4.10

वीतरागभयक्रोधा मन्मया मामुपाश्रिताः ।
बहवो ज्ञानतपसा पूता मद्भावमागताः ॥
vītarāgabhayakrodhā manmayā māmupāśritāḥ |
bahavo jñānatapasā pūtā madbhāvamāgatāḥ ||
Sri Madhvacharya (1238–1317)Bhagavad Gita Tatparya Nirnaya
‘मयं प्रधानमुद्दिष्टं प्राधान्यं यैर्हरेर्मतम्। भगवन्मयास्ते विज्ञेयास्ते मुच्यन्ते न चापरे’ इति च। मयि भावो मद्भावः॥10॥
Swami Sivananda (1887–1963)Bhagavad Gita
10. Freed from attachment, fear and anger, absorbed in Me, taking refuge in Me, purified by the fire of knowledge, many have attained to My Being.
Sri Vishwesha Tirtharu (1931–2019)Gitasaroddhara
ಜೀವ ಮತ್ತು ಪರಮಾತ್ಮರಲ್ಲಿಯ ಅಂತರ
ಜೀವಮತ್ತು ಪರಮಾತ್ಮರಲ್ಲಿಯ ಅಂತರ ಗೀತೆಯ ಈ ಭಾಗದಲ್ಲಿ ಜೀವರು ಮತ್ತುಪರಮಾತ್ಮನಿಗಿರುವ ಅಂತರವನ್ನು ಸ್ಪಷ್ಟವಾಗಿ ನಿರೂಪಿಸಲಾಗಿದೆ. ಜೀವನಿಗೆ ಅನೇಕ ಜನ್ಮಗಳಿದ್ದರೂ ಅವುಗಳ ಪೂರ್ವಾವರಗಳನ್ನು ಆತನು ತಿಳಿಯಲಾರ. ಆ ಜನ್ಮಗಳ ವಿಷಯದಲ್ಲಿ ಆತನಿಗೆ ಸ್ವಾತಂತ್ರ್ಯವೂ ಇಲ್ಲ. ಈ ಜನ್ಮ-ಮರಣಗಳಲ್ಲಿ ಅನೇಕ ಸುಖ-ದುಃಖಗಳ ಅನುಭವವೂ ಜೀವನಿಗೆ ಇದೆ. ಆದರೆ ಪರಮಾತ್ಮನ ಅವತಾರಗಳೆಲ್ಲ ಇದಕ್ಕೆ ತೀರ ವಿರುದ್ಧ ವಾಗಿವೆ. ಪರಮಾತ್ಮನು ಸ್ವೇಚ್ಛೆಯಿಂದಲೇ ಈ ಅವತಾರಗಳನ್ನು ಪರಿಗ್ರಹಿಸುತ್ತಾನೆ. ಆದ್ದರಿಂದ ಅವನಿಗೆ ದುಃಖಸಂಬಂಧಗಳೇನೂ ಇಲ್ಲ. ಕೇವಲ ಲೋಕಹಿತದ ಉದ್ದೇಶದಿಂದ ಭಗವಂತನ ಈ ಅವತಾರಕಾರ್ಯವಿರುವುದು. ಈ ವ್ಯವಹಾರದಲ್ಲಿ ಆತನ ಜ್ಞಾನ, ಆನಂದ ಮುಂತಾದ ದಿವ್ಯ ಸದ್ಗುಣ, ಸತ್‌ಶಕ್ತಿಗಳಿಗೆ ಯಾವ ರೀತಿಯ ಚ್ಯುತಿ, ಅಭಾವಗಳೂ ಇರುವುದಿಲ್ಲ. ಜೀವರ ಜನ್ಮ ಹಾಗೂ ಪರಮಾತ್ಮನ ಅವತಾರ ಇವುಗಳಲ್ಲಿರುವ ಈ ಅಂತರದಿಂದ ಜೀವ-ಪರಮಾತ್ಮರಿಗಿರುವ ಸ್ವಾಭಾವಿಕ ಭೇದ ವ್ಯತ್ಯಾನಗಳನ್ನು ನಾವು ಅರಿತುಕೊಳ್ಳಬಹುದು. ಈ ಭೇದವನ್ನು ಪ್ರತಿಪಾದಿಸುವುದೇ ಇಲ್ಲಿ ಯ ಗೀತೆಯ ಆಶಯವಾಗಿದೆ. ಜೀವ, ಪರಮಾತ್ಮರಿಗೆ ಇರುವ ಈ ಭೇದವನ್ನು ತಿಳಿದು ಶ್ರೀಹರಿಯ ಈ ದಿವ್ಯಲೀಲೆಯನ್ನೂ ಮಹಾಶಕ್ತಿಯನ್ನೂ ಅರಿತುಕೊಂಡಲ್ಲಿ ಅದರಿಂದ ಮುಕ್ತಿಯ ಮಹಾಫಲವನ್ನು ಪಡೆಯಬಹುದೆಂದು ಭಗವಂತನು ಬೋಧಿಸುತ್ತಾನೆ. ವೀತರಾಗಭಯಕ್ರೋಧಾ ಮನ್ಮಯಾ ಮಾಮುಪಾಶ್ರಿತಾಃ | ಬಹವೋ ಜ್ಞಾನತಪಸಾ ಪೂತಾ ಮದ್ಭಾವಮಾಗತಾಃ ॥ ಇಲ್ಲಿ ಜ್ಞಾನಿಗಳನ್ನು ""ಮನ್ಮಯಾಃ' ಅಂದರೆ ಭಗವನ್ಮಯರೆಂದು ಕರೆಯ ಲಾಗಿದೆ. ಭಗವನ್ಮಯರೆಂದರೆ ಭಗವಂತನಿಂದ ಅಭೇದವನ್ನು ಹೊಂದಿದವ ರೆಂದು ಅರ್ಥವಲ್ಲ. ""ಮಾಮುಪಾಶ್ರಿತಾಃ' ಎಂದು ಮುಂದಿನ ಪಾದದಲ್ಲೇ ಭಗವಂತನನ್ನು ಆಶ್ರಯಿಸಿಕೊಂಡವರೆಂದು ಜ್ಞಾನಿಗಳಿಗೂ ಪರಮಾತ್ಮನಿಗೂ ಭೇದವನ್ನು ನಿರೂಪಿಸಲಾಗಿದೆ. ಯಾರಿಗೆ ಭಗವಂತನೇ ಪ್ರಧಾನನಾಗಿರುವನೋ ಯಾರು ಜೀವನದಲ್ಲಿ ಭಗವಂತನಿಗೆ ಪ್ರಮುಖವಾದ ಸ್ಥಾನವನ್ನು ನೀಡಿರುವರೋಪ್ರತಿಯೊಂದು ವಸ್ತುವಿನ ಪ್ರವೃತ್ತಿ ಸತ್ತೆಗಳಲ್ಲೂ ಶ್ರೀಹರಿಯ ವ್ಯಾವಾರವಿಧಾನಗಳನ್ನೆ « ಯಾರುಕಾಣುವರೊ, ಅಂತಹವರೇ ಭಗವನ್ಮಯರು. ಶರವತ್ತನ್ನಯೋ ಭವೇತ್‌ | ಎಂದು ಉಪನಿಷತ್ತಿನಲ್ಲಿ ಒಂದು ವಾಕ್ಕವಿದೆ. ಬಾಣವನ್ನು ಒಂದು ಗುರಿಗೆ ಪ್ರಯೋಗಿಸಿದರೆ ಅದು ತನ್ಮಯವಾಗುವುದೆಂದರೆ ಆ ಗುರಿಯಲ್ಲೇ ಬಾಣವು ದೃಢವಾಗಿ ನಿರೂಢವಾಗುವುದೆಂದೇ ಅರ್ಥವಾಗುವುದು. ಅದರಂತೆ ನಾವು ಭಗವನ್ಮಯರಾಗುವುದೆಂದರೆ ಭಗವನ್ನಿಷ್ಠರೆಂದೇ ಅಭಿಪ್ರಾಯವಾಗುವುದು. ಇಂತಹ ಭಗವನ್ನಿಷ್ಠೆಯಿಂದ ''ಮದ್ಭಾವಂ' ಅಂದರೆ ಪರಮಾತ್ಮನಲ್ಲಿ ಸಂಸ್ಥಿತಿರೂಪವಾದ ಮುಕ್ತಿಯನ್ನು ಪಡೆಯಬಹುದು.
Bannanje Govindacharya (1936–2020)Bhagavad Gita Pravachana
ವೀತ ರಾಗ ಭಯ ಕ್ರೋಧಾಃ ಮತ್‌ ಮಯಾ ಮಾಮ್‌ ಉಪಾಶ್ರಿತಾಃ | ಬಹವಃ ಜ್ಞಾನ ತಪಸಾ ಪೂತಾಃ ಮತ್‌ ಭಾವಮ್‌ ಆಗತಾಃ -- ರಾಗ-ಭಯ-ಕ್ರೋಧವನ್ನು ತೊರೆದವರು, ಎಲ್ಲೆಲ್ಲೂ ನನ್ನನ್ನೇ ಕಾಣುವವರು(ನನ್ನ ಹಿರಿಮೆಯನ್ನು ಅರಿತವರು), ನನಗೆ ಶರಣು ಬಂದವರು ಬಹಳ ಮಂದಿ- ತಿಳಿವಿನ ತಪಸ್ಸಿನಿಂದ ತಿಳಿಗೊಂಡು ನನ್ನನ್ನು ಸೇರಿದ್ದಾರೆ. ಮೂರನೇ ಅಧ್ಯಾಯದ ಕೊನೆಯಲ್ಲಿ(ಶ್ಲೋಕ-39) ಕೃಷ್ಣ ಹೇಳಿದಂತೆ ರಾಗ-ದ್ವೇಷಾದಿಗಳು ನಮ್ಮ ಪರಮ ಶತ್ರುಗಳು. ನಾವು ನಮ್ಮ ಜೀವನದ ಸರ್ವ ಸಮಸ್ಯೆಗಳಿಗೆ ಕಾರಣವಾದ ಒಲವು(ಆಸೆ,ರಾಗ, Attachment), ಅಂಜಿಕೆ (ಭಯ) ಮತ್ತು ಕೋಪ(ಸಿಟ್ಟು)ವನ್ನು ತೊರೆದು, ಏನು ಇದೆಯೋ ಅದರಲ್ಲಿ ಸಂತೋಷಪಡುವುದನ್ನು ಮತ್ತು ಏನು ಬಂತೋ ಅದನ್ನು ಸಂತೋಷದಿಂದ ಸ್ವೀಕರಿಸುವ ಮನೋವೃತ್ತಿಯನ್ನು ಬೆಳೆಸಿಕೊಂಡು, ಮನ್ಮಯರಾಗಬೇಕು. 'ಮನ್ಮಯ' ಅಂದರೆ ಜೀವನದ ಎಲ್ಲಾ ನಡೆಗಳಲ್ಲಿ ಭಗವಂತನನ್ನು ತುಂಬಿಸಿಕೊಳ್ಳುವುದು ಮತ್ತು ಲೌಕಿಕ ಪ್ರಜ್ಞೆಯನ್ನು ಕಡಿಮೆ ಮಾಡಿಕೊಳ್ಳುವುದು. ಒಮ್ಮೆ ನಾವು ಭಗವಂತನ ಚಿಂತನೆಯಲ್ಲಿ ತೊಡಗಿದಾಗ ಈ ರಾಗ-ದ್ವೇಷಗಳು ಕ್ಷುಲ್ಲಕವಾಗಿ ಕಾಣಲಾರಂಭಿಸುತ್ತವೆ. ಭಗವಂತ ಸರ್ವೋತ್ತಮ ಎನ್ನುವ ಸತ್ಯವನ್ನರಿತು ನಮ್ಮ ರಕ್ಷಣೆಗೆ ಸದಾ ಆತನಿದ್ದಾನೆ ಎಂದು ತಿಳಿದು, ದುರಾಭಿಮಾನವನ್ನು ಕಿತ್ತೆಸೆದು, ಆ ಭಗವಂತನಲ್ಲಿ ಶರಣಾದವರು ಮೋಕ್ಷ ಮಾರ್ಗವನ್ನು ಕಾಣುತ್ತಾರೆ. ನಮ್ಮ ಜೀವನದ ಪ್ರತಿಯೊಂದು ಕರ್ಮದಲ್ಲಿ ಈ ರೀತಿಯ ಭಾವನೆಯನ್ನು ಬೆಳೆಸಿಕೊಳ್ಳುವುದು ಒಂದು ತಪಸ್ಸು. ಇದರಿಂದ ನಮ್ಮ ಬದುಕು ಪವಿತ್ರವಾಗುತ್ತದೆ. ಹೀಗೆ ರಾಗ- ದ್ವೇಷದ ಕೊಳೆಯಿಂದ ಮುಕ್ತರಾದವರು ನನ್ನನ್ನು ಸೇರುತ್ತಾರೆ ಎನ್ನುತ್ತಾನೆ ಕೃಷ್ಣ. ನಾವು ನಮ್ಮ ರಾಗ ದ್ವೇಷ ಕ್ರೋಧದಲ್ಲಿ ಕೂಡಾ ಭಗವಂತನನ್ನು ಕುಳ್ಳಿರಿಸಿಕೊಳ್ಳಬೇಕು! == ನಮ್ಮ ಆಸೆ-ಭಗವಂತನನ್ನು ಕಾಣುವ ಆಸೆಯಾಗಿರಬೇಕು; ಭಯ-'ತಪ್ಪು ಮಾಡಿದರೆ ಭಗವಂತ ನನ್ನನ್ನು ಕ್ಷಮಿಸಲಾರ' ಎನ್ನುವ ಭಯವಾಗಿರಬೇಕು; ನಮ್ಮ ಇಲ್ಲ ಸಲ್ಲದ ಇಂದ್ರಿಯಾಕಾಂಕ್ಷೆಗಳ ಮೇಲೆ ನಮ್ಮ ಕೋಪವಿರಬೇಕು. ಹೀಗೆ ಈ ಮೂರು ಶತ್ರುಗಳನ್ನು ನಾವು ಭಗವಂತನ ಪರಗೊಳಿಸಿದಾಗ ಭಗವಂತನನ್ನು ಕಾಣಲು ಸಾಧ್ಯ.
Bibek Debroy (1955–2024)The Bhagavad Gita
(10) ‘Many, purified through the meditation of knowledge, have immersed themselves in me and sought refuge in me, discarding attachment, fear and anger.’