व्यवसायात्मिका बुद्धिरेकेह कुरुनन्दन ।
बहुशाखा ह्यनन्ताश्च बुद्धयोऽव्यवसायिनाम् ॥
vyavasāyātmikā buddhirekeha kurunandana |
bahuśākhā hyanantāśca buddhayo'vyavasāyinām ||
Swami Sivananda (1887–1963)Bhagavad Gita
41. Here, O joy of the Kurus, there is a single one-pointed determination! Many-branched
and endless are the thoughts of the irresolute.
Sri Vishwesha Tirtharu (1931–2019)Gitasaroddhara
ಸತ್ಯದ ದಾರಿ ಒಂದೇ
ಸತ್ಯದ ದಾರಿ ಒಂದೇ
ಕರ್ಮದ ವಿಚಾರದಲ್ಲಿ ಅನೇಕರು ಭಿನ್ನ ಭಿನ್ನ ಅಭಿಪ್ರಾಯಗಳನ್ನು
ವ್ಯಕ್ತಪಡಿಸಿದ್ದಾರೆ. ಕೆಲವರು ಕರ್ಮವೇ ಮಾಯಿಕವಾಗಿದ್ದು ಅಜ್ಜಾನಿಗೆ ಮಾತ್ರ
ಕರ್ಮಾಚರಣೆಯು ಸಂಬಂಧಿಸಿದ್ದು ಎಂದು ಪ್ರತಿಪಾದಿಸಿದರೆ, ಮೀಮಾಂಸಕರು
ಸ್ವರ್ಗಾದಿ ಫಲಗಳ ಅಪೇಕ್ಷೆಯಿಂದ ಯಜ್ಞಯಾಗಾದಿ ಕರ್ಮಗಳ ಅನುಷ್ಠಾನ
ಮಾಡಿ ಸ್ವರ್ಗಭೋಗವನ್ನು ಪಡೆಯುವುದೇ ಜೀವನದ ಪರಮ
ಪುರುಷಾರ್ಥವೆನ್ನುವರು. ಶ್ರೀಕೃಷ್ಣನು ನಿಷ್ಕುಮ ಭಾವನೆಯ ಭಗವತ್
ಸೇವಾರೂಪ ಕರ್ಮಗಳನ್ನು ಜ್ಞಾನಿಗಳು, ಅಜ್ಞಾನಿಗಳು ಎಲ್ಲರೂ ಆಚರಿಸ
ಬೇಕೆಂದು ಬೋಧಿಸುವನು. ಈ ಎಲ್ಲ ಭಿನ್ನ ಭಿನ್ನ ವಿಚಾರಗಳಿಂದ ಸಾಧಕರ
ಮನಸ್ಸಿನಲ್ಲಿ ಏಳಬಹುದಾದ ಗೊಂದಲವನ್ನು ಶ್ರೀಕೃಷ್ಣನು ಪರಿಹರಿಸುತ್ತಾನೆ:
ವ್ಯವಸಾಯಾತ್ಮಿಕಾ ಬುದ್ಧಿ-
ರೇಕೇಹ ಕುರುನಂದನ ।
""ಈ ಅನೇಕ ಮಾರ್ಗಗಳಲ್ಲಿ ಪ್ರಮಾಣಗಳಿಂದ ಪರಿಶೀಲಿಸಿ ನಿರ್ಣೀತವಾದ
ಮಾರ್ಗ ಒಂದೇ ಇದೆ.'' ತಾನು ಉಪದೇಶಿಸಿದ ನಿಷ್ಕುಮ ಕರ್ಮವು ಅಂಥ
ನಿರ್ಣೇತವಾದ ಸತ್ಯಪಥವಾಗಿದೆ. ಯಾವ ಮಾರ್ಗವಾದರೇನು? ಎಲ್ಲವೂ
ಒಂದೇ ಗುರಿಗೆ ನಮ್ಮನ್ನು ಒಯ್ಯುವುವೆಂದು ಭಾವಿಸಿಕೊಂಡು ಯಾವ
ವಿಮರ್ಶೆಯೂ ಇಲ್ಲದೆ ತಮಗೆ ತೋರಿದ ದಾರಿಯಲ್ಲಿ ಕೆಲವರು ಸಾಗುವರು.
ಇದರಿಂದ ಸತ್ಯವನ್ನು ಬಹಳ ಲಘುವಾಗಿ ಭಾವಿಸಿಕೊಂಡಂತೆ ಆಗುವುದು.
ಒಂದೇ ವಿಷಯದ ಬಗ್ಗೆ ಪರಸ್ಪರ ವಿರುದ್ಧವಾದ ಎರಡೂ ಮಾತುಗಳು
ಸತ್ಯವೆನಿಸಲಾರವು. ಅವೆರಡರಿಂದಲೂ ನಮಗೆ ಒಂದೇ ಫಲವು
ದೊರೆಯುವುದಾದರೆ ಆಸತ್ಯಮಾರ್ಗದಿಂದಲೂ ಮುಕ್ತಿಯು ಲಭಿಸುವುದೆಂದು
ಹೇಳಿದಂತಾಗುವುದು. ಸತ್ಯ ಅಸತ್ಯ ಇವೆರಡನ್ನೂ ಒಂದೇ ಮಟ್ಟದಲ್ಲಿ ನಾವು
ನೋಡುವುದರಿಂದ ಸತ್ಯದ ಪವಿತ್ರತೆ ಹಾಗೂ ಮಹತ್ತ್ವವನ್ನು. ನಾವು
ಅಲ್ಲಗಳೆಯುತ್ತಿದ್ದೇವೆ. ಇದರಿಂದ ಲೋಕದಲ್ಲಿ ಸತ್ಯಾನ್ವೇಷಣದೃಷ್ಟಿಯೇ
ಕುಂಠಿತವಾಗುವುದು.
ಶ್ರೀ ವಿನೋಬಾ ಮತ್ತು ನಾವು ಸಂಧಿಸಿದಾಗ ಈ ವಿಷಯದಲ್ಲಿ
ವಿಚಾರವಿನಿಮಯ ನಡೆಯಿತು. "“ಭಿನ್ನ ಭಿನ್ನ ಆಹಾರಗಳೂ ಅವರವರ
ಅಭಿರುಚಿಗೆ ಅನುಗುಣವಾಗಿ ತೃಪ್ತಿಯನ್ನು ನೀಡುವವು. ಕೆಲವರಿಗೆ ಖಾರ
ಪ್ರಿಯವೆನಿಸುವುದು; ಕೆಲವರಿಗೆ ಸಿಹಿ ಅವೇಕ್ಷಿತವಿರುವುದು. ಆದರೂ ಎಲ್ಲರಿಗೂ
ಯಾವ ಆಹಾರ ತೆಗೆದುಕೊಂಡರೂ ತೃಪ್ತಿ ಆಗಿಯೇ ತೀರುವುದು. ಮತಗಳ
ವಿಚಾರವೂ ಅಷ್ಟೇ. ಅವರವರ ಅಭಿರುಚಿಗೆ ತಕ್ಕಂತೆ ಯಾವ ಮತವನ್ನು
ಅನುಸರಿಸಿದರೂ ಶ್ರೇಯಸ್ಸು ಆಗುವುದು'' ಎಂದು ವಿನೋಬಾ ಅವರು
ಅಭಿಪ್ರಾಯಪಟ್ಟರು. ಈ ವಿಷಯದಲ್ಲಿ ನಮ್ಮ ಅಭಿಪ್ರಾಯವನ್ನು ವಿವರಿಸುತ್ತ
ನಾವು, "" ಭಿನ್ನ ಭಿನ್ನ ಆಹಾರಗಳು ರುಚಿಕರಗಳಾದರೂ ಎಲ್ಲ ಆಹಾರಗಳಿಂದಲೂ
ಶರೀರದ ಮೇಲೆ ಒಂದೇ ರೀತಿಯ ಪರಿಣಾಮಗಳಾಗುವುದಿಲ್ಲ. ಆಹಾರದ
ಗುಣಧರ್ಮಗಳಿಗನುಸಾರವಾಗಿಶರೀರದ ಮೇಲೆವಿಭಿನ್ನ ಪ್ರತಿಕ್ರಿಯೆ ಆಗಿಯೇ
ತೀರುವುದು. ತಾತ್ತಿ ಪೆ ವಿಚಾರದಲ್ಲೂ ಇದೇ ಮಾತು ಬರುವುದು. ಪರಸ್ಪರ
ವಿರೋಧಿ ವಿಚಾರಗಳು ಎಂದಿಗೂ ಸತ್ಯವೆನಿಸಲಾರವು. ಸತ್ಯ ಹಾಗೂ ಅಸತ್ಯ
ವಿಚಾರಗಳಿಂದ ಆತ್ಮನ ಮೇಲೆ ಒಂದೇ ವಿಧವಾದ ಪರಿಣಾಮ ಹೇಗೆ
ಆಗಬಹುದು? ಅವು ಅವರವರ ಮನೋವೃತ್ತಿಗನುಗುಣವಾಗಿ ಮಾನಸಿಕ
ಸಮಾಧಾನವನ್ನು ನೀಡಿದರೂ ಎಲ್ಲ ವಿಚಾರಗಳಿಂದ ಏಕವಿಧ ಪರಿಣಾಮವು
ಆತ್ಮನ ಮೇಲೆ ಆಗಲಾರದು'' ಎಂದೆವು. ನಮ್ಮ ಈ ಮಾತನ್ನು ವಿನೋಬಾರವರು
ಒಪ್ಪಿಕೊಂಡರು. ಮತಗಳಲ್ಲಿ ವಿಚಾರ ಭೇದಗಳಿದ್ದರೂ ಸಮಾನ ಅಂಶಗಳೂ
ಬಹಳ ಇವೆ. ಆ ಅಂಶಗಳಲ್ಲಿ ಪರಸ್ಪರ ಸಹಕಾರವೃತ್ತಿಯನ್ನೂ
ವಿಚಾರಭೇದವಿದ್ದರೂ ಸ್ನೇಹಭಾವವನ್ನೂ ಬೆಳೆಸಿಕೊಳ್ಳ ಬೇಕೆಂಬನಿರ್ಣಯಕ್ಕೆ
ಕೊನೆಗೆನಾವು ಬಂದೆವು.
“ಸತ್ಯಕ್ಕೆ ಅನೇಕ ಮುಖಗಳಿದ್ದು ಒಂದೊಂದು ಅಂಶವನ್ನು ಒಬ್ಬೊಬ್ಬರು
ಪ್ರತಿವಾದಿಸಿರಬಹುದು. ಸಾಮಾನ್ಯವಾಗಿ ವಿರೋಧ ಕಂಡರೂ ಅವೆಲ್ಲವೂ
ಒಂದೇ ಸತ್ಯದ ಅನೇಕ ಮುಖಗಳಾಗಿರಬಹುದು. ಮಕ್ಕಳಿಗೆ, ದೊಡ್ಡವರಿಗೆ,
ರೋಗಿಗಳಿಗೆ, ನೀರೋಗಿಗಳಿಗೆ ಅವರವರ ಪ್ರಕೃತಿಗನುಸಾರವಾಗಿ ಆಹಾರ
ಭೇದವೇಶರೀರಕ್ಕೆ ಹಿತಕರವಿರುವಂತೆ, ಈ ಸತ್ಯದ ಭಿನ್ನ ರೂಪಗಳೇ ಆಗಿರುವ
ಇವೆಲ್ಲ ಮತಗಳು ವ್ಯಕ್ತಿ ಭೇದವನ್ನನುಸರಿಸಿ ಶ್ರೇಯಸ್ಸನ್ನು ನೀಡಬಲ್ಲವು'
ಎಂದೂ ಕೆಲವರ ವಾದವಿದೆ. ಆದರೆ ಆಯಾಯ ಮತಪ್ರವರ್ತಕರೆಲ್ಲ ರೂ ತಮ್ಮ
ವಿಚಾರವೇ ಅಂತಿಮ ಸತ್ಯವೆಂದೂ ಎಲ್ಲರೂ ಇದನ್ನು ಅನುಸರಿಸಿಯೇ
ಮುಕ್ತಿಯನ್ನು ಪಡೆಯಬಲ್ಲರೆಂದೂ ಉಳಿದ ವಿಚಾರಗಳು ಅಜ್ಞಾನದ ಅಪ್ರಗಲ್ಫ
ಫಲಗಳಾಗಿದ್ದು ಆ ಅಸತ್ಯ ಮಾರ್ಗದಿಂದ ಯಾರಿಗೂ ಮುಕ್ತಿ
ದೊರೆಯಲಾರದೆಂದೂ ಪ್ರತಿಪಾದಿಸಿರುವುದನ್ನು ನಾವು ಗಮನದಲ್ಲಿಟ್ಟು
ಕೊಳ್ಳಬೇಕು. ಪರಸ್ಪರ ವಿರುದ್ಧ ವಿಚಾರಗಳನ್ನೇ ಅಂತಿಮ ಸತ್ಯಗಳೆಂದೂ
ಎಲ್ಲರಿಗೂ ಅದರಿಂದಲೇ ಶ್ರೇಯಸ್ಸು ದೊರೆಯುವುದೆಂದೂ ಹೇಳುವ ಈ ಎಲ್ಲ
ಮತಗಳೂ ಸತ್ಯವನ್ನೇ ಹೇಳುವುವೆಂದು ನಾವು ಹೇಗೆ ಒಪ್ಪುವುದು? ಒಂದೇ
ಮಗುವಿನ ಒಂದೇಕಾಹಿಲೆಗೆ ಪರಸ್ಪರ ವಿರೋಧಿ ಚಿಕಿತ್ಸೆಗಳನ್ನು ಹೇಳುವ ಇಬ್ಬರು
ಡಾಕ್ಟರರ ಅಭಿಪ್ರಾಯಗಳನ್ನು ನಾವು ಹೇಗೆ ಒಪ್ಪುವುದು? ಪ್ರಮಾಣಗಳಿಂದ
ನಿರ್ಣೇತವಾದ ಸತ್ಯಮಾರ್ಗವು ಒಂದೇ ಇರುವುದೆಂದು ಶ್ರೀಕೃಷ್ಣನು
ಹೇಳಿರುವುದು ಅತ್ಯಂತ ಸಮಂಜಸವಾಗಿದೆ. ಈಶಾವಾಸ್ಯೋಪನಿಷತ್ತಿನಲ್ಲೂ
ವಿದ್ಯೆ ಅವಿದ್ಯೆಗಳ ಬಗ್ಗೆ ವಿವೇಚಿಸುತ್ತ ಇದೇ ಮಾತನ್ನು ಹೇಳಲಾಗುತ್ತದೆ.
ಯಥಾರ್ಥಜ್ಞಾನವು ಯಾವುದು, ಅಯಥಾರ್ಥಜ್ಞಾನವು ಯಾವುದು
ಎಂಬುದನ್ನು ಸರಿಯಾಗಿ ವಿಮರ್ಶಿಸಿ ಯಥಾರ್ಥಜ್ಞಾನವನ್ನೇ ಆರಿಸಿ
ಕೊಳ್ಳಬೇಕು ಎಂಬುದಾಗಿ ಅಲ್ಲಿ ತಿಳಿಸಲಾಗಿದೆ. ಹಸಿವೆಯಾಗಿದೆ ಎಂದು
ಸಿಕ್ಕಿದ್ದನ್ನು ತಿಂದು ದೇಹವನ್ನು ಕೆಡಿಸುವುದಕ್ಕಿಂತ ಉಪವಾಸವೇ ಒಳಿತು. ಜ್ಞಾನವು
ಬೇಕೆಂದು ವಿಮರ್ಶಿಸದೆ ಭ್ರಾಂತಜ್ಞಾನವನ್ನು ಪಡೆಯುವುದಕ್ಕಿಂತ ಅಜ್ಞಾನವೇ
ಲೇಸೆಂದೂ ಅದರಲ್ಲಿ ಪ್ರತಿವಾದಿಸಲಾಗಿದೆ. ಆದುದರಿಂದ ಅಕರ್ಮ ಹಾಗೂ
ಕಾಮ್ಯಕರ್ಮಗಳಿಂದಲೇ ಪರಮಶ್ರೇಯವು ದೊರೆಯುವುದೆಂದು ಭಾವಿಸದೆ,
ಗೀತೆಯಲ್ಲಿ | ಶ್ರೀಕೃಷ್ಣನು ಪ್ರತಿಪಾ ದಿಸಿದ ನಿಷ್ಕುಮಕರ್ಮಯೋಗವೇ
ತಾರಕವೆಂದು ನಾವು ಭಾವಿಸಬೇಕು.
Bannanje Govindacharya (1936–2020)Bhagavad Gita Pravachana
ವ್ಯವಸಾಯ ಆತ್ಮಿಕಾ ಬುದ್ದಿಃ ಏಕಾ ಇಹ ಕುರುನಂದನ |
ಬಹುಶಾಖಾಃ ಹಿ ಅನಂತಾಃ ಚ ಬುದ್ಧಯಃ ಅವ್ಯವಸಾಯಿನಾಮ್--ಕುರುಕುಮಾರಾ, ಈ ದಾರಿಯಲ್ಲಿ
ಮನನದಿಂದ ಹದಗೊಂಡ ಮಾತು ಒಂದೇ ತರ. ಹದವಿರದವರ ತುದಿಯಿರದ ಹರಟೆಗಳಿಗೆ ಹತ್ತು ಹಲವು
ಟಿಸಿಲುಗಳು.
ಏಕನಿಷ್ಠೆಯಿಂದ ನಾವು ಮಾಡುವ ಸಾಧನೆ ವ್ಯರ್ಥವಲ್ಲ ಎನ್ನುವ ವಿಷಯ ನಮಗೆ ತಿಳಿಯಿತು, ಆದರೆ ಯಾವುದು
ಸರಿ ಹಾಗೂ ಯಾವುದು ತಪ್ಪು ಎನ್ನುವುದನ್ನು ತಿಳಿಯುವ ಬಗೆ ಹೇಗೆ? ಕೃಷ್ಣ ಈ ಶ್ಲೋಕದಲ್ಲಿ ನಮ್ಮ ಪ್ರಶ್ನೆಗೆ
ಉತ್ತರ ಕೊಟ್ಟಿದ್ದಾನೆ.
ಎಲ್ಲಾ ಕಾಲದಲ್ಲೂ ನಿರ್ಣಾಯಕವಾದ ಮಾತು ಏಕರೂಪವಾಗಿರುತ್ತದೆ. ನಿರ್ಣಯ ಇಲ್ಲದೆ ಆಡುವ ಮಾತು
ಒಂದೊಂದು ಒಂದೊಂದು ತರಹ. ಗೊತ್ತಿಲ್ಲದೆ ಅಜ್ಞಾನದಿಂದ ಆಡುವ ಮಾತುಗಳಿಗೆ ತಲೆಬುಡವಿಲ್ಲದ ಅನಂತ
ಶಾಖೆ. ಆದರೆ ನಿಜವಾಗಿ ತಿಳಿದವರ ನಿರ್ಣಯಾತ್ಮಕವಾದ ಮಾತು ಸದಾ ಒಂದೇ ಆಗಿರುತ್ತದೆ. ಆದ್ದರಿಂದ
ಸತ್ಯವನ್ನು ಅರಿತವರ ಮಾರ್ಗದರ್ಶನದಂತೆ ನಡೆ ಎನ್ನುತ್ತಾನೆ ಕೃಷ್ಣ.
Bibek Debroy (1955–2024)The Bhagavad Gita
(41)
‘O descendant of Kuru!35 This certain knowledge is unwavering.36 But for
those who cannot focus, their wisdom is many-branched and like the
infinite.’