3.22

न मे पार्थास्ति कर्तव्यं त्रिषु लोकेषु किञ्चन ।
नानवाप्तमवाप्तव्यं वर्त एव च कर्मणि ॥
na me pārthāsti kartavyaṃ triṣu lokeṣu kiñcana |
nānavāptamavāptavyaṃ varta eva ca karmaṇi ||
Sri Madhvacharya (1238–1317)Bhagavad Gita Tatparya Nirnaya
‘रक्षया वाऽथ सृष्ट्या वा संहृत्यादेर्न तु क्वचित्। अर्थो विष्णोस्तथाऽप्येषा स्वभावात् सर्वकर्मकृत्। मत्तो नृत्तादिकं यद्वत् कुर्यात् सुखविशेषतः। परमानन्दरूपत्वात् कुर्याद्विष्णुस्तथैव तु’ इति बर्कश्रुतिः॥22
Swami Sivananda (1887–1963)Bhagavad Gita
22. There is nothing in the three worlds, O Arjuna, that should be done by Me, nor is there anything unattained that should be attained; yet I engage Myself in action!
Sri Vishwesha Tirtharu (1931–2019)Gitasaroddhara
ಜ್ಞಾನಿಗೂ ಕರ್ಮದ ನಿರ್ಬಂಧ
ಜ್ಞಾನಿಗೂ ಕರ್ಮದ ನಿರ್ಬಂಧ ಅಜ್ಞಾನದ ದೆಸೆಯಲ್ಲಿ ಮಾತ್ರ ಕರ್ಮದ ಪ್ರಸಕ್ತಿ ಇರುವುದು; ಜ್ಞಾನದ ದೆಸೆಯಲ್ಲಿ ಕರ್ಮದ ಆವಶ್ಯಕತೆಯೇ ಇಲ್ಲಎಂದು ಕೆಲವರ ಪ್ರತಿಪಾದನೆಯಿದೆ. ಗೀತೆಗೆ ಇದು ಸಮ್ಮತವಲ್ಲ. ನಿಷ್ಕುಮಕರ್ಮದ ಆದರ್ಶವನ್ನು ತಮ್ಮ ಸ್ವಂತ ಆಚರಣೆಯಿಂದ ತೋರಿಸಬಲ್ಲವರೇ ಜ್ಞಾನಿಗಳು. ಕರ್ಮವನ್ನು ಯಜ್ಞರೂಪ ವಾಗಿ ನಡೆಸಲು ಆವಶ್ಯಕವಾದ ಮಾನಸಿಕ ಸ್ಥಿತಿಯನ್ನು ಅವರು ಮಾತ್ರ ಪಡೆದಿರುವರು. ಭಗವಂತನ ದರ್ಶನದಿಂದ ಅತಿಶಯವಾದ ಭಕ್ತಿಭಾವವೂ ಅವರಲ್ಲಿ ಮೂಡಿರುವುದರಿಂದ ಯಾವ ಲೌಕಿಕ ಕಾಮನೆಯೂ ಇಲ್ಲದೆ ಶುದ್ಧಭಾವದಿಂದ ಕರ್ತವ್ಯವನ್ನು ಮಾಡಲು ಅವರೇ ಸಮರ್ಥರು. ಅಂತಹ ಜ್ಞಾನಿಗಳಿಗೇಕರ್ಮವಿಲ್ಲವಾದರೆ ಪರಿಪೂರ್ಣ ಕರ್ಮದ ಆದರ್ಶವನ್ನು ಜಗತ್ತಿನ ಮುಂದೆ ಯಾರು ಇಡಬಲ್ಲರು? ನಿತ್ಯಮುಕ್ತನೂ ವಿಧಿನಿಷೇಧಗಳಿಗೆ ಅತೀತನೂ ಆದ ಭಗವಂತನೇ ಲೋಕ ವ್ಯವಸ್ಥಾಪನೆಗಾಗಿ, ಜಗತ್ತಿಗೆ ಕರ್ಮಯೋಗದ ಉತ್ತಮ ಆದರ್ಶವನ್ನು ತೋರಿಸುವುದಕ್ಕಾಗಿ ಸ್ವತಃ ತಾನು ಕರ್ತವ್ಯವನ್ನು ಆಚರಿಸುವಾಗ ಉಳಿದವರ ಪಾಡೇನು? ನಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ ॥ "ನಾನು ವರಿವೂರ್ಣಕಾಮನಾಗಿದ್ದರೂ ನನಗೆ ಯಾವುದೇ ಕರ್ತವ್ಯದ ನಿರ್ಬಂಧವಿಲ್ಲದಿದ್ದರೂ ನಾನು ಕರ್ತವ್ಯವನ್ನು ಮಾಡುತ್ತಿರುವೆನು.'' ಅರ್ಜುನನೂ ಸಾಧಾರಣ ವ್ಯಕ್ತಿಯಲ್ಲ. ಇಂದ್ರದೇವರ ಅವತಾರನಾಗಿರುವ ಮಹಾನುಭಾವನಾದ ಅರ್ಜುನನೂ ಮಹಾಜ್ಞಾನಿಯೇ. ಅವರೋಕ್ಷ ಜ್ಞಾನವಿಲ್ಲದೆ ದೇವತ್ವ ಲಭಿಸಲಾರದು. ಅಂತಹ ಜ್ಜಾನಿಗೇ ಶ್ರೀಕೃಷ್ಣನು ಕರ್ತವ್ಯದ ಆದೇಶವನ್ನು ಗೀತೆಯಲ್ಲಿ ನೀಡುತ್ತಿದ್ದಾನೆ. ಇದರಿಂದ ಕರ್ಮಯೋಗವು- ಜ್ಞಾನಿಗಳಿರಲಿ ಅಜ್ಞಾನಿಗಳಿರಲಿ-ಸಕಲ ವ್ಯಕ್ತಿಗಳಿಗೂ ಅವಶ್ಯಕವೆಂದೇ ಗೀತೆಯ ಆಶಯವಾಗಿದೆ. ಪರಮಾತ್ಮನು ನಿರ್ಮಿಸಿದ ನಾಧನಕ್ಷೇತ್ರವಾದ ಈ ಪ್ರಪಂಚವು ಸತ್ಯವಾಗಿದೆ. ಈ ಸಾಧನಭೂಮಿ ಕೇವಲ ಭ್ರಮೆ ಅಲ್ಲ. ಜ್ಞಾನವು ಬಂದಕೂಡಲೇ ಸ್ವಪ್ನ ಪ್ರಪಂಚದಂತೆ ಈ ಜಗತ್ತು ಕರಗಿ ಹೋಗುವುದೂ ಇಲ್ಲ. ನಮ್ಮನ್ನು ಪರಮಾತ್ಮನ ಕಡೆಗೆ ಒಯ್ಯುವ ಸೇತುವೆಯೇ ಈ ಪ್ರಪಂಚವಾಗಿದೆ. ಆದುದರಿಂದ ಜ್ಞಾನವು. ಬಂದಕೂಡಲೇ ಸ್ವವ್ಧರಾಜ್ಯದಂತೆ ಪ್ರಪಂಚದ ನಿವೃತ್ತಿಯೇ ಆಗುವುದರಿಂದ ಜ್ಞಾನಿಗಳಿಗೆ ಜಗತ್ತೇ ಕಾಣಲೊಲ್ಲದು; ಅವರು ಹೇಗೆ ಕರ್ಮವನ್ನು ಆಚರಿಸಬೇಕು ಎನ್ನುವ ಸಂದೇಹಕ್ಕೆ ಎಡೆಯೇ ಇರುವುದಿಲ್ಲ. ಜ್ಞಾನ ಹಾಗೂ ಅಜ್ಞಾನ ಈ ಎರಡೂ ದೆಸೆಯಲ್ಲಿ ಆಚರಣೆಯನ್ನು ವಿಧಿಸುವ ಗೀತೆಗೆ ಜಗತ್ತು ಹಾಗೂ ಕರ್ಮದ ಅಸತ್ಯತೆಯ ಕಲ್ಪನೆಯು ಎಂದಿಗೂ ಸಮ್ಮತವಲ್ಲ. ಈಶ್ವರನನ್ನು ನಿರಾಕರಿಸಿದಂತೆ ಸಾಧನರಂಗವಾದ ಜಗತ್ತನ್ನು ನಿರಾಕರಿಸುವುದೂ ನಾಸ್ತಿ ಕೃವಾದವೆಂದೇ ಗೀತೆಯ ಅಭಿಪ್ರಾಯವಿದೆ: ಅಸತ್ಯಮಪ್ರತಿಷ್ಠಂ ತೇ ಜಗದಾಹುರನೀಶ್ವರಮ್‌ । ಪರಮಾತ್ಮನ ದರ್ಶನವಾದ ಕೂಡಲೇ ಜ್ಞಾನಿಗೆ ಜಗತ್ತೇ ಕಣ್ಮರೆಯಾಗುವುದಾದರೆ ಪರಮಾತ್ಮನ ವಿಚಾರವನ್ನು ಜನತೆಗೆ ಮುಟ್ಟಿಸುವ ಪ್ರವಾದಿಗಳನ್ನೇ ನಾವು ಅಲ್ಲಗಳಿದಂತಾಗುವುದು. ಆತ್ಮದರ್ಶನವಾಗಿದ್ದರೆ ಜಗತ್ತು ಅವರಿಗೆ ಕಾಣಲಾರದಷ್ಟೆ? ಆದರೆ ಜ್ಞಾನಿಗಳೂ, ಜೀವನ್ಮುಕ್ತರೂ ಜಗತ್ತಿನಲ್ಲಿ ಇದ್ದು ಕರ್ತವ್ಯ ಮತ್ತು ಉಪದೇಶಗಳನ್ನು ನಡೆಸಿರುವುದರಿಂದ ಜ್ಞಾನದ ನಂತರವೂ ಜಗತ್ತಿಗೆ ಅಸ್ತಿತ್ವವಿದೆಯೆನ್ನುವುದನ್ನು ಒಪ್ಪಲೇಬೇಕು. ಜ್ಞಾನಿಗಳು ಉಳಿದವರಿಗೆ ಉತ್ತಮ ಆದರ್ಶವನ್ನು ತೋರಿಸುವುದಕ್ಕಾಗಿಯೂ ಮುಕ್ತಿಯಲ್ಲಿ ತಮ್ಮ ಸ್ವರೂಪಾನಂದದ ಹೆಚ್ಚಿನ ಅಭಿವ್ಯಕ್ತಿಗಾಗಿಯೂ ಕರ್ತವ್ಯವನ್ನು ಮುಕ್ತಿ ವರ್ಯಂತವಾಗಿ ಆಚರಿಸುತ್ತಾರೆ. ಏಣಿಯ ಮೇಲಿನ ತುದಿಗೆ ತಲುಪಿದರೂ ಅಲ್ಲಿಯೇ ನಿಂತು ಚಿಕ್ಕ ಹುಡುಗರನ್ನು ಮೇಲೆ ಏರಿಸಲು ಪ್ರಯತ್ನಿಸುವಂತೆ ಜ್ಞಾನಿಗಳು ಕರ್ಮದಎಣಿಯಲ್ಲೇ ಇದ್ದುನಮ್ಮನ್ನು ತಮ್ಮ ಬಳಿಗೆಕರೆದೊಯ್ಯಲು ಉವಕ್ರಮಿಸುವರು.
3.1–3.35 · ಸ್ವಧರ್ಮೇ ನಿಧನಂ ಶ್ರೇಯಃ
ಸ್ವಧರ್ಮೇ ನಿಧನಂಶ್ರೇಯಃ ಇನ್ನು ಅರ್ಜುನನ ತತ್ಮಿಂ ಕಮ ಣಿ ಘೋರೇಮಾಂ ನಿಯೋಜಯಸಿ.... । ಎಂಬ ಪ್ರಶ್ನೆ ಉಳಿದಿದೆ. ಕರ್ಮದ ಪ್ರಮಾಣವು ಕಡಿಮೆಯಾಗಿರುವ ಸನಕಾದಿಗಳ ಜ್ಞಾನಯೋಗದ ಮಾರ್ಗವಿರುವಾಗ ಯುದ್ಧದ ಈ ಕಠೋರ ಮಾರ್ಗವನ್ನು ಯಾಕೆತಾನು ಆರಿಸಬೇಕು? ಅರಣ್ಯದಲ್ಲಿ ಶಾಂತನಾಗಿದ್ದು ಜಪ, ತಪಸ್ಸು ಮುಂತಾದ ಕರ್ಮಗಳನ್ನು ಆಚರಿಸಿಕೊಂಡು ಹಾಯಾಗಿ ಯಾಕೆ ಇರಬಾರದು ಎಂದು ಅರ್ಜುನನು ಮಾಡಿದ ಪ್ರಶ್ನೆಗೆ ಉತ್ತರ ಕೊಡುವುದು ಉಳಿದಿದೆ. ಇದಕ್ಕೆ ಗೀತೆಯ ಸಮಾಧಾನವು ಹೀಗಿದೆ : ಪ್ರತಿಯೊಬ್ಬನಿಗೂ ಅನೇಕ ಕರ್ತವ್ಯಮಾರ್ಗಗಳು ತೋರಬಹುದು. ಅವುಗಳಲ್ಲಿ ಯಾವುದು ತನ್ನ ಸ್ವಧರ್ಮ ವೆಂಬುದನ್ನು ಅರಿತುಕೊಂಡು ಆ ಮಾರ್ಗದಲ್ಲಿ ನಡೆಯುವುದರಲ್ಲೇ ಅವನ ಪುರುಷಾರ್ಥ ಅಡಗಿದೆ. ವ್ಯಕ್ತಿಯ ಸ್ವರೂಪ, ಯೋಗ್ಯತೆಯನ್ನು ಅನುಸರಿಸಿ ಕರ್ತವ್ಯಗಳೂ ಬೇರೆಬೇರೆಯಾಗಿರುತ್ತವೆ. ನಮ್ಮ ವ್ಯಕ್ತಿಸ್ವರೂಪಕ್ಕನುಸರಿಸಿ ನಾವು ಮಾಡಬೇಕಾದ ಕರ್ತವ್ಯವನ್ನು ನಿರ್ಧರಿಸಬೇಕು. ಶುಕ್ಕ ಸನಕಾದಿಗಳು ಜ್ಞಾನಯೋಗವನ್ನು ಅನುಸರಿಸುವುದೂ ಮನು, ಜನಕ ಮೊದಲಾದವರು ಕರ್ಮಯೋಗವನ್ನು ಅವಲಂಬಿಸಿರುವುದೂ ಅವರವರವ್ಯಕ್ತಿತ್ತವನ್ನು ಆಧರಿಸಿದ ಸ್ವಧರ್ಮಗಳಿಗೆ ಅನುಸಾರವಾಗಿಯೇ ಆಗಿದೆ. ಅರ್ಜುನನದೂ ಜನಕಾದಿಗಳಂತೆ ಕರ್ಮಯೋಗಕ್ಕೆ ಮೀನಲಾಗಿರಿಸಿದ್ದ ಜೀವನ. ಅವನ ವ್ಯಕ್ತಿತ್ವವೇ ಅಂತಹದು. ಶಮಪ್ರಧಾನವಾದ ಯತಿಧರ್ಮವನ್ನು ಸ್ವೀಕರಿಸಿ ನಡೆಯುವ ಸ್ವರೂಪವು ಅವನದಲ್ಲ. ಅವನು ಆಧಿಕಾರಿಕರೆಂದು ಪರಿಗಣಿಸಲಾದ ಜೀವರ ವರ್ಗದಲ್ಲಿ ಸೇರಿದವನು. ಲೋಕದಲ್ಲಿಯ ದೌಷ್ಟ್ಯ ಅಧರ್ಮಗಳನ್ನು ನಿವಾರಿಸಿ ಸಜ್ಜನರನ್ನು ಸಂರಕ್ಷಿಸಿ ಮುನ್ನಡೆಸುವ ಆಧಿಕಾರಿಕ ವ್ಯಕ್ತಿತ್ವವು ಅವನದಾಗಿದೆ. ತನ್ನ ವ್ಯಕ್ತಿತ್ವಕ್ಕೆ ಅನುಗುಣವಾದ ಕರ್ತವ್ಯವನ್ನು ಬಿಟ್ಟು ಬೇರೆ ದಾರಿಯಲ್ಲಿ ನಡೆದರೆ ಅದರಿಂದ ಅವನ ಪ್ರಗತಿಯಾಗಲಾರದು. ಹೀಗೆ ಪ್ರತಿಯೊಬ್ಬರ ವಿಷಯದಲ್ಲೂ ವ್ಯಕ್ತಿಯ ಸ್ವರೂವವನ್ನು ಆಧರಿಸಿ ಕರ್ತವ್ಯವು ನಿರ್ಧರಿಸಲ್ಪಡುತ್ತದೆ. ಅದರಂತೆ ಸಾಮಾಜಿಕ ಹೊಣೆಗಾರಿಕೆಯಿಂದ ಪ್ರಾಪ್ತವಾಗುವ ವರ್ಣಾಶ್ರಮೋಚಿತ ಕರ್ತವ್ಯಗಳನ್ನು ನಾವು ನಿಷ್ಠೆಯಿಂದ ಅನುಸರಿಸಬೇಕು. ತನ್ನ ನಿಜಸ್ವರೂಪವನ್ನು ಪರಿಶೀಲಿಸಿ ವ್ಯಕ್ತಿಧರ್ಮವನ್ನು ನಿರ್ಧರಿಸುವಂತೆ ಶಾಸ್ತ್ರಗಳಿಂದ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕ್ರಮಪ್ರಾಪ್ತವಾದ ನಮ್ಮ ವರ್ಣಧರ್ಮಗಳನ್ನು ತಿಳಿದು ಅದರಂತೆ ನಡೆಯಬೇಕು. ಈ ವ್ಯಕ್ತಿಧರ್ಮ, ವರ್ಣಧರ್ಮಗಳೆರಡೂ ಸ್ವಧರ್ಮಗಳಾಗಿದ್ದು ಈ ಎರಡೂ ದೃಷ್ಟಿಗಳಿಂದ ಯತಿಧರ್ಮದ ಬದಲು ಕ್ಹಾತ್ರಧರ್ಮವನ್ನು ಅರ್ಜುನನು ಪರಿಗ್ರಹಿನ ಬೇಕಾಗಿದೆ. ಸಂನ್ಯಾಸಧರ್ಮವಾಗಲಿ ಅರಣ್ಯಕ್ಕೆ ಹೋಗಿ ವಾನವ್ರಸ್ಥವೃತ್ತಿಯನ್ನು ಅವಲಂಬಿಸುವುದಾಗಲಿ ಶ್ರೇಷ್ಠವೇ ಇರಬಹುದು. ಆದರೆ ದುಷ್ಟನಿಗ್ರಹ ಹಾಗೂ ಧರ್ಮ ರಕ್ಷಣೆಯ ವಿಶಿಷ್ಟ ಹೊಣೆಗಾರಿಕೆಯನ್ನು ಹೊತ್ತ ಅರ್ಜುನನು ತನ್ನ ಈ ಕರ್ತವ್ಯವನ್ನು ತೊರೆದು ಶ್ರೇಷ್ಠ ಮಾರ್ಗವೆಂದು ಸಂನ್ಯಾಸಿ ಅಥವಾ ವಾನಪ್ರಸ್ಥನಾಗುವುದು ಉಚಿತವಾಗಲಾರದು. ಬೇರೆ ಅಧಿಕಾರ ಸ್ಥಾನಗಳಲ್ಲಿ ನಿಯುಕ್ತರಾದವರು ತಮ್ಮ ಕರ್ತವ್ಯದಲ್ಲಿ ಅಲಕ್ಷ್ಯ ಮಾಡಿ ಬೇರೆ ಎಷ್ಟೇ ಉಪಯುಕ್ತಕಾರ್ಯವನ್ನುನಡೆಸಿದರೂ ಅದು ಪ್ರಶಂಸನೀಯವೆನಿಸುವುದಿಲ್ಲ. ಸೈನ್ಯ ಅಥವಾ ಆಡಳಿತದ ಕಾರ್ಯದಲ್ಲಿ ನಿಯುಕ್ತರಾದವರು ತಮ್ಮ ಕೆಲಸದ ವೇಳೆಯಲ್ಲಿ ಪವಿತ್ರ ಕಾರ್ಯವೆಂದು ಧಾರ್ಮಿಕ ಗಂಥಗಳ ಅಧ್ಯಯನದಲ್ಲೇ ತೊಡಗಿದರೆ ಅದು ಧರ್ಮವೆನಿಸಲಾರದು. ತನಗೆ ನಿಯೋಜಿಸಲ್ಪಟ್ಟ ಕಾರ್ಯವನ್ನು ನಿಷ್ಠೆಯಿಂದ ಆಚರಿಸುವುದರಿಂದಲೇ ಮನುಷ್ಯನು ಶ್ರೇಷ್ಠ ವ್ಯಕ್ತಿಯಾಗಬಲ್ಲನು. ಹೊರತು ಅವನು ಯಾವಕಾರ್ಯಮಾಡುತ್ತಿದ್ದಾನೆಂಬು ದರಿಂದಲೇ ಅವನ ಮಹತ್ತ್ವವನ್ನು ನಿರ್ಧರಿಸಲಾರೆವು. ಹೀಗೆಯೇವ್ಯಕ್ತಿಯ ವಿಶಿಷ್ಟ ಪರಿಸ್ಥಿತಿ, ಸಂದರ್ಭಗಳನ್ನು ಅನುಸರಿಸಿ ನಮ್ಮ ಕರ್ತವ್ಯವನ್ನು ವಿವೇಚಿಸುವ ಪ್ರಸಂಗವೂ ನಮ್ಮ ಜೀವನದಲ್ಲಿ ಬರುತ್ತದೆ. ನದಿಯಲ್ಲಿ ಒಬ್ಬನು ಮುಳುಗುತ್ತಿರುವಾಗ, ತೀರದಲ್ಲಿ ಜಪಮಾಡುತ್ತಿರುವವನು ಜಪವನ್ನು ಬಿಟ್ಟು ಮುಳುಗುವವನನ್ನು ಮೇಲಕ್ಕೆತ್ತಲು ಪ್ರಯತ್ನಿಸುವುದೇ ಧರ್ಮವೆನಿಸುವುದು. ಜಪವೇ ಶ್ರೇಷ್ಠವೆಂದು ಆತನು ಮೂಗು ಹಿಡಿದು ಕುಳಿತರೆ ಅದು ಸರಿಯೆನಿಸುವುದೆ? ದೇವರ ಗುಡಿಗೆ ಹೋಗುವುದೇನೋ ಒಳ್ಳೆಯ ಕಾರ್ಯವೇ; ಆದರೆ ಶಾಲೆಗೆ ಹೋಗುವುದನ್ನು ತಪ್ಪಿಸಿ ಹುಡುಗರು ದೇವರ ಗುಡಿಗೆ ಹೋದರೆ ಅದನ್ನು ಯಾರೂ ಅಭಿನಂದಿಸಲಾರರು. ಮಕ್ಕಳಿಗಾಗಿ, ಪತಿಗಾಗಿ ತಾನು ನಿರ್ವಹಿಸಬೇಕಾದ ಕೌಟುಂಬಿಕ ಕರ್ತವ್ಯಗಳನ್ನು ತೊರೆದು ಮಹಿಳೆಯರು ಸಮಾಜಸೇವೆಯೆಂದು ಹೊರಗೇ ಅಡ್ಮಾಡುತ್ತಿದ್ದರೆ ಅದು ಧರ್ಮ ಎನಿಸಲಾರದು. ಮಹಾಭಾರತದಲ್ಲಿ ಧರ್ಮವ್ಯಾಧನ ಉಪಾಖ್ಯಾನದಲ್ಲಿ ಪ್ರತಿಯೊಬ್ಬನೂ ತನ್ನ ಈ ವೈಯಕ್ತಿಕ ಹೊಣೆಗಾರಿಕೆಯನ್ನು ಪಾಲಿಸುವುದರ ಅವಶ್ಯಕತೆಯನ್ನು ಒತ್ತಿಹೇಳಲಾಗಿದೆ. ತರುಣ ಬ್ರಾಹ್ಮಣ ಯುವಕನೊಬ್ಬನು ತನ್ನ ವೃದ್ಧ ತಾಯಿತಂದೆಗಳಿಗೆ ಸಲ್ಲಿಸಬೇಕಾದ ಸೇವಾಕಾರ್ಯವನ್ನು ನಿರ್ವಹಿಸದೆ ಯಾವ ರಕ್ಷಕರೂ ಇಲ್ಲದ ಅವರನ್ನು ಮನೆಯಲ್ಲೇ ಬಿಟ್ಟುತಾನು ತಪಸ್ವಿಯಾಗಬೇಕೆಂದು ಅರಣ್ಯದಲ್ಲಿ ಇರುತ್ತಾನೆ. ಅನೇಕ ವರ್ಷಗಳವರೆಗೆ ತಪ್ಪಸ್ಸನ್ನು ಆಚರಿಸಿ ಉಗ್ರಶಕ್ತಿಯನ್ನು ಪಡೆಯುತ್ತಾನೆ. ಒಮ್ಮೆ ಒಂದು ಮರದ ಕೆಳಗೆ ಆತ ಕುಳಿತಿರುವಾಗಮೇಲಿರುವಹಕ್ಕಿಯು ಆತನಮೇಲಿತನ್ನ ಅಶುಚಿ ಪದಾರ್ಥವನ್ನು ಕೆಡಹಿತು. ಕೋಪಾವಿಷ್ಠನಾದ ಆತನು ಮುಖವೆತ್ತ ಕೆಂಗಣ್ಣಿನಿಂದ ಆಹಕ್ಕಿಯನ್ನು ನೋಡಿದ. ಕೂಡಲೇ ಅದು ಸುಟ್ಟು ಬೂದಿಯಾಯಿತು. ತನ್ನ ತಪಸ್ಸಿನ ಬಗ್ಗೆ ಈತನಲ್ಲಿ ಅಹಂಭಾವ ಉದಯಿಸಿತು. ಭಿಕ್ಷೆಗಾಗಿ ಗ್ರಾಮದಲ್ಲಿ ಸಂಚರಿಸುತ್ತ ಈ ತಪಸ್ವಿಯು ಒಂದು ಮನೆಯ ಮುಂದೆ ಬಂದು ನಿಂತನು. ಮನೆಯ ಗೃಹಿಣಿಯು ಅತ್ಯಂತಸಾದ್ವಿಯಾಗಿದ್ದಳು. ತಪಸ್ವಿಗೆ ಭಿಕ್ಷೆಯನ್ನು ನೀಡಬೇಕೆಂದು ಆಕೆಹೊರಟು ನಿಂತಾಗ ಬಳಲಿದ ತನ್ನ ಪತಿಯು ಹೊರಗಿನಿಂದ ಬರುವುದನ್ನು ಕಂಡಳು. ಪತಿಯನ್ನು ಉಪಚರಿಸಿ ಆತನ ಸೇವೆಯನ್ನು ಮಾಡುವ ಭರದಲ್ಲಿ ಈ ಅತಿಥಿಯನ್ನು ಅಕೆ ಮರೆತಳು. ಸ್ವಲ್ಪಹೊತ್ತಿನ ನಂತರ ಅತಿಥಿಯ ನೆನಪಾಗಿ ಭಿಕ್ಷ ಹಿಡಿದುಕೊಂಡು ಅವನ ಬಳಿಗೆ ಬಂದಳು. ಕೋವಾಕ್ರಾಂತನಾದ ಅತಿಥಿ ತಪಸ್ವಿಯನ್ನು ಇವಳು ಎಷ್ಟು ಸಂತೈಸಿದರೂ ಅವನ ಸಿಟ್ಟು ಇಳಿಯಲಿಲ್ಲ. ಆಕ್ಕೆ “ನಾನೇನು ಅರಣ್ಯದಲ್ಲಿನೀನು ಬೂದಿಮಾಡಿದ ಹಕ್ಕಿಯಲ್ಲ' ಎಂದು ನುಡಿದಳು. ಇದನ್ನು ಕೇಳಿ ಆತಪಸ್ವಿತಣ್ಣಗಾದ. ಅಲ್ಲಿಯ ಘಟನೆಯನ್ನು ಇವಳು ತಿಳಿದ ಬಗೆ ಹೇಗೆ? ಇವಳಿಗೆ ಈ ಜ್ಞಾನಶಕ್ತಿ ಹೇಗೆ ಬಂದಿತು? ಎಂದು ಅಚ್ಚರಿಗೊಂಡು ಇವಳನ್ನು ಬೇಡಿದಾಗ, ಧರ್ಮವ್ಯಾಧನ ಬಳಿ ಹೋಗಲು ತಿಳಿಸಿದಳು. ಧರ್ಮವ್ಯಾಧನು ಮಾಂಸವನ್ನು ಮಾರುತ್ತಿದ್ದನು. ಅವನ ಈ ವ್ಯಾಪಾರವನ್ನು ಕಂಡು ಅವನ ಬಳಿ ಹೋಗಲು ಈ ತಪಸ್ವಿ ಹಿಂಜರಿದಾಗ, ಧರ್ಮವ್ಯಾಧನೇ "ಸಾಧ್ವೀಮಣಿಯಿಂದ ಕಳಿಸಲ್ಪಟ್ಟವನಲ್ಲ ವೇನೀನು?' ಎಂದು ಈತನ ಪೂರ್ವಾಪರವನ್ನು ಹೇಳಲು, ಇವನಿಗೆ ಮತ್ತೂ ವಿಸ್ಮಯವಾಯಿತು. ಧರ್ಮವ್ಯಾಧನು ತಾನು ಮಾಡುವ ವ್ಯಾಪಾರದ ನೀತಿ, ಸೇವಾಭಾವಗಳನ್ನು ಆತನಿಗೆ ವಿವರಿಸಿ, ತನ್ನ ವೃದ್ಧ ತಂದೆತಾಯಿಗಳ ಸೇವೆಯನ್ನು ತಾನು ಮಾಡುವ ವಿಧಾನವನ್ನು ಅವನಿಗೆ ಪ್ರತ್ಯಕ್ಷವಾಗಿ ತೋರಿಸಿದನು. ತಂದೆತಾಯಿಗಳ ಬಗ್ಗೆ ತಾನು ಮಾಡಬೇಕಾದ ಕರ್ತವ್ಯವನ್ನು ಬಿಟ್ಟು ಅರಣ್ಯಕ್ಕೆ ಬಂದಿರುವ ಈ ತವಸ್ವಿಗಿಂತ ಶೆಚ್ಚಿನಸಿದ್ಧಿಯನ್ನು, ಯೋಗ್ಯತೆಯನ್ನು ಪಕಿಯ ಬಗ್ಸೆ ತಂದೆತಾಯಿಯರ ಬಗ್ಗೆ ತಮ್ಮ ವೈಯಕ್ತಿಕ ಕರ್ತವ್ಯವನ್ನು ನಿಷ್ಠೆಯಿಂದ, ಭಗವದ್ಭಕ್ತಿಯಿಂದ ಸಲ್ಲಿಸುತ್ತಲೇ ತಮ್ಮ ವ್ಯವಹಾರವನ್ನು ನಡೆಸುತ್ತಿರುವ ಸಾಧ್ವಿ ಹಾಗೂ ಧರ್ಮವ್ಯಾಧರು ಪಡೆದಿರುವರು. ಯಾರೂತಾವು ಮಾಡಬೇಕಾದ ವೈಯಕ್ತಿಕಹಾಗೂಸಾಮಾಜಿಕ ಕರ್ತವ್ಯಗಳನ್ನು ಬಟ್ಟು ಬೇರೆ ಯಾವುದೇಎಷ್ಟೇ ಶ್ರೇಷ್ಠವಾದ ಕಾರ್ಯಗಳನ್ನು ಮಾಡಿದರೂ ಅವರು ಅದರಿಂದ ಶ್ರೇಯಸ್ಸನ್ನು ಪಡೆಯಲಾರರು. ಧರ್ಮವ್ಯಾಧನ ಕಥೆಯಲ್ಲಿ ಕಂಡುಬರುವ ತಪಸ್ವಿ ಬ್ರಾಹ್ಮಣನು ಈ ಮಾತಿಗೆ ಒಳ್ಳೆಯ ನಿದರ್ಶನನಾಗಿದ್ದಾನೆ. ಪ್ರತಿಯೊಬ್ಬರೂ ತಮ್ಮ ತಮ್ಮ ವ್ಯಕ್ತಿಧರ್ಮ, ವರ್ಣ-ಧರ್ಮಗಳನ್ನು ಅರಿತುಕೊಂಡು ತಮ್ಮ ಹೊಣೆಗಾರಿಕೆಯನ್ನು ಭಕ್ತಿಯಿಂದ, ಶ್ರದ್ಧೆಯಿಂದ ನಿರ್ವಹಿಸುವುದರಲ್ಲೇ ಅವರ ಜೀವನದಸಿದ್ಧಿ ಇದೆ. ಸ್ವಧರ್ಮೆ ನಿಧನಂ ಶ್ರೇಯಃ । ಪರಧರ್ಮೋ ಭಯಾವಹಃ। ಅರ್ಜುನನದು ಕರ್ಮಯೋಗಿಯ ವ್ಯಕ್ತಿತ್ವ ಅದರಲ್ಲೂ ಕ್ಚತ್ರಿಯನಾಗಿ ಲೋಕ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತವ. ಇಂತಹ ಧರ್ಮಯುದ್ಧದಲ್ಲಿ ಪ್ರಮುಖ ಭಾಗವನ್ನು ವಹಿಸಿ ಕರ್ತವ್ಯವನ್ನು ಪೂರೈಸದೆ ಶಮಪ್ರಧಾನವಾದ ಯತಿಧರ್ಮವನ್ನು ಆಚರಿಸಲು ಅವನಿಗೆ ಅಧಿಕಾರ ಏನಿದೆ? ನೀರಿಗಿಂತ ಹಾಲು ಶ್ರೇಷ್ಠವೇನೋನಿಜ. ಆದರೆ ಮೀನನ್ನು ನೀರಿನಿಂದ ತೆಗೆದು ಹಾಲಿನಲ್ಲೇಇಟ್ಟರೆ ಅದು ಬದುಕಬಹುದೆ? ಅದರಂತೆ ಮಾನವನು ತನ್ನ ವ್ಯಕ್ತಿಧರ್ಮ, ವರ್ಣಧರ್ಮ, ಪ್ರಾಸಂಗಿಕ ಧರ್ಮಗಳನ್ನು ಪರಿಶೀಲಿಸಿ ತನ್ನ ಸ್ವಧರ್ಮವನ್ನು ನಿರ್ಧರಿಸಿ ಆಮಾರ್ಗದಿಂದಲೇ ನಡೆಯಬೇಕು. ಒಬ್ಬನು ತನಗೆ ಒಪ್ಪಿಗೆಯಾಗುವ ಪತ್ನಿಯನ್ನು ಆರಿಸಬಲ್ಲ. ತನಗೆ ಬೇಡವಾದಾಗ ಪತ್ನಿಯನ್ನು ತೊರೆಯಲೂ ಸಾಧ್ಯವಾಗಬಹುದು. ಆದರೆ ತನ್ನ ತಾಯಿಯ ಬಗ್ಗೆ ಹೀಗೆ ನಡೆಯಬಲ್ಲನೆ? ಈ ತಾಯಿ ಚೆನ್ನಾಗಿಲ್ಲ ಸುಂದರಳಾಗಿಲ್ಲ; ತನಗೆ ಬೇರೆತಾಯಿ ಬೇಕೆಂದು ಬದಲಿಸಲು ಸಾಧ್ಯವೆ? ನಾವು ಹುಟ್ಟುವಾಗಲೇ ನಮ್ಮತಾಯಿ ಸಿದ್ಧಳಾಗಿರುತ್ತಾಳೆ. ಅವಳನ್ನೇ ತಾಯಿಯೆಂದು ಸ್ವೀಕರಿಸಿ ಪ್ರತ್ರರಾಗಿ ನಮ್ಮ ಸೇವೆ, ಕರ್ತವ್ಯಗಳನ್ನು ನಾವು ಮಾಡಬೇಕಾಗುತ್ತದೆ. ಧರ್ಮದ ಬಗ್ಗೆಯೂ ಇದೇ ರೀತಿಯನ್ನು ನಾವು ಅನುಸರಿಸಬೇಕು. ನಾವು ಹುಟ್ಟುವಾಗಲೇನಮ್ಮ ಧರ್ಮವೂನಿರ್ಧರಿತವಾಗಿರುತ್ತದೆ. ನಮ್ಮ ಸೇವೆಯನ್ನು ಪಡೆಯಲು ಅದು ಸಿದ್ಧವಾಗಿರುವುದು. ಅದನ್ನು ಬದಲಿಸುವ ಗೋಜಿಗೇನಾವು ಹೋಗಬಾರದು. ನಮಗೆ ವ್ರಾಪ್ತವಾದ ಧರ್ಮವನ್ನು ನಿಷ್ಠೆಯಿಂದ ಅನುಷ್ಠಾನ ಮಾಡಬೇಕು. ಇದನ್ನೇ ವರ್ಣಧರ್ಮವೆನ್ನಲಾಗುವುದು.
Bannanje Govindacharya (1936–2020)Bhagavad Gita Pravachana
ನ ಮೇ ಪ್ರಾರ್ಥ ಅಸ್ತಿ ಕರ್ತವ್ಯಮ್‌ ತ್ರಿಷು ಲೋಕೇಷು ಕಿಂಚನ | ನ ಅನವಾಪ್ತಮ್‌ ಅವಾಪ್ತವ್ಯಮ್‌ ವರ್ತೇ ಏವ ಚ ಕರ್ಮಣಿ -- ಪಾರ್ಥಾ, ಮೂರು ಲೋಕಗಳಲ್ಲೂ ನಾನು ಮಾಡಬೇಕಾದ್ದೂ ಏನೂ ಇಲ್ಲ. ಪಡೆಯದೇ ಇದ್ದು ಪಡೆಯಬೇಕಾದದ್ದೂ ಇಲ್ಲ. ಆದರೂ ನಾನು ಕರ್ಮದಲ್ಲಿ
3.22–3.24
ಉತ್ಸೀದೇಯಃ ಇಮೇ ಲೋಕಾಃ ನ ಕುರ್ಯಾಮ್‌ ಕರ್ಮ ಚೇತ್‌ ಅಹಮ್‌ | ಸಂಕರಸ್ಯ ಚ ಕರ್ತಾ ಸ್ಯಾಮ್‌ ಉಪಹನ್ಯಾಮ್‌ ಇಮಾಃ ಪ್ರಜಾಃ -- ನಾನು ಕರ್ಮ ಮಾಡದೇ ಇದ್ದರೆ ಈ ಜನರೆಲ್ಲಾ ದಾರಿ ತಪ್ಪಿ ಹಾಳಾಗುತ್ತಾರೆ. ಧರ್ಮದ ಕಲಬೆರೆಕೆಗೆ ಕಾರಣನಾಗಿ ಈ ಎಲ್ಲಾ ಜನತೆಯನ್ನು ನಾನೇ ಕೈಯಾರ ಕೆಡವಿದಂತಾದೀತು. ಈ ಮೇಲಿನ ಮೂರು ಶ್ಲೋಕದಲ್ಲಿ ಕೃಷ್ಣ ತನ್ನನ್ನೇ ತಾನು ಉದಾಹರಣೆಯಾಗಿಟ್ಟುಕೊಂಡು ಹಿಂದೆ ಹೇಳಿದ ವಿಷಯವನ್ನು ವಿವರಿಸುತ್ತಾನೆ. ಅರ್ಜುನನ ಸಾರಥಿಯಾಗಿ ನಿಂತಿರುವ ಕೃಷ್ಣ ಹೇಳುತ್ತಾನೆ- "ನನಗೆ ಏನಾದರೂ ಮಾಡಬೇಕಾದ್ದು ಅಥವಾ ಮಾಡದೇ ಇದ್ದರೆ ತೊಂದರೆ ಆಗುವಂತಾದ್ದು ಏನೂ ಇಲ್ಲ, ಆದರೆ ನಾನು ಕರ್ತವ್ಯ ಕರ್ಮದಲ್ಲಿ ನಿಂತಿದ್ದೇನೆ” ಎಂದು. ಮೂರು ಲೋಕದಲ್ಲಿ, ಸೃಷ್ಟಿ-ಸ್ಥಿತಿ-ಸಂಹಾರವನ್ನು ತನ್ನ ನಿತ್ಯ ಕರ್ಮವಾಗಿ ಮಾಡುತ್ತಿರುವ ಭಗವಂತ, ಎಲ್ಲವನ್ನು ತನ್ನ ಪ್ರೀತಿಯ ಭಕ್ತರಿಗಾಗಿ, ಜೀವಜಾತಕ್ಕಾಗಿ ಮಾಡುತ್ತಿದ್ದಾನೆಯೇ ಹೊರತು ಇನ್ನೇನೋ ಲಾಭಕ್ಕಾಗಿ ಅಲ್ಲ. ಒಂದು ವೇಳೆ ಕೃಷ್ಣ ತನ್ನನ್ನು ನಿತ್ಯ ಕರ್ಮದಲ್ಲಿ ತೊಡಗಿಸಿಕೊಳ್ಳದೇ ಇದ್ದಿದ್ದರೆ ಎಲ್ಲರೂ ಆತನನ್ನು ಪ್ರಮಾಣವಾಗಿರಿಸಿಕೊಂಡು ಆತನ ದಾರಿಯನ್ನು ಹಿಡಿಯುತ್ತಿದ್ದರು. ಈ ಕಾರಣಕ್ಕಾಗಿ ಭಗವಂತ ಅವತಾರ ತಾಳಿದಾಗ ಒಬ್ಬ ಸಾಮಾನ್ಯ ಮಾನವನಂತೆ ಕಾಣಿಸಿಕೊಂಡು, ತನ್ನ ನಿತ್ಯ ಕರ್ಮಗಳನ್ನು, ಕರ್ತವ್ಯ ಕರ್ಮವನ್ನು ನಿರ್ವಹಿಸುತ್ತಾನೆ. ಕೃಷ್ಣಾವತಾರದಲ್ಲಿ ನೋಡಿದರೆ ಕೃಷ್ಣ ಸಂಧ್ಯಾವಂದನೆ ಇತ್ಯಾದಿ ಮೂಲ ಕರ್ಮವನ್ನು ತಪ್ಪದೇ ಮಾಡುತ್ತಿದ್ದ. ಇದು ಆತನಿಗೋಸ್ಕರವಲ್ಲ, ಆತನನ್ನು ಹಿಂಬಾಲಿಸುವ ಜನರಿಗೆ ಮಾರ್ಗದರ್ಶನಕ್ಕೋಸ್ಕರ. ಕೃಷ್ಣ ಹೇಳುತ್ತಾನೆ "ನಾನು ಕರ್ಮ ಮಾಡದೇ ಇದ್ದರೆ ಇಡೀ ಲೋಕ ಕರ್ಮ ಪ್ರಜ್ಞೆಯನ್ನು ಕಳೆದುಕೊಂಡು ದಾರಿತಪ್ಪಿಬಿಡುತ್ತದೆ, ಸ್ವಚ್ಛಂದತೆ ಬಂದು ನಿರ್ದಿಷ್ಟ ವ್ಯವಸ್ಥೆ ಹೊರಟು ಹೋಗುತ್ತದೆ" ಎಂದು. ಯಾರಿಗೆ ಯಾವುದು ಧರ್ಮವೋ ಅದನ್ನು ಮಾಡಲೇ ಬೇಕು. ಅದೊಂದು ವ್ಯವಸ್ಥೆ. ಇಲ್ಲದಿದ್ದರೆ ಎಲ್ಲರೂ ತಮಗೆ ತೋಚಿದಂತೆ ಮಾಡಲಾರಂಭಿಸಿಬಿಡುತ್ತಾರೆ. "ಇದರಿಂದ ಅವ್ಯವಸ್ಥೆ ತಾಂಡವವಾಡುತ್ತದೆ ಹಾಗೂ ಅದಕ್ಕೆ ಜವಾಬ್ದಾರಿ ನಾವಾಗುತ್ತೇವೆ" ಎನ್ನುತ್ತಾನೆ ಕೃಷ್ಣ.
Bibek Debroy (1955–2024)The Bhagavad Gita
(22) ‘O Partha!25 In the three worlds, I have no duties. There is nothing I haven’t attained, there is nothing yet to be attained. Yet, I am engaged in action.’