2.16

नासतो विद्यते भावो नाभावो विद्यते सतः ।
उभयोरपि दृष्टोऽन्तस्त्वनयोस्तत्त्वदर्शिभिः ॥
nāsato vidyate bhāvo nābhāvo vidyate sataḥ |
ubhayorapi dṛṣṭo'ntastvanayostattvadarśibhiḥ ||
Sri Madhvacharya (1238–1317)Bhagavad Gita Tatparya Nirnaya
न च युद्धात् परलोकदुःखमिति शोकः। असत्कर्मणः सकाशाद्भावो नास्ति सत्कर्मणः सकाशादभावो नास्तीति नियतत्वात्। ‘सद्भाववचनः शब्दाः सर्वे ते सुखवाचकाः। अभाववाचिनः शब्दाः सर्वे ते दुःखवाचकाः॥’ इति शब्दनिर्णये। सद्भावे साधुभावे च सदित्येतत् प्रयुज्यते। प्रशस्ते कर्मणि तथा सच्छब्दः पार्थ युज्यते॥’ इति वक्ष्यमाणत्वात्। ‘असन्नेव स भवति असद्ब्रह्मेति वेद चेत्’ इत्यादेश्च। अन्तः - निर्णयः। न चाविद्यामानविद्यमानयोरुत्पत्तिनाशनिषेधकोऽयं श्लोकः। प्रत्यक्षविरोधात्। सन्निति व्यवह्रियमाणमेव पदार्थस्वरूपमुत्पत्तेः प्राङ्नाशोत्तरं च नास्तीति सर्वलोको व्यवहरति। न च विपर्यये किंञ्चिन्मानम्। इदं तु वाक्यमन्यथासिद्धम्। ‘आद्यन्तयोः सर्वकार्यमसदेवेति निश्चितम्। यद्यसन्न विशेषोऽत्र जायते कोऽत्र जायते॥ व्यक्तावपि समं ह्येतदनवस्थाऽन्यथा भवेत्। एवं नाशेऽपि बोद्धव्यमतो सन्नेव जायते॥ तथाऽप्यभेदानुभवात् कार्यकारणयोः सदा। भेदस्य चाविशेषेण देहोऽगात् क्षितितामिति॥ व्यवहारो भवेद्यस्माद्बल्येवानुभवः सदा॥’ इति ब्रह्मतर्के। न च सदसद्विलक्षणं किञ्चिदस्तीत्यत्र किञ्चिन्माम्। न चासतः ख्यात्ययोगत् सतो बाधायोगादुभयविलक्षणं ब्रान्तिविषयम्। असतः ख्यात्ययोगादिति वदतोऽसतः ख्यातिरभून्न वा। यदि नाभून्न तत्ख्यातिनिराकरणम्। यद्यभूत् तथाऽपि। न चासतोऽसत्वेन भ्रान्तौ सत्वेन च ख्यातिर्नास्तीत्यत्र किञ्चिन्माम्। असद्व्यवहारलोपप्रसङ्गाच्च। यदविद्यमानं रूपं तस्य सत्त्वेन प्रतीतेरेव भ्रान्तित्वाच्च।अनिर्वचनीयत्वपक्षेऽपि सदिदं रजतमित्यविद्यमानसत्त्वप्रतीतिं विना न हि भ्रान्तित्वम्। भ्रान्तिसत्त्वाङ्गीकारेऽप्यभ्रान्तं सदिदं रजतमित्यविद्यमानसत्वप्रतीतौ हि प्रवर्तते। तस्मादुभयविलक्षणं न किञ्चित्। ‘विश्वं सत्यम्’। ‘यच्चिकेत सत्यमित्’। ‘कविर्मनीषी परिभूः स्वयम्भूर्याथातथ्यतोऽर्थान् व्यदधाच्छाश्वतीभ्यः समाभ्यः’ इत्यादि श्रुतेश्च॥16॥
Swami Sivananda (1887–1963)Bhagavad Gita
16. The unreal hath no being; there is no non-being of the Real; the truth about both has been seen by the knowers of the Truth (or the seers of the Essence). COMMENTARY: What is changing must always be unreal. What is constant or permanent must always be real. The Atman or the eternal, all-pervading Self ever exists. It is the only Reality. This phenomenal world of names and forms is ever changing. Names and forms are subject to decay and death. Hence they are unreal or impermanent.
Sri Vishwesha Tirtharu (1931–2019)Gitasaroddhara
ಜೀವನು ಈಶ್ವರನ ಪ್ರತಿಬಿಂಬ
ಜೀವನು ಈಶ್ವರನ ಪ್ರತಿಬಿಂಬ ಈ ಹಿಂದೆ ಭಗವಂತನು ನಿರೂಪಿಸಿದ ಜೀವನ ನಿತ್ಯತೆಯ ಬಗ್ಗೆ ಒಂದು ಪ್ರಶ್ನೆ ಇಲ್ಲಿ ಉದ್ಭೂತವಾಗುವುದು. ಜೀವನು ಪರಮಾತ್ಮನ ಪ್ರತಿಬಿಂಬನು. ಕನ್ನಡಿಯಂತೆ ಶರೀರವು ಜೀವನಿಗೆ ಉಪಾಧಿಯಾಗಿರಬಹುದು. ಕನ್ನಡಿ ಒಡೆದಾಗ ಪ್ರತಿಬಿಂಬವು ಉಳಿಯುವುದಿಲ್ಲ. ಅದರಂತೆ ಶರೀರವು ನಾಶವಾದಾಗ ಪ್ರತಿಬಿಂಬನಾದ ಜೀವನು ಹೇಗೆ ಇರಬಲ್ಲ? ಶರೀರದ ಜೊತೆಗೆ ಜೀವನ ನಾಶವೂ ಅನಿವಾರ್ಯವಾಗಿರುವಾಗ ಜೀವನ ನಿತ್ಯತೆಯನ್ನು ಕೃಷ್ಣನು ಹೇಗೆ ಬೋಧಿಸುತ್ತಾನೆ? ಈ ಸಂಶಯವನ್ನು ಇಲ್ಲಿ ಪರಿಹರಿಸಲಾಗಿದೆ. ಜೀವನ ಶರೀರರೂಪವಾದ ಬಾಹ್ಯ ಉಪಾಧಿಗೆ ನಾಶವಿದ್ದರೂ ಸ್ವರೂಪಭೂತವಾದ ತನ್ನ ಚಿದಾನಂದಮಯ ರೂಪವು ಶಾಶ್ವತವಾದ ಉಪಾಧಿಯಾಗಿ ಇದ್ದೇ ಇರುವುದು. ಹೊರಗಿನ ಉಪಾಧಿಯು ಕಳಚಿದರೂ ಆಂತರಂಗಿಕ ಚೈತನ್ಯರೂಪವಾದ ಸ್ವರೂಪೋಪಾಧಿಯು ಎಂದೆಂದಿಗೂ ಇರುವುದರಿಂದ ಆತ್ಮನು ನಿತ್ಯ ಅವಿನಾಶಿ. ಜೀವನು ಪರಮಾತ್ಮನ ಪ್ರತಿಬಿಂಬವೆಂದರೆ ಏನು? ಜೀವನಿಗೂ ಪರಮಾತ್ಮನಿಗೂ ಇರುವ ಸಂಬಂಧವೇನು? ಎಂಬುದನ್ನು ನಾವು ಇಲ್ಲಿ ತಿಳಿದುಕೊಳ್ಳಬೇಕು. ನಮ್ಮ ನೆರಳು, ನಮ್ಮ ಭಾವಚಿತ್ರ ಪ್ರತಿಬಿಂಬವೆನಿಸುತ್ತವೆ. ಇವುಗಳಿಗೆ ನಮ್ಮಿಂದ ಬೇರೆ ಅಸ್ತಿತ್ತ್ವವೂ ಇದೆ. ಇವುಗಳು ನಮಗೆ ಸಮಾನವಾದ ಆಕಾರವನ್ನು ಪಡೆದಿವೆ; ಅದರಂತೆ ನಮ್ಮ ಅಧೀನಗಳೂ ಆಗಿವೆ. ನಾವು ಚಲಿಸಿದರೆ ಮಾತ್ರ ನಮ್ಮ ಪ್ರತಿಬಿಂಬವು ಚಲಿಸುವುದು. ನಮ್ಮಲ್ಲಿ ಯಾವುದೇ ಕೃತಿಯು ನಡೆಯದಿದ್ದರೆ ಪ್ರತಿಬಿಂಬದಲ್ಲೂ ಏನೂ ಆಗಲಾರದು. ಹೀಗೆ ಸರ್ವಾತ್ಮನಾ ನಮ್ಮ ಅಧೀನವೂ ನಮಗೆ ಸಮಾನವೂ ಆಗಿರುವ ವಸ್ತುವೇ ಪ್ರತಿಬಿಂಬವೆನಿಸುವುದು. ಅದರಂತೆ ಜೀವನು ಪರಮಾತ್ಮನ ಅಧೀನನೂ ಅವನಿಗೆ ಸದೃತನೂ ಆಗಿರುವನು. ಪರಮಾತ್ಮನು ಇಲ್ಲದೆ, ಅವನ ವ್ಯಾಪಾರವಿಲ್ಲದೆ ಜೀವನ ಯಾವವ್ಯವಹಾರವೂ ನಡೆಯಲಾರದು. ಹಾಗೆಯೇ ಪರಮಾತ್ಮನಂತೆ ಜೀವನೂ ಚಿದಾನಂದಮಯನೇ ಆಗಿರುವನು. ಜೀವನಿಗೂ ಪರಮಾತ್ಮನಿಗೂ ಅನೇಕ ಅಂಶಗಳಲ್ಲಿ ಅಂತರವೂಇದೆ. ಕೆಲವು ಅಂಶಗಳಲ್ಲಿ ಸಮಾನತೆಯೂಇದೆ. ನಾವು ಬೆಳ್ಳಗಿದ್ದರೂ ನಮ್ಮ ನೆರಳು ಕಪ್ಪಾಗಿಯೇ ಇರುವುದಿಲ್ಲವೆ? ಹೀಗೆ ಜೀವನು, ತಾನು ನಶ್ವರವಾದ ಜಡವಸ್ತುವಲ್ಲ; ಈ ಪ್ರಾಕೃತಿಕವಾದ ಮನೋವಿಕಾರವೇ ತಾನಲ್ಲ; ನಿತ್ಯಚೈತನ್ಯರೂಪಿಯಾದ ಸದ್ಗುಣಮಯನಾದ ಪರಮಾತ್ಮನಿಗೆ ಸದ್ಭತನಾಗಿ ನಿತ್ಯನಾಗಿ ತಾನಿರುವೆನೆಂದು ಭಾವಿಸಿ ತನ್ನ ಆ ಕಲ್ಯಾಣವೃಕ್ತಿತ್ವವನ್ನು ಕಂಡುಕೊಳ್ಳಲು, ಪ್ರಕಟಗೊಳಿಸಲು ಪ್ರಯತ್ನಿಸಬೇಕು. ತಾನು ದೇವನನೆರಳಿನಂತೆ ಎಂದೆಂದಿಗೂ ಅವನ ಅಧೀನನೇ ಇರುವೆನು; ಅಹಂಭಾವದಿಂದ, ಸ್ವಚ್ಛಂದ ರೀತಿಯಿಂದ ವರ್ತಿಸಬಾರದೆಂಬ ಎಚ್ಚರಿಕೆಯೂ ಜೊತೆಗೆ ಇರಬೇಕು. ಪ್ರತಿಬಿಂಬತ್ವದ ಕಲ್ಪನೆಯಲ್ಲಿ ಈ ವಿಚಾರಗಳ ಜೋಡಣೆ ಇದೆ. ಜಡದಿಂದ ಪ್ರತ್ಯೇಕವಾದತನ್ನ ದಿವ್ಯ ಭವ್ಯವ್ಯಕ್ತಿತ್ವದ ದರ್ಶನ, ಆದರೂ ಆಪರಾತ್ರರವೃಕ್ತಿಗೆ ತಲೆಬಾಗುವ ವಿನಯಪ್ರವೃತ್ತಿ ಈ ಎರಡೂ ಅಂಶಗಳು ಪ್ರತಿಬಿಂಬ ಭಾವನೆಯಲ್ಲಿ ಅಡಕವಾಗಿವೆ. ನಮ್ಮ ಭಾವಚಿತ್ರ ಅಥವಾ ಕನ್ನಡಿಯಲ್ಲಿ ನಮ್ಮ ಪ್ರತಿಕೃತಿಯು ಚನ್ನಾಗಿ ಕಾಣಲು ಕನ್ನಡಿಯನ್ನು ಎಷ್ಟು ಅಲಂಕರಿಸಿದರೂ ಆಗದು. ಬಿಂಬವಾದ ನಮ್ಮ ಶರೀರವನ್ನು, ನಮ್ಮ ಮುಖವನ್ನು ವೇಷಭೂಷಣಗಳಿಂದ ಪರಿಷ್ಕರಿಸಿದರೆ ನಮ್ಮ ಪ್ರತಿಬಿಂಬ ಅಥವಾ ಭಾವಚಿತ್ರ ಸುಂದರವಾಗಿ ಕಾಣಿಸುವುದು. ಅದರಂತೆ ನಮ್ಮನ್ನು ಅಲಂಕರಿಸಲು, ನಮ್ಮ ಪ್ರಗತಿ-ವಿಕಾಸಗಳನ್ನು ಸಾಧಿಸಲು ನಮ್ಮನ್ನೇ ನಾವು ಪೂಜಿಸಿಕೊಳ್ಳುವುದಲ್ಲ. ಕನ್ನಡಿಯನ್ನು ಅಲಂಕರಿಸಿದಂತೆ ಆತ್ಮ ಪೂಜೆಯು ನಿರುಪಯುಕ್ತ. ನಮ್ಮ ಬಿಂಬರೂಪಿಯಾದ ಭಗವಂತನನ್ನು ಅನಂತ ಗುಣಗಳಿಂದ ಅಲಂಕರಿಸಿ ಪೂಜಿಸಿದಷ್ಟು ನಮ್ಮ ದಿವೃವ್ಯಕ್ತಿತ್ತವು ಪ್ರಕಟವಾಗುವುದು. ನಮ್ಮನ್ನು ಸುಂದರಗೊಳಿಸಲು ಪರಮಾತ್ಮನ ಕಡೆಗೇ ನಾವು ಭಕ್ತಿಯ ದೃಷ್ಟಿಯನ್ನು ಹರಿಸಬೇಕು. ಈ ವಿಚಾರವನ್ನು ಭಾಗವತದಲ್ಲಿ ಹೀಗೆ ನಿರೂಪಿಸಲಾಗಿದೆ: ಯದ್ಯಜ್ಜ ನೋ ಭಗವತೇ ವಿದಧೀತ ಮಾನಂ ತಚ್ಚಾತ್ಮನೇ ಪ್ರತಿಮುಖಸ್ಯ ಯಥಾ ಮುಖಶ್ರೀಃ । ಅಂತೂ ಈವರೆಗೆ ದೇಹದ ಅನಿತ್ಯತೆ ಹಾಗೂ ಆತ್ಮನನಿತ್ಯತೆ, ಅಭಿಮಾನತ್ಯಾಗ ಇವುಗಳ ಉಪದೇಶದಿಂದ ಅರ್ಜುನನ ಅನೇಕ ಸಂಶಯಗಳಿಗೆ ಪರಿಹಾರಗಳು ದೊರೆತಿವೆ. ಭಗವಂತನು ಅದನ್ನೆ (ಹೀಗೆ ಹೇಳಿದ್ದಾನೆ: ನಾಸತೋ ವಿದ್ಯತೇ ಭಾವೋ ನಾಭಾವೋ ವಿದ್ಯತೇ ಸತಃ। ""ಹುಟ್ಟುವ ಶರೀರಕ್ಕೆ ಶಾಶ್ವತ ಅಸ್ತಿತ್ವ ಇಲ್ಲ. ಹುಟ್ಟದಿರುವ ಆತ್ಮನಿಗೆ ನಿವೃತ್ತಿಯೂ ಇಲ್ಲ.''
Bannanje Govindacharya (1936–2020)Bhagavad Gita Pravachana
ನ ಅಸತಃ ವಿದ್ಯತೇ (ಅ)ಭಾವಃ ನ ಅಭಾವಃ ವಿದ್ಯತೇ ಸತಃ | ಉಭಯೋಃ ಅಪಿ ದೃಷ್ಟಃ ಅಂತಃ ತು ಅನಯೋಃ ತತ್ವ ದರ್ಶಿಭಿಃ -- ಪ್ರಕೃತಿಗೂ ಅಳಿವಿಲ್ಲ; ಭಗವಂತನಿಗೂ ಅಳಿವಿಲ್ಲ. [ಕೆಡುಕು ಮಾಡಿ ಒಳಿತಾಗದು, ಒಳಿತಿನಿಂದ ಕೆಡುಕಾಗದು]. ನಿಜವ ಕಂಡವರು ಈ ಎರಡರ ತೀರ್ಮಾನವನ್ನು ಬಲ್ಲರು. ಸುಖ-ದುಃಖವನ್ನು ಮೀರಿ ನಿಲ್ಲಬಹುದು. ಅದೊಂದು ಮಾನಸಿಕ ಸ್ಥಿತಿ. ಆದರೆ ಅರ್ಜುನನ ಪ್ರಶ್ನೆ- ತನ್ನ ಗುರು- ಹಿರಿಯರನ್ನು ಕೊಲ್ಲುವುದು ಪಾಪವಲ್ಲವೇ? ಎನ್ನುವುದು. ಈ ಪ್ರಶ್ನೆಗೆ ಇಲ್ಲಿ ಉತ್ತರವಿದೆ. “ಸತ್ತಿನಿಂದ ಅಭಾವವಿಲ್ಲ, ಅಸತ್ತಿನಲ್ಲಿ ಭಾವವಿಲ್ಲ” ಅಂದರೆ ಒಳ್ಳೆಯ ಕೆಲಸ ಮಾಡುವುದರಿಂದ ಎಂದೂ ದುಃಖವಿಲ್ಲ, ಕೆಟ್ಟ ಕೆಲಸ ಮಾಡಿದರೆ ಸುಖವಿಲ್ಲ. ಕೆಲವೊಮ್ಮೆ ಕೆಟ್ಟ ಕೆಲಸ ಮಾಡುವವರು ಸುಖಪಡುತ್ತಿರುವಂತೆ ಭಾಸವಾದರೂ ಕೂಡಾ, ಅದು ತಾತ್ಕಾಲಿಕ. ಅಧರ್ಮದ ಹಾದಿಯನ್ನು ತುಳಿದವ ಎಂದೂ ಯಶಸ್ಸನ್ನು ಕಾಣಲು ಸಾಧ್ಯವಿಲ್ಲ. ಮಹಾಭಾರತ ಯುದ್ಧವನ್ನು ವಿಶ್ಲೇಷಣೆ ಮಾಡಿದರೆ ಅಲ್ಲಿ ಯುದ್ಧಕ್ಕೆ ಕಾರಣರಾದವರು ಪಾಂಡವರಲ್ಲ. ಪಾಂಡವರು ಧರ್ಮ ರಕ್ಷಣೆಯ ಹೊಣೆಗಾರಿಕೆಯಿಂದ ಯುದ್ಧಕ್ಕೆ ಸಜ್ಜಾಗಿರುವುದು. ಇಲ್ಲಿ ಕೃಷ್ಣ ಸ್ಪಷ್ಟವಾಗಿ ಹೇಳುತ್ತಾನೆ: “ಒಳ್ಳೆಯ ಕೆಲಸ ಮಾಡುವಾಗ ಯಾರ ಭಯವೂ ಬೇಡ ಹಾಗೂ ಅದರಿಂದ ದುಃಖವಿಲ್ಲ” ಎಂದು. ಧರ್ಮ ರಕ್ಷಣೆಯ ಹಾದಿಯಲ್ಲಿ 'ನನ್ನವರು' ಎನ್ನುವುದು ಸಲ್ಲದು. ಜಗತ್ತಿನ ತತ್ವವನ್ನು ಸಾಕ್ಷಾತ್ಕಾರ ಮಾಡಿಕೊಂಡ ಜ್ಞಾನಿಗಳು ಕಂಡುಕೊಂಡ ಕೊನೆಯ ಸತ್ಯವಿದು. ಮಹಾಭಾರತದ ಪ್ರತಿಯೊಂದು ಶ್ಲೋಕಕ್ಕೂ ಹತ್ತು ಅರ್ಥಗಳಿವೆಯಂತೆ. ಮೇಲಿನ ಶ್ಲೋಕವನ್ನು ನಾವು ಇನ್ನೊಂದು ಆಯಾಮದಲ್ಲಿ ನೋಡಿದರೆ- "ನ ಅಸತಃ ಅಭಾವಃ ಸತಃ ಅಭಾವಃ ನ IBS" ಅಂದರೆ ಸತ್ತಿಗೂ ಅಭಾವವಿಲ್ಲ ಅಸತ್ತಿಗೂ ಅಭಾವವಿಲ್ಲ ಎಂದರ್ಥ. ಅಸತ್‌ ಎಂದರೆ ಸ್ಥೂಲ ಪ್ರಪಂಚಕ್ಕೆ ಕಾರಣವಾಗಿರುವ, ಸೂಕ್ಷ್ಮವಾಗಿರುವ ಮೂಲಪ್ರಕೃತಿ. ಪ್ರಕೃತಿ ಅನಾದಿನಿತ್ಯ. ಈ ಪ್ರಕೃತಿಯನ್ನು ಸೃಷ್ಟಿಮಾಡಿದ ಭಗವಂತ(ಪುರುಷ) ಅನಾದಿನಿತ್ಯ. ಪ್ರಕೃತಿ ಮತ್ತು ಪುರುಷನಿಗೆ ಅಧೀನವಾಗಿರುವ ಜೀವ ಕೂಡಾ ಅನಾದಿನಿತ್ಯ. ಜೀವಕ್ಕೆಈ ಸ್ಥೂಲ ದೇಹ ಬರುವ ಮೊದಲೂ ಜೀವ ಇತ್ತು, ಹಾಗೂ ಮುಂದೆ ಕೂಡಾ ಇರುತ್ತದೆ. ಪಾಂಚಭೌತಿಕ ಶರೀರದಲ್ಲಿ ಜೀವ ಕೇವಲ ಅತಿಥಿ. ಹೀಗಿರುವಾಗ ದೇಹಾಭಿಮಾನ ಸಲ್ಲದು.
Bibek Debroy (1955–2024)The Bhagavad Gita
(16) ‘That which is untrue does not have an existence. That which is true cannot be destroyed. But those who know the truth realize the ends of both these.’15