4.34

तद्विद्धि प्रणिपातेन परिप्रश्नेन सेवया ।
उपदेक्ष्यन्ति ते ज्ञानं ज्ञानिनस्तत्त्वदर्शिनः ॥
tadviddhi praṇipātena paripraśnena sevayā |
upadekṣyanti te jñānaṃ jñāninastattvadarśinaḥ ||
Sri Madhvacharya (1238–1317)Bhagavad Gita Tatparya Nirnaya
‘ज्ञानं तेऽहं सविज्ञानम्’ इति वक्ष्यमाणत्वात् स्वयमेवोपदेक्ष्यति॥34॥
Swami Sivananda (1887–1963)Bhagavad Gita
34. Know that by long prostration, by question and by service, the wise who have realised the Truth will instruct thee in (that) knowledge.
Sri Vishwesha Tirtharu (1931–2019)Gitasaroddhara
4.33–4.38 · ಜ್ಞಾನವೇ ಯಜ್ಞದ ಫಲ
ಜ್ಞಾನವೇ ಯಜ್ಞದ ಫಲ ಇಂತಹ ಯಜ್ಞದ ಉದ್ದೇಶವೇನು? ನಾವು ಮಾಡುವ ಎಲ್ಲಯಜ್ಞಮಯ ಕಾರ್ಯಗಳಿಂದ ಪಡೆಯಬಹುದಾದ ಪರಮಪುರುಷಾರ್ಥವೇನು? ಭಕ್ತಿ ತ್ಯಾಗಗಳಿಂದ ನಾವು ಮಾಡುವ ಸತ್ಯರ್ಮಗಳೆಲ್ಲ ಒಂದು ಸಾಧನೆಯಾಗುತ್ತವೆ; ಭಗವಂತನಕಡೆಗೆ ಸಾಗುವ ದಿವ್ಯಯಾತ್ರೆ ಎನಿಸುತ್ತವೆ. ಈ ಪವಿತ್ರ ಕರ್ಮಗಳಿಂದ ಹೃದಯಸಂಸ್ಕಾರವನ್ನು ಹೊಂದಿ ಭಗವಂತನ ದರ್ಶನವನ್ನು ಪಡೆಯುವುದು, ಇವೆಲ್ಲ ಸತ್ಕರ್ಮಗಳ ಅಂತಿಮ ಗುರಿಯಾಗಿದೆ. ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾ; ನೇ ಪರಿಸಮಾಪ್ಯತೇ [ ಆದುದರಿಂದ ಯಜ್ಞದ ವಿವಿಧ ಪ್ರಕಾರಗಳಲ್ಲಿ ಜ್ಞಾನಯಜ್ಞಕ್ಕೆ ವಿಶೇಷ ಮಹತ್ವವಿದೆ. ಭಗವದ್‌ ಜ್ಞಾನವನ್ನು ಪಡೆಯುವ ವಿಶೇಷ ಪ್ರಯತ್ನವೇ ಜ್ಞಾನಯಜ್ಞವಾಗಿದ್ದು ವಿವಿಧ ಲೌಕಿಕಹಾಗೂ ಲೋಕಸೇವಾಕಾರ್ಯಗಳನ್ನು ಯಜ್ಞರೂಪದಿಂದ ಮಾಡುತ್ತಿದ್ದರೂ ದಿನವೂ ಜ್ಞಾನಕಾರ್ಯಕ್ಕಾಗಿ ಸ್ವಲ್ಪ ಸಮಯವನ್ನಾದರೂ ಮೀಸಲಾಗಿಡುವುದು ಅವಶ್ಯವಾಗಿದೆ. ಜ್ಞಾನಕ್ಕಾಗಿಯೇ ವಿವಿಧ ಯಜ್ಞಗಳನ್ನು ನಡೆಸುತ್ತಿರುವಾಗ ಜ್ಞಾನವನ್ನೇ ಅಲಕ್ಷಿಸಿ ಕರ್ಮಮಾರ್ಗ ವನ್ನು ಮಾತ್ರ ನಾವು ಆಶ್ರಯಿಸಿಕೊಂಡಿರಬಾರದು. ಶ್ರೇಯಾನ್‌ ದ್ರವ್ಯಮಯಾದ್ಯಜ್ಞಾತ್‌ ಜ್ಞಾನಯಜ್ಞ; ಪರಂತಪ। ಇತರ ಲೌಕಿಕ ಸಾಧನ ಸಂಪತ್ತುಗಳಿಂದ ನಡೆಸಲಾಗುವ ಯಜ್ಞಕ್ಕಿಂತಲೂ ಜ್ಞಾನಸಂಪಾದನೆಗಾಗಿ ನಡೆಸುವ ಶ್ರವಣಮನನಾದಿರೂಪ ಯಜ್ಞವು ಮಹತ್ತರ ವಾದುದು. ಈ ಜ್ಞಾನವು ಇಲ್ಲದೆ ಇದ್ದರೆ ಕರ್ಮಮಾರ್ಗದಲ್ಲಿಯೂ ನಾವು ಸರಿಯಾಗಿನಡೆಯಲಾರೆವು. ಜ್ಞಾನದಿಂದ ವಂಚಿತರಾದರೆಕರ್ತವ್ಯಾಕರ್ತವ್ಯ ಪ್ರಜ್ಞೆ ಇಲ್ಲದೆ ವ್ಯಾಮೋಹಕ್ಕೆ ಒಳಗಾಗುವ ಪ್ರಸಂಗವು ಬರುವುದರಿಂದಕರ್ಮಮಾರ್ಗ ದಲ್ಲಿ ಮುನ್ನಡೆಯಲೂ ಜ್ಞಾನದ ಅವಲಂಬನವು ಅತ್ಯಾವಶ್ಯಕವಾಗಿದೆ. ಸ್ವಾಧ್ಯಾಯಪ್ರವಚನೇ ಏವೇತಿ ನಾಕೋ ಮೌದ್ಗಲ್ಯಃ [ ತದ್ಧಿ ತಪಸ್ಪದ್ಧಿ ತಪಃ ॥ “ತೈತ್ತಿರೀಯೋಪನಿಷತ್‌ ಎಂದು ಉಪನಿಷತ್ತಿನಲ್ಲಿ ಜ್ಞಾನಸಂಪಾದನೆಯ ಸಾಧನೆಯನ್ನು ಮಹಾ ತಪಸ್ಸೆಂದು ಒತ್ತಿಹೇಳಿದ್ದಾರೆ. ಜಪಪೂಜೆಗಳಿಗೆ ಕುಳಿತಾಗಲೂ ನಮಗೆ ಏಕಾಗ್ರತೆಯನ್ನು ಹೊಂದಲುಸಾದ್ಯವಾಗುವುದಿಲ್ಲ. ಆದರೆಗ್ರಂಥದಪ್ರವಚನಹ 3 ಗೂಅಭ್ಯಸದಲ್ಲಿ ತೊಡಗಿದಾಗ ಉಳಿದ ವಿಷಯಗಳನ್ನು ಮರೆತು ಮನಸ್ಸನ್ನು ತಲ್ಲೀನಗೊಳಿಸಲು ಸಾಧ್ಯವಾಗುವುದು. ಆದುದರಿಂದ ಭಾವಸಮಾಧಿಯನ್ನು ಹೊಂದಲು ಇತರ ಉಪಾಯಗಳಿಗಿಂತ ಜ್ಞಾನ ಸಾಧನೆಯ ಕಾರ್ಯವೇ ಹೆಚ್ಚು ಸುಲಭವೂ ಅನುಕೂಲವೂ ಆಗಿದೆ. ಹೀಗಿದ್ದರೆ ಈ ಕರ್ಮಮಾರ್ಗದಲ್ಲಿ ನಡೆಯುವುದಕ್ಕಿಂತ ಪೂರ್ಣವಾಗಿ ಇಡೀ ಜೀವನದಲ್ಲಿ ಜ್ಞಾನಸಾಧನೆಯನ್ನು ಮಾತ್ರ ಅನುಷ್ಠಾನ ಮಾಡಿದರೆ ಸಾಲದೆ? ಗೀತೆಯಲ್ಲಿ ಹೇಳಿದ ವಿವಿಧ ಕರ್ಮಯಜ್ಞಗಳಲ್ಲಿ ತೊಡಗಿ ವೃಥಾ ಕಾಲಹರಣವನ್ನೇಕೆ ಮಾಡಬೇಕು? ಶ್ರೇಷ್ಠವಾದ ಜ್ಞಾನಯಜ್ಞವನ್ನು ಮಾತ್ರ ಆಶ್ರಯಿಸಬಹುದಲ್ಲವೆ? ಎಂಬತಂಕೆಯು ಬರಬಹುದಾಗಿದೆ. ಆದರೆ ಜ್ಞಾನವು ಅಂತಿಮ ಗುರಿಯಾಗಿದ್ದರೂ ಜ್ಞಾನಮಾರ್ಗವೇ ಶ್ರೇಷ್ಠವಾಗಿದ್ದರೂ ಕರ್ಮದ ಸಹಾಯವಿಲ್ಲದೆ ಈ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲವೆಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಜ್ಞಾನಮಾರ್ಗವೂ ಶ್ರೇಷ್ಠವೆಂದ ಕೂಡಲೇ ಉಳಿದ ಕರ್ಮ ಸಾಧನೆಗಳು ಬೇಡವೆನ್ನುವ ಅರ್ಥದಲ್ಲಿ ನಾವು ಪರ್ಯವಸಾನ ಮಾಡಬಾರದು. ಹೊಲದಿಂದ ಬಿಳೆ ಪಡೆಯುವುದೇ ರೈತನ ಮುಖ್ಯ ಗುರಿ. ಅದಕ್ಕಾಗಿ ಸಸಿಗಳನ್ನು ನೆಡುವುದೇ ಅವನ ಮುಖ್ಯ ಕೆಲಸವಾಗಿದೆ. ಆದರೆ ಹೊಲದಲ್ಲಿ ಮಾಡಬೇಕಾದ ಇತರ ಸಾಧನಸಂಸ್ಕಾರಗಳನ್ನು ಮಾಡದೆ ಕೇವಲ ಸಸಿಗಳನ್ನು ನೆಡುವುದರಿಂದ ಬೆಳೆಯನ್ನು ಪಡೆಯಬಲ್ಲನೆ? ಉಳುವುದು, ನೀರು ಹಾಕುವುದು ಮುಂತಾದ ವಿವಿಧ ಸಾಧನೆಗಳಿಂದ ಒಡಗೂಡಿ ಬೀಜಗಳನ್ನು ಬಿತ್ತುವುದರಿಂದಲೇ ರೈತನು ಕೃಷಿಯ ಸಾಫಲ್ಯವನ್ನು ಪಡೆಯಬಲ್ಲನು. ಸಾಕ್ಷಾತ್ಕಾರವನ್ನು ಪಡೆಯುವಗುರಿಯನ್ನು ಮುಟ್ಟಲೂ ಜ್ಞಾನಯಜ್ಞದ ಜೊತೆಗೆ ಅದಕ್ಕೆ ಪೋಷಕವಾಗಿ ಕರ್ಮ ಯಜ್ಞಗಳನ್ನು ನಾವು ಅನುಷ್ಠಾನ ಮಾಡಲೇ ಬೇಕಾಗುತ್ತದೆ. ತತ್‌ ಸ್ವಯಂ ಯೋಗಸಂಸಿದ್ಧ ಭ ಕಾಲೇನಾತ್ಮನಿ ವಿಂದತಿ । ಕರ್ಮಯೋಗದ ಸಿದ್ಧಿಯನ್ನು ಪಡೆದವನೇ ಈ ಜ್ಞಾನವನ್ನು ಹೊಂದಲು ಯೋಗ್ಯನಾಗುವುದರಿಂದ ಕರ್ಮವು ಅವಶ್ಯಕ ಎಂದು ಗೀತೆಯು ನಿರೂಪಿಸಿದೆ. ಅಂತೂ ಕರ್ಮಾಚರಣೆಯ ಸಹಕಾರದಿಂದ ಶ್ರವಣ, ಮನನ, ಧ್ಯಾನಾದಿ ರೂಪವಾದ ಜ್ಞಾನಯಜ್ಞದಿಂದ ಪರಮಾತ್ಮನ ಅಪರೋಕ್ಷ ಜ್ಞಾನದಂತಹ ಮೋಕ್ಷದ ಅಂತರಂಗಸಾಧನವನ್ನು ನಾವು ಹೊಂದುವೆವು. ಸಂಸಾರಬಂಧನಕ್ಕೆ ಕಾರಣಗಳಾದ ಪಾಪಗಳ ವಿಮೋಚನೆಗೆ ಈ ಸಾಕ್ಷಾತ್ಕಾರವೇ ಪರಮಸಾಧನ ವಾಗಿದೆ. ನಾವುತಿಳಿದೋತಿಳಿಯದೆಯೋಮಾಡಿರುವ ಅನಂತದುಷ್ಠತ್ಯಗಳಿಂದ ನಮ್ಮ ಮನಸ್ಸು ಪಾಪಮಲೀಮಸವಾಗಿದೆ. ಇದರ ಪ್ರಕ್ನಾಲನೆ ಮಾಡಿ ನಮ್ಮನ್ನು ಪುನೀತಗೊಳಿಸುವ ಅಮೃತಜಲಧಾರೆಯೇ ಈ ಸಾಕ್ಟಾತ್ಯಾರವೆನಿಸುವುದು. ಪಾಪದ ರಾಶಿರಾಶಿಗಳಿದ್ದರೂ ಈ ಜ್ಞಾನದ ದಿವ್ಯಾಸ್ತ್ರದಿಂದ ಅವುಗಳ ನಿರ್ಮೂಲನವಾಗುವುದು. ಎಷ್ಟು ಆಳವಾದ, ವಿಸ್ತಾರವಾದ, ಜಲರಾಶಿಯನ್ನೂ ಚಿಕ್ಕ ನಾವೆಯಿಂದ ನಾವು ಸುಲಭವಾಗಿ ದಾಟಬಲ್ಲೆವು. ಕಟ್ಟಿಗೆಗಳ ಮೂಟಿಗಳಿಷ್ಟಿದ್ದರೂ ಬೆಂಕಿಗೆ ಅವುಗಳನ್ನು ಸುಡಲು ಶ್ರಮವೆನಿಸುವುದೆ? ಪಾಪದ ಮಹಾಸಾಗರದಿಂದ ಪಾರುಮಾಡಿಸಬಲ್ಲ ಹಡಗೂ, ದುಷ್ಕರ್ಮಗಳ ಒಣ ಕಟ್ಟಿಗೆಗಳನ್ನು ಭಸ್ಮೀಕರಿಸಬಲ್ಲ ದಿವ್ಯಾಗ್ನಿಯೂ ಈ ಜ್ಞಾನವೇ ಆಗಿದೆ: ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ | ಜ್ಞಾನಕ್ಕೆ ಮಿಗಿಲಾದ ಪವಿತ್ರವಾದ ಪದಾರ್ಥವೇನಿದೆ? ನಿರ್ಮಲ ಜಲವನ್ನು ಪವಿತ್ರವೆಂದು ಕರೆಯುತ್ತೇವೆ. ಗಂಗಾಜಲವು ಪರಮ ಪವಿತ್ರವೆನಿಸಿದೆ. ಆದರೆ ಇವುಗಳು ನಮಗೆ ಇಷ್ಟರವರೆಗೆ ಅಂಟಿಕೊಂಡಿರುವ ಶರೀರದ ಮತ್ತುಮನಸ್ಸಿನ ಮಲವನ್ನು ಮಾತ್ರ ಪ್ರಕ್ಷಾಲನ ಮಾಡಬಲ್ಲವು. ಸ್ನಾನ ಮಾಡಿದ ನಂತರವೂ ಮಣ್ಣು ನಮ್ಮ ಮೈಯಲ್ಲಿ ಅಂಟಿಕೊಂಡು ಪುನಃ ನಮ್ಮ ಶರೀರವು ಮಲಿನವಾಗುವ ಸಂದರ್ಭವಿದೆ. ಗಂಗಾಸ್ನಾನಾದಿ ಪವಿತ್ರಕರ್ಮಗಳನ್ನು ಮಾಡಿದ ಬಳಿಕವೂ ಪುನಃ ಅನೇಕ ದುಷ್ಕತ್ಯಗಳನ್ನು ಮಾಡುವುದುಂಟು. ಅದರಿಂದ ಪುನಃ ನಮ್ಮ ಮನಸ್ಸು ಮಲಿನವಾಗಲು ಅವಕಾಶವಾಗುವುದು. ಆದರೆ ಈ ಅಪರೋಕ್ಷದರ್ಶನದ ಶಕ್ತಿಯೇ ವಿಲಕ್ಷಣವಿದೆ. ಇಷ್ಟರವರೆಗೆ ನಮಗೆ ಅಂಟಿಕೊಂಡಿರುವ ಪಾಪದ ಮಲವನ್ನು ಇದು ತೊಳೆಯುವುದರ ಜೊತೆಗೆ ಮುಂದೆ ನಾವು ಮಾಡುವ ಕೃತಿಗಳಿಂದ ನಮಗೆ. ಸಂಭವಿಸಬಹುದಾದ ಪಾಪಸಂಬಧವನ್ನೂ ಇದು ನಿರ್ಮೂಲಗೊಳಿಸುವುದು. ತದಧಿಗಮ ಉತ್ತರಪೂರ್ವಾಘಯೋರಶ್ಲೇಹಷವಿನಾಶ್‌ । ಎಂದು ಬ್ರಹ್ಮಸೂತ್ರದಲ್ಲಿ ನಿರೂಪಿಸಿದಂತೆ ಜ್ಞಾನದಿಂದ ಹಿಂದಿನ ಪಾಪಗಳ ನಾಶವಾಗುವುದಲ್ಲದೆ ಮುಂದೆ ಯಾವ ಪಾಪಕೃತಿಗಳೂ ನಮ್ಮಿಂದ ಘಟಿಸದಂತೆ ಮಾಡುವ ಒಂದು ದೈವೀ ಚಮತ್ಕಾರವೂ ಈ ಜ್ಞಾನದಲ್ಲಿದೆ. ಜ್ಞಾನವು ಪಾಪದ ಬೇರನ್ನೇ ಸಮೂಲವಾಗಿ ಉಜ್ಜಾಟನೆ ಮಾಡುವುದು. ಮುಂದೆ ಯಾವ ಪಾಪಮಲದ ಲೇಪವೂ ಜ್ಞಾನಿಗಾಗಲಾರದು. ಆದುದರಿಂದ ಜ್ಞಾನವು ಪವಿತ್ರತಮವಾದ ವಸ್ತುವಾಗಿದೆ.
Bannanje Govindacharya (1936–2020)Bhagavad Gita Pravachana
ತದ್‌ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ । ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಸ್ಪತ್ತ್ವದರ್ಶಿನಃ lawl
4.34–4.35
ತತ್‌ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ | ಉಪದೇಕ್ಷ್ಯಂತಿ ತೇ ಜ್ಞಾನಮ್‌ ಜ್ಞಾನಿನಃ ತತ್ತ್ವದರ್ಶಿನಃ || ಯತ್‌ ಜ್ಞಾತ್ವಾ ನ ಪುನಃ ಮೋಹಮ್‌ ಏವಮ್‌ ಯಾಸ್ಯಸಿ ಪಾಂಡವ | ಯೇನ ಭೂತಾನಿ ಅಶೇಷೇಣ ದ್ರಕ್ಷ್ಯಸಿ ಆತ್ಮನಿ ಅಥ ಉ ಮಯಿ -- ಪಾಂಡವಾ, ಯಾವುದನ್ನು ತಿಳಿದಾಗ ನೀನು ಮತ್ತೆ ಹೀಗೆ ಮೋಹಗೊಳ್ಳುವುದಿಲ್ಲವೋ; ಯಾವ ಮೋಹವಳಿದದ್ದರಿಂದ ಎಲ್ಲಾ ಜೀವಿಗಳನ್ನು ಅಂತರ್ಯಾಮಿಯಾದ [ಎಲ್ಲೆಲ್ಲೂ ಇರುವ] ನನ್ನಲ್ಲಿ ಕಾಣಬಲ್ಲೆಯೋ, ಅಂತಹ ತಿಳಿವನ್ನು ನಿಜ ಕಂಡು ತಿಳಿದವರು ನಿನಗೆ ತಿಳಿಹೇಳುತ್ತಾರೆ. ಕಾಲಿಗೆರಗಿ, ಪರಿಪರಿಯಿಂದ ಕೇಳಿ, ಸೇವೆಗೈದು ಅದನ್ನು ತಿಳಿದುಕೋ. ಜ್ಞಾನವನ್ನು ಗಳಿಸಬೇಕಾದರೆ "ನೀನು ಜ್ಞಾನಿಗಳ ಬೆನ್ನುಹತ್ತಬೇಕು; ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡ ತತ್ವದರ್ಶಿಗಳಿಂದ ಜ್ಞಾನವನ್ನು ಪಡೆ ಎನ್ನುತ್ತಾನೆ ಕೃಷ್ಣ. ಜ್ಞಾನ ಎನ್ನುವುದು ಕೇವಲ ಪುಸ್ತಕವನ್ನು ಓದುವುದರಿಂದ ಬರುವುದಲ್ಲ. ಅದು ನಮಗೆ ಸಾಕ್ಷಾತ್ಕಾರವಾಗಬೇಕು. "Truth is an intuitional flash, it is not Intellectual". ಸತ್ಯ ಎನ್ನುವುದು ನಮಗೆ ಸ್ಟುರಣವಾಗಬೇಕು. ಎಲ್ಲಾ ವೇದ ಮಂತ್ರಗಳೂ DARI ಅಂತರಂಗದಲ್ಲಿ ಸ್ಪೂರಣವಾಗಿರುವುದು(171೬10078! composition). ನ್ಯೂಟನ್‌ ಗೆ ಗುರುತ್ವಾಕರ್ಷಣ ಶಕ್ತಿಯ ವಿಚಾರ ಹೊಳೆದಂತೆ. ಈ ಕಾರಣಕ್ಕಾಗಿ ಮೊದಲು ನಾವು ಸತ್ಯಕ್ಕೆ ಶರಣಾಗಬೇಕು; ಸತ್ಯವನ್ನು ಕಂಡ ತತ್ವಜ್ಞಾನಿಗಳ ಬೆನ್ನುಹತ್ತಬೇಕು. ಸಾಮಾನ್ಯವಾಗಿ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡ ಜ್ಞಾನಿಗಳು ಜ್ಞಾನವನ್ನು ಯೋಗ್ಯರಲ್ಲದವರಿಗೆ ಎಂದೂ ಬೋಧಿಸುವುದಿಲ್ಲ. ಈ ಕಾರಣಕ್ಕಾಗಿ ಕೃಷ್ಣ ಹೇಳುತ್ತಾನೆ: "ತತ್ವದರ್ಶಿಗಳನ್ನು ಕಂಡರೆ ಬಿಡಬೇಡ, ಅವರ ಬೆನ್ನು ಹತ್ತು, ಅವರನ್ನು ಒಲಿಸಿಕೋ, ಅವರ ಮುಂದೆ ನೀನು ಯೋಗ್ಯ ಎಂದು ರುಜುವಾತು ಪಡಿಸು. ನಿನ್ನ ಅನನ್ಯ ಬಯಕೆ ಅವರಿಗೆ ಮನವರಿಕೆಯಾಗುವಂತೆ ಮಾಡು, ಅವರಿಗೆ ಶರಣಾಗು" ಎಂದು. ಇಲ್ಲಿ 'ಪ್ರಣಿಪಾತ' ಅಂದರೆ ಎಂಟು ಅಂಗಗಳ ನಮಸ್ಕಾರ. ತಲೆ, ಎದೆ, ಕೈ, ಕಾಲು ಎಲ್ಲವನ್ನು ನೆಲಕ್ಕೆ ತಾಗಿಸಿ, ಭಕ್ತಿಯ ದೃಷ್ಟಿಯಿಂದ, ಸ್ತೋತ್ರ(ವಚನ) ಮುಖೇನ, ಮನಸ್ಸಿನಲ್ಲಿ ಅಪಾರ ಗೌರವವಿಟ್ಟು ಮಾಡುವ ನಮಸ್ಕಾರ-'ಅಷ್ಟಾಂಗ ನಮನ". ಹೀಗೆ ಶರಣಾಗಿ "ಕೆದಕಿ ಕೆದಕಿ, ಪರಿಪರಿಯಾಗಿ ಕೇಳಿ ತಿಳಿದುಕೋ" ಎನ್ನುತ್ತಾನೆ ಕೃಷ್ಣ. 'ತತ್ವದರ್ಶಿಗಳ ಸೇವೆಮಾಡಿ ಅವರಿಂದ ಜ್ಞಾನವನ್ನು ಗಳಿಸು, ಅದರಿಂದ ಕರ್ಮ ಮಾಡು' ಎನ್ನುವುದು ಕೃಷ್ಣ ಅರ್ಜುನನ ಮೂಲಕ ನಮಗೆ ಕೊಟ್ಟ ಸಂದೇಶ. ಒಮ್ಮೆ ತತ್ವದರ್ಶಿಗಳಿಂದ ಜ್ಞಾನವನ್ನು ಪಡೆದರೆ ಮುಂದೆ ಮೋಹಕ್ಕೆ ಅವಕಾಶವಿಲ್ಲ. ಇಲ್ಲಿ ಅರ್ಜುನನನ್ನು ಕಾಡುತ್ತಿರುವುದು ಜ್ಞಾನವನ್ನು ಮುಚ್ಚಿರುವ ಮೋಹದ ಪರದೆ. ಅದಕ್ಕಾಗಿ ಕೃಷ್ಣ ಅರ್ಜುನನನ್ನು 'ಪಾಂಡವ' ಎಂದು ಸಂಬೋಧಿಸುತ್ತಾನೆ. ಇಲ್ಲಿ 'ಪಂಡಾ' ಎಂದರೆ ಜ್ಞಾನ (ಉದಾ:ಪಂಡಾ ಉಳ್ಳವ ಪಂಡಿತ), ಪಾಂಡವ ಎಂದರೆ ಜ್ಞಾನರಾಶಿಯನ್ನು ಪಡೆದವ. ಇನ್ನು ಪಾಂಡು ಎಂದರೆ 'ಬಿಳಿ ಬಣ್ಣ'. ಅದು ಸಾತ್ವಿಕತೆಯ ಸಂಕೇತ. 'ನೀನು ಸ್ವಯಂ ಜ್ಞಾನಿ ಹಾಗೂ ಸಾತ್ವಿಕ' ಎಂದು ಸೂಚಿಸಿ ಇಲ್ಲಿ ಈ ಸಂಬೋಧನೆ. ಒಮ್ಮೆ ಸತ್ಯದ ಅರಿವು ಬಂದರೆ ಅದರಿಂದ ಮೋಹದ ಪಾಶ ಕಳಚಿಹೋಗುತ್ತದೆ. ಅದು ಪುನಃ ಬರುವ ಸಂಭವವಿಲ್ಲ. ಈ ಸ್ಥಿತಿಯಲ್ಲಿ ಸಮಸ್ತ ಜೀವಜಾತವೂ ಆತ್ಮನಲ್ಲಿ (ಭಗವಂತನಲ್ಲಿ) ಆಶ್ರಿತವಾಗಿದೆ, ಎಲ್ಲವುದಕ್ಕೂ ನಿಯಾಮಕಶಕ್ತಿ ಭಗವಂತ ಎನ್ನುವ ಪ್ರಜ್ಞೆ ಜಾಗೃತವಾಗುತ್ತದೆ. ಇದರಿಂದ ಎಲ್ಲಾ ಗೊಂದಲವೂ ಮರೆಯಾಗುತ್ತದೆ. ಸ್ವಾರ್ಥ, ದುಃಖ, ಅಸೂಹೆ, ಎಲ್ಲವೂ ಹೊರಟು ಹೋಗಿ ಸ್ಥಿತಪ್ರಜ್ಞೆ ಮೂಡುತ್ತದೆ. ಭಗವಂತ ಅಣು ಒಳಗೆ ಅಣುವಾಗಿ, ಎಲ್ಲರೊಳಗೂ ಬಿಂಬ ರೂಪನಾಗಿ ತುಂಬಿದ್ದಾನೆ ಹಾಗೂ ಆತ ಮಹತ್ತಿನಲ್ಲಿ ಮಹತ್ತಾಗಿರುವ ಸರ್ವಗತ. ಅವನ ಇಚ್ಛೆಯಂತೇ ಎಲ್ಲವೂ ನಡೆಯುತ್ತದೆ ಎನ್ನುವ ಸತ್ಯ ತಿಳಿಯುತ್ತದೆ. ಭಗವಂತನಲ್ಲಿ ತನ್ನನ್ನು ತಾನು ಒಪ್ಪಿಸಿಕೊಂಡವನಿಗೆ ಜೀವನದಲ್ಲಿ ಎಂದೂ ಭಯವಿಲ್ಲ. ಜ್ಞಾನದಿಂದ ಕರ್ಮ ಮಾಡಬೇಕು, ತತ್ವ ಜ್ಞಾನಿಗಳಿಂದ ಜ್ಞಾನ ಪಡೆಯಬೇಕು, ಅದರಿಂದ ಮೋಕ್ಷ ಸಾಧ್ಯ ಎನ್ನುವ ವಿಚಾರ ತಿಳಿಯಿತು. ಆದರೆ ಈ ವಿಷಯ ತಿಳಿಯುವ ಮೊದಲು ಸಾಕಷ್ಟು ಪಾಪ ಕರ್ಮಗಳನ್ನು ಮಾಡಿದ ಪಾಪಿಗಳ ಗತಿ ಏನು? ಇದಕ್ಕಾಗಿ ಭಯ ಪಡಬೇಕಾಗಿಲ್ಲ ಎನ್ನುತ್ತಾನೆ ಕೃಷ್ಣ. ಈ ವಿಚಾರವಾಗಿ ಕೃಷ್ಣನ ಭರವಸೆಯನ್ನು ಮುಂದಿನ ಶ್ಲೋಕದಲ್ಲಿ ನೋಡೋಣ.
Bibek Debroy (1955–2024)The Bhagavad Gita
(34)