3.38

धूमेनाव्रियते वह्निर्यथादर्शो मलेन च ।
यथोल्बेनावृतो गर्भस्तथा तेनेदमावृतम् ॥
dhūmenāvriyate vahniryathādarśo malena ca |
yatholbenāvṛto garbhastathā tenedamāvṛtam ||
Sri Madhvacharya (1238–1317)Bhagavad Gita Tatparya Nirnaya
3.37–3.39
‘अखिलप्रेरको विष्णुर्ब्रह्माद्यास्तदवान्तराः। असुरा अशुभेश्वेव कामादेरभिमानिनः॥ तत्र कामः कालनेमिः सर्वं धूममलोल्बवत्। शुभमध्याधमजनं क्रमादावृत्य तिष्ठति॥ महाशनस्य तस्येदं नालं तेनानलोऽग्निवत्। भुञ्जान इन्द्रियाविष्टो ज्ञानास्त्रेणैव हन्यते’ इति ब्रह्मवैवर्ते। ज्ञानावरणरूपेणेदमावृणोतीत्यावृतं ज्ञानमिति पुनराह। न केवलं दुष्पूरो नालमिति मन्यते चेत्यनलः। अग्नेरप्यनलः कामो यन्नालमिति मन्यते’ इति च॥37-39॥
Swami Sivananda (1887–1963)Bhagavad Gita
38. As fire is enveloped by smoke, as a mirror by dust, and as an embryo by the amnion, so is this enveloped by that.
Sri Vishwesha Tirtharu (1931–2019)Gitasaroddhara
3.36–3.39 · ಕಾಮ ಆತ್ಮದ ಪ್ರಬಲ ವೈರಿ
ಕಾಮ, ಆತ್ಮದ ಪ್ರಬಲ ವೈರಿ ಕರ್ತವ್ಯಾಕರ್ತವ್ಯ ವಿಷಯದಲ್ಲಿ ಅರ್ಜುನನ ಸಂಶಯಗಳಿಗೆಲ್ಲ ವರಿಹಾರ ದೊರಕಿದೆ. ಈ ಕರ್ತವ್ಯದ ಜ್ಞಾನವಿದ್ದರೂ ಪಾಪಕೃತ್ಯವನ್ನು ಮಾಡಬಾರದೆಂದು ತಿಳಿದಿದ್ದರೂ ಜನರು ಆಕಡೆ ಯಾಕೆಎಳೆಯಲ್ಪಡುತ್ತಾರೆ? ಇಚ್ಛೆಯಿಲ್ಲದಿದ್ದರೂ ಯಾವುದೋ ಒಂದು ಪ್ರಬಲ ಶಕ್ತಿಯ ಒತ್ತಡಕ್ಕೆ ಮಣಿದು ದುಷ್ಪಕಾರ್ಯಗಳು ನಮ್ಮಿಂದ ಸಂಭವಿಸುತ್ತವೆ. ಹೀಗೆ ನಮ್ಮನ್ನು ಬಲಾತ್ಕಾರದಿಂದ ಅಧೋಗತಿ ಗಿಳಿಸುವ ಆ ದುಷ್ಟಶಕ್ತಿ ಯಾವುದು ಎಂದು ಅರ್ಜುನನು ಕೇಳುವನು: ಅಥ ಕೇನ ಪ್ರಯುಕ್ತೋ5ಯಂ ಪಾಪಂ ಚರತಿ ಪೂರುಷಃ । ನಮ್ಮೆಲ್ಲರ ಪರವಾಗಿ ಅರ್ಜುನನು ಈ ಪ್ರಶ್ನೆಯನ್ನು ಮಾಡುತ್ತಿರುವನೆಂದು ನಮಗನಿಸುತ್ತದೆ. ತಿಳಿದೂ ತಿಳಿದೂ ನಾವು ಯಾಕೆ ಅಕೃತ್ಯವನ್ನು ಮಾಡುತ್ತಿರುವೆವೆಂಬುದನ್ನು ಪರಿಶೀಲಿಸಿನಮ್ಮ ಮೇಲೆ ಆಕ್ರಮಣವನ್ನು ಎಸಗುವ ದುಃಶಕ್ತಿಯ ಪರೀಕ್ಷಣವನ್ನು ಮಾಡುವುದರಿಂದ ಅದನ್ನು ಎದುರಿಸುವ ಶಕ್ತಿಯು ನಮಗೆ ಪ್ರಾಪ್ತವಾಗುವುದು. ಕಾಮವೇ ಈ ಪ್ರಬಲ ದುಃಶಕ್ತಿಯಾಗಿದ್ದು ಅದೇ ನಮ್ಮ ಪರಮತತ್ರುವಾಗಿದೆ ಎಂದು ಶ್ರೀಕೃಷ್ಣನು ನಿರೂಪಿಸುತ್ತಾನೆ. ಇಲ್ಲಿ ಕಾಮವೆಂದರೆ ನಮ್ಮನ್ನು ಜೀವನದ ಉತ್ತುಂಗ ಶಿಖರಕ್ಕೆ ಎರಿಸಬಲ್ಲ ಉದಾತ್ತ ಆಕಾಂಕ್ಷೆಯಲ್ಲ. ನಮ್ಮನ್ನು ಸಂಸಾರದ ಕತ್ತಲ ಗುಹೆಯಲ್ಲಿ ಕೆಡಹಬಲ್ಲ ತುಚ್ಛ ಆತೆ-ಲಂಸೆಗಳನ್ನು ಇಲ್ಲಿ "ಕಾಮ' ಎನ್ನುವ ಶಬ್ದದಿಂದ ಕರೆಯಲಾಗಿದೆ. ನಮ್ಮ ಎಲ್ಲ ದುಷ್ಟ ವೃತ್ತಿ ಗಳಿಗೆ ಈ ಕಾಮವೇ ಮೂಲವಾಗಿದೆ. ಕಾಮ ಮತ್ತು ಅದರಿಂದ ಉದ್ಭವಿಸುವ ಕ್ರೋಧ ಇವೆರಡರಿಂದಲೇ ಎಲ್ಲ ಅವ್ಯವಹಾರಗಳೂ ನಡೆಯುವವು. ತಮ್ಮ ದುರಾತೆಗಳನ್ನು ಪೂರೈಸಲು ಸುಖ-ಸಂಪತ್ತುಗಳ ರಾಲಸೆಯಿಂದ ಹೀಸಕ್ಕತ್ವಗಳನ್ನು ಜನರು ಎಸಗುವರು. ಈ ಲಾಲಸೆಯನ್ನು ಪೂರೈಸಲು ಅಡೆತಡೆಯಾದಾಗ ಕೋಪವು ಉಕ್ಕಿಬಂದು ಅದರ ಆವೇಶದಲ್ಲಿ ಹಿಂಸಾಕೃತ್ಯಗಳನ್ನು ನಡೆಸುವರು. ಪ್ರತಿಯೊಂದು ದುರ್ವ್ಯವಹಾರದ ಹಿಂದೆ ಕಾಮದ ಕೈವಾಡ ಇದ್ದೇ ಇರುವುದು. ಸ್ವಕರ್ತವ್ಯದ ಕಡೆಗೆ ಆಸ್ಥೆ ಇರುವವನು ಈ ಮಹಾವೈರಿಯನ್ನು ನಿಗ್ರಹಿಸಲು ಸರ್ವವ್ರಯತ್ನಮಾಡಬೇಕು. ಪ್ರತಿಹತವಾದ ಕಾಮವು ಕ್ರೋಧಕ್ಕೆ ಕಾರಣವಾಗುವುದರಿಂದ ಕಾಮ ಏಷಕ್ರೋಧ ಏಷಃ | ಎಂಬುದಾಗಿ ಕಾಮವನ್ನು ಕ್ರೋಧವೆಂದು ಕರೆದಿದ್ದಾರೆ. ಅಪೇಕ್ಷಿಸಿದ ಭೋಗ್ಯವಸ್ತುಗಳನ್ನು ಬೇಕಾದಂತೆ ಪೂರೈಸಿ ಕಾಮವನ್ನು ತಣಿಸಲು ಸಾಧ್ಯವಿಲ್ಲ. ಇದು; ಮಹಾಶನೋ ಮಹಾಪಾಪ್ಮಾ | ದನ್ನು ನೀಡಿದರೂ ಅದನ್ನು ಸ್ವಾಹಾಕಾರ ಮಾಡಿ ಇನ್ನೂ ಹೆಚ್ಚು ಪ್ರಜ್ವರಿತವಾಗುವುದು. ಕಟ್ಟಿಗೆಯನ್ನು. ಹಾಕಿ ಬೆಂಕಿಯನ್ನು ತಣಿಸಲು ತಕ್ಕವಾಗಬಹುದೆ? ನಜಾತು ಕಾಮಃ ಕಾಮಾನಾ ಮುಷಭೋಗೇನ ಶಾಮ್ಯತಿ | “ಕಮೋಪಭೋಗವೆಷ್ಟು ಮಾಡಿದರೂ ಅದರಿಂದ ನಮ್ಮ ಕಾಮನೆ ತಣಿಯುವುದಿಲ್ಲ'' ದೀರ್ಫಕಾಲದವರೆಗೆ ಸುಖಭೋಗದ ವರಮಾವಧಿಯನ್ನು ಅನುಭವಿಸಿದ ಯಯಾತಿ ರಾಜನ ಉದ್ಗಾರವಿದು! ಮುಪ್ಪು ಹೊಂದಿದ ಮೇಲೂ ಪುನಃ ತಾರುಣ್ಯವನ್ನು ಪಡೆದು ಬಹುಕಾಲದವರೆಗೆರಾಜಭೋಗವನ್ನು ಪಡೆದರೂತನ್ನ ಕಾಮನೆಯು ಹಿಂಗದೆ ಮತ್ತಷ್ಟು ಪ್ರವೃದ್ದವಾಗಿರುವುದನ್ನೇ ಆತನು ಕಂಡನು. ಕಾಮದ ಉಪಾಸನೆಯಿಂದಲ್ಲ ಅದರ ನಿಗ್ರಹದಿಂದಲೇ ನಾವು ಅದನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಲ್ಲೆವೆಂಬ ಸತ್ಯವು ಅವನಿಗೆ ಗೋಚರವಾಯಿತು. ಮುಂಬಯಿ ನಗರದಲ್ಲಿ ಹೋದ ವರ್ಷ ದಂಪತಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡರು. ಮನೆ, ಸಂಬಳ ಎಲ್ಲವೂ ಅನುಕೂ೦ವಿತ್ತು ಅವರು ತಮ್ಮ ಆತ್ಮಹತ್ಯೆಗೆ ಕೊಟ್ಟ ಕಾರಣವಿಂತಿದೆ. : "ತಮಗೆ ೫-೦೦೧೮೦76ರ ಕೋಣೆಯನ್ನು ಕಟ್ಟಿಕೊಳ್ಳಲು ಬೇಕಾದ ಆರ್ಥಿಕ ಅನುಕೂಲತೆಯಿಲ್ಲವೆಂಬ ನಿರಾಶೆಯಿಂದ ಜೀವನದಲ್ಲಿ ಜಿಗುಪ್ಸೆ ಉಂಟಾಗಿ ತಾವು ಆತ್ಮಹತ್ಯೆ ಮಾಡಿ ಕೊಳ್ಳುವೆವು' ಎಂದು ಅವರು ಬರೆದಿಟ್ಟಿದ್ದರು. ವಿಷಯಭೋಗ ಸೌಕರ್ಯಗಳು ಹೆಚ್ಚಿದಷ್ಟು ನಮ್ಮ ಸುಖಲೋಲುಪತೆಯು ಹೆಚ್ಚಿ ನಾವು ಎಷ್ಟು ಅತೃಪ್ತಿ, ದುರ್ಬಲತೆಯನ್ನು ಹೊಂದಬಲ್ಲೆವು ಎಂಬುದಕ್ಕೆ ಇದು ಸರಿಯಾದ ನಿದರ್ಶನ. ಈತೃಹತ್ಯೆಯು ೨೦ನೇ ಶತಮಾನದ ಜನರ ಮನಸ್ಥಿತಿಯನ್ನು ವ್ಯಕ್ತಪಡಿಸು ತ್ತದೆ. ಭೋಗಾನುಭವದ ಬಗ್ಗೆ ವೈಜ್ಞಾನಿಕ ಸೌಕರ್ಯಗಳು ಹೆಚ್ಚಿದಷ್ಟೂ ನಮ್ಮ ಆಶೆ-ಅಪೇಕ್ಷೆಗಳು ಮತ್ತೂ ವಿಸ್ತಾರಗೊಳ್ಳುತ್ತ ಜೀವನದಲ್ಲಿ ಅತೃಪ್ತಿ ಅಶಾಂತಿಗಳು ನೆಲೆಸುವವು. ಪಾಶ್ಚಾತ್ಯ ದೇಶದಲ್ಲಿ ಒಬ್ಬರಾಜನಿದ್ದನು. ದಿನದಲ್ಲಿ ಎಷ್ಟು ಸಲ ತಿಂದರೂ ಆತನಿಗೆ ತೃಪ್ತಿ ಇಲ್ಲ. ಇನ್ನೂ ತಿನ್ನಬೇಕೆಂಬ ಆಕೆ. ಪರಿಮಿತವಾದ ಹೊಟ್ಟಿಗೆ ಅವನ ಆಶೆಯನ್ನು ಪೂರೈಸಲು ಆಗಲಿಲ್ಲ. ಕೊನೆಗೆ ವೈದ್ಯರ ಸಹಾಯವನ್ನು ಪಡೆದು ದಿನವೂ ಇಪ್ಪತ್ತು ಮೂವತ್ತು ಸಲ ತಾನು ಉಂಡದ್ದನ್ನುವಾಂತಿ ಮಾಡಿಸಿತಿರುಗಿ ತಿನ್ನುತ್ತಿದ್ದಂತೆ. ಕಾಮನೆಯ ಚಾಪಲ್ಯವು ನಮ್ಮನ್ನು ಈ ರೀತಿ ಕುಣಿಸುತ್ತದೆ. ಒಂದು ಪ್ರಸಿದ್ಧ ವಚನವಿದೆ. "ಮೊದಲು ಮನುಷ್ಯನು ಮದ್ಯವನ್ನು ಕುಡಿಯಲು ಉಪಕ್ರಮಿಸುತ್ತಾನೆ. ಆಮೇಲೆ ಮದ್ಯವೇ ಮನುಷ್ಯನನ್ನುಕುಡಿಯುತ್ತದೆ'. ಅರ್ಥಾತ್‌ ಅಂತಹ ದುಶ್ಚಟಕ್ಕೆತಾನು ಪೂರ್ಣ ಬಲಿಯಾಗಿ ತನ್ನ ಸ್ವಾತಂತ್ರ್ಯವನ್ನೇ ಕಳೆದುಕೊಳ್ಳುತ್ತಾನೆ. ಹೀಗೆ ನಮ್ಮ ಅಪೇಕ್ಷೆಯನ್ನೆಲ್ಲ ಪೂರೈಸಿಕೊ ೦ಡು ನಾವು ನಮ್ಮ ಕಾಮವನ್ನು ಹಿಂಗಿಸಿಕೊಳ್ಳಬಹು ದೆಂದು ಸರ್ವಥಾ ಭಾವಿಸಬಾರದು. ವಿಷಯಭೊ ೇಗಗಳಿಂದ ಕಾಮವುಮತ್ತೂ ಜೆಡಂಭೂತವಾಗಿಕೊಬ್ಬನಮ್ಮ ನ್ನು ವೂ ರ್ಣವಾಗಿ ಪಾದಾಕ್ರಾಂತಗೊಳಿಸುವುದು. ಆಹಾರವನ್ನುನೀಡಿ ಉದರಾಗ್ನಿಯನ್ನುತಣಿಸಬಹುದಾದರೂ ಕಾಮಾಗ್ನಿಯನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ. ಆದ್ದರಿಂದಲೇ- ದುಪ್ಪೂ ರೇಣಾನಲೇನ ಚ । ಎಂದು ಗಿಣೆಯಲ್ಲಿ ಕಾಮವನ್ನು ವರ್ಣಿಸಲಾಗಿದೆ.
ಕಾಮದ ಆಕ್ರಮಣ
ಕಾಮದ ಆಕ್ರಮಣವಿಧಾನ ಧೂಮೇನಾವ್ರಿಯತೇವಜ್ನಿ ; ಯಥಾದರ್ಶೋ ಮಲೇನಚ। ಯಥೋಲ್ಪೇನಾವೃತೋ ಗರ್ಭ- ಸಥಾ ತೇನೇದಮಾವೃತಮ್‌ || ಎಲ್ಲಜೀವರೂ ಈಕಾಮದ ಪ್ರಭಾವಕ್ಕೆ ಬಲಿಯಾದವರೇ ಕೆಲವರು ಕಡಿಮೆ, ಕೆಲವರು ಹೆಜ್ಜು ಸಂ ತೂ ಈ ಕಾಮ ದಸೆಕೆತ ಕೈ ಸಿಲುಕ ದವ್ಯಕ್ತಿಯೇ ಇಲ್ಲವೆನ್ನ ಬಹುದು, ಬೆಂಕಿಗೆ ಹೊಗೆಯಂತೆ ಕೆಲವರಿಗೆ ಕಾಮದ ಆವರಣವಿರುತ್ತದೆ. ಆ ಕಾಮದಹೊಗೆಯಮಧ್ಯದಲ್ಲೂ ಅವರವ್ವಕ್ತಿತ್ವದವ್ರಭೆಯುವ್ರಕಾತಮಾನವಾಗಿ, ಕಾಣಬಹುದಾಗಿದ್ದರೂ ಅದು ಕಾಮದಿಂದಾಗಿಸ್ವಲ್ಪವಟ್ಟಿಗಾದರೂ ಮಸುಕಾಗಿ ಇರುತ್ತದೆ. ಮಣ್ಣು ಹಿಡಿದ ಕನ್ನಡಿಯಂತೆ ಕೆಲವರು ಇನ್ನೂ ಹೆಚ್ಚು ಕಾಮದ ಆವರಣಕ್ಕೆ ತುತ್ತಾರರೆ, ಗರ್ಭಕ್ಕೆ ಅದರ ಹೊರಗಿನ ಚರ್ಮದ ಆವರಣದಂತೆ ಕೆಲವರ ನ್ನಕಾಮವುಪೂರ್ತಿ ಯಾಗಿ ಮುಚ್ಚಬಿಡುವುದು. ಓ ೀಗೆಕಾಮವುವ್ವಕ್ತ ವೈಚಿತ್ರ ದಿಂದ ಎಲ್ಲ ಜೀವರ ಮೇಲೂ ಆಕ್ರಮಣವನ್ನು ನಡೆಸುತ್ತಿ ರುವುದು. ಧೂಮೇನಾವ್ರಿಯತೇ ವಜ್ನಿಃ | ಕಾಮವು ನಮ್ಮನ್ನು ಆವರಿಸಿದಾಗ ನಮಗೆ ಭಗವಂತನ ಸ್ವರೂಪವೇ ಗೋಚರವಾಗಲಾರದು. ಭಗವಂತನ ಈ ಸ್ವರೂಪಕ್ಕೆ ಈ ಕಾಮ, ಅಜ್ಞಾನಗಳಿಂದ ವನೂಹಾನಿ ವರಿಣಾಮಗಳಾಗದಿದ್ದರೂ ಸಮಗೆ ಆಗಬಹುದಾದ ಪರಮಾತ್ಮನ ದರ್ಶನವನ್ನು ಇದು ತಡೆಹಿಡಿಯಬಲ್ಲ ದು. ಮೋಡ ಮುಸುಕಿದಾಗಸೂರ್ಯನ ಪ್ರಭಾವಲಯಕ್ಕೆ ಏನೂ ಚ್ಯುತಿ ಇರುವುದಿಲ್ಲ. ಸುತ್ತಲೂ ಹೊಗೆಯು ಮುತ್ತಿದಾಗಲೂ ಬೆಂಕಿಯ ಶಕ್ತಿ ವ್ರಕಾಶಗಳು ಅಬಾಧಿತವಾಗಿಯೇ ಇರುವವು. ಆದರೆ ನಾವು ಮಾತ್ರ ಆ ಬೆಳಕನ್ನು ಅನುಭವಿಸದಂತೆ ಮಾಡುವಲ್ಲಿ ಈ ಮೋಡ, ಹೊಗೆಗಳು ಯಶಸ್ವಿಗಳಾಗುವವು. ಅದರಂತೆಯೇ ಈ ಕಾಮದಿಂದ ಪರಮಾತ್ಮನಿಗೆ ಏನೂ ಸಂಭವಿನದಿದ್ದರೂ ನಮಗೆ ಮಾತ್ರ ಭಗವಂತನು ಹೊಗೆ ತುಂಬಿದ ಬೆಂಕಿಯಂತೆ ಅಗೋಚರನಾಗುವನು. ಇದು ಕಾಮದಿಂದ ಭಗವಂತನ ವಿಷಯದಲ್ಲಿ ನಮಗೆ ಆಗಬಹುದಾದ ಅನಾಹುತ. ಯಥಾದರ್ಶೋ ಮಲೇನ ಚ। ಅದರಂತೆ ಕಾಮದಿಂದ ನಮ್ಮ ಅಂತಃಕರಣವು ಮಲಿನವಾಗುವುದು. ವಸ್ತು ವನ್ನು ಯಥಾವತ್ತಾ ಗಿ ತೋರಿಸುವ ಅದರ ಶಕ್ತಿ ಕುಂಠಿತವಾಗುವುದು. ಸ್ವಚ್ಚವಾದ ಕನ್ನಡಿಯೇ ನಮಗೆ ವಸ್ತುವನ್ನು ತೋರಿನಬಲ್ಲದು. ಕೊಳೆಹಿಡಿದ ಕನ್ನ ಡಿಯಲ್ಲಿ ವಸ್ತು ವುವ್ರತಿಬಿಂಬಿತವಾಗಲಾರದು. ಅಂತಃಕರಣದ ಸ್ಥಿಕಿಯೂ ಹೀಗೆಯೇ. ಕಾಮದಿಂದ ಆವೃತವಾದಾಗ ಅದರ ಅಭಿವೃಕ್ತಿತಕ್ತಿಯೇ ನಷ್ಟವ್ರಾಯವಾಗುವುದು. ಯಥೋಲ್ಬೇನಾವೃತೋ ಗರ್ಭಃ। ಕಾಮದಹಿಡಿತಕ್ಕೆ ಒಳಗಾದ ಜೀವನು ಏನೂ ಮಾಡಲಾರದೆತೊಳಲಾಡುವ ವರಿಸ್ಥಿತಿಯಲ್ಲಿರುತ್ತಾನೆ. ಗರ್ಭದಲ್ಲಿ ಶಿಶುವು, ಸುತ್ತಲೂ ಅವರಣವಿರುವುದ ರಿಂದ ಕೈಕಾಲುಗಳನ್ನು ಅಲುಗಾಡಿಸಲು ಸಮರ್ಥವಾಗದೆ ಕ್ಷೇಶಪಡುತ್ತಿರುತ್ತದೆ. ಕಾಮದ ಆಕ್ರಮಣಕ್ಕೆ ತುತ್ತಾ. ದ ಜೀವನಿಂದಲೂ ಯಾವ ಉದ್ವಿ ಷ್ಠ ಕಾರ್ಯವೂ ನೆರವೇರಲಾರದು. ಗರ್ಭಸ್ಥ ಶಿಶುವಿನಂತೆ ಅವನು ಯಾವ ವ್ಯಾವಾರದಲ್ಲೂ ಅಸಮರ್ಥನಾಗುತ್ತಾನೆ. ಹೀಗೆ ಈ ಶ್ಲೋಕದಲ್ಲಿ ಬೇರೆಬೇರೆ ಮಟ್ಟದ ಜನರು ಹೇಗೆ ಕಾಮದ ಉವದ್ರವಕ್ಕೆ ಒಳಗಾಗುವರೆಂಬುದನ್ನು ಹಾಗೂ ಒಬ್ಬನೇ ವ್ಯಕ್ತಿಯು ಸ್ವರೂಪ, ಅಂತಃಕರಣ, ವರಮಾತ್ಮ ಈ ಮೂರು ವಿಷಯಗಳ ಬಗ್ಗೆ ಕಾಮದಿಂದ ಯಾವ ರೀತಿಯ ಅನಾಹುತಕ್ಕೆ ತುತ್ತಾಗುವನೆಂಬುದನ್ನೂ ಸುಂದರವಾದ ರೀತಿಯಲ್ಲಿ ವಿವರಿಸಲಾಗಿದೆ. ವಿದ್ದೆ ೀನಮಿಹ ವೈರಿಣಂ [ ಈ ಆಂತರಿಕ ಶತ್ರುವನ್ನು ವ್ರಪ್ರಥಮವಾಗಿ ನಾವುನಿಗ್ರಹಿಸಬೇಕು.
Bannanje Govindacharya (1936–2020)Bhagavad Gita Pravachana
ಧೂಮೇನ ಅವ್ರಿಯತೇ ವಹ್ನಿಃ ಯಥಾ ಆದರ್ಶಃ ಮಲೇನ ಚ | ಯಥಾ evel ಆವೃತಃ ಗರ್ಭಃ ತಥಾ ತೇನ ಇದಮ್‌ ಆವೃತಮ್‌ -ಹೊಗೆಯಿಂದ ಬೆಂಕಿ ಕವಿದಂತೆ (ಭಗವಂತ), ಕೊಳೆಯಿಂದ ಕನ್ನಡಿ ಕವಿದಂತೆ(ಮನಸ್ಸು), ಗರ್ಭ ಕೋಶದಿಂದ ಭ್ರೂಣ ಕವಿದಂತೆ(ಜೀವ), ಕಾಮದಿಂದ ಈ ಎಲ್ಲಾ ಕವಿದುಕೊಂಡಿದೆ.[ಹೊಗೆ ಬೆಂಕಿಯನ್ನು ಕವಿದಂತೆ ಕಾಮ ಸಜ್ಜನರನ್ನು ಕವಿಯುತ್ತದೆ. ಕೊಳೆ ಕನ್ನಡಿಯನ್ನು ಕೆಡಿಸಿದಂತೆ ಮಧ್ಯಮರನ್ನು. ಗರ್ಭಕೋಶ ಭ್ರೂಣವನ್ನು ಮುಚ್ಚಿದಂತೆ ದುರ್ಜನರನ್ನು] ರಾಗ ದ್ವೇಷಗಳು ಹೇಗೆ ನಮ್ಮ ಕಣ್ಣನ್ನು ಕಟ್ಟುತ್ತವೆ ಎನ್ನುವುದಕ್ಕೆ ಒಂದು ಸುಂದರ ವಿವರಣೆಯನ್ನು ಕೃಷ್ಣ ಇಲ್ಲಿ ಕೊಟ್ಟಿದ್ದಾನೆ. ಎಲ್ಲವನ್ನೂ ಬೆಳಗುತ್ತಿರುವ ಬೆಂಕಿ, ಅದು ತಾನೂ ಬೆಳಗುತ್ತದೆ ಹಾಗೂ ಎಲ್ಲವನ್ನೂ ಬೆಳಗಿಸುತ್ತದೆ. ಈ ಬೆಂಕಿಗೆ ಹೊಗೆ ತುಂಬಿದಾಗ ಅದು ಕಾಣುವುದಿಲ್ಲ ಹಾಗೂ ಬೆಳಗುವುದಿಲ್ಲ. ಭಗವಂತ ಬೆಂಕಿಯಂತೆ. ನಮ್ಮ ರಜೋ ಗುಣ ಹೊಗೆಯಂತೆ. ನಮಗೂ ಭಗವಂತನಿಗೂ ನಡುವೆ ರಜೋಗುಣದ ಪರದೆ ಬೆಂಕಿಯನ್ನು ಸುತ್ತಿದ ಹೊಗೆಯಂತೆ. ಇದು ಸಾತ್ವಿಕ ಮನುಷ್ಯನಿಗೆ ಕೃಷ್ಣ ಕೊಟ್ಟ ದೃಷ್ಟಾಂತ. ಇನ್ನು ರಾಜಸರಿಗೆ ಕೃಷ್ಣ ಕೊಡುವ ದೃಷ್ಟಾಂತ ಮಸಿ ಬಳಿದ ಕನ್ನಡಿ. ಮನಸ್ಸು ಎನ್ನುವ ಕನ್ನಡಿಗೆ ರಜೋಗುಣ ಎನ್ನುವ ಕೊಳೆ ಬಳಿದಂತೆ ಎನ್ನುತ್ತಾನೆ ಕೃಷ್ಣ. ತಾಮಸರಿಗೆ ಕೃಷ್ಣನ ದೃಷ್ಟಾಂತ ಗರ್ಭಚೀಲದಲ್ಲಿರುವ ಭ್ರೂಣ. ಎಲ್ಲವೂ ಕತ್ತಲು. ಕಣ್ಣು ತೆರೆದರೂ ಕಾಣದು, ಜೀವಜಾತವೆನ್ನುವ ಮರಿಯನ್ನು ರಜೋಗುಣ ಎನ್ನುವ ಮೊಟ್ಟೆಯಲ್ಲಿಟ್ಟಂತೆ. ಹೀಗೆ ಬೆಂಕಿಗೆ ಹೊಗೆಯಂತೆ-ಭಗವಂತನಿಗೆ ಆವರಣ ಈ ರಜೋ ಗುಣ; ಕನ್ನಡಿಗೆ ಹಚ್ಚಿದ ಮಸಿಯಂತೆ- ಅಂತಃಕಾರಣಕ್ಕೆ ಆವರಣ ಈ ರಜೋಗುಣ. ಅಂತಃಕರಣ ಕೆಲಸ ಮಾಡದೇ ಇದ್ದಾಗ ಭಗವಂತ ಕಾಣುವುದಿಲ್ಲ ಆಗ- ಜೀವಕ್ಕೆ 'ಭ್ರೂಣದಂತೆ' ಎಲ್ಲವೂ ಕತ್ತಲು. ಎಲ್ಲವೂ ಇದ್ದೂ ಏನೂ ಉಪಯೋಗವಿಲ್ಲದೆ ವ್ಯರ್ಥವಾಗುತ್ತದೆ.
Bibek Debroy (1955–2024)The Bhagavad Gita
(38) ‘Like smoke covers the fire, like dust covers the mirror, like the womb covers the foetus, in that way, this46 is covered by that.’47