2.11

श्रीभगवानुवाच ।
अशोच्यानन्वशोचस्त्वं प्रज्ञावादांश्च भाषसे ।
गतासूनगतासूंश्च नानुशोचन्ति पण्डिताः ॥
śrībhagavānuvāca |
aśocyānanvaśocastvaṃ prajñāvādāṃśca bhāṣase |
gatāsūnagatāsūṃśca nānuśocanti paṇḍitāḥ ||
Sri Madhvacharya (1238–1317)Bhagavad Gita Tatparya Nirnaya
प्रकर्षेण जानन्तीति प्रज्ञाः तदवादः - प्रज्ञावादः। प्राज्ञमतविरुद्धवादं वदसि। कथम् ? गतासून् ॥11॥
Swami Sivananda (1887–1963)Bhagavad Gita
11. Thou hast grieved for those that should not be grieved for, yet thou speakest words of wisdom. The wise grieve neither for the living nor for the dead.
Sri Vishwesha Tirtharu (1931–2019)Gitasaroddhara
2.11–2.13 · ಅಶೋಚ್ಯಾನನ್ವಶೋಚಸ್ತ್ವಂ
""ಅಶೋಚ್ಯಾನನ್ಹತೋಚಸ್ತ ವ್‌” ಮೊದಲಾಗಿ ಶ್ರೀಕೃಷ್ಣನು ಅರ್ಜುನನಲ್ಲಿ "ನಿನ್ನ ಶೋಕಾವೇಗಕ್ಕೆ ಕಾರಣಗಳಾದ ಸಂಗತಿಗಳು ಯಾವವು9'' ಎಂದು ಕೇಳುವನು. ""ಬಂಧು ನಾಶಕ್ಕಾಗಿ ವರಿತಪಿಸುತ್ತಿ ರುವ ನಿನ್ನ ಆಕ್ರೋಶವು ಅವರ ಆತ್ಮ ದ ನಾಶದ ಬಗ್ಗೆ ಯೊ ಅಥವಾ ಈ ಶರೀರನಾಶದ ವಿಚಾರವಾಗಿಯೊ? ಆತ್ಮವಿನಾಶದ ಬಗ್ಗೆ ನಿನ್ನ ಈ ಶೋಕವು ಅನುಚಿತ. ಆತ್ಮನು ನಿತ್ಯನು; ಅಜರಾಮರನು. ನೀನಾಗಲಿ, ನಾನಾಗಲಿ, ನಮ್ಮ ಮುಂದಿರುವ ಈ ಎಲ್ಲ ಜನನಾಯಕರಾಗಲಿಎಲ್ಲರೂ ಹಿಂದೂ ಇದ್ದವರೇ ಮುಂದೂ ಇರುವವರೇ. ಆದ್ದ ರಿಂದ ಆತ್ಮದನಾಶದ ಕಲ್ಪನೆಯನ್ನೇಮಾಡಲಾರೆ. ಅದಕ್ಕಾಗಿ ಯಾಕೆವ್ಯಥೆವಡುವಿ? "ಇನ್ನು ನಾನು ಪ್ರೀತಿಸಿ ಲಾಲಿಸಿದ ಹಾಗೂ ಗೌರವಿಸಿದ ಈ ಶರೀರಗಳಲ್ಲ ನನ್ನ ಮುಂದೆಯೇ ಛಿನ್ನವಿಚ್ಛಿನ್ನಗಳಾಗಿ ನಷ್ಟಹೊಂದುವವೆಂದು ಖೇದವೆ? ಅರ್ಜುನ। ಹಳೇ ಮನೆಯನ್ನು ಕೆಡವಿ ಹೊಸ ಮನೆಯನ್ನು ಕಟ್ಟುವಾಗ ಯಾರಾದರೂ ಅಳುತ್ತಾರೆಯೆ? ಹಳೇ ಅಂಗಿ-ಅರಿವೆಗಳನ್ನು ತೊರೆದು ಹೊಸ ವೇಷಭೂಷಣಗಳನ್ನು ನೀಡಿದಾಗ ಮಕ್ಕಳು ಕುಣಿಯುವುದಿಲ್ಲವೆ? ಬಾಲ್ಯವು ಕಳೆದು ತಾರುಣ್ಯಾವಸ್ಥೆಯನ್ನು ತಲುಪಿದಾಗ ಸಂತಸ ಪಡುವುದನ್ನೇ ನಾವು ಕಾಣುತ್ತೇವಲ್ಲವೆ? ಜಗತ್ತಿನಲ್ಲಿ ಬದಲಾವಣೆ ಅನಿವಾರ್ಯ ಹಾಗೂ ಅಪೇಕ್ಷಿತ; ಉದ್ಯಾನದಲ್ಲಿ ಹಳೇ ಪುಷ್ಪಗಳು ಉದುರಿ ಹೊಸ ಪುಷ್ಪಗಳು ಅರಳುವಂತೆ. ನಾವು ಪ್ರಸನ್ನತೆಯಿಂದಲೇ ಈ ಪರಿವರ್ತನೆಗಳನ್ನು ಸ್ವಾಗತಿಸುತ್ತಿರಬೇಕು. ಮರಣಕ್ಕಾಗಿ ಸರ್ವಥಾ ಅಂಜಬಾರದು. ಬಾಲ್ಯ ಕೌಮಾರ, ತಾರುಣ್ಯಗಳಂತೆ ಮರಣವೂ ಒಂದು ದಶಾಪರಿವರ್ತನೆ ಮಾತ್ರವೆಂದು ಭಾವಿಸಿ ಅಶಾಶ್ವತವಾದ ಈ ಶರೀರದ ನಾಶಕ್ಕಾಗಿ ಪರಿತಪಿಸಬಾರದು. "ಅಥವಾ ಈ ಶರೀರ ನಾಶವಾಗಿ ಇದರ ಬದಲು ಮುಂದೆ ಎಂತಹ ಶರೀರವನ್ನು ಇವರೆಲ್ಲ ಪಡೆಯುವರು? ಬಾಡಿಗೆಯ ಮನೆಯನ್ನು ತೊರೆದು ಅದಕ್ಕಿಂತಕೆಟ್ಟಮನೆಯನ್ನು ಪಡೆಯುವಂತಾದರೆ ಜನರು ಪರಿತಪಿಸುವುದಿಲ್ಲವೆ? ಹೀಗೆ ಈ ದೇಹನಾಶಕ್ಕಾಗಿ ಶೋಕ ಅನುಚಿತವಾದರೂ ಮುಂದೆ ಬರಬಹುದಾದ ಹೀನದೇಹಗಳ ಭಯ, ಆಶಂಕೆಗಳಿಂದ ಪರಿತಾಪವೆನ್ನುವಿಯೊ? ಭೀಷ್ಮ-ದ್ರೋಣಾದಿಗಳಂತಹ ಜೀವನವಿಡೀ ಶ್ರೇಷ್ಠ ಕಾರ್ಯಗಳನ್ನೇ ಎಸಗಿದ ಸಜ್ಜನರ ಬಗ್ಗೆ ಯಾಕೆ ಕನಿಕರಪಡುವಿ? ಅವರಿಗೆ ಮರಣಾನಂತರ ಶ್ರೇಷ್ಠವಾದ ಸ್ಥಾನವು ನಿರ್ವಿವಾದ. ಜೀವನದಲ್ಲಿ ಅಕೃತ್ಯವನ್ನು ನಡೆಸಿದವರೇ ಮರಣಕ್ಕೆ ಅಂಜಬೇಕು. ಕಳ್ಳರು ತಮ್ಮ ನೆರಳಿಗೇ ಅಂಜುವಂತೆ ಜೀವನದಲ್ಲಿ ಅವ್ಯವಹಾರವನ್ನು ಮಾಡಿರುವವರು ಮಾತ್ರ ಜೀವನದನೆರಳಿನಂತಿರುವ ಮರಣಕ್ಕೆ ಭಯಪಡುವರು. ಜ್ಞಾನಿಗಳಿಗೆ, ಉತ್ತಮ ವ್ಯಕ್ತಿಗಳಿಗೆ ಮರಣವು ಜೀವನಯಜ್ಞದ ಅವಭೃಥವೇ ಆಗಿದೆ. ಮರಣದ ನಂತರ ಇನ್ನೂ ಉತ್ತ ಮವಾದ ಸಂದರ್ಭಗಳು ಅವರಿಗೆ ಕಾದಿವೆ. ಆದುದರಿಂದ ಸಜ್ಜನರ ಮರಣದ ಬಗ್ಗೆ ನೀನು ಕಾತರಿಸಬೇಕಾಗಿಲ್ಲ. ದುಷ್ಟರು ಮಾತ್ರ ತಮ್ಮ ಮರಣದ ನಂತರ ಹೀನ ಶರೀರಗಳನ್ನು ಪಡೆಯಬಹುದು. ದುಷ್ಪಕಾರ್ಯಗಳಿಗೆ ಯೋಗ್ಯ ದಂಡನೆಯೂ ಆಗಲೇಬೇಕಾದುದು. ಎಷ್ಟೋ ಸಜ್ಜನರೂ ಅಕಸ್ಮಾತ್‌ ಸಂಭವಿಸಿದ ಪಾಪಕ್ಕತ್ಯಗಳಿಗೆ ಸ್ವಯಂ ಪ್ರೇರಣೆಯಿಂದ ಶಿಕ್ಷೆಯನ್ನು ಪಡೆದು ಪಾಪಪ್ರಕ್ಷಾಲನವನ್ನು ನಡೆಸಿಕೊಂಡ ಇತಿಹಾಸಗಳೂ ಸಾಕಷ್ಟು ಇವೆ. ಆದ್ದರಿಂದ ದುರ್ಜನರ ಮರಣದ ನಂತರದ ಸಂಗತಿಗಳನ್ನು ಆಲೋಚಿಸಿಕೊಂಡು ಚಿಂತಿಸುವುದು ಅನಾವಶ್ಯಕವೆನಿಸುತ್ತದೆ. ದುಷ್ಟರ ಬಗ್ಗೆ ಅನುಚಿತ ಅನುಕಂಪದಿಂದ ಸಮಾಜವ್ಯವಸ್ಥೆಯೇ ಶಿಥಿಲವಾಗಬಹುದು. ಅಂತೂ ಶರೀರವು ನಶ್ಚರವಾಗಿದ್ದು ಅದರಲ್ಲಿ ಬದಲಾವಣೆಯು ಅನಿವಾರ್ಯವೂ ಸ್ವಾಗತಾರ್ಹವೂ ಆಗಿದೆ. ಆತ್ಮನಂತೂ ಶಾಶ್ವತ ವಸ್ತು ಹೀಗಾಗಿ ನಿನ್ನ ಶೋಕಕ್ಕೆ ಕಾರಣವೇ ಇರುವುದಿಲ್ಲ.'' ಇಲ್ಲಿ ನಮ್ಮ ಪ್ರತ್ಯಕ್ಷಗೋಚರವಾಗಿರುವ ಶರೀರದಿಂದ ಪ್ರತ್ಯೇಕನಾದ ಆತ್ಮನನ್ನು ಯಾಕೆ ಒಪ್ಪಬೇಕು? ಶರೀರವೇ ಆತ್ಮ. ಶರೀರದನಾಶದ ಜೊತೆಗೆ ಈ ಆತ್ಮನೂ ಎಂದೆಂದಿಗೂ ಇಲ್ಲದವನಾಗುವನೆಂದು ಶಂಕಿಸಬಹುದು. ಆದರೆ ಶಾಸ್ತ್ರ ಯುಕ್ತಿ ಪ್ರತ್ಯಕ್ಷಾನುಭವಗಳಿಂದ ಶರೀರಕ್ಕಿಂತ ಬೇರೆಯಾದ ಆತ್ಮನ ಅಸ್ತಿತ್ವ ಸಿದ್ಧವಾಗುವುದು. ಶೈತವದಿಂದ ವಾರ್ಧಕೃದವರೆಗೆ ಶರೀರದಲ್ಲಿ ಬೇಕಾದಷ್ಟು ಬದಲಾವಣೆಗಳಾದರೂ ಪ್ರಾರಂಭದಿಂದ ಕೊನೆಯವರೆಗೂ ಅನುಸ್ಯೂತನಾದ ಒಬ್ಬ ಆತ್ಮನನ್ನು ನಾವು ಅನುಭವಿಸುತ್ತಿದ್ದೇವೆ. ದಿನದಿನವೂ ಬದಲಾಗುತ್ತಿರುವ ಈ ಶರೀರದಲ್ಲಿ ಅನುಭವದ ಏಕಸೂತ್ರತೆಯನ್ನು ನಾವು ಕಾಣುತ್ತಿದ್ದೇವೆ. ನಮ್ಮ ಈ ಅನುಭವದಿಂದ ನಾವು ಶರೀರದಿಂದ ವ್ಯಕಿರಿಕ್ತನಾದ ಆತ್ಮನನ್ನು ಒಪ್ಪಲೇಬೇಕಾಗಿದೆ. ನಾವು ಅನೇಕ ವ್ಯಕ್ತಿಗಳಲ್ಲಿ ಆನುವಂಶಿಕ ಹಾಗೂ ಪಾರಿವಾರಿಕ ಗುಣಗಳಿಂದ ಬೇರೆಯಾದ ಗುಣ, ಅಭಿರುಚಿಗಳನ್ನು ಕಾಣುತ್ತಿದ್ದೇವೆ. ತಂದೆ-ತಾಯಂದಿರಲ್ಲಿ ಅಥವಾ ಸುತ್ತಮುತ್ತಲಿನ ಪರಿವಾರದಲ್ಲಿ ಇಲ್ಲದ ಗುಣ, ಅಭಿರುಚಿಗಳು ಮಕ್ಕಳಲ್ಲಿ ಎಲ್ಲಿಂದ ಬರುತ್ತವೆ? ಹುಟ್ಟುವಾಗ ಮಕ್ಕಳ ಮನಸ್ಸು ಖಾಲಿ ಕಾಗದದಂತೆ ಶೂನ್ಯವಾಗಿ ಇರುವುದಿಲ್ಲ. ಹಿಂದಿನ ಜನ್ಮದ ನಾನಾ ಅನುಭವಗಳ ಕಹಿಸಿಹಿಗಳ ಪಡಿಯಚ್ಚು ಆ ಮನಸ್ಸಿನಲ್ಲಿ ಇದ್ದೇ ಇದೆ. ಇಂತಹ ಹಿಂದಿನ ಅನೇಕ ಸಂಸ್ಕಾರಗಳಿಂದ ಚಿತ್ರಿತವಾದ ಮನಸ್ಸನ್ನು ಹಿಡಿದುಕೊಂಡೇ ಮಕ್ಕಳು ಹೊರಜಗತ್ತಿಗೆ ಬರುವವು. ಆದ್ದರಿಂದ ವಿಚಿತ್ರ ಸ್ವಭಾವ, ನಡೆ ನುಡಿ, ಅಭಿರುಚಿಗಳನ್ನು ಆವುಗಳಲ್ಲಿ ಕಾಣುತ್ತೇವೆ. ಹೀಗೆ ಮಕ್ಕಳಲ್ಲಿ ಇರುವ ಸಂಸ್ಕಾರ ವೈಚಿತ್ರ್ಯಗಳಿಗೆ ಹಿನ್ನೆಲೆಯಾಗಿ ಜನ್ಮಾಂತರವನ್ನು ಒಪ್ಪಿದ ನಂತರ ದೇಹದಿಂದ ಬೇರೆಯಾದ ಆತ್ಮನ ಅಸ್ತಿತ್ವದಲ್ಲಿ ವಿವಾದಕ್ಕೆ ಅವಕಾಶವಿರುವುದಿಲ್ಲ. ನಮಗೆ ಇರುವ ಜ್ಞಾನದ ಶಕ್ತಿಯಿಂದಲೂ ಶರೀರದಿಂದ ಭಿನ್ನವಾದ ಜೀವವನ್ನು ಒಪ್ಪಿಕೊಳ್ಳಬೇಕಾಗುವುದು. ಜಡದಲ್ಲಿ ಜ್ಞಾನದ ಶಕ್ತಿ ಇರಲು ಸಾಧ್ಯವೇ ಇಲ್ಲ. ಜಡದ ಪರಿಣಾಮವಾದ ದೇಹದಲ್ಲಿ ಮಾತ್ರ ಜ್ಞಾನವು ಹೇಗೆ ಉದಿಸೀತು? ಅಕ್ಕಿಯಲ್ಲಿ ಹುಳವು ಹುಟ್ಟುವುದು. ಅಶುಚಿಸ್ಥಳಗಳಲ್ಲಿ ಕೃಮಿಗಳು ಹುಟ್ಟುತ್ತವೆ. ಯಾವ ಜೀವಾಣುಗಳ ಸಹಾಯವಿಲ್ಲದೆ ತನ್ನಷ್ಟಕ್ಕೇ ಪ್ರಕೃತಿಯಿಂದ ಇವು ಹುಟ್ಟುವವೆಂದು ವಿಜ್ಞಾನಿಗಳು ಒಪ್ಪುತ್ತಿಲ್ಲ ಅಲ್ಲಿಯೂ ಆಯಾಯ ಪ್ರುಣಿಗಳು ಮೊಟ್ಟೆಯಿಟ್ಟೇ ಜೀವ- ಜಂತುಗಳನಿರ್ಮಾಣವಾಗುತ್ತದೆಯೆಂದು ವಿಜ್ಞಾನಿಗಳ ಮತ. ಅಂತೂ ಜೀವಾಣುವಿನ ಸಹಾಯವಿಲ್ಲದೆ ಜ್ಞಾನವುಳ್ಳ ಜಂತುವು ಹುಟ್ಟಲಾರದು. ಜೀವಾಣುಗಳೇ ಒಂದು ಎರಡಾಗಿ ನಾಲ್ಕಾಗಿ ಅನಂತ ಜೀವಾಣುಗಳ ನಿರ್ಮಾಣವಾಗಿದೆಯೆಂದು ವಿಜ್ಞಾನಿಗಳ ಪ್ರತಿಪಾದನೆಯಿದೆ. ಹಾಗಿದ್ದರೆ ಪ್ರಥಮ ಜೀವಾಣುವಿನ ರಚನೆಯು ಸೃಷ್ಟಿಯ ಆದಿಯಲ್ಲಿ ಹೇಗೆ ನಡೆಯಿತು? ಇನ್ನೊಂದು ಜೀವಾಣುವಿನ ಸಹಾಯವಿಲ್ಲದೆ ಜೀವಾಣುವಿನ ನಿರ್ಮಿತಿಯಾಗಲಾರದಷ್ಟೆ? ಸೃಷ್ಟಿಯ ಆರಂಭದಲ್ಲಿ ಯಾವ ಜೀವಾಣುವೂ ಇಲ್ಲದೆ ಕೇವಲ ಜಡದ ಸಹಾಯದಿಂದ ಪ್ರಥಮ ಜೀವಾಣುವು ಹೇಗೆ ನಿರ್ಮಿತವಾಯಿತು? ಅಂದು ಕೇವಲ ಜಡದಿಂದಲೇ ಪ್ರಕೃತಿಯ ಸಹಜ ಚಮತ್ಕಾರದಿಂದ ಜೀವನಸೃಷ್ಟಿಯಾಗಿದ್ದರೆ, ಇಂದು ಎಲ್ಲಿಯೂ ಯಾಕೆ ಅಂತಹ ಘಟನೆ ನಡೆಯುತ್ತಿಲ್ಲ? ಇದು ವಿಜ್ಞಾನಿಗಳಿಗೆ ಬಿಡಿಸಲಾರದ ಒಗಟೆನಿಸಿದೆ. ಅನೇಕ ಜೀವಶಾಸ್ತ್ರಜ್ಞರಲ್ಲಿ ನಾವು ಈ ಪ್ರಶ್ನೆ ಕೇಳಿದಾಗ, ಪ್ರಥಮ ಜೀವನ ಉತ್ಪತ್ತಿಯ ಬಗ್ಗೆ ಸರಿಯಾದ ಪರಿಹಾರ ದೊರೆತಿಲ್ಲವೆಂದೇ ತಿಳಿಸಿರುವರು. ಆದುದರಿಂದ ಜಡದಿಂದ ಬೇರೆಯಾದ ಜ್ಞಾನವುಳ್ಳ ಜೀವವಸ್ತುವನ್ನು ನಾವು ಒಪ್ಪಿಯೇ ಈ ಸಮಸ್ಯೆಯನ್ನು ಪರಿಹರಿಸಬೇಕಾಗುವುದು. ನಮ್ಮ ಜೀವನವು ಈ ಶರೀರದ ಉತ್ಪತ್ತಿಯಿಂದ ಆರಂಭವಾಗಿರದೆ ಅನಾದಿಕಾಲದ ಇತಿಹಾಸವು ಈ ಆತ್ಮನಿಗೆ ಇದೆಯೆಂಬ ಮಾತನ್ನು ಒಪ್ಪಲೇಬೇಕಾಗುವುದು. ಅಂತೂ ದೇಹಾತಿರಿಕ್ತನಾದ ನಿತ್ಯನಾದ ಆತ್ಮನ ಅಸ್ತಿತ್ವವನ್ನು ಒಪ್ಪಿದ ನಂತರ ನಾವು ಯಾರದೇಮರಣದ ಬಗ್ಗೆ ಕಂಗೆಡಬೇಕಾಗಿಲ್ಲವೆಂದು ಸ್ಪಷ್ಟವಾಯಿತು. ಇವೆಲ್ಲ ವಿಚಾರಗಳನ್ನು ಪರಮಾತ್ಮನು- ದೇಹಿನೋಸಸ್ಟಿನ್‌ ಯಥಾ ದೇಹೇ ಹೌಮಾರಂ ಯೌವನಂ ಜರಾ। ತಥಾ ದೇಹಾಂತರಪ್ರಾಪ್ತಿ- ರ್ಧೀರಸ್ಪತ್ರ ನ ಮುಷ್ಕತಿ ॥ ಎಂಬ ಶ್ಲೊ ದಿಂದಸೂಚಿಸುವನು.
Bannanje Govindacharya (1936–2020)Bhagavad Gita Pravachana
ಭಗವಾನ್‌ ಉವಾಚ-ಭಗವಂತ ಹೇಳಿದನು: ಅಶೋಚ್ಯಾನ್‌ ಅನ್ವಶೋಚಃ ತ್ವಮ್‌ ಪ್ರಜ್ಞಾವಾದಾನ್‌ ಚ ಭಾಷಸೇ | ಗತ ಅಸೂನ್‌ ಅಗತ ಅಸೂನ್‌ ಚ ನ ಅನುಶೋಚಂತಿ ಪಂಡಿತಾಃ -ಅಳಬಾರದವರಿಗಾಗಿ ನೀನು ಅಳುತ್ತಿರುವೆ. ತಿಳಿದವರು ಆಡದಂತಹ ಮಾತುಗಳನ್ನು ತೋಚಿದಂತೆ ಆಡುತ್ತಿರುವೆ. ಅಳಿದವರ ಬಗೆಗಾಗಲೀ, ಅಳಿಯದವರ ಬಗೆಗಾಗಲೀ, ತಿಳಿದವರು ಅಳುವುದಿಲ್ಲ. ಇದು ಭಗವಂತನ ಉಪದೇಶದ ಮೊದಲ ನುಡಿ. ಇದು ಇಡೀ ಗೀತೆಗೆ ಪಂಚಾಂಗ ರೂಪದಲ್ಲಿದೆ. ಇಲ್ಲಿ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ: "ಯಾರಿಗೋಸ್ಕರ ಅಳಬಾರದೋ ಅಂತವರಿಗೋಸ್ಕರ ಅಳುತ್ತಿರುವೆ. ತುಂಬಾ ತಿಳಿದ ಮಹಾಜ್ಞಾನಿಯಂತೆ ಮಾತನಾಡುತ್ತಿರುವೆ" ಎಂದು. ಇದು ಅರ್ಜುನನ ದೌರ್ಬಲ್ಯಕ್ಕೆ ಕೃಷ್ಣ ಹಿಡಿದ ಕನ್ನಡಿ. ಇಲ್ಲಿ 'ನಿನಗೇನೂ ತಿಳಿದಿಲ್ಲ' ಎನ್ನುವ ಭಾವ ಕೂಡಾ ಸ್ಟ द्‌ ठगी. ಅರ್ಜುನನಿಗೆ ಕಾಡಿರುವುದು ಕೆಲವರು(ಗುರು- ಹಿರಿಯರು) ಸಾಯುತ್ತಾರೆ ಇನ್ನು ಕೆಲವರು(ದುಷ್ಟರು) ಬದುಕುತ್ತಾರಲ್ಲಾ ಎನ್ನುವ ಭಯ-ಅದರಿಂದಾಗಿ ದುಃಖ. ದುಃಖಕ್ಕೆ ಮೂಲ ಭಯ-ಭಯಕ್ಕೆ ಮೂಲ ಅಜ್ಞಾನ. ಇಲ್ಲಿ ನಿಮಗೊಂದು ಪ್ರಶ್ನೆ ಬರಬಹುದು. ಭೀಷ್ಮ ದ್ರೋಣರಂತಹ ಮಹಾತ್ಮರು ಸತ್ತರೆ ಅಳುವುದು ತಪ್ಪೇ? ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ನಾವು ಹುಟ್ಟು ಸಾವಿನ ಗುಟ್ಟನ್ನು ಅರಿತಿರಬೇಕು. ಹುಟ್ಟು ಸಾವಿನ ಇನ್ನೊಂದು ಆಯಾಮ ತಿಳಿದಾಗ ನಮಗೆ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ. ಜೀವ ಅನಾದಿನಿತ್ಯ; ಅದಕ್ಕೆಂದೂ ಸಾವಿಲ್ಲ. ಈ ಭೌತಿಕ ಶರೀರ ಜೀವಕ್ಕೆ ಒಂದು ಪಂಜರದಂತೆ. ಈ ಪಂಜರದಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಹುಟ್ಟು. ಪಂಜರದಿಂದ ಹೊರ ಹೋಗುವುದು ಸಾವು. ಈ ಆಯಾಮದಲ್ಲಿ ನೋಡಿದರೆ ಹೊಸ ಅಂಗಿ ತೊಡುವುದು ಹುಟ್ಟು-ಹಳೆ ಅಂಗಿ ತೊರೆಯುವುದು ಸಾವು. ಈ ಜ್ಞಾನ ನಮಗಿದ್ದರೆ ನಮಗೆ ಸಾವಿನ ಭಯವಿರುವುದಿಲ್ಲ. ಇಲ್ಲಿ ಕೃಷ್ಣ ಹೇಳುತ್ತಾನೆ: "ಜ್ಞಾನಿಗಳು ಆಡುವ ಮಾತನ್ನು ನೀನು ಆಡುತ್ತಿಲ್ಲ" ಎಂದು. ಏಕೆಂದರೆ ಜ್ಞಾನಿಗಳು ಹುಟ್ಟು-ಸಾವಿನ ಮರ್ಮವನ್ನು ಚೆನ್ನಾಗಿ ಅರಿತಿರುತ್ತಾರೆ. ನೀನು ಆಡುತ್ತಿರುವುದು ತಿಳುವಳಿಕೆಯ ಮಾತಲ್ಲ. ನಿನ್ನ ತಿಳುವಳಿಕೆಯೇ ವಿಶ್ವದ ಸತ್ಯ ಎನ್ನುವ ಭ್ರಮೆಯಿಂದ ನೀನು ಮಾತನಾಡುತ್ತಿದ್ದೀಯ ಎನ್ನುತ್ತಾನೆ ಕೃಷ್ಣ. ಇಲ್ಲಿ ಕೃಷ್ಣ ಅರ್ಜುನ ಹಾಕಿದ ಎಲ್ಲಾ ಲೌಕಿಕ ಪ್ರಶ್ನೆಗಳನ್ನು ಬಿಟ್ಟು ಅವನಿಗೆ ಸತ್ಯದ ಸಾಕ್ಷಾತ್ಕಾರ ಮಾಡಿಸುತ್ತಿದ್ದಾನೆ. ಅರ್ಜುನ ಕಂಡಿದ್ದು ಕೇವಲ ಐಹಿಕ ಪ್ರಪಂಚವಾದರೆ, ಕೃಷ್ಣ ಆತನಿಗೆ ಅದರಾಚೆಗಿನ ಸತ್ಯದ ಇನ್ನೊಂದು ಮುಖದ ಪರಿಚಯ ಮಾಡಿಸುತ್ತಿದ್ದಾನೆ. ಸಾವು ಭಯಾನಕವಲ್ಲ, ಹುಟ್ಟಿ ಬಂದವನಿಗೆ ಸಾವು ಅನಿವಾರ್ಯ. ಆತ್ಮಕ್ಕೆ ಎಂದೂ ಸಾವಿಲ್ಲ. ಆತ್ಮ ಅನಾದಿನಿತ್ಯ. ಆದರೆ ದೇಹ ನಾಶ ಅನಿವಾರ್ಯ. ಮನುಷ್ಯ ತನ್ನ ವಿಕೃತಿಯಿಂದ ಪ್ರಕೃತಿಯೆಡೆಗೆ ಪಯಣಿಸುವ ಕ್ರಿಯೆ ಸಾವು. ಆದ್ದರಿಂದ ಅಳಿದವರ ಬಗೆಗಾಗಲೀ, ಅಳಿಯದವರ ಬಗೆಗಾಗಲೀ, ತಿಳಿದವರು ಅಳುವುದಿಲ್ಲ ಎನ್ನುವುದನ್ನು ಇಲ್ಲಿ ಕೃಷ್ಣ ಅರ್ಜುನನಿಗೆ ಮನವರಿಕೆ ಮಾಡಿಸುತ್ತಿದ್ದಾನೆ.
Bibek Debroy (1955–2024)The Bhagavad Gita
(11)