2.50

बुद्धियुक्तो जहातीह उभे सुकृतदुष्कृते ।
तस्माद्योगाय युज्यस्व योगः कर्मसु कौशलम् ॥
buddhiyukto jahātīha ubhe sukṛtaduṣkṛte |
tasmādyogāya yujyasva yogaḥ karmasu kauśalam ||
Sri Madhvacharya (1238–1317)Bhagavad Gita Tatparya Nirnaya
यथावद्विष्णुः ज्ञात्वा तदर्थत्वेन कर्मकरणमित्येतत् कर्मकौशलमेव योगः। भगवज्ज्ञानमेव बुद्धिः ॥50॥
Swami Sivananda (1887–1963)Bhagavad Gita
50. Endowed with wisdom (evenness of mind), one casts off in this life both good and evil deeds; therefore, devote thyself to Yoga; Yoga is skill in action. COMMENTARY: Actions which are of a binding nature lose that nature when performed with equanimity of mind.
Sri Vishwesha Tirtharu (1931–2019)Gitasaroddhara
ಯೋಗಃ ಕರ್ಮಸು ಕೌಶಲಮ್
ಯೋಗಃ ಕರ್ಮಸು ಕೌಶಲಮ್‌ ಹೀಗೆ ಆಸಕ್ತಿಯ ಪರಿತ್ಯಾಗದೊಂದಿಗೆ ಕರ್ತವ್ಯವನ್ನು ಆಚರಿಸುವಾಗ ಯಾವ ಲೇಪವೂನಮಗೆ ಆಗದು. ಬೆಂಕಿಯ ಜೊತೆಗೆ ಹೊಗೆಯಂತೆ ಕರ್ತವ್ಯದ ಜೊತೆಗೆ ಅನಿವಾರ್ಯವಾಗಿ ಸಂಭವಿಸುವ ದೋಷಲೇಪದ ನಿವಾರಣೆಯೇ ಈ ಕರ್ಮಯೋಗದ ವೈಶಿಷ್ಟ್ಯ. ಒಬ್ಬನಿಗೆ ನದಿಯ ಆಚೆಯ ದಡವನ್ನು ಸೇರಬೇಕಾಗಿದೆ. ನದಿಗೆ ಇಳಿಯದೆ ಆಚೆ ದಡವನ್ನು ಅವನೆಂದೂ ಮುಟ್ಟಲಾರ. ಅದರಂತೆ ಸಂಸಾರಕ್ಕೆ ಇಳಿಯದೆ, ಕರ್ತವ್ಯವನ್ನು ಆಚರಿಸದೆ ಸಂಸಾರವನ್ನು ದಾಟಲಾರೆವು. ಈಜು ಕಲಿಯದೆ ನದಿಗೆ ಹಾರಿದರೆ ಆಗುವ ಅನರ್ಥದಂತೆ ಕರ್ತವ್ಯದಕಲೆಯನ್ನು ಅರಿತುಕೊಳ್ಳದೆ ಸ್ವಾರ್ಥಪರರಾಗಿ ಕರ್ಮಾಚರಣೆಯನ್ನು ಮಾಡುವುದರಿಂದ ಸಂಸಾರದಲ್ಲಿ ಮುಳುಗೇಳುವ ದುರಂತಕ್ಕೆ ಗುರಿಯಾಗುವೆವು. ತಸ್ಮಾದ್ಯೋಗಾಯ ಯುಜ್ಯಸ್ವ ಯೋಗಃ ಕರ್ಮಸು ಕೌಶಲಮ್‌ । “ನಿಷ್ಕಾಮಕರ್ಮದ ಆಚರಣೆಯೇ ಕರ್ಮದ ಚಾತುರ್ಯ; ಅದೇಕರ್ಮದ ಕಲೆ''. ಆಸಕ್ತಿ ಇಲ್ಲದೆ ಕರ್ಮವನ್ನು ಆಚರಿಸಿದರೆ ಆತ ಕರ್ಮದಲ್ಲಿ ಮುಳುಗದೆ ಲೀಲಾಜಾಲವಾಗಿ ಸಂಸಾರವನ್ನು ದಾಟಬಲ್ಲ, ಹಲಸಿನ ಹಣ್ಣು ತಿನ್ನಬೇಕು; ಮೇಣ ಅಂಟಬಾರದು. ಕೈಗೆ ಜಿಡ್ಡು ಬಳಿದುಕೊಂಡು ಹಣ್ಣು ಸುಲಿದರೆ ಈ ಕೆಲಸವಾಗುವುದು. ಕರ್ಮಯೋಗವೇ ಆ ಜಡ್ಡು. ನಾವು ಒಳ್ಳೇ ಕರ್ತವ್ಯಗಳನ್ನು ಮಾಡುವಾಗಲೂ ಅನಿವಾರ್ಯವಾಗಿ ನಡೆಯಬಹುದಾದ ಹಿಂಸೆ ಮುಂತಾದ ಕೃತ್ಯಗಳ ಲೇಪವಾಗದಿರಲು ಗೀತೆಯು ಯೋಗ್ಯ ಪರಿಹಾರವನ್ನು ನೀಡಿದೆ. ನಾವು ಉಪನ್ಯಾಸ ಮಾಡುವಾಗಲೂ ಎಷ್ಟೋ ಹಿಂಸೆಗಳು ಸಂಭವಿಸುತ್ತವೆ. ನಮ್ಮ ಶರೀರ ವ್ಯಾಪಾರವಾದಾಗಲೆಲ್ಲ ಅನೇಕ ಚಿಕ್ಕ ಜೀವಜಂತುಗಳ ಹಿಂಸೆಯು ನಡೆದೇ ನಡೆಯುತ್ತದೆ. ನಾವುನಿಷ್ಠಾಮಭಾವನೆಯಿಂದ, ಭಗವದ್ದಕ್ತಿಯಿಂದ ಕರ್ತವ್ಯವನ್ನು ಮಾಡಿದರೆ ಈ ದೋಷವು ಅಂಟದೆ ಕರ್ತವ್ಯದ ಅಮೃತ ಫಲವನ್ನು ಮಾತ್ರ ನಾವು ಪಡೆಯುವಂತಾಗುವುದು.
2.50–2.52 · ನಿಷ್ಕಾಮಕರ್ಮದ ಫಲ
ನಿಷ್ಕಾಮಕರ್ಮದ ಫಲ ಈ ನಿಷ್ಕಾಮಕರ್ಮವನ್ನು ಎಷ್ಟು ಸಮಯದವರೆಗೆ ನಾವು ಮಾಡಬೇಕು? ಇದು ಮುಂದಿನಪ್ರಶ್ತೆ. ಯದಾತೇ ಮೋಹಕಲಿಲಂ ಬುದ್ಧಿರ್ವ್ಯತಿತರಿಷ್ಯತಿ । ತದಾ ಗಂತಾಸಿ ನಿರ್ವೇದಂ ಶ್ರೋತವ್ಯಸ್ಯ ಶ್ರುತಸ್ಯ ಚ ॥ ಅಂತಃಕರಣಶುದ್ಧಿ ಮಿಥ್ಯಾಜ್ಞಾನದ ನಿವೃತ್ತಿ ಹಾಗೂ ತತ್ತ್ವಜ್ಞಾನದ ಉದಯ ಆಗುವವರೆಗೆ ಈ ಕರ್ಮಾಚರಣೆಯು ನಡೆಯಬೇಕು. ಧ್ಯಾನ ಮತ್ತು ಸಾಕ್ಬಾತ್ಕಾರಗಳಾಗಲು ಅಂತಃಕರಣದ ವಾವಿತ್ರ್ಯವು ಆವಶ್ಯಕ, ರಾಗದ್ವೇಷಗಳಿಂದ ಕಲುಷಿತವಾದ ಮನಸ್ಸಿನಲ್ಲಿ ಪರಮಾತ್ಮನು ಪ್ರತಿಬಿಂಬಿತನಾಗಲಾರನು. ಅಲೆಗಳಿಂದ ಚಲವಿಚಲವೂ ಕಲುಷಿತವೂ ಆದ ನೀರಿನಲ್ಲಿ ಸೂರ್ಯನ ಪ್ರತಿಬಿಂಬವನ್ನು ಕಾಣಲಾರೆವು. ಅದಕ್ಕೆ ನಿರ್ಮಲ ಸರೋವರವೇ ಬೇಕಾಗುವಂತೆ ಭಗವಂತನನ್ನು ಕಾಣಲು ನಿರ್ಮಲಹೃದಯ ಬೇಕು. ಕರ್ಮಣಾ ಜ್ಞಾ] ನಮಾತನೋತಿ | ಕರ್ಮದ ಆಚರಣೆಯಿಂದ ಹೃದಯ ಕೈರ್ಮಲ್ಯ ಸಿದ್ಧಿಸುವುದು. ಸತ್‌ಕರ್ಮ ಗಳನ್ನು ಆಚರಿಸುತ್ತಿ ರುವಾಗ ಮನೋದೋಷಗಳು ಹುಟ್ಟಲು ಅವಕಾಶವೇ ಆಗುವುದಿಲ್ಲ. ಮನಸ್ಸು ಅದರಿಂದ ಉತ್ತಮ ಸಂಸ್ಕಾರವನ್ನೇ ಪಡೆಯುವುದು. ದೇಶದ. ಸ್ವಾತಂತ್ರ್ಯಾಂದೋಲನದ " ಸಂದರ್ಭದಲ್ಲಿ ಇದ್ದ ಶುದ್ಧ ವಾತಾವರಣವನ್ನು ಇಂದು ನಾವು ಕಾಣುತ್ತಿಲ್ಲ. ಹಣ, ಅಧಿಕಾರ ಮುಂತಾದ ಆಕರ್ಷಣೆಗಳಿಲ್ಲದೆ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವಾಗ ಜನರಲ್ಲಿ ಇದ್ದ ನಿರ್ಮಲಮನೋಭಾವದ ಕಲ್ಪನೆಯನ್ನೇ ನಾವು ಈಗಮಾಡಲಾರದವರಾಗಿರು ವೆವು. ಇನ್ನೂ ಸ್ವಾತಂತ್ರ್ಯವುತಡವಾಗಿಸಿಗುತ್ತಿದ್ದರೆ ಆಗುತ್ತಿತ್ತೇನೋ ಎನ್ನುವಷ್ಟು ಸ್ವಾರ್ಥವರತೆ ಇಂದು ಬೆಳೆದಿದೆ. ನಿಷ್ಕಾಮನೆಯಿಂದ ಸತ್‌ಕರ್ಮಗಳನ್ನು ಆಚರಿಸುತ್ತ ಹೃದಯ ಶುದ್ಧಿಯ ತುತ್ತ ತುದಿಯನ್ನು ಏರಿದ ಮೇಲೆ ಧ್ಯಾನಸಾಕ್ಷಾ ತ್ಯಾರಗಳಿಗೆ ಆತನು ಅರ್ಹನಾಗುವನು. ಈ ಶ್ಲೋಕದಲ್ಲಿ ನಿರ್ವೇದವೆಂದರೆ ವೈರಾಗ್ಯವಲ್ಲ. ತಾನು ಸಂವಾದಿಸಿದ ಜ್ಞಾನದಲ್ಲೇ ವೈರಾಗ್ಯವನ್ನು ಹೊಂದಬೇಕೆನ್ನುವ ಅರ್ಥವು ಆವಾತವಾಗಿ ಕಾಣಿಸುತ್ತದೆ. ವಿಷಯಗಳಲ್ಲಿ ವೈರಾಗ್ಯದ ಬದಲು, ಶಾಸ್ತ್ರೀಯ ಜ್ಞಾನದಲ್ಲಿ ವೈರಾಗ್ಯವನ್ನು ಕೃಷ್ಣನು ಬೋಧಿಸುವನೆ? ಈ ಅರ್ಥ ವಚಿತ್ರವೆನಿಸುವುದು. ತಸ್ಮಾ ದ್ಬಾಹ್ಮ ಣಃ ಪಾಂಡಿತ್ಯಂ ನಿರ್ವಿದ್ಯ.... [ ಎಂದು ಬೃಹದಾರಣ್ಯಕದಲ್ಲಿ ಲಾಭ ಎಂಬ ಅರ್ಥದಲ್ಲಿ ನಿರ್ವೇದ ಶಬ್ದವನ್ನು ಬಳಸಲಾಗಿದೆ. ಅಂತಃಕರಣಶುದ್ಧಿಯಾಗಿ ಅನ್ಯಥಾಜ್ಞಾನವನ್ನು ದಾಟಿದಾಗಲೇ ನಮ್ಮ ಎಲ್ಲ ಅಧ್ಯಯನದ ಲಾಭವನ್ನು ನಾವು ಪಡೆಯುವೆವು ಎಂದು ಇದರ ತಾತ್ಚರ್ಯವಾಗಿದೆ. ಈ ಪ್ರಕಾರ ಕರ್ಮಾಚರಣೆಯಿಂದ ಜ್ಞಾನವನ್ನು ಪಡೆದವನು ಪುಣ್ಯ ಪಾಪಗಳೆರಡನ್ನೂ ದಾಟುವನು: ಬುದ್ಧಿಯುಕ್ತೋ ಜಹಾತೀಹ ಉಭೇ ಸುಕೃತದುಷ್ಯತೇ । ಇಲ್ಲಿ ಪುಣ್ಯವನ್ನೂ ತೊರೆಯುತ್ತಾನೆಂಬುದನ್ನು ಕೇಳಿ ಸ್ವಲ್ಪ ಆಶ್ಚರ್ಯವೆನಿಸಬಹುದು. ಸತ್ಯರ್ಮವನ್ನು ಆಚರಿಸುವುದರಿಂದ ಉಂಟಾಗುವ ಭಗವದನುಗ್ರಹವೇಪುಣ್ಯ. ಇಂತಹ ಪುಣ್ಯವು ಮುಕ್ತಿಗೆ ಅವಶ್ಯಕವಾಗಿರುವಾಗ ಅದರ ಮೋಚನವನ್ನು ಗೀತೆಯು ಯಾಕೆ ಹೇಳುತ್ತದೆ? ಪುಣ್ಯಗಳಲ್ಲಿ ಎರಡು ಪ್ರಭೇದಗಳಿವೆ. ಪುಣ್ಯಗಳೆಲ್ಲವೂ ಸುಖವನ್ನು ನೀಡುವವಾದರೂ ಕಾಮನೆ ಯಿಂದ ನಾವು ಮಾಡುವ ಕರ್ಮದ ಫಲವಾಗಿ ಸಾಂಸಾರಿಕ ಸುಖವೇ ದೊರೆಯುತ್ತದೆ. ಇಂತಹ ಪುಣ್ಯಗಳು ಮುಕ್ತಿಯಿಂದ ನಮ್ಮನ್ನು ದೂರ ತಳ್ಳುವುದರಿಂದ ಇವುಗಳನ್ನು ಅನಿಷ್ಟ ಪುಣ್ಯಗಳೆಂದೇ ಕರೆಯುವರು. ನಿಷ್ಕುಮಕರ್ಮ, ಉಪಾಸನೆ ಇವುಗಳಿಂದ ನಾವು ವಡೆಯುವ ಪುಣ್ಯಗಳು ಆತ್ಮವಿಕಾಸಕ್ಕೆ ಸಾಧನಗಳಾಗಿ ಮುಕ್ತಿಪಥದಲ್ಲಿ ನಮ್ಮನ್ನು ಕರೆದೊಯ್ಯುವವು. ಅನಿಷ್ಟಪುಣ್ಯಗಳಿಂದ ವಿಮೋಚನೆ ಹೊಂದುವುದು ನಮಗೆ ಅಪೇಕ್ಷಿತವಿರುವು ದರಿಂದ ಗೀತೆಯು ಅದನ್ನೇ ನಿರೂಪಿಸಿದೆ. ಚುನಾವಣೆಯಲ್ಲಿ ಆರಿಸಿಬಂದು ಮಂತ್ರಿಪದವಿ ಮೊದಲಾದದ್ದು ದೊರೆಯಬೇಕಾದರೆಸರಕಾರಿ ನೌಕರಿ, ಸರಕಾರಿ ಕಾಂಟ್ರಾಕ್ಟ್‌ ಮೊದಲಾದವು ಇರಬಾರದು. ಅವುಗಳನ್ನು ತ್ಯಾಗ ಮಾಡಿಯೇ ಚುನಾವಣೆಗೆ ನಿಲ್ಲಬೇಕಾಗುತ್ತದೆ. ಅನಿಷ್ಟಪುಣ್ಯಗಳೂ ಇವುಗಳಂತೆಯೇ ಮುಕ್ತಿಗೆ ಪ್ರತಿಬಂಧಕಗಳಾಗಿರುವವು. ಪರೋಕ್ಷಜ್ಞಾನ ಹಾಗೂ ಅಪರೋಕ್ಸಜ್ಗಾನವೆಂದು ಜ್ಞಾನವನ್ನು ಎರಡು ವಿಧವಾಗಿ ನಾವು ಪರಿಗಣಿಸಬೇಕು. ಗುರುಗಳ ಉಪದೇಶದಿಂದ, ಯುಕ್ತಿಯಿಂದ, ಶಾಸ್ತ್ರಗಳಿಂದಪಡೆಯುವ ಜ್ಞಾನವು ಪರೋಕ್ಷಜ್ಞಾನ. ಕರ್ಮಾಚರಣೆಯಿಂದ ಈ ಜ್ಞಾನವು ಪರಿನಿಷ್ಠಿತವಾಗುವುದು, ಸುದೃಢವಾಗುವುದು. ಇಂತಹ ಜ್ಞಾನವನ್ನು ಪಡೆದನಂತರ ನಾವು ಭಗವಂತನ ಪ್ರತ್ಯಕ್ಷ ಜ್ಞಾನವನ್ನು ಹೊಂದಬಯಸುವೆವು. ಶಬ್ದ ಯುಕ್ತಿಗಳ ಸಹಾಯವಿಲ್ಲದೆಸಾಕ್ನಾತ್‌ ಪರಮಾತ್ಮನನ್ನು ಕಾಣಬೇಕೆಂದು ಹಂಬಲಿಸುವೆವು. ಧ್ಯಾನ, ಸಮಾಧಿಗಳನ್ನು ನಡೆಸಿದರೆ ಈ ಭಗವದ್‌ ದರ್ಶನವಾಗುವುದು. ಇದನ್ನೇ ಅಪರೋಕ್ಷ ಜ್ಞಾನವೆಂದೂ ಸಾಕ್ಟಾತ್ಯಾರವೆಂದೂ ಕರೆಯಲಾಗುತ್ತದೆ. ವರೋಕ್ಷಜ್ಞಾನವು ಸುದೃಢವಾಗಿ ನಮ್ಮ ಹೃದಯದಲ್ಲಿ ಬೇರೂರಲು ನಿಷ್ಕುಮಕರ್ಮವು ಆವಶ್ಯಕವಿದ್ದಂತೆ ಪರೋಕ್ಷಜ್ಞಾನಾನಂತರ ಅಪರೋಕ್ಷಜ್ಜಾನಕ್ಕಾಗಿ ಸಮಾಧಿಯ ಹಿನ್ನೆಲೆಯು ರೂಪಿತವಾಗಲಿಕ್ಕೂನಿಷ್ಕುಮ ಕರ್ಮದ ಆವಶ್ಯಕತೆ ಇದೆ. ವಸ್ತ್ರವನ್ನು ಬರಿ ನೀರಿನಲ್ಲಿ ಮುಳುಗಿಸುವುದರಿಂದ ಅದು ನಿರ್ಮಲವಾಗಲಾರದು; ನೀರಿನಲ್ಲಿ ಮುಳುಗಿಸಿ ಒಗೆಯುವುದರಿಂದಲೇ ಅದುಸ್ವಚ್ಛವಾಗುವಂತೆ, ಹೃದಯವೂನಿರ್ಮಲವಾಗಲು ಬರಿಪರೋಕ್ಷಣ್ನಾನವು ಸಾಲದು. ಪರೋಕ್ಷಜ್ಗಾನವನ್ನು ಪಡೆದು ಅದರ ಜೊತೆಗೆ ನಿಷ್ಕುಮಕರ್ಮವನ್ನು ಆಚರಿಸಿದಾಗಲೇ ಸಮಾಧಿಗೆ ಬೇಕಾದ ಹೃದಯಪರಿಪಾಕವಾಗುವುದು. ಅನಂತರ ಅಲ್ಲಿ ಭಗವಂತನ ಚಿತ್ರವನ್ನು ಸುಂದರವಾಗಿ ಮೂಡಿಸಬಹುದು. ಹೀಗೆ ಪರೋಕ್ಷಜ್ಞಾನ ಹಾಗೂ ಅಪರೋಕ್ಷಜ್ಗಾನಗಳೆರಡಕ್ಕೂ ನಿಷ್ಕುಮಕರ್ಮವು ಮುಖ್ಯ ಸಾಧನವಾಗಿರುವುದನ್ನು ನಾವು ಮನಗಾಣಬೇಕು. ಅಪರೋಕ್ಷ ಜ್ಞಾನವಾಗಿ ಬ್ರಹ್ಮದರ್ಶನದ ಪರಮಾನಂದದಲ್ಲಿ ಮಗ್ನನಾದವನಿಗೆ ಹೊರಗಿನ ಪರಿವೆಯೇ ಇರುವುದಿಲ್ಲ. ಬಾಹ್ಯವಾದ ಯಾವುದೇ ಶಬ್ದ ಸ್ಫೋಟಗಳಿಂದ ಅವನಿಗೆ ಎಚ್ಚರವಾಗಲಾರದು. ಇಂತಹ ವ್ಯಕ್ತಿಯನ್ನು ""ಸ್ಥಿತಪ್ರಜ್ಞ''ನೆಂದು ಕರೆಯುವರು.
Bannanje Govindacharya (1936–2020)Bhagavad Gita Pravachana
ಬುದ್ಧಿಯುಕ್ತಃ ಜಹಾತಿ ಇಹ ಉಭೇ ಸುಕೃತದುಷ್ಕೃತೇ | ತಸ್ಮಾತ್‌ ಯೋಗಾಯ ಯುಜ್ಯಸ್ವ ಯೋಗಃ ಕರ್ಮಸು ಕೌಶಲಮ್‌- ಭಗವಂತನನ್ನರಿತವನು ಬೇಡವಾದ ಪುಣ್ಯಪಾಪಗಳೆರಡನ್ನೂ ಇಲ್ಲೇ ತೊರೆಯುತ್ತಾನೆ. ಆದ್ದರಿಂದ ಅರಿವಿನ 'ಯೋಗ'ಕ್ಕೆ ತೊಡಗು. 'ಯೋಗ'ವೆಂದರೆ ಇದೇ: ತಿಳಿದು ಮಾಡುವ ಜಾಣತನ. ತಿಳುವಳಿಕೆಯಿಂದ ಕರ್ಮ ಮಾಡಿದರೆ ತನ್ನ ಎಲ್ಲಾ ಪಾಪಗಳನ್ನು ಹಾಗೂ ಬೇಡವಾದ ಪುಣ್ಯವನ್ನು ತೊರೆದು ಭಗವಂತನನ್ನು ಸೇರುತ್ತಾನೆ. ಇಲ್ಲಿ ಬೇಡವಾದ ಪುಣ್ಯ ಅಂದರೆ: ಉದಾಹರಣೆಗೆ ಒಬ್ಬ ಮಹಾತ್ಮ ತನ್ನ ಜ್ಞಾನ ಕರ್ಮಗಳಿಂದ ಮೋಕ್ಷವನ್ನು ಪಡೆಯುತ್ತಾನೆ. ಹೀಗೆ ಈ ಮಾರ್ಗದಲ್ಲಿರುವಾಗ ಆತ ಇತರ ಪುಣ್ಯವನ್ನೂ ಗಳಿಸುತ್ತಾನೆ. ಒಂದು ವೇಳೆ ಆತ ಚಕ್ರವರ್ತಿಯಾಗಿ ಮೆರೆಯುವ ಪುಣ್ಯವನ್ನು ಪಡೆದಿದ್ದರೆ ಅದು ಆತನಿಗೆ ಬೇಡವಾದ ಪುಣ್ಯ. ಏಕೆಂದರೆ ಮೋಕ್ಷದ ಮುಂದೆ ಈ ಪುಣ್ಯದ ಅವಶ್ಯಕತೆ ಆತನಿಗಿಲ್ಲ. ಆತ ಈ ಪುಣ್ಯವನ್ನು ಇಲ್ಲೇ ತೊರೆಯುತ್ತಾನೆ. ಇದನ್ನು ಇಲ್ಲಿ ಬೇಡವಾದ ಪುಣ್ಯ ಎಂದಿರುವುದು. ಯಾರು ಹೀಗೆ ಭಗವತ್ರಜ್ಞೆಯಲ್ಲಿ ಬದುಕುತ್ತಾರೋ ಅವರು ಮಾಡಿದ ಕರ್ಮ ಅವರ ಪಾಪ ಪುಣ್ಯದ ಬಂಧನಕ್ಕೆ ಕಾರಣವಾಗುವುದಿಲ್ಲ. ಆದ್ದರಿಂದ ಜ್ಞಾನಯೋಗದಲ್ಲಿ ನಿಂತು ಆ ಅರಿವಿನಿಂದ ಕರ್ಮವನ್ನು ಮಾಡುವುದು ಜಾಣತನ.
Bibek Debroy (1955–2024)The Bhagavad Gita
(50) ‘He who has this wisdom discards good action and evil action in this life itself. Therefore, use yoga in what you do. Yoga is the skill of action.’