2.47

कर्मण्येवाधिकारस्ते मा फलेषु कदाचन ।
मा कर्मफलहेतुर्भूर्मा ते सङ्गोऽस्त्वकर्मणि ॥
karmaṇyevādhikāraste mā phaleṣu kadācana |
mā karmaphalaheturbhūrmā te saṅgo'stvakarmaṇi ||
Sri Madhvacharya (1238–1317)Bhagavad Gita Tatparya Nirnaya
कर्माधिकारिण एव त्वदादयो जीवाः। फलं तु मदायत्तमिति भावः। मा कर्मफलहेतुर्भूः नेश्वरोऽहमिति भावं कुरु।‘एष उ एव शुभाशुभैः कर्मफलैरेनं संयोजयति न स्वयं संयुक्तो भवति यदेनं कर्मफलैः संयोजयति न स्वयं संयुक्तो भवति तस्मादन्य एवासौ भगवान्वेदितव्यः’ इति पैङ्गिश्रुतिः॥47॥
Swami Sivananda (1887–1963)Bhagavad Gita
47. Thy right is to work only, but never with its fruits; let not the fruits of actions be thy motive, nor let thy attachment be to inaction. COMMENTARY: Actions done with expectation of its rewards bring bondage. If you do not thirst for them, you get purification of heart and ultimately knowledge of the Self.
Sri Vishwesha Tirtharu (1931–2019)Gitasaroddhara
2.42–2.47 · ವೇದ ಮತ್ತು ಕಾಮ್ಯಕರ್ಮ
ವೇದ ಮತ್ತು ಕಾಮ್ಯಕರ್ಮ ವೇದಗಳಲ್ಲಿ ಕಾಮ್ಯಕರ್ಮಗಳ ಪ್ರತಿಪಾದನೆ ಇದೆ. ಜ್ಯೋತಿಷ್ಟೋಮ ಮುಂತಾದ ಯಜ್ಞಗಳ ಅನುಷ್ಯುನದಿಂದಸ್ವರ್ಗವನ್ನುವಡೆಯಬಹುದೆಂದು ಅಲ್ಲಿ ಹೇಳಲಾಗಿದೆ. ಯಾವ ಕಾಮನೆಯೂ ಇಲ್ಲದೆ ಕರ್ತವ್ಯವನ್ನು ಮಾಡಬೇಕೆಂದು ಗೀತೆಯು ಹೇಳುವುದು ವೇದವಿರೋಧಿ ವಿಚಾರವಲ್ಲವೇ ಎಂಬ ಸಂಶಯ ಮೂಡಬಹುದು. ಆದರೆ ಸ್ವರ್ಗದ ಭೋಗವನ್ನು ಪಡೆಯುವುದಕ್ಕಾಗಿ ಯಜ್ಞ ಯಾಗಾದಿಗಳನ್ನು ಬೋಧಿಸುವುದೇವೇದದ ಗುರಿಯಲ್ಲ. ವೇದದ ನಿಜವಾದ ಅಂತರಾರ್ಥವನ್ನುತಿಳಿಯದೆ ಜ್ಞಾನ ರಹಿತವಾದ ಶುಷ್ಕಕರ್ಮಕಾಂಡದ ಕಡೆಗೆ ವೇದವನ್ನು ಎಳೆದು ವೇದಕ್ಕೆ ಅಪಚಾರ ಎಸಗಿದವರು ಮೀಮಾಂಸಕರು. ಸ್ವರ್ಗದ ಸುಖಭೋಗದ ಆಮಿಷವನ್ನು ಜನರ ಮುಂದಿಟ್ಟು ಕೇವಲ ಕರ್ಮಕಾಂಡದ ವ್ರಸ್ಥವನ್ನು ದೇಶದಲ್ಲಿ ಬೆಳೆಸಿ ಇಲ್ಲಿ ಪೂರೈಸಲಾಗದ ಭೋಗಲಾಲಸೆಯನ್ನು ಮಾತ್ರ ಜಾಗೃತಗೊಳಿಸಿದರು. ಇದರಿಂದ ಜ್ಞಾನ, ಅಧ್ಯಾತ್ಮಚಿಂತನವೆಲ್ಲ ಸ್ಥಗಿತವಾಗುವಂತಾಯಿತು. ಇವರು ವೇದವೇತ್ವರಲ್ಲ ವೇದವಾದಿಗಳು; ಬರೇ ವೇದಪಾಠಕರು. ಮರವು ಹೂ ಬಿಟ್ಟಾಗ ಅದರಿಂದ ಉಂಟಾಗುವ ಮಧುರ ಫಲಕ್ಕಾಗಿ ಕಾಯದೆ ಹೂವಿನ ಪರಿಮಳಕ್ಕಾಗಿ ಆತುರತೆಯಿಂದ ಹೂವನ್ನೇ ಕಿತ್ತುಕೊಂಡು ಹಣ್ಣನ್ನು ಕಳೆದುಕೊಳ್ಳುವವರಂತೆ ಇವರಸ್ಥಿತಿಯಾಗಿದೆ. ವೇದವು ಮಾಡಿದ ಕಾಮ್ಮಕರ್ಮಗಳ ಬೋಧನೆಯ ಉದ್ದೇಶವನ್ನು ಅರಿಯದೆ ಭೋಗಪ್ರಧಾನವಾದ ಸಾಮಾನ್ಯ ಫಲಗಳನ್ನೇ ಆಶಿಸಿದರೆ ಶಾಸ್ತ್ರದ ಅಮೃತಫಲವನ್ನೇ ನಾವು ಕಳೆದುಕೊಳ್ಳುತ್ತೇವೆ. ಮೀಮಾಂಸಕರು ಇಂತಹ ವ್ರಮಾದವನ್ನುಮಾಡಿದರು. ಅದನ್ನೇ- ಯಾಮಿಮಾಂ ಪುಷ್ಟಿತಾಂ ವಾಚಮ್‌ । ಎಂಬ ಶ್ಲೊ ೇಕದಲ್ಲಿ ನಿಂದಿಸಲಾಗಿದೆ. ವೇದವೇನೋ ಸ್ವರ್ಗಸುಖಗಳ ಮಾತನ್ನು ಹೇಳಿದೆ. ಭೋಗ ಪ್ರವೃತ್ತಿಯ ಸಾಮಾನ್ಯ ಜನರ ಮನಸ್ಸನ್ನು ವರಮಾತ್ಮನ ಕಡೆಗೆ ತಿರುಗಿಸುವ ಕಾರ್ಯದ ಮೊದಲನೇ ಹಂತವಾಗಿ ಸ್ವರ್ಗ ಹಾಗೂ ಐಹಿಕ ಫಲಗಳಿಗಾಗಿ ಅನೇಕ ಕರ್ಮಗಳನ್ನು ಬೋಧಿಸಿದೆ. ಅದೇ ಅದರ ಅಂತಿಮ ಉದ್ದೇಶವಲ್ಲ, ತಾಯಿಯು ಮಕ್ಕಳಿಗೆ ಕಹಿ ಔಷಧ ನೀಡಲು ಪ್ರಾರಂಭಿಕವಾಗಿ ಸಕ್ಕರೆಯನ್ನು ನೀಡುವಂತೆ ವೇದವುಸ್ವರ್ಗದ ಅಮಿಷವನ್ನು ನಮ್ಮ ಮುಂದೆ ಇಡುವುದುಂಟು. ವೇದದ ಈ ಮಾತೃೃದಯದವಾತ್ಸಲ್ಯ ಭಾವವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ನಮ್ಮ ಮಾನಸಿಕ ಮಟ್ಟವನ್ನು ಅನುಸರಿಸಿ ನಮ್ಮ ಆತ್ಮವನ್ನು ಎತ್ತರಿಸಲು ವೇದವು ಪ್ರವೃತ್ತವಾಗಿದೆ. ಇದನ್ನೇ ಭಾಗವತದಲ್ಲಿ ರೋಚನಾರ್ಥಂ ಫಲಶ್ರುತಿಃ । ಎಂದು ಹೇಳಿದೆ. ಛಾಂದೋಗ್ಯೋಪನಿಷತ್ತಿನಲ್ಲಿ ಒಂದು ವರ್ಣನೆ ಇದೆ. ಮೃತ್ಯುವು ಜೀವನನ್ನು ಹಿಡಿಯಬೇಕೆಂದು ಆತನನ್ನು ನೋಡಿದಾಗ ಅವನು ಬೆದರಿ ವೇದದ ಆಶ್ರಯವನ್ನು ಪಡೆದನು. ಮೀನು ನೀರಿನಲ್ಲಿ ಇದ್ದರೂ ಅದನ್ನು ಹಕ್ಕಿಯು ತನ್ನ ಉದ್ದನೆಯ ಕೊಕ್ಕಿನಿಂದ ಹಿಡಿಯುವಂತೆ ಮೃತ್ಯುವು ಮುಂದೆ ಬಂದಾಗ ಜೀವನು. ಇನ್ನೂ ಒಳಗೊಳಗೆ ಸೇರಿಕೊಂಡು ಮೃತ್ಯುವಿನಿಂದ ಪಾರಾದನು. ನೀರಿನಲ್ಲಿ ಆಳವಾಗಿ ಒಳ ಹೊಕ್ಕಿರುವ ಮೀನನ್ನು ಹಕ್ಕಿ ಏನೂ ಮಾಡಲಾರದು. ವೇದದಲ್ಲಿ ಮೇಲಿಂದ ಮೇಲೆ ಹರಿದಾಡಿದರೆ ಏನೂ ಪ್ರಯೋಜನವಾಗಲಾರದು. ವೇದದ ಒಳಹೊಕ್ಕು ಆಳವಾಗಿ ವಿಮರ್ಶಿಸಿ ಅದರ ಅಂತರಾರ್ಥವನ್ನು ತಿಳಿದರೆ ಮಾತ್ರ ನಾವು ಮೃತ್ಯುವಿನಿಂದ ಅಮೃತತ್ತ್ವದ ಕಡೆಗೆ ನಾಗಬಲ್ಲೆವೆಂದು ಇದರತಾತ್ಪರ್ಯವಾಗಿದೆ. ತೈಗುಣ್ಯ ವಿಷಯಾ ವೇದಾಃ ನಿಸ್ತ `ಗುಣ್ಯೋ ಭವಾರ್ಜುನ। ಈ ಶ್ಲೋಕದಿಂದ ಶ್ರೀಕೃಷ್ಣನು '“ವೇದವು ತ್ರಿಗುಣಜನ್ಯವಾದ ಕರ್ಮವನ್ನು ಹೇಳಿದರೂ ನೀನು ಅದನ್ನು ಮಾಡಬೇಡ'' ಎಂದು ವೇದದ ನಿರಾಕರಣೆ ಮಾಡಿರುವನೆಂದೇ ಆಪಾತವಾಗಿ ಪ್ರತೀತಿಯಾಗುವುದು. ಇದರಿಂದ ವೇದದ ವಿಚಾರವನ್ನು ಅಲ್ಲಗಳಿದು ಗೀತೆಯು ಹೊಸ ಹೆಜ್ಜೆಯನ್ನು ಇಟ್ಟಿದೆಯೆಂದು ಕೆಲವರು ಪ್ರತಿವಾದಿಸುತ್ತಾರೆ. ಆದರೆ ನಿಷ್ಕುಮಕರ್ಮವು ಗೀತೆಯ ಹೊಸ ವಿಚಾರವಲ್ಲ. ಉಪನಿಷತ್ತಿನಲ್ಲಿ ಈ ನಿಷ್ಕುಮಕರ್ಮದ ಮಾತು ಅನೇಕ ಕಡೆ ಬರುತ್ತದೆ. ಈಶಾವಾಸ್ಯದಲ್ಲೇ ಇದರಸುಂದರನಿರೂಪಣೆಇರುವುದು. ವೇದದಿಂದ ಕಾಮ್ಯಧರ್ಮದ ಬೋಧೆಯಾದರೂ ಅದರ ನಿಜಾರ್ಥವನ್ನು ಅರಿತು ಕಾಮ್ಯಧರ್ಮಗಳ ಕಡೆಗೆ ನಮ್ಮ ಮನವನ್ನು ಹರಿಸದೆ ವೇದದ ಪರಮ ತಾತ್ಪರ್ಯವಿಷಯವಾದ ನಿಷ್ಕುಮಧರ್ಮವನ್ನು ಆಚರಿಸುವುದೇ ನಮ್ಮ ಧ್ಯೇಯವಾಗಿರಬೇಕೆಂಬುದು ಶ್ರೀಕೃಷ್ಣನ ಆಶಯವಾಗಿದೆ. ವೇದಗಳು ದೊಡ್ಡಸರೋವರದಂತೆಇದ್ದುಎಲ್ಲ ಬಗೆಯ ವಿಚಾರಗಳನ್ನು ಒಳಗೊಂಡಿರುವವು. ಸರೋವರದಲ್ಲಿಯ ನೀರನ್ನು ನಮಗೆ ಬೇಕಾಗುವಷ್ಟು ತೆಗೆದುಕೊಳ್ಳುವಂತೆ ವೇದಗಳಲ್ಲಿಯ ವಿಚಾರಗಳನ್ನು ಸರಿಯಾಗಿ ಮಥನಮಾಡಿ ನಮಗೆ ಯಾವುದು ಯೋಗ್ಯವೋ ಯಾವುದು ಜೀರ್ಣವಾಗುವುದೋ ಅದನ್ನು ಸ್ವೀಕರಿಸಬೇಕು. ಆತ್ಮದ ಮಟ್ಟವನ್ನು ಎತ್ತರಿಸಬೇಕೆಂಬುದೇ ವೇದದ ಉದ್ದೇಶವಾಗಿದೆ. ಜ್ಞಾನದಲ್ಲಿ ಅಭಿರುಚಿ ಹುಟ್ಟಿಸಲು, ಪರಮಾತ್ಮನಲ್ಲಿ ಭಕ್ತಿಯನ್ನು ಹುಟ್ಟಿಸಲು ವೇದಗಳು ಕಾಮ್ಯಕರ್ಮಗಳನ್ನು ಬೋಧಿಸುವವು. ವರೀಕ್ಷೆಯಲ್ಲಿ ಉತ್ತಮ ರೀತಿಯಿಂದ ಉತ್ತೀರ್ಣನಾದವನಿಗೆ ಬಹುಮಾನದ ಆಮಿಷ ತೋರಿಸುವಂತೆ ವೇದದ ಬೋಧನೆಯಾಗಿದೆ. ವಿದ್ಯಾರ್ಥಿಯಲ್ಲಿ ವಿದ್ಯಾಭಿರುಚಿಯನ್ನು ಬೆಳೆಸುವುದೇ. ಬಹುಮಾನ ನೀಡುವ ಉದ್ದೇಶವಾಗಿರುವುದು. ಸ್ವರ್ಗಸುಖಗಳಿಗಾಗಿ ಕರ್ಮವನ್ನು ಬೋಧಿಸುವ ವೇದದ ಆಶಯವೂಇದೇ ಆಗಿದೆ. ಇದೇ ವೇದದ ಅಂತಿಮ ಉದ್ದೇಶವೆಂದು ಭಾವಿಸಬಾರದು. ಭಗವಂತನ ಜ್ಞಾನ ಪಡೆದು ಭಕ್ತಿಯಿಂದ ನಿಷ್ಕ್ರಮಕರ್ಮವನ್ನು ಆಚರಿಸುವುದೇ ವೇದಗಳ ತಾತ್ಚರ್ಯಾರ್ಥವಾಗಿರುವುದರಿಂದ ಶಾಸ್ತ್ರದ ಬಗ್ಗೆ ತಪ್ಪುತಿಳುವಳಿಕೆ ಮಾಡಿಕೊಳ್ಳಲು ಅವಕಾಶವಿಲ್ಲ. ಇನ್ನೂ ಒಂದು ವಿಷಯವನ್ನುಇಲ್ಲಿ ನಾವು ಗಮನದಲ್ಲಿ ಇಟ್ಟುಕೊಳ್ಳಬೇಕು. ವೇದವು ವಲದ ಆಶೆಯಿರುವವನಿಗಾಗಿ ಅನೇಕ ಕರ್ಮಗಳನ್ನು ಬೋಧಿಸಿದರೂ ಫಲದ ಕಾಮನೆಯನ್ನು ಮಾಡಬೇಕೆಂದು ಎಲ್ಲಿ ಯೂ ವಿಧಿಸಿಲ್ಲ ಮೋಕ್ಷದ ಇಚ್ಛೆ ಹಾಗೂ ಆತುರತೆಯನ್ನು ಒತ್ತಿಹೇಳಿದಂತೆ ಫಲಕಾಮನೆಯ ಬಗ್ಗೆ ವಿಧಿವಾಕೃವಿಲ್ಲ. ಫಲದ ಆಶೆ ಇದ್ದವರು ಇಂತಹ ಕರ್ಮಗಳನ್ನು ಮಾಡಲಿಎಂದು ಹೇಳುವುದರಿಂದ ಆಶೆಯನ್ನು ಅದು ಬೋಧಿಸಿದಂತೆ ಆಗುವುದಿಲ್ಲ. ಹಣದ ಆಶೆಯುಳ್ಳವನಿಗಾಗಿ ಒಂದು ಒಳ್ಳೇ ಕೆಲಸ ಕೊಟ್ಟು ಸಂಬಳ ನೀಡುವುದರಿಂದ ನಿರಪೇಕ್ಷೆ ಯಿಂದಏನೂ ಸಂಬಳಪಡೆಯದೆ ಆಕೆಲಸವನ್ನು ಇನ್ನೊಬ್ಬಮಾಡಬಾರದೆಂದು ಆಗುವುದಿಲ್ಲ. ಸ್ವರ್ಗ ಮುಂತಾದ ಫಲಾತೆಯಿಂದ ಮಾಡಬಹುದಾದ ಕಾರ್ಯಗಳನ್ನೇ ಫಲಾಶೆಯನ್ನುತೊರೆದೂ ಮಾಡಲು ಅವಕಾಶವಿದೆ. ಕರ್ಮಣ್ಯೇವಾಧಿಕಾರಸ್ತೆ ( ಮಾ ಫಲೇಷು ಕದಾಚನ । "ವೇದವು ಕರ್ಮವನ್ನು ಮಾತ್ರ ವಿಧಾನಮಾಡಿದೆ. ಫಲಾಶೆಯನ್ನು ಅದು ವಿಧಿಸಲಿಲ್ಲ.''
Bannanje Govindacharya (1936–2020)Bhagavad Gita Pravachana
ಕರ್ಮಣಿ ಏವ ಅಧಿಕಾರ ತೇ ಮಾ ಫಲೇಷು ಕದಾಚನ | ಮಾ ಕರ್ಮಫಲ ಹೇತುಃ ಭೂಃ ಮಾ ತೇ ಸಂಗಃ ಅಸ್ತು ಅಕರ್ಮಣಿ --ಕರ್ಮದಲ್ಲಿ ಮಾತ್ರ ನಿನಗೆ ಹಕ್ಕು, ಫಲಗಳಲ್ಲಿ ಎಂದೂ ಇಲ್ಲ. ಫಲವನ್ನೆ ९ ನಂಬಿ ಕರ್ಮ ಮಾಡಬೇಡ (ಕರ್ಮಕ್ಕೆ ಫಲ ನೀಡುವ ಶಕ್ತಿ ತಾನೆಂದು ಭ್ರಮಿಸಬೇಡ). ಅಂತೆಯೇ ನಿಷ್ಕ ಯತೆ ನಿನಗಂಟದಿರಲಿ. ಈ ಶ್ಲೋಕವನ್ನು ಅಪಾರ್ಥ ಮಾಡಿಕೊಳ್ಳುವವರೇ ಹೆಚ್ಚು. ಕರ್ಮ ಮಾಡಬೇಕು ಆದರೆ ಫಲವನ್ನು ಬಯಸಬಾರದು ಅಂದರೆ ಏನು? ಇದು ಮನುಷ್ಯನನ್ನು ನಿಷ್ಕಿಯಗೊಳಿಸುತ್ತದೆ, ಎಂಬಿತ್ಯಾದಿ ವಾದಗಳನ್ನು ಈ ಶ್ಲೋಕದ ಮೇಲೆ ಅನೇಕ ಮಂದಿ ಮಂಡಿಸಿದ್ದಾರೆ. ಆದರೆ ಅವರ್ಯಾರೂ ಶ್ಲೋಕದ ನಿಜವಾದ ಅರ್ಥವನ್ನು ತಿಳಿಯಲು ಪ್ರಯತ್ನಿಸಿಲ್ಲ. ಇಲ್ಲಿ ಫಲವನ್ನು ಬಯಸಬೇಡ ಎಂದು ಎಲ್ಲಿಯೂ ಹೇಳಿಲ್ಲ. ಅದಕ್ಕೆ ಬದಲಾಗಿ ಫಲದಲ್ಲಿ ಅಧಿಕಾರ ಸಾಧಿಸಬೇಡ ಎಂದಿದ್ದಾನೆ ಕೃಷ್ಣ. ಕರ್ಮ ನಿನ್ನ ಕೈಯಲ್ಲಿದೆ- ಆದರೆ ಕರ್ಮ ಫಲ ಭಗವಂತನ ಕೈಯಲ್ಲಿದೆ. ನೀನು ನಾನೇ ಕರ್ಮ ಫಲದ ಹೇತು ಎಂದು ತಿಳಿಯಬೇಡ. ಕರ್ಮಫಲದ ಹೇತು ಭಗವಂತ ಎನ್ನುವ ಎಚ್ಚರ ನಿನಗಿರಲಿ ಎನ್ನುತ್ತಾನೆ ಕೃಷ್ಣ. ಇಲ್ಲಿ ಕೃಷ್ಣ ಬಯಕೆಯನ್ನು ನಿರಾಕರಣೆ ಮಾಡಿಲ್ಲ, ಆದರೆ 'ಹೀಗೇ ಆಗಬೇಕು' ಇಲ್ಲದಿದ್ದರೆ ನಾನು ಈ ಕರ್ಮವನ್ನು ಮಾಡಲಾರೆ ಎನ್ನುವ ಅಭಿಪ್ರಾಯ ಸರಿಯಲ್ಲ ಎಂದಿದ್ದಾನೆ. ಬಯಸುವ ಅಧಿಕಾರ ನಮಗಿದೆ ಆದರೆ ಫಲವನ್ನು ಕೊಡುವವ ಭಗವಂತ ಎನ್ನುವ ಪರಿಜ್ಞಾನ ಬೇಕು. ಎಷ್ಟೋ ಸಲ ನಾವು ಅರಿವಿಲ್ಲದೇ ತಪ್ಪನ್ನು ಬಯಸುತ್ತೇವೆ. ಆಗ ಭಗವಂತ ಅದನ್ನು ಕೊಡಲಾರ. ಏಕೆಂದರೆ ಯಾವುದು ಸರಿ, ಯಾವುದು ತಪ್ಪು ಎನ್ನುವ ಪರಿಜ್ಞಾನ ನಮಗಿಲ್ಲ. ಈ ಎಚ್ಚರ ಇದ್ದರೆ ನಮಗೆ ಫಲ ಸಿಗದಿದ್ದಾಗ ದುಃಖವಾಗುವುದಿಲ್ಲ. ನಾವು ಮಾಡುವ ಕರ್ಮವನ್ನು ನಿಷ್ಠೆಯಿಂದ ಭಗವದರ್ಪಣೆಯಾಗಿ ಮಾಡಿ, ಅದರಿಂದ ಏನು ಫಲ ಬಂತೋ ಅದನ್ನು ಹಾಗೇ ಸ್ವೀಕರಿಸುವ ಮನೋವೃತ್ತಿಯನ್ನು ಬೆಳೆಸಿಕೊಂಡರೆ ದುಃಖವಿರುವುದಿಲ್ಲ. ಯಾವ ಕಾಲಕ್ಕೂ ನಿಷ್ಕ್ರೀಯನಾಗಿ ಕುಳಿತುಕೊಳ್ಳದೇ ಸದಾ ಕರ್ತವ್ಯಶೀಲನಾಗು ಎನ್ನುತ್ತಾನೆ ಕೃಷ್ಣ. 'ಹೀಗೇ ಅಗಬೇಕು', "ಇಂತಹ ಫಲವೇ ಬರಬೇಕು' ಎನ್ನು ವ ವಿಚಾರವನ್ನು ಬಿಟ್ಟು, ಕರ್ತವ್ಯ ನಿರ್ವಹಿಸಿದಾಗ ಯಾವ ದುಃಖವೂ ಇಲ್ಲ. ಅದನ್ನು ಬಿಟ್ಟು ಫಲದಲ್ಲಿ ಅಧಿಕಾರ ಸಾಧಿಸಿದರೆ ಆ ಫಲ ದಕ್ಕದೇ ಇದ್ದಾಗ ಆಗುವ ಆಘಾತ, ವ್ಯಾಕುಲತೆ(!1970! depression) ಭಯಾನಕ. ಸೋಲನ್ನಾಗಲೀ ಗೆಲುವನ್ನಾಗಲೀ ಸಮನಾಗಿ ಕಾಣುವ ಮನಃಸ್ಥಿತಿ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಈ ಹಿಂದೆ ಹೇಳಿದಂತೆ ನಾವು ಸೋಲಿನಲ್ಲಿ ಕಲಿತಷ್ಟು ಗೆಲುವಿನಲ್ಲಿ. ಕಲಿಯಲಾಗದು. ಭಗವಂತ ನಮಗೆ ಫಲವನ್ನು ಕೊಡುವಾಗ ನಮ್ಮ ಒಳಿತನ್ನು ಗಮನದಲ್ಲಿಟ್ಟುಕೊಂಡು ಕೊಡುತ್ತಾನೆಯೇ ಹೊರತು , ನಾವು ಅಂದುಕೊಂಡಂತೆ ಅಲ್ಲ. ಬಂದದ್ದನ್ನು ಬಂದಂತೆ ಸ್ವೀಕರಿಸಿ, ಎಂದೂ ನಿಷ್ಕ್ರೀಯನಾಗದೇ, ಫಲದಲ್ಲಿ ಅಧಿಕಾರವನ್ನು ಸಾಧಿಸದೇ ಮುನ್ನೆ ಡೆಯಬೇಕು ಎನ್ನು ವುದು ಕೃಷ್ಣನ ಕರ್ಮಸಿದ್ಧಾಂತ. ಇಲ್ಲಿ ಅರ್ಜುನ ತಾನು ಧರ್ಮ ರಕ್ಷಣೆ ಮಾಡಲು, ಧರ್ಮದ ವಿಜಯಕ್ಕಾಗಿ ಯುದ್ಧ ಮಾಡುತ್ತೇನೆ ಅಂದುಕೊಳ್ಳುವುದು ತಪ್ಪಲ್ಲ. ಈ ಹಂತದಲ್ಲಿ ಸೋಲು-ಗೆಲುವಿನ ಬಗ್ಗೆ ಯೋಚಿಸದೇ, ಅದನ್ನು ಪೂರ್ಣ ಭಗವಂತನಲ್ಲಿ ಅರ್ಪಿಸಿ, ತನ್ನ ಪಾಲಿಗೆ ಬಂದ ಕರ್ತವ್ಯವನ್ನು ನಿಷ್ಟೆಯಿಂದ ತನ್ನ ಶಕ್ತಿ ಮೀರಿ ನಿಭಾಯಿಸುವುದು ಆತನ ಧರ್ಮ. ಹೀಗೆ ಮಾಡಿದಾಗ ಯುದ್ಧದ ಪ್ರತಿಯೊಂದು ಹಂತದಲ್ಲಿ ಬರುವ ಫಲಿತಾಂಶ ಆತನನ್ನು ಕಂಗೆಡಿಸಲಾರವು. ಏನೇ ಫಲಿತಾಂಶ ಬಂದರೂ ಅದು ಭಗವಂತನ ಪ್ರಸಾದ ಎಂದು ಸ್ವೀಕರಿಸುತ್ತಾ ಮುಂದೆ ಸಾಗಬೇಕು ಅಷ್ಟೆ.
Bibek Debroy (1955–2024)The Bhagavad Gita
(47) ‘You have the right to action alone. You never have the right to the fruit. Do not be motivated to act because of the fruit. But don’t be motivated to not acting either.’