2.12

न त्वेवाहं जातु नासं न त्वं नेमे जनाधिपाः ।
न चैव न भविष्यामः सर्वे वयमतः परम् ॥
na tvevāhaṃ jātu nāsaṃ na tvaṃ neme janādhipāḥ |
na caiva na bhaviṣyāmaḥ sarve vayamataḥ param ||
Sri Madhvacharya (1238–1317)Bhagavad Gita Tatparya Nirnaya
बन्धुस्नेहाद्धि त्वया स्वधर्मनिवृत्तिः क्रियते। तत्र देहनाशभयात् किं वा चेतननाशभयात् ? देहस्य सर्वथा विनाशित्वान्न तत्र भये प्रयोजनम्। न च चेतननाशभयात्। तस्याविनाशित्वादेव। न तावत् परम चेतनस्य मम नाशोऽस्ति। एवमेव तवान्येषां च ‘नित्यो नित्यानां चेतनश्चेतनानाम् एको बहूनां यो विदधाति कामान्’॥इत्यादि श्रुतेः। ‘स्वदेहयोगविगमौ नाम जन्ममृती पुरा। इष्येते ह्येव जीवस्य मुक्तेर्न तु हरेः क्वचित्॥इति स्कान्दे। ईश्वरस्यापि युद्धगतत्वान्मोहात् तस्याप्युभयविधानित्यत्वशङ्काप्राप्तौ तदपि निवार्यते - न त्वेवाहमिति। यद्यष्येषा शङ्काऽर्जुनस्य नास्ति तथाऽपि प्राप्तलोकोपकारार्थं भगवता निवार्यते। एकान्ते कथयन्नपि व्यासरूपेण तदेव लोके प्रकाशयिष्यति हि॥12॥
Swami Sivananda (1887–1963)Bhagavad Gita
12. Nor at any time indeed was I not, nor these rulers of men, nor verily shall we ever cease to be hereafter.
Sri Vishwesha Tirtharu (1931–2019)Gitasaroddhara
2.11–2.13 · ಅಶೋಚ್ಯಾನನ್ವಶೋಚಸ್ತ್ವಂ
""ಅಶೋಚ್ಯಾನನ್ಹತೋಚಸ್ತ ವ್‌” ಮೊದಲಾಗಿ ಶ್ರೀಕೃಷ್ಣನು ಅರ್ಜುನನಲ್ಲಿ "ನಿನ್ನ ಶೋಕಾವೇಗಕ್ಕೆ ಕಾರಣಗಳಾದ ಸಂಗತಿಗಳು ಯಾವವು9'' ಎಂದು ಕೇಳುವನು. ""ಬಂಧು ನಾಶಕ್ಕಾಗಿ ವರಿತಪಿಸುತ್ತಿ ರುವ ನಿನ್ನ ಆಕ್ರೋಶವು ಅವರ ಆತ್ಮ ದ ನಾಶದ ಬಗ್ಗೆ ಯೊ ಅಥವಾ ಈ ಶರೀರನಾಶದ ವಿಚಾರವಾಗಿಯೊ? ಆತ್ಮವಿನಾಶದ ಬಗ್ಗೆ ನಿನ್ನ ಈ ಶೋಕವು ಅನುಚಿತ. ಆತ್ಮನು ನಿತ್ಯನು; ಅಜರಾಮರನು. ನೀನಾಗಲಿ, ನಾನಾಗಲಿ, ನಮ್ಮ ಮುಂದಿರುವ ಈ ಎಲ್ಲ ಜನನಾಯಕರಾಗಲಿಎಲ್ಲರೂ ಹಿಂದೂ ಇದ್ದವರೇ ಮುಂದೂ ಇರುವವರೇ. ಆದ್ದ ರಿಂದ ಆತ್ಮದನಾಶದ ಕಲ್ಪನೆಯನ್ನೇಮಾಡಲಾರೆ. ಅದಕ್ಕಾಗಿ ಯಾಕೆವ್ಯಥೆವಡುವಿ? "ಇನ್ನು ನಾನು ಪ್ರೀತಿಸಿ ಲಾಲಿಸಿದ ಹಾಗೂ ಗೌರವಿಸಿದ ಈ ಶರೀರಗಳಲ್ಲ ನನ್ನ ಮುಂದೆಯೇ ಛಿನ್ನವಿಚ್ಛಿನ್ನಗಳಾಗಿ ನಷ್ಟಹೊಂದುವವೆಂದು ಖೇದವೆ? ಅರ್ಜುನ। ಹಳೇ ಮನೆಯನ್ನು ಕೆಡವಿ ಹೊಸ ಮನೆಯನ್ನು ಕಟ್ಟುವಾಗ ಯಾರಾದರೂ ಅಳುತ್ತಾರೆಯೆ? ಹಳೇ ಅಂಗಿ-ಅರಿವೆಗಳನ್ನು ತೊರೆದು ಹೊಸ ವೇಷಭೂಷಣಗಳನ್ನು ನೀಡಿದಾಗ ಮಕ್ಕಳು ಕುಣಿಯುವುದಿಲ್ಲವೆ? ಬಾಲ್ಯವು ಕಳೆದು ತಾರುಣ್ಯಾವಸ್ಥೆಯನ್ನು ತಲುಪಿದಾಗ ಸಂತಸ ಪಡುವುದನ್ನೇ ನಾವು ಕಾಣುತ್ತೇವಲ್ಲವೆ? ಜಗತ್ತಿನಲ್ಲಿ ಬದಲಾವಣೆ ಅನಿವಾರ್ಯ ಹಾಗೂ ಅಪೇಕ್ಷಿತ; ಉದ್ಯಾನದಲ್ಲಿ ಹಳೇ ಪುಷ್ಪಗಳು ಉದುರಿ ಹೊಸ ಪುಷ್ಪಗಳು ಅರಳುವಂತೆ. ನಾವು ಪ್ರಸನ್ನತೆಯಿಂದಲೇ ಈ ಪರಿವರ್ತನೆಗಳನ್ನು ಸ್ವಾಗತಿಸುತ್ತಿರಬೇಕು. ಮರಣಕ್ಕಾಗಿ ಸರ್ವಥಾ ಅಂಜಬಾರದು. ಬಾಲ್ಯ ಕೌಮಾರ, ತಾರುಣ್ಯಗಳಂತೆ ಮರಣವೂ ಒಂದು ದಶಾಪರಿವರ್ತನೆ ಮಾತ್ರವೆಂದು ಭಾವಿಸಿ ಅಶಾಶ್ವತವಾದ ಈ ಶರೀರದ ನಾಶಕ್ಕಾಗಿ ಪರಿತಪಿಸಬಾರದು. "ಅಥವಾ ಈ ಶರೀರ ನಾಶವಾಗಿ ಇದರ ಬದಲು ಮುಂದೆ ಎಂತಹ ಶರೀರವನ್ನು ಇವರೆಲ್ಲ ಪಡೆಯುವರು? ಬಾಡಿಗೆಯ ಮನೆಯನ್ನು ತೊರೆದು ಅದಕ್ಕಿಂತಕೆಟ್ಟಮನೆಯನ್ನು ಪಡೆಯುವಂತಾದರೆ ಜನರು ಪರಿತಪಿಸುವುದಿಲ್ಲವೆ? ಹೀಗೆ ಈ ದೇಹನಾಶಕ್ಕಾಗಿ ಶೋಕ ಅನುಚಿತವಾದರೂ ಮುಂದೆ ಬರಬಹುದಾದ ಹೀನದೇಹಗಳ ಭಯ, ಆಶಂಕೆಗಳಿಂದ ಪರಿತಾಪವೆನ್ನುವಿಯೊ? ಭೀಷ್ಮ-ದ್ರೋಣಾದಿಗಳಂತಹ ಜೀವನವಿಡೀ ಶ್ರೇಷ್ಠ ಕಾರ್ಯಗಳನ್ನೇ ಎಸಗಿದ ಸಜ್ಜನರ ಬಗ್ಗೆ ಯಾಕೆ ಕನಿಕರಪಡುವಿ? ಅವರಿಗೆ ಮರಣಾನಂತರ ಶ್ರೇಷ್ಠವಾದ ಸ್ಥಾನವು ನಿರ್ವಿವಾದ. ಜೀವನದಲ್ಲಿ ಅಕೃತ್ಯವನ್ನು ನಡೆಸಿದವರೇ ಮರಣಕ್ಕೆ ಅಂಜಬೇಕು. ಕಳ್ಳರು ತಮ್ಮ ನೆರಳಿಗೇ ಅಂಜುವಂತೆ ಜೀವನದಲ್ಲಿ ಅವ್ಯವಹಾರವನ್ನು ಮಾಡಿರುವವರು ಮಾತ್ರ ಜೀವನದನೆರಳಿನಂತಿರುವ ಮರಣಕ್ಕೆ ಭಯಪಡುವರು. ಜ್ಞಾನಿಗಳಿಗೆ, ಉತ್ತಮ ವ್ಯಕ್ತಿಗಳಿಗೆ ಮರಣವು ಜೀವನಯಜ್ಞದ ಅವಭೃಥವೇ ಆಗಿದೆ. ಮರಣದ ನಂತರ ಇನ್ನೂ ಉತ್ತ ಮವಾದ ಸಂದರ್ಭಗಳು ಅವರಿಗೆ ಕಾದಿವೆ. ಆದುದರಿಂದ ಸಜ್ಜನರ ಮರಣದ ಬಗ್ಗೆ ನೀನು ಕಾತರಿಸಬೇಕಾಗಿಲ್ಲ. ದುಷ್ಟರು ಮಾತ್ರ ತಮ್ಮ ಮರಣದ ನಂತರ ಹೀನ ಶರೀರಗಳನ್ನು ಪಡೆಯಬಹುದು. ದುಷ್ಪಕಾರ್ಯಗಳಿಗೆ ಯೋಗ್ಯ ದಂಡನೆಯೂ ಆಗಲೇಬೇಕಾದುದು. ಎಷ್ಟೋ ಸಜ್ಜನರೂ ಅಕಸ್ಮಾತ್‌ ಸಂಭವಿಸಿದ ಪಾಪಕ್ಕತ್ಯಗಳಿಗೆ ಸ್ವಯಂ ಪ್ರೇರಣೆಯಿಂದ ಶಿಕ್ಷೆಯನ್ನು ಪಡೆದು ಪಾಪಪ್ರಕ್ಷಾಲನವನ್ನು ನಡೆಸಿಕೊಂಡ ಇತಿಹಾಸಗಳೂ ಸಾಕಷ್ಟು ಇವೆ. ಆದ್ದರಿಂದ ದುರ್ಜನರ ಮರಣದ ನಂತರದ ಸಂಗತಿಗಳನ್ನು ಆಲೋಚಿಸಿಕೊಂಡು ಚಿಂತಿಸುವುದು ಅನಾವಶ್ಯಕವೆನಿಸುತ್ತದೆ. ದುಷ್ಟರ ಬಗ್ಗೆ ಅನುಚಿತ ಅನುಕಂಪದಿಂದ ಸಮಾಜವ್ಯವಸ್ಥೆಯೇ ಶಿಥಿಲವಾಗಬಹುದು. ಅಂತೂ ಶರೀರವು ನಶ್ಚರವಾಗಿದ್ದು ಅದರಲ್ಲಿ ಬದಲಾವಣೆಯು ಅನಿವಾರ್ಯವೂ ಸ್ವಾಗತಾರ್ಹವೂ ಆಗಿದೆ. ಆತ್ಮನಂತೂ ಶಾಶ್ವತ ವಸ್ತು ಹೀಗಾಗಿ ನಿನ್ನ ಶೋಕಕ್ಕೆ ಕಾರಣವೇ ಇರುವುದಿಲ್ಲ.'' ಇಲ್ಲಿ ನಮ್ಮ ಪ್ರತ್ಯಕ್ಷಗೋಚರವಾಗಿರುವ ಶರೀರದಿಂದ ಪ್ರತ್ಯೇಕನಾದ ಆತ್ಮನನ್ನು ಯಾಕೆ ಒಪ್ಪಬೇಕು? ಶರೀರವೇ ಆತ್ಮ. ಶರೀರದನಾಶದ ಜೊತೆಗೆ ಈ ಆತ್ಮನೂ ಎಂದೆಂದಿಗೂ ಇಲ್ಲದವನಾಗುವನೆಂದು ಶಂಕಿಸಬಹುದು. ಆದರೆ ಶಾಸ್ತ್ರ ಯುಕ್ತಿ ಪ್ರತ್ಯಕ್ಷಾನುಭವಗಳಿಂದ ಶರೀರಕ್ಕಿಂತ ಬೇರೆಯಾದ ಆತ್ಮನ ಅಸ್ತಿತ್ವ ಸಿದ್ಧವಾಗುವುದು. ಶೈತವದಿಂದ ವಾರ್ಧಕೃದವರೆಗೆ ಶರೀರದಲ್ಲಿ ಬೇಕಾದಷ್ಟು ಬದಲಾವಣೆಗಳಾದರೂ ಪ್ರಾರಂಭದಿಂದ ಕೊನೆಯವರೆಗೂ ಅನುಸ್ಯೂತನಾದ ಒಬ್ಬ ಆತ್ಮನನ್ನು ನಾವು ಅನುಭವಿಸುತ್ತಿದ್ದೇವೆ. ದಿನದಿನವೂ ಬದಲಾಗುತ್ತಿರುವ ಈ ಶರೀರದಲ್ಲಿ ಅನುಭವದ ಏಕಸೂತ್ರತೆಯನ್ನು ನಾವು ಕಾಣುತ್ತಿದ್ದೇವೆ. ನಮ್ಮ ಈ ಅನುಭವದಿಂದ ನಾವು ಶರೀರದಿಂದ ವ್ಯಕಿರಿಕ್ತನಾದ ಆತ್ಮನನ್ನು ಒಪ್ಪಲೇಬೇಕಾಗಿದೆ. ನಾವು ಅನೇಕ ವ್ಯಕ್ತಿಗಳಲ್ಲಿ ಆನುವಂಶಿಕ ಹಾಗೂ ಪಾರಿವಾರಿಕ ಗುಣಗಳಿಂದ ಬೇರೆಯಾದ ಗುಣ, ಅಭಿರುಚಿಗಳನ್ನು ಕಾಣುತ್ತಿದ್ದೇವೆ. ತಂದೆ-ತಾಯಂದಿರಲ್ಲಿ ಅಥವಾ ಸುತ್ತಮುತ್ತಲಿನ ಪರಿವಾರದಲ್ಲಿ ಇಲ್ಲದ ಗುಣ, ಅಭಿರುಚಿಗಳು ಮಕ್ಕಳಲ್ಲಿ ಎಲ್ಲಿಂದ ಬರುತ್ತವೆ? ಹುಟ್ಟುವಾಗ ಮಕ್ಕಳ ಮನಸ್ಸು ಖಾಲಿ ಕಾಗದದಂತೆ ಶೂನ್ಯವಾಗಿ ಇರುವುದಿಲ್ಲ. ಹಿಂದಿನ ಜನ್ಮದ ನಾನಾ ಅನುಭವಗಳ ಕಹಿಸಿಹಿಗಳ ಪಡಿಯಚ್ಚು ಆ ಮನಸ್ಸಿನಲ್ಲಿ ಇದ್ದೇ ಇದೆ. ಇಂತಹ ಹಿಂದಿನ ಅನೇಕ ಸಂಸ್ಕಾರಗಳಿಂದ ಚಿತ್ರಿತವಾದ ಮನಸ್ಸನ್ನು ಹಿಡಿದುಕೊಂಡೇ ಮಕ್ಕಳು ಹೊರಜಗತ್ತಿಗೆ ಬರುವವು. ಆದ್ದರಿಂದ ವಿಚಿತ್ರ ಸ್ವಭಾವ, ನಡೆ ನುಡಿ, ಅಭಿರುಚಿಗಳನ್ನು ಆವುಗಳಲ್ಲಿ ಕಾಣುತ್ತೇವೆ. ಹೀಗೆ ಮಕ್ಕಳಲ್ಲಿ ಇರುವ ಸಂಸ್ಕಾರ ವೈಚಿತ್ರ್ಯಗಳಿಗೆ ಹಿನ್ನೆಲೆಯಾಗಿ ಜನ್ಮಾಂತರವನ್ನು ಒಪ್ಪಿದ ನಂತರ ದೇಹದಿಂದ ಬೇರೆಯಾದ ಆತ್ಮನ ಅಸ್ತಿತ್ವದಲ್ಲಿ ವಿವಾದಕ್ಕೆ ಅವಕಾಶವಿರುವುದಿಲ್ಲ. ನಮಗೆ ಇರುವ ಜ್ಞಾನದ ಶಕ್ತಿಯಿಂದಲೂ ಶರೀರದಿಂದ ಭಿನ್ನವಾದ ಜೀವವನ್ನು ಒಪ್ಪಿಕೊಳ್ಳಬೇಕಾಗುವುದು. ಜಡದಲ್ಲಿ ಜ್ಞಾನದ ಶಕ್ತಿ ಇರಲು ಸಾಧ್ಯವೇ ಇಲ್ಲ. ಜಡದ ಪರಿಣಾಮವಾದ ದೇಹದಲ್ಲಿ ಮಾತ್ರ ಜ್ಞಾನವು ಹೇಗೆ ಉದಿಸೀತು? ಅಕ್ಕಿಯಲ್ಲಿ ಹುಳವು ಹುಟ್ಟುವುದು. ಅಶುಚಿಸ್ಥಳಗಳಲ್ಲಿ ಕೃಮಿಗಳು ಹುಟ್ಟುತ್ತವೆ. ಯಾವ ಜೀವಾಣುಗಳ ಸಹಾಯವಿಲ್ಲದೆ ತನ್ನಷ್ಟಕ್ಕೇ ಪ್ರಕೃತಿಯಿಂದ ಇವು ಹುಟ್ಟುವವೆಂದು ವಿಜ್ಞಾನಿಗಳು ಒಪ್ಪುತ್ತಿಲ್ಲ ಅಲ್ಲಿಯೂ ಆಯಾಯ ಪ್ರುಣಿಗಳು ಮೊಟ್ಟೆಯಿಟ್ಟೇ ಜೀವ- ಜಂತುಗಳನಿರ್ಮಾಣವಾಗುತ್ತದೆಯೆಂದು ವಿಜ್ಞಾನಿಗಳ ಮತ. ಅಂತೂ ಜೀವಾಣುವಿನ ಸಹಾಯವಿಲ್ಲದೆ ಜ್ಞಾನವುಳ್ಳ ಜಂತುವು ಹುಟ್ಟಲಾರದು. ಜೀವಾಣುಗಳೇ ಒಂದು ಎರಡಾಗಿ ನಾಲ್ಕಾಗಿ ಅನಂತ ಜೀವಾಣುಗಳ ನಿರ್ಮಾಣವಾಗಿದೆಯೆಂದು ವಿಜ್ಞಾನಿಗಳ ಪ್ರತಿಪಾದನೆಯಿದೆ. ಹಾಗಿದ್ದರೆ ಪ್ರಥಮ ಜೀವಾಣುವಿನ ರಚನೆಯು ಸೃಷ್ಟಿಯ ಆದಿಯಲ್ಲಿ ಹೇಗೆ ನಡೆಯಿತು? ಇನ್ನೊಂದು ಜೀವಾಣುವಿನ ಸಹಾಯವಿಲ್ಲದೆ ಜೀವಾಣುವಿನ ನಿರ್ಮಿತಿಯಾಗಲಾರದಷ್ಟೆ? ಸೃಷ್ಟಿಯ ಆರಂಭದಲ್ಲಿ ಯಾವ ಜೀವಾಣುವೂ ಇಲ್ಲದೆ ಕೇವಲ ಜಡದ ಸಹಾಯದಿಂದ ಪ್ರಥಮ ಜೀವಾಣುವು ಹೇಗೆ ನಿರ್ಮಿತವಾಯಿತು? ಅಂದು ಕೇವಲ ಜಡದಿಂದಲೇ ಪ್ರಕೃತಿಯ ಸಹಜ ಚಮತ್ಕಾರದಿಂದ ಜೀವನಸೃಷ್ಟಿಯಾಗಿದ್ದರೆ, ಇಂದು ಎಲ್ಲಿಯೂ ಯಾಕೆ ಅಂತಹ ಘಟನೆ ನಡೆಯುತ್ತಿಲ್ಲ? ಇದು ವಿಜ್ಞಾನಿಗಳಿಗೆ ಬಿಡಿಸಲಾರದ ಒಗಟೆನಿಸಿದೆ. ಅನೇಕ ಜೀವಶಾಸ್ತ್ರಜ್ಞರಲ್ಲಿ ನಾವು ಈ ಪ್ರಶ್ನೆ ಕೇಳಿದಾಗ, ಪ್ರಥಮ ಜೀವನ ಉತ್ಪತ್ತಿಯ ಬಗ್ಗೆ ಸರಿಯಾದ ಪರಿಹಾರ ದೊರೆತಿಲ್ಲವೆಂದೇ ತಿಳಿಸಿರುವರು. ಆದುದರಿಂದ ಜಡದಿಂದ ಬೇರೆಯಾದ ಜ್ಞಾನವುಳ್ಳ ಜೀವವಸ್ತುವನ್ನು ನಾವು ಒಪ್ಪಿಯೇ ಈ ಸಮಸ್ಯೆಯನ್ನು ಪರಿಹರಿಸಬೇಕಾಗುವುದು. ನಮ್ಮ ಜೀವನವು ಈ ಶರೀರದ ಉತ್ಪತ್ತಿಯಿಂದ ಆರಂಭವಾಗಿರದೆ ಅನಾದಿಕಾಲದ ಇತಿಹಾಸವು ಈ ಆತ್ಮನಿಗೆ ಇದೆಯೆಂಬ ಮಾತನ್ನು ಒಪ್ಪಲೇಬೇಕಾಗುವುದು. ಅಂತೂ ದೇಹಾತಿರಿಕ್ತನಾದ ನಿತ್ಯನಾದ ಆತ್ಮನ ಅಸ್ತಿತ್ವವನ್ನು ಒಪ್ಪಿದ ನಂತರ ನಾವು ಯಾರದೇಮರಣದ ಬಗ್ಗೆ ಕಂಗೆಡಬೇಕಾಗಿಲ್ಲವೆಂದು ಸ್ಪಷ್ಟವಾಯಿತು. ಇವೆಲ್ಲ ವಿಚಾರಗಳನ್ನು ಪರಮಾತ್ಮನು- ದೇಹಿನೋಸಸ್ಟಿನ್‌ ಯಥಾ ದೇಹೇ ಹೌಮಾರಂ ಯೌವನಂ ಜರಾ। ತಥಾ ದೇಹಾಂತರಪ್ರಾಪ್ತಿ- ರ್ಧೀರಸ್ಪತ್ರ ನ ಮುಷ್ಕತಿ ॥ ಎಂಬ ಶ್ಲೊ ದಿಂದಸೂಚಿಸುವನು.
Bannanje Govindacharya (1936–2020)Bhagavad Gita Pravachana
ನ ತು ಏವ ಅಹಮ್‌ ಜಾತು ನ ಅಸಮ್‌ ನ ತ್ವಮ್‌ ನ ಇಮೇ ಜನ ಅಧಿಪಾಃ | ನಚ ಏವ ನ ಭವಿಷ್ಯಾಮಃ ಸರ್ವೇ ವಯಮ್‌ ಅತಃ ಪರಮ್‌... ನಾನು ಹಿಂದೆ ಎಂದೂ ಇರದಿದ್ದವನಲ್ಲ. ಅಲ್ಲ ನೀನೂ. ಅಲ್ಲ ಈ ಅರಸರೂ. ಇನ್ನು ಮುಂದೂ ನಾವೆಂದೂ ಇಲ್ಲವಾಗುವವರಲ್ಲ. ಕೃಷ್ಣ ಇಲ್ಲಿ ಸಾವಿನ ಬಗ್ಗೆ ನಾವು ಏಕೆ ಚಿಂತಿಸಬೇಕಿಲ್ಲ ಎನ್ನುವ ಮಾತಿಗೆ ಪೂರಕವಾಗಿ, ಅದನ್ನು ಸಮರ್ಥಿಸುವ ಮಾತನ್ನು ಹೇಳುತ್ತಾನೆ. ಆತ ಹೇಳುತ್ತಾನೆ: "ನಾನು-ನೀನು ಈ ಎಲ್ಲಾ ರಾಜರು, ಹಿಂದೆ ಇದ್ದೆವು, ಇಂದು ಇದ್ದೇವೆ ಹಾಗೂ ಮುಂದೆ ಕೂಡಾ ಇರುತ್ತೇವೆ. ದೇಹ ನಾಶವಾದಾಗ ಜೀವ ನಾಶವಾಗುವುದಿಲ್ಲ. ನಾನು ಹೇಗೆ ಅನಾದಿನಿತ್ಯವೋ ಹಾಗೇ ಪ್ರತಿಯೊಂದು ಜೀವರು ಕೂಡಾ ಅನಾದಿನಿತ್ಯ. ಆತ್ಮವನ್ನು ಕೊಲ್ಲುವುದು ಅಸಾಧ್ಯ” ಎಂದು. ಅನಂತ ಜೀವದ ಹರವು ಅನಂತ ಕಾಲದ ತನಕ ನಿರಂತರವಾಗಿರುತ್ತದೆ. ಆತ್ಮ ಎಂದೆಂದಿಗೂ ಅಜರಾಮರ. ಪ್ರತಿಯೊಂದು ಜೀವಕ್ಕೆ ಅದರದ್ದೇ ಆದ ಸ್ವಭಾವವಿದೆ. ಜೀವ ಒಂದು ಬೀಜದಂತೆ. ಭಗವಂತ ಒಬ್ಬ ತೋಟಗಾರನಂತೆ. ಆತ ಈ ಪ್ರಪಂಚವೆಂಬ ತೋಟದ ಸೃಷ್ಟಿ ಮಾಡಿ, ಈ ಜೀವವನ್ನು ಆ ತೋಟದಲ್ಲಿ ಬಿತ್ತಿ ಅದಕ್ಕೊಂದು ಅಸ್ತಿತ್ವವನ್ನು ಕೊಟ್ಟ. ಪ್ರತಿಯೊಂದು ಜೀವ ಅದರ ಸ್ವಭಾವಕ್ಕನುಗುಣವಾಗಿ ಈ ಪ್ರಪಂಚದಲ್ಲಿ ಬೆಳೆಯುತ್ತವೆ. ಒಂದು ಜೀವದ ಸ್ವಭಾವ ಇನ್ನೊಂದು ಜೀವದ ಸ್ವಭಾವಕ್ಕಿಂತ ಭಿನ್ನ. ಈ ಕಾರಣದಿಂದಾಗಿ ಈ ಪ್ರಪಂಚ ಇಷ್ಟೊಂದು ವೈವಿದ್ಯಪೂರ್ಣ.
Bibek Debroy (1955–2024)The Bhagavad Gita
‘You speak as if you are wise, but you are grieving over those that one should not sorrow over. The wise don’t sorrow over those who are dead or those who are alive.’ (12) ‘It is not that I, or you, or these kings, did not exist before this. Nor is it that we won’t exist in the future, all of us will be there.’