यावानर्थ उदपाने सर्वतः सम्प्लुतोदके ।
तावान्सर्वेषु वेदेषु ब्राह्मणस्य विजानतः ॥
yāvānartha udapāne sarvataḥ samplutodake |
tāvānsarveṣu vedeṣu brāhmaṇasya vijānataḥ ||
Sri Madhvacharya (1238–1317)Bhagavad Gita Tatparya Nirnaya
‘उद्रेकात् पातृराहित्यदनत्वाच्चाखिलस्य च।
प्रलयेऽप्युदपानोऽसौ भगवान् हरिरीश्वरः।
प्रकृतिर्ह्युदरूपेण सर्वमावृत्य तिष्ठति।
प्रलयेऽतो लयं प्राहुः सर्वतः सम्प्लुतोदकम्’ इति च।
‘यावत् प्रयोजनं विष्णोः सकाशात् साधकस्य च।
धर्ममोक्षादिकं तावत् सर्ववेदविदो भवेत्।
वेदार्थनिर्णयो यस्माद्विष्णोर्ज्ञानं प्रकीर्तितम्।
ज्ञानात् प्रसन्नश्च हरिर्यतोऽखिलफलप्रदः’ इति च।
सर्वतः सम्प्लुतोदकेऽप्युद्रिक्तः पालकवर्जितः। कालाद्यनश्च यो विष्णुस्तस्माद्यावत् फलं तावत्
सर्ववेदेषु विशेषज्ञस्यैव भवतीत्यर्थः। सर्वे हि विष्णोरन्ये प्रलयकाले नोद्रिक्ताः। यो चोद्रिक्ता मुक्ता
रमा च तेऽपि न पालकवर्जिताः, विष्णुपाल्यत्वात्। न च मुक्ताः कालादिचेष्टकाः। नचोद्रिक्तत्वं तेषां
तद्वत्। अत उदपानो विष्णुरेव। प्रलये विशेषतोऽपि।
‘आनीदवातं स्वधया तदेकं तस्माद्धान्यन्न परः किञ्चनास।
तम आसीत् तमसा गूळ्हमग्रे प्रकेतं सलिलं सर्वमा इदम्’।
‘आपो वा इदमग्रे सलिल आसीत्’, ‘सलिल एको द्रष्टाऽद्वैतो भवति’ इत्यादि श्रुतिभ्यश्च॥46॥
Swami Sivananda (1887–1963)Bhagavad Gita
46. To the Brahmana who has known the Self, all the Vedas are of as much use as is a
reservoir of water in a place where there is a flood.
COMMENTARY: Only for a sage who has realised the Self are the Vedas of no use,
because he is in possession of knowledge of the Self. This does not, however, mean that the Vedas
are useless. They are useful for neophytes or aspirants who have just started on the spiritual path.
Sri Vishwesha Tirtharu (1931–2019)Gitasaroddhara
2.42–2.47 · ವೇದ ಮತ್ತು ಕಾಮ್ಯಕರ್ಮ
ವೇದ ಮತ್ತು ಕಾಮ್ಯಕರ್ಮ
ವೇದಗಳಲ್ಲಿ ಕಾಮ್ಯಕರ್ಮಗಳ ಪ್ರತಿಪಾದನೆ ಇದೆ. ಜ್ಯೋತಿಷ್ಟೋಮ
ಮುಂತಾದ ಯಜ್ಞಗಳ ಅನುಷ್ಯುನದಿಂದಸ್ವರ್ಗವನ್ನುವಡೆಯಬಹುದೆಂದು ಅಲ್ಲಿ
ಹೇಳಲಾಗಿದೆ. ಯಾವ ಕಾಮನೆಯೂ ಇಲ್ಲದೆ ಕರ್ತವ್ಯವನ್ನು ಮಾಡಬೇಕೆಂದು
ಗೀತೆಯು ಹೇಳುವುದು ವೇದವಿರೋಧಿ ವಿಚಾರವಲ್ಲವೇ ಎಂಬ ಸಂಶಯ
ಮೂಡಬಹುದು. ಆದರೆ ಸ್ವರ್ಗದ ಭೋಗವನ್ನು ಪಡೆಯುವುದಕ್ಕಾಗಿ ಯಜ್ಞ
ಯಾಗಾದಿಗಳನ್ನು ಬೋಧಿಸುವುದೇವೇದದ ಗುರಿಯಲ್ಲ. ವೇದದ ನಿಜವಾದ
ಅಂತರಾರ್ಥವನ್ನುತಿಳಿಯದೆ ಜ್ಞಾನ ರಹಿತವಾದ ಶುಷ್ಕಕರ್ಮಕಾಂಡದ ಕಡೆಗೆ
ವೇದವನ್ನು ಎಳೆದು ವೇದಕ್ಕೆ ಅಪಚಾರ ಎಸಗಿದವರು ಮೀಮಾಂಸಕರು. ಸ್ವರ್ಗದ
ಸುಖಭೋಗದ ಆಮಿಷವನ್ನು ಜನರ ಮುಂದಿಟ್ಟು ಕೇವಲ ಕರ್ಮಕಾಂಡದ
ವ್ರಸ್ಥವನ್ನು ದೇಶದಲ್ಲಿ ಬೆಳೆಸಿ ಇಲ್ಲಿ ಪೂರೈಸಲಾಗದ ಭೋಗಲಾಲಸೆಯನ್ನು
ಮಾತ್ರ ಜಾಗೃತಗೊಳಿಸಿದರು. ಇದರಿಂದ ಜ್ಞಾನ, ಅಧ್ಯಾತ್ಮಚಿಂತನವೆಲ್ಲ
ಸ್ಥಗಿತವಾಗುವಂತಾಯಿತು. ಇವರು ವೇದವೇತ್ವರಲ್ಲ ವೇದವಾದಿಗಳು; ಬರೇ
ವೇದಪಾಠಕರು. ಮರವು ಹೂ ಬಿಟ್ಟಾಗ ಅದರಿಂದ ಉಂಟಾಗುವ ಮಧುರ
ಫಲಕ್ಕಾಗಿ ಕಾಯದೆ ಹೂವಿನ ಪರಿಮಳಕ್ಕಾಗಿ ಆತುರತೆಯಿಂದ ಹೂವನ್ನೇ
ಕಿತ್ತುಕೊಂಡು ಹಣ್ಣನ್ನು ಕಳೆದುಕೊಳ್ಳುವವರಂತೆ ಇವರಸ್ಥಿತಿಯಾಗಿದೆ. ವೇದವು
ಮಾಡಿದ ಕಾಮ್ಮಕರ್ಮಗಳ ಬೋಧನೆಯ ಉದ್ದೇಶವನ್ನು ಅರಿಯದೆ
ಭೋಗಪ್ರಧಾನವಾದ ಸಾಮಾನ್ಯ ಫಲಗಳನ್ನೇ ಆಶಿಸಿದರೆ ಶಾಸ್ತ್ರದ
ಅಮೃತಫಲವನ್ನೇ ನಾವು ಕಳೆದುಕೊಳ್ಳುತ್ತೇವೆ. ಮೀಮಾಂಸಕರು ಇಂತಹ
ವ್ರಮಾದವನ್ನುಮಾಡಿದರು. ಅದನ್ನೇ-
ಯಾಮಿಮಾಂ ಪುಷ್ಟಿತಾಂ ವಾಚಮ್ ।
ಎಂಬ ಶ್ಲೊ ೇಕದಲ್ಲಿ ನಿಂದಿಸಲಾಗಿದೆ.
ವೇದವೇನೋ ಸ್ವರ್ಗಸುಖಗಳ ಮಾತನ್ನು ಹೇಳಿದೆ. ಭೋಗ ಪ್ರವೃತ್ತಿಯ
ಸಾಮಾನ್ಯ ಜನರ ಮನಸ್ಸನ್ನು ವರಮಾತ್ಮನ ಕಡೆಗೆ ತಿರುಗಿಸುವ ಕಾರ್ಯದ
ಮೊದಲನೇ ಹಂತವಾಗಿ ಸ್ವರ್ಗ ಹಾಗೂ ಐಹಿಕ ಫಲಗಳಿಗಾಗಿ ಅನೇಕ
ಕರ್ಮಗಳನ್ನು ಬೋಧಿಸಿದೆ. ಅದೇ ಅದರ ಅಂತಿಮ ಉದ್ದೇಶವಲ್ಲ, ತಾಯಿಯು
ಮಕ್ಕಳಿಗೆ ಕಹಿ ಔಷಧ ನೀಡಲು ಪ್ರಾರಂಭಿಕವಾಗಿ ಸಕ್ಕರೆಯನ್ನು ನೀಡುವಂತೆ
ವೇದವುಸ್ವರ್ಗದ ಅಮಿಷವನ್ನು ನಮ್ಮ ಮುಂದೆ ಇಡುವುದುಂಟು. ವೇದದ ಈ
ಮಾತೃೃದಯದವಾತ್ಸಲ್ಯ ಭಾವವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ
ನಮ್ಮ ಮಾನಸಿಕ ಮಟ್ಟವನ್ನು ಅನುಸರಿಸಿ ನಮ್ಮ ಆತ್ಮವನ್ನು ಎತ್ತರಿಸಲು ವೇದವು
ಪ್ರವೃತ್ತವಾಗಿದೆ. ಇದನ್ನೇ ಭಾಗವತದಲ್ಲಿ
ರೋಚನಾರ್ಥಂ ಫಲಶ್ರುತಿಃ ।
ಎಂದು ಹೇಳಿದೆ. ಛಾಂದೋಗ್ಯೋಪನಿಷತ್ತಿನಲ್ಲಿ ಒಂದು ವರ್ಣನೆ ಇದೆ.
ಮೃತ್ಯುವು ಜೀವನನ್ನು ಹಿಡಿಯಬೇಕೆಂದು ಆತನನ್ನು ನೋಡಿದಾಗ ಅವನು ಬೆದರಿ
ವೇದದ ಆಶ್ರಯವನ್ನು ಪಡೆದನು. ಮೀನು ನೀರಿನಲ್ಲಿ ಇದ್ದರೂ ಅದನ್ನು
ಹಕ್ಕಿಯು ತನ್ನ ಉದ್ದನೆಯ ಕೊಕ್ಕಿನಿಂದ ಹಿಡಿಯುವಂತೆ ಮೃತ್ಯುವು ಮುಂದೆ
ಬಂದಾಗ ಜೀವನು. ಇನ್ನೂ ಒಳಗೊಳಗೆ ಸೇರಿಕೊಂಡು ಮೃತ್ಯುವಿನಿಂದ
ಪಾರಾದನು. ನೀರಿನಲ್ಲಿ ಆಳವಾಗಿ ಒಳ ಹೊಕ್ಕಿರುವ ಮೀನನ್ನು ಹಕ್ಕಿ ಏನೂ
ಮಾಡಲಾರದು. ವೇದದಲ್ಲಿ ಮೇಲಿಂದ ಮೇಲೆ ಹರಿದಾಡಿದರೆ ಏನೂ
ಪ್ರಯೋಜನವಾಗಲಾರದು. ವೇದದ ಒಳಹೊಕ್ಕು ಆಳವಾಗಿ ವಿಮರ್ಶಿಸಿ ಅದರ
ಅಂತರಾರ್ಥವನ್ನು ತಿಳಿದರೆ ಮಾತ್ರ ನಾವು ಮೃತ್ಯುವಿನಿಂದ ಅಮೃತತ್ತ್ವದ ಕಡೆಗೆ
ನಾಗಬಲ್ಲೆವೆಂದು ಇದರತಾತ್ಪರ್ಯವಾಗಿದೆ.
ತೈಗುಣ್ಯ ವಿಷಯಾ ವೇದಾಃ
ನಿಸ್ತ `ಗುಣ್ಯೋ ಭವಾರ್ಜುನ।
ಈ ಶ್ಲೋಕದಿಂದ ಶ್ರೀಕೃಷ್ಣನು '“ವೇದವು ತ್ರಿಗುಣಜನ್ಯವಾದ ಕರ್ಮವನ್ನು
ಹೇಳಿದರೂ ನೀನು ಅದನ್ನು ಮಾಡಬೇಡ'' ಎಂದು ವೇದದ ನಿರಾಕರಣೆ
ಮಾಡಿರುವನೆಂದೇ ಆಪಾತವಾಗಿ ಪ್ರತೀತಿಯಾಗುವುದು. ಇದರಿಂದ ವೇದದ
ವಿಚಾರವನ್ನು ಅಲ್ಲಗಳಿದು ಗೀತೆಯು ಹೊಸ ಹೆಜ್ಜೆಯನ್ನು ಇಟ್ಟಿದೆಯೆಂದು
ಕೆಲವರು ಪ್ರತಿವಾದಿಸುತ್ತಾರೆ. ಆದರೆ ನಿಷ್ಕುಮಕರ್ಮವು ಗೀತೆಯ ಹೊಸ
ವಿಚಾರವಲ್ಲ. ಉಪನಿಷತ್ತಿನಲ್ಲಿ ಈ ನಿಷ್ಕುಮಕರ್ಮದ ಮಾತು ಅನೇಕ ಕಡೆ
ಬರುತ್ತದೆ. ಈಶಾವಾಸ್ಯದಲ್ಲೇ ಇದರಸುಂದರನಿರೂಪಣೆಇರುವುದು. ವೇದದಿಂದ
ಕಾಮ್ಯಧರ್ಮದ ಬೋಧೆಯಾದರೂ ಅದರ ನಿಜಾರ್ಥವನ್ನು ಅರಿತು
ಕಾಮ್ಯಧರ್ಮಗಳ ಕಡೆಗೆ ನಮ್ಮ ಮನವನ್ನು ಹರಿಸದೆ ವೇದದ ಪರಮ
ತಾತ್ಪರ್ಯವಿಷಯವಾದ ನಿಷ್ಕುಮಧರ್ಮವನ್ನು ಆಚರಿಸುವುದೇ ನಮ್ಮ
ಧ್ಯೇಯವಾಗಿರಬೇಕೆಂಬುದು ಶ್ರೀಕೃಷ್ಣನ ಆಶಯವಾಗಿದೆ.
ವೇದಗಳು ದೊಡ್ಡಸರೋವರದಂತೆಇದ್ದುಎಲ್ಲ ಬಗೆಯ ವಿಚಾರಗಳನ್ನು
ಒಳಗೊಂಡಿರುವವು. ಸರೋವರದಲ್ಲಿಯ ನೀರನ್ನು ನಮಗೆ ಬೇಕಾಗುವಷ್ಟು
ತೆಗೆದುಕೊಳ್ಳುವಂತೆ ವೇದಗಳಲ್ಲಿಯ ವಿಚಾರಗಳನ್ನು ಸರಿಯಾಗಿ ಮಥನಮಾಡಿ
ನಮಗೆ ಯಾವುದು ಯೋಗ್ಯವೋ ಯಾವುದು ಜೀರ್ಣವಾಗುವುದೋ ಅದನ್ನು
ಸ್ವೀಕರಿಸಬೇಕು. ಆತ್ಮದ ಮಟ್ಟವನ್ನು ಎತ್ತರಿಸಬೇಕೆಂಬುದೇ ವೇದದ
ಉದ್ದೇಶವಾಗಿದೆ. ಜ್ಞಾನದಲ್ಲಿ ಅಭಿರುಚಿ ಹುಟ್ಟಿಸಲು, ಪರಮಾತ್ಮನಲ್ಲಿ
ಭಕ್ತಿಯನ್ನು ಹುಟ್ಟಿಸಲು ವೇದಗಳು ಕಾಮ್ಯಕರ್ಮಗಳನ್ನು ಬೋಧಿಸುವವು.
ವರೀಕ್ಷೆಯಲ್ಲಿ ಉತ್ತಮ ರೀತಿಯಿಂದ ಉತ್ತೀರ್ಣನಾದವನಿಗೆ ಬಹುಮಾನದ
ಆಮಿಷ ತೋರಿಸುವಂತೆ ವೇದದ ಬೋಧನೆಯಾಗಿದೆ. ವಿದ್ಯಾರ್ಥಿಯಲ್ಲಿ
ವಿದ್ಯಾಭಿರುಚಿಯನ್ನು ಬೆಳೆಸುವುದೇ. ಬಹುಮಾನ ನೀಡುವ
ಉದ್ದೇಶವಾಗಿರುವುದು. ಸ್ವರ್ಗಸುಖಗಳಿಗಾಗಿ ಕರ್ಮವನ್ನು ಬೋಧಿಸುವ
ವೇದದ ಆಶಯವೂಇದೇ ಆಗಿದೆ. ಇದೇ ವೇದದ ಅಂತಿಮ ಉದ್ದೇಶವೆಂದು
ಭಾವಿಸಬಾರದು. ಭಗವಂತನ ಜ್ಞಾನ ಪಡೆದು ಭಕ್ತಿಯಿಂದ ನಿಷ್ಕ್ರಮಕರ್ಮವನ್ನು
ಆಚರಿಸುವುದೇ ವೇದಗಳ ತಾತ್ಚರ್ಯಾರ್ಥವಾಗಿರುವುದರಿಂದ ಶಾಸ್ತ್ರದ ಬಗ್ಗೆ
ತಪ್ಪುತಿಳುವಳಿಕೆ ಮಾಡಿಕೊಳ್ಳಲು ಅವಕಾಶವಿಲ್ಲ.
ಇನ್ನೂ ಒಂದು ವಿಷಯವನ್ನುಇಲ್ಲಿ ನಾವು ಗಮನದಲ್ಲಿ ಇಟ್ಟುಕೊಳ್ಳಬೇಕು.
ವೇದವು ವಲದ ಆಶೆಯಿರುವವನಿಗಾಗಿ ಅನೇಕ ಕರ್ಮಗಳನ್ನು ಬೋಧಿಸಿದರೂ
ಫಲದ ಕಾಮನೆಯನ್ನು ಮಾಡಬೇಕೆಂದು ಎಲ್ಲಿ ಯೂ ವಿಧಿಸಿಲ್ಲ ಮೋಕ್ಷದ ಇಚ್ಛೆ
ಹಾಗೂ ಆತುರತೆಯನ್ನು ಒತ್ತಿಹೇಳಿದಂತೆ ಫಲಕಾಮನೆಯ ಬಗ್ಗೆ ವಿಧಿವಾಕೃವಿಲ್ಲ.
ಫಲದ ಆಶೆ ಇದ್ದವರು ಇಂತಹ ಕರ್ಮಗಳನ್ನು ಮಾಡಲಿಎಂದು ಹೇಳುವುದರಿಂದ
ಆಶೆಯನ್ನು ಅದು ಬೋಧಿಸಿದಂತೆ ಆಗುವುದಿಲ್ಲ. ಹಣದ ಆಶೆಯುಳ್ಳವನಿಗಾಗಿ
ಒಂದು ಒಳ್ಳೇ ಕೆಲಸ ಕೊಟ್ಟು ಸಂಬಳ ನೀಡುವುದರಿಂದ ನಿರಪೇಕ್ಷೆ ಯಿಂದಏನೂ
ಸಂಬಳಪಡೆಯದೆ ಆಕೆಲಸವನ್ನು ಇನ್ನೊಬ್ಬಮಾಡಬಾರದೆಂದು ಆಗುವುದಿಲ್ಲ.
ಸ್ವರ್ಗ ಮುಂತಾದ ಫಲಾತೆಯಿಂದ ಮಾಡಬಹುದಾದ ಕಾರ್ಯಗಳನ್ನೇ
ಫಲಾಶೆಯನ್ನುತೊರೆದೂ ಮಾಡಲು ಅವಕಾಶವಿದೆ.
ಕರ್ಮಣ್ಯೇವಾಧಿಕಾರಸ್ತೆ (
ಮಾ ಫಲೇಷು ಕದಾಚನ ।
"ವೇದವು ಕರ್ಮವನ್ನು ಮಾತ್ರ ವಿಧಾನಮಾಡಿದೆ. ಫಲಾಶೆಯನ್ನು ಅದು
ವಿಧಿಸಲಿಲ್ಲ.''
ಕರ್ಮವೂ ಫಲಾಶೆಯೂ
ಕರ್ಮವೂ ಫಲಾಶೆಯೂ
'"ಫಲದಾತನು ಭಗವಂತನೇ ಆಗಿರುವುದರಿಂದ ಕರ್ತವ್ಯವನ್ನು ಮಾಡುವುದು
ಮಾತ್ರ ನಮ್ಮ ಅಧಿಕಾರವ್ಯಾಪ್ತಿಗೆ ಒಳಪಟ್ಟಿದೆ'' ಎಂದೂ ಈ ಶ್ಲೋಕ ಹೇಳುತ್ತದೆ.
ಫಲದ ಆಶೆಯನ್ನು ತೊರೆಯುವಾಗ ಅದರ ಜೊತೆಗೆ ಕರ್ತವ್ಯವನ್ನು ನಾವು
ಬಿಡಬಾರದು. ಕಳೆಯನ್ನು ತೆಗೆಯುವಾಗ ಅದರ ಜೊತೆಗೆ ಬೆಳೆಯೂ
ಹೋಗದಿರಲಿ. ನಮ್ಮ ಅಧಿಕಾರ ವ್ಯಾಪ್ತಿಗೆ ಒಳಪಡದ ಮತ್ತು ವೇದಗಳಿಂದ
ವಿಹಿತವಲ್ಲದ ಫಲಾಶೆಯನ್ನು ಬಿಡುವ ಜೊತೆಗೆ ಕರ್ತವ್ಯತ್ಯಾಗವಾಗದಿರಲಿ
ಎಂದೂ ಪರಮಾತ್ಮನು ಎಚ್ಚರಿಸುತ್ತಾನೆ.
ಮಾತೇ ಸಂಗೋಜಸ್ತ ಪಿರ್ಮಣಿ [
ಸಾಂಸಾರಿಕ ಪ್ರವೃತ್ತಿಯವರಿಗೆ ಈ ಲೌಕಿಕ ಸುಖದ ಅಪೇಕ್ಷೆಯನ್ನು
ತೊರೆಯುವುದು ಕಠಿಣವಾದೀತು. ನಿಷ್ಕುಮಕರ್ಮದಿಂದ ದೊರೆಯುವ
ಸಾತ್ತ್ವಿಕ ಆನಂದವು ಅತ್ಯಂತ ಮಹತ್ತರವಾದುದರಿಂದ ಅದನ್ನು ಪಡೆಯುವಾಗ
ಈ ಲೌಕಿಕಸುಖವು ಕಳೆದುಹೋಯಿತೆಂದು ನಾವುಮರುಗಬೇಕೆಲ್ಲ. ಕತ್ತಲಲ್ಲಿ
ತಡವರಿಸುತ್ತಿದ್ದವನು ಮಿಂಚುಹುಳದ ಬೆಳಕು ಮಾಯವಾಗುವುದೆಂದು
ಸೂರ್ಯೋದಯವೇ ಬೇಡವೆನ್ನುವನೆ? ಅಣೆಕಟ್ಟು ಕಟ್ಟಿ ದೊಡ್ಡ
ಜಲಾಶಯವನ್ನು ನಿರ್ಮಿಸುವಾಗ ತನ್ನ ಬಾವಿಯು ಮುಳುಗಿ
ನಿಷ್ಠಯೋಜಕವಾಗುವುದರಿಂದ ಅಣೆಕಟ್ಟು ಕಟ್ಟಬಾರದೆಂದು ಹೇಳುವುದು
ಉಚಿತವೆನಿಸುವುದೆ? ಆ ದೊಡ್ಡ ಜಲರಾಶಿಯ ಮುಂದೆ ಬಾವಿಯ
ಉಪಯೋಗ ಏನಿದೆ? ನಿಷ್ಕುಮಕರ್ಮದಿಂದ ದೊರೆಯುವ ಸುಖಸಮುದ್ರ
ದಲ್ಲಿ ಉಳಿದ ಕ್ಷುದ್ರಸುಖಗಳಿಗೆ ಪ್ರತ್ಯೇಕವಾದ ಮಹತ್ತ್ವ ಹಾಗೂ ಅವಶ್ಯಕತೆ
ಉಳಿಯುವುದಿಲ್ಲ ಗೀತೆ ಹೇಳುತ್ತದೆ:
ಯಾವಾನರ್ಥ ಉದಪಾನೇ
ಸರ್ವತಃ ಸಂಪ್ಲತೋದಕೇ [
ಫಲದ ಆಶೆಯಿಂದ ಕಾರ್ಯವನ್ನು ಮಾಡುವವರು ದೀನಜೀವನವನ್ನು
ನಡೆಸುವರು ಎಂದೂ ಪರಮಾತ್ಮನು ಹೇಳುತ್ತಾನೆ:
ಕೃಪಣಾಃ ಫಲಡೇಶವಃ ।
ಸಂಸಾರಿಗಳು ಸಹಜವಾಗಿ ಹಗಲು ರಾತ್ರಿ ಕಠಿಣವಾಗಿ ದುಡಿಯುತ್ತಾರೆ.
ಶ್ರಮಪಡುವುದರಲ್ಲಿ ಕರ್ಮಯೋಗಿಗಿಂತ ಅವರೇನು ಕಡಿಮೆ ಇಲ್ಲ
ಕರ್ಮಯೋಗಿಯು ವರಮತ್ಛನಿಗಾಗಿ ಅಳುತ್ತಿದ್ದರೆ, ಇವರು ಹೆಂಡತಿ, ಮಕ್ಕಳು,
ಪರಿವಾರಕ್ಕಾಗಿ ಆಳುತ್ತಾರೆ. ಇಂತಹ ಕಾರ್ಯಗಳನ್ನು ದೇವರನ್ನು ಸ್ಥರಿಸಿ
ಅವನಿಗಾಗಿ ಮಾಡಿದ್ದರೆ ಎಷ್ಟು ಒಳಿತಾಗುತ್ತಿತ್ತು! ಆಸಕ್ತಿ ವರವಶರಾಗಿ ನಾವು
ಹೆಚ್ಚಿನ ತ್ಯಾಗ, ಕಷ್ಟ ಕಾರ್ವಣ್ಯಗಳಿಂದ ಕಾರ್ಯ ಮಾಡುವಂತೆ ನಿರಾಸಕ್ತರಾಗಿ
ವರಮಾತ್ಮನಿಗಾಗಿ ಕಾರ್ಯ ಮಾಡುವುದರಲ್ಲಿ ಅದೇ ಶ್ರಮವನ್ನು ವಿನಿಯೋಗಿಸ
ಬಹುದಲ್ಲವೆ? ಕ್ಹುದ್ರಫಲಗಳಿಗಾಗಿತಮ್ಮ ಜೀವನವನ್ನೇ ಅಪವ್ಯಯಗೊಳಿಸುವ
ಈ ಜನರ ಬಗ್ಗೆ ಭಗವಂತನೇ ಕನಿಕರಪಡುತ್ತಾನೆ.
ಗೀತೆಯೇನೋ ಕಾಮನಾತ್ಯಾಗವನ್ನು ಮಾತುಮಾತುಗಳಲ್ಲಿ ಬೋಧಿಸಿದೆ.
ಆದರೆ ಇದರ ವ್ಯವಹಾರ್ಯಕೆಯ ಬಗ್ಗೆಯೇನವಗೆಸಂಶಯ ಮೂಡುವುದು.
ಕಾಮನೆ ಇಲ್ಲದೆ ಕಾರ್ಯಪ್ರವೃತ್ತಿ ಎಂತು ಸಾಧ್ಯ? ಯಾವುದೊಂದು
ಕರ್ತವ್ಯಪ್ರವೃತ್ತಿಗೂ ಆಸೆ, ಆಕಾಂಕ್ಷಿಗಳೇ ಮೂಲವಾಗಿರುವವು. ಅದನ್ನೇ
ಕಿತ್ತೊಗೆದು ಕರ್ತವ್ಯದ ಉವದೇಶ ನೀಡುವುದರಲ್ಲಿ ಏನು ಔಚಿತ್ಯವಿದೆ? ಇತರ
ಮತಾನುಯಾಯಿಗಳು ಗೀತೆಯ ನಿಷ್ಕುಮಕರ್ಮಯೋಗದಲ್ಲಿ ಏನೂ
ಅರ್ಥವಿಲ್ಲವೆಂದು ಆಕ್ಷೇಪಿಸಿದ್ದೂ ಇದೆ. ನಿಜ, ಆಶೆಯು ಇಲ್ಲದ ಜೀವನವು
ನಿಷ್ಠಯೋಜಕವೇ। ಆದರೆ ಆ ಆಕೆಯು ಉದಾತ್ರವಾಗಿರಬೇಕು. ಗೀತೆಯು
ಕಾಮನೆಯನ್ನೇ ಸರ್ವಾತ್ಮನಾ ನಿಷೇಧಿನಲಿಲ್ಲ. ತನ್ನ ಸ್ವಾರ್ಥ ಸುಖಕ್ಕಾಗಿ, ಭೌತಿಕ
ಸುಖದ ಆಕರ್ಷಣೆಯಿಂದಕಾರ್ಯ ಮಾಡುವುದನ್ನು ಮಾತ್ರ ಅದುನಿಪೇಧಿಸಿದೆ.
ಹುಚ್ಚು ಕಾಮನೆಗಳನ್ನು ಮಾಡದೆ ಉಚ್ಚ ಉದಾತ್ತ ಧ್ಯೇಯದಿಂದ ವರ್ತಿಸ
ಬೇಕೆಂಬುದೇ ಗೀತೆಯ ಆಶಯ. ಭಗವದನುಗ್ರಹದ ಹಾಗೂ ಲೋಕಹಿತದ
ಕಾಮನೆಯಿಂದ ನಾವು ಕಾರ್ಯಪ್ರವೃತ್ತರಾಗಬೇಕು. ರಾಗದ್ವೇಷಗಳಿಗೆ
ಬಲಿಯಾಗಿ ಕ್ಷುದ್ರ ಕಾಮನೆಗಾಗಿ ನಮ್ಮ ರಕ್ತಿಯ ಅವಷ್ಯಯವಾಗಬಾರದೆಂಬಈ
ಗೀತೆಯ ಉವದೇಶದಲ್ಲಿ ಅವ್ಯವಹಾರ್ಯತೆ ಏನೂ ಇಲ್ಲ. ಜೀವನದ
ನಿಜತತ್ತ್ವವನ್ನೇ ಅದು ಬೋಧಿಸುತ್ತದೆ.
ಮಹಾಭಾರತದಲ್ಲಿ ಬಂದ ಒಂದು ಸಂದರ್ಭವನ್ನು ಇಲ್ಲಿ
ಉದಾಹರಿಸಬಹುದು; ಭೀಷ್ಮರಿಂದ ನಾನಾ ಧರ್ಮಗಳ ಬಗ್ಗೆ ವಿಸ್ತಾರವಾದ
ಉವದೇಶವನ್ನು ಪಡೆದ ಬಳಿಕ ಯುಧಿಷ್ಠಿರನು ಎಲ್ಲರ ಮುಂದೆ ಒಂದು ಪ್ರಶ್ನೆ
ಇಡುವನು. ಧರ್ಮ, ಅರ್ಥ, ಕಾಮ, ಮೋಕ್ಷಗಳಲ್ಲಿ ಯಾವುದು ಶ್ರೇಷ್ಠ? - ಇದು
ಅವನ ಪ್ರಶ್ನೆ. ಧರ್ಮವೇ ಶ್ರೇಷ್ಠ ಅದರಿಂದಲೇ ನಿಚ್ರೇಯಸ್ಸನ್ನು
ಪಡೆಯಬಹುದು ಎಂದು ವಿದುರನು ಸಹಜವಾಗಿ ಹೇಳಿದನು. ಅರ್ಥವೇ
ಪುರುಷಾರ್ಥಗಳಲ್ಲಿ ಪ್ರಧಾನ, ಸಂಪತ್ತು ಹಾಗೂ ವಿದ್ಯೆಗಳೇ ಅರ್ಥ. ಇವಿಲ್ಲದೆ
ಧರ್ಮಾಚರಣೆ ಅಶಕ್ಕವೆಂದು ವ್ಯವಹಾರವಾದಿಯಾದ ಅರ್ಜುನನು
ಪ್ರತಿಪಾದಿಸಿದನು. ಧರ್ಮರಾಜನಂತೂ ಎಲ್ಲರ ಗುರಿಯೂ ಮುಕ್ತಿಯೇ
ಆಗಿರುವುದರಿಂದ ಅದೇ ಶ್ರೇಷ್ಠವೆಂದು ಉಪಸಂಹಾರ ಮಾಡಿದನು. ಆದರೆ
ಭೀಮಸೇನನ ವಾದವೇ ಬೇರೆಯಾಗಿತ್ತು. ಕಾಮವೇ ಎಲ್ಲವುಗಳಿಗಿಂತಲೂ
ಮುಖ್ಯವೆಂದು ಅವನು ನುಡಿದಾಗಎಲ್ಲರೂ ಒಮ್ಮೆಲೇ ಚಕಿತರಾದರು. ಭೀಮನು
ಅದರ ವಿವರಣೆಯನ್ನು ನೀಡುತ್ತ. '"ಕಾಮವೆಂದರೆ ಇಚ್ಛೆ, ಇಚ್ಛಾಶಕ್ತಿ
ಇಲ್ಲದಿದ್ದಲ್ಲಿ ಧರ್ಮವೂ ಇಲ್ಲ. ಅರ್ಥವೂ ಇಲ್ಲ ಮೋಕ್ಷವನ್ನೂ
ಪಡೆಯಲಾರೆವು. ಉದಾತ್ತವಾದ ಇಚ್ಛಾಬಲದಿಂದಲೇ ಧರ್ಮಾರ್ಥಮೋಕ್ಷ
ಗಳನ್ನು ನಾವು ಹೊಂದಬಲ್ಲೆವು. ಎಲ್ಲ ಪುರುಷಾರ್ಥಗಳೂ ಕಾಮದ
ಅಧೀನವಾಗಿರುವುದರಿಂದ ಅದು ಹೇಯವಲ್ಲ ಕೇವಲ ಭೋಗಲಾಲನೆಯನ್ನೆ
ನಾವು ಕಾಮವೆಂದು ಭಾವಿಸಬಾರದು. ಕಾಮದ ಮಹತ್ತ್ವ ಹಾಗೂ
ಪವಿತ್ರತೆಯನ್ನು ಅರಿತು ಉಚ್ಚ ಆಕಾಂಕ್ಷೆ ಗಳಿಂದ ಪ್ರೇರಿತರಾಗಿ ನಾವು ಜೀವನದ
ಸಾಫಲ್ಯವನ್ನು ವಡೆಯಬೇಕು'' ಎಂದನು.
ಅನಿಷಿದ್ಧಕಾಮಿತೈವ
ಹ್ಯಕಾಮಿತ್ವಮಿತೀರ್ಯತೇ [ -ಗೀತಾತಾತ್ಪರ್ಯ
'"ನಿಷಿದ್ದವಾದದ್ದನ್ನು ಬಯಸದಿರುವುದೇ ಕಾಮನಾತ್ಯಾಗವೆನಿಸುವುದು''.
ತನ್ನ ಸ್ವಂತ ವೈಷಯಿಕ ಸುಖದ ಬಯಕೆಯನ್ನು ವರ್ಜಿಸಿ ಮೋಕ್ಷ
ಭಗವದನುಗ್ರಹ, ಲೋಕಹಿತಗಳ ಆಕಾಂಕ್ಷೆಯಿಂದ ಪ್ರವರ್ಶಿಸುವುದೇ ನಿಷ್ಕುಮ
ಕರ್ಮವೆನಿಸುವುದು.
ಯಾವ ಸ್ವಾರ್ಥದ ಆಶೆಯನ್ನೂ ಇಟ್ಟುಕೊಳ್ಳದೆ ಕರ್ತವ್ಯವನ್ನು
ಆಚರಿಸಬೇಕೆನ್ನುವುದು ಹೇಳುವಷ್ಟು ಆಚರಣೆಯಲ್ಲಿ ಸುಲಭವಲ್ಲ. ನಾವು
ನಿತ್ಯಜೀವನದಲ್ಲಿಯೂ ಯಾವುದೇ ಉತ್ತಮಕಾರ್ಯಗಳನ್ನು ಸ್ವಾರ್ಥಭಾವನೆ
ಯಿಂದ ಪ್ರೇರಿತರಾಗಿಯೇಮಾಡುತ್ತಿರುವೆವು. ಸ್ವರ್ಗ ಕೀರ್ತಿ ಏನಾದರೊಂದು
ಆಶೆನಮಗೆಇದ್ದೇಇರುವುದು. ಗೀತೆಯ ಈ ಉಚ್ಚ ಆದರ್ಶವನ್ನು ನೋಡಿನಾವು
ನಿಜವಾಗಿಯೂ ನಿರಾಶರೇ ಆಗಬೇಕಾಗುತ್ತದೆ. ವಸ್ತುತಃ ಇಂತಹ ನಿರಾಶೆಗೆ
ಕಾರಣವಿಲ್ಲ. ಶ್ರೇಷ್ಠ ಪುರುಷರೂ ಒಮ್ಮೊಮ್ಮೆ ಲೌಕಿಕ ಆಶೆಗೆ ಬಲಿಬೀಳುವ
ಪ್ರಸಂಗ ಬರುವುದು. ಅವರೋಕ್ಷ ಜ್ಞಾನಿಗಳಿಗೂ ಆ ತತ್ತ್ವಜ್ಞಾನದ
ಅಭಿಭವವಾಗಿ ಮೋಹಪರವಶತೆ ಉಂಟಾಗಬಹುದು. ಗೀತೆಯ ಉಚ್ಚಆದರ್ಶ
ನಮ್ಮ ಕಣ್ಣ ಮುಂದೆಇದ್ದಲ್ಲಿನಾವುತವ್ಪುದಾರಿತುಳಿಯುವ ಸಂಭವ ಬಹಳಷ್ಟು
ಕಡಿಮೆ ಆಗುವುದು. ಧ್ರುವನಕ್ಷತ್ರವನ್ನು ನಾವುಮುಟ್ಟಲಾರೆವು. ಆದರೆ ಅದುನಮ್ಮ
ಕಣ್ಣ ಮುಂದೆ ಇದ್ದರೆ ಹಡಗು ದಾರಿ ತಪ್ಪಲಾರದು. ಕರ್ಮಯೋಗದ ಶ್ರೇಷ್ಠ
ಆದರ್ಶ ಒಮ್ಮೆಲೇ ನಮಗೆ ಎಟುಕಲಾರದಾದರೂ ಈ ಆದರ್ಶದ ಗುರಿಯಲ್ಲಿ
7. ನಮ್ಮ ಜೀವನಪಥವನ್ನು ರೂಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದರಲ್ಲೇ
ನಮ್ಮ ಜೀವನದ ನಾರ್ಥಕತೆ ಅಡಗಿದೆ. ನಿರಾಶರಾಗದೆ ಈ ಗುರಿಯ ಕಡೆಗೆನಾವು
ಸಾಗಬೇಕು.
Bannanje Govindacharya (1936–2020)Bhagavad Gita Pravachana
ಯಾವಾನ್ ಅರ್ಥಃ ಉದಪಾನೇ ಸರ್ವತಃ VOY ಉದಕಶೇ |
ತಾವಾನ್ ಸರ್ವೇಷು ವೇದೇಷು ಬ್ರಾಹ್ಮಣಸ್ಯ ವಿಜಾನತಃ -- ಬಾವಿಯಿಂದ ಏನೇನು ಉಪಯೋಗವಿದೆಯೋ
ಅದೆಲ್ಲವೂ ತುಂಬಿ ಹರಿಯುವ ನೀರ ನೆಲೆಯಲ್ಲಿ ಒಳಗೊಂಡಿದೆ. ಎಲ್ಲಾ ವೇದಗಳಲ್ಲಿ ಏನು ಫಲವೋ ಅದು
ಬ್ರಹ್ಮವನ್ನು ಬಲ್ಲ ವಿಜ್ಞಾನಿಯ ಫಲದಲ್ಲಿ ಒಳಗೊಂಡಿದೆ.[ಪ್ರಕೃತಿಯೇ ನೀರಂತೆ ಎಲ್ಲೆಡೆ ತುಂಬಿ ಹರಿಯುವ
ಪ್ರಳಯದಲ್ಲಿ ಕೂಡಾ ತುಂಬಿದ ಕೊಡವಾಗಿ, ಇನ್ನೊಬ್ಬರ ಕಾಪಿಗೊಳಪಡದೇ, ಕಾಲಾದಿಗಳನ್ನು ನಿಯಮಿಸುವ
ಭಗವಂತನಿಂದ ಎನಿತು ಲಭ್ಯವೋ -ಅದು ಎಲ್ಲಾ ವೇದಗಳನ್ನು ಬಲ್ಲ ಹಿರಿಯ ಜ್ಞಾನಿಗೆ ಮಾತ್ರ ಸುಲಭ]
ಈ ಶ್ಲೋಕ ಒಗಟಿನಂತಿದೆ. ನೇರವಾಗಿ ನೋಡಿದರೆ ಅರ್ಥ ತಿಳಿಯದ ಶ್ಲೋಕವಿದು.ಈ ಶ್ಲೋಕವನ್ನು ಅರ್ಥ
ಮಾಡಿಕೊಳ್ಳಬೇಕಾದರೆ ನಾವು ಶ್ಲೋಕದಲ್ಲಿ ಮುಳುಗಬೇಕು. ಆಗ ಆಳದಲ್ಲಿನ ಮುತ್ತು ರತ್ನಗಳು ನಮಗೆ
ಸಿಗುತ್ತವೆ. ನಾವು ನಮ್ಮ ಅಹಂಕಾರವನ್ನು ಸಂಪೂರ್ಣ ತೊರೆದು ಶರಣಾಗತಿಯಿಂದ(70831 Submission)
ನೋಡಿದಾಗ ಅದು ತನ್ನನ್ನು ತೆರೆದುಕೊಳ್ಳುತ್ತದೆ. ಈ ಶ್ಲೋಕವನ್ನು ಸ್ವಲ್ಪ ಬಿಡಿಸಿ ಹೀಗೆ ಹೇಳಬಹುದು:
ಯಾವಾನ್ ಅರ್ಥ ಉದಪಾನೇ ಯಾವಾನ್ ಅರ್ಥ ಸರ್ವತಃ ಸಂಪ್ಗತೋದಕೇ
ತಾವಾನ್ ಸರ್ವೇಷು ವೇದೇಷು ತಾವಾನ್ ಬ್ರಾಹ್ಮಣಸ್ಯ ವಿಜಾನತಃ
ಒಂದು ಬಾವಿ ತೋಡಿ ಅದರಲ್ಲಿ ಬರುವ ನೀರಿನಿಂದ ಏನು ಪ್ರಯೋಜನವೋ, ಆ ಎಲ್ಲಾ ಪ್ರಯೋಜನಗಳ
ಜೊತೆಗೆ ಇನ್ನೂ ಅನೇಕಾನೇಕ ಪ್ರಯೋಜನಗಳನ್ನು ತುಂಬಿ ಹರಿಯುವ ನೀರಿನ ನೆಲೆ ಕೊಡಬಲ್ಲದು.
ಜ್ಞಾನವಿಲ್ಲದೆ ಕರ್ಮ ಕಾಂಡವನ್ನು ಮಾಡುವವನ ಸ್ಥಿತಿ ಮನೆಯಲ್ಲಿ ಕಷ್ಟಪಟ್ಟು ಬಾವಿ ತೋಡಿ ಅದರಿಂದ ನೀರು
ಸೇದಿದಂತೆ. ಭಗವಂತನನ್ನು ಸಾಕ್ಷಾತ್ಕಾರಗೊಳಿಸಿಕೊಂಡವನ ಸ್ಥಿತಿ ತುಂಬಿ ಹರಿಯುವ ನೀರಿನ ನೆಲೆಯ
ದಡದಲ್ಲಿದ್ದಂತೆ. ಅಪರೋಕ್ಷ ಜ್ಞಾನಿ ಎಲ್ಲವುದರಲ್ಲೂ ಭಗವಂತನನ್ನು ಕಾಣುತ್ತಾನೆ. ಬ್ರಹ್ಮಜ್ಞಾನಿ ಸದಾ
ನಿರ್ಮಲವಾಗಿ ತುಂಬಿ ಹರಿಯುವ ನೀರಿನ ನೆಲೆಯ ಪಕ್ಕ ನಿಂತವನಂತೆ. ಇಡೀ ವೇದವನ್ನು ಓದಿ ಕರ್ಮದಲ್ಲೇ
ಕುಳಿತವನು ಬೆವರು ಸುರಿಸಿ ಬಾವಿಯಿಂದ ನೀರು ಸೇದುವವನಂತೆ.
ಈ ಶ್ಲೋಕದಲ್ಲಿ 'ಬ್ರಾಹ್ಮಣ' ಎನ್ನುವ ಪದ ಬಂದಿದೆ. ಇದನ್ನು 'ಜಾತಿ' ಎಂದು ಪರಿಗಣಿಸಿದರೆ ಈ ಶ್ಲೋಕದ ನಿಜ
ಸಂದೇಶ ತಿಳಿಯುವುದಿಲ್ಲ. ವೇದ ಗ್ರಂಥಗಳಲ್ಲಿ ಎಲ್ಲೂ ಜಾತಿಯ ಬಗ್ಗೆ ಪ್ರಸ್ತಾಪವಿಲ್ಲ. ಬ್ರಾಹ್ಮಣ ಅಂದರೆ 'ಬ್ರಹ್ಮ
ಅಣತೀತಿ'; ಅಂದರೆ ಬ್ರಹ್ಮ ತತ್ವವನ್ನು ಅರ್ಥ ಮಾಡಿಕೊಂಡವ ಎಂದರ್ಥ. 'ಬ್ರಹ್ಮ' ಎಂದರೆ ಎಲ್ಲಕ್ಕಿಂತ
ದೊಡ್ಡದಾದದ್ದು. ಎಲ್ಲಕ್ಕಿಂತ ದೊಡ್ಡದು ವೇದ ಮತ್ತು ವೇದವೇದ್ಯನಾದ ಭಗವಂತ. ಆದ್ದರಿಂದ ವೇದವನ್ನು
ಅರಿತವನು, ವೇದವೇದ್ಯ ಭಗವಂತನನ್ನು ಸಾಕ್ಷಾತ್ಮರಿಸಿಕೊಂಡವನು ಬ್ರಾಹ್ಮಣ.
ಬ್ರಹ್ಮನನ್ನು ಅಪರೋಕ್ಷವಾಗಿ ತಿಳಿದ ಜ್ಞಾನಿಗೆ ತುಂಬಿ ಹರಿವ ನೀರಿನ ಫಲವಾದರೆ, ಕರ್ಮಕನಿಗೆ ಬಾವಿಯ ಫಲ.
ಶಾಸ್ತ್ರದಿಂದ ವಿಶಿಷ್ಟವಾದ ಅರಿವನ್ನು ಪಡೆದ ವಿಜ್ಞಾನಿ ಮಾತ್ರ ಭಗವಂತನನ್ನು ಕಾಣಬಲ್ಲ. ಇಲ್ಲಿ ವಿಜ್ಞಾನಿ ಅಂದರೆ
ಯಾವುದೇ ಒಂದು ವಸ್ತುವಿನ ಬಗ್ಗೆ ತಳಸ್ಪರ್ಶಿ ಜ್ಞಾನ ಉಳ್ಳವನು ಎಂದರ್ಥ.
ಈ ಶ್ಲೋಕದಲ್ಲಿ ಇನ್ನೊಂದು ವಿಷಯವಡಗಿದೆ. "ಸರ್ವತಃ ಸಂಪ್ಲತೋದಕ” ಎಂದರೆ ನೀರು ತುಂಬಿದ ಸ್ಥಿತಿ. ಇಲ್ಲಿ
ನೀರು ಎಂದರೆ ಪ್ರಳಯಜಲ. ಪ್ರಕೃತಿ ಸೂಕ್ಷ್ಮವಾದ ಪರಮಾಣುವಿನ ಸಮುದ್ರ ರೂಪದಲ್ಲಿರುವ ಕಾಲ-ಪ್ರಳಯ
ಕಾಲ. ಇಂತಹ ಪ್ರಳಯ ಸಮುದ್ರದಲ್ಲಿ ಮಲಗಿರುವವ 'ಉದಪಾನ'. ಉತ್-ಅಪ-ಪಾನ-ಅಂದರೆ ಎಲ್ಲಕ್ಕಿಂತ
ಉತ್ಕೃಷ್ಟವಾದ, ಸದಾ ಎಚ್ಚರದಿಂದಿರುವ(ಉತ್); ಎಲ್ಲರನ್ನು ಪಾಲಿಸುವ, ಹಾಗೂ ತನಗೆ ಹಿರಿದಾದ ಇನ್ನೊಬ್ಬ
ಪಾಲಕನಿಲ್ಲದ ಸರ್ವೋತ್ತಮ(ಅಪ); ಎಲ್ಲರನ್ನೂ ನಿಯಂತ್ರಿಸುವ ಸರ್ವಚೇಷ್ಟಕ(ಅನ). ಈ ತತ್ವದ ಮೂಲಕ
ಏನೇನು ಉಪಯೋಗವನ್ನು ಪಡೆಯಬಹುದೋ ಆ ಉಪಯೋಗವನ್ನು ಸಮಸ್ತ ವೇದದಲ್ಲಿ, ವೇದದ
ಒಂದೊಂದು ಮಂತ್ರದಲ್ಲಿ, ಮಂತ್ರದ ಒಂದೊಂದು ವಾಕ್ಯದಲ್ಲಿ, ವಾಕ್ಯದ ಒಂದೊಂದು ಪದದಲ್ಲಿ, ಪದದ
ಒಂದೊಂದು ಅಕ್ಷರದಲ್ಲಿ ಭಗವಂತನನ್ನು ಕಾಣುವ ಬ್ರಹ್ಮಜ್ಞಾನಿ ಪಡೆಯುತ್ತಾನೆ.
ವೇದವನ್ನು ಕೇವಲ ಮೇಲ್ನೋಟದಲ್ಲಿ ಓದಿದರೆ ಅದರಿಂದ ಏನೂ ಉಪಯೋಗವಿಲ್ಲ. ವೇದದ ಸಮಗ್ರ
ಮಂತ್ರದಲ್ಲಿ, ಮಂತ್ರದ ಒಂದೊಂದು ಅಕ್ಷರದಲ್ಲಿ ಭಗವಂತನನ್ನು ಕಂಡು ಭಗವನ್ಮಯನಾದಾಗ, ಭಗವಂತನ
ಸಮಸ್ತ ಅನುಗ್ರಹಕ್ಕೆ ಪಾತ್ರನಾಗಿ, ಸಮಗ್ರ ಉಪಯೋಗವನ್ನು ಪಡೆಯಬಹುದು.
“ಫಲ ಕಾಮನೆಯಿಂದ ಕರ್ಮಕಾಂಡ ಬೇಡ, ಸಮಗ್ರವೇದವನ್ನು ಭಗವಂತನ ಚಿಂತನೆಗೆ ಮೀಸಲಿಡಿ” ಎಂದು
ಹೇಳಿದ ಕೃಷ್ಣನ ಮಾತಿನಿಂದ ನಮಗೆ ಸ್ವಲ್ಪ ಗೊಂದಲವಾಗಬಹುದು. ಏಕೆಂದರೆ ವೇದದಲ್ಲಿ ಪ್ರತಿಯೊಂದು ಕಡೆ
ಫಲವನ್ನು ಹೇಳಿದ್ದಾರೆ. ಏಕೆ ಹೀಗೆ ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಈ ಹಿಂದೆ ಹೇಳಿದಂತೆ ಅಧ್ಯಾತ್ಮದ
ಪಠ್ಯಪುಸ್ತಕ ಸಾಧನೆಯ ಎಲ್ಲಾ ಹಂತದಲ್ಲೂ-ಚಿಕ್ಕವರಿಂದ ದೊಡ್ಡವರಿಗೆ ಎಲ್ಲರಿಗೂ ಒಂದೆ. ಇನ್ನೂ ಆರಂಭದ
ಹಂತದಲ್ಲಿರುವವರಿಗೆ ಏನನ್ನೂ ಬಯಸದೇ ನಿರ್ಲಿಪ್ತರಾಗಿ ಅನುಸರಿಸಿ ಎಂದು ಹೇಳಿದರೆ ಅವರಿಗೆ ವೇದಾಂತದ
ಬಗ್ಗೆ ಆಸಕ್ತಿಯೇ ಬಾರದಿರಬಹುದು. ಅದಕ್ಕಾಗಿ, ಮಕ್ಕಳಿಗೆ ಬೆಲ್ಲ ಕೊಟ್ಟು ಔಷಧ ಕುಡಿಸಿದಂತೆ ವೇದಗಳಲ್ಲಿ
ಫಲವನ್ನು ಹೇಳಿದ್ದಾರೆ. ಇದು ವೇದಾಭ್ಯಾಸದ ಆರಂಭದ ಹಂತದಲ್ಲಿ ಉಪಯುಕ್ತ.
ಕರ್ಮ ಮಾಡುವಾಗ ನಮ್ಮ ಮನಃಸ್ಥಿತಿ ಹೇಗಿರಬೇಕು ಎನ್ನು ವುದನ್ನು ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರವಾಗಿ
ಹೇಳಿದ್ದಾನೆ.
Bibek Debroy (1955–2024)The Bhagavad Gita
(46)
‘Whatever purpose is achieved by many small bodies of water is also
achieved by one large body of water. Like that, whatever all the Vedas
achieve is achieved by a person who knows the brahman.’44