श्रेयान्द्रव्यमयाद्यज्ञाज्ज्ञानयज्ञः परन्तप ।
सर्वं कर्माखिलं पार्थ ज्ञाने परिसमाप्यते ॥
śreyāndravyamayādyajñājjñānayajñaḥ parantapa |
sarvaṃ karmākhilaṃ pārtha jñāne parisamāpyate ||
Sri Madhvacharya (1238–1317)Bhagavad Gita Tatparya Nirnaya
सर्व कर्माखिलमासमन्तादल्पं ज्ञाने परिसमाप्यते। ज्ञाने जाते पूर्यते ।
‘समाप्तविद्यान् धनुषि श्रेष्ठान् यान् सप्त मन्यसे’
इतिमत् समाप्तिशब्दोऽत्र पूर्तिवाची। ज्ञानासिनाऽऽत्मनः।
‘छित्त्वैनं संशयं योगमात्तिष्ठोत्तिष्ठ’ इति पुनर्योगकथनात्॥33॥
Swami Sivananda (1887–1963)Bhagavad Gita
33. Superior is wisdom-sacrifice to sacrifice with objects, O Parantapa! All actions in their
entirety, O Arjuna, culminate in knowledge!
Sri Vishwesha Tirtharu (1931–2019)Gitasaroddhara
4.33–4.38 · ಜ್ಞಾನವೇ ಯಜ್ಞದ ಫಲ
ಜ್ಞಾನವೇ ಯಜ್ಞದ ಫಲ
ಇಂತಹ ಯಜ್ಞದ ಉದ್ದೇಶವೇನು? ನಾವು ಮಾಡುವ ಎಲ್ಲಯಜ್ಞಮಯ
ಕಾರ್ಯಗಳಿಂದ ಪಡೆಯಬಹುದಾದ ಪರಮಪುರುಷಾರ್ಥವೇನು? ಭಕ್ತಿ
ತ್ಯಾಗಗಳಿಂದ ನಾವು ಮಾಡುವ ಸತ್ಯರ್ಮಗಳೆಲ್ಲ ಒಂದು ಸಾಧನೆಯಾಗುತ್ತವೆ;
ಭಗವಂತನಕಡೆಗೆ ಸಾಗುವ ದಿವ್ಯಯಾತ್ರೆ ಎನಿಸುತ್ತವೆ. ಈ ಪವಿತ್ರ ಕರ್ಮಗಳಿಂದ
ಹೃದಯಸಂಸ್ಕಾರವನ್ನು ಹೊಂದಿ ಭಗವಂತನ ದರ್ಶನವನ್ನು ಪಡೆಯುವುದು,
ಇವೆಲ್ಲ ಸತ್ಕರ್ಮಗಳ ಅಂತಿಮ ಗುರಿಯಾಗಿದೆ.
ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾ; ನೇ ಪರಿಸಮಾಪ್ಯತೇ [
ಆದುದರಿಂದ ಯಜ್ಞದ ವಿವಿಧ ಪ್ರಕಾರಗಳಲ್ಲಿ ಜ್ಞಾನಯಜ್ಞಕ್ಕೆ ವಿಶೇಷ
ಮಹತ್ವವಿದೆ. ಭಗವದ್ ಜ್ಞಾನವನ್ನು ಪಡೆಯುವ ವಿಶೇಷ ಪ್ರಯತ್ನವೇ
ಜ್ಞಾನಯಜ್ಞವಾಗಿದ್ದು ವಿವಿಧ ಲೌಕಿಕಹಾಗೂ ಲೋಕಸೇವಾಕಾರ್ಯಗಳನ್ನು
ಯಜ್ಞರೂಪದಿಂದ ಮಾಡುತ್ತಿದ್ದರೂ ದಿನವೂ ಜ್ಞಾನಕಾರ್ಯಕ್ಕಾಗಿ ಸ್ವಲ್ಪ
ಸಮಯವನ್ನಾದರೂ ಮೀಸಲಾಗಿಡುವುದು ಅವಶ್ಯವಾಗಿದೆ. ಜ್ಞಾನಕ್ಕಾಗಿಯೇ
ವಿವಿಧ ಯಜ್ಞಗಳನ್ನು ನಡೆಸುತ್ತಿರುವಾಗ ಜ್ಞಾನವನ್ನೇ ಅಲಕ್ಷಿಸಿ ಕರ್ಮಮಾರ್ಗ
ವನ್ನು ಮಾತ್ರ ನಾವು ಆಶ್ರಯಿಸಿಕೊಂಡಿರಬಾರದು.
ಶ್ರೇಯಾನ್ ದ್ರವ್ಯಮಯಾದ್ಯಜ್ಞಾತ್ ಜ್ಞಾನಯಜ್ಞ; ಪರಂತಪ।
ಇತರ ಲೌಕಿಕ ಸಾಧನ ಸಂಪತ್ತುಗಳಿಂದ ನಡೆಸಲಾಗುವ ಯಜ್ಞಕ್ಕಿಂತಲೂ
ಜ್ಞಾನಸಂಪಾದನೆಗಾಗಿ ನಡೆಸುವ ಶ್ರವಣಮನನಾದಿರೂಪ ಯಜ್ಞವು ಮಹತ್ತರ
ವಾದುದು. ಈ ಜ್ಞಾನವು ಇಲ್ಲದೆ ಇದ್ದರೆ ಕರ್ಮಮಾರ್ಗದಲ್ಲಿಯೂ ನಾವು
ಸರಿಯಾಗಿನಡೆಯಲಾರೆವು. ಜ್ಞಾನದಿಂದ ವಂಚಿತರಾದರೆಕರ್ತವ್ಯಾಕರ್ತವ್ಯ ಪ್ರಜ್ಞೆ
ಇಲ್ಲದೆ ವ್ಯಾಮೋಹಕ್ಕೆ ಒಳಗಾಗುವ ಪ್ರಸಂಗವು ಬರುವುದರಿಂದಕರ್ಮಮಾರ್ಗ
ದಲ್ಲಿ ಮುನ್ನಡೆಯಲೂ ಜ್ಞಾನದ ಅವಲಂಬನವು ಅತ್ಯಾವಶ್ಯಕವಾಗಿದೆ.
ಸ್ವಾಧ್ಯಾಯಪ್ರವಚನೇ ಏವೇತಿ ನಾಕೋ ಮೌದ್ಗಲ್ಯಃ [
ತದ್ಧಿ ತಪಸ್ಪದ್ಧಿ ತಪಃ ॥ “ತೈತ್ತಿರೀಯೋಪನಿಷತ್
ಎಂದು ಉಪನಿಷತ್ತಿನಲ್ಲಿ ಜ್ಞಾನಸಂಪಾದನೆಯ ಸಾಧನೆಯನ್ನು ಮಹಾ ತಪಸ್ಸೆಂದು
ಒತ್ತಿಹೇಳಿದ್ದಾರೆ. ಜಪಪೂಜೆಗಳಿಗೆ ಕುಳಿತಾಗಲೂ ನಮಗೆ ಏಕಾಗ್ರತೆಯನ್ನು
ಹೊಂದಲುಸಾದ್ಯವಾಗುವುದಿಲ್ಲ. ಆದರೆಗ್ರಂಥದಪ್ರವಚನಹ 3 ಗೂಅಭ್ಯಸದಲ್ಲಿ
ತೊಡಗಿದಾಗ ಉಳಿದ ವಿಷಯಗಳನ್ನು ಮರೆತು ಮನಸ್ಸನ್ನು ತಲ್ಲೀನಗೊಳಿಸಲು
ಸಾಧ್ಯವಾಗುವುದು. ಆದುದರಿಂದ ಭಾವಸಮಾಧಿಯನ್ನು ಹೊಂದಲು ಇತರ
ಉಪಾಯಗಳಿಗಿಂತ ಜ್ಞಾನ ಸಾಧನೆಯ ಕಾರ್ಯವೇ ಹೆಚ್ಚು ಸುಲಭವೂ
ಅನುಕೂಲವೂ ಆಗಿದೆ.
ಹೀಗಿದ್ದರೆ ಈ ಕರ್ಮಮಾರ್ಗದಲ್ಲಿ ನಡೆಯುವುದಕ್ಕಿಂತ ಪೂರ್ಣವಾಗಿ ಇಡೀ
ಜೀವನದಲ್ಲಿ ಜ್ಞಾನಸಾಧನೆಯನ್ನು ಮಾತ್ರ ಅನುಷ್ಠಾನ ಮಾಡಿದರೆ ಸಾಲದೆ?
ಗೀತೆಯಲ್ಲಿ ಹೇಳಿದ ವಿವಿಧ ಕರ್ಮಯಜ್ಞಗಳಲ್ಲಿ ತೊಡಗಿ ವೃಥಾ
ಕಾಲಹರಣವನ್ನೇಕೆ ಮಾಡಬೇಕು? ಶ್ರೇಷ್ಠವಾದ ಜ್ಞಾನಯಜ್ಞವನ್ನು ಮಾತ್ರ
ಆಶ್ರಯಿಸಬಹುದಲ್ಲವೆ? ಎಂಬತಂಕೆಯು ಬರಬಹುದಾಗಿದೆ. ಆದರೆ ಜ್ಞಾನವು
ಅಂತಿಮ ಗುರಿಯಾಗಿದ್ದರೂ ಜ್ಞಾನಮಾರ್ಗವೇ ಶ್ರೇಷ್ಠವಾಗಿದ್ದರೂ ಕರ್ಮದ
ಸಹಾಯವಿಲ್ಲದೆ ಈ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲವೆಂಬುದನ್ನು ನಾವು
ನೆನಪಿನಲ್ಲಿಟ್ಟುಕೊಳ್ಳಬೇಕು. ಜ್ಞಾನಮಾರ್ಗವೂ ಶ್ರೇಷ್ಠವೆಂದ ಕೂಡಲೇ ಉಳಿದ
ಕರ್ಮ ಸಾಧನೆಗಳು ಬೇಡವೆನ್ನುವ ಅರ್ಥದಲ್ಲಿ ನಾವು ಪರ್ಯವಸಾನ
ಮಾಡಬಾರದು. ಹೊಲದಿಂದ ಬಿಳೆ ಪಡೆಯುವುದೇ ರೈತನ ಮುಖ್ಯ ಗುರಿ.
ಅದಕ್ಕಾಗಿ ಸಸಿಗಳನ್ನು ನೆಡುವುದೇ ಅವನ ಮುಖ್ಯ ಕೆಲಸವಾಗಿದೆ. ಆದರೆ
ಹೊಲದಲ್ಲಿ ಮಾಡಬೇಕಾದ ಇತರ ಸಾಧನಸಂಸ್ಕಾರಗಳನ್ನು ಮಾಡದೆ ಕೇವಲ
ಸಸಿಗಳನ್ನು ನೆಡುವುದರಿಂದ ಬೆಳೆಯನ್ನು ಪಡೆಯಬಲ್ಲನೆ? ಉಳುವುದು, ನೀರು
ಹಾಕುವುದು ಮುಂತಾದ ವಿವಿಧ ಸಾಧನೆಗಳಿಂದ ಒಡಗೂಡಿ ಬೀಜಗಳನ್ನು
ಬಿತ್ತುವುದರಿಂದಲೇ ರೈತನು ಕೃಷಿಯ ಸಾಫಲ್ಯವನ್ನು ಪಡೆಯಬಲ್ಲನು.
ಸಾಕ್ಷಾತ್ಕಾರವನ್ನು ಪಡೆಯುವಗುರಿಯನ್ನು ಮುಟ್ಟಲೂ ಜ್ಞಾನಯಜ್ಞದ ಜೊತೆಗೆ
ಅದಕ್ಕೆ ಪೋಷಕವಾಗಿ ಕರ್ಮ ಯಜ್ಞಗಳನ್ನು ನಾವು ಅನುಷ್ಠಾನ ಮಾಡಲೇ
ಬೇಕಾಗುತ್ತದೆ.
ತತ್ ಸ್ವಯಂ ಯೋಗಸಂಸಿದ್ಧ ಭ ಕಾಲೇನಾತ್ಮನಿ ವಿಂದತಿ ।
ಕರ್ಮಯೋಗದ ಸಿದ್ಧಿಯನ್ನು ಪಡೆದವನೇ ಈ ಜ್ಞಾನವನ್ನು ಹೊಂದಲು
ಯೋಗ್ಯನಾಗುವುದರಿಂದ ಕರ್ಮವು ಅವಶ್ಯಕ ಎಂದು ಗೀತೆಯು ನಿರೂಪಿಸಿದೆ.
ಅಂತೂ ಕರ್ಮಾಚರಣೆಯ ಸಹಕಾರದಿಂದ ಶ್ರವಣ, ಮನನ, ಧ್ಯಾನಾದಿ
ರೂಪವಾದ ಜ್ಞಾನಯಜ್ಞದಿಂದ ಪರಮಾತ್ಮನ ಅಪರೋಕ್ಷ ಜ್ಞಾನದಂತಹ
ಮೋಕ್ಷದ ಅಂತರಂಗಸಾಧನವನ್ನು ನಾವು ಹೊಂದುವೆವು. ಸಂಸಾರಬಂಧನಕ್ಕೆ
ಕಾರಣಗಳಾದ ಪಾಪಗಳ ವಿಮೋಚನೆಗೆ ಈ ಸಾಕ್ಷಾತ್ಕಾರವೇ ಪರಮಸಾಧನ
ವಾಗಿದೆ. ನಾವುತಿಳಿದೋತಿಳಿಯದೆಯೋಮಾಡಿರುವ ಅನಂತದುಷ್ಠತ್ಯಗಳಿಂದ
ನಮ್ಮ ಮನಸ್ಸು ಪಾಪಮಲೀಮಸವಾಗಿದೆ. ಇದರ ಪ್ರಕ್ನಾಲನೆ ಮಾಡಿ ನಮ್ಮನ್ನು
ಪುನೀತಗೊಳಿಸುವ ಅಮೃತಜಲಧಾರೆಯೇ ಈ ಸಾಕ್ಟಾತ್ಯಾರವೆನಿಸುವುದು.
ಪಾಪದ ರಾಶಿರಾಶಿಗಳಿದ್ದರೂ ಈ ಜ್ಞಾನದ ದಿವ್ಯಾಸ್ತ್ರದಿಂದ ಅವುಗಳ
ನಿರ್ಮೂಲನವಾಗುವುದು. ಎಷ್ಟು ಆಳವಾದ, ವಿಸ್ತಾರವಾದ, ಜಲರಾಶಿಯನ್ನೂ
ಚಿಕ್ಕ ನಾವೆಯಿಂದ ನಾವು ಸುಲಭವಾಗಿ ದಾಟಬಲ್ಲೆವು. ಕಟ್ಟಿಗೆಗಳ
ಮೂಟಿಗಳಿಷ್ಟಿದ್ದರೂ ಬೆಂಕಿಗೆ ಅವುಗಳನ್ನು ಸುಡಲು ಶ್ರಮವೆನಿಸುವುದೆ? ಪಾಪದ
ಮಹಾಸಾಗರದಿಂದ ಪಾರುಮಾಡಿಸಬಲ್ಲ ಹಡಗೂ, ದುಷ್ಕರ್ಮಗಳ ಒಣ
ಕಟ್ಟಿಗೆಗಳನ್ನು ಭಸ್ಮೀಕರಿಸಬಲ್ಲ ದಿವ್ಯಾಗ್ನಿಯೂ ಈ ಜ್ಞಾನವೇ ಆಗಿದೆ:
ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ |
ಜ್ಞಾನಕ್ಕೆ ಮಿಗಿಲಾದ ಪವಿತ್ರವಾದ ಪದಾರ್ಥವೇನಿದೆ? ನಿರ್ಮಲ ಜಲವನ್ನು
ಪವಿತ್ರವೆಂದು ಕರೆಯುತ್ತೇವೆ. ಗಂಗಾಜಲವು ಪರಮ ಪವಿತ್ರವೆನಿಸಿದೆ. ಆದರೆ
ಇವುಗಳು ನಮಗೆ ಇಷ್ಟರವರೆಗೆ ಅಂಟಿಕೊಂಡಿರುವ ಶರೀರದ ಮತ್ತುಮನಸ್ಸಿನ
ಮಲವನ್ನು ಮಾತ್ರ ಪ್ರಕ್ಷಾಲನ ಮಾಡಬಲ್ಲವು. ಸ್ನಾನ ಮಾಡಿದ ನಂತರವೂ
ಮಣ್ಣು ನಮ್ಮ ಮೈಯಲ್ಲಿ ಅಂಟಿಕೊಂಡು ಪುನಃ ನಮ್ಮ ಶರೀರವು ಮಲಿನವಾಗುವ
ಸಂದರ್ಭವಿದೆ. ಗಂಗಾಸ್ನಾನಾದಿ ಪವಿತ್ರಕರ್ಮಗಳನ್ನು ಮಾಡಿದ ಬಳಿಕವೂ ಪುನಃ
ಅನೇಕ ದುಷ್ಕತ್ಯಗಳನ್ನು ಮಾಡುವುದುಂಟು. ಅದರಿಂದ ಪುನಃ ನಮ್ಮ ಮನಸ್ಸು
ಮಲಿನವಾಗಲು ಅವಕಾಶವಾಗುವುದು. ಆದರೆ ಈ ಅಪರೋಕ್ಷದರ್ಶನದ
ಶಕ್ತಿಯೇ ವಿಲಕ್ಷಣವಿದೆ. ಇಷ್ಟರವರೆಗೆ ನಮಗೆ ಅಂಟಿಕೊಂಡಿರುವ ಪಾಪದ
ಮಲವನ್ನು ಇದು ತೊಳೆಯುವುದರ ಜೊತೆಗೆ ಮುಂದೆ ನಾವು ಮಾಡುವ
ಕೃತಿಗಳಿಂದ ನಮಗೆ. ಸಂಭವಿಸಬಹುದಾದ ಪಾಪಸಂಬಧವನ್ನೂ ಇದು
ನಿರ್ಮೂಲಗೊಳಿಸುವುದು.
ತದಧಿಗಮ ಉತ್ತರಪೂರ್ವಾಘಯೋರಶ್ಲೇಹಷವಿನಾಶ್ ।
ಎಂದು ಬ್ರಹ್ಮಸೂತ್ರದಲ್ಲಿ ನಿರೂಪಿಸಿದಂತೆ ಜ್ಞಾನದಿಂದ ಹಿಂದಿನ ಪಾಪಗಳ
ನಾಶವಾಗುವುದಲ್ಲದೆ ಮುಂದೆ ಯಾವ ಪಾಪಕೃತಿಗಳೂ ನಮ್ಮಿಂದ ಘಟಿಸದಂತೆ
ಮಾಡುವ ಒಂದು ದೈವೀ ಚಮತ್ಕಾರವೂ ಈ ಜ್ಞಾನದಲ್ಲಿದೆ. ಜ್ಞಾನವು ಪಾಪದ
ಬೇರನ್ನೇ ಸಮೂಲವಾಗಿ ಉಜ್ಜಾಟನೆ ಮಾಡುವುದು. ಮುಂದೆ ಯಾವ
ಪಾಪಮಲದ ಲೇಪವೂ ಜ್ಞಾನಿಗಾಗಲಾರದು. ಆದುದರಿಂದ ಜ್ಞಾನವು
ಪವಿತ್ರತಮವಾದ ವಸ್ತುವಾಗಿದೆ.
Bannanje Govindacharya (1936–2020)Bhagavad Gita Pravachana
ಶ್ರೇಯಾನ್ ದ್ರವ್ಯ ಮಯಾತ್ ಯಜ್ಞಾತ್ ಜ್ಞಾನಯಜ್ಞಃ ಪರಂತಪ |
ಸರ್ವಮ್ ಕರ್ಮಾ ಅ[ಆ]ಖಿಲಮ್ ಪಾರ್ಥ ಜ್ಞಾನೇ ಪರಿಸಮಾಪ್ಯತೇ- ಓ ಪರಂತಪಾ, ಸೊತ್ತುಗಳನ್ನು
ಹೋಮಿಸುವ ಬಾಹ್ಯ ಯಜ್ಞಕ್ಕಿಂತ ಜ್ಞಾನ ಯಜ್ಞ ಮಿಗಿಲು. £ ಪಾರ್ಥಾ, ಸಾಂಗವಾದ ([ತಿಳಿವಿನೆದುರು ತೀರಾ
ಸಣ್ಣದಾದ] ಎಲ್ಲಾ ಕರ್ಮವೂ ತಿಳಿವಿನಲ್ಲಿ ಪೂರ್ತಿಗೊಳ್ಳುತ್ತದೆ.
ವಾಸ್ತವಿಕವಾಗಿ ಪೂರ್ಣವಾದ ಬರಿಯ ಬಾಹ್ಯಯಜ್ಞ ಮತ್ತು ಬರಿಯ ಅಂತರಂಗ ಯಜ್ಞ ಅನ್ನುವುದೊಂದಿಲ್ಲ. ನಾವು
ಮಾಡುವ ಬಾಹ್ಯಯಜ್ಞದ ಹಿಂದೆ ಅರಿವಿದೆ. ಅಂತರಂಗ ಯಜ್ಞದ ಜೊತೆಗೆ ಆಚರಣೆ ಕೂಡಾ ಇದೆ. ಇವೆರಡರಲ್ಲಿ
ಅಂತರಂಗ ಯಜ್ಞಕ್ಕೆ ಹೆಚ್ಚು ಮಹತ್ವ. ಏಕೆಂದರೆ ನಾವು ಮಾನಸಿಕವಾಗಿ ಧ್ಯಾನ ಮಾಡುವುದರಿಂದ ಬಾಹ್ಯಕ್ರಿಯೆ
ಇಲ್ಲದೆ ಮನಸ್ಸಿನಲ್ಲಿ ವಿಶೇಷ ಶಕ್ತಿ ನಿರ್ಮಾಣವಾಗುತ್ತದೆ. ಆದರೆ ಅರಿವು ಇಲ್ಲದೇ ಕರ್ಮ ಮಾಡಿದರೆ ಅದು ವ್ಯರ್ಥ!
ಈ ಕಾರಣಕ್ಕಾಗಿ ಕರ್ಮದ ಹಿಂದಿನ ಅರಿವು ಬಹಳ ಮುಖ್ಯ. ಹಾಗಾಗಿ ಜ್ಞಾನಪೂರ್ವಕ ನಾವು ಕರ್ಮ ಮಾಡಬೇಕು.
ಬರೀ ದ್ರವ್ಯಮಯವಾಗಿ, ಅದರ ಹಿಂದೆ ಜ್ಞಾನ ಇಲ್ಲದೇ ಇದ್ದರೆ, ತಿಳಿದು ಮಾಡದಿದ್ದರೆ, ಅದಕ್ಕೆ ಅರ್ಥವಿಲ್ಲ. ಯಾವ
ಕರ್ಮವನ್ನಾಗಲಿ ತಿಳಿದು ಮಾಡಿದಾಗ ಮಾತ್ರ ಪರಿಣಾಮಕಾರಿ. ಈ ಕಾರಣದಿಂದ ಜ್ಞಾನಪರವಾದ ಯಜ್ಞ
ಮಹತ್ವದ್ದು. ಈ ಶ್ಲೋಕದಲ್ಲಿ ಕೃಷ್ಣ ಅರ್ಜುನನನ್ನು ಪರಂತಪ ಎಂದು ಸಂಬೋಧಿಸುತ್ತಾನೆ. ಇಲ್ಲಿ ಈ
ಸಂಬೋಧನೆಗೆ ವಿಶೇಷ ಅರ್ಥವಿದೆ. ಈ ಪದವನ್ನು ಎರಡು ನೆಲೆಯಲ್ಲಿ ಅರ್ಥೈಸಬಹುದು. ಸ್ಥೂಲವಾಗಿ
ನೋಡಿದರೆ ಪರಂತಪ ಎಂದರೆ 'ಶತ್ರುಗಳನ್ನು ಸದೆಬಡಿಯುವ ವೀರ'. ಇಲ್ಲಿ ಅರ್ಜುನ ಮಾಡುತ್ತಿರುವ ಯಜ್ಞ
ಶತ್ರುನಿಗ್ರಹ. ಆ ಯಜ್ಞದ ಹಿಂದೆ ಜ್ಞಾನದ ಸಹಕಾರವಿದೆ. ಆದ್ದರಿಂದ ಅದು ಜ್ಞಾನಯಜ್ಞವಾಗುತ್ತದೆ-
ದ್ರವ್ಯಯಜ್ಞವಲ್ಲ. ಏಕೆಂದರೆ ಅರ್ಜುನ ಪರಂತಪ-'ಪರಮಾತ್ಮನನ್ನು ಸದಾ ಚಿಂತಿಸುವವನು'. ಇಲ್ಲಿ 'ಅವರು ನನ್ನ
ಶತ್ರುಗಳು, ಅವರನ್ನು ನಿಗ್ರಹಿಸಿ ನಾನು ಅಧಿಕಾರ ಸಾಧಿಸಬೇಕು' ಎನ್ನುವ ಅನುಸಂಧಾನವಿಲ್ಲ. ಇದೊಂದು
ಭಗವಂತನ ಆರಾದನಾ ರೂಪವಾದ ಯಜ್ಞ. ಅನ್ಯಾಯದ ವಿರುದ್ಧ ಹೋರಾಟ ಅರ್ಜುನನ ಕರ್ತವ್ಯ,
ಜಯಾಪಜಯಗಳು ಆ ಭಗವಂತನಿಗೆ ಬಿಟ್ಟಿದ್ದು. ಈ ಅನುಸಂಧಾನದಿಂದ ಯುದ್ಧ ಮಾಡಿದಾಗ ಅದು
ಜ್ಞಾನಯಜ್ಞವಾಗುತ್ತದೆ. ಪರಂತಪ ಎನ್ನುವ ಈ ವಿಶೇಷಣ ಇಲ್ಲಿ ಕರ್ಮವನ್ನು ಜ್ಞಾನವಾಗಿ ಹೇಗೆ
ಪರಿವರ್ತಿಸಬಹುದು ಎನ್ನುವುದನ್ನು ಸೂಚಿಸುತ್ತದೆ
ಇದು ಏಕೆ ಜ್ಞಾನಮಯ ಎನ್ನುವುದನ್ನು ಕೃಷ್ಣ ವಿವರಿಸುತ್ತಾ ಹೇಳುತ್ತಾನೆ: "ಸರ್ವಮ್ ಕರ್ಮಾ ಅ[ಆ]ಖಿಲಮ್
ಪಾರ್ಥ ಜ್ಞಾನೇ ಪರಿಸಮಾಪ್ಯತೇ" ಎಂದು. ಇಲ್ಲಿ 'ಸರ್ವಂ' ಮತ್ತು 'ಅಖಿಲಂ' ಎನ್ನುವ ಪದ ಪುನರುಕ್ತಿ ಇದ್ದಂತೆ
ಕಾಣುತ್ತದೆ. ಆದರೆ ಇದರ ಹಿಂದೆ ವಿಶೇಷ ಅರ್ಥವಿದೆ. ಒಂದು ಮಂತ್ರದಲ್ಲಿ ಎಷ್ಟು ಬಗೆಯ ಪದಛೇದ, ಎಷ್ಟು
ಬಗೆಯ ಅರ್ಥಾನುಸಂಧಾನ ಎನ್ನುವುದು ಮುಖ್ಯ. ಇಲ್ಲಿ "ಸರ್ವಂ ಕರ್ಮಾ[5]ಖಿಲಂ" ಎನ್ನುವುದನ್ನು ಎರಡು
ಬಗೆಯಿಂದ ಪದಛೇದ ಮಾಡಬಹುದು. ಒಂದು- “ಸರ್ವ ಕರ್ಮ ಅಖಿಲಂ' ಹಾಗೂ ಇನ್ನೊಂದು “ಸರ್ವ ಕರ್ಮ
ಆಖಿಲಂ'. ಎಲ್ಲಾ ಪರಿಕರಗಳಿಂದ ಪರಿಪೂರ್ಣವಾದ ಸರ್ವಕರ್ಮವನ್ನು 'ಸರ್ವ ಕರ್ಮ ಅಖಿಲಂ ಎನ್ನುತ್ತಾರೆ.'
ಅಂದರೆ ಪರಿಪೂರ್ಣವಾದ ಎಲ್ಲಾ ಕರ್ಮ. "ಒಂದು ಕರ್ಮವನ್ನು ಪೂರ್ಣವಾಗಿ ಮಾಡು” ಎನ್ನುತ್ತಾನೆ ಕೃಷ್ಣ.
ಯಾವುದೇ ಕರ್ಮವನ್ನು ಜ್ಞಾನಪೂರ್ವಕವಾಗಿ ಮಾಡಿದಾಗ ಮಾತ್ರ ಅದು ಪೂರ್ಣವಾಗುತ್ತದೆ. ಕರ್ಮದ ಜೊತೆಗೆ
ಜ್ಞಾನ ಬೇಕೇಬೇಕು. ಅದು ಜ್ಞಾನದ ಶ್ರೇಷ್ಠತೆ. ಜ್ಞಾನದಿಂದ ಕರ್ಮ ಮಾಡು; ಕರ್ಮ ಮಾಡಿ ಜ್ಞಾನಗಳಿಸು. ಆಗ
ಅದು ಪರಿಪೂರ್ಣ. ಭಾಗವತದಲ್ಲಿ ಜ್ಞಾನವಿಲ್ಲದೇ ಮಾಡುವ ಯಜ್ಞವನ್ನು ಉಗ್ರವಾಗಿ ವಿರೋಧಿಸುತ್ತಾರೆ. ಅಲ್ಲಿ
ಹೋಮದಲ್ಲಿ ಕೊಡುವ ಆಹುತಿಯನ್ನು ಏಕೆ ಕೊಡುತ್ತಿದ್ದೇವೆ ಎಂದು ತಿಳಿಯದೇ ಹೋಮ ಮಾಡುವವನು 'ಬೆಂಕಿಗೆ
ಮರುಳಾದವನು ಹಾಗೂ ಹೊಗೆ ತಿಂದು ಸಾಯುವವನು' ಎನ್ನುತ್ತಾರೆ. ಕರ್ಮದ ಹಿಂದಿನ ಭಗವಂತನ ಅರಿವು
ಬಹಳ ಮುಖ್ಯ. ಇಲ್ಲದಿದ್ದರೆ ಅದು ತೂತು ಬಿದ್ದ ದೋಣಿಯಂತೆ. ಮಾಡಿದ ಕರ್ಮ ಸಫಲವಾಗುವುದು ಅದರ ಹಿಂದೆ
ಅರಿವು ಇದ್ದಾಗ ಮಾತ್ರ.
ಇನ್ನೊಂದು ಅರ್ಥದಲ್ಲಿ ಜ್ಞಾನರಹಿತವಾದ ಕೇವಲಕರ್ಮ 'ಆ-ಖಿಲಂ'. ಇಲ್ಲಿ 'ಖಿಲಂ' ಅಂದರೆ ಚೂರು. ಜ್ಞಾನವಿಲ್ಲದ
ಎಲ್ಲಾ ಕರ್ಮವನ್ನು ಒಂದುಗೂಡಿಸಿದರೂ ಅದು ಜ್ಞಾನದ ಮುಂದೆ ಒಂದು ಚಿಕ್ಕ ಚೂರು. ಜ್ಞಾನವಿಲ್ಲದ ಎಲ್ಲಾ
ಕರ್ಮಗಳು ಸೇರಿದರೂ ಅದು ಜ್ಞಾನಪೂರ್ಣ ಕರ್ಮದ ಮುಂದೆ ಅತ್ಯಲ್ಪ. ನಮ್ಮ ಕರ್ಮ
ಜ್ಞಾನಕ್ಕೋಸ್ಕರವಾಗಬೇಕೇ ಹೊರತು ಕರ್ಮಕ್ಕೋಸ್ಕರ ಕರ್ಮ ಮಾಡಬಾರದು. ಆದರೆ ಇಂದಿನ ದಿನದಲ್ಲಿ
ಜ್ಞಾನಕ್ಕೋಸ್ಕರ ಕರ್ಮ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ದುಃಖದಾಯಕ.
ಇಲ್ಲಿ ಕೃಷ್ಣ ಅರ್ಜುನನನ್ನು “ಪಾರ್ಥಾ' ಎಂದು ಸಂಬೋಧಿಸಿದ್ದಾನೆ. ಹಿಂದೆ ಹೇಳಿದಂತೆ ಪಾರ್ಥ ಎಂದರೆ
ಪಾರವನ್ನು ಕಂಡವನು, ಜ್ಞಾನದ ಕಡಲಿನ ಆಚೆಯ ದಡವನ್ನು ಕಂಡವನು; ವೇದಾರ್ಥವನ್ನು ಪಾನ
ಮಾಡಿದವನು. "ಮಹಾನ್ ಜ್ಞಾನಿಯಾದ ನೀನು ಅರಿತು ಮಾಡುವ ಈ ಕರ್ಮ ಕೇವಲ ಕರ್ಮವಲ್ಲ ಇದು
ಜ್ಞಾನಯಜ್ಞ" ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ. ಇಲ್ಲಿ ನಾವು ಪುನಃ ನೆನಪಿಸಿಕೊಳ್ಳಬೇಕಾದ ವಿಷಯ
ಎಂದರೆ ಮೂಲತಃ ಅರ್ಜುನ ಮಹಾನ್ ಜ್ಞಾನಿ. ಆದರೆ ಮಹಾನ್ ಜ್ಞಾನಿಗಳಿಗೂ ಕೂಡಾ ಕೆಲವೊಮ್ಮೆ
ಗೊಂದಲವಾಗಿ ಎಲ್ಲವೂ ಮರೆತು ಹೋಗುತ್ತದೆ. ಅರ್ಜುನ ಇಲ್ಲಿ ಆ ಸ್ಥಿತಿಯಲ್ಲಿದ್ದಾನೆ. ಇದು ಕೇವಲ ತಾತ್ಕಾಲಿಕ
ಪರದೆ, ಆ ಪರದೆಯನ್ನು ಕೃಷ್ಣ ಸರಿಸುತ್ತಿದ್ದಾನೆ.
ಜ್ಞಾನವಿಲ್ಲದ ಕರ್ಮದಿಂದ ಯಾವ ಉಪಯೋಗವೂ ಇಲ್ಲ ಅನ್ನುವ ವಿಚಾರ ಸ್ಪಷ್ಟವಾಯಿತು. ಆದರೆ ಈ
ಜ್ಞಾನವನ್ನು ಗಳಿಸುವ ಪರಿ ಎಂತು? ಈ ಪ್ರಶ್ನೆಗೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸುತ್ತಾನೆ.
Bibek Debroy (1955–2024)The Bhagavad Gita
(33)
‘O scorcher of foes!51 A yajna performed with knowledge is superior to a
yajna full of objects.52 O son of Pritha!53 All actions and their fruit end in
knowledge.’