4.11

ये यथा मां प्रपद्यन्ते तांस्तथैव भजाम्यहम् ।
मम वर्त्मानुवर्तन्ते मनुष्याः पार्थ सर्वशः ॥
ye yathā māṃ prapadyante tāṃstathaiva bhajāmyaham |
mama vartmānuvartante manuṣyāḥ pārtha sarvaśaḥ ||
Sri Madhvacharya (1238–1317)Bhagavad Gita Tatparya Nirnaya
तथैव भजामि। तदनुसारफलदानरूपेण। अन्यदेवतायाजिनामपि मत्समर्पणेन वैष्णवमार्गानुवर्तनेनैव सम्यक् फलं भवति। ‘अन्यदैवतपूजाऽपि यस्मिन्नन्ते समर्पिता। स्वर्गादिफलहेतुः स्यान्नान्यथा तं भजेद्धरिम्’ इत्याग्नेये॥11॥
Swami Sivananda (1887–1963)Bhagavad Gita
11. In whatever way men approach Me, even so do I reward them; My path do men tread in all ways, O Arjuna!
Sri Vishwesha Tirtharu (1931–2019)Gitasaroddhara
ಜ್ಞಾನಿಗಳು ಮತ್ತು ತ್ರೈವಿದ್ಯರು
ಜ್ಞಾನಿಗಳು ಮತ್ತು ತೈವಿದ್ಯರು ಇನ್ನು ಮುಂದೆಕರ್ಮಯೋಗದಲ್ಲಿ ಪೂರ್ಣತೆಯನ್ನು ಪಡೆದ ಜ್ಞಾನಿಗಳಿಗೂ ಇತರರಿಗೂ ಇರುವ ವ್ಯತ್ಯಾಸವನ್ನು ಗೀತೆಯು ವಿವರಿಸುತ್ತದೆ. ಜ್ಞಾನಿಗಳು ಭಗವಂತನನ್ನೇ ಅನನ್ಯವಾಗಿ ಪೂಜಿಸುವರು. ಅವರಿಗೆ ಯಾರಿಂದಲೂ ಯಾವ ಲೌಕಿಕಪ್ರಯೋಜನಗಳ ಅಭಿಲಾಷೆಯೂ ಇರುವುದಿಲ್ಲ. ಅವರು ತಮ್ಮ ಲೌಕಿಕ ಆಶೆಗಳನ್ನು ಪೂರೈಸುವುದಕ್ಕಾಗಿ ಇತರ ದೇವತೆಗಳ ಬೆನ್ನು ಹಿಡಿಯಲಾರರು. ಸರ್ವೋತ್ತಮವಾದ ಪರವಸ್ತುವು ಒಂದೇ ಎಂಬ ದೃಢನಿಷ್ಠೆಯಿಂದ ಶ್ರೀಹರಿಯನ್ನೇ ಶರಣೆನ್ನುವರು. ಇಂತಹವರನ್ನು ಭಾಗವತರೆಂದು ಕರೆಯಲಾಗು ತ್ತದೆ. ಶ್ರೀಭೀಮಸೇನನು ಇಂತಹ ಪರಮಭಾಗವತರಲ್ಲಿ ಅಗ್ರಗಣ್ಯನು. ಈ ಭಗವನ್ನಿಷ್ಠೆಯ ಅಚಲನಿರ್ಧಾರವು ಭೀಮಸೇನನ ಜೀವನದಲ್ಲಿ. ಪೂರ್ಣವಾಗಿ ಪ್ರತಿಬಿಂಬಿತವಾಗಿರುವುದನ್ನು ನಾವು ಕಾಣಬಹುದು. ಧನುರ್ವಿದ್ಯೆಯ ಅಭ್ಯಾಸವು ಭೀಮಸೇನನಿಗೆ ಏನೂ ರುಚಿಸಲಿಲ್ಲ. ಅದರಲ್ಲಿ ಏನೂ ಅಭಿರುಚಿಯನ್ನು ಭೀಮಸೇನನು ತೋರಿಸಲಿಲ್ಲ. ತತ್ರುವಧೆ ಮುಂತಾದಸ್ವಾರ್ಥ ಸಾಧನೆಗಾಗಿ ಆಗ್ನಿ ವಾಯು ಮುಂತಾದ ದೇವತೆಗಳನ್ನು ಬೇಡುವ ಪ್ರಸಂಗಗಳು ಧನುರ್ಧಾರಿಗೆನಿರಂತರವಾಗಿ ಬರುತ್ತವೆ. ಭೀಮಸೇನನಿಗೆ ಇದು ಇಷ್ಟವಿಲ್ಲ ತನ್ನ ಲೌಕಿಕ ಕಾಮನೆಗಳನ್ನು ಈಡೇರಿಸಿಕೊಳ್ಳಲು ದೇವತೆಗಳನ್ನು ಯಾಚಿಸುವಂತಹ ಪ್ರಸಂಗಗಳನ್ನು ಯಾಕಿತಂದುಕೊಳ್ಳಬೇಕೆಂದು ಆರೋಚಿಸಿ ಧನುರ್ವಿದ್ಯೆಯಲ್ಲಿ ವಿಶೇಷ ಉತ್ಸಾಹವನ್ನು ತೋರಿಸಲಿಲ್ಲ. ಮಂತ್ರ ಪ್ರಾರ್ಥನೆಗಳ ಆಶ್ರಯವನ್ನು ಅಪೇಕ್ಷಿಸದೆ. ತನ್ನ ಬಾಹುಬಲವನ್ನೇ ಅವಲಂಬಿಸಿ ಗದೆ ಮುಂತಾದ ಆಯುಧಗಳಿಂದಲೇ ಶತ್ರುನಿಗ್ರಹಕಾರ್ಯವನ್ನು ಸಾಧಿಸಿದನು. ಏಕಚಕ್ರನಗರದಲ್ಲಿ ಉಳಿದ ಪಾಂಡವರು ತಮ್ಮ ಜೀವನನಿರ್ವಾಹಕ್ಕಾಗಿ ಭಿಕ್ಷೆಯನ್ನು ಬೇಡುವಂತಹ ದೀನವೃತ್ತಿಯೂ ಭೀಮಸೇನನಿಗೆ ರುಚಿಸಲಿಲ್ಲ. ಸ್ವಕರ್ತವ್ಯನಿಷ್ಠನಾದವನು ದೀನಜೀವನವನ್ನು ಯಾಕೆ ನಡೆಸಬೇಕು? ಕರ್ತವ್ಯವನ್ನು ಸರಿಯಾಗಿ ಪಾಲಿಸುತ್ತಿ ದ್ವವನಿಗೆ ತನಗೆ ಬೇಕಾಗುವುದನ್ನು ಸಮಾಜದಿಂದ ಪಡೆಯಲು ಸಹಜವಾಗಿಯೇ ಅಧಿಕಾರವಿದೆ. ಆದ್ದರಿಂದ ಭಿಕ್ನಾಮಟಂಶ್ಚ ಹುಂಕಾರಾತ್‌ ಕರವತ್‌ ವೈಶ್ಯತೋಸಗ್ರಹೀತ್‌ । ತನ್ನ ಹುಂಕಾರನಾದದ ಬಲದಿಂದಲೇ ರಾಜನು ಕಪ್ಪಕಾಣಿಕೆಗಳನ್ನು ಸ್ವೀಕರಿಸುವಂತೆ ಜನರಿಂದ ತನಗೆ ಬೇಕಾಗುವಪ್ಪು ಆಹಾರ ಪದಾರ್ಥಗಳನ್ನು ಯಾವ ಯೋಚನೆ, ಯಾಚನೆಗಳಿಲ್ಲದೆ ಗೌರವಪೂರ್ಣ ರೀತಿಯಿಂದಲೇ ಪಡೆಯು ತ್ತಿದ್ದನು. ಹೀಗೆ ಮಾನವರಲ್ಲೂ ದೇವತೆಗಳಲ್ಲೂ ತನ್ನ ಲೌಕಿಕ ಅವೇಕ್ಷೆಯನ್ನು ಪೂರೈಸುವುದಕ್ಕಾಗಿ ಯಾವುದನ್ನೂ ಬೇಡದೆ ಧೀರಜೀವನವನ್ನು ಬಾಳಿದ ವೀರಭಾಗವತನೆಂದು ಭೀಮಸೇನನನ್ನು ಕರೆಯಬಹುದು. ಪರಮಾತ್ಮನ ಚರಣಗಳಲ್ಲಿ ಮಾತ್ರ ಅವನ ತಲೆ ಬಾಗಬಲ್ಲದು. ತನ್ನ ಸ್ವಾರ್ಥಕ್ಕಾಗಿ ಎಲ್ಲರ ಮುಂದೆತಲೆತಗ್ಗಿಸಿಕೊಂಡು ನಡೆಯುವ ಹೀನಜೀವನವನ್ನು ಭಗವದ್‌ ಭಕ್ತನು ನಡೆಸಬಾರದೆಂದು ಭೀಮಸೇನನು ತೋರಿಸಿದ್ದಾನೆ. ಪರಮಾತ್ಮನಲ್ಲಿಯೂ ಕೂಡ ಲೌಕಿಕ ಅಪೇಕ್ಷೆಯನ್ನು ತಣಿಸುವುದಕ್ಕಾಗಿ ಭೀಮಸೇನನ ಶಿರವು ಮಣಿಯದು. ಮಹಾಭಾರತ ಯುದ್ಧದಲ್ಲಿ ಅಶ್ವತ್ಥಾಮನು ದ್ರೋಣಾಚಾರ್ಯರ ನಿಧನದ ಉದ್ವೇಗದಿಂದ. ಪ್ರತೀಕಾರದ ಭರದಲ್ಲಿ ವಾಂಡವಸ್ಥೆನ್ಯದಲ್ಲಿ ಎಲ್ಲ ಅಸ್ತ್ರಗಳಿಗಿಂತಲೂ ವೀರ್ಯವತ್ತರವೂ ಅಮೋಘವೂ ಆದ ನಾರಾಯಣಾಸ್ಥವನ್ನು ಪ್ರಯೋಗಿಸಿದನು. ಅದನ್ನು ಯಾವ ಅಸ್ವ್ರದಿಂದಲೂ ಪ್ರತಿಭಟಿಸಲು ಸಾಧ್ಯವಿರಲಿಲ್ಲ. ಪ್ರತಿಯೊಬ್ಬನನ್ನೂ ಆಹುತಿ ತೆಗೆದುಕೊಳ್ಳುವ ಅಪಾರಶಕ್ತಿಯು ಅದರಲ್ಲಿ ಇತ್ತು ಆದರೆ ಶಸ್ತ್ರವನ್ನು ಕೆಳಗಿಟ್ಟು ತಲೆಬಾಗಿಸಿ ಗೌರವಿಸಿದರೆ ಆತನಿಗೆ ಆ ಭಯಂಕರ ಅಸ್ವವು ಏನೂ ಮಾಡಲಾರದು. ಕೃಷ್ಣನ ಸಲಹೆಯಂತೆ ಪಾಂಡವಸ್ಯೆನ್ಯದ ಎಲ್ಲ ಯೋಧರು ನಾರಾಯಣಾಸ್ವಕ್ಕೆ ನಮಸ್ಕರಿಸಿ ಗೌರವವನ್ನು ಸಲ್ಲಿಸಿ ಪಾರಾದರು. ಇದು ನಾರಾಯಣಾಸ್ವ್ರವಾದ್ದರಿಂದ ಪರಮಾತ್ಮನಿಗೆ ನಮಸ್ಕರಿಸುವುದರಿಂದ ಕ್ಚತ್ರಿಯ ವೀರನಿಗೆ ಏನೂ ಅಪಮಾನವಿಲ್ಲವಾದುದರಿಂದ ಭೀಮಸೇನನಿಗೂ ಹಾಗೆ ಮಾಡಲು ಸೂಚಿಸಲಾಯಿತು. ಆದರೆ ಭೀಮಸೇನನು ಪರಮಾತ್ಮನಿಗೂ ನಮಸ್ಕರಿಸಿಶರಣಾಗತನಾಗಲು ಒಪ್ಪಲಿಲ್ಲ. ತನ್ನ ಜೀವ ಉಳಿಸಿಕೊಳ್ಳುವುದಕ್ಕಾಗಿ ದೇವರಿಗೆ ತಾನು ತಲೆಬಾಗಬೇಕೆ? ಜ್ಞಾನ, ಭಕ್ತಿ ಪ್ರಸಾದಗಳನ್ನು ಹೊರತು ಶ್ರೀಹರಿಯಿಂದಲೂ ಬೇರೆ ಯಾವುದನ್ನೂ ಬಯಸಲಾರೆನೆಂಬ ಧೀರಸಂಕಲ್ಪವು ಭೀಮನದಾಗಿತ್ತು ತನ್ನ ಪ್ರಾಣ ಉಳಿಸುವುದಕ್ಕಾಗಿ ದೇವರಲ್ಲಿಯೂ ಶಸ್ತ್ರವನ್ನು ಕೆಳಗಿಟ್ಟು ಬಗ್ಗಿಬೇಡುವ ದೀನಪ್ರವೃತ್ತಿಯು ಭೀಮನಿಗೆ ರುಚಿಸಲಿಲ್ಲ. ಹೀಗೆ ಯಾರಲ್ಲೂ ಏನನ್ನೂ ಬೇಡದ, ಪರಮಾತ್ಮನಲ್ಲೂ ಲೌಕಿಕ ಫಲಗಳನ್ನು ಬಯಸದ ಧೀರ ಭಾಗವತ ವೃತ್ತಿಯು ಭೀಮನದಾಗಿತ್ತು ಆದುದರಿಂದ ಪರಿಪೂರ್ಣ ರೀತಿಯಿಂದ ಭಾಗವತ ಧರ್ಮವನ್ನು ತನ್ನ ಜೀವನದಲ್ಲಿ ಅಳವಡಿಸಿ ಕೊಂಡು ಮಹಾನುಭಾವನೆಂದು ಭೀಮಸೇನನು ಪರಿಗಣಿಸಲ್ಪಟ್ಟಿದ್ದಾನೆ. ಭೀಮಸೇನನಂತಹ ವೀರವ್ರತರಾಗದಿದ್ದರೂ ನಿರಪೇಕ್ಷಭಾವದಿಂದ ಕ್ಹುದ್ರಫಲಗಳಿಗಾಗಿ ನಾನಾದೇವತೆಗಳ ಕಡೆಗೆ ಹೋಗದೆ ಸರ್ವೋತ್ತಮನಾರ ಶ್ರೀಹರಿಯನ್ನೇ ಅನನ್ಯಭಾವದಿಂದ ಪ್ರಾರ್ಥಿಸಿಕೊಂಡು ಒಂದೇ ಸರ್ವೋತ್ತಮ ವಸ್ತುವಿನಲ್ಲಿ ನಿಷ್ಠೆಯನ್ನು ವ್ಯಕ್ತಪಡಿಸಿಕೊಂಡು ನಡೆಯುವವರನ್ನು ಭಾಗವತ ರೆಂದೂ ನಿಷ್ಕಾಮ ಭಕ್ತರೆಂದೂ ಕರೆಯಲಾಗುವುದು. ಸರ್ವೋತ್ತಮನಾದ ಪರವಸ್ತುವನ್ನು ತಿಳಿದುಕೊಂಡಿದ್ದರೂ ಅದರ ಸರ್ವಾಂತರ್ಯಾಮಿತ್ವ ಹಾಗೂ ಸರ್ವಕಾರಕತ್ವವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ. ಲೌಕಿಕ ಫಲಕಾಮನೆಯಿಂದ ದೇವತಾರಾಧನೆಗಳನ್ನು ಮಾಡಿಕೊಂಡು ಕೆಲವೊಮ್ಮೆ ಮಾತ್ರ ಪರಮಾತ್ಮನನ್ನು ಸ್ಥರಿಸುವ ಜನರನ್ನೇನಾವು ನೋಡುತ್ತಿದ್ದೇವೆ. ಇವರೆಲ್ಲರೂ ತೈವಿದ್ಯರು. ಇವರಿಗೆ ಶ್ರೀಹರಿಯಲ್ಲಿ ಭಕ್ತಿಯಿದ್ದರೂ ಅವನ ಮಹಿಮೆಯ ಸರಿಯಾದ ಪರಿಜ್ಞಾನವಿಲ್ಲ. ಆ ಭಕ್ತಿಯನ್ನು ತಮ್ಮ ಜೀವನದಲ್ಲಿ ಸರಿಯಾಗಿ ಅಳವಡಿಸಿಕೊಂಡಿರುವುದಿಲ್ಲ. ಕಾರ್ಯಗಳನ್ನು ಮಾಡುವಾಗಲೆಲ್ಲ ಭಗವಂತನ ಸರ್ವಕರ್ತ್ಯತ್ವವನ್ನೂ ಮರೆಯುತ್ತಾರೆ. ತಾನೇ ಕರ್ತನೆಂದೂ ದೇವತೆಗಳೇ ಫಲದಾತೃಗಳೆಂದೂ ತನ್ನಲ್ಲೂ ದೇವತೆಗಳಲ್ಲೂ ಸ್ವಾತಂತ್ರ್ಯದ ಭ್ರಮೆಯು ಅವನಲ್ಲಿ ಮೂಡಿರುತ್ತದೆ. ಫಲದಾಸೆಯಿಂದ ಆತನ ಹೃದಯವುಕೆರಳಿರುತ್ತದೆ. ಭಾಗವತರಿಗೂ ಈ ತ್ರೈವಿದ್ಯರಿಗೂ ಪರಮಾತ್ಮನು ಅನುಗ್ರಹಿಸುವ ವಿಧಾನವು ಭಿನ್ನಭಿನ್ನವಾಗಿರುತ್ತದೆ. ಪರಮಾತ್ಮನನ್ನೂ ಆತನ ಮಹಿಮೆಯನ್ನೂ ಸರಿಯಾಗಿ ಅರಿತು ಆತನನ್ನೇ ಭಾಗವತರು ಅನನ್ಯತೆಯಿಂದ ಪೂಜಿಸುತ್ತಿದ್ದಾರೆ. ಯಾರು ಯಾವ ಕರ್ಮಗಳನ್ನು ಅನುಷ್ಠಾನ ಮಾಡಿದರೂ ಯಾವ ದೇವತೆಯನ್ನು ಪೂಜಿಸಿದರೂ ಸರ್ವಾಂತರ್ಯಾಮಿಯಾದ ಸಕಲಶಬ್ದಗಳಿಂದ ಪ್ರತಿಪಾದ್ಯನೂ ಆದ ವಿಷ್ಣು ವನ್ನೇ ಪೂಜಿಸಿದಂತಾಗುವುದು. ಸರ್ವದೇವನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ । ಯಾರನ್ನು ಸೇವಿಸಿದರೂ ನಮಗೆ ಅದರಿಂದ ದೊರೆಯುವಕ್ಷುದ್ರ ಫಲವನ್ನು ಕೂಡನೀಡುವವನು ಶ್ರೀಹರಿಯೇ। ಪರಬ್ರಹ್ಮನು ಒಬ್ಬನೇ ಇದ್ದು ಆತನೇ ಎಲ್ಲ ದೇವತೆಗಳಲ್ಲೂ ಅವರ ರೂಪ, ನಾಮಗಳಿಂದಲೂ ಇದ್ದು ಸರ್ವಾಂತರ್ಯಾಮಿಯಾಗಿ ಕಾರ್ಯವನ್ನುನಡೆಸುತ್ತಾ ನೆ. ಯಾರನ್ನೇ ನಮಸ್ಕರಿಸಿ ಪೂಜಿಸಿದರೂ ಅದು ಸರ್ವರ ಒಡೆಯನಾದ ಆ ಪರಮಾತ್ಮನಿಗೆ ಸಮರ್ಪಿತ ವಾಗುತ್ತದೆ. ಆದರೆತೈವಿದ್ಯರಿಗೆ ಇಂತಹ ಅನುಸಂಧಾನವಾಗಲಿ, ಭಾವನೆ ಯಾಗಲಿ ಇರುವುದಿಲ್ಲ. ಈ ತಾತ್ತ್ವಿಕ ದೃಷ್ಟಿಯಿಲ್ಲದಿರುವುದರಿಂದ ಶ್ರೀಹರಿಯ ಸರ್ವಾಂತರ್ಯಾಮಿತ್ವದ ಸ್ಮರಣೆ ಹಾಗೂ ಎಲ್ಲ ದೇವತೆಗಳಲ್ಲೂ ನೆಲೆಸಿರುವ ಏಕಮೇವಪರವಸ್ತುವಿನ ಅನುಸಂಧಾನವಿಲ್ಲದೆತೈವಿದ್ಯರು ನಾನಾ ದೇವತೆಗಳನ್ನು ಭಜಿಸುವರು. ಅಲ್ಲಿಯೂ ಪರಮಾತ್ಮನನ್ನೇ ಪೂಜಿಸುತ್ತಿದ್ದರೂತಾವು ಯಾರನ್ನು ಪೂಜಿಸುತ್ತಿರುವೆವೆಂಬುದನ್ನೇ ಅವರು ಅರಿಯರು. ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ | ಈ ಭಕ್ತರೂ ತಮಗೆ ತಿಳಿಯದಂತೆಯೇ ಪರಮಾತ್ಮ ನ ಕಡೆಗೆ ಸಾಗುತ್ತಿ ದಾ ೆ ತಾವು ಪೂಜಿಸುವ ವಸ್ತುವು ಪರಮಾತ್ಮನೆಂದು ಗೊತ್ತಿಲ್ಲದೆಯೇ ಅವನನ್ನು ವೂಜಿಸುತ್ತಿರುತ್ತಾರೆ. ಜ್ಞಾನಿಗಳಾದ ಭಾಗವತರಿಗೆ ಸಿಗುವಂತಹ ಶ್ರೇಷ್ಠ ಫಲವು ದೊರೆಯದಿದ್ದರೂ ಇವರ ಕ್ಷುದ್ರಕಾಮನೆಗಳನ್ನು ಪೂರೈಸಿ ಪರಮಾತ್ಮನು ಇವರನ್ನು ಅನುಗ್ರಹಿಸುತ್ತಿರುತ್ತಾನೆ. ಯೇಯಥಾಮಾಂ ಪ್ರಪದ್ಯಂತೇ ತಾಂಸ್ಪಥೈವ ಭಜಾಮ್ಯಹಂ | ಅವರವರ ಭಕ್ತಿ ಸಾಧನೆಗಳಿಗೆ ಅನುಸಾರವಾಗಿ ತಾನು ಅವರಿಗೆ ಫಲವನ್ನು ನೀಡುವುದಾಗಿ ಭಗವಂತನು ಹೇಳಿದ್ದಾನೆ. ಇನ್ನು ಇತರ ದೇವತೆಗಳ ಬಳಿಗೆ ಓಡದೇ ಪರಮಾತ್ಮನನ್ನು ತಮ್ಮ ಲೌಕಿಕ ಫಲಗಳಿಗಾಗಿ ಬೇಡುವ ಸಕಾಮಭಕ್ತರೂ ಇದ್ದಾರೆ. ಇಂತಹಸಕಾಮಭಕ್ತಿಯಿಂದ ಸಂಸಾರಬಂಧನದ ಬಿಡುಗಡೆಯಾಗದಿದ್ದರೂ ಕ್ರಮವಾಗಿ ಅಂತಹ ಸ್ಥಿತಿಗೆ ಒಯ್ಯಲು ಈ ಸಕಾಮಭಕ್ತಿಯು ಕಾರಣವಾಗುತ್ತದೆ. ಪರಮಾತ್ಮನಲ್ಲಿ ಭಕ್ತಿಯನ್ನು ಮಾಡದೆ ಕರ್ತವ್ಯಹೀನವಾದ ನಾಸ್ತಿಕ ಜೀವನವನ್ನು ನಡೆಸುವುದಕ್ಕಿಂತ ಲೌಕಿಕ ಆಶಾಭಾವದಿಂದಲಾದರೂ ಪರಮಾತ್ಮನ ಕಡೆಗೆ ಸಾಗುವಸಕಾಮ ವ್ಯಕ್ತಿಯ ಜೀವನವೇ ಶ್ರೇಷ್ಠವಾಗಿದೆ. ನಾನಾವಿಧಕಾಮನೆಗಳಿಗೆ ಬಲಿಯಾಗಿ ಶ್ರೀಮಂತರಲ್ಲಿ ಅಧಿಕಾರಿಗಳಲ್ಲಿ ಬಾಗಿ ಬೇಡುವ ದೀನಜೀವನಕ್ಕಿಂತ ತಮ್ಮ ಕಾಮನೆಗಳನ್ನು ತಣಿಸಲು ದೇವತೆಗಳು ಹಾಗೂ ಭಗವಂತನಕಡೆಗೆಸಾಗುವ ಪ್ರವೃತ್ತಿಯು ಎಷ್ಟೋಪಾಲುಮಿಗಿಲಾದುದು. ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ ॥ ಎಂದು ಸಕಾಮಭಕ್ತರೂ ತನ್ನನ್ನು ಹೊಂದುವ ಮಾರ್ಗದಲ್ಲೇ ನಡೆದಿದ್ದಾರೆಂದು ಶ್ರೀಕೃಷ್ಣನು ಹೇಳಿದ್ದಾನೆ. ಮಲತಾಯಿಯಮಾತುಗಳಿಂದ ಅವಮಾನಿತನಾದಧ್ರುವರಾಜನುಕಾಡಿನಲ್ಲಿ ತವಸ್ಸು ಮಾಡಿ ಪರಮಾತ್ಮನ ದರ್ಶನ ಪಡೆಯಲಿಲ್ಲವೆ? ಕಾಮನೆಯಿಂದ ಲಾದರೂದೇವರಕಡೆಗೆತಿರುಗಿದರೆ ನಮ್ಮನ್ನು ಆತನು ಅತಿ ಎತ್ತರಕ್ಕೆ ಏರಿಸುವನು. ಧ್ರುವರಾಜನು ದೇವರನ್ನು ಸಾಕ್ಟಾತ್ಮರಿಸಿಕೊಂಡು ಅತಿ ಸಮೃದ್ಧವಾದ ಲೌಕಿಕ ಫಲವನ್ನು ಪಡೆದರೂ ಅವನಿಗೆ ತನ್ನ ಬಗ್ಗೆ ತೀವ್ರ ಅತೃಪ್ತಿಯುಂಟಾಯಿತು. "ಮುಕುಂದನಲ್ಲಿಮೋಕ್ಷಸಾಮ್ರಾಜ್ಯವನ್ನು ಕೇಳದೆ ಲೌಕಿಕ ಭೋಗಭಾಗ್ಯಗಳನ್ನೇ ಆತನಲ್ಲಿ ಬೇಡಿ ಪಡೆದೆನಲ್ಲ ಎಂದು ಆತ ಮರುಗುತ್ತಾನೆ. ದುಃಖದ ಮೂಲವಾದ ಭವಬಂಧವನ್ನೇ ಕಿತ್ತೊಗೆದು ಅನುಗ್ರಹದ ಮಹಾಪೂರವನ್ನೇ ಹರಿಸುವ ಆ ಪರಮ ಪುರುಷನನ್ನು ಸಾಕ್ಷಾತ್ಕರಿಸಿಕೊಂಡೂ ಈ ನಶ್ವರ ಭೋಗ್ಯಶ್ವರ್ಯಗಳನ್ನೇ ಬಯಸಿದೆನೆಂದು ಧ್ರುವರಾಜನು ಪರಿತಪಿಸಿದನು. ಪರಮಭಾಗವತನಾದ ಧ್ರುವರಾಜನು ಮುಂದೆ ನಿಷ್ಕುಮಕರ್ಮ ಹಾಗೂ ಅನನ್ಯಭಕ್ತಿಯಿಂದಪರಮಾತ್ಮನ ಪ್ರಸಾದಕ್ಕೆ ಭಾಜನನಾಗುವನು. ಯೋಗ್ಯಸಜ್ಜನ ವ್ಯಕ್ತಿಗಳು ಫಲದಾಸೆಯಿಂದ ಪರಮಾತ್ಮನ ಕಡೆಗೆ ಸಾಗಿದರೂ ಮುಂದೆ ಅಂತಃಕರಣಶು ದ್ಧಿಯಿಂದ ತನ್ನ ಕಡೆಗೆ ನಡೆಯುತ್ತಿರುವರು ಎಂದು ಸ್ವಾಮಿಯು ಅಪ್ಪಣೆಕೊಡಿಸುತ್ತಾನೆ. ಆದುದರಿಂದಲೇ ಉಪನಿಷತ್ತಿನಲ್ಲಿ "ಬ್ರಯಾ ದೇಯಂ'' ""ಭಿಯಾ ದೇಯಂ'' ಎಂದು ನಿರೂಪಿಸಲಾಗಿದೆ. ಇನ್ನೊಬ್ಬರು ದಾನಮಾಡುವು ದನ್ನು ನೋಡಿನಾಚಿಕೆಯಿಂದಾದರೂ ನಿಮ್ಮಲ್ಲಿ ಇದ್ದುದನ್ನು ವಿತರಣ ಮಾಡಿರಿ. ದಾನ ಮಾಡದೆ ಇದ್ದರೆ ಆಗುವ ಲೌಕಿಕ, ಪಾರತ್ರಿಕ ಅನರ್ಥಗಳಿಗೆ ಹೆದರಿಯಾದರೂ ದಾನ ಮಾಡಿರಿ ಎಂದು ಸತ್ಕಾರ್ಯದ ಬಗ್ಗೆ ಒತ್ತಾಯ ಮಾಡಲಾಗಿದೆ. ಏನೂ ಸತ್ಕಾರ್ಯವನ್ನು ಮಾಡದೆ ಅನುಪಯುಕ್ತ ಜೀವನವನ್ನು ನಡೆಸುವುದಕ್ಕಿಂತ ಭಯ, ಲಜ್ಜೆಗಳಿಂದಾಗಲಿ, ಕೀರ್ತಿ ಪ್ರತಿಷ್ಠೆಗಳಿಗಾಗಲಿ ಏನಾದರೂ ಯೋಗ್ಯ ಕಾರ್ಯಗಳನ್ನು ಮಾಡುವುದು ಉತ್ತಮ ಪದ್ಧತಿಯಾಗಿದೆ. ಇನ್ನೊಬ್ಬರು ದೊಡ್ಡ ಪ್ರಮಾಣದಿಂದ ದಾನ ಧರ್ಮಗಳನ್ನು ಮಾಡುವಾಗ ತಾವು ಏನೂ ಮಾಡದಿದ್ದರೂ ಅವರ ಕಾರ್ಯವನ್ನು ಡಂಭಾಚಾರವೆಂದೂ ಪ್ರತಿಷ್ಠೆಗಾಗಿ ಮಾಡುವ ಕಾರ್ಯವೆಂದೂ ಅವಹೇಳನಮಾಡುವವ್ಯಕ್ತಿಗಳನ್ನು ನಾವುನೋಡಿದ್ದೇವೆ. ಪ್ರತಿಷ್ಠೆಗಾಗಿಯಾದರೂ ಸಂಪತ್ತಿನ ವಿತರಣ ಮಾಡುವ ಆ ತ್ಯಾಗಪ್ರವೃತ್ತಿಯೂ ಇಲ್ಲದ ತಾವುಮತ್ತೂಕೆಳಮಟ್ಟದಲ್ಲಿ ಇರುವೆವೆಂಬುದನ್ನು ಅರಿಯದೆ ಮತ್ತೊಬ್ಬರನ್ನು ಅಪಹಾಸಮಾಡುವ ಅಂತಹ ಜನರನ್ನು ಕಂಡು ಕನಿಕರವಾಗುತ್ತದೆ. ಅಂತೂ ಭಗವದ್ವಿಮುಖವಾದ ಜೀವನಕ್ಕಿಂತ ಯಾವುದೇ ಸ್ವರೂಪದಲ್ಲಿದ್ದರೂ ಭಗವದುನ್ಮುಖವಾದ ಜೀವನವೇ ಪ್ರಶಸ್ತವೆಂದು ಗೀತೆಯ ತಾತ್ಪರ್ಯವಾಗಿದೆ.
Bannanje Govindacharya (1936–2020)Bhagavad Gita Pravachana
ಯೇ ಯಥಾ ಮಾಮ್‌ ಪ್ರಪದ್ಯಂತೇ ತಾನ್‌ ತಥಾ ಏವ ಭಜಾಮಿ ಅಹಮ್‌ | ಮಮ ವರ್ತ್ಮಾ ಅನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ -ಯಾರು ಹೇಗೆ ನನ್ನನು ಸೇವಿಸುತ್ತಾರೋ ಅವರನ್ನು ಹಾಗೆಯೇ ನಾನು ಅನುಗ್ರಹಿಸುತ್ತೇನೆ. ಓ ಪಾರ್ಥಾ, ಮನುಷ್ಯರು ಯಾವ ದಾರಿಯಲ್ಲಿ ಸಾಗಿದರೂ ಕೊನೆಗೆ ನನ್ನೆಡೆಗೆಯೇ ಬರುತ್ತಾರೆ. ದೇವರ ಉಪಾಸನೆಗೆ ಸರಿಯಾದ ದಾರಿ ಯಾವುದು? ಒಬ್ಬಬ್ಬರು ಒಂದೊಂದು ರೀತಿ ಉಪಾಸನೆ ಮಾಡುತ್ತಾರೆ. ಅದರಿಂದ ಗೊಂದಲ, ಆವೇಶ. ಯಾರು ಯಾವ ರೀತಿ ಉಪಾಸನೆ ಮಾಡುತ್ತಾರೋ ಭಗವಂತ ಹಾಗೆಯೇ ಅನುಗ್ರಹಿಸುತ್ತಾನೆ. ನಾವು ಯಾವ ರೂಪದಿಂದ ಉಪಾಸನೆ ಮಾಡಿದರೂ ಅದು ವಿಶ್ವರೂಪನಾದ ಭಗವಂತನನ್ನು ಸೇರುತ್ತದೆ. ಅದಕ್ಕಾಗಿ ನಾವು ನಮ್ಮ ಪೂಜೆಯನ್ನು ಭಗವಂತನ ವಿಶೇಷ ವಿಭೂತಿ ಇರುವ ತುಳಸಿ, ಅಶ್ವತ್ಥವೃಕ್ಷ, ಗೋವು ಇತ್ಯಾದಿ ರೂಪದಲ್ಲಿ ಪೂಜಿಸುತ್ತೇವೆ. ಆದರೆ ಇಲ್ಲಿ ಒಂದು ಎಚ್ಚರ ಅಗತ್ಯ. ತುಳಸಿ ಗಿಡವನ್ನೇ ಭಗವಂತನೆಂದು ನಂಬಿ ಪೂಜಿಸದೇ, ತುಳಸಿಯಲ್ಲಿ ಭಗವಂತನ ವಿಶೇಷ ವಿಭೂತಿ ಅಡಗಿದೆ ಎಂದು ಪೂಜಿಸುವುದು ಮುಖ್ಯ. ಹೀಗೆ ನಮ್ಮ ಪ್ರತಿಯೊಂದು ಕ್ರಿಯೆಯಲ್ಲಿ ನಮಗೆ ಭಗವಂತನ ಎಚ್ಚರ ಮತ್ತು ಜ್ಞಾನ ಅಗತ್ಯ. ಯಾವ ಹೆಸರಿನಿಂದ ಭಗವಂತನನ್ನು ಕರೆದರೂ ಅದು ಸರ್ವಶಬ್ದ ವಾಚ್ಯ ಭಗವಂತನ ನಾಮ ಎನ್ನುವ ಎಚ್ಚರ ಅಗತ್ಯ. ಎಲ್ಲಿ ಕುಳಿತು ಪೂರ್ಣ ಅರ್ಪಣಾಭಾವದಿಂದ ಭಗವಂತನನ್ನು ನೆನೆದರೂ, ಅದು ವಿಶ್ವರೂಪಿ ವಿಶ್ವಾಂಭರನನ್ನು ಸೇರುತ್ತದೆ. ಆತ ಸದಾ ನಮ್ಮ ರಕ್ಷಣೆ ಮಾಡುತ್ತಾನೆ.
Bibek Debroy (1955–2024)The Bhagavad Gita
(11) ‘O son of Pritha!17 Whoever worships me, in whatever way, I entertain them in that way. Everywhere, men follow along my path.’