यद्यदाचरति श्रेष्ठस्तत्तदेवेतरो जनः ।
स यत्प्रमाणं कुरुते लोकस्तदनुवर्तते ॥
yadyadācarati śreṣṭhastattadevetaro janaḥ |
sa yatpramāṇaṃ kurute lokastadanuvartate ||
Swami Sivananda (1887–1963)Bhagavad Gita
21. Whatsoever a great man does, that other men also do; whatever he sets up as the
standard, that the world follows.
Sri Vishwesha Tirtharu (1931–2019)Gitasaroddhara
3.1–3.35 · ಸ್ವಧರ್ಮೇ ನಿಧನಂ ಶ್ರೇಯಃ
ಸ್ವಧರ್ಮೇ ನಿಧನಂಶ್ರೇಯಃ
ಇನ್ನು ಅರ್ಜುನನ
ತತ್ಮಿಂ ಕಮ ಣಿ ಘೋರೇಮಾಂ
ನಿಯೋಜಯಸಿ.... ।
ಎಂಬ ಪ್ರಶ್ನೆ ಉಳಿದಿದೆ. ಕರ್ಮದ ಪ್ರಮಾಣವು ಕಡಿಮೆಯಾಗಿರುವ
ಸನಕಾದಿಗಳ ಜ್ಞಾನಯೋಗದ ಮಾರ್ಗವಿರುವಾಗ ಯುದ್ಧದ ಈ ಕಠೋರ
ಮಾರ್ಗವನ್ನು ಯಾಕೆತಾನು ಆರಿಸಬೇಕು? ಅರಣ್ಯದಲ್ಲಿ ಶಾಂತನಾಗಿದ್ದು ಜಪ,
ತಪಸ್ಸು ಮುಂತಾದ ಕರ್ಮಗಳನ್ನು ಆಚರಿಸಿಕೊಂಡು ಹಾಯಾಗಿ ಯಾಕೆ
ಇರಬಾರದು ಎಂದು ಅರ್ಜುನನು ಮಾಡಿದ ಪ್ರಶ್ನೆಗೆ ಉತ್ತರ ಕೊಡುವುದು
ಉಳಿದಿದೆ.
ಇದಕ್ಕೆ ಗೀತೆಯ ಸಮಾಧಾನವು ಹೀಗಿದೆ : ಪ್ರತಿಯೊಬ್ಬನಿಗೂ ಅನೇಕ
ಕರ್ತವ್ಯಮಾರ್ಗಗಳು ತೋರಬಹುದು. ಅವುಗಳಲ್ಲಿ ಯಾವುದು ತನ್ನ ಸ್ವಧರ್ಮ
ವೆಂಬುದನ್ನು ಅರಿತುಕೊಂಡು ಆ ಮಾರ್ಗದಲ್ಲಿ ನಡೆಯುವುದರಲ್ಲೇ ಅವನ
ಪುರುಷಾರ್ಥ ಅಡಗಿದೆ. ವ್ಯಕ್ತಿಯ ಸ್ವರೂಪ, ಯೋಗ್ಯತೆಯನ್ನು ಅನುಸರಿಸಿ
ಕರ್ತವ್ಯಗಳೂ ಬೇರೆಬೇರೆಯಾಗಿರುತ್ತವೆ. ನಮ್ಮ ವ್ಯಕ್ತಿಸ್ವರೂಪಕ್ಕನುಸರಿಸಿ ನಾವು
ಮಾಡಬೇಕಾದ ಕರ್ತವ್ಯವನ್ನು ನಿರ್ಧರಿಸಬೇಕು. ಶುಕ್ಕ ಸನಕಾದಿಗಳು
ಜ್ಞಾನಯೋಗವನ್ನು ಅನುಸರಿಸುವುದೂ ಮನು, ಜನಕ ಮೊದಲಾದವರು
ಕರ್ಮಯೋಗವನ್ನು ಅವಲಂಬಿಸಿರುವುದೂ ಅವರವರವ್ಯಕ್ತಿತ್ತವನ್ನು ಆಧರಿಸಿದ
ಸ್ವಧರ್ಮಗಳಿಗೆ ಅನುಸಾರವಾಗಿಯೇ ಆಗಿದೆ. ಅರ್ಜುನನದೂ ಜನಕಾದಿಗಳಂತೆ
ಕರ್ಮಯೋಗಕ್ಕೆ ಮೀನಲಾಗಿರಿಸಿದ್ದ ಜೀವನ. ಅವನ ವ್ಯಕ್ತಿತ್ವವೇ ಅಂತಹದು.
ಶಮಪ್ರಧಾನವಾದ ಯತಿಧರ್ಮವನ್ನು ಸ್ವೀಕರಿಸಿ ನಡೆಯುವ ಸ್ವರೂಪವು
ಅವನದಲ್ಲ. ಅವನು ಆಧಿಕಾರಿಕರೆಂದು ಪರಿಗಣಿಸಲಾದ ಜೀವರ ವರ್ಗದಲ್ಲಿ
ಸೇರಿದವನು. ಲೋಕದಲ್ಲಿಯ ದೌಷ್ಟ್ಯ ಅಧರ್ಮಗಳನ್ನು ನಿವಾರಿಸಿ
ಸಜ್ಜನರನ್ನು ಸಂರಕ್ಷಿಸಿ ಮುನ್ನಡೆಸುವ ಆಧಿಕಾರಿಕ ವ್ಯಕ್ತಿತ್ವವು ಅವನದಾಗಿದೆ. ತನ್ನ
ವ್ಯಕ್ತಿತ್ವಕ್ಕೆ ಅನುಗುಣವಾದ ಕರ್ತವ್ಯವನ್ನು ಬಿಟ್ಟು ಬೇರೆ ದಾರಿಯಲ್ಲಿ ನಡೆದರೆ
ಅದರಿಂದ ಅವನ ಪ್ರಗತಿಯಾಗಲಾರದು. ಹೀಗೆ ಪ್ರತಿಯೊಬ್ಬರ ವಿಷಯದಲ್ಲೂ
ವ್ಯಕ್ತಿಯ ಸ್ವರೂವವನ್ನು ಆಧರಿಸಿ ಕರ್ತವ್ಯವು ನಿರ್ಧರಿಸಲ್ಪಡುತ್ತದೆ.
ಅದರಂತೆ ಸಾಮಾಜಿಕ ಹೊಣೆಗಾರಿಕೆಯಿಂದ ಪ್ರಾಪ್ತವಾಗುವ
ವರ್ಣಾಶ್ರಮೋಚಿತ ಕರ್ತವ್ಯಗಳನ್ನು ನಾವು ನಿಷ್ಠೆಯಿಂದ ಅನುಸರಿಸಬೇಕು. ತನ್ನ
ನಿಜಸ್ವರೂಪವನ್ನು ಪರಿಶೀಲಿಸಿ ವ್ಯಕ್ತಿಧರ್ಮವನ್ನು ನಿರ್ಧರಿಸುವಂತೆ ಶಾಸ್ತ್ರಗಳಿಂದ
ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕ್ರಮಪ್ರಾಪ್ತವಾದ ನಮ್ಮ
ವರ್ಣಧರ್ಮಗಳನ್ನು ತಿಳಿದು ಅದರಂತೆ ನಡೆಯಬೇಕು. ಈ ವ್ಯಕ್ತಿಧರ್ಮ,
ವರ್ಣಧರ್ಮಗಳೆರಡೂ ಸ್ವಧರ್ಮಗಳಾಗಿದ್ದು ಈ ಎರಡೂ ದೃಷ್ಟಿಗಳಿಂದ
ಯತಿಧರ್ಮದ ಬದಲು ಕ್ಹಾತ್ರಧರ್ಮವನ್ನು ಅರ್ಜುನನು ಪರಿಗ್ರಹಿನ
ಬೇಕಾಗಿದೆ. ಸಂನ್ಯಾಸಧರ್ಮವಾಗಲಿ ಅರಣ್ಯಕ್ಕೆ ಹೋಗಿ ವಾನವ್ರಸ್ಥವೃತ್ತಿಯನ್ನು
ಅವಲಂಬಿಸುವುದಾಗಲಿ ಶ್ರೇಷ್ಠವೇ ಇರಬಹುದು. ಆದರೆ ದುಷ್ಟನಿಗ್ರಹ ಹಾಗೂ
ಧರ್ಮ ರಕ್ಷಣೆಯ ವಿಶಿಷ್ಟ ಹೊಣೆಗಾರಿಕೆಯನ್ನು ಹೊತ್ತ ಅರ್ಜುನನು ತನ್ನ ಈ
ಕರ್ತವ್ಯವನ್ನು ತೊರೆದು ಶ್ರೇಷ್ಠ ಮಾರ್ಗವೆಂದು ಸಂನ್ಯಾಸಿ ಅಥವಾ
ವಾನಪ್ರಸ್ಥನಾಗುವುದು ಉಚಿತವಾಗಲಾರದು. ಬೇರೆ ಅಧಿಕಾರ ಸ್ಥಾನಗಳಲ್ಲಿ
ನಿಯುಕ್ತರಾದವರು ತಮ್ಮ ಕರ್ತವ್ಯದಲ್ಲಿ ಅಲಕ್ಷ್ಯ ಮಾಡಿ ಬೇರೆ ಎಷ್ಟೇ
ಉಪಯುಕ್ತಕಾರ್ಯವನ್ನುನಡೆಸಿದರೂ ಅದು ಪ್ರಶಂಸನೀಯವೆನಿಸುವುದಿಲ್ಲ.
ಸೈನ್ಯ ಅಥವಾ ಆಡಳಿತದ ಕಾರ್ಯದಲ್ಲಿ ನಿಯುಕ್ತರಾದವರು ತಮ್ಮ ಕೆಲಸದ
ವೇಳೆಯಲ್ಲಿ ಪವಿತ್ರ ಕಾರ್ಯವೆಂದು ಧಾರ್ಮಿಕ ಗಂಥಗಳ ಅಧ್ಯಯನದಲ್ಲೇ
ತೊಡಗಿದರೆ ಅದು ಧರ್ಮವೆನಿಸಲಾರದು. ತನಗೆ ನಿಯೋಜಿಸಲ್ಪಟ್ಟ
ಕಾರ್ಯವನ್ನು ನಿಷ್ಠೆಯಿಂದ ಆಚರಿಸುವುದರಿಂದಲೇ ಮನುಷ್ಯನು ಶ್ರೇಷ್ಠ
ವ್ಯಕ್ತಿಯಾಗಬಲ್ಲನು. ಹೊರತು ಅವನು ಯಾವಕಾರ್ಯಮಾಡುತ್ತಿದ್ದಾನೆಂಬು
ದರಿಂದಲೇ ಅವನ ಮಹತ್ತ್ವವನ್ನು ನಿರ್ಧರಿಸಲಾರೆವು.
ಹೀಗೆಯೇವ್ಯಕ್ತಿಯ ವಿಶಿಷ್ಟ ಪರಿಸ್ಥಿತಿ, ಸಂದರ್ಭಗಳನ್ನು ಅನುಸರಿಸಿ ನಮ್ಮ
ಕರ್ತವ್ಯವನ್ನು ವಿವೇಚಿಸುವ ಪ್ರಸಂಗವೂ ನಮ್ಮ ಜೀವನದಲ್ಲಿ ಬರುತ್ತದೆ.
ನದಿಯಲ್ಲಿ ಒಬ್ಬನು ಮುಳುಗುತ್ತಿರುವಾಗ, ತೀರದಲ್ಲಿ ಜಪಮಾಡುತ್ತಿರುವವನು
ಜಪವನ್ನು ಬಿಟ್ಟು ಮುಳುಗುವವನನ್ನು ಮೇಲಕ್ಕೆತ್ತಲು ಪ್ರಯತ್ನಿಸುವುದೇ
ಧರ್ಮವೆನಿಸುವುದು. ಜಪವೇ ಶ್ರೇಷ್ಠವೆಂದು ಆತನು ಮೂಗು ಹಿಡಿದು ಕುಳಿತರೆ
ಅದು ಸರಿಯೆನಿಸುವುದೆ? ದೇವರ ಗುಡಿಗೆ ಹೋಗುವುದೇನೋ ಒಳ್ಳೆಯ
ಕಾರ್ಯವೇ; ಆದರೆ ಶಾಲೆಗೆ ಹೋಗುವುದನ್ನು ತಪ್ಪಿಸಿ ಹುಡುಗರು ದೇವರ
ಗುಡಿಗೆ ಹೋದರೆ ಅದನ್ನು ಯಾರೂ ಅಭಿನಂದಿಸಲಾರರು. ಮಕ್ಕಳಿಗಾಗಿ,
ಪತಿಗಾಗಿ ತಾನು ನಿರ್ವಹಿಸಬೇಕಾದ ಕೌಟುಂಬಿಕ ಕರ್ತವ್ಯಗಳನ್ನು ತೊರೆದು
ಮಹಿಳೆಯರು ಸಮಾಜಸೇವೆಯೆಂದು ಹೊರಗೇ ಅಡ್ಮಾಡುತ್ತಿದ್ದರೆ ಅದು
ಧರ್ಮ ಎನಿಸಲಾರದು.
ಮಹಾಭಾರತದಲ್ಲಿ ಧರ್ಮವ್ಯಾಧನ ಉಪಾಖ್ಯಾನದಲ್ಲಿ ಪ್ರತಿಯೊಬ್ಬನೂ
ತನ್ನ ಈ ವೈಯಕ್ತಿಕ ಹೊಣೆಗಾರಿಕೆಯನ್ನು ಪಾಲಿಸುವುದರ ಅವಶ್ಯಕತೆಯನ್ನು
ಒತ್ತಿಹೇಳಲಾಗಿದೆ. ತರುಣ ಬ್ರಾಹ್ಮಣ ಯುವಕನೊಬ್ಬನು ತನ್ನ ವೃದ್ಧ
ತಾಯಿತಂದೆಗಳಿಗೆ ಸಲ್ಲಿಸಬೇಕಾದ ಸೇವಾಕಾರ್ಯವನ್ನು ನಿರ್ವಹಿಸದೆ ಯಾವ
ರಕ್ಷಕರೂ ಇಲ್ಲದ ಅವರನ್ನು ಮನೆಯಲ್ಲೇ ಬಿಟ್ಟುತಾನು ತಪಸ್ವಿಯಾಗಬೇಕೆಂದು
ಅರಣ್ಯದಲ್ಲಿ ಇರುತ್ತಾನೆ. ಅನೇಕ ವರ್ಷಗಳವರೆಗೆ ತಪ್ಪಸ್ಸನ್ನು ಆಚರಿಸಿ
ಉಗ್ರಶಕ್ತಿಯನ್ನು ಪಡೆಯುತ್ತಾನೆ. ಒಮ್ಮೆ ಒಂದು ಮರದ ಕೆಳಗೆ ಆತ
ಕುಳಿತಿರುವಾಗಮೇಲಿರುವಹಕ್ಕಿಯು ಆತನಮೇಲಿತನ್ನ ಅಶುಚಿ ಪದಾರ್ಥವನ್ನು
ಕೆಡಹಿತು. ಕೋಪಾವಿಷ್ಠನಾದ ಆತನು ಮುಖವೆತ್ತ ಕೆಂಗಣ್ಣಿನಿಂದ ಆಹಕ್ಕಿಯನ್ನು
ನೋಡಿದ. ಕೂಡಲೇ ಅದು ಸುಟ್ಟು ಬೂದಿಯಾಯಿತು. ತನ್ನ ತಪಸ್ಸಿನ ಬಗ್ಗೆ
ಈತನಲ್ಲಿ ಅಹಂಭಾವ ಉದಯಿಸಿತು. ಭಿಕ್ಷೆಗಾಗಿ ಗ್ರಾಮದಲ್ಲಿ ಸಂಚರಿಸುತ್ತ ಈ
ತಪಸ್ವಿಯು ಒಂದು ಮನೆಯ ಮುಂದೆ ಬಂದು ನಿಂತನು. ಮನೆಯ ಗೃಹಿಣಿಯು
ಅತ್ಯಂತಸಾದ್ವಿಯಾಗಿದ್ದಳು. ತಪಸ್ವಿಗೆ ಭಿಕ್ಷೆಯನ್ನು ನೀಡಬೇಕೆಂದು ಆಕೆಹೊರಟು
ನಿಂತಾಗ ಬಳಲಿದ ತನ್ನ ಪತಿಯು ಹೊರಗಿನಿಂದ ಬರುವುದನ್ನು ಕಂಡಳು.
ಪತಿಯನ್ನು ಉಪಚರಿಸಿ ಆತನ ಸೇವೆಯನ್ನು ಮಾಡುವ ಭರದಲ್ಲಿ ಈ
ಅತಿಥಿಯನ್ನು ಅಕೆ ಮರೆತಳು. ಸ್ವಲ್ಪಹೊತ್ತಿನ ನಂತರ ಅತಿಥಿಯ ನೆನಪಾಗಿ ಭಿಕ್ಷ
ಹಿಡಿದುಕೊಂಡು ಅವನ ಬಳಿಗೆ ಬಂದಳು. ಕೋವಾಕ್ರಾಂತನಾದ ಅತಿಥಿ
ತಪಸ್ವಿಯನ್ನು ಇವಳು ಎಷ್ಟು ಸಂತೈಸಿದರೂ ಅವನ ಸಿಟ್ಟು ಇಳಿಯಲಿಲ್ಲ.
ಆಕ್ಕೆ “ನಾನೇನು ಅರಣ್ಯದಲ್ಲಿನೀನು ಬೂದಿಮಾಡಿದ ಹಕ್ಕಿಯಲ್ಲ' ಎಂದು
ನುಡಿದಳು. ಇದನ್ನು ಕೇಳಿ ಆತಪಸ್ವಿತಣ್ಣಗಾದ. ಅಲ್ಲಿಯ ಘಟನೆಯನ್ನು ಇವಳು
ತಿಳಿದ ಬಗೆ ಹೇಗೆ? ಇವಳಿಗೆ ಈ ಜ್ಞಾನಶಕ್ತಿ ಹೇಗೆ ಬಂದಿತು? ಎಂದು
ಅಚ್ಚರಿಗೊಂಡು ಇವಳನ್ನು ಬೇಡಿದಾಗ, ಧರ್ಮವ್ಯಾಧನ ಬಳಿ ಹೋಗಲು
ತಿಳಿಸಿದಳು. ಧರ್ಮವ್ಯಾಧನು ಮಾಂಸವನ್ನು ಮಾರುತ್ತಿದ್ದನು. ಅವನ ಈ
ವ್ಯಾಪಾರವನ್ನು ಕಂಡು ಅವನ ಬಳಿ ಹೋಗಲು ಈ ತಪಸ್ವಿ ಹಿಂಜರಿದಾಗ,
ಧರ್ಮವ್ಯಾಧನೇ "ಸಾಧ್ವೀಮಣಿಯಿಂದ ಕಳಿಸಲ್ಪಟ್ಟವನಲ್ಲ ವೇನೀನು?' ಎಂದು
ಈತನ ಪೂರ್ವಾಪರವನ್ನು ಹೇಳಲು, ಇವನಿಗೆ ಮತ್ತೂ ವಿಸ್ಮಯವಾಯಿತು.
ಧರ್ಮವ್ಯಾಧನು ತಾನು ಮಾಡುವ ವ್ಯಾಪಾರದ ನೀತಿ, ಸೇವಾಭಾವಗಳನ್ನು
ಆತನಿಗೆ ವಿವರಿಸಿ, ತನ್ನ ವೃದ್ಧ ತಂದೆತಾಯಿಗಳ ಸೇವೆಯನ್ನು ತಾನು ಮಾಡುವ
ವಿಧಾನವನ್ನು ಅವನಿಗೆ ಪ್ರತ್ಯಕ್ಷವಾಗಿ ತೋರಿಸಿದನು. ತಂದೆತಾಯಿಗಳ ಬಗ್ಗೆ ತಾನು
ಮಾಡಬೇಕಾದ ಕರ್ತವ್ಯವನ್ನು ಬಿಟ್ಟು ಅರಣ್ಯಕ್ಕೆ ಬಂದಿರುವ ಈ ತವಸ್ವಿಗಿಂತ
ಶೆಚ್ಚಿನಸಿದ್ಧಿಯನ್ನು, ಯೋಗ್ಯತೆಯನ್ನು ಪಕಿಯ ಬಗ್ಸೆ ತಂದೆತಾಯಿಯರ ಬಗ್ಗೆ
ತಮ್ಮ ವೈಯಕ್ತಿಕ ಕರ್ತವ್ಯವನ್ನು ನಿಷ್ಠೆಯಿಂದ, ಭಗವದ್ಭಕ್ತಿಯಿಂದ ಸಲ್ಲಿಸುತ್ತಲೇ
ತಮ್ಮ ವ್ಯವಹಾರವನ್ನು ನಡೆಸುತ್ತಿರುವ ಸಾಧ್ವಿ ಹಾಗೂ ಧರ್ಮವ್ಯಾಧರು
ಪಡೆದಿರುವರು. ಯಾರೂತಾವು ಮಾಡಬೇಕಾದ ವೈಯಕ್ತಿಕಹಾಗೂಸಾಮಾಜಿಕ
ಕರ್ತವ್ಯಗಳನ್ನು ಬಟ್ಟು ಬೇರೆ ಯಾವುದೇಎಷ್ಟೇ ಶ್ರೇಷ್ಠವಾದ ಕಾರ್ಯಗಳನ್ನು
ಮಾಡಿದರೂ ಅವರು ಅದರಿಂದ ಶ್ರೇಯಸ್ಸನ್ನು ಪಡೆಯಲಾರರು.
ಧರ್ಮವ್ಯಾಧನ ಕಥೆಯಲ್ಲಿ ಕಂಡುಬರುವ ತಪಸ್ವಿ ಬ್ರಾಹ್ಮಣನು ಈ ಮಾತಿಗೆ
ಒಳ್ಳೆಯ ನಿದರ್ಶನನಾಗಿದ್ದಾನೆ. ಪ್ರತಿಯೊಬ್ಬರೂ ತಮ್ಮ ತಮ್ಮ ವ್ಯಕ್ತಿಧರ್ಮ,
ವರ್ಣ-ಧರ್ಮಗಳನ್ನು ಅರಿತುಕೊಂಡು ತಮ್ಮ ಹೊಣೆಗಾರಿಕೆಯನ್ನು
ಭಕ್ತಿಯಿಂದ, ಶ್ರದ್ಧೆಯಿಂದ ನಿರ್ವಹಿಸುವುದರಲ್ಲೇ ಅವರ ಜೀವನದಸಿದ್ಧಿ ಇದೆ.
ಸ್ವಧರ್ಮೆ ನಿಧನಂ ಶ್ರೇಯಃ ।
ಪರಧರ್ಮೋ ಭಯಾವಹಃ।
ಅರ್ಜುನನದು ಕರ್ಮಯೋಗಿಯ ವ್ಯಕ್ತಿತ್ವ ಅದರಲ್ಲೂ ಕ್ಚತ್ರಿಯನಾಗಿ
ಲೋಕ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತವ. ಇಂತಹ ಧರ್ಮಯುದ್ಧದಲ್ಲಿ
ಪ್ರಮುಖ ಭಾಗವನ್ನು ವಹಿಸಿ ಕರ್ತವ್ಯವನ್ನು ಪೂರೈಸದೆ ಶಮಪ್ರಧಾನವಾದ
ಯತಿಧರ್ಮವನ್ನು ಆಚರಿಸಲು ಅವನಿಗೆ ಅಧಿಕಾರ ಏನಿದೆ? ನೀರಿಗಿಂತ ಹಾಲು
ಶ್ರೇಷ್ಠವೇನೋನಿಜ. ಆದರೆ ಮೀನನ್ನು ನೀರಿನಿಂದ ತೆಗೆದು ಹಾಲಿನಲ್ಲೇಇಟ್ಟರೆ
ಅದು ಬದುಕಬಹುದೆ? ಅದರಂತೆ ಮಾನವನು ತನ್ನ ವ್ಯಕ್ತಿಧರ್ಮ,
ವರ್ಣಧರ್ಮ, ಪ್ರಾಸಂಗಿಕ ಧರ್ಮಗಳನ್ನು ಪರಿಶೀಲಿಸಿ ತನ್ನ ಸ್ವಧರ್ಮವನ್ನು
ನಿರ್ಧರಿಸಿ ಆಮಾರ್ಗದಿಂದಲೇ ನಡೆಯಬೇಕು.
ಒಬ್ಬನು ತನಗೆ ಒಪ್ಪಿಗೆಯಾಗುವ ಪತ್ನಿಯನ್ನು ಆರಿಸಬಲ್ಲ. ತನಗೆ
ಬೇಡವಾದಾಗ ಪತ್ನಿಯನ್ನು ತೊರೆಯಲೂ ಸಾಧ್ಯವಾಗಬಹುದು. ಆದರೆ ತನ್ನ
ತಾಯಿಯ ಬಗ್ಗೆ ಹೀಗೆ ನಡೆಯಬಲ್ಲನೆ? ಈ ತಾಯಿ ಚೆನ್ನಾಗಿಲ್ಲ
ಸುಂದರಳಾಗಿಲ್ಲ; ತನಗೆ ಬೇರೆತಾಯಿ ಬೇಕೆಂದು ಬದಲಿಸಲು ಸಾಧ್ಯವೆ? ನಾವು
ಹುಟ್ಟುವಾಗಲೇ ನಮ್ಮತಾಯಿ ಸಿದ್ಧಳಾಗಿರುತ್ತಾಳೆ. ಅವಳನ್ನೇ ತಾಯಿಯೆಂದು
ಸ್ವೀಕರಿಸಿ ಪ್ರತ್ರರಾಗಿ ನಮ್ಮ ಸೇವೆ, ಕರ್ತವ್ಯಗಳನ್ನು ನಾವು ಮಾಡಬೇಕಾಗುತ್ತದೆ.
ಧರ್ಮದ ಬಗ್ಗೆಯೂ ಇದೇ ರೀತಿಯನ್ನು ನಾವು ಅನುಸರಿಸಬೇಕು. ನಾವು
ಹುಟ್ಟುವಾಗಲೇನಮ್ಮ ಧರ್ಮವೂನಿರ್ಧರಿತವಾಗಿರುತ್ತದೆ. ನಮ್ಮ ಸೇವೆಯನ್ನು
ಪಡೆಯಲು ಅದು ಸಿದ್ಧವಾಗಿರುವುದು. ಅದನ್ನು ಬದಲಿಸುವ ಗೋಜಿಗೇನಾವು
ಹೋಗಬಾರದು. ನಮಗೆ ವ್ರಾಪ್ತವಾದ ಧರ್ಮವನ್ನು ನಿಷ್ಠೆಯಿಂದ ಅನುಷ್ಠಾನ
ಮಾಡಬೇಕು. ಇದನ್ನೇ ವರ್ಣಧರ್ಮವೆನ್ನಲಾಗುವುದು.
Bannanje Govindacharya (1936–2020)Bhagavad Gita Pravachana
ಯತ್ ಯತ್ ಆಚರತಿ ಶ್ರೇಷ್ಠಃ ತತ್ ತತ್ ಏವ ST: ಜನಃ |
ಸಃ ಯತ್ ಪ್ರಮಾಣಮ್ ಕುರುತೇ ಲೋಕಃ ತತ್ ಅನುವರ್ತತೇ--ಮುಂದಾಳು ಏನೇನು ಮಾಡುತ್ತಾನೋ
ಉಳಿದ ಮಂದಿ ಅದೇ ದಾರಿ ಹಿಡಿಯುತ್ತಾರೆ. ಅವನು ಯಾವುದನ್ನು ಆಧಾರವಾಗಿ ಬಳಸುತ್ತಾನೋ ಜನತೆ
ಅದನ್ನೇ ಬೆನ್ನು ಹತ್ತುತ್ತದೆ.
ಸಮಾಜದಲ್ಲಿ ಹಿರಿಯನೆನಿಸಿದವ(ಶ್ರೇಷ್ಠು, ವಯಸ್ಸಿನಲ್ಲಿ, ಆಚರಣೆಯಲ್ಲಿ, ಜ್ಞಾನದಲ್ಲಿ ಸಮಾಜಕ್ಕೆ ಮಾರ್ಗದರ್ಶನ
ಮಾಡಬಲ್ಲ, ಎತ್ತರದಲ್ಲಿರುವ ವ್ಯಕ್ತಿ ಯಾವ ದಾರಿಯಲ್ಲಿ ಸಾಗುತ್ತಾನೋ, ಉಳಿದವರೂ ಅದೇ ಹಾದಿಯಲ್ಲಿ
ಸಾಗುತ್ತಾರೆ. ಇಲ್ಲಿ ಅರ್ಜುನ ಸಮಾಜದ ಮುಖಂಡ. ಆತ ಏನು ಮಾಡುತ್ತಾನೋ ಅದನ್ನೇ ಸಮಾಜ
ಹಿಂಬಾಲಿಸುತ್ತದೆ. ಏಕೆಂದರೆ ಸಾಮಾನ್ಯ ಜನರಿಗೆ ಶಾಸ್ತ್ರ ಇತ್ಯಾದಿ ತಿಳಿಯುವುದಿಲ್ಲ. ಅವರು ಕೇವಲ ಆದರ್ಶ
ವ್ಯಕ್ತಿಗಳೆನಿಸಿದವರನ್ನು ಹಿಂಬಾಲಿಸುತ್ತಾರೆ. ನಾಯಕನಾದವನು ಯಾವುದನ್ನು ಪ್ರಮಾಣವಾಗಿರಿಸಿಕೊಂಡು
ಮಾಡುತ್ತಾನೋ ಅದನ್ನೇ ಸಾಮಾನ್ಯ ಜನರು ಅನುಸರಿಸುತ್ತಾರೆ.
ಈ ಶ್ಲೋಕದಲ್ಲಿ ಕೃಷ್ಣ ಕೊಟ್ಟಿರುವ ಸಂದೇಶವನ್ನು ನಾವು ನಮ್ಮ ದೈನಂದಿನ ಬದುಕಿನಲ್ಲಿ ಕಾಣುತ್ತೇವೆ. ಒಂದು
ಸಂಸ್ಥೆಯನ್ನು ನಡೆಸುವ ಮುಖ್ಯಸ್ತನ ನಡವಳಿಕೆ, ಆಚರಣೆ ಸರಿದಾರಿಯಲ್ಲಿ ಇಲ್ಲದಿದ್ದರೆ, ಆ ಸಂಸ್ಥೆ
ಅಧೋಗತಿಯನ್ನು ಕಾಣುತ್ತದೆ. ದುಷ್ಟ ಶಕ್ತಿಗಳು ಎದ್ದು ನಿಲ್ಲುತ್ತವೆ. ಏಕೆಂದರೆ ಮುಖಂಡ ಎನಿಸಿದವ ಏನನ್ನು
ಅನುಸರಿಸುತ್ತಾನೋ ಅದನ್ನೇ ಪ್ರಮಾಣವಾಗಿ ಆತನ ಕೆಳಗಿರುವ ಜನರು. ತಮಗರಿವಿಲ್ಲದಂತೆ
ಅನುಸರಿಸಲಾರಂಭಿಸುತ್ತಾರೆ. ಈ ಕಾರಣದಿಂದ ಒಬ್ಬ ಮುಖಂಡ ಎಷ್ಟು ಎಚ್ಚರದಿಂದಿದ್ದರೂ ಸಾಲದು. ಒಂದು
ದೇಶವನ್ನು ನಡೆಸುವ ಮುಖ್ಯಸ್ಥ ಬ್ರಷ್ಟಾಚಾರಿಯಾಗಿದ್ದಲ್ಲಿ ಇಡೀ ದೇಶ ಬ್ರಷ್ಟಾಚಾರದ ಹಾದಿಯನ್ನು ತುಳಿಯುವ
ಸಾಧ್ಯತೆ ಇದೆ. ಸಾಮಾನ್ಯವಾಗಿ ಮಾನವರು ಒಳ್ಳೆಯದನ್ನು ಅನುಸರಿಸುವುದಕ್ಕಿಂತ ಹೆಚ್ಚಾಗಿ ಹಾಗೂ
ವೇಗವಾಗಿ ಕೆಟ್ಟದ್ದನ್ನು ಅನುಸರಿಸುವುದು ಹೆಚ್ಚು. ಉದಾಹರಣೆಗೆ ಒಬ್ಬ ಉತ್ತಮ ಅಧ್ಯಾಪಕ ಧೂಮಪಾನ
ಮಾಡುವ ಹವ್ಯಾಸದವನಾಗಿದ್ದರೆ, ಆತನ ವಿದ್ಯಾರ್ಥಿಗಳು ಆತನಲ್ಲಿರುವ ಜ್ಞಾನಕ್ಕಿಂತ ಮಿಗಿಲಾಗಿ ಆತನ
ದುರಾಭ್ಯಾಸವನ್ನು ಪ್ರಮಾಣವಾಗಿರಿಸಿಕೊಂಡು ಕೆಟ್ಟ ದಾರಿ ಹಿಡಿಯುವ ಸಾಧ್ಯತೆ ಹೆಚ್ಚು. ಇದು
ಹಿರಿಯವರೆನಿಸಿದವರು ತಪ್ಪು ದಾರಿ ತುಳಿದಾಗ ಸಮಾಜದ ಮೇಲಾಗುವ ದುಷ್ಪರಿಣಾಮ. ಇದು ತುಂಬಾ
ಅಪಾಯಕಾರಿ-ಈ ಅರಿವು ನಮಗಿರಬೇಕು.
Bibek Debroy (1955–2024)The Bhagavad Gita
(21)
‘Whatever a great man does, ordinary people also do that. Whatever he
accepts as duty, others also follow that.’