2.40

नेहाभिक्रमनाशोऽस्ति प्रत्यवायो न विद्यते ।
स्वल्पमप्यस्य धर्मस्य त्रायते महतो भयात् ॥
nehābhikramanāśo'sti pratyavāyo na vidyate |
svalpamapyasya dharmasya trāyate mahato bhayāt ||
Swami Sivananda (1887–1963)Bhagavad Gita
40. In this there is no loss of effort, nor is there any harm (the production of contrary results or transgression). Even a little of this knowledge (even a little practice of this Yoga) protects one from great fear. COMMENTARY: In Karma Yoga (selfless action) even a little effort brings immediate purification of the heart. Purification of the heart leads to fearlessness.
Sri Vishwesha Tirtharu (1931–2019)Gitasaroddhara
ಆಸಕ್ತಿಯೇ ಪಾಪದ ಮೂಲ
ಆಸಕ್ತಿ ಯೇ ಪಾಪದಮೂಲ ಶ್ರೀಕೃಷ್ಣನು ಈವರೆಗೆ ಅಭಿಮಾನತ್ಯಾಗದ ಉಪದೇಶವನ್ನು ನೀಡಿ ವ್ಯಾಮೋಹಜನಿತವಾದ ದುಃಖದ ಭಾರವನ್ನು ಕಡಿಮೆ ಮಾಡಿದರೂ ಅರ್ಜುನನಿಗೆ ಪಾಪದ ಭೀತಿಯು ಇನ್ನೂ ಪೂರ್ಣವಾಗಿ ನಿರಸನವಾಗಿಲ್ಲ. ಬಂಧುಜನರ, ಗುರುಜನರ ಹಿಂಸೆಯಿಂದ ಪಾಪವು ಅಂಟಬಹುದೆಂಬ ಸಂಶಯವು ಅವನಲ್ಲಿ ಇನ್ನೂ ಉಳಿದಿದೆ. ಇದು ಧರ್ಮಯುದ್ಧವಾಗಿದ್ದು ಪುಣ್ಯಕರವಾದರೂ ಇದರ ಜೊತೆಗೆ ಅನೇಕ ಪಾಪಕಾರ್ಯಗಳೂ ಸಂಭವಿಸುತ್ತವೆ. ಪರಲೋಕದಲ್ಲಿ ಈ ಅಧರ್ಮಕೃತ್ಯಗಳಿಂದ ದುಃಖವನ್ನು ಅನುಭವಿಸಬೇಕಾಗುವುದು. ಹೀಗೆ ಸುಖದುಃಖಗಳೆರಡಕ್ಕೂ ಕಾರಣವಾದ ಧರ್ಮಾಧರ್ಮಮಿಶ್ರವಾದ ಈ ಯುದ್ಧಕ್ಕಿಂತ ಕೇವಲ ಧರ್ಮಕಾರಕವಾದ, ಪಾವದ ಸೋಂಕೇ ಇಲ್ಲ ದ ಸಂನ್ಯಾಸವೇ ಶ್ರೇಷ್ಠವಲ್ಲವೆ? ಇವೆಲ್ಲ ಕರ್ಮಗಳನ್ನು ತ್ಯಾಗಮಾಡಿ ಅರಣ್ಯಕ್ಕೆ ಹೋಗಿ ಮುನಿವೃತ್ತಿಯನ್ನು ಯಾಕೆಸ್ಟೀಕರಿಸಬಾರದೆಂಬ ಅರ್ಜುನನ ಸಂಶಯವು ಇನ್ನೂ ಉಳಿದಿದೆ. ಇದಕ್ಕಾಗಿ ಇನ್ನು ಮುಂದೆ ಪರಮಾತ್ಮನು ನಿಷ್ಠುಮ ಕರ್ಮ ಅಥವಾ ಭಾಗವತ ಧರ್ಮದ ಸಂದೇಶವನ್ನು ನೀಡುತ್ತಾನೆ. ಹೇಗೆ ಅಭಿಮಾನವೇ ದುಃಖದ ಮೂಲವಾಗಿದ್ದು ಅಭಿಮಾನವನ್ನು ತ್ಯಾಗಮಾಡುವುದರಿಂದ ದುಚುದಸಮೂಲ ಉಚ್ಚಾಟನೆಯಾಗುವುದೋ ಅದರಂತೆಪಾಪದ ಮೂಲ ಯುವುದೆಂಬುದನ್ನು ನಾವು ಪರಿಶೀಲಿಸಿ ಅದನ್ನು ಕಿತ್ತೊಗೆಯಬೇಕು. ಬರಿ ಹಿಂಸೆಯಿಂದ ಪಾಪವು ಸಂಭವಿಸುವುದೇ ಇಲ್ಲ. ನ್ಯಾಯಾಧೀಶನು ಸಾವಿರಾರು ಜನರಿಗೆ ಮರಣದಂಡನೆ ಹಾಗೂಇತರ ಕಠಿಣ ಶಿಕ್ಷೆಗಳನ್ನು ವಿಧಿಸುತ್ತಾನೆ. ಅಧಿಕಾರಿಗಳು ಆ ಶಿಕ್ಷೆಯನ್ನು ಕಾರ್ಯಗತಗೊಳಿಸುವರು. ಇದರಿಂದ ಅವರೆಲ್ಲ ಪಾಪಿಗಳೆನಿಸುವರೆ? ಆಸಕ್ತಿಯೇ ಪಾಪದ ಮೂಲ. ನಮ್ಮ ಸ್ವಾರ್ಥಕ್ಕಾಗಿ ರಾಗದ್ವೇಷಗಳಿಂದ ನಾವು ಇನ್ನೊಬ್ಬರನ್ನು ಹಿಂಸಿಸುವೆವು. ಅದರಿಂದ ನಮಗೆ ಪಾಪವು ಸಂಭವಿಸುವುದು. ಇಂತಹ ರಾಗದ್ವೇಷಗಳಿಲ್ಲದೆ ಶಾಸ್ತ್ರವಿಹಿತವಾದ ಲೋಕಹಿತಕಾರಿಯಾದ ಕರ್ತವ್ಯವೆಂಬ ಭಾವನೆಯಿಂದ ಅನಾಸಕ್ತಿಯಿಂದ ಕಾರ್ಯವನ್ನು ಮಾಡುವಾಗ ಹಿಂಸೆಯ ಘಟನೆಗಳು ನಡೆದರೂ ಪಾಪವು ಅಂಟುವುದಿಲ್ಲ. ಇಡೀ ಜಗತ್ತನ್ನೇ ಸಂಹರಿಸುವ ಭಗವಂತನಿಗೆ ದೋಷವಿದೆಯೆ? ಆದ್ದರಿಂದ ಆಸಕ್ತಿಯನ್ನು ಬಿಟ್ಟು ಕರ್ತವ್ಯ ಧರ್ಮವನ್ನು ನಿರ್ವಹಿಸಬೇಕು-ವೇದನಾ ನಿರೋಧಕ ಇಂಜಕ್ಷನ್‌ ನೀಡಿ ಶಸ್ತ್ರಕ್ರಿಯೆಯನ್ನು ಮಾಡುವಂತೆ. ಆಗ ಯಾವ ಮನೋವೇದನೆಗೂ ಅವಕಾಶ ಇರುವುದಿಲ್ಲವೆಂದು ನಿಷ್ಕುಮ ಕರ್ಮದ ದಿವ್ಯಸಂದೇಶವನ್ನು ಶ್ರೀಕೃಷ್ಣನು ಉಪದೇಶಿಸುವನು. ಹೀಗೆ ಕಾಮನೆಯಿಲ್ಲದೆ, ಭಗವತ್‌ ಪ್ರೀತಿಯಾಗಲೆಂಬ ಭಾವನೆಯಿಂದ ಮಾಡುವ ಸತ್‌ಕರ್ಮವನ್ನು ಸಂಕಲ್ಪಿಸಿದರೂ ಪ್ರಾರಂಭಮಾಡಿ ಅನಿವಾರ್ಯ ಕಾರಣದಿಂದ ಮಧ್ಯದಲ್ಲಿ ಕೈಬಿಟ್ಟರೂ ಅದರಿಂದ ಆವರೆಗೆ ಮಾಡಿದ್ದಕ್ಕೆ ಹಾನಿಯಲ್ಲ. ಭಗವಂತಹೇಳುತ್ತಾನೆ: ನೇಹಾಭಿಕ್ರಮನಾಶೋಸಸ್ತಿ ಪ್ರತ್ಯವಾಯೋ ನ ವಿದ್ಯತೇ । ಸ್ವಲ್ಪಮಪ್ಪಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್‌ ॥ ನಾವು ಕೃಷಿ, ವ್ಯಾಪಾರ ಮೊದಲಾದವುಗಳನ್ನು ಸಂಕಲ್ಪಿಸಿ ಆರಂಭ ಮಾಡಿ ಅರ್ಧದಲ್ಲೇ ತೊರೆದರೆ ವಿಶೇಷ ನಷ್ಟವಾಗುವುದು. ಅದರಿಂದ ಮತ್ತೆ ಮೇಲೆ ಏರುವುದೇ ದುಸ್ತರವಾಗುವುದು. ನಾವು ಔಷಧವನ್ನು ಸೇವಿಸುವಾಗಸ್ವಲ್ಪಹೆಚ್ಚು ಕಡಿಮೆ ಆದರೆ ಅದರಿಂದ ಬಹಳ ಅನರ್ಥವಾಗಬಹುದು. ಆದರೆ ಮುಂದೆ ವಿವರಿಸಲಿರುವ ಭಾಗವತಧರ್ಮ ಅಥವಾ ಅನಾಸಕ್ತಿ ಯೋಗದಲ್ಲಿ ಅಂತಹ ಭಯಕ್ಕೂ ಅವಸರವಿಲ್ಲ. ನಾವು ಶುದ್ಧ ಭಾವನೆಯಿಂದ ಮಾಡುವಾಗಸ್ವಲ್ಪ ಹೆಚ್ಚು ಕಡಿಮೆ ಆದರೂ ಅದರಿಂದ ಪ್ರತ್ಯವಾಯವಿಲ್ಲ, ಅಪಾಯವಿಲ್ಲ. ಶ್ರೀಮದಾಚಾರ್ಯರು ಹೇಳುವಂತೆ - ಪ್ರಾರಂಭಮಾತ್ರಮಿಚ್ಛಾವಾ ವಿಷ್ಣುಧರ್ಮೇ ನ ನಿಷ್ಠಲಾ | -ಗೀತಾತಾತ್ಪರ್ಯ ಭಗವಂತನು ವಿವರಿಸುವ ಈ ಪವಿತ್ರ ಭಾಗವತಧರ್ಮ ಎಷ್ಟು ಸರಳ ನಿರಪಾಯ ರಾಜಮಾರ್ಗವಾಗಿದೆ | ಇದನ್ನು ಸ್ವಲ್ಪವಾಗಿ ಯಥಾಶಕ್ತಿ ಆಚರಿಸಿದರೂ ಮಹಾಫಲವನ್ನು ಪಡೆಯಬಹುದು. ಎಷ್ಟುಕರ್ತವ್ಯಮಾಡಿದ್ದೇವೆ ಎಂಬುದಕ್ಕಿಂತ ಹೇಗೆ ಮಾಡಿದ್ದೇವೆ ಎಂಬುದೇಮುಖ್ಯ ಸುದಾಮನು ನೀಡಿದ ಹಿಡಿ ಅವಲಕ್ಕಿಗೆ ಭಗವಂತನು ಎಂತಹ ಪ್ರತಿಫಲವನ್ನುನೀಡಿರುವನು | ಆಹಿಡಿ ಅವಲಕ್ಕಿಯ ಹಿಂದೆ ಅಂತಹ ಪವಿತ್ರ ಭಾವವಿತ್ತು ಶುದ್ಧ ಭಾವದಿಂದ ಮಾಡುವ ಅತ್ಯಲ್ಪ ಕರ್ಮವೂ ಪರಮ ಶ್ರೇಯಸ್ಸಿಗೆ ಕಾರಣವೆನಿಸುವುದು. ಕಾಗದದ ನೂರಾರು ಹಾಳೆಗಳಿಗಿಂತಲೂ ರಾಷ್ಟ್ರ ಮುದ್ರೆ ಇರುವ ಒಂದು ನೋಟಿಗೆ ಎಷ್ಟು ಬೆಲೆ ಇದೆ | ಭಕ್ತಿಯ ದೇವಮುದ್ರೆ ಇರುವ ಅಲ್ಪ ಕರ್ಮವೂ ನೂರಾರು ಕರ್ಮಗಳಿಗಿಂತ ಮಿಗಿಲು ಎಂದು ಶ್ರೀಕೃಷ್ಣನು ನಿಷ್ಕಾಮಕರ್ಮದ ಮಹತ್ತ ಎನ್ನು ವರ್ಣಿಸಿ ಅದನ್ನು ಮುಂದಿನ ಭಾಗದಲ್ಲಿ ವಿವರಿಸುವನು.
Bannanje Govindacharya (1936–2020)Bhagavad Gita Pravachana
ನ ಇಹ ಅಭಿಕ್ರಮ ನಾಶಃ ಅಸ್ತಿ ಪ್ರತ್ಯವಾಯುಃ ನ ವಿದ್ಯತೇ | ಸು ಅಲ್ಬಮ್‌ ಅಪಿ ಅಸ್ಯ ಧರ್ಮಸ್ಯ ತ್ರಾಯತೇ ಮಹತಃ ಭಯಾತ್‌ -- ಇಲ್ಲಿ ತೊದಲು ಹೆಜ್ಜೆ ಕೂಡಾ ಹಾಳಾಗದು. ಇಲ್ಲಿ ತೊಡರುಗಳಿಲ್ಲ; ಈ ಧರ್ಮದ ತುಣುಕು ಕೂಡಾ ದೊಡ್ಡ ಬೆದರಿನಿಂದ ಪಾರುಮಾಡಬಲ್ಲುದು. ಸಾಧನೆಯ ಬಗ್ಗೆ ಹೇಳುವ ಮೊದಲು ಕೃಷ್ಣ ನಮಗೆ ಬರಬಹುದಾದ ಒಂದು ಸಂಶಯವನ್ನು ಈ ಶ್ಲೋಕದಲ್ಲಿ ಪರಿಹರಿಸಿದ್ದಾನೆ. ಎಲ್ಲರನ್ನೂ ಒಂದು ಪ್ರಶ್ನೆ ಕಾಡಬಹುದು. ಅದೇನೆಂದರೆ: ಮೊದಲು ಹುಟ್ಟು, ಆನಂತರ ಅಧ್ಯಯನ, ಸಾಧನೆ, ನಂತರ ಸಾವು. ಪುನಃ ಮರು ಹುಟ್ಟು ಮತ್ತೆ ಅದೇ ಸಾಧನೆ ಮತ್ತೆ ಸಾವು! ಇದರಿಂದ ಏನು ಉಪಯೋಗ ಎಂದು. ಒಂದು ಜನ್ಮದಲ್ಲಿ ಬ್ರಹ್ಮಸಾಕ್ಷಾತ್ಕಾರವಾಗದೇ ಇದ್ದರೆ ಆ ಎಲ್ಲಾ ಸಾಧನೆ ವ್ಯರ್ಥವೇ? ಖಂಡಿತವಾಗಿ ಇಲ್ಲ ಎನ್ನುತ್ತಾನೆ ಕೃಷ್ಣ. ನಮ್ಮ ಜೀವನದಲ್ಲಿ ಗಳಿಸಿದ ಐಹಿಕ ಸಂಪತ್ತು(ಧನ, ಒಡವೆ, ಕೀರ್ತಿ, ಆಸ್ತಿ ಇತ್ಯಾದಿ) ಸತ್ತ ನಂತರ ನಮ್ಮೊಂದಿಗೆ ಬಾರದು ನಿಜ. ಆದರೆ ಅಧ್ಯಾತ್ಮ ಸಾಧನೆ ಹಾಗಲ್ಲ. ಒಂದು ಜನ್ಮದಲ್ಲಿ ಮಾಡಿದ ಅಧ್ಯಾತ್ಮ ಸಾಧನೆ ಎಂದೂ ನಾಶವಾಗದು. ಈ ಜನ್ಮದಲ್ಲಿ ಅಧ್ಯಾತ್ಮದ ಒಂದು ಮೆಟ್ಟಿಲನ್ನು ಹತ್ತಿದರೆ ಮುಂದಿನ ಜನ್ಮದಲ್ಲಿ ಹುಟ್ಟುವಾಗಲೇ ನಾವು ಎರಡನೇ ಮೆಟ್ಟಲಲ್ಲಿರುತ್ತೇವೆ. ಹಿಂದಿನ ಜನ್ಮದಲ್ಲಿ ಎಲ್ಲಿ ನಿಂತಿದ್ದೇವೋ ಅಲ್ಲಿಂದ ಮುಂದುವರಿಯುವ ಪರಿಸರದಲ್ಲಿ ನಮ್ಮ ಜನನವಾಗುತ್ತದೆ. ಸಾಮಾಜಿಕವಾಗಿ ನೀವು ಅಸಾಧಾರಣ ಪ್ರತಿಭೆಯುಳ್ಳ ಮಕ್ಕಳು ಜನಿಸುವುದನ್ನು, ಹಾಗೂ ಅತ್ಯಂತ ಕಡಿಮೆ ಸಮಯದಲ್ಲಿ ಮಹಾನ್‌ ಸಾಧನೆ ಮಾಡುವುದನ್ನು ಕಾಣುತ್ತೀರಿ. ಇದು ಅವರು ಹಿಂದಿನ ಜನ್ಮದಿಂದ ಪಡೆದು ಬಂದ ಜ್ಞಾನ. ಹಿಂದಿನ ಜನ್ಮದ ಅಧ್ಯಾತ್ಮದ ಸಾಧನೆಯ ಮುಂದುವರಿದ ಭಾಗವೇ ಈ ಜನ್ಮ. ನಾವು ಆ ಜನ್ಮದಲ್ಲಿ ಎಲ್ಲಿ ನಿಲ್ಲಿಸಿದ್ದೇವೋ ಅಲ್ಲಿಂದಲೇ ಈ ಜನ್ಮದ ಸಾಧನೆ ಪ್ರಾರಂಭವಾಗಿ ಮುಂದುವರಿಯುತ್ತದೆ. ಒಂದು ವೇಳೆ ನಮಗೆ ಅಧ್ಯಾತ್ಮ ಸಾಧನೆ ಮಾಡಬೇಕು ಎನ್ನುವ ಅಂತರಂಗದ ತುಡಿತವಿದ್ದು, ಅದನ್ನು ಈ ಜನ್ಮದಲ್ಲಿ ಸಾಧಿಸಲಾಗದಿದ್ದಲ್ಲಿ ಮುಂದಿನ ಜನ್ಮದಲ್ಲಿ ಸಾಧನೆಗೆ ಬೇಕಾದ ವಾತಾವರಣದಲ್ಲಿ, ವಿದ್ವಾಂಸರ ಸಂಗವಿರುವ ಕಡೆ ನಮ್ಮ ಜನ್ಮವಾಗುತ್ತದೆ. ಆದ್ದರಿಂದ ನಮ್ಮ ಅಧ್ಯಾತ್ಮ ಚಿಂತನೆಯಲ್ಲಿ ನಮ್ಮ ಒಂದೊಂದು ಜನ್ಮ ಒಂದೊಂದು ತರಗತಿ ಇದ್ದಂತೆ. ಒಂದು ಗ್ರಂಥವನ್ನು ಸಂಪೂರ್ಣ ತಿಳಿಯಲು ನಾವು ಅನೇಕ ಜನ್ಮ ಸಾಧನೆ ಮಾಡಬೇಕು. ಈ ಕಾರಣದಿಂದ ಅಧ್ಯಾತ್ಮ ಸಾಧನೆ ಎಂದೂ ವ್ಯರ್ಥವಲ್ಲ. ಇಂದು ನೀವು ನಿಮ್ಮ ಜೀವನದ ಯಾವ ಘಟ್ಟದಲ್ಲಿದ್ದರೂ ಸರಿ, ಅಧ್ಯಾತ್ಮ ಸಾಧನೆಗೆ ಇದು ಸಕಾಲ. ಇಂದೇ ನಿಮ್ಮ ಸಾಧನೆಯನ್ನು ಆರಂಭಿಸಿ. ಅದು ನಿಮ್ಮನ್ನು ಮೋಕ್ಷ ಮಾರ್ಗದತ್ತ ಕೊಂಡೊಯ್ಯುತ್ತದೆ ಎನ್ನುವುದು ಕಟುಸತ್ಯ. ಅಧ್ಯಾತ್ಮ ಪ್ರದರ್ಶನದ ವಸ್ತುವಲ್ಲ, ಅದು ಅಂತರಂಗದ ಸಾಧನೆ. ನಮ್ಮ ಜನ್ಮದಲ್ಲಿ ನಾವು ಅಧ್ಯಾತ್ಮದ ಕಿಂಚಿತ್‌ ಸಾಧನೆ ಮಾಡಿದರೂ ಕೂಡಾ, ಅದು ನಮ್ಮನ್ನು ಭಯದಿಂದ ಪಾರು ಮಾಡುತ್ತದೆ. ಭಯದಿಂದ ಅಭಯದತ್ತ ನಮ್ಮನ್ನು ಸಾಗಿಸುವ ಏಕಮಾತ್ರ ಸಾಧನ ಅಧ್ಯಾತ್ಮ. ಸಾಧಕರಲ್ಲಿ ಮೂರು ವಿಧ. ಉತ್ತಮ ಸಾಧಕ, ಮಧ್ಯಮ ಸಾಧಕ, ಅಧಮ ಸಾಧಕ. ಉತ್ತಮ ಸಾಧಕ ದೇವರು ಒಬ್ಬನೇ ಎಂದು ನಂಬಿರುತ್ತಾನೆ. ಇಂತಹ ಭಕ್ತರನ್ನು ಭಾಗವತರು ಎನ್ನುತ್ತಾರೆ. ಆತನಿಗೆ ಭಗವಂತನಲ್ಲಿ ಏಕನಿಷ್ಠೆ ಇರುತ್ತದೆ. ಭಗವಂತನನ್ನು ಯಾವ ಶಬ್ದದಿಂದ ಕರೆದರೂ ಅದು ಆ ಆದಿಶಕ್ತಿಯಾದ ಪರಶಕ್ತಿಯನ್ನು ಹೇಳುತ್ತದೆ ಎನ್ನುವ ಸತ್ಯವನ್ನು ಆತ ತಿಳಿದಿರುತ್ತಾನೆ. ಈತ ನಿಜವಾದ ಸಾಧಕ, ಹಾಗೂ ಇದು ಸಾಧನೆಯ ನಿಜವಾದ ದಾರಿ. ಇನ್ನು ಮಧ್ಯಮ ಸಾಧಕರು: ಇವರು ಪ್ರತಿಯೊಂದು ದೇವತೆಯನ್ನು ಪರಿ ಪರಿಯಾಗಿ ಪೂಜಿಸಿ ಕೊನೆಗೆ "ಕೃಷ್ಣಾರ್ಪಣ ಮಸ್ತು" ಎಂದು ಭಗವಂತನಿಗೆ ಅರ್ಪಿಸುತ್ತಾರೆ. ಇವರನ್ನು ತ್ರೈವಿಧ್ಯರು ಎನ್ನುತ್ತಾರೆ. ಇನ್ನು ಅಧಮ ಸಾಧಕ; ಈತ ದೇವರು ನೂರಾರು ಎಂದು ನಂಬಿ ಪೂಜಿಸುತ್ತಿರುತ್ತಾನೆ. ಭಗವಂತ ಸರ್ವಾಂತರ್ಯಾಮಿ ಎನ್ನುವ ಭಾವನೆ ಈತನಿಗಿರುವುದಿಲ್ಲ. ಈತನಿಗೆ ಅಧ್ಯಾತ್ಮದ ನಿಜವಾದ ಕಲ್ಪನೆ ಇರುವುದಿಲ್ಲ. ಆದ್ದರಿಂದ ಇದು ನಿಜವಾದ ಅಧ್ಯಾತ್ಮ ಸಾಧನೆ ಆಗದು. ನಾವು ಏಕನಿಷ್ಠೆಯಿಂದ ಮಾಡುವ ಸಾಧನೆ ಎಂದೂ ವ್ಯರ್ಥವಾಗದು. ಇಲ್ಲಿ ತೋರ್ಪಡಿಕೆಯ ಅಗತ್ಯವಿಲ್ಲ. ಆದರೆ ಪ್ರಾಮಾಣಿಕ ನಿಷ್ಠೆ ಅಗತ್ಯ. ಗಣಪತಿಯನ್ನು ಪೂಜಿಸು, ವಾಯುವನ್ನು ಪೂಜಿಸು, ಸೂರ್ಯನನ್ನು ಪೂಜಿಸು, ಅಲ್ಲಾ ಎಂದು, ಯೇಸು ಎಂದು, ಶಿವನೆಂದು, ವಿಷ್ಣುವೆಂದು, ಏನೇ ಅಂದು ಪೂಜಿಸಿದರೂ ಕೂಡಾ, ಎಲ್ಲಾ ಶಬ್ದಗಳೂ ಆದಿಶಕ್ತಿಯಾದ ಪರಶಕ್ತಿ ಎನ್ನುವ ಸತ್ಯ ತಿಳಿದು, ಏಕನಿಷ್ಠೆ ಇಟ್ಟು, ಪರಿಶುದ್ಧ ಪ್ರಾಮಾಣಿಕ ಚಿಂತನೆ ಮಾಡಿದಾಗ ಅದು ನಿಜವಾದ ಅಧ್ಯಾತ್ಮ ಸಾಧನೆಯಾಗುತ್ತದೆ ಹಾಗೂ ವ್ಯರ್ಥವಾಗದೇ ನಮ್ಮೊಂದಿಗೆ ಬರುತ್ತದೆ. ಇಂತಹ ಸಾಧನೆಯಲ್ಲಿ ದ್ವೇಷ, ಸ್ವಾರ್ಥ, ಅಹಂಕಾರ, ದುಃಖ ಎಂದೂ ಇರುವುದಿಲ್ಲ. ಎಲ್ಲವೂ ಭಗವಂತನ ಪ್ರಸಾದ ಎನ್ನುವ ಭಾವನೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ.
Bibek Debroy (1955–2024)The Bhagavad Gita
(40) ‘In this,34 the possibility of effort coming to waste does not exist. Nor is there the chance of committing a sin. Even a little bit of this dharma protects from great fear.’