕ್ಕಾಗಿ ಕೃಷ್ಣ ಮುಂದಿನ ಶ್ಲೋಕಗಳಲ್ಲಿ ಆಹಾರ, ತಪಸ್ಸು
ದಾನ ಇತ್ಯಾದಿಯಲ್ಲಿ ಸಾತ್ವಿಕ, ರಾಜಸ ಮತ್ತು ತಾಮಸ ಪ್ರಭೇದ ಹೇಗಿರುತ್ತದೆ ಎನ್ನುವುದನ್ನು ವಿವರಿಸುತ್ತಾನೆ.
Bibek Debroy (1955–2024)The Bhagavad Gita
(6)
‘...Devoid of consciousness, torture the elements in the body and also me,
inside the body.13 Know them to be driven by demonic14 resolution.’