2.45

त्रैगुण्यविषया वेदा निस्त्रैगुण्यो भवार्जुन ।
निर्द्वन्द्वो नित्यसत्त्वस्थो निर्योगक्षेम आत्मवान् ॥
traiguṇyaviṣayā vedā nistraiguṇyo bhavārjuna |
nirdvandvo nityasattvastho niryogakṣema ātmavān ||
Sri Madhvacharya (1238–1317)Bhagavad Gita Tatparya Nirnaya
त्रैगुण्याख्यं विषं यापयान्ति अपगमयन्तीति - त्रैगुण्यविषयाः। ‘आश्रित्य वेदांस्तु पुमांस्त्रैगुण्यविषहारिणः। निस्त्रैगुण्यो भवेन्नित्यं वासुदेवैकसंश्रयः’ इति च। ‘सत्वं साधुगुणाद्विष्णुरात्मा सन्ततिहेतुतः’ इति च। सन्तत विष्णुस्मरणं - नित्यसत्त्वस्थत्वम्। परमात्मा मम स्वामीतिज्ञानमात्मवत्त्वम्। तेनैक्यज्ञानं निवारयति। विरुद्धयोगक्षेमेच्छावर्जितः। अन्यथोत्थानादेरप्ययोगात्॥45॥
Swami Sivananda (1887–1963)Bhagavad Gita
45. The Vedas deal with the three attributes (of Nature); be thou above these three attributes, O Arjuna! Free yourself from the pairs of opposites and ever remain in the quality of Sattwa (goodness), freed from the thought of acquisition and preservation, and be established in the Self. COMMENTARY: Guna means attribute or quality. It is substance as well as quality. Nature is made up of three Gunas—Sattwa (purity, light, harmony), Rajas (passion, restlessness, motion), and Tamas (inertia, darkness). The pairs of opposites are pleasure and pain, heat and cold, gain and loss, victory and defeat, honour and dishonour, praise and censure.
Sri Vishwesha Tirtharu (1931–2019)Gitasaroddhara
2.42–2.47 · ವೇದ ಮತ್ತು ಕಾಮ್ಯಕರ್ಮ
ವೇದ ಮತ್ತು ಕಾಮ್ಯಕರ್ಮ ವೇದಗಳಲ್ಲಿ ಕಾಮ್ಯಕರ್ಮಗಳ ಪ್ರತಿಪಾದನೆ ಇದೆ. ಜ್ಯೋತಿಷ್ಟೋಮ ಮುಂತಾದ ಯಜ್ಞಗಳ ಅನುಷ್ಯುನದಿಂದಸ್ವರ್ಗವನ್ನುವಡೆಯಬಹುದೆಂದು ಅಲ್ಲಿ ಹೇಳಲಾಗಿದೆ. ಯಾವ ಕಾಮನೆಯೂ ಇಲ್ಲದೆ ಕರ್ತವ್ಯವನ್ನು ಮಾಡಬೇಕೆಂದು ಗೀತೆಯು ಹೇಳುವುದು ವೇದವಿರೋಧಿ ವಿಚಾರವಲ್ಲವೇ ಎಂಬ ಸಂಶಯ ಮೂಡಬಹುದು. ಆದರೆ ಸ್ವರ್ಗದ ಭೋಗವನ್ನು ಪಡೆಯುವುದಕ್ಕಾಗಿ ಯಜ್ಞ ಯಾಗಾದಿಗಳನ್ನು ಬೋಧಿಸುವುದೇವೇದದ ಗುರಿಯಲ್ಲ. ವೇದದ ನಿಜವಾದ ಅಂತರಾರ್ಥವನ್ನುತಿಳಿಯದೆ ಜ್ಞಾನ ರಹಿತವಾದ ಶುಷ್ಕಕರ್ಮಕಾಂಡದ ಕಡೆಗೆ ವೇದವನ್ನು ಎಳೆದು ವೇದಕ್ಕೆ ಅಪಚಾರ ಎಸಗಿದವರು ಮೀಮಾಂಸಕರು. ಸ್ವರ್ಗದ ಸುಖಭೋಗದ ಆಮಿಷವನ್ನು ಜನರ ಮುಂದಿಟ್ಟು ಕೇವಲ ಕರ್ಮಕಾಂಡದ ವ್ರಸ್ಥವನ್ನು ದೇಶದಲ್ಲಿ ಬೆಳೆಸಿ ಇಲ್ಲಿ ಪೂರೈಸಲಾಗದ ಭೋಗಲಾಲಸೆಯನ್ನು ಮಾತ್ರ ಜಾಗೃತಗೊಳಿಸಿದರು. ಇದರಿಂದ ಜ್ಞಾನ, ಅಧ್ಯಾತ್ಮಚಿಂತನವೆಲ್ಲ ಸ್ಥಗಿತವಾಗುವಂತಾಯಿತು. ಇವರು ವೇದವೇತ್ವರಲ್ಲ ವೇದವಾದಿಗಳು; ಬರೇ ವೇದಪಾಠಕರು. ಮರವು ಹೂ ಬಿಟ್ಟಾಗ ಅದರಿಂದ ಉಂಟಾಗುವ ಮಧುರ ಫಲಕ್ಕಾಗಿ ಕಾಯದೆ ಹೂವಿನ ಪರಿಮಳಕ್ಕಾಗಿ ಆತುರತೆಯಿಂದ ಹೂವನ್ನೇ ಕಿತ್ತುಕೊಂಡು ಹಣ್ಣನ್ನು ಕಳೆದುಕೊಳ್ಳುವವರಂತೆ ಇವರಸ್ಥಿತಿಯಾಗಿದೆ. ವೇದವು ಮಾಡಿದ ಕಾಮ್ಮಕರ್ಮಗಳ ಬೋಧನೆಯ ಉದ್ದೇಶವನ್ನು ಅರಿಯದೆ ಭೋಗಪ್ರಧಾನವಾದ ಸಾಮಾನ್ಯ ಫಲಗಳನ್ನೇ ಆಶಿಸಿದರೆ ಶಾಸ್ತ್ರದ ಅಮೃತಫಲವನ್ನೇ ನಾವು ಕಳೆದುಕೊಳ್ಳುತ್ತೇವೆ. ಮೀಮಾಂಸಕರು ಇಂತಹ ವ್ರಮಾದವನ್ನುಮಾಡಿದರು. ಅದನ್ನೇ- ಯಾಮಿಮಾಂ ಪುಷ್ಟಿತಾಂ ವಾಚಮ್‌ । ಎಂಬ ಶ್ಲೊ ೇಕದಲ್ಲಿ ನಿಂದಿಸಲಾಗಿದೆ. ವೇದವೇನೋ ಸ್ವರ್ಗಸುಖಗಳ ಮಾತನ್ನು ಹೇಳಿದೆ. ಭೋಗ ಪ್ರವೃತ್ತಿಯ ಸಾಮಾನ್ಯ ಜನರ ಮನಸ್ಸನ್ನು ವರಮಾತ್ಮನ ಕಡೆಗೆ ತಿರುಗಿಸುವ ಕಾರ್ಯದ ಮೊದಲನೇ ಹಂತವಾಗಿ ಸ್ವರ್ಗ ಹಾಗೂ ಐಹಿಕ ಫಲಗಳಿಗಾಗಿ ಅನೇಕ ಕರ್ಮಗಳನ್ನು ಬೋಧಿಸಿದೆ. ಅದೇ ಅದರ ಅಂತಿಮ ಉದ್ದೇಶವಲ್ಲ, ತಾಯಿಯು ಮಕ್ಕಳಿಗೆ ಕಹಿ ಔಷಧ ನೀಡಲು ಪ್ರಾರಂಭಿಕವಾಗಿ ಸಕ್ಕರೆಯನ್ನು ನೀಡುವಂತೆ ವೇದವುಸ್ವರ್ಗದ ಅಮಿಷವನ್ನು ನಮ್ಮ ಮುಂದೆ ಇಡುವುದುಂಟು. ವೇದದ ಈ ಮಾತೃೃದಯದವಾತ್ಸಲ್ಯ ಭಾವವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ನಮ್ಮ ಮಾನಸಿಕ ಮಟ್ಟವನ್ನು ಅನುಸರಿಸಿ ನಮ್ಮ ಆತ್ಮವನ್ನು ಎತ್ತರಿಸಲು ವೇದವು ಪ್ರವೃತ್ತವಾಗಿದೆ. ಇದನ್ನೇ ಭಾಗವತದಲ್ಲಿ ರೋಚನಾರ್ಥಂ ಫಲಶ್ರುತಿಃ । ಎಂದು ಹೇಳಿದೆ. ಛಾಂದೋಗ್ಯೋಪನಿಷತ್ತಿನಲ್ಲಿ ಒಂದು ವರ್ಣನೆ ಇದೆ. ಮೃತ್ಯುವು ಜೀವನನ್ನು ಹಿಡಿಯಬೇಕೆಂದು ಆತನನ್ನು ನೋಡಿದಾಗ ಅವನು ಬೆದರಿ ವೇದದ ಆಶ್ರಯವನ್ನು ಪಡೆದನು. ಮೀನು ನೀರಿನಲ್ಲಿ ಇದ್ದರೂ ಅದನ್ನು ಹಕ್ಕಿಯು ತನ್ನ ಉದ್ದನೆಯ ಕೊಕ್ಕಿನಿಂದ ಹಿಡಿಯುವಂತೆ ಮೃತ್ಯುವು ಮುಂದೆ ಬಂದಾಗ ಜೀವನು. ಇನ್ನೂ ಒಳಗೊಳಗೆ ಸೇರಿಕೊಂಡು ಮೃತ್ಯುವಿನಿಂದ ಪಾರಾದನು. ನೀರಿನಲ್ಲಿ ಆಳವಾಗಿ ಒಳ ಹೊಕ್ಕಿರುವ ಮೀನನ್ನು ಹಕ್ಕಿ ಏನೂ ಮಾಡಲಾರದು. ವೇದದಲ್ಲಿ ಮೇಲಿಂದ ಮೇಲೆ ಹರಿದಾಡಿದರೆ ಏನೂ ಪ್ರಯೋಜನವಾಗಲಾರದು. ವೇದದ ಒಳಹೊಕ್ಕು ಆಳವಾಗಿ ವಿಮರ್ಶಿಸಿ ಅದರ ಅಂತರಾರ್ಥವನ್ನು ತಿಳಿದರೆ ಮಾತ್ರ ನಾವು ಮೃತ್ಯುವಿನಿಂದ ಅಮೃತತ್ತ್ವದ ಕಡೆಗೆ ನಾಗಬಲ್ಲೆವೆಂದು ಇದರತಾತ್ಪರ್ಯವಾಗಿದೆ. ತೈಗುಣ್ಯ ವಿಷಯಾ ವೇದಾಃ ನಿಸ್ತ `ಗುಣ್ಯೋ ಭವಾರ್ಜುನ। ಈ ಶ್ಲೋಕದಿಂದ ಶ್ರೀಕೃಷ್ಣನು '“ವೇದವು ತ್ರಿಗುಣಜನ್ಯವಾದ ಕರ್ಮವನ್ನು ಹೇಳಿದರೂ ನೀನು ಅದನ್ನು ಮಾಡಬೇಡ'' ಎಂದು ವೇದದ ನಿರಾಕರಣೆ ಮಾಡಿರುವನೆಂದೇ ಆಪಾತವಾಗಿ ಪ್ರತೀತಿಯಾಗುವುದು. ಇದರಿಂದ ವೇದದ ವಿಚಾರವನ್ನು ಅಲ್ಲಗಳಿದು ಗೀತೆಯು ಹೊಸ ಹೆಜ್ಜೆಯನ್ನು ಇಟ್ಟಿದೆಯೆಂದು ಕೆಲವರು ಪ್ರತಿವಾದಿಸುತ್ತಾರೆ. ಆದರೆ ನಿಷ್ಕುಮಕರ್ಮವು ಗೀತೆಯ ಹೊಸ ವಿಚಾರವಲ್ಲ. ಉಪನಿಷತ್ತಿನಲ್ಲಿ ಈ ನಿಷ್ಕುಮಕರ್ಮದ ಮಾತು ಅನೇಕ ಕಡೆ ಬರುತ್ತದೆ. ಈಶಾವಾಸ್ಯದಲ್ಲೇ ಇದರಸುಂದರನಿರೂಪಣೆಇರುವುದು. ವೇದದಿಂದ ಕಾಮ್ಯಧರ್ಮದ ಬೋಧೆಯಾದರೂ ಅದರ ನಿಜಾರ್ಥವನ್ನು ಅರಿತು ಕಾಮ್ಯಧರ್ಮಗಳ ಕಡೆಗೆ ನಮ್ಮ ಮನವನ್ನು ಹರಿಸದೆ ವೇದದ ಪರಮ ತಾತ್ಪರ್ಯವಿಷಯವಾದ ನಿಷ್ಕುಮಧರ್ಮವನ್ನು ಆಚರಿಸುವುದೇ ನಮ್ಮ ಧ್ಯೇಯವಾಗಿರಬೇಕೆಂಬುದು ಶ್ರೀಕೃಷ್ಣನ ಆಶಯವಾಗಿದೆ. ವೇದಗಳು ದೊಡ್ಡಸರೋವರದಂತೆಇದ್ದುಎಲ್ಲ ಬಗೆಯ ವಿಚಾರಗಳನ್ನು ಒಳಗೊಂಡಿರುವವು. ಸರೋವರದಲ್ಲಿಯ ನೀರನ್ನು ನಮಗೆ ಬೇಕಾಗುವಷ್ಟು ತೆಗೆದುಕೊಳ್ಳುವಂತೆ ವೇದಗಳಲ್ಲಿಯ ವಿಚಾರಗಳನ್ನು ಸರಿಯಾಗಿ ಮಥನಮಾಡಿ ನಮಗೆ ಯಾವುದು ಯೋಗ್ಯವೋ ಯಾವುದು ಜೀರ್ಣವಾಗುವುದೋ ಅದನ್ನು ಸ್ವೀಕರಿಸಬೇಕು. ಆತ್ಮದ ಮಟ್ಟವನ್ನು ಎತ್ತರಿಸಬೇಕೆಂಬುದೇ ವೇದದ ಉದ್ದೇಶವಾಗಿದೆ. ಜ್ಞಾನದಲ್ಲಿ ಅಭಿರುಚಿ ಹುಟ್ಟಿಸಲು, ಪರಮಾತ್ಮನಲ್ಲಿ ಭಕ್ತಿಯನ್ನು ಹುಟ್ಟಿಸಲು ವೇದಗಳು ಕಾಮ್ಯಕರ್ಮಗಳನ್ನು ಬೋಧಿಸುವವು. ವರೀಕ್ಷೆಯಲ್ಲಿ ಉತ್ತಮ ರೀತಿಯಿಂದ ಉತ್ತೀರ್ಣನಾದವನಿಗೆ ಬಹುಮಾನದ ಆಮಿಷ ತೋರಿಸುವಂತೆ ವೇದದ ಬೋಧನೆಯಾಗಿದೆ. ವಿದ್ಯಾರ್ಥಿಯಲ್ಲಿ ವಿದ್ಯಾಭಿರುಚಿಯನ್ನು ಬೆಳೆಸುವುದೇ. ಬಹುಮಾನ ನೀಡುವ ಉದ್ದೇಶವಾಗಿರುವುದು. ಸ್ವರ್ಗಸುಖಗಳಿಗಾಗಿ ಕರ್ಮವನ್ನು ಬೋಧಿಸುವ ವೇದದ ಆಶಯವೂಇದೇ ಆಗಿದೆ. ಇದೇ ವೇದದ ಅಂತಿಮ ಉದ್ದೇಶವೆಂದು ಭಾವಿಸಬಾರದು. ಭಗವಂತನ ಜ್ಞಾನ ಪಡೆದು ಭಕ್ತಿಯಿಂದ ನಿಷ್ಕ್ರಮಕರ್ಮವನ್ನು ಆಚರಿಸುವುದೇ ವೇದಗಳ ತಾತ್ಚರ್ಯಾರ್ಥವಾಗಿರುವುದರಿಂದ ಶಾಸ್ತ್ರದ ಬಗ್ಗೆ ತಪ್ಪುತಿಳುವಳಿಕೆ ಮಾಡಿಕೊಳ್ಳಲು ಅವಕಾಶವಿಲ್ಲ. ಇನ್ನೂ ಒಂದು ವಿಷಯವನ್ನುಇಲ್ಲಿ ನಾವು ಗಮನದಲ್ಲಿ ಇಟ್ಟುಕೊಳ್ಳಬೇಕು. ವೇದವು ವಲದ ಆಶೆಯಿರುವವನಿಗಾಗಿ ಅನೇಕ ಕರ್ಮಗಳನ್ನು ಬೋಧಿಸಿದರೂ ಫಲದ ಕಾಮನೆಯನ್ನು ಮಾಡಬೇಕೆಂದು ಎಲ್ಲಿ ಯೂ ವಿಧಿಸಿಲ್ಲ ಮೋಕ್ಷದ ಇಚ್ಛೆ ಹಾಗೂ ಆತುರತೆಯನ್ನು ಒತ್ತಿಹೇಳಿದಂತೆ ಫಲಕಾಮನೆಯ ಬಗ್ಗೆ ವಿಧಿವಾಕೃವಿಲ್ಲ. ಫಲದ ಆಶೆ ಇದ್ದವರು ಇಂತಹ ಕರ್ಮಗಳನ್ನು ಮಾಡಲಿಎಂದು ಹೇಳುವುದರಿಂದ ಆಶೆಯನ್ನು ಅದು ಬೋಧಿಸಿದಂತೆ ಆಗುವುದಿಲ್ಲ. ಹಣದ ಆಶೆಯುಳ್ಳವನಿಗಾಗಿ ಒಂದು ಒಳ್ಳೇ ಕೆಲಸ ಕೊಟ್ಟು ಸಂಬಳ ನೀಡುವುದರಿಂದ ನಿರಪೇಕ್ಷೆ ಯಿಂದಏನೂ ಸಂಬಳಪಡೆಯದೆ ಆಕೆಲಸವನ್ನು ಇನ್ನೊಬ್ಬಮಾಡಬಾರದೆಂದು ಆಗುವುದಿಲ್ಲ. ಸ್ವರ್ಗ ಮುಂತಾದ ಫಲಾತೆಯಿಂದ ಮಾಡಬಹುದಾದ ಕಾರ್ಯಗಳನ್ನೇ ಫಲಾಶೆಯನ್ನುತೊರೆದೂ ಮಾಡಲು ಅವಕಾಶವಿದೆ. ಕರ್ಮಣ್ಯೇವಾಧಿಕಾರಸ್ತೆ ( ಮಾ ಫಲೇಷು ಕದಾಚನ । "ವೇದವು ಕರ್ಮವನ್ನು ಮಾತ್ರ ವಿಧಾನಮಾಡಿದೆ. ಫಲಾಶೆಯನ್ನು ಅದು ವಿಧಿಸಲಿಲ್ಲ.''
Bannanje Govindacharya (1936–2020)Bhagavad Gita Pravachana
ತ್ರೈಗುಣ್ಯ ವಿಷಯಾಃ ವೇದಾಃ ನಿಸ್ತ್ರೈಗುಣ್ಯಃ ಭವ ಅರ್ಜುನ | ನಿರ್ದ್ವಂದ್ವಃ ನಿತ್ಯಸತ್ತ್ವಸ್ಥಃ ನಿರ್ಯೋಗಕ್ಷೇಮಃ ಆತ್ಮವಾನ್‌ -- ವೇದಗಳು ಹೊರನೋಟಕ್ಕೆ ತ್ರಿಗುಣಗಳ ನಂಟನ್ನೇ ನಿರೂಪಿಸುತ್ತವೆ [ಒಳಗಿನಿಂದ ತ್ರಿಗುಣಗಳ ನಂಟಿನ ನಂಜನ್ನು ನಿವಾರಿಸುತ್ತವೆ]. & ಅರ್ಜುನಾ, ನೀನು ತ್ರಿಗುಣಗಳ ನಂಟನ್ನು ನೀಗಿ dew. = ದ್ವಂದ್ವಗಳ ತಾಕಲಾಟ ತೊಡೆದು ಸದಾ ಭಗವಂತನಲ್ಲಿ ಬಗೆಯನ್ನಿಡು. ಯೋಗ-ಕ್ಷೇಮದ ಹೊಣೆಯನ್ನು ಅವನಿಗೊಪ್ಪಿಸಿ ಅವನೇ ಸ್ವಾಮಿ ಎಂದು ನಂಬಿ ನಡೆ. ಈವರೆಗೆ ನಾವು ವೇದವನ್ನು ಹೇಗೆ ಅನುಸಂಧಾನ ಮಾಡಬೇಕು, ಅದರ ಮೇಲ್ನೋಟದ ಅರ್ಥದಿಂದ ಆಳಕ್ಕೆ ಹೇಗೆ ಇಳಿಯಬೇಕು ಎನ್ನುವುದನ್ನು ಕೃಷ್ಣ ಅರ್ಜುನನಿಗೆ ಹೇಳಿದ್ದನ್ನು ನೋಡಿದೆವು. ಇನ್ನಷ್ಟು ಸ್ಪಷ್ಟವಾಗಿ , ಅದು ಹೇಗೆ ಕಾಣುತ್ತದೆ ಹಾಗೂ ಅದನ್ನು ಹೇಗೆ ನೋಡಬೇಕು ಎನ್ನುವುದನ್ನು ಈ ಶ್ಲೋಕದಲ್ಲಿ ಕೃಷ್ಣ ಸ್ಪಷ್ಟವಾಗಿ ವಿವರಿಸುತ್ತಾನೆ. ಇದು ಒಂದು ರೀತಿಯಲ್ಲಿ ಇಡೀ ಅಧ್ಯಾತ್ಮದ ಅನುಸಂಧಾನದ ಪ್ರಮುಖವಾದ ವಿಚಾರ. ಇಲ್ಲಿ ಕೃಷ್ಣ ಅದನ್ನು ಹೇಗೆ ಅನುಸಂಧಾನ ಮಾಡಬೇಕು, ಹಾಗೂ ನಮ್ಮ ಮನಸ್ಸನ್ನು ಹೇಗೆ ಅಣಿಗೊಳಿಸಬೇಕು ಎನ್ನುವುದನ್ನು ವಿವರಿಸಿದ್ದಾನೆ. ನಮಗೆ ಮೇಲ್ನೊ ९६७८, ವೇದ ಸತ್ವ-ರಜಸ್ಸು-ತಮೋಗುಣಗಳಿಗೆ(ತ್ರೈಗುಣ್ಯ) ಸಂಬಂಧಪಟ್ಟ ಪ್ರಾಪಂಚಿಕ ವಿಷಯ, ಹಾಗೂ ಕೇವಲ ಪ್ರಾಪಂಚಿಕ ಅರ್ಥವನ್ನೇ ಹೇಳುವಂತೆ ಕಾಣುತ್ತದೆ-ಕೆಂಪು ಕನ್ನಡಕ ಧರಿಸಿದವನಿಗೆ ಪ್ರಪಂಚವೆಲ್ಲಾ ಕೆಂಪಾಗಿ ಕಾಣುವಂತೆ. ಉದಾಹರಣೆಗೆ: ಸಂತಾನ ವೃದ್ಧಿ, ಹಟ್ಟಿ ತುಂಬಾ ಹಸು, ಕೈತುಂಬಾ ದುಡ್ಡು, ಮನೆತುಂಬಾ ಮಕ್ಕಳು, ರಾಜಸೂಯ, ಅಶ್ವಮೇಧ, ಪುರುಷಮೇಧ ಇತ್ಯಾದಿ. ಇವು ವೇದದಲ್ಲಿ ಮೇಲ್ನೋಟಕ್ಕೆ ಕಾಣುವವು. ಇವೆಲ್ಲವೂ ತೀರಾ ಪ್ರಾಪಂಚಿಕ ವಿಷಯಗಳು. ಇದರಿಂದಾಗಿ ವೇದ ನಮ್ಮನ್ನು ಅಧ್ಯಾತ್ಮದ ಆಳಕ್ಕೆ ಕೊಂಡೊಯ್ಯುವುದಿಲ್ಲ ಎನ್ನುವಂತೆ ಭಾಸವಾಗುತ್ತದೆ. ಆದರೆ ನಾವು ವೇದವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮೊದಲು ಪ್ರಾಪಂಚಿಕ ಪ್ರಭಾವವನ್ನು ದಾಟಿ ನಿಲ್ಲಬೇಕು. ಪ್ರಾಪಂಚಿಕ ಪ್ರಭಾವ ಕೆಂಪು ಕನ್ನಡಕದಂತೆ. ಅದರ ಪ್ರಭಾವದಲ್ಲಿ ವೇದವನ್ನು ಕಂಡರೆ ನಮಗೆ ಕಾಣುವುದು ಕೇವಲ ಪ್ರಾಪಂಚಿಕ ವಿಷಯ ಮಾತ್ರ. ಅದಕ್ಕಾಗಿ ನಾವು ತೈಗುಣ್ಯವರ್ಜಿತರಾಗಬೇಕು. ಈ ತ್ರೈಗುಣ್ಯದ ಪ್ರಭಾವವನ್ನು ದಾಟಿ ನಮ್ಮ ನಿಜವಾದ ಸ್ವಭಾವ ಏನು ಎನ್ನುವುದನ್ನು ಗುರುತಿಸಿಕೊಂಡಾಗ ಶುದ್ಧ ಚಿಂತನೆ ಸಾಧ್ಯ. ತ್ರಿಗುಣದ ಬೇಲಿಯನ್ನು ದಾಟದೇ ಸತ್ಯ ತಿಳಿಯುವುದಿಲ್ಲ. ತ್ರಿಗುಣದ ಪ್ರಭಾವದಿಂದ ಪೂರ್ಣ ಆಚೆಗೆ ನಿಲ್ಲುವುದು ಅಸಾಧ್ಯ. ಆದರೆ ಈ ವಿಷಯ ಗೊತ್ತಿದ್ದು ಅದರ ಎಚ್ಚರ ಇದ್ದರೆ ನಾವು ಸಾಧನೆ ಮಾಡಲು ಸಾಧ್ಯ. ನಾವು ಎಷ್ಟು ಅಪವಿತ್ರರಾಗಿರಲೀ, ಬಾಯಿಯಲ್ಲಿ ಭಗವಂತನ ನಾಮ ಸ್ಮರಣೆ, ನಮ್ಮೊಳಗೆ ಭಗವಂತನಿದ್ದಾನೆ ಎನ್ನುವ ಎಚ್ಚರ ನಮ್ಮನ್ನು ಶುದ್ಧವಾಗಿಸುತ್ತದೆ. ಧ್ಯಾನ ಮಾಡುವಾಗ ನಮ್ಮ ಮನಸ್ಸು ಹೊರ ಪ್ರಪಂಚದತ್ತ ಸುಳಿಯದಂತೆ ನೋಡಿಕೊಳ್ಳಬೇಕು. ಆತ್ಮಜ್ಞಾನವಿಲ್ಲದೆ ಹೋಮ ಹವನ ಮಾಡಿ ಉಪಯೋಗವಿಲ್ಲ. ನಮಗೆ ಆಶ್ರಯವಾಗಿರುವ ಆತ್ಮತತ್ವ ಭಗವಂತನ ಅರಿವಿನಿಂದ-ನಿಸ್ವಾರ್ಥವಾಗಿ ಸಾಧನೆ ಮಾಡಬೇಕು. ಎಂದೂ ಕಪಟ ವಂಚನೆ ಇಲ್ಲದ ಧರ್ಮವನ್ನು ಆಚರಿಸಬೇಕು. ನಮ್ಮ ಮನಸ್ಸನ್ನು ಶುದ್ಧ ಭಾವ ಚಿಂತನೆಗೆ ಅಣಿಗೊಳಿಸಬೇಕು. ನಮ್ಮ ಸ್ವಾರ್ಥದತ್ತ ನೋಡದೇ, ತ್ರಿಗುಣಗಳನ್ನು ದಾಟಿ ನಿಂತರೆ ಮಾತ್ರ ನಮಗೆ ವೇದದ ನಿಜ ಸಂದೇಶ ತಿಳಿಯುತ್ತದೆ. ಈ ಸ್ಥಿತಿಯಲ್ಲಿ ವೇದ ಓದಿದರೆ ಅದು ಕೇವಲ ಲೌಕಿಕ ವಿಷಯವಲ್ಲ ಎನ್ನುವುದು ಅರ್ಥವಾಗುತ್ತದೆ. ನಾವು ಮಾಡುವ ಪ್ರತಿಯೊಂದು ಕರ್ಮವನ್ನು, ಪೂಜೆ. ಪುನಸ್ಕಾರವನ್ನು, ನಿಸ್ವಾರ್ಥವಾಗಿ ಭಗವಂತನ ಆರಾಧನೆ ಎಂದು ಮಾಡಬೇಕು. ನಮಗೇನು ಬೇಕು ಅನ್ನುವುದು ನಮಗೆ ಗೊತ್ತಿಲ್ಲ; ನಮಗೆ ಅಗತ್ಯವಾದದ್ದನ್ನು ಭಗವಂತ ಕೊಟ್ಟೇ ಕೊಡುತ್ತಾನೆ; ಎಂದು ನಮ್ಮ ಭವಿಷ್ಯದ ಚಿಂತೆಯನ್ನು ಭಗವಂತನಿಗೊಪ್ಪಿಸಿ ಮುನ್ನೆಡೆದರೆ ಜ್ಞಾನ ಸಿದ್ಧಿಯಾಗುತ್ತದೆ. ಇಲ್ಲದ್ದನ್ನು ಪಡೆಯುವುದು ಯೋಗ, ಪಡೆದದ್ದನ್ನು ಉಳಿಸಿಕೊಳ್ಳುವುದು ಕ್ಷೇಮ. ಲೌಕಿಕವಾದ ಯೋಗ ಕ್ಷೇಮದಲ್ಲೇ ನಮ್ಮ ಇಡೀ ಜೀವನ ಕಳೆದು ಹೋಗುತ್ತದೆ. ಇದನ್ನು ಬಿಟ್ಟು ಭಗವಂತ ನಮಗೆ ಏನು ಕೊಟ್ಟಿದ್ದಾನೋ ಅದರಲ್ಲಿ ಸಂತೋಷವಾಗಿರಲು ಕಲಿಯಬೇಕು. 'ನಿರ್ಯೋಗಕ್ಷೇಮದ' ಸ್ಥಿತಿಯಲ್ಲಿ ಮಾತ್ರ ಸತ್ಯದ ಸಾಕ್ಷಾತ್ಕಾರವಾಗುತ್ತದೆ. ನಮ್ಮ ಯೋಗಕ್ಷೇಮದ ಹೊಣೆ ಆ ಭಗವಂತನದ್ದು. ಎಲ್ಲರೊಳಗೆ ಅಂತರ್ಯಾಮಿಯಾಗಿರುವ ಭಗವಂತ ಎಂದೆಂದೂ ನಮ್ಮನ್ನು ರಕ್ಷಿಸುತ್ತಾನೆ ಎನ್ನುವ ಭರವಸೆಯಿಂದ, ಭಗವಂತನ ಚಿಂತನೆಗೆ ತೊಡಗಬೇಕು. ಇದು ಅಧ್ಯಾತ್ಮ ಸಾಧನೆಗೆ ಬೇಕಾದ ಮಾನಸಿಕ ತಯಾರಿ. ಇಂತಹ ಮನಃಸ್ಥಿತಿಯಲ್ಲಿ ಯಾವ ಗ್ರಂಥ ಓದಿದರೂ ಅದು ಭಗವಂತನ ಸ್ತುತಿಯಾಗುತ್ತದೆ. ಈ ಮನಃಸ್ಥಿತಿ ತಲುಪದೇ ವೇದಾಂತ ನಮಗೆ ಅರ್ಥವಾಗುವುದಿಲ್ಲ. ಅಧ್ಯಾತ್ಮ ಮಾರ್ಗದಲ್ಲಿ ಸಾಗುವ ವ್ಯಕ್ತಿಯ ಸಾಧನೆ ಏನಿರಬೇಕು, ಅಂತರಂಗದ ಅನುಷ್ಠಾನ ಹೇಗಿರಬೇಕು, ಎನ್ನುವುದನ್ನು ಸ್ಪಷ್ಟಪಡಿಸಿದ ಕೃಷ್ಣನ ಮಾತಿನಿಂದ ನಮಗೆ ಒಂದು ಪ್ರಶ್ನೆ ಮೂಡಬಹುದು. ಕೃಷ್ಣ ಕರ್ಮ ಮತ್ತು ಜ್ಞಾನಗಳಲ್ಲಿ- ಜ್ಞಾನಕ್ಕೆ ಒತ್ತುಕೊಟ್ಟು ಸಾಗಬೇಕು, ನಮ್ಮ ಯಾವುದೇ ಕ್ರಿಯೆಯ ಅನುಸಂಧಾನ ಜ್ಞಾನದ ಕಡೆಗೆ ಪೂರಕವಾಗಿರಬೇಕು ಎನ್ನುತ್ತಾನೆ. “ಏಕೆ ಜ್ಞಾನ ಸಾಧನೆಗೆ ಇಷ್ಟೊಂದು ಮಹತ್ವ? ಕರ್ಮಯೋಗದಿಂದ ಸ್ವರ್ಗವನ್ನು ಪಡೆಯಬಹುದಲ್ಲ? ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ಕೃಷ್ಣ ಇಲ್ಲಿ ಉತ್ತರಿಸುತ್ತಾನೆ. ಹಿಂದೆ ವೇದವನ್ನು ಜ್ಞಾನಕಾಂಡ, ಕರ್ಮಕಾಂಡ ಮತ್ತು ಉಪಾಸನಕಾಂಡ ಎಂದು ಮೂರು ವಿಭಾಗ ಮಾಡಿದ ಪರಂಪರೆ ಇತ್ತು. ಆದರೆ ಕೃಷ್ಣ ಹೇಳುತ್ತಾನೆ, ವೇದಕ್ಕೆ ಇರುವುದು ಒಂದೇ ಮುಖ ಎಂದು. ವೇದದಲ್ಲಿ ಹೇಳುವ ಕರ್ಮ, ಉಪಾಸನೆ, ಎಲ್ಲವುದರ ಹಿಂದೆ ಜ್ಞಾನವಡಗಿದೆ. ಎಲ್ಲವೂ ಜ್ಞಾನಕ್ಕೋಸ್ಕರ. ಆದ್ದರಿಂದ ಇಡೀ ವೇದವೇ ಜ್ಞಾನಕಾಂಡ ಎಂದು ಮುಂದಿನ ಶ್ಲೋಕದಲ್ಲಿ ಕೃಷ್ಣ ಒತ್ತಿ ಹೇಳುತ್ತಾನೆ.
Bibek Debroy (1955–2024)The Bhagavad Gita
(45) ‘The Vedas deal with the three gunas.40 O Arjuna! Rise above the three gunas. Without doubt,41 always resort to sattva. Do not be bothered about that which is yet to be attained42 or preserving what has already been attained.43 Realize the atman.’