सर्वकर्माणि मनसा संन्यस्यास्ते सुखं वशी ।
नवद्वारे पुरे देही नैव कुर्वन्न कारयन् ॥
sarvakarmāṇi manasā saṃnyasyāste sukhaṃ vaśī |
navadvāre pure dehī naiva kurvanna kārayan ||
Sri Madhvacharya (1238–1317)Bhagavad Gita Tatparya Nirnaya
अतो मनस्यैव कर्मन्यासोऽस्वातन्त्र्यापेक्षया॥13॥
Swami Sivananda (1887–1963)Bhagavad Gita
13. Mentally renouncing all actions and self-controlled, the embodied one rests happily in
the nine-gated city, neither acting nor causing others (body and senses) to act.
Sri Vishwesha Tirtharu (1931–2019)Gitasaroddhara
5.8–5.14 · ಜ್ಞಾನಿಯು ಲೋಕವಿಮುಖನಲ್ಲ
ಜ್ಞಾನಿಯು ಲೋಕವಿಮುಖನಲ್ಲ
ಸರ್ವಕರ್ಮಾಣಿ ಮನಸಾ ಸಂನ್ಕಸ್ಯಾಸ್ತೇ ಸುಖಂ ವಶೀ |
ಜ್ಞಾನಯೋಗಿಯಲ್ಲಿ ಕರ್ಮದ ಸಂಬಂಧವೇಇರುವುದಿಲ್ಲ ಎಂದು ಕೆಲವರ
ಅಭಿವ್ರಾಯವಿದೆ. ಕರ್ಮಯೋಗವು ಸಾಧಕನ ಪೂರ್ವಾವಸ್ಥೆಯಾಗಿದ್ದರೆ
ಜ್ಞಾನಯೋಗವು ಅವನ ಕೊನೆಯ ಹಂತವಾಗಿದೆ. ಏಕಕಾಲದಲ್ಲಿ ಇವೆರಡೂ
ನಾಥಕನ್ಲಿ ಮೇಶೈಸರ ಲಾರವು . ಈ ಕ್ರಿಯೆ, ಕ್ರಿಯ ಸಾಫಲಸಂಬಂಧ ಹ ಹಾಗೂ
ಇವುಗಳಕಾರಣಗಳಿನಿಸಿದ ಈ ಪ್ರಪಂಚಮಾಯಾಮಯವೆನಿಸಿದ್ದುನಿದ್ದೆಯಿಂದ
ಎಚ್ಚತ್ತವನಿಗೆ ಸ್ವಷ್ಠರಾಜ್ಯದ ವಿಭ್ರಮ, ವಿಲಾಸಗಳೆಲ್ಲ ಕ್ಷಣ ಮಾತ್ರದಲ್ಲಿ
ಅದೃಶ್ವವಾಗುವಂತೆ ಜ್ಞಾನವನ್ನು ಪಡೆದವನ ಪಾಲಿಗೆ ಈ ಪ್ರಪಂಚವೆಲ್ಲ ಬರಿ ಕನಸೇ
ಆಗಿರುವುದು. ಹಗ್ಗವನ್ನು ಸರಿಯಾಗಿನೋಡಿದವನು ಅಲ್ಲಿತಾನು ಕಲ್ಪಿಸಿಕೊಂಡ
ಹಾವನ್ನು ಮತ್ತೆಕಾಣಲಾರನಸ್ಟೆ! ಅದರಂತೆ ಆತ್ಮಜ್ಞಾನವನ್ನು ಪಡೆದ ಮೇಲೆ ಅದರ
ಅಧಿಷ್ಠುನದಲ್ಲಿಯೇಕಲ್ಪನೆಗೊಂಡಿರುವಮಾಯಿಕವಾದ ಜಗತ್ತಿನ ದರ್ಶನವು
ಜ್ಞಾನಿಗೆ ಆಗುವುದಿಲ್ಲ. ಇಂತಹ ದೆಶೆಯಲ್ಲಿ ಅವನು ಕರ್ಮವನ್ನು ಹೇಗೆ ಮಾಡಿ
ಯಾನು? ಆದುದರಿಂದ ಯಜ್ಞರೂಪವಾದ ಸತ್ಯರ್ಮದ ಅನುಷ್ಠಾನವು
ಅಜ್ಞಾನದಲ್ಲಿ ತೊಳಲಾಡುವ ವ್ಯಕ್ತಿಗಳಿಗೆ ಮಾತ್ರ ಮೀಸಲಾದುದು.
ಬ್ರಹ್ಮಜ್ಞಾನವನ್ನು ಪಡೆದವ್ಯಕ್ತಿಯು, ಜ್ಞಾನಹಾಗೂ ಕರ್ಮ ಸಂನ್ಯಾಸದಲ್ಲಿ ಮಾತ್ರ
ಅಧಿಕೃತನು. ಅವನು ತನ್ನ ಶರೀರ ರಕ್ಷಣೆಗೆ ಮಾತ್ರ ಅವಶ್ಯಕವೆನಿಸುವ
ಕಾರ್ಯಗಳನ್ನು ನಿರ್ಲಿಪ್ತತೆಯಿಂದ ನಿರ್ವಹಿಸುವನು. ಇತರ ನಿತ್ಯ-ನೈಮಿತ್ತಿಕ
ಧಾರ್ಮಿಕ-ಸಾಮಾಜಿಕವೆನಿಸುವಯಾವಕಾರ್ಯಗಳನ್ನೂ ಜ್ಞಾನಿಯಾದವನು
ಮಾಡಲಾರನೆಂದು ಶ್ರೀತಂಕರಾಜಾರ್ಯಮೊದಲಾದವರುಪ್ರತಿಪಾದಿಸಿ, ಇದರ
ಸಮರ್ಶನೆಗಾಗಿ
ಸರ್ವಕರ್ಮಾಣಿ ಮನಸಾ ಸಂನೃಸ್ಯಾಸ್ತೆ ಸುಖಂ ವತೀ।
ನ ಕರ್ತೃತ್ವಂ ನ ಕರ್ಮಾಣಿ |
ನೈವ ಕುರ್ವನ್ ನಕಾರಯಾನ್ |
ಶಾರೀರಂ ಕೇವಲಂ ಕರ್ಮ ।
ಮುಂತಾದ ಶ್ಲೋಕಗಳನ್ನು ಉದಾಹರಿಸುತ್ತಾರೆ. ಈ ವಾಕ್ಯಗಳನ್ನು
ಪರಾಮರ್ಶಿಸುವಾಗಲೇ ಇವರು ಹೇಳುವ ಕರ್ಮಸಂನ್ಯಾಸವು ಗೀತೆಗೆ
ಸಮ್ಮತವಲ್ಲವೆಂದು ಸ್ಪಷ್ಟವಾಗುವುದು. ಸರ್ವ ಕರ್ಮಗಳ ಕಾಯಿಕ ತ್ಯಾಗವನ್ನು
ಹೇಳಿರದೆಮಾನಸಿಕತ್ಯಾಗವನ್ನಷ್ಟೇ ಇಲ್ಲಿವಿಧಾನಮಾಡಲಾಗಿದೆ. "ಸರ್ವಕರ್ಮಾಣಿ
ಮನಸಾ ನಂ್ಕಸ್ಯ' ಈ ವಾಕ್ಯದಲ್ಲಿ ಮಾನಸಿಕವಾಗಿ ಯಾವ ಫಲಾಭಿಲಾಷೆಯನ್ನೂ
ಮಾಡಲಾಗದು ಮತ್ತು ತಾನು ಕರ್ತಾ ಎಂಬ ಸ್ವಾತಂತ್ರ್ಯದ ಅಭಿಮಾನವೂ
ಮನಸ್ಸಿನಲ್ಲಿರಬಾರದು ಎಂಬ ಆಶಯವೇ ವ್ಯಕ್ತವಾಗುತ್ತದೆ. ""ಮನಸಾ'' ಎಂಬ
ಪದವು ಇಲ್ಲಿ ಅರ್ಥಪೂರ್ಣವಾಗಿದೆ.
ಪಶ್ಯನ್ ಶೃಣ್ವನ್ ಸ್ಪೃಶನ್ ಜಿಪ್ರನ್
ಅಶ್ನನ್ ಗಚ್ಛನ್ ಸ್ವಪನ್ ಶ್ವಸನ್ ।
ಪ್ರಲಪನ್ ವಿಸೃಜನ್ ಗೃಷ್ಣನ್
ಉನ್ಫಿಷನ್ ನಿಮಿಷನ್ನಪಿ
ಎಂದು ಜ್ಞಾನಿಗೆ ಸಕಲ ವ್ಯವಹಾರಗಳನ್ನು ನಿರೂಪಿಸಿ ಜ್ಞಾನಿಯು
ಬ್ರಹ್ಮಾರ್ಪಣಬುದ್ಧಿಯಿಂದ ಪರಮಾತ್ಮನ ಸ್ವತಂತ್ರ ಕ್ರಿಯಾಶಕ್ತಿಯ ನಿರಂತರ
ಅನುಸಂಧಾನದ ಜೊತೆಗೆ ಅನಾಸಕ್ತಿಯಿಂದ ಈ ಎಲ್ಲ ವ್ಯವಹಾರಗಳನ್ನೂ
ನಿರ್ವಹಿಸುವನೆಂದು ಹೇಳಿರುವುದರಿಂದ ಕಾಯಿಕವಾಗಿ ಕರ್ಮಗಳ
ವರಿತ್ಯಾಗವನ್ನು ಇಲ್ಲಿ ಪ್ರತಿಪಾದಿಸಿಲ್ಲವೆಂದು ಸುಸ್ಪಷ್ಟವಾಗುವುದು. ಅಹಂಕಾರ
ಮತ್ತು ಫಲಾಶೆಗಳ ಪರಿವರ್ಜನೆಯೇ ಕರ್ಮದ ಮಾನಸಿಕ ತ್ಯಾಗವೆನಿಸಿದೆ.
ಕಾಮ್ಯಕರ್ಮಗಳ ವರ್ಜನವೇ ಸಂನ್ಯಾಸವೆಂದೂ ಸರ್ವಲೌಕಿಕ ಫಲಗಳನ್ನು
ಬಿಡುವುದೇತ್ಯಾಗವೆಂದೂ ಹದಿನೆಂಟನೆಯ ಅಧ್ಯಾಯದಲ್ಲಿ ವರ್ಣಿಸಲಾಗಿದೆ.
ಪ್ರಪಂಚವು ಕಾಲ್ಪನಿಕವಾಗಿದ್ದು ಜ್ಞಾನಿಯಾದವನಿಗೆ ಈ ಜಗತ್ತು ಕಾಣುವುದೇ
ಇಲ್ಲವಾದರೆತನ್ನ ರಕ್ಷಣೆಗಾಗಿ ಉಪಯುಕ್ತವಾದ ಕಾರ್ಯಗಳನ್ನಾದರೂ ಅವನು
ಹೇಗೆ ಮಾಡಬಲ್ಲನು? ಶರೀರ ಹಾಗೂ ಇತರ ಆಹಾರಾದಿ ಪದಾರ್ಥಗಳೂ
ಜಗತ್ತಿನ ಜೊತೆಗೆನಿವೃತ್ತಿ ಹೊಂದಿರುವುದರಿಂದ ಅವನು ಯಾವಕ್ರಿಯೆಯನ್ನೂ
ಮಾಡಲಾರನ್ಟೆ ಹೀಗಿರುವಾಗ ನಿತ್ಯಜೀವನೋಪಯುಕ್ತಕಾರ್ಯಗಳ ಮಟ್ಟಿಗೆ
ಅವನಿಗೆ ಅವಕಾಶವನ್ನು ಸಲ್ಲಿಸಿರುವುದು ಅತ್ಯಂತ ಅರ್ಥಶೂನ್ಯವಾಗಿದೆ.
ರೋಕಾನುಗ್ರಹಕಾರಕವೂ ಆತ್ಮೋನ್ನತಿಪೋಷಕವೂ ಆದ ವಿಸ್ತಾರವಾದ ಶ್ರೇಷ್ಠ
ಕರ್ತವ್ಯಗಳನ್ನೆಲ್ಲ ದೂರಸರಿಸಿ ಉದರ ಪೋಷಣೆಗೆ ಅವಶ್ಯವೆನಿಸಿದ ಕಾರ್ಯಗಳ
ಮಟ್ಟಿಗೆ ಜ್ಞಾನಿಯ ಕರ್ತವ್ಯವನ್ನು ಮೊಟಕುಗೊಳಿಸುವುದರಿಂದ ಜ್ಞಾನಿಯ
ಮಟ್ಟವನ್ನೇ ಕೆಳಗಿಳಿಸಿದಂತಾಗುವುದು. ಬ್ರಹ್ಮಜ್ಞಾನಿಯಾದ ಉದಾರ, ವಿಶಾಲ
ಮನಸ್ಸಿನ ಮಹಾಪುರುಷನು ಈ ಜಗತ್ತಿನಲ್ಲಿ ಶರೀರಹಾಗೂ ಅದಕ್ಕೆ ಸಂಬಂಧಿಸಿದ
ವಸ್ತುಗಳನ್ನು ಮಾತ್ರ ಕಾಣುವನು. ಉಳಿದ ಪ್ರವಂಚವೆಲ್ಲ ಅವನಿಗೆ
ಶೂನ್ಯವೆನ್ನುವುದು ಅರ್ಥರಹಿತವಾದ ವಿಚಾರವೆನಿಸುವುದು. ಜಗತ್ತು
ಮಾಯಿಕವಾದುದರಿಂದ ಬ್ರಹ್ಮಜ್ಞಾನಿಗೆ ಇದು. ಗೋಚರವಾಗುವುದಿಲ್ಲ
ವೆನ್ನುವುದರಿಂದ ಆಧ್ಯಾತ್ಮಿಕ ಪ್ರಪಂಚ ಹಾಗೂ ಜಗತ್ತಿನ ಸಂಬಂಧವನ್ನೇ
ಕಡಿದುಹಾಕಿದಂತೆ. ಬ್ರಹ್ಮ ದರ್ಶನವನ್ನು ಹೊಂದಿದ ಮಹಾನುಭಾವನಿಂದಲೇ
ಲೋಕದ ಜನರು ಪರಮಾತ್ಮನ ವಿಚಾರವನ್ನರಿಯಬೇಕು. ಬ್ರಹ್ಮಜ್ಞಾನಿಯಾದ
ಜೀವನ್ಮುಕ್ರನಿಗೆ ಈ ಜಗತ್ತೇಕಾಣದಾದರೆ ಭಗವಂತನ ಸಂದೇಶವನ್ನು ಲೋಕೆ
ನೀಡುವವರು ಬೇರೆ ಯಾರು ? ಪರಮಾತ್ಮನನ್ನೂ ಅಜ್ಞಾನಿ ಜನತೆಯನ್ನೂ
ಜೋಡಿಸುವ ಸೇತುವೆಯೇ ಬ್ರಹ್ಮಜ್ಞಾನಿಯಾಗಿದ್ದು ಅವನ ಲೋಕದರ್ಶನ
ವನ್ನೇ ಅಲ್ಲಗಳೆದರೆ ಯಷಿಗಳ ಸಾಕ್ಷಾತ್ಕಾರದ ಪ್ರತಿಧ್ವನಿಗಳೂ ಅವರ ಅನುಭವದ
ಉದ್ಗಾರಗಳೂ ಎನಿಸಿದ ಈಗ ದೊರೆಯುವ ಶಾಸ್ತ್ರೀಯ ಉಪದೇಶಗಳೆಲ್ಲ
ಅಜ್ಞಾನಿಗಳಾದ ಸಾಧಕರ, ಅನುಭವದ ಿನ್ನೆಲೆಯಿಲ್ಲದ, ಅಪ್ರಗಲ್ಪ
ವಿಚಾರಗಳಿನಿಸುವವು. ಜ್ಞಾನಿಗಳೂ ಅಜ್ಞಾನಿಗಳೂ ಎಲ್ಲರೂ ಈ ಲೋಕದಲ್ಲಿ
ಸ್ವಕರ್ತವ್ಯವನ್ನು ಮಾಡಲೇಬೇಕೆಂದು ಬೋಧಿಸುವ ಗೀತೆಗೆ ಈ ವಾದವು
ಸರ್ವಥಾಸಮೃತವಲ್ಲ
ಬ್ರಹ್ಮಣ್ಯಾಧಾಯ ಕರ್ಮಾಣಿ
ಸಂಗಂ ತ್ಯಕ್ತ್ವಾ ಕರೋತಿ ಯಃ |
ಎಂದು ಗೀತೆಯಲ್ಲಿ ನಿರೂಪಿಸಿದಂತೆ ಅಸಂಗಮತ್ತು ಬ್ರಹ್ಮಾರ್ಪಣ ಬುದ್ಧಿಯಿಂದ
ಸ್ವಕರ್ತವ್ಯಾಚರಣೆ ಹಾಗೂ ಲೋಕವ್ಯವಹಾರ ಇವೆರಡೂ ಬ್ರಹ್ಮಜ್ಞಾನಿಗಳಲ್ಲೂ
ಇವೆ ಎಂಬುದನ್ನು ಅರಿತುಕೊಂಡು ಅವರು ತೋರಿಸಿದ ಹಾದಿಯಲ್ಲಿ ಅವರು
ನಡೆಯುವರೀತಿಯಲ್ಲಿ ಹೆಜ್ಜೆ ಇಡಲು ನಾವು ಪ್ರಯತ್ನಿಸಬೇಕು.
Bannanje Govindacharya (1936–2020)Bhagavad Gita Pravachana
ಸರ್ವ ಕರ್ಮಾಣಿ ಮನಸಾ ಸಂನ್ಯಸ್ಯ ಆಸ್ತೇ ಸುಖಮ್ ವಶೀ |
ನವ ದ್ವಾರೇ ಪುರೇ ದೇಹೀ ನ ಏವ ಕುರ್ವನ್ ನ ಕಾರಯನ್-ಮಾನಸಿಕವಾಗಿ ಎಲ್ಲಾ ಕರ್ಮಗಳ ನಂಟು ತೊರೆದು
ಇಂದ್ರಿಯಗಳನ್ನು ಗೆದ್ದವನು ಹಾಯಾಗಿರುತ್ತಾನೆ-ಒಂಭತ್ತು ಬಾಗಿಲ ಈ ಪುರದಲ್ಲಿ; ಏನನ್ನೂ ಮಾಡದೆ, ಏನನ್ನೂ
ಮಾಡಿಸದೆ.
ಎಲ್ಲಾ ಕರ್ಮವನ್ನು ಮಾನಸಿಕವಾಗಿ ಸಂನ್ಯಾಸ ಮಾಡು ಎನ್ನುತ್ತಾನೆ ಕೃಷ್ಣ. ಇದು ಬಹಳ ಮುಖ್ಯವಾದ ಮಾತು.
ಇಲ್ಲಿ 'ಕರ್ಮವನ್ನು ತ್ಯಾಗ ಮಾಡು' ಎಂದು ಕೃಷ್ಣ ಹೇಳುತ್ತಿಲ್ಲ, ಕೇವಲ ಮನಸ್ಸಿನಲ್ಲಿ ಬಿಡು ಎನ್ನುತ್ತಿದ್ದಾನೆ. ಅಂದರೆ
ಕರ್ಮಗಳ ಬಗ್ಗೆ ಮನಸ್ಸಿನಲ್ಲಿರುವ ಫಲದ ಸಂಗ; ಮಾನಸಿಕವಾಗಿ ಸ್ವಾತಂತ್ರ್ಯ ಎನ್ನುವ ಭ್ರಮೆಯನ್ನು ಬಿಡುವುದು.
'ನನಗೆ', 'ಸನಗೋಸ್ಕರ' ಎನ್ನುವ ವಿಚಾರವನ್ನು ಮಾನಸಿಕವಾಗಿ ಬಿಡುವುದು. 'ಜೀವನಿಗೆ ಯಾವ ಕಾಲದಲ್ಲೂ
ಯಾವ ಕರ್ತ್ಯತ್ವದಲ್ಲೂ ಸ್ವಾತಂತ್ರ್ಯವಿಲ್ಲ. ಇದನ್ನು ಮಧ್ವಾಚಾರ್ಯರು ತಮ್ಮ ಎಲ್ಲಾ ಗ್ರಂಥಗಳಲ್ಲಿ ಸಾರಿ-ಸಾರಿ
ಹೇಳಿದ್ದಾರೆ. ಇದನ್ನು ಮಾನಸಿಕವಾಗಿ ಅಳವಡಿಸಿಕೊಳ್ಳುವುದೇ ನಿಜವಾದ ಕರ್ಮಸಂನ್ಯಾಸ.
ಭಗವಂತ ಈ ಒಂಭತ್ತು ಬಾಗಿಲಿನ ಪುರದೊಳಗೆ(ಪೂರ್ಣತೆಯನ್ನು ಪಡೆದ ಮನುಷ್ಯ ಶರೀರ) ನಮ್ಮನ್ನು ಕೂರಿಸಿ
ನಮ್ಮಿಂದ ಕರ್ಮ ಮಾಡಿಸುತ್ತಿದ್ದಾನೆ. 'ನನ್ನನ್ನು ಈ ಪುರದಲ್ಲಿಟ್ಟು, ನನ್ನೊಂದಿಗೆ ನನ್ನ ಆತ್ಮೀಯ ಗೆಳೆಯನಾಗಿ
ನಿಂತು, ನನ್ನ ಉದ್ದಾರಕ್ಕಾಗಿ ಆ ಭಗವಂತ ಕರ್ಮ ಮಾಡಿಸುತ್ತಿದ್ದಾನೆ' ಎನ್ನುವ ಎಚ್ಚರ ಕರ್ಮಯೋಗ.
ಕರ್ಮಯೋಗದ ಬಗ್ಗೆ ಕೃಷ್ಣ ವಿವರಿಸಿದ ಅಪೂರ್ವವಾದ ಜ್ಞಾನಯೋಗವನ್ನು ನೋಡಿದೆವು. ಹೀಗೆ ಕರ್ಮ
ಮಾಡುವುದರಿಂದ ಅದು ಭಗವಂತನ ಆರಾಧನೆಯಾಗುತ್ತದೆ ಹಾಗೂ ಜ್ಞಾನಮಾರ್ಗದ ಒಂದು ಅಂಗವಾಗುತ್ತದೆ.
ಜ್ಞಾನದಿಂದ ಕರ್ಮ ಮಾಡಿದಾಗ ಯಾವ ಕ್ಷುದ್ರ ಕೆಲಸ ಕೂಡಾ ವ್ಯರ್ಥವಾಗುವುದಿಲ್ಲ, ಅದು ಯೋಗವಾಗುತ್ತದೆ.
ಇಲ್ಲಿ 'ಏನನ್ನೂ ಮಾಡದೆ, ಏನನ್ನೂ ಮಾಡಿಸದೆ' ಎಂದಿದ್ದಾನೆ ಕೃಷ್ಣ. ಸಾಮಾನ್ಯವಾಗಿ ನಾವು ಒಂದು ಕೆಲಸ
ಮಾಡಿದರೆ 'ಅದನ್ನು ನಾನು ಮಾಡಿದೆ', 'ನಾನು ಹೇಳಿದ್ದರಿಂದ ಆ ಕಾರ್ಯ ಆಯಿತು' ಎಂದು ಎಲ್ಲಾ ಕಡೆ
ಹೇಳಿಕೊಂಡು ಬರುತ್ತೇವೆ. ಹಾಗೆ ನಾಲ್ಕು ಜನ ಹೇಳಲಿ ಎಂದು ಬಯಸುತ್ತೇವೆ. ಆದರೆ ಜ್ಞಾನಿಗಳು ಹಾಗೆ
ಹೇಳುವುದಿಲ್ಲ. 'ಏನೋ ದೇವರು ನನ್ನ ಕೈಯಲ್ಲಿ ಮಾಡಿಸಿದ' , 'ನನ್ನೊಳಗಿದ್ದು ಆ ದೇವರು ಮಾಡಿಸಿದ',
'ಭಗವಂತ ಅವರಿಗೆ ಪ್ರೇರಣೆ ಮಾಡಿದ' ಇತ್ಯಾದಿಯಾಗಿ ಮಾತನಾಡುತ್ತಾರೆ. ಇದಕ್ಕೆ ಕಾರಣ ಜ್ಞಾನಿಗಳು ಎಂದೂ
'ನಾನು ಸ್ವತಂತ್ರ ಕರ್ತಾ' ಎನ್ನುವ ಪ್ರಜ್ಞೆಯನ್ನು ಬೆಳೆಸಿಕೊಂಡಿರುವುದಿಲ್ಲ. ಇದು ಜ್ಞಾನಿಗಳ ಮತ್ತು ಅಜ್ಞಾನಿಗಳ
ಕರ್ಮದ ಅನುಸಂಧಾನದಲ್ಲಿರುವ ವ್ಯತ್ಯಾಸ.
ಈ ಎಲ್ಲಾ ವಿಚಾರವನ್ನು ತಿಳಿದ ಮೇಲೆ ನಮಗೆ ಒಂದು ಪ್ರಶ್ನೆ ಮೂಡುತ್ತದೆ. ಎಲ್ಲವನ್ನೂ ದೇವರೇ
ಮಾಡಿಸುವುದಾದರೆ ಆತ ನಮ್ಮ ಕೈಯಲ್ಲಿ ಒಳ್ಳೆಯ ಕೆಲಸವನ್ನೇ ಮಾಡಿಸಲಿ, ಕೆಟ್ಟ ಕೆಲಸ ಏಕೆ ಮಾಡಿಸುತ್ತಾನೆ?
ಕೆಟ್ಟಕೆಲಸ ಮಾಡಿಸುವವ ಅವನೇ ಆದರೆ ನಮಗೇಕೆ ಅದರ ಶಿಕ್ಷೆ? ನಮಗೇಕೆ ದುಃಖ? ನಾನು ಬಯಸಿ
ಬುದ್ಧಿಪೂರ್ವಕವಾಗಿ ಮಾಡಿದಾಗ ನಾನು ಏಕೆ ಕರ್ತಾ ಅಲ್ಲ? ಅದರಿಂದ ಏಕೆ ನನಗೆ ಫಲ ಬರುವುದಿಲ್ಲ? ಎಲ್ಲಾ
ದೇವರೇ ಮಾಡಿಸುವುದಾದರೆ ನನಗೆ ಫಲ ಹೇಗೆ ಬರುತ್ತದೆ? ಇತ್ಯಾದಿ ಪ್ರಶ್ನೆ. ಇದು ಪ್ರತಿಯೊಬ್ಬರನ್ನೂ ಕಾಡುವ
ಪ್ರಶ್ನೆ. ಇವು ಕಾಡುವ ಪ್ರಶ್ನೆಗಳೇನೋ ಸರಿ ಆದರೆ ಸರಿಯಾದ ಪ್ರಶ್ನೆಗಳಲ್ಲ. ಶಾಸ್ತ್ರದ ತಿರುಳು ತಿಳಿಯದಾಗ ಈ
ಪ್ರಶ್ನೆಗಳು ಬರುತ್ತವೆ. ಮುಂದಿನ ಶ್ಲೋಕಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಈ ನಮ್ಮ ಪ್ರಶ್ನೆಗೆ ಉತ್ತರ
Bibek Debroy (1955–2024)The Bhagavad Gita
(13)
‘Discarding all action through his mind,17 the person who controls his body,
the city with the nine gates,18 remains in happiness. He doesn’t do anything
himself. Nor does he cause anyone to do anything.’