तमुवाच हृषीकेशः प्रहसन्निव भारत ।
सेनयोरुभयोर्मध्ये विषीदन्तमिदं वचः ॥
tamuvāca hṛṣīkeśaḥ prahasanniva bhārata |
senayorubhayormadhye viṣīdantamidaṃ vacaḥ ||
Swami Sivananda (1887–1963)Bhagavad Gita
10. To him who was despondent in the midst of the two armies, Sri Krishna, as if smiling, O
Bharata, spoke these words!
Sri Vishwesha Tirtharu (1931–2019)Gitasaroddhara
ಕೃಷ್ಣನ ಉಪದೇಶದ ಹಿನ್ನೆಲೆ
ಕೃಷ್ಣನ ಉಪದೇಶದ ಹಿನ್ನೆಲೆ
ಜಿಜ್ಞಾಸುವೂ ಆರ್ತನೂ ಆದ ತನ್ನ ಭಕ್ತ ಅರ್ಜುನನಿಗೆ ಶ್ರೀಕೃಷ್ಣನು ತನ್ನ
ದಿವ್ಯವಾಣಿಯಿಂದ ಉಪದೇಶವನ್ನು ನೀಡಲು ಉಪಕ್ರಮಿಸುತ್ತಾನೆ. ಶ್ರೀಕೃಷ್ಣನು
ಅರ್ಜುನನ ಪ್ರಶ್ನೆಗಳಿಗೆ ನೇರವಾಗಿ ಉತ್ತರಕೊಡದೆ ಬಳಸುದಾರಿಯಿಂದ
ಉಪದೇಶವನ್ನು ಯಾಕೆ ನೀಡುತ್ತಾನೆಂದು ಕೆಲವರು ಆಕ್ಷೀಷಿನುತ್ತಾರೆ. ಆತ್ಮನ
ನತ್ಯತೆ, ಸತ್ಯತೆ ಮುಂತಾದ ಜಟಿಲವಿಷಯಗಳನ್ನು ಕೃಷ್ಣನು ಪ್ರಸ್ತಾಪಿಸುವ ಆವಶ್ಯಕತೆ
ಏನಿತ್ತು! ಯುದ್ಧದಿಂದಾಗುವ ಲೋಕವ್ಯವಸ್ಥಾಭಂಗದ ಅನರ್ಥಕ್ಕೆ ಮುಂದೆ
ಗೀತೆಯಲ್ಲಿ ವಿವೇಚನೆಯೇ ಕಾಣುವುದಿಲ್ಲ. ಬೇರೆ ವೇದಾಂತಿ ಭಾಷೆಯಲ್ಲಿ ಈ
ವಿಷಯಗಳನ್ನೇ ಮರೆಸಲು ಶ್ರೀಕೃಷ್ಣನು ಪ್ರಯತ್ನಿಸಿದಂತೆ ಇದೆಯೆಂದು ಅನೇಕರು
ಪ್ರಶ್ನಿಸುತ್ತಾರೆ. ಆದರೆ ಗೀತೆಯನ್ನು ಸರಿಯಾಗಿ ಅಭ್ಯಸಿಸಿದರೆ ಶ್ರೀಕೃಷ್ಣನು
ಅರ್ಜುನನಿಗೆ ಉಪದೇಶಿಸುವಾಗ ಈ ವಕ್ರಗತಿಯನ್ನು ಅನುನರಿಸಲಿಲ್ಲವೆಂದು
ಸ್ಪಷ್ಟವಾಗುವುದು. ಅರ್ಜುನನು ಇಷ್ಟೆಲ್ಲ ಮಾತಾಡಿದ್ದರೂ ಅವನ ವಿವಶತೆಗೆ
ಮೂಲ ಕಾರಣವೇನು? ನಿಜವಾಗಿಯೂ ಧಾರ್ಮಿಕ ಭಾವನೆಯಿಂದ
ಅರ್ಜುನನು ಯುದ್ಧವಿಮುಖನಾಗಿರುವನೆ? ಇಲ್ಲ, ಆತನು ನಿಜವಾಗಿಯೂ
ಮೋಹಕ್ಕೆ ವಶನಾಗಿರುವನು. ತನ್ನವರನ್ನು ಹೇಗೆ ಕಳೆದುಕೊಳ್ಳಲಿ ಎಂಬ
ವ್ಯಾಮೋಹವೇ ಅವನ ಈ ವಿಮುಖತೆಗೆ ಮುಖ್ಯ ಕಾರಣ. ಹಿಂದೆ ಹಲವಾರು
ಯುದ್ಧಗಳನ್ನು ನಡೆಸಿದ ಅರ್ಜುನನು ಇಂದು ಮಾತ್ರ ಯುದ್ಧವು
ಅಕಾರ್ಯವೆಂದು ಪ್ರತಿಪಾದಿಸುತ್ತಾನೆ. ಮನುಷ್ಯನು ಸ್ವಾರ್ಥಿಯಾದಾಗ
ಧರ್ಮ-ವೇದಾಂತಗಳನ್ನು ತನಗೆ ಬೇಕಾದಂತೆ ತಿರುಗಿಸಿಕೊಳ್ಳುವನು.
ಸಮಾಜದಲ್ಲಿ ಧರ್ಮಜಾಗೃತಿಯನ್ನು ಮಾಡಲು ಹೊಣೆಗಾರನಾದರೂ
ಆಲಸಿಯಾದ ಸನಾತನಿಯು "ಕಲಿಯುಗದಲ್ಲಿ ಅಧರ್ಮಪ್ರಚಾರವಾಗುವುದೇ
ಭಗವತ್ಸಂಕಲ್ಪ ಅವನ ಸಂಕಲ್ಪಕ್ಕಿ ವಿರುದ್ಧವಾಗಿ ನಾವು ಏನೂ ಮಾಡಬಾರದು”
ಎಂದು ವೇದಾಂತದ ಭಾಷೆಯಿಂದ ತನ್ನ ಆಲಸ್ಯವನ್ನು ಮುಚ್ಚಿಡಲು
ಪ್ರಯತ್ನಿಸುತ್ತಾನೆ. ""ಸಂತರ್ಪಣೆ ಮಾಡುವುದು ಅಪವ್ಯಯ; ರಾಷ್ಟ್ರಕ್ಕೆ ಹಾನಿಕರ''
ಎಂದು ಹೇಳಿ ತಮ್ಮ ಲೋಭವನ್ನು ಮುಚ್ಚಿ ಡುವವರೂ ಕೆಲವರು ಇರುವರು.
ಅರ್ಜುನನು ಅನೇಕಬಾರಿ ಯುದ್ಧವನ್ನು ಮಾಡಿದವನೇ. ಇಂದು ಮಾತ್ರ
ಯುದ್ಧದ ವಿರುದ್ಧವಾಗಿ ದೀರ್ಫ ಉಪನ್ಯಾಸ ಮಾಡಿ ಈ ಪ್ರಜ್ಞಾನಾದದ
ಮುಖವಾಡದಲ್ಲಿ ತನ್ನ ಮೋಹದ ದೌರ್ಬಲ್ಯವನ್ನು ಮುಚ್ಚಿಡಲು
ಪ್ರಯತ್ನಿಸುತ್ತಿದ್ದಾನೆ. ವಸಿಷ್ಠ ಮೊದಲಾದವರೂ ಪುತ್ರ ವ್ಯಾಮೋಹಕ್ಕೆ ಸಿಕ್ಕು
ಶೋಕಾವೇಶವನ್ನು ಪ್ರಕಟಿಸಿದ್ದಾರೆ. ಆದರೆ ಅವರಿಗೆ ತಮ್ಮ ದೌರ್ಬಲ್ಯಹಾಗೂ
ವಿವಶತೆಯ ಅರಿವಾಗಿತ್ತು ಅರ್ಜುನನಂತೆ ಆತ್ಮಸಮರ್ಥನೆಯ ಈ ವಾದಗಳನ್ನು
ಅವರು ಮಂಡಿಸಿರಲಿಲ್ಲ. ಅರ್ಜುನನ ಈ ವೇಷವನ್ನು ಕಂಡೇ ಶ್ರೀಕೃಷ್ಣನಿಗೆ ನಗು
ಬಂದಿರಬೇಕು-
ಪ್ರಹಸನ್ನಿವ ಭಾರತ
ಆದ್ದ ರಿಂದಲೇ ಶ್ರೀಕೃಷ್ಣನು ಅರ್ಜುನನು ಯುದ್ಧದ ಅನರ್ಥದ ಬಗ್ಗೆ ಆಡಿದ
ಮಾತುಗಳಿಗೆ ವಿಶೇಷವಾಗಿ ಉತ್ತರ ಕೊಡುವುದಿಲ್ಲ. ನಿಜವಾಗಿಯೂ
ಅರ್ಜುನನು ಹೇಳಿದಂತೆ ಯುದ್ಧದಿಂದ ರಾಷ್ಟ್ರಕ್ಕೆ ದುಷ್ಪರಿಣಾಮವಾಗಲಿಲ್ಲ.
ಯುದ್ಧಾನಂತರದಲ್ಲಿ ದೇಶದಲ್ಲಿ ರಾಮರಾಜ್ಯ ಸದೃಶವಾದ ಶ್ರೇಷ್ಠವಾದ ಲೌಕಿಕ
ಆಧ್ಯಾತ್ಮಿಕ ಸಮೃದ್ಧಿ ಸಂಪನ್ನವಾದ ಧರ್ಮರಾಜ್ಯವೇ ಸ್ಥಾಪಿತವಾಯಿತು.
ಅನಂತರದ ಸಹಸ್ರಾರು ವರ್ಷಗಳು ದೇಶದ ಸ್ವರ್ಣಯುಗವೆಂದು
ಇತಿಹಾಸಕಾರರೂ ಭಾವಿಸುತ್ತಾರೆ. ಆದ್ದರಿಂದ ಧರ್ಮಕ್ಕಾಗಿ ನಡೆಯುವ
ಹೋರಾಟದ ಬಗ್ಗೆ ಅರ್ಜುನನು ಆಡಿದ ಪ್ರಜ್ಞಾವಾದಗಳಿಗೆ ಶ್ರೀಕೃಷ್ಣನು
ವಿಶೇಷವಾಗಿ ಉತ್ತರ ಕೊಡುವ ಗೋಜಿಗೆ ಹೋಗದೆ ಆತನ ಮೂಲಭೂತ
ಹೃದೆಯದೋಷವನ್ನು ಕಿತ್ತೊಗೆಯಲು ಉಪಕ್ರಮಿಸುತ್ತಾನೆ. ಅರ್ಜುನನ
ಮೋಹವನ್ನು ಪರಿಹರಿಸುವುದೇ ಶ್ರೀಕೃಷ್ಣನ ಮುಖ್ಯ ಉದ್ದೇಶವಾಗಿದೆ.
ಅರ್ಜುನನು ತನ್ನ ದೌರ್ಬಲ್ಯವನ್ನು ಮುಚ್ಚಿಡಲು ಆಡಿದ ಸ್ವಸಮರ್ಥನೆಯ
ಪ್ರಜ್ಞಾವಾದಗಳಿಗೆ ಉತ್ತರ ಕೊಡುವುದಕ್ಕಿಂತ ಆ ದೌರ್ಬಲ್ಯವನ್ನು ಪರಿಹಾರ
ಮಾಡಿದರೆ ಅರ್ಜುನನಿಗೆ ಸರಿಯಾದ ಚಿಕಿತ್ಸೆಯನ್ನು ಮಾಡಿದಂತಾಗುವುದೆಂದು
ಸರ್ವಜ್ಞನೂ ಕರುಣಾನಿಧಿಯೂ ಆದ ಭಗವಂತನು ಅವನ ಮೋಹವನ್ನು
ಹೋಗಲಾಡಿಸುವ ಸ್ಪಷ್ಟ ಸಂದೇಶವನ್ನು ನೀಡುತ್ತಿದ್ದಾನೆ. ಆದುದರಿಂದಲೇ
ಅರ್ಜುನನು ಪ್ರಶ್ನಿಸಿದ ಬೇರೆ ಯಾವ ಅಂಶಗಳನ್ನೂ ಸ್ಫರ್ಶಿಸದೆ, ಮೋಹ
ನಿರಾಸಕ್ಕೆ ಆದರದ ಆತ್ಮನ ನಿತ್ಯತೆ, ದೇಹದಿಂದ ಆತ್ಮನ ಪ್ರತ್ಯೇಕ ಅಸ್ತಿತ್ವ
ಮೊದಲಾದ. ವಿಚಾರಗಳನ್ನು. ಪರಮಾತ್ಮನು. ಪ್ರತಿಪಾದಿಸಲು
ಉಪಕ್ರಮಿಸುವುದಾಗಿದೆ.
Bannanje Govindacharya (1936–2020)Bhagavad Gita Pravachana
ತಮ್ ಉವಾಚ ಹೃಷೀಕೇಶಃ ಪ್ರಹಸನ್ ಇವ ಭಾರತ |
ಸೇನಯೋಃ ಉಭಯೋಃ ಮಧ್ಯೇ ವಿಷೀದಂತಮ್ ಇದಮ್ ವಚಃ -ಓ ಭರತ ವಂಶದ ದೊರೆಯೇ, ಎರಡು
ಪಡೆಗಳನಡುವೆ ತಳಮಳಗೊಂಡಿರುವ ಅವನನ್ನು ಕುರಿತು ಕೃಷ್ಣ ಮೆಲುನಗುತ್ತಾ ಈ ಮಾತು ನುಡಿದ.
ಅರ್ಜುನ ಸಂಪೂರ್ಣ ಶರಣಾಗಿ ತನ್ನಮುಂದೆ ಅಂಗಲಾಚಿ ನಿಂತಾಗ, ಶ್ರೀಕೃಷ್ಣ ನಸುನಗುತ್ತಾ ತನ್ನ ಮಾತನ್ನು
ಆರಂಭಿಸುತ್ತಾನೆ. ಇಲ್ಲಿ ಅರ್ಜುನ ಕೃಷ್ಣ ಹೇಳುವುದನ್ನು ಸ್ವೀಕರಿಸುವ ಹಂತವನ್ನು ತಲುಪಿದ್ದಾನೆ. ಆತನಲ್ಲಿ
ಭಾವಾವೇಶ ಹೊರಟುಹೋಗಿ ಶರಾಣಗತಿ ಬಂದಿದೆ. ಭಗವಂತ ನಮಗೆ ಮಾರ್ಗದರ್ಶನ ಮಾಡಬೇಕಾದರೆ
ನಾವು ನಮ್ಮ ಅಹಂಕಾರವನ್ನು ತೊರೆದು, ಆತನಲ್ಲಿ ಸಂಪೂರ್ಣ ಶರಣಾಗಬೇಕು. ಆಗ ಖಂಡಿತ ನಮಗೆ
ಮಾರ್ಗದರ್ಶನ ಸಿಗುತ್ತದೆ. ಇಲ್ಲಿ ಕೃಷ್ಣ ಅರ್ಜುನನಿಗೆ ಮಾಡುವ ಉಪದೇಶ ನಮ್ಮೆಲ್ಲರಿಗೆ ಆತ ಮಾಡಿದ
ಉಪದೇಶ. ಈ ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡು ಕೃಷ್ಣನ ಉಪದೇಶವನ್ನು ಆಲಿಸೋಣ ಬನ್ನಿ
Bibek Debroy (1955–2024)The Bhagavad Gita
(10)
O descendant of Bharata!10 As if smiling, Hrishikesha said the following to
the griefstricken person between the two armies.