कर्मजं बुद्धियुक्ता हि फलं त्यक्त्वा मनीषिणः ।
जन्मबन्धविनिर्मुक्ताः पदं गच्छन्त्यनामयम् ॥
karmajaṃ buddhiyuktā hi phalaṃ tyaktvā manīṣiṇaḥ |
janmabandhavinirmuktāḥ padaṃ gacchantyanāmayam ||
Swami Sivananda (1887–1963)Bhagavad Gita
51. The wise, possessed of knowledge, having abandoned the fruits of their actions, and
being freed from the fetters of birth, go to the place which is beyond all evil.
COMMENTARY: Clinging to the fruits of actions is the cause of rebirth. Man has to take a
body to enjoy them. If actions are done for the sake of God, without desire for the fruits, one is
released from the bonds of birth and death and attains to immortal bliss.
Sri Vishwesha Tirtharu (1931–2019)Gitasaroddhara
2.50–2.52 · ನಿಷ್ಕಾಮಕರ್ಮದ ಫಲ
ನಿಷ್ಕಾಮಕರ್ಮದ ಫಲ
ಈ ನಿಷ್ಕಾಮಕರ್ಮವನ್ನು ಎಷ್ಟು ಸಮಯದವರೆಗೆ ನಾವು ಮಾಡಬೇಕು?
ಇದು ಮುಂದಿನಪ್ರಶ್ತೆ.
ಯದಾತೇ ಮೋಹಕಲಿಲಂ
ಬುದ್ಧಿರ್ವ್ಯತಿತರಿಷ್ಯತಿ ।
ತದಾ ಗಂತಾಸಿ ನಿರ್ವೇದಂ
ಶ್ರೋತವ್ಯಸ್ಯ ಶ್ರುತಸ್ಯ ಚ ॥
ಅಂತಃಕರಣಶುದ್ಧಿ ಮಿಥ್ಯಾಜ್ಞಾನದ ನಿವೃತ್ತಿ ಹಾಗೂ ತತ್ತ್ವಜ್ಞಾನದ
ಉದಯ ಆಗುವವರೆಗೆ ಈ ಕರ್ಮಾಚರಣೆಯು ನಡೆಯಬೇಕು. ಧ್ಯಾನ ಮತ್ತು
ಸಾಕ್ಬಾತ್ಕಾರಗಳಾಗಲು ಅಂತಃಕರಣದ ವಾವಿತ್ರ್ಯವು ಆವಶ್ಯಕ, ರಾಗದ್ವೇಷಗಳಿಂದ
ಕಲುಷಿತವಾದ ಮನಸ್ಸಿನಲ್ಲಿ ಪರಮಾತ್ಮನು ಪ್ರತಿಬಿಂಬಿತನಾಗಲಾರನು.
ಅಲೆಗಳಿಂದ ಚಲವಿಚಲವೂ ಕಲುಷಿತವೂ ಆದ ನೀರಿನಲ್ಲಿ ಸೂರ್ಯನ
ಪ್ರತಿಬಿಂಬವನ್ನು ಕಾಣಲಾರೆವು. ಅದಕ್ಕೆ ನಿರ್ಮಲ ಸರೋವರವೇ ಬೇಕಾಗುವಂತೆ
ಭಗವಂತನನ್ನು ಕಾಣಲು ನಿರ್ಮಲಹೃದಯ ಬೇಕು.
ಕರ್ಮಣಾ ಜ್ಞಾ] ನಮಾತನೋತಿ |
ಕರ್ಮದ ಆಚರಣೆಯಿಂದ ಹೃದಯ ಕೈರ್ಮಲ್ಯ ಸಿದ್ಧಿಸುವುದು. ಸತ್ಕರ್ಮ
ಗಳನ್ನು ಆಚರಿಸುತ್ತಿ ರುವಾಗ ಮನೋದೋಷಗಳು ಹುಟ್ಟಲು ಅವಕಾಶವೇ
ಆಗುವುದಿಲ್ಲ. ಮನಸ್ಸು ಅದರಿಂದ ಉತ್ತಮ ಸಂಸ್ಕಾರವನ್ನೇ ಪಡೆಯುವುದು.
ದೇಶದ. ಸ್ವಾತಂತ್ರ್ಯಾಂದೋಲನದ " ಸಂದರ್ಭದಲ್ಲಿ ಇದ್ದ ಶುದ್ಧ
ವಾತಾವರಣವನ್ನು ಇಂದು ನಾವು ಕಾಣುತ್ತಿಲ್ಲ. ಹಣ, ಅಧಿಕಾರ ಮುಂತಾದ
ಆಕರ್ಷಣೆಗಳಿಲ್ಲದೆ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವಾಗ ಜನರಲ್ಲಿ ಇದ್ದ
ನಿರ್ಮಲಮನೋಭಾವದ ಕಲ್ಪನೆಯನ್ನೇ ನಾವು ಈಗಮಾಡಲಾರದವರಾಗಿರು
ವೆವು. ಇನ್ನೂ ಸ್ವಾತಂತ್ರ್ಯವುತಡವಾಗಿಸಿಗುತ್ತಿದ್ದರೆ ಆಗುತ್ತಿತ್ತೇನೋ ಎನ್ನುವಷ್ಟು
ಸ್ವಾರ್ಥವರತೆ ಇಂದು ಬೆಳೆದಿದೆ. ನಿಷ್ಕಾಮನೆಯಿಂದ ಸತ್ಕರ್ಮಗಳನ್ನು
ಆಚರಿಸುತ್ತ ಹೃದಯ ಶುದ್ಧಿಯ ತುತ್ತ ತುದಿಯನ್ನು ಏರಿದ ಮೇಲೆ
ಧ್ಯಾನಸಾಕ್ಷಾ ತ್ಯಾರಗಳಿಗೆ ಆತನು ಅರ್ಹನಾಗುವನು.
ಈ ಶ್ಲೋಕದಲ್ಲಿ ನಿರ್ವೇದವೆಂದರೆ ವೈರಾಗ್ಯವಲ್ಲ. ತಾನು ಸಂವಾದಿಸಿದ
ಜ್ಞಾನದಲ್ಲೇ ವೈರಾಗ್ಯವನ್ನು ಹೊಂದಬೇಕೆನ್ನುವ ಅರ್ಥವು ಆವಾತವಾಗಿ
ಕಾಣಿಸುತ್ತದೆ. ವಿಷಯಗಳಲ್ಲಿ ವೈರಾಗ್ಯದ ಬದಲು, ಶಾಸ್ತ್ರೀಯ ಜ್ಞಾನದಲ್ಲಿ
ವೈರಾಗ್ಯವನ್ನು ಕೃಷ್ಣನು ಬೋಧಿಸುವನೆ? ಈ ಅರ್ಥ ವಚಿತ್ರವೆನಿಸುವುದು.
ತಸ್ಮಾ ದ್ಬಾಹ್ಮ ಣಃ ಪಾಂಡಿತ್ಯಂ ನಿರ್ವಿದ್ಯ.... [
ಎಂದು ಬೃಹದಾರಣ್ಯಕದಲ್ಲಿ ಲಾಭ ಎಂಬ ಅರ್ಥದಲ್ಲಿ ನಿರ್ವೇದ ಶಬ್ದವನ್ನು
ಬಳಸಲಾಗಿದೆ. ಅಂತಃಕರಣಶುದ್ಧಿಯಾಗಿ ಅನ್ಯಥಾಜ್ಞಾನವನ್ನು ದಾಟಿದಾಗಲೇ
ನಮ್ಮ ಎಲ್ಲ ಅಧ್ಯಯನದ ಲಾಭವನ್ನು ನಾವು ಪಡೆಯುವೆವು ಎಂದು ಇದರ
ತಾತ್ಚರ್ಯವಾಗಿದೆ.
ಈ ಪ್ರಕಾರ ಕರ್ಮಾಚರಣೆಯಿಂದ ಜ್ಞಾನವನ್ನು ಪಡೆದವನು ಪುಣ್ಯ
ಪಾಪಗಳೆರಡನ್ನೂ ದಾಟುವನು:
ಬುದ್ಧಿಯುಕ್ತೋ ಜಹಾತೀಹ
ಉಭೇ ಸುಕೃತದುಷ್ಯತೇ ।
ಇಲ್ಲಿ ಪುಣ್ಯವನ್ನೂ ತೊರೆಯುತ್ತಾನೆಂಬುದನ್ನು ಕೇಳಿ ಸ್ವಲ್ಪ
ಆಶ್ಚರ್ಯವೆನಿಸಬಹುದು. ಸತ್ಯರ್ಮವನ್ನು ಆಚರಿಸುವುದರಿಂದ ಉಂಟಾಗುವ
ಭಗವದನುಗ್ರಹವೇಪುಣ್ಯ. ಇಂತಹ ಪುಣ್ಯವು ಮುಕ್ತಿಗೆ ಅವಶ್ಯಕವಾಗಿರುವಾಗ
ಅದರ ಮೋಚನವನ್ನು ಗೀತೆಯು ಯಾಕೆ ಹೇಳುತ್ತದೆ? ಪುಣ್ಯಗಳಲ್ಲಿ ಎರಡು
ಪ್ರಭೇದಗಳಿವೆ. ಪುಣ್ಯಗಳೆಲ್ಲವೂ ಸುಖವನ್ನು ನೀಡುವವಾದರೂ ಕಾಮನೆ
ಯಿಂದ ನಾವು ಮಾಡುವ ಕರ್ಮದ ಫಲವಾಗಿ ಸಾಂಸಾರಿಕ ಸುಖವೇ
ದೊರೆಯುತ್ತದೆ. ಇಂತಹ ಪುಣ್ಯಗಳು ಮುಕ್ತಿಯಿಂದ ನಮ್ಮನ್ನು ದೂರ
ತಳ್ಳುವುದರಿಂದ ಇವುಗಳನ್ನು ಅನಿಷ್ಟ ಪುಣ್ಯಗಳೆಂದೇ ಕರೆಯುವರು.
ನಿಷ್ಕುಮಕರ್ಮ, ಉಪಾಸನೆ ಇವುಗಳಿಂದ ನಾವು ವಡೆಯುವ ಪುಣ್ಯಗಳು
ಆತ್ಮವಿಕಾಸಕ್ಕೆ ಸಾಧನಗಳಾಗಿ ಮುಕ್ತಿಪಥದಲ್ಲಿ ನಮ್ಮನ್ನು ಕರೆದೊಯ್ಯುವವು.
ಅನಿಷ್ಟಪುಣ್ಯಗಳಿಂದ ವಿಮೋಚನೆ ಹೊಂದುವುದು ನಮಗೆ ಅಪೇಕ್ಷಿತವಿರುವು
ದರಿಂದ ಗೀತೆಯು ಅದನ್ನೇ ನಿರೂಪಿಸಿದೆ. ಚುನಾವಣೆಯಲ್ಲಿ ಆರಿಸಿಬಂದು
ಮಂತ್ರಿಪದವಿ ಮೊದಲಾದದ್ದು ದೊರೆಯಬೇಕಾದರೆಸರಕಾರಿ ನೌಕರಿ, ಸರಕಾರಿ
ಕಾಂಟ್ರಾಕ್ಟ್ ಮೊದಲಾದವು ಇರಬಾರದು. ಅವುಗಳನ್ನು ತ್ಯಾಗ ಮಾಡಿಯೇ
ಚುನಾವಣೆಗೆ ನಿಲ್ಲಬೇಕಾಗುತ್ತದೆ. ಅನಿಷ್ಟಪುಣ್ಯಗಳೂ ಇವುಗಳಂತೆಯೇ ಮುಕ್ತಿಗೆ
ಪ್ರತಿಬಂಧಕಗಳಾಗಿರುವವು.
ಪರೋಕ್ಷಜ್ಞಾನ ಹಾಗೂ ಅಪರೋಕ್ಸಜ್ಗಾನವೆಂದು ಜ್ಞಾನವನ್ನು ಎರಡು
ವಿಧವಾಗಿ ನಾವು ಪರಿಗಣಿಸಬೇಕು. ಗುರುಗಳ ಉಪದೇಶದಿಂದ, ಯುಕ್ತಿಯಿಂದ,
ಶಾಸ್ತ್ರಗಳಿಂದಪಡೆಯುವ ಜ್ಞಾನವು ಪರೋಕ್ಷಜ್ಞಾನ. ಕರ್ಮಾಚರಣೆಯಿಂದ ಈ
ಜ್ಞಾನವು ಪರಿನಿಷ್ಠಿತವಾಗುವುದು, ಸುದೃಢವಾಗುವುದು. ಇಂತಹ ಜ್ಞಾನವನ್ನು
ಪಡೆದನಂತರ ನಾವು ಭಗವಂತನ ಪ್ರತ್ಯಕ್ಷ ಜ್ಞಾನವನ್ನು ಹೊಂದಬಯಸುವೆವು.
ಶಬ್ದ ಯುಕ್ತಿಗಳ ಸಹಾಯವಿಲ್ಲದೆಸಾಕ್ನಾತ್ ಪರಮಾತ್ಮನನ್ನು ಕಾಣಬೇಕೆಂದು
ಹಂಬಲಿಸುವೆವು. ಧ್ಯಾನ, ಸಮಾಧಿಗಳನ್ನು ನಡೆಸಿದರೆ ಈ ಭಗವದ್
ದರ್ಶನವಾಗುವುದು. ಇದನ್ನೇ ಅಪರೋಕ್ಷ ಜ್ಞಾನವೆಂದೂ ಸಾಕ್ಟಾತ್ಯಾರವೆಂದೂ
ಕರೆಯಲಾಗುತ್ತದೆ. ವರೋಕ್ಷಜ್ಞಾನವು ಸುದೃಢವಾಗಿ ನಮ್ಮ ಹೃದಯದಲ್ಲಿ
ಬೇರೂರಲು ನಿಷ್ಕುಮಕರ್ಮವು ಆವಶ್ಯಕವಿದ್ದಂತೆ ಪರೋಕ್ಷಜ್ಞಾನಾನಂತರ
ಅಪರೋಕ್ಷಜ್ಜಾನಕ್ಕಾಗಿ ಸಮಾಧಿಯ ಹಿನ್ನೆಲೆಯು ರೂಪಿತವಾಗಲಿಕ್ಕೂನಿಷ್ಕುಮ
ಕರ್ಮದ ಆವಶ್ಯಕತೆ ಇದೆ. ವಸ್ತ್ರವನ್ನು ಬರಿ ನೀರಿನಲ್ಲಿ ಮುಳುಗಿಸುವುದರಿಂದ
ಅದು ನಿರ್ಮಲವಾಗಲಾರದು; ನೀರಿನಲ್ಲಿ ಮುಳುಗಿಸಿ ಒಗೆಯುವುದರಿಂದಲೇ
ಅದುಸ್ವಚ್ಛವಾಗುವಂತೆ, ಹೃದಯವೂನಿರ್ಮಲವಾಗಲು ಬರಿಪರೋಕ್ಷಣ್ನಾನವು
ಸಾಲದು. ಪರೋಕ್ಷಜ್ಗಾನವನ್ನು ಪಡೆದು ಅದರ ಜೊತೆಗೆ ನಿಷ್ಕುಮಕರ್ಮವನ್ನು
ಆಚರಿಸಿದಾಗಲೇ ಸಮಾಧಿಗೆ ಬೇಕಾದ ಹೃದಯಪರಿಪಾಕವಾಗುವುದು. ಅನಂತರ
ಅಲ್ಲಿ ಭಗವಂತನ ಚಿತ್ರವನ್ನು ಸುಂದರವಾಗಿ ಮೂಡಿಸಬಹುದು. ಹೀಗೆ
ಪರೋಕ್ಷಜ್ಞಾನ ಹಾಗೂ ಅಪರೋಕ್ಷಜ್ಗಾನಗಳೆರಡಕ್ಕೂ ನಿಷ್ಕುಮಕರ್ಮವು
ಮುಖ್ಯ ಸಾಧನವಾಗಿರುವುದನ್ನು ನಾವು ಮನಗಾಣಬೇಕು. ಅಪರೋಕ್ಷ
ಜ್ಞಾನವಾಗಿ ಬ್ರಹ್ಮದರ್ಶನದ ಪರಮಾನಂದದಲ್ಲಿ ಮಗ್ನನಾದವನಿಗೆ ಹೊರಗಿನ
ಪರಿವೆಯೇ ಇರುವುದಿಲ್ಲ. ಬಾಹ್ಯವಾದ ಯಾವುದೇ ಶಬ್ದ ಸ್ಫೋಟಗಳಿಂದ
ಅವನಿಗೆ ಎಚ್ಚರವಾಗಲಾರದು. ಇಂತಹ ವ್ಯಕ್ತಿಯನ್ನು ""ಸ್ಥಿತಪ್ರಜ್ಞ''ನೆಂದು
ಕರೆಯುವರು.
Bannanje Govindacharya (1936–2020)Bhagavad Gita Pravachana
ಕರ್ಮಜಮ್ ಬುದ್ಧಿಯುಕ್ತಾಃ ಹಿ ಫಲಮ್ ತ್ಯಕ್ತ್ವಾ ಮನೀಷಿಣಃ |
ಜನ್ಮಬಂಧ ವಿನಿರ್ಮುಕ್ತಾಃ ಪದಮ್ ಗಚ್ಛಂತಿ ಅನಾಮಯಮ್ --ಬಲ್ಲವರು ಭಗವಂತನ ಅರಿವು ಪಡೆದು, ಕರ್ಮ
ಫಲದ ಹೊಣೆಯನ್ನು ಅವನಿಗೊಪ್ಪಿಸಿ, ಹುಟ್ಟು ಸಾವಿನ ಕಟ್ಟು ಕಳಚಿಕೊಂಡು, ಕ್ಷೇಶರಹಿತವಾದ ಪದವನ್ನು
ಪಡೆಯುತ್ತಾರೆ.
ನಿಜವಾದ ಮನಿಷಿಗಳು ತಮ್ಮ ಮನಸ್ಸನ್ನು ತಾವೇ ನಿಯಂತ್ರಿಸಿಕೊಳ್ಳಬಲ್ಲ ಜಿತೇಂದ್ರಿಯರು. ಆತ್ಮಸಂಯಮ
ಇರುವ ಜ್ಞಾನದ ಮಾರ್ಗದಲ್ಲಿ ಸಾಗಿ ಆ ಅರಿವನ್ನು ಪಡೆದವರು. ಬುದ್ಧಿವಂತರಾದ ಜ್ಞಾನಿಗಳು ಕರ್ಮದಿಂದ
ಬರತಕ್ಕಂತಹ ಫಲದ ಮೋಹವನ್ನು(೩120087601) ಬಿಟ್ಟು ಅದನ್ನು ಭಗವಂತನಿಗೆ ಅರ್ಪಿಸುತ್ತಾರೆ. ಹೀಗೆ ಯಾರು
ಕರ್ಮ ಫಲವನ್ನು ಭಗವಂತನಿಗೆ ಅರ್ಪಣ ಬುದ್ಧಿಯಿಂದ ತ್ಯಾಗ ಮಾಡಿ ನಿರ್ವಂಚನೆಯಿಂದ ಕರ್ಮ
ಮಾಡುತ್ತಾರೊ, ಅವರು. ಕರ್ಮ ಮಾಡಿದರೂ ಕರ್ಮಬಂಧನಕ್ಕೊಳಪಡದೇ, ಎಲ್ಲಾ ಬಂಧನವನ್ನು
ಕಳಚಿಕೊಂಡು, ದೋಷ ರಹಿತವಾದ ಮೋಕ್ಷವನ್ನು ಪಡೆಯುತ್ತಾರೆ. ಆದ್ದರಿಂದ ಕರ್ತವ್ಯ ಕರ್ಮವನ್ನು ಭಗವಂತನ
ಆರಾಧನೆ ಎಂದು ಮಾಡಿ ಮೋಕ್ಷ ಪಡೆಯಬೇಕು. ಇದನ್ನು ಹೊರತುಪಡಿಸಿ. 'ನಾನು ಜ್ಞಾನಿ, ನಾನೇನೂ
ಮಾಡಲಾರೆ' ಎನ್ನುವ ಧೋರಣೆ ಸರಿಯಲ್ಲ.
Bibek Debroy (1955–2024)The Bhagavad Gita
(51)
‘The learned, who have this wisdom, abandon the fruit of action and are
freed from the fetters of birth. They certainly attain that place which is
bereft of all blemishes.’