3.39

आवृतं ज्ञानमेतेन ज्ञानिनो नित्यवैरिणा ।
कामरूपेण कौन्तेय दुष्पूरेणानलेन च ॥
āvṛtaṃ jñānametena jñānino nityavairiṇā |
kāmarūpeṇa kaunteya duṣpūreṇānalena ca ||
Sri Madhvacharya (1238–1317)Bhagavad Gita Tatparya Nirnaya
3.37–3.39
‘अखिलप्रेरको विष्णुर्ब्रह्माद्यास्तदवान्तराः। असुरा अशुभेश्वेव कामादेरभिमानिनः॥ तत्र कामः कालनेमिः सर्वं धूममलोल्बवत्। शुभमध्याधमजनं क्रमादावृत्य तिष्ठति॥ महाशनस्य तस्येदं नालं तेनानलोऽग्निवत्। भुञ्जान इन्द्रियाविष्टो ज्ञानास्त्रेणैव हन्यते’ इति ब्रह्मवैवर्ते। ज्ञानावरणरूपेणेदमावृणोतीत्यावृतं ज्ञानमिति पुनराह। न केवलं दुष्पूरो नालमिति मन्यते चेत्यनलः। अग्नेरप्यनलः कामो यन्नालमिति मन्यते’ इति च॥37-39॥
Swami Sivananda (1887–1963)Bhagavad Gita
39. O Arjuna, wisdom is enveloped by this constant enemy of the wise in the form of desire, which is unappeasable as fire!
Sri Vishwesha Tirtharu (1931–2019)Gitasaroddhara
3.36–3.39 · ಕಾಮ ಆತ್ಮದ ಪ್ರಬಲ ವೈರಿ
ಕಾಮ, ಆತ್ಮದ ಪ್ರಬಲ ವೈರಿ ಕರ್ತವ್ಯಾಕರ್ತವ್ಯ ವಿಷಯದಲ್ಲಿ ಅರ್ಜುನನ ಸಂಶಯಗಳಿಗೆಲ್ಲ ವರಿಹಾರ ದೊರಕಿದೆ. ಈ ಕರ್ತವ್ಯದ ಜ್ಞಾನವಿದ್ದರೂ ಪಾಪಕೃತ್ಯವನ್ನು ಮಾಡಬಾರದೆಂದು ತಿಳಿದಿದ್ದರೂ ಜನರು ಆಕಡೆ ಯಾಕೆಎಳೆಯಲ್ಪಡುತ್ತಾರೆ? ಇಚ್ಛೆಯಿಲ್ಲದಿದ್ದರೂ ಯಾವುದೋ ಒಂದು ಪ್ರಬಲ ಶಕ್ತಿಯ ಒತ್ತಡಕ್ಕೆ ಮಣಿದು ದುಷ್ಪಕಾರ್ಯಗಳು ನಮ್ಮಿಂದ ಸಂಭವಿಸುತ್ತವೆ. ಹೀಗೆ ನಮ್ಮನ್ನು ಬಲಾತ್ಕಾರದಿಂದ ಅಧೋಗತಿ ಗಿಳಿಸುವ ಆ ದುಷ್ಟಶಕ್ತಿ ಯಾವುದು ಎಂದು ಅರ್ಜುನನು ಕೇಳುವನು: ಅಥ ಕೇನ ಪ್ರಯುಕ್ತೋ5ಯಂ ಪಾಪಂ ಚರತಿ ಪೂರುಷಃ । ನಮ್ಮೆಲ್ಲರ ಪರವಾಗಿ ಅರ್ಜುನನು ಈ ಪ್ರಶ್ನೆಯನ್ನು ಮಾಡುತ್ತಿರುವನೆಂದು ನಮಗನಿಸುತ್ತದೆ. ತಿಳಿದೂ ತಿಳಿದೂ ನಾವು ಯಾಕೆ ಅಕೃತ್ಯವನ್ನು ಮಾಡುತ್ತಿರುವೆವೆಂಬುದನ್ನು ಪರಿಶೀಲಿಸಿನಮ್ಮ ಮೇಲೆ ಆಕ್ರಮಣವನ್ನು ಎಸಗುವ ದುಃಶಕ್ತಿಯ ಪರೀಕ್ಷಣವನ್ನು ಮಾಡುವುದರಿಂದ ಅದನ್ನು ಎದುರಿಸುವ ಶಕ್ತಿಯು ನಮಗೆ ಪ್ರಾಪ್ತವಾಗುವುದು. ಕಾಮವೇ ಈ ಪ್ರಬಲ ದುಃಶಕ್ತಿಯಾಗಿದ್ದು ಅದೇ ನಮ್ಮ ಪರಮತತ್ರುವಾಗಿದೆ ಎಂದು ಶ್ರೀಕೃಷ್ಣನು ನಿರೂಪಿಸುತ್ತಾನೆ. ಇಲ್ಲಿ ಕಾಮವೆಂದರೆ ನಮ್ಮನ್ನು ಜೀವನದ ಉತ್ತುಂಗ ಶಿಖರಕ್ಕೆ ಎರಿಸಬಲ್ಲ ಉದಾತ್ತ ಆಕಾಂಕ್ಷೆಯಲ್ಲ. ನಮ್ಮನ್ನು ಸಂಸಾರದ ಕತ್ತಲ ಗುಹೆಯಲ್ಲಿ ಕೆಡಹಬಲ್ಲ ತುಚ್ಛ ಆತೆ-ಲಂಸೆಗಳನ್ನು ಇಲ್ಲಿ "ಕಾಮ' ಎನ್ನುವ ಶಬ್ದದಿಂದ ಕರೆಯಲಾಗಿದೆ. ನಮ್ಮ ಎಲ್ಲ ದುಷ್ಟ ವೃತ್ತಿ ಗಳಿಗೆ ಈ ಕಾಮವೇ ಮೂಲವಾಗಿದೆ. ಕಾಮ ಮತ್ತು ಅದರಿಂದ ಉದ್ಭವಿಸುವ ಕ್ರೋಧ ಇವೆರಡರಿಂದಲೇ ಎಲ್ಲ ಅವ್ಯವಹಾರಗಳೂ ನಡೆಯುವವು. ತಮ್ಮ ದುರಾತೆಗಳನ್ನು ಪೂರೈಸಲು ಸುಖ-ಸಂಪತ್ತುಗಳ ರಾಲಸೆಯಿಂದ ಹೀಸಕ್ಕತ್ವಗಳನ್ನು ಜನರು ಎಸಗುವರು. ಈ ಲಾಲಸೆಯನ್ನು ಪೂರೈಸಲು ಅಡೆತಡೆಯಾದಾಗ ಕೋಪವು ಉಕ್ಕಿಬಂದು ಅದರ ಆವೇಶದಲ್ಲಿ ಹಿಂಸಾಕೃತ್ಯಗಳನ್ನು ನಡೆಸುವರು. ಪ್ರತಿಯೊಂದು ದುರ್ವ್ಯವಹಾರದ ಹಿಂದೆ ಕಾಮದ ಕೈವಾಡ ಇದ್ದೇ ಇರುವುದು. ಸ್ವಕರ್ತವ್ಯದ ಕಡೆಗೆ ಆಸ್ಥೆ ಇರುವವನು ಈ ಮಹಾವೈರಿಯನ್ನು ನಿಗ್ರಹಿಸಲು ಸರ್ವವ್ರಯತ್ನಮಾಡಬೇಕು. ಪ್ರತಿಹತವಾದ ಕಾಮವು ಕ್ರೋಧಕ್ಕೆ ಕಾರಣವಾಗುವುದರಿಂದ ಕಾಮ ಏಷಕ್ರೋಧ ಏಷಃ | ಎಂಬುದಾಗಿ ಕಾಮವನ್ನು ಕ್ರೋಧವೆಂದು ಕರೆದಿದ್ದಾರೆ. ಅಪೇಕ್ಷಿಸಿದ ಭೋಗ್ಯವಸ್ತುಗಳನ್ನು ಬೇಕಾದಂತೆ ಪೂರೈಸಿ ಕಾಮವನ್ನು ತಣಿಸಲು ಸಾಧ್ಯವಿಲ್ಲ. ಇದು; ಮಹಾಶನೋ ಮಹಾಪಾಪ್ಮಾ | ದನ್ನು ನೀಡಿದರೂ ಅದನ್ನು ಸ್ವಾಹಾಕಾರ ಮಾಡಿ ಇನ್ನೂ ಹೆಚ್ಚು ಪ್ರಜ್ವರಿತವಾಗುವುದು. ಕಟ್ಟಿಗೆಯನ್ನು. ಹಾಕಿ ಬೆಂಕಿಯನ್ನು ತಣಿಸಲು ತಕ್ಕವಾಗಬಹುದೆ? ನಜಾತು ಕಾಮಃ ಕಾಮಾನಾ ಮುಷಭೋಗೇನ ಶಾಮ್ಯತಿ | “ಕಮೋಪಭೋಗವೆಷ್ಟು ಮಾಡಿದರೂ ಅದರಿಂದ ನಮ್ಮ ಕಾಮನೆ ತಣಿಯುವುದಿಲ್ಲ'' ದೀರ್ಫಕಾಲದವರೆಗೆ ಸುಖಭೋಗದ ವರಮಾವಧಿಯನ್ನು ಅನುಭವಿಸಿದ ಯಯಾತಿ ರಾಜನ ಉದ್ಗಾರವಿದು! ಮುಪ್ಪು ಹೊಂದಿದ ಮೇಲೂ ಪುನಃ ತಾರುಣ್ಯವನ್ನು ಪಡೆದು ಬಹುಕಾಲದವರೆಗೆರಾಜಭೋಗವನ್ನು ಪಡೆದರೂತನ್ನ ಕಾಮನೆಯು ಹಿಂಗದೆ ಮತ್ತಷ್ಟು ಪ್ರವೃದ್ದವಾಗಿರುವುದನ್ನೇ ಆತನು ಕಂಡನು. ಕಾಮದ ಉಪಾಸನೆಯಿಂದಲ್ಲ ಅದರ ನಿಗ್ರಹದಿಂದಲೇ ನಾವು ಅದನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಲ್ಲೆವೆಂಬ ಸತ್ಯವು ಅವನಿಗೆ ಗೋಚರವಾಯಿತು. ಮುಂಬಯಿ ನಗರದಲ್ಲಿ ಹೋದ ವರ್ಷ ದಂಪತಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡರು. ಮನೆ, ಸಂಬಳ ಎಲ್ಲವೂ ಅನುಕೂ೦ವಿತ್ತು ಅವರು ತಮ್ಮ ಆತ್ಮಹತ್ಯೆಗೆ ಕೊಟ್ಟ ಕಾರಣವಿಂತಿದೆ. : "ತಮಗೆ ೫-೦೦೧೮೦76ರ ಕೋಣೆಯನ್ನು ಕಟ್ಟಿಕೊಳ್ಳಲು ಬೇಕಾದ ಆರ್ಥಿಕ ಅನುಕೂಲತೆಯಿಲ್ಲವೆಂಬ ನಿರಾಶೆಯಿಂದ ಜೀವನದಲ್ಲಿ ಜಿಗುಪ್ಸೆ ಉಂಟಾಗಿ ತಾವು ಆತ್ಮಹತ್ಯೆ ಮಾಡಿ ಕೊಳ್ಳುವೆವು' ಎಂದು ಅವರು ಬರೆದಿಟ್ಟಿದ್ದರು. ವಿಷಯಭೋಗ ಸೌಕರ್ಯಗಳು ಹೆಚ್ಚಿದಷ್ಟು ನಮ್ಮ ಸುಖಲೋಲುಪತೆಯು ಹೆಚ್ಚಿ ನಾವು ಎಷ್ಟು ಅತೃಪ್ತಿ, ದುರ್ಬಲತೆಯನ್ನು ಹೊಂದಬಲ್ಲೆವು ಎಂಬುದಕ್ಕೆ ಇದು ಸರಿಯಾದ ನಿದರ್ಶನ. ಈತೃಹತ್ಯೆಯು ೨೦ನೇ ಶತಮಾನದ ಜನರ ಮನಸ್ಥಿತಿಯನ್ನು ವ್ಯಕ್ತಪಡಿಸು ತ್ತದೆ. ಭೋಗಾನುಭವದ ಬಗ್ಗೆ ವೈಜ್ಞಾನಿಕ ಸೌಕರ್ಯಗಳು ಹೆಚ್ಚಿದಷ್ಟೂ ನಮ್ಮ ಆಶೆ-ಅಪೇಕ್ಷೆಗಳು ಮತ್ತೂ ವಿಸ್ತಾರಗೊಳ್ಳುತ್ತ ಜೀವನದಲ್ಲಿ ಅತೃಪ್ತಿ ಅಶಾಂತಿಗಳು ನೆಲೆಸುವವು. ಪಾಶ್ಚಾತ್ಯ ದೇಶದಲ್ಲಿ ಒಬ್ಬರಾಜನಿದ್ದನು. ದಿನದಲ್ಲಿ ಎಷ್ಟು ಸಲ ತಿಂದರೂ ಆತನಿಗೆ ತೃಪ್ತಿ ಇಲ್ಲ. ಇನ್ನೂ ತಿನ್ನಬೇಕೆಂಬ ಆಕೆ. ಪರಿಮಿತವಾದ ಹೊಟ್ಟಿಗೆ ಅವನ ಆಶೆಯನ್ನು ಪೂರೈಸಲು ಆಗಲಿಲ್ಲ. ಕೊನೆಗೆ ವೈದ್ಯರ ಸಹಾಯವನ್ನು ಪಡೆದು ದಿನವೂ ಇಪ್ಪತ್ತು ಮೂವತ್ತು ಸಲ ತಾನು ಉಂಡದ್ದನ್ನುವಾಂತಿ ಮಾಡಿಸಿತಿರುಗಿ ತಿನ್ನುತ್ತಿದ್ದಂತೆ. ಕಾಮನೆಯ ಚಾಪಲ್ಯವು ನಮ್ಮನ್ನು ಈ ರೀತಿ ಕುಣಿಸುತ್ತದೆ. ಒಂದು ಪ್ರಸಿದ್ಧ ವಚನವಿದೆ. "ಮೊದಲು ಮನುಷ್ಯನು ಮದ್ಯವನ್ನು ಕುಡಿಯಲು ಉಪಕ್ರಮಿಸುತ್ತಾನೆ. ಆಮೇಲೆ ಮದ್ಯವೇ ಮನುಷ್ಯನನ್ನುಕುಡಿಯುತ್ತದೆ'. ಅರ್ಥಾತ್‌ ಅಂತಹ ದುಶ್ಚಟಕ್ಕೆತಾನು ಪೂರ್ಣ ಬಲಿಯಾಗಿ ತನ್ನ ಸ್ವಾತಂತ್ರ್ಯವನ್ನೇ ಕಳೆದುಕೊಳ್ಳುತ್ತಾನೆ. ಹೀಗೆ ನಮ್ಮ ಅಪೇಕ್ಷೆಯನ್ನೆಲ್ಲ ಪೂರೈಸಿಕೊ ೦ಡು ನಾವು ನಮ್ಮ ಕಾಮವನ್ನು ಹಿಂಗಿಸಿಕೊಳ್ಳಬಹು ದೆಂದು ಸರ್ವಥಾ ಭಾವಿಸಬಾರದು. ವಿಷಯಭೊ ೇಗಗಳಿಂದ ಕಾಮವುಮತ್ತೂ ಜೆಡಂಭೂತವಾಗಿಕೊಬ್ಬನಮ್ಮ ನ್ನು ವೂ ರ್ಣವಾಗಿ ಪಾದಾಕ್ರಾಂತಗೊಳಿಸುವುದು. ಆಹಾರವನ್ನುನೀಡಿ ಉದರಾಗ್ನಿಯನ್ನುತಣಿಸಬಹುದಾದರೂ ಕಾಮಾಗ್ನಿಯನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ. ಆದ್ದರಿಂದಲೇ- ದುಪ್ಪೂ ರೇಣಾನಲೇನ ಚ । ಎಂದು ಗಿಣೆಯಲ್ಲಿ ಕಾಮವನ್ನು ವರ್ಣಿಸಲಾಗಿದೆ.
Bannanje Govindacharya (1936–2020)Bhagavad Gita Pravachana
ಆವೃತಮ್‌ ಜ್ಞಾನಮ್‌ ಏತೇನ ಜ್ಞಾನಿನಃ ನಿತ್ಯವೈರಿಣಾ |] ಕಾಮ ರೂಪೇಣ ಕೌಂತೇಯ ८०८९ ८९४ ಅನಲೇನ ಚ -- £ ಕೌಂತೇಯಾ, ಬೆಂಕಿಯಂತೆ ಕಬಳಿಸಿದಷ್ಟೂ ತೃಪ್ತಿಯಿಲ್ಲದೆ, ಕೊನೆಯಿಲ್ಲದ ಈ ಕಾಮವೆಂಬುದು ಸಾಧಕನ ಚಿರಶತ್ರು. ಇದು ಬಲ್ಲವರ ತಿಳಿವನ್ನೂ ಕವಿದು ಮಂಕಾಗಿಸುತ್ತದೆ. ಈ ರಜೋಗುಣದ ಪರದೆ- ಜ್ಞಾನ ಬಂದವನಿಗೆ ಇದ್ದ ಜ್ಞಾನ ಉಪಯೋಗವಾಗದಂತೆ, ಜ್ಞಾನವಿಲ್ಲದವನಿಗೆ ಜ್ಞಾನ ಬರದಂತೆ-ತಡೆಗೋಡೆಯಾಗಿ ನಿಲ್ಲುತ್ತದೆ. ರಾಗ-ದ್ವೇಷ ನಮ್ಮ ಕಡು ವೈರಿ. ಅದು ಎಷ್ಟು ಭಯಂಕರ ಎಂದರೆ ಅದನ್ನು 'ಬಯಕೆಯ ಬೆಂಕಿ' ಎನ್ನಬಹುದು. ಅದಕ್ಕೆ ಎಷ್ಟು ಬಡಿಸಿದರೂ ಅದು ಸಾಕು ಎನ್ನದು. ಕುಂತಿಯಂತಹ ಮಹಾ ತಾಯಿಯ ಮಗನಾದ ನೀನು ಈ ಕಾಮ(ಬಯಕೆ, Attachment) ಎನ್ನುವ ಜ್ಞಾನ ವಿರೋಧಿ ಶತ್ರುವನ್ನು ७९ ಎನ್ನುತ್ತಾನೆ ಕೃಷ್ಣ. ಇಲ್ಲಿ ನಮಗೆ ನಮ್ಮ ನಿಜ ವೈರಿ ನಮ್ಮ ಕಾಮ ಅಥವಾ ಬಯಕೆ, ಅಥವಾ ರಾಗ-ದ್ವೇಷ ಎಂದು ತಿಳಿಯಿತು. ಹಾಗಿದ್ದರೆ ಈ ವೈರಿಯ ನೆಲೆ ಯಾವುದು? ಇದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾನೆ.
Bibek Debroy (1955–2024)The Bhagavad Gita
(39) ‘O son of Kunti!48 This is the perennial enemy of the wise. Knowledge is covered by this desire that is insatiable like the fire.’