न कर्तृत्वं न कर्माणि लोकस्य सृजति प्रभुः ।
न कर्मफलसंयोगं स्वभावस्तु प्रवर्तते ॥
na kartṛtvaṃ na karmāṇi lokasya sṛjati prabhuḥ |
na karmaphalasaṃyogaṃ svabhāvastu pravartate ||
Sri Madhvacharya (1238–1317)Bhagavad Gita Tatparya Nirnaya
यथा पितृदत्तं पालकत्वं राजपुत्राणाम्, एवं परमात्मादत्तं क्रियास्वातन्त्र्यलक्षणं कर्तृत्वं।
क्रियानिष्पन्नधर्मादिरूपकर्मणि स्वातन्त्र्यम् च जीवानामप्यस्तीत्याशङ्कां परिहरति। न
कर्तृत्वमित्यादिना। क्रियायामदृष्टोत्पादने फले च स्वातन्त्र्यम् लोकस्य न सृजतीश्वर इत्यर्थः।
अन्यथा लोकस्येति विशेषणं व्यर्थम्। जनपदे निवसतां तद्वित्तभोजिनामप्यादिपत्यादानान्न दत्ता
जनपदा राज्ञा स्वपुत्राणामितिवत् कर्मफलादिसंयोगिनामपि तत्स्वातन्त्र्यादानान्न सृजतीति युज्यते।
स्वयमेव भवति भावयति चेति स्वभावो भगवान्। स्वभावत्वात् स्वयमेव कर्तृत्वादिषु प्रवर्तते।
‘स्वातन्त्र्याद्भगवान् विष्णुः स्वभाव इति कीर्तितः।
तत्स्वातन्त्र्यं कदाऽप्येष नान्यस्य सृजति क्वचित्।
स्वातन्त्र्यादेव पापादिसम्बन्धः कुर्वतोऽपि न।
अज्ञानावृतबुद्धित्वादीदृशं तं न जानते’
इति महावाराहे।
‘अहं सर्वस्य प्रभवः। ‘तपाम्यहमहं वर्षं निगृह्णामि’।
‘पराऽस्य शक्तिर्विविधैव श्रूयते स्वाभाविकी ज्ञानबलक्रिया च’
‘न ऋते त्वत्क्रियते किञ्चनारे’। ‘देवस्यैष स्वभावोऽयम्।
‘लोकवत् तु लीलाकैवल्यम्’ - इत्यादेर्नास्यास्वाभाविकं कर्तृत्वमकर्तृत्वम् वा।
विपरीतप्रमाणाबावाच्च।
अनिर्वाच्यनिरासादेव च निरस्तोऽयं पक्षः। न च सर्वविशेषराहित्यवादिनां शून्यवादात् कश्चिद्विशेषः।
न हि सर्वविशेषरहितमित्युक्ते तदस्तीति सिद्ध्यति। वाच्यत्वलक्ष्यत्वास्तित्वादीनामपि विशेषत्वात्।
अन्यथाऽस्ति ब्रह्मेत्यादीनां शब्दानामपि पर्यायत्वादयो दोषाः। व्यावर्तविशेषश्च
व्यावृत्तविशेषनिबन्धन एव। अन्यथा वैयर्थ्यमेवस्यात्। न च सर्वशब्दवाच्यस्य लक्ष्यत्वम्। न च
सर्वप्रमाणागोचरमस्तीत्यत्र किञ्चिन्मानम्। नास्तित्वं तु सप्तमरसादिवददर्शनात् सिद्ध्यति।
स्वप्रकाशत्वं च नामानं सिद्ध्यति। स्वयंप्राकाशत्वं च ततोऽतिरिक्तं चेद्विशेषाङ्गीकारः। न चेत् तदेव
प्रमाणगोचरम्। तत्प्रमाणाभावे परप्रकाशत्वमात्रनिरासे स्वप्रकाशत्वे प्रमाणाभावादप्रकाशत्वमेव
स्यात्। अर्थतः सिद्धिरित्यर्थापत्तितः सिद्धिस्तत्प्रमाणतः सिद्धिर्वा। उभयथाऽपि प्रमेयत्वमेव स्यात्।
स्वप्रकाशशब्देन स्वमितत्वानङ्गीकारात् परिमिततत्वानङ्गीकाराच्चासिद्धिरेव। प्रकाश इत्युक्तेऽपि
स्वमन्यं वा किञ्चित् प्रकाश्यं विना न दृष्ट एव भोजनादिवत्। कर्तृकर्मविरोधश्चानुभवविरुद्ध। ज्ञानं च
ज्ञेयं ज्ञातारं च विना न दृष्टम्। अतः शून्यवादान्न कश्चिद्विशेषः। अतोऽनन्तदोषदुष्टत्वादुपरम्यते।
‘हरिः स्वभावतः कर्ता सर्वमन्यत् तदीरितम्।
अतः स कर्तृता तस्य न कदाचिद्विनश्यति’ इति पैङ्गिश्रुतिः॥04॥
Swami Sivananda (1887–1963)Bhagavad Gita
14. Neither agency nor actions does the Lord create for the world, nor union with the fruits
of actions; it is Nature that acts.
Sri Vishwesha Tirtharu (1931–2019)Gitasaroddhara
5.8–5.14 · ಜ್ಞಾನಿಯು ಲೋಕವಿಮುಖನಲ್ಲ
ಜ್ಞಾನಿಯು ಲೋಕವಿಮುಖನಲ್ಲ
ಸರ್ವಕರ್ಮಾಣಿ ಮನಸಾ ಸಂನ್ಕಸ್ಯಾಸ್ತೇ ಸುಖಂ ವಶೀ |
ಜ್ಞಾನಯೋಗಿಯಲ್ಲಿ ಕರ್ಮದ ಸಂಬಂಧವೇಇರುವುದಿಲ್ಲ ಎಂದು ಕೆಲವರ
ಅಭಿವ್ರಾಯವಿದೆ. ಕರ್ಮಯೋಗವು ಸಾಧಕನ ಪೂರ್ವಾವಸ್ಥೆಯಾಗಿದ್ದರೆ
ಜ್ಞಾನಯೋಗವು ಅವನ ಕೊನೆಯ ಹಂತವಾಗಿದೆ. ಏಕಕಾಲದಲ್ಲಿ ಇವೆರಡೂ
ನಾಥಕನ್ಲಿ ಮೇಶೈಸರ ಲಾರವು . ಈ ಕ್ರಿಯೆ, ಕ್ರಿಯ ಸಾಫಲಸಂಬಂಧ ಹ ಹಾಗೂ
ಇವುಗಳಕಾರಣಗಳಿನಿಸಿದ ಈ ಪ್ರಪಂಚಮಾಯಾಮಯವೆನಿಸಿದ್ದುನಿದ್ದೆಯಿಂದ
ಎಚ್ಚತ್ತವನಿಗೆ ಸ್ವಷ್ಠರಾಜ್ಯದ ವಿಭ್ರಮ, ವಿಲಾಸಗಳೆಲ್ಲ ಕ್ಷಣ ಮಾತ್ರದಲ್ಲಿ
ಅದೃಶ್ವವಾಗುವಂತೆ ಜ್ಞಾನವನ್ನು ಪಡೆದವನ ಪಾಲಿಗೆ ಈ ಪ್ರಪಂಚವೆಲ್ಲ ಬರಿ ಕನಸೇ
ಆಗಿರುವುದು. ಹಗ್ಗವನ್ನು ಸರಿಯಾಗಿನೋಡಿದವನು ಅಲ್ಲಿತಾನು ಕಲ್ಪಿಸಿಕೊಂಡ
ಹಾವನ್ನು ಮತ್ತೆಕಾಣಲಾರನಸ್ಟೆ! ಅದರಂತೆ ಆತ್ಮಜ್ಞಾನವನ್ನು ಪಡೆದ ಮೇಲೆ ಅದರ
ಅಧಿಷ್ಠುನದಲ್ಲಿಯೇಕಲ್ಪನೆಗೊಂಡಿರುವಮಾಯಿಕವಾದ ಜಗತ್ತಿನ ದರ್ಶನವು
ಜ್ಞಾನಿಗೆ ಆಗುವುದಿಲ್ಲ. ಇಂತಹ ದೆಶೆಯಲ್ಲಿ ಅವನು ಕರ್ಮವನ್ನು ಹೇಗೆ ಮಾಡಿ
ಯಾನು? ಆದುದರಿಂದ ಯಜ್ಞರೂಪವಾದ ಸತ್ಯರ್ಮದ ಅನುಷ್ಠಾನವು
ಅಜ್ಞಾನದಲ್ಲಿ ತೊಳಲಾಡುವ ವ್ಯಕ್ತಿಗಳಿಗೆ ಮಾತ್ರ ಮೀಸಲಾದುದು.
ಬ್ರಹ್ಮಜ್ಞಾನವನ್ನು ಪಡೆದವ್ಯಕ್ತಿಯು, ಜ್ಞಾನಹಾಗೂ ಕರ್ಮ ಸಂನ್ಯಾಸದಲ್ಲಿ ಮಾತ್ರ
ಅಧಿಕೃತನು. ಅವನು ತನ್ನ ಶರೀರ ರಕ್ಷಣೆಗೆ ಮಾತ್ರ ಅವಶ್ಯಕವೆನಿಸುವ
ಕಾರ್ಯಗಳನ್ನು ನಿರ್ಲಿಪ್ತತೆಯಿಂದ ನಿರ್ವಹಿಸುವನು. ಇತರ ನಿತ್ಯ-ನೈಮಿತ್ತಿಕ
ಧಾರ್ಮಿಕ-ಸಾಮಾಜಿಕವೆನಿಸುವಯಾವಕಾರ್ಯಗಳನ್ನೂ ಜ್ಞಾನಿಯಾದವನು
ಮಾಡಲಾರನೆಂದು ಶ್ರೀತಂಕರಾಜಾರ್ಯಮೊದಲಾದವರುಪ್ರತಿಪಾದಿಸಿ, ಇದರ
ಸಮರ್ಶನೆಗಾಗಿ
ಸರ್ವಕರ್ಮಾಣಿ ಮನಸಾ ಸಂನೃಸ್ಯಾಸ್ತೆ ಸುಖಂ ವತೀ।
ನ ಕರ್ತೃತ್ವಂ ನ ಕರ್ಮಾಣಿ |
ನೈವ ಕುರ್ವನ್ ನಕಾರಯಾನ್ |
ಶಾರೀರಂ ಕೇವಲಂ ಕರ್ಮ ।
ಮುಂತಾದ ಶ್ಲೋಕಗಳನ್ನು ಉದಾಹರಿಸುತ್ತಾರೆ. ಈ ವಾಕ್ಯಗಳನ್ನು
ಪರಾಮರ್ಶಿಸುವಾಗಲೇ ಇವರು ಹೇಳುವ ಕರ್ಮಸಂನ್ಯಾಸವು ಗೀತೆಗೆ
ಸಮ್ಮತವಲ್ಲವೆಂದು ಸ್ಪಷ್ಟವಾಗುವುದು. ಸರ್ವ ಕರ್ಮಗಳ ಕಾಯಿಕ ತ್ಯಾಗವನ್ನು
ಹೇಳಿರದೆಮಾನಸಿಕತ್ಯಾಗವನ್ನಷ್ಟೇ ಇಲ್ಲಿವಿಧಾನಮಾಡಲಾಗಿದೆ. "ಸರ್ವಕರ್ಮಾಣಿ
ಮನಸಾ ನಂ್ಕಸ್ಯ' ಈ ವಾಕ್ಯದಲ್ಲಿ ಮಾನಸಿಕವಾಗಿ ಯಾವ ಫಲಾಭಿಲಾಷೆಯನ್ನೂ
ಮಾಡಲಾಗದು ಮತ್ತು ತಾನು ಕರ್ತಾ ಎಂಬ ಸ್ವಾತಂತ್ರ್ಯದ ಅಭಿಮಾನವೂ
ಮನಸ್ಸಿನಲ್ಲಿರಬಾರದು ಎಂಬ ಆಶಯವೇ ವ್ಯಕ್ತವಾಗುತ್ತದೆ. ""ಮನಸಾ'' ಎಂಬ
ಪದವು ಇಲ್ಲಿ ಅರ್ಥಪೂರ್ಣವಾಗಿದೆ.
ಪಶ್ಯನ್ ಶೃಣ್ವನ್ ಸ್ಪೃಶನ್ ಜಿಪ್ರನ್
ಅಶ್ನನ್ ಗಚ್ಛನ್ ಸ್ವಪನ್ ಶ್ವಸನ್ ।
ಪ್ರಲಪನ್ ವಿಸೃಜನ್ ಗೃಷ್ಣನ್
ಉನ್ಫಿಷನ್ ನಿಮಿಷನ್ನಪಿ
ಎಂದು ಜ್ಞಾನಿಗೆ ಸಕಲ ವ್ಯವಹಾರಗಳನ್ನು ನಿರೂಪಿಸಿ ಜ್ಞಾನಿಯು
ಬ್ರಹ್ಮಾರ್ಪಣಬುದ್ಧಿಯಿಂದ ಪರಮಾತ್ಮನ ಸ್ವತಂತ್ರ ಕ್ರಿಯಾಶಕ್ತಿಯ ನಿರಂತರ
ಅನುಸಂಧಾನದ ಜೊತೆಗೆ ಅನಾಸಕ್ತಿಯಿಂದ ಈ ಎಲ್ಲ ವ್ಯವಹಾರಗಳನ್ನೂ
ನಿರ್ವಹಿಸುವನೆಂದು ಹೇಳಿರುವುದರಿಂದ ಕಾಯಿಕವಾಗಿ ಕರ್ಮಗಳ
ವರಿತ್ಯಾಗವನ್ನು ಇಲ್ಲಿ ಪ್ರತಿಪಾದಿಸಿಲ್ಲವೆಂದು ಸುಸ್ಪಷ್ಟವಾಗುವುದು. ಅಹಂಕಾರ
ಮತ್ತು ಫಲಾಶೆಗಳ ಪರಿವರ್ಜನೆಯೇ ಕರ್ಮದ ಮಾನಸಿಕ ತ್ಯಾಗವೆನಿಸಿದೆ.
ಕಾಮ್ಯಕರ್ಮಗಳ ವರ್ಜನವೇ ಸಂನ್ಯಾಸವೆಂದೂ ಸರ್ವಲೌಕಿಕ ಫಲಗಳನ್ನು
ಬಿಡುವುದೇತ್ಯಾಗವೆಂದೂ ಹದಿನೆಂಟನೆಯ ಅಧ್ಯಾಯದಲ್ಲಿ ವರ್ಣಿಸಲಾಗಿದೆ.
ಪ್ರಪಂಚವು ಕಾಲ್ಪನಿಕವಾಗಿದ್ದು ಜ್ಞಾನಿಯಾದವನಿಗೆ ಈ ಜಗತ್ತು ಕಾಣುವುದೇ
ಇಲ್ಲವಾದರೆತನ್ನ ರಕ್ಷಣೆಗಾಗಿ ಉಪಯುಕ್ತವಾದ ಕಾರ್ಯಗಳನ್ನಾದರೂ ಅವನು
ಹೇಗೆ ಮಾಡಬಲ್ಲನು? ಶರೀರ ಹಾಗೂ ಇತರ ಆಹಾರಾದಿ ಪದಾರ್ಥಗಳೂ
ಜಗತ್ತಿನ ಜೊತೆಗೆನಿವೃತ್ತಿ ಹೊಂದಿರುವುದರಿಂದ ಅವನು ಯಾವಕ್ರಿಯೆಯನ್ನೂ
ಮಾಡಲಾರನ್ಟೆ ಹೀಗಿರುವಾಗ ನಿತ್ಯಜೀವನೋಪಯುಕ್ತಕಾರ್ಯಗಳ ಮಟ್ಟಿಗೆ
ಅವನಿಗೆ ಅವಕಾಶವನ್ನು ಸಲ್ಲಿಸಿರುವುದು ಅತ್ಯಂತ ಅರ್ಥಶೂನ್ಯವಾಗಿದೆ.
ರೋಕಾನುಗ್ರಹಕಾರಕವೂ ಆತ್ಮೋನ್ನತಿಪೋಷಕವೂ ಆದ ವಿಸ್ತಾರವಾದ ಶ್ರೇಷ್ಠ
ಕರ್ತವ್ಯಗಳನ್ನೆಲ್ಲ ದೂರಸರಿಸಿ ಉದರ ಪೋಷಣೆಗೆ ಅವಶ್ಯವೆನಿಸಿದ ಕಾರ್ಯಗಳ
ಮಟ್ಟಿಗೆ ಜ್ಞಾನಿಯ ಕರ್ತವ್ಯವನ್ನು ಮೊಟಕುಗೊಳಿಸುವುದರಿಂದ ಜ್ಞಾನಿಯ
ಮಟ್ಟವನ್ನೇ ಕೆಳಗಿಳಿಸಿದಂತಾಗುವುದು. ಬ್ರಹ್ಮಜ್ಞಾನಿಯಾದ ಉದಾರ, ವಿಶಾಲ
ಮನಸ್ಸಿನ ಮಹಾಪುರುಷನು ಈ ಜಗತ್ತಿನಲ್ಲಿ ಶರೀರಹಾಗೂ ಅದಕ್ಕೆ ಸಂಬಂಧಿಸಿದ
ವಸ್ತುಗಳನ್ನು ಮಾತ್ರ ಕಾಣುವನು. ಉಳಿದ ಪ್ರವಂಚವೆಲ್ಲ ಅವನಿಗೆ
ಶೂನ್ಯವೆನ್ನುವುದು ಅರ್ಥರಹಿತವಾದ ವಿಚಾರವೆನಿಸುವುದು. ಜಗತ್ತು
ಮಾಯಿಕವಾದುದರಿಂದ ಬ್ರಹ್ಮಜ್ಞಾನಿಗೆ ಇದು. ಗೋಚರವಾಗುವುದಿಲ್ಲ
ವೆನ್ನುವುದರಿಂದ ಆಧ್ಯಾತ್ಮಿಕ ಪ್ರಪಂಚ ಹಾಗೂ ಜಗತ್ತಿನ ಸಂಬಂಧವನ್ನೇ
ಕಡಿದುಹಾಕಿದಂತೆ. ಬ್ರಹ್ಮ ದರ್ಶನವನ್ನು ಹೊಂದಿದ ಮಹಾನುಭಾವನಿಂದಲೇ
ಲೋಕದ ಜನರು ಪರಮಾತ್ಮನ ವಿಚಾರವನ್ನರಿಯಬೇಕು. ಬ್ರಹ್ಮಜ್ಞಾನಿಯಾದ
ಜೀವನ್ಮುಕ್ರನಿಗೆ ಈ ಜಗತ್ತೇಕಾಣದಾದರೆ ಭಗವಂತನ ಸಂದೇಶವನ್ನು ಲೋಕೆ
ನೀಡುವವರು ಬೇರೆ ಯಾರು ? ಪರಮಾತ್ಮನನ್ನೂ ಅಜ್ಞಾನಿ ಜನತೆಯನ್ನೂ
ಜೋಡಿಸುವ ಸೇತುವೆಯೇ ಬ್ರಹ್ಮಜ್ಞಾನಿಯಾಗಿದ್ದು ಅವನ ಲೋಕದರ್ಶನ
ವನ್ನೇ ಅಲ್ಲಗಳೆದರೆ ಯಷಿಗಳ ಸಾಕ್ಷಾತ್ಕಾರದ ಪ್ರತಿಧ್ವನಿಗಳೂ ಅವರ ಅನುಭವದ
ಉದ್ಗಾರಗಳೂ ಎನಿಸಿದ ಈಗ ದೊರೆಯುವ ಶಾಸ್ತ್ರೀಯ ಉಪದೇಶಗಳೆಲ್ಲ
ಅಜ್ಞಾನಿಗಳಾದ ಸಾಧಕರ, ಅನುಭವದ ಿನ್ನೆಲೆಯಿಲ್ಲದ, ಅಪ್ರಗಲ್ಪ
ವಿಚಾರಗಳಿನಿಸುವವು. ಜ್ಞಾನಿಗಳೂ ಅಜ್ಞಾನಿಗಳೂ ಎಲ್ಲರೂ ಈ ಲೋಕದಲ್ಲಿ
ಸ್ವಕರ್ತವ್ಯವನ್ನು ಮಾಡಲೇಬೇಕೆಂದು ಬೋಧಿಸುವ ಗೀತೆಗೆ ಈ ವಾದವು
ಸರ್ವಥಾಸಮೃತವಲ್ಲ
ಬ್ರಹ್ಮಣ್ಯಾಧಾಯ ಕರ್ಮಾಣಿ
ಸಂಗಂ ತ್ಯಕ್ತ್ವಾ ಕರೋತಿ ಯಃ |
ಎಂದು ಗೀತೆಯಲ್ಲಿ ನಿರೂಪಿಸಿದಂತೆ ಅಸಂಗಮತ್ತು ಬ್ರಹ್ಮಾರ್ಪಣ ಬುದ್ಧಿಯಿಂದ
ಸ್ವಕರ್ತವ್ಯಾಚರಣೆ ಹಾಗೂ ಲೋಕವ್ಯವಹಾರ ಇವೆರಡೂ ಬ್ರಹ್ಮಜ್ಞಾನಿಗಳಲ್ಲೂ
ಇವೆ ಎಂಬುದನ್ನು ಅರಿತುಕೊಂಡು ಅವರು ತೋರಿಸಿದ ಹಾದಿಯಲ್ಲಿ ಅವರು
ನಡೆಯುವರೀತಿಯಲ್ಲಿ ಹೆಜ್ಜೆ ಇಡಲು ನಾವು ಪ್ರಯತ್ನಿಸಬೇಕು.
5.14–5.18 · ಜ್ಞಾನಿಯ ಸಮದೃಷ್ಟಿ
ಜ್ಞಾನಿಯ ಸಮದೃಷ್ಟಿ
ಪ್ರತಿಯೊಬ್ಬರ ವ್ಯವಹಾರಗಳ ಹಿನ್ನೆಲೆಯಲ್ಲಿಯೂವರಮಾತ್ಮನ ಶಕ್ತಿಯನ್ನು
ಕಾಣುವ ಬ್ರಹ್ಮಜ್ಞಾನಿಗಳು ಪ್ರಪಂಚದ ದರ್ಶನ, ವ್ಯವಹಾರಗಳಲ್ಲಿಯೂ ದಿವ್ಯ
ಆನಂದವನ್ನೇ ಅನುಭವಿಸಬಲ್ಲರು. ಪ್ರತಿಯೊಂದು ವಸ್ತುವಿನಲ್ಲೂ ಪರಮಾತ್ಮನ
ದಿವ್ಯರೂಪದ ದರ್ಶನವನ್ನು ವಡೆಯುತ್ತಿರುವ ಅವರು ಈ ಪ್ರಾವಂಚಿಕ
ಸಂಪರ್ಕದಿಂದ ವಿಚಲಿತರೂ ವಿಕಾರವಶರೂ ಆಗಲಾರರು. ವಿದ್ಯಾವಿನಯ
ಸಂಪನ್ನರಾದ ಸಜ್ಜನರಲ್ಲಿಯೂ ಹಿಂಸಾಜೀವಿಗಳೆನಿಸಿದ ಅನಾಗರಿಕ ಕ್ರೂರ
ಮನುಷ್ಯರಲ್ಲಿಯೂ ಹುದುಗಿದ ಭಗವತ್ತತ್ತ್ವವನ್ನು ಅವರು ಕಾಣಬಲ್ಲರು. ಈ
ಪ್ರಪಂಚದಲ್ಲಿ ಎಷ್ಟೇ ಭೇದ, ವೈಚಿತ್ರ್ಯಗಳಿದ್ದರೂ ಈ ಜಗತ್ತಿನಲ್ಲಿ ಅಂತರ್ಯಾಮಿ
ಎನಿಸಿದ ಜಗತ್ಫಚೋದಕ ಶಕ್ತಿಯಾದ ಪರಮಾತ್ಮನು ಎಲ್ಲ ಕಡೆಗಳಲ್ಲಿಯೂ
ಏಕರೂವವಾಗಿ ನೆಲೆಸಿರುವನು. ಪ್ರವಂಚದಲ್ಲಿ ವ್ಯವಹರಿಸುವಾಗ ಭಗವಂತನ
ಈ ಸಮತೆಯ ದರ್ಶನವಾದವನಿಗೆ ಬಾಹ್ಯ ಪ್ರಪಂಚದ ಏರುಪೇರುಗಳು ಮತ್ತು
ವಿಕೃತಿ, ಸಂಸ್ಕೃತಿಗಳ ದರ್ಶನದಿಂದ ಯಾವುದೇ ಕ್ಟೋಭವಾಗುವುದಿಲ್ಲ. ಎಲ್ಲಿ
ನೋಡಿದರೂ ಭಗವಂತನ ಚಿದಾನಂದಮಯರೂಪ ಮತ್ತು ಅವನ ಅದ್ಭುತ
ಶಕ್ತಿಕ್ರಿಯಾವಿಲಾಸವಿಭ್ರಮಗಳನ್ನು ಕಾಣುವ ಯೋಗಿಯು ಪ್ರಪಂಚದ
ಪ್ರತಿಯೊಂದು ಪದಾರ್ಥದಲ್ಲಿಯೂ ಆನಂದವನ್ನೇ ಅನುಭವಿಸುವನು.
ಶ್ರೀಮಧ್ವಾಚಾಯರು ಸಂನ್ಯಾಸಿಯಾಗಲು ಹೊರಟಾಗ ಎದುರಿಗೆ ಇದ್ದಹೊಲ
ಮರಗಳ ಕಡೆಗೂ ನಮಸ್ಕರಿಸುತ್ತಿದ್ದುದನ್ನು ಕಂಡು ಅಚ್ಚರಿಗೊಂಡ ಅವರ
ಬಂಧುಗಳು ಇದೇನು ನಿನ್ನ ಈ ವಿಚಿತ್ರ ವ್ಯವಹಾರವೆಂದು ಕೇಳಲು, ನನ್ನ
ಪ್ರೀತಿಯ ವಸ್ತುವು ಎಲ್ಲಕಡೆಗಳಲ್ಲಿಯೂ ಗೋಚರವಾಗುತ್ತಿರುವಾಗ ಅದಕ್ಕೆ
ತಲೆಬಾಗದೆ ಹೇಗೆ ಇರಲಿ ಎಂದರಂತೆ. ಹೀಗೆ ಜ್ಞಾನಿಗಳಿಗೆ ಎಲ್ಲಿನೋಡಿದರೂ
ಮಂಗಲಮಯದರ್ಶನ ಹಾಗೂ ನಿತ್ಯಾನಂದದ ಅನುಭವವೇ ದೊರೆಯು
್ರರವುದರಿಂದ ವೈಷಮ್ಯಪೂರಿತವಾದ ರುದ್ರಬೀಭತ್ತವೆನಿಸಿದ ಈಈ ಜಗತ್ತಿಗೆ
ಅವರು ಹೆದರುವುದಿಲ್ಲ.
ಜಗತ್ತಿನ ಎಲ್ಲ ಪದಾರ್ಥಗಳಲ್ಲಿಯೂ ಏಕರೂಪವಾಗಿ ಭಗವಚ್ಛಕ್ತಿ
ಪ್ರವಹಿಸಿಕೊಂಡಿದೆ. ವಿದ್ಯುಚ್ಛಕ್ತಿಯು ಎಲ್ಲ ಕಡೆಗಳಲ್ಲಿಯೂ ಒಂದೇ
ರೀತಿಯಿಂದ ಹರಿಯುತ್ತಿದ್ದರೂ ಬಲ್ಬ್ಗಳಿಗನುಗುಣವಾಗಿ ಹೆಚ್ಚು ಕಡಿಮೆ
ಪ್ರಮಾಣದಲ್ಲಿ ಅದು ಅಭಿವ್ಯಕ್ತವಾಗುವಂತೆ, ಭಗವಂತನು ಎಲ್ಲರಲ್ಲಿಯೂ
ಏಕಪ್ರಕಾರವಾಗಿ ಅನುಸೂತ್ಯನಾಗಿದ್ದರೂ ಅಧಿಷ್ಠಾನವಾದ ಪದಾರ್ಥ ಹಾಗೂ
ವ್ಯಕ್ತಿಯ ಸ್ವರೂಪ, ಯೋಗ್ಯತೆಗಳಿಗನುಸಾರವಾಗಿ ಪ್ರಕಟನಾಗುತ್ತಿರುವನು.
ದುಷ್ಠರಲ್ಲಿ ಭಗವಂತನ ಸನ್ನಿಧಾನವಿದ್ದರೂ ಅವರ ದೌಷ್ಟ್ಯ, ದರ್ಪಗಳಲ್ಲಿ
ಅಡಗಿದ ಭಗವತ್ತತ್ತ್ವವನ್ನು ಕಾಣುವುದು ಸಾಮಾನ್ಯ ಜನರಿಗೆ ಸಾಧ್ಯವಾಗದ
ಕಾರ್ಯವಾಗಿದ್ದರೆ ದುಷ್ಟ ಶಿಷ್ಟರಿಬ್ಬರಲ್ಲಿಯೂ ಭಗವಂತನ ಹಾಗೂ ಅವನ
ಏಕತ್ವದ ದರ್ಶನವನ್ನು ಪಡೆಯುವ ಭಾಗ್ಯ ಜ್ಞಾನಿಗಳದ್ದಾಗಿದೆ. ಪರಮಾತ್ಮನು
ಎಲ್ಲರಲ್ಲಿಯೂ ಒಂದೇರೀತಿಯಿಂದ ವ್ಯಾಪ್ತನಾಗಿದ್ದರೂ ಆಯಾಯ ವ್ಯಕ್ತಿಗಳ
ಸ್ವಭಾವ ಮತ್ತು ಮೂಲಭೂತ ಅಭಿರುಚಿಗಳನ್ನನುಸರಿಸಿ ಜಗತ್ತಿನಲ್ಲಿ ದುಷ್ಟ
ಶಿಷ್ಟರ ವಿಭಾಗ ವ್ಯವಸ್ಥೆಯಾಗಿದೆ. ಪರಮಾತ್ಮನು ಎಲ್ಲ ಕಡೆ ಇದ್ದಾನೆ
ಎಂಬುದರಿಂದ ಸಜ್ಜನರು, ದುರ್ಜನರು ಎಲ್ಲರೂ ಸಮಾನರು ಎಂಬುದಾಗಿ
ಸಮತೆಯ ಅರ್ಥವಿಪರ್ಯಾಸವನ್ನು ನಾವುಮಾಡಬಾರದು.
ಪಂಡಿತಾಃ ಸಮದರ್ಶಿನಃ ॥
ಈ ವಾಕ್ಯವನ್ನು ನಾನಾ ರೀತಿಯಿಂದ ವಿಪರೀತವಾಗಿ ಎಳೆಯುವ ಪ್ರಯತ್ನವು
ನಡೆದಿದೆ. ಪ್ರತಿಯೊಬ್ಬನಿಗೂ ಅವನ ಸದ್ಗುಣ, ಸತ್ಯಾರ್ಯಗಳಿಗನುಗುಣವಾಗಿ
ಗೌರವ ಪುರಸ್ಕಾರಗಳು ಲಭಿಸುತ್ತಿದ್ದರೆ ಆ ಸಮಾಜವು ಹಿತಕರವಾದ ರೀತಿಯಲ್ಲಿ
ಬೆಳೆಯಬಹುದು. ಸಜ್ಜನಿಕೆ. ಹಾಗೂ ದೌರ್ಜನ್ಯಗಳಲ್ಲಿ ಯಾವ
ಭೇದಭಾವವನ್ನೂ ಇಟ್ಟುಕೊಳ್ಳದೆ ಎಲ್ಲರನ್ನೂ ಸಮಾನ ದೃಷ್ಟಿಯಿಂದ
ನೋಡಬೇಕೆನ್ನುವ ಸಮತೆಯನ್ನು ಯಾರೂ ಅಪೇಕ್ಷಿಸಲಾರರು. ಅದರಂತೆ
ಜ್ಞಾನಿಗಳೂ ವಾಮರರೂ ಕ್ರಿಯಾಶೀಲರೂ ಅಲಸರೂ ಸೌಜನ್ಯಸದ್ಗುಣ
ಶಾಲಿಗಳೂ ದುರ್ನಡತೆಯವರೂ ಈ ಎಲ್ಲರಲ್ಲಿಯೂ ಭಗವಂತನು
ನೆಲೆಸಿದ್ದರೂ ಅವರವರ ಅಂತಸ್ತಿಗೆ ಅನುಗುಣವಾಗಿ ಸಮಾಜದಲ್ಲಿ
ಸ್ಥಾನಮಾನಗಳನ್ನು ನೀಡುವುದೇ ನಿಜವಾದಸಮತೆ ಎನಿಸುವುದು. ಚಿಕ್ಕಮಕ್ಕಳು
ಹಾಗೂ ದೊಡ್ಡವರಿಗೆ ಒಂದೇರೀತಿಯಾಗಿ ಆಹಾರವಿತರಣೆಯನ್ನು ಮಾಡಿದಲ್ಲಿ
ಅದು ಸಮತೆ ಎನಿಸಲಾರದು. ಜ್ಞಾನ, ಸದ್ಗುಣ, ಸತ್ಯಾರ್ಯಗಳಿಗನುಸಾರವಾಗಿ
ಮಾಡುವತರತಮ ಭಾವವೇನಿಜವಾದ ಸಾಮ್ಯದೃಷ್ಟಿಯಾಗುವುದು. ವ್ಯಕ್ತಿಯ
ದುಡಿತ, ಸೇವೆಗಳಿಗೆ ಅನುಸಾರವಾಗಿ ಪ್ರತಿಫಲದಲ್ಲಿ ಹೆಚ್ಚು ಕಡಿಮೆ ಮಾಡಿದರೆ
ವೈಷಮ್ಯದ ಆರೋಪವನ್ನು ಯಾರೂಮಾಡಲಾರರು. ಅದರ ಬದಲಾಗಿ ಅತ್ಯಂತ
ಬುದ್ಧಿವಂತನಾದ ವಿದ್ಯಾರ್ಥಿಯನ್ನು ಕಡಿಮೆ ಅಂಕವನ್ನು ವಡೆದ
ವಿದ್ಯಾರ್ಥಿಯೊಂದಿಗೆಸಮವಾಗಿ ನಡೆಸಿದರೆ ಅದನ್ನೇ ವೈಷಮ್ಯ ಪಕ್ಷಪಾತವೆಂದು
ಕರೆಯಲಾಗುತ್ತದೆ. ದೇಶದಲ್ಲಿ ಸುಜನ-ದುರ್ಜನ ವಿವೇಕವನ್ನು ಮಾಡದೆ
ರಾಜ್ಯಭಾರವನ್ನು ನಡೆಸಿದಲ್ಲಿ ಅದು ಅರಾಜಕತೆಗೆ ಆಹ್ವಾನವಿತ್ತಂತೆ. ಈ ಎಲ್ಲ
ವಿಚಾರವನ್ನು ಗಮನಿಸಿಕೊಂಡು ಗೀತೆಯ ""ಸಮದರ್ಶಿನಃ' ಎಂಬುದರ
ಭಾವವನ್ನು ನಾವು ತಿಳಿದುಕೊಳ್ಳಬೇಕು. ಶ್ರೇಷ್ಠ ವ್ಯಕ್ತಿಗಳಲ್ಲಿಯೂ, ಕನಿಷ್ಠ
ಮನುಷ್ಯರಲ್ಲಿಯೂ ಸುಜನರಲ್ಲಿಯೂ ದುರ್ಜನರಲ್ಲಿಯೂ ಪರಮಾತ್ಮ
ನೇನೋವಏಕರೂಪದಲ್ಲಿ ನೆಲೆಸಿರುವನು. ಬೇರೆ ಬೇರೆ ಯಂತ್ರಗಳಲ್ಲಿ ವಿದ್ಯುತ್ತು
ಏಕರೂಪವಾಗಿ ಹರಿಯುತ್ತಿದ್ದರೂ ಅವುಗಳ ಸ್ವಭಾವ ರಚನೆಗಳಿಗೆ
ಅನುಗುಣವಾಗಿ ಅವುಗಳಿಂದ ಭಿನ್ನ ಭಿನ್ನಕಾರ್ಯಗಳು ನಡೆಯುತ್ತವೆ. ವಿದ್ಯುತ್ತು
ಏಕರೂಪವಾಗಿ ಹರಿಯುತ್ತಿದ್ದರೂ ಎಲ್ಲ ಯಂತ್ರಗಳೂ ಒಂದೇಕಾರ್ಯವನ್ನು
ಮಾಡಲಾರವು, ಒಂದೇ ರೀತಿಯಲ್ಲಿ ಮಾಡಲಾರವು. ಅದರಂತೆ ಜೀವರ
ಸ್ವಭಾವಗಳಿಗನುಸಾರವಾಗಿ ಈ ಜಗತ್ತಿನಲ್ಲಿ ವೃತ್ಯಾಸವು ಅನಿವಾರ್ಯವೇ ಆಗಿದೆ.
ಪರಮಾತ್ಮ: ನು ಜಗತ್ತಿನಲ್ಲಿ ವ್ಯಾಪಿಸಿದ್ದ ರೂಸ್ವಭಾವ ಗುಣಗಳ ಆಧಾರದಲ್ಲಿರುವ
ಈ ಲೋಕಪ್ರವೃತ್ತಿಯನ್ನು ಬದಲಿಸಲಾರನು.
ಸ್ವಭಾವಸ್ತು ಪ್ರವರ್ತತೇ ।
ಪ್ರತಿಯೊಂದು ಲೋಕವ್ಯವಹಾರಕ್ಕೂ ಸ್ವಯಂಭುವಾದ ಪರಮಾತ್ಮ ಮತ್ತು
ವ್ಯಕ್ತಿಯ ಮೂಲಭೂತ ಸ್ವಭಾವ ಇವೆರಡೂ ಕಾರಣವಾಗಿರುವುದರಿಂದ
ವೈಷಮ್ಯತಕ್ಟರಹಿತನಾದ ಭಗವಂತನು ಇದ್ದೂ ಜಗತ್ತಿನಲ್ಲಿ ಹೀಗೇಕೆ ಒಬ್ಬೊಬ್ಬರು.
ಒಂದೊಂದುರೀತಿಯಿಂದ ವರ್ತಿಸುತ್ತಿದ್ದಾ ರೆಂದು ಆಕ್ಬೇಪಿಸಲು ಅವಕಾಶವಿಲ್ಲ.
ತತ್ರ ತತ್ರ ಸ್ಥಿತೋ ವಿಷ್ಣು
ಸ್ಪತ್ತಚ್ಛಕ್ತಿಃ ಪ್ರಬೋಧಯನ್ ॥
ಪ್ರತಿಯೊಂದು ಜಡ-ಚೇತನದಲ್ಲೂ ಇದ್ದು ಅವರವರ ಸ್ವಭಾವ ಹಾಗೂ
ಶಕ್ತಿಗಳನ್ನು ಪ್ರಬೋಧನೆ ಮಾಡುವುದೇಪರಮಾತ್ಮನ ಸೃಷ್ಟಿಯ ವಿಧಾನವಾಗಿದೆ.
ಲೋಕದಲ್ಲಿಎಲ್ಲಗಿಡಗಳಿಗೂ ಸರಿಯಾದನೀರು, ಗೊಬ್ಬರಗಳನ್ನು ಹಾಕಿದರೂ
ಅವುಗಳ ಬೀಜದಮೂಲ ಸ್ವಭಾವಕ್ಕನುಗುಣವಾಗಿ ಹಣ್ಣುಗಳ ರಸ-ರುಚಿಗಳಲ್ಲಿ
ಭೇದವು ಉಂಟಾದಲ್ಲಿ ತೋಟಗಾರನು ಅದಕ್ಕೆ ಹೊಣೆಗಾರನಾಗುವನೆ? ಅದರಂತೆ
ಸೃಷ್ಟಿಯ ಈ ವೈವಿಧ್ಯ ವಿಭಿನ್ನತೆಗಳಿಗೆ ಜೀವ, ಜಡರ ಮೂಲಭೂತ ವ್ಯಕ್ತಿತ್ವ
ಅಭಿರುಚಿಗಳೇ ಹಿನ್ನೆಲೆಯಾಗಿರುವುದರಿಂದ ಭಗವಂತನನ್ನೂ ಅವನ
ಸಮತೆಯನ್ನೂ ನಾವು ದೂಷಿಸಲಾರೆವು.
ನಾದತ್ತೇ ಕಸ್ಯಚಿತ್ ಪಾಪಂನ ಚೈವ ಸುಕೃತಂ ವಿಭುಃ
ಸರ್ವಕರ್ತನೂ ಸರ್ವವ್ಯಾಪಿಯೂ ಆದ ವರಮಾತ್ಮನು ಒಂದು ನೀತಿ,
ನಿಯಮವನ್ನು ಆಧರಿಸಿಯೇ ಜಗತ್ತಿನ ವ್ಯವಹಾರವನ್ನು ನಡೆಸುವುದರಿಂದ
ಯಾವ ವೈಷಮ್ಯ ದೋಷಕ್ಕೂ ಆತನು ಪಾತ್ರನಾಗಲಾರ. ಮಾನವರಸತ್, ಅಸತ್
ಕಾರ್ಯಗಳಿಂದ ಆಗುವ ಸುಕೃತ, ದುಷ್ಕತ ಲೇಪವೂ ಅವನಿಗೆ ಇರುವುದಿಲ್ಲ.
ಅದರಂತೆ ಅಧಿಷ್ಠುನವಾದ ಜೀವ-ಜಡರಲ್ಲಿರುವ ಮೂಲಭೂತ
ಗುಣದೋಷಗಳ ಪರಿಣಾಮ ಆಘಾತಗಳು ಅವುಗಳಲ್ಲಿ ನೆಲೆಸಿರುವ
ಪರಮಾತ್ಛನಿಗೆ ಸ್ವಲ್ಪವೂ ಆಗುವುದಿಲ್ಲ. ಅವನು ಎಂದೆಂದಿಗೂ ವರಿಶುದ್ಧನೂ
ಗುಣಪೂರ್ಣನೂ ಆಗಿರುವನು. ವಸ್ತುಭೇದದಿಂದ ಅವನ ಅಭಿವ್ಯಕ್ತಿಯ
ತಾರತಮ್ಯವಿರಬಹುದಾದರೂ ಅವನ ಸ್ವರೂಪಕ್ಕೆ ಯಾವ ಚ್ಯತಿ, ವಿಕಾರಗಳೂ
ಬಾಹ್ಯ ಪದಾರ್ಥಗಳ ಸಂಪರ್ಕದಿಂದ ಉಂಟಾಗಲಾರವು. ಆದುದರಿಂದಲೇ
ಅಸಂಗನೆಂದು ಪರಮಾತ್ಮನನ್ನು ಉಪನಿಷತ್ತುಗಳು ವರ್ಣಿಸಿರುತ್ತವೆ.
ವಿಷಮೇಷ್ಟಪಿ ಜೀವೇಷು ಸಮೋ ವಿಷ್ಣು ಸದೈವ ತು।
-ಗೀತಾತಾತ್ಪರ್ಯ
ಸರ್ವೋತ್ತಮ ಚೈತನ್ಯವೆನಿಸಿದ ಪರಮಾತ್ಮನು ವಿಚಿತ್ರ ವಿಭಿನ್ನ ಪ್ರವೃತ್ತಿಯ ಈ
ಎಲ್ಲ ಜೀವ-ಜಡ ಪ್ರಪಂಚದಲ್ಲಿ ಅನುಸ್ಯೂತನಾಗಿ ನೆಲೆಸಿದ್ದರೂ ಅವುಗಳ
ಸಂಪರ್ಕದಿಂದ ಯಾವುದೇವಿಕೃತಿ, ವಿಷಮತೆಗಳನ್ನು ಅವನು ಪಡೆದಿರುವುದಿಲ್ಲ.
ಅವನು ಎಂದೆಂದಿಗೂ ನಿರ್ವಿಕಾರನೂ ಏಕರೂಪನೂ ಆಗಿರುವನು.
ಬಾಹ್ಯವಸ್ತುವನ್ನು ಅವಲೋಕಿಸುವುದರ ಜೊತೆಗೆ ಈ ನಿರ್ವಿಕಾರವಾದ
ಪರತತ್ತ್ವದ ದರ್ಶನವಾಗುವುದರಿಂದಲೇ ಪ್ರಪಂಚದ ಮಧ್ಯದಲ್ಲಿದ್ದರೂ
ಜ್ಞಾನಿಯು ಈ ಅನುಪಮ ಆನಂದವನ್ನು ಸವಿಯುವನು.
Bannanje Govindacharya (1936–2020)Bhagavad Gita Pravachana
ನ ಕರ್ತೃತ್ವಮ್ ನ ಕರ್ಮಾಣಿ ಲೋಕಸ್ಯ ಸೃಜತಿ ಪ್ರಭುಃ ।
ನ ಕರ್ಮಫಲ ಸಂಯೋಗಮ್ ಸ್ವಭಾವಃ ತು ಪ್ರವರ್ತತೇ -- ಜೀವ ಜಡದಂತಲ್ಲ; ಕ್ರಿಯೆ ಮಾಡಬಲ್ಲ. ಆದರೂ
ಅವನು ಹೊಣೆಗಾರನಲ್ಲ- ಲೋಕದ ಯಾವ ಕ್ರಿಯೆಗೂ, ಪುಣ್ಯ-ಪಾಪಗಳಿಗೂ,ಅದರಿಂದೊದಗುವ ಫಲಕ್ಕೂ.
[ಕ್ರಿಯೆಯ,ಪುಣ್ಯಪಾಪಗಳ, ಮತ್ತು ಕರ್ಮಫಲ ಪಡೆಯುವ ಒಡೆತನವನ್ನು ಜೀವಲೋಕಕ್ಕೆ ಭಗವಂತ ನೀಡಲಿಲ್ಲ].
ಜೀವದ ಸ್ವಭಾವ ತನ್ನ ಕೆಲಸ ಮಾಡುತ್ತಿರುತ್ತದೆ.(ಭಗವಂತ ಈ ಎಲ್ಲವನ್ನೂ ಮಾಡುತ್ತಿರುತ್ತಾನೆ].
ಈ ಹಿಂದೆ ವಿಶ್ಲೇಷಿಸಿದ ಸಮಸ್ತ ಪ್ರಶ್ನೆಗಳಿಗೂ ಉತ್ತರ ಒಗಟಿನ ರೂಪದಲ್ಲಿ ಈ ಶ್ಲೋಕದಲ್ಲಡಗಿದೆ. ಮೇಲ್ನೋಟಕ್ಕೆ
ಇದು ತಿಳಿಯುವುದಿಲ್ಲ; ಶಾಸ್ತ್ರದ ಅನುಭಾವದಿಂದ ಒಂದೊಂದು ಶಬ್ದವನ್ನು ಮನನ ಮಾಡಿದಾಗ ಮಾತ್ರ ಅಲ್ಲಿ
ಉತ್ತರ ಸಿಗುತ್ತದೆ.
ಜಡಲೋಕಕ್ಕೆ ಜೀವ-ಪ್ರಭು, ಅದರಲ್ಲಿ ಇಚ್ಛಾಪೂರ್ವಕಕ್ರಿಯೆ ಇದೆ, ಆದರೆ ಅದು ಕರ್ತೃತ್ವವಲ್ಲ. ಜೀವವನ್ನು ಜಡಕ್ಕೆ
ಹೋಲಿಸಿದಾಗ: ಜಡಕ್ಕೆ ಯೋಚನೆ ಮಾಡುವ ಶಕ್ತಿ ಇಲ್ಲ-ಆದರೆ ಜೀವಕ್ಕೆ ಯೋಚನೆ ಮಾಡುವ ಶಕ್ತಿ ಇದೆ; ಜಡಕ್ಕೆ
ಬುದ್ದಿ ಇಲ್ಲ-ಆದರೆ ಜೀವಕ್ಕಿದೆ; ಎರಡಕ್ಕೂ ಕರ್ತ್ಯತ್ವವಿಲ್ಲ. ಕ್ರಿಯೆಯ,ಪುಣ್ಯಪಾಪಗಳ, ಮತ್ತು ಕರ್ಮಫಲ ಪಡೆಯುವ
ಒಡೆತನವನ್ನು ಜೀವಲೋಕಕ್ಕೆ ಭಗವಂತ ನೀಡಿಲ್ಲ. ಜೀವನಿಗೆ ದತ್ತಸ್ವಾತಂತ್ರ್ಯ ಕೂಡಾ ಇಲ್ಲ. [ಉದಾಹರಣೆಗೆ:
ಒಬ್ಬ ರಾಜ ತನ್ನ ಮಗನಿಗೆ ದೇಶದ ಒಂದು ಭಾಗವನ್ನು ಸ್ವತಂತ್ರವಾಗಿ ಆಳುವ ಅಧಿಕಾರ ಕೊಡುವುದು
ದತ್ತಸ್ವಾತಂತ್ರ್ಯ]. ಕರ್ತೃತ್ವವನ್ನು ಸರಿಯಾಗಿ ತಿಳಿದುಕೊಳ್ಳಬೇಕಾದರೆ ಅದರ ಹಿಂದಿರುವ ಸ್ವಾರಸ್ಯವಾದ
ಶಾಸ್ತ್ರೀಯ ಪ್ರಕ್ರಿಯೆಯನ್ನು ತಿಳಿದುಕೊಳ್ಳಬೇಕು.
ಪ್ರಪಂಚದಲ್ಲಿ ಮೂರು ತರಹದ ಕರ್ತ್ಯತ್ವವಿದೆ. ಕೇವಲ ಕ್ರಿಯೆ ಇರುವುದೂ ಒಂದು ವಿಧದ ಕರ್ತೃತ್ವ. ಇದು
ಜಡಕ್ಕೂ ಇದೆ. ಉದಾಹರಣೆಗೆ 'ಕೆಚ್ಚಲು ಹಾಲು ಕೊಡುತ್ತದೆ ಇಲ್ಲಿ ಕೆಚ್ಚಲಿನಿಂದ ಹಾಲು ಸುರಿಯುವ ಕೃತಿ ಇದೆ
ಆದರೆ ಅದು ಅತ್ಯಂತ ಅಮುಖ್ಯವಾದ ಕರ್ತೃತ್ವ. ಎರಡನೇಯದು ಬುದ್ಧಿ ಪೂರ್ವಕವಾದ ಕೃತಿ. ಸ್ವತಂತ್ರವಲ್ಲದ
ಇಚ್ಛಾಪೂರ್ವಕ ಕೃತಿ-ಇದು ಜೀವರಿಗಿದೆ, ಆದರೆ ನಿಜವಾದ ಪ್ರಮುಖ ಕರ್ತೃತ್ವ ಇದಲ್ಲ. ಸ್ವತಂತ್ರವಾದ
ಇಚ್ಛಾಪೂರ್ವಕ ಕ್ರಿಯೆ ನಿಜವಾದ ಕರ್ತೃತ್ವ. ಇದು ಇರುವುದು ಕೇವಲ ಭಗವಂತನಲ್ಲಿ ಮಾತ್ರ. ಜೀವನಿಗೆ
ಕರ್ಮದಲ್ಲಿ ದತ್ತಸ್ವಾತಂತ್ರ್ಯ ಕೂಡಾ ಇಲ್ಲ. ಜೀವ ಭಗವಂತನ ಪರಾಧೀನ. ಆದ್ದರಿಂದ ಆತ ಕರ್ತಾ ಅಲ್ಲ.
ಉದಾಹರಣೆಗೆ ತೊಟ್ಟಿಲಲ್ಲಿರುವ ಮಗು. ಅದಕ್ಕೆ ಬುದ್ಧಿ ಇದೆ, ತಿನ್ನಬೇಕು ಎನ್ನುವ ಇಚ್ಛೆ ಇದೆ, ಆದರೆ
ಸ್ವಾತಂತ್ರ್ಯವಿಲ್ಲ. ತಾಯಿ ಬಾಯಿಗಿಟ್ಟಿದ್ದನ್ನು ಅದು ತಿನ್ನುತ್ತದೆ. ಇದು ಇಚ್ಛಾಪೂರ್ಣ ಕ್ರಿಯೆ ಆದರೆ ಸ್ವತಂತ್ರ-
ಇಚ್ಛಾಪೂರ್ಣ ಕ್ರಿಯೆ ಅಲ್ಲ. ಇನ್ನು ಫಲದ ಬಗ್ಗೆ ಇದೇ ದೃಷ್ಟಾಂತದೊಂದಿಗೆ. ನೋಡಿದಾಗ: ತಂದೆ-ತಾಯಿ
ಮಗುವಿಗೆ 'ದೇವರಿಗೆ ನಮಸ್ಕಾರ ಮಾಡು' ಎಂದು ಹೇಳುತ್ತಾರೆ, ಆಗ ಆ ಮಗು ಮಾಡುವುದಿಲ್ಲ, ಇಂತಹ
ಸಂದರ್ಭದಲ್ಲಿ ತಂದೆ. ತಾಯಿ, ಮಗುವನ್ನು ತಿದ್ದಿ-ತೀಡಿ. ಅಥವಾ ಅಗತ್ಯಬಿದ್ದರೆ ಶಿಕ್ಷಿಸಿ ದೇವರಿಗೆ
ನಮಸ್ಕರಿಸುವಂತೆ ಮಾಡುತ್ತಾರೆ, ಆಗ ಆ ಮಗು ಮಾಡುತ್ತದೆ. ಇಲ್ಲಿ ನಮಸ್ಕಾರ ಮಾಡಿಸಿದ್ದು ತಂದೆ-
ತಾಯಿಯಾದರೂ ಸಹ ಫಲ ಮಗುವಿಗೆ. ಇದೇ ರೀತಿ ಜೀವನೊಳಗೆ ಕುಳಿತ ಕಣ್ಣಿಗೆ ಕಾಣದ ಭಗವಂತ 'ಜೀವನ'
ಕ್ರಿಯೆಯನ್ನು ನಿಯಂತ್ರಿಸುತ್ತಾನೆ. ನಮ್ಮ ಮೂಲಕ ಕರ್ಮ ಮಾಡಿಸುವವನು ಭಗವಂತನಾದರೂ ಕೂಡಾ
ಕರ್ಮದ ಫಲ ನಮಗೇ ಹೊರತು ಭಗವಂತನಿಗಲ್ಲ.
ಈ ದೃಷ್ಟಾಂತದೊಂದಿಗೆ ಮುಂದುವರಿದಾಗ ನಮಗೆ ಇನ್ನೊಂದು ಪ್ರಶ್ನೆ ಕಾಡುತ್ತದೆ. “ಭಗವಂತ ನಮ್ಮ
ಮುಖೇನ ಏಕೆ ಕೆಟ್ಟ ಕೆಲಸ ಮಾಡಿಸುತ್ತಾನೆ? ತಂದೆ-ತಾಯಿ ಎಂದೂ ಮಗುವಿನಲ್ಲಿ ಕೆಟ್ಟ ಕೆಲಸ ಮಾಡಿಸುವುದಿಲ್ಲ,
ಅದೇ ರೀತಿ ಏಕೆ ಭಗವಂತ ನಮ್ಮಲ್ಲಿ ಕೇವಲ ಒಳ್ಳೆಯ ಕೆಲಸ ಮಾಡಿಸಬಾರದು?” ಎಂದು. ಇದು
ಲೋಕದಲ್ಲಿರುವುದಕ್ಕಿಂತ ವಿಲಕ್ಷಣವಾಗಿ ಕಾಣುವ ಕ್ರಿಯೆ. ಉದಾಹರಣೆಗೆ ಒಬ್ಬ ಉಪಾಧ್ಯಾಯ, ಆತ ತನ್ನ ಪಾಠ
ಪ್ರವಚನವನ್ನು ಎಲ್ಲಾ ಮಕ್ಕಳಿಗೂ ಒಂದೇ ರೀತಿಯಾಗಿ, ಭೇದ ಭಾವವಿಲ್ಲದೆ. ಕಲಿಸುತ್ತಾನೆ. ಆದರೆ ಒಬ್ಬ
ಪಾಠವನ್ನು ಬಹುಬೇಗ ಅರ್ಥ ಮಾಡಿಕೊಂಡರೆ ಇನ್ನೊಬ್ಬ ಅರ್ಥವಾಗದೇ ತಳಮಳಿಸಬಹುದು; ಮತ್ತೊಬ್ಬ
ಅಪಾರ್ಥ ಮಾಡಿಕೊಳ್ಳಬಹುದು. ಇದಕ್ಕೆ ಉಪಾಧ್ಯಾಯರು ಕಾರಣರಲ್ಲ, ಇದು ವಿಧ್ಯಾರ್ಥಿಯ ಸ್ವಭಾವಕ್ಕೆ
ಸಂಬಂಧಪಟ್ಟ ವಿಚಾರ. ಕೃಷ್ಣ ಹೇಳುತ್ತಾನೆ "ಸ್ವಭಾವಸ್ತು ಪ್ರವರ್ತತೇ" ಎಂದು. ಇದು ಅಪೂರ್ವವಾದ ಸಂಗತಿ.
ಹಿಂದೆ ಹೇಳಿದಂತೆ ಜೀವ ಅನಾಧಿನಿತ್ಯ, ಅದನ್ನು ಭಗವಂತ ಸೃಷ್ಟಿ ಮಾಡಿಲ್ಲ. ಈ ಅನಾಧಿನಿತ್ಯವಾದ ಜೀವಕ್ಕೆ
ಅನಾಧಿನಿತ್ಯವಾದ ಒಂದು ಅಸಾಧಾರಣ RTT (Exclusive Quality). ಆ ಸ್ವಭಾವದಂತೆ ಆ ಜೀವ
ನಡೆದುಕೊಳ್ಳುತ್ತದೆ.
ಜೀವಸ್ವಭಾವದಂತೆ ಜೀವ ನಡೆದುಕೊಳ್ಳುವುದು ಅಂದರೆ: ಉದಾಹರಣೆಗೆ ಮಾವಿನ ಬೀಜ, ಅದು ಮರವಾಗಿ
ಮಾವಿನ ಹಣ್ಣನ್ನೇ ಕೊಡುತ್ತದೆ ಹೊರತು ಹಲಸಿನ ಹಣ್ಣನ್ನಲ್ಲ, ಇದು ಆ ಬೀಜದ ಸ್ವಭಾವ. ಜೀವ ಎನ್ನುವುದು
ಶರೀರ ಎನ್ನುವ ವೃಕ್ಷದ ಬೀಜ. ಆ ಶರೀರದ ಮೂಲಕ ವ್ಯಕ್ತವಾಗುವುದು ಆ ಬೀಜದ ಮೂಲ ಗುಣವೇ ಹೊರತು
ಇನ್ನೇನೂ ಅಲ್ಲ. ಜೀವ ಮೊದಲನೆಯದಾಗಿ ತನ್ನ ಸ್ವಭಾವಕ್ಕೆ ಅಧೀನ. ನಾವು ನಮಗೆ ತೋಚಿದಂತೆ ಮಾಡಲು
ಸಾಧ್ಯವಿಲ್ಲ, ನಮ್ಮ ಸ್ವಭಾವ ಎಂತೋ ಅಂತೆಯೇ ನಮ್ಮ ತೀರ್ಮಾನ. ಮೂಲತಃ ನಿಜವಾದ ಸ್ವಭಾವದಂತೆ
ನಮ್ಮ ಅನಿಸಿಕೆ; ಅದಕ್ಕೆ ವಿರುದ್ಧವಾಗಿ ನಾವು ಕೆಲಸ ಮಾಡುವುದಿಲ್ಲ. ಈ ಕಾರಣದಿಂದ ಸ್ವಭಾವತಃ
ಸಾತ್ವಿಕನಾದರೆ ಆತನ ವಿಚಾರಧಾರೆಗಳೆಲ್ಲವೂ ಸಾತ್ವಿಕಗುಣದ ಪ್ರಭಾವದಲ್ಲೇ ಇರುತ್ತದೆ. ರಾಜಸನಾದವನ
ವಿಚಾರಧಾರೆ ರಾಜಸ ಗುಣದ ಪ್ರಭಾವದಲ್ಲಿರುತ್ತದೆ. ಸ್ವಭಾವದ ಜೊತೆಗೆ ಹುಟ್ಟೆ ಬೆಳೆದ ಸಮಾಜದ
ಪ್ರಭಾವವಿದ್ದರೂ ಸಹ ಅದರ ಅಭಿವ್ಯಕ್ತತೆ ಕ್ಷಣಿಕ. ಅದು ಹೆಚ್ಚೆಂದರೆ ಒಂದು ಜನ್ಮಕ್ಕೆ ಸೀಮಿತ, ಆದರೆ ಕೊನೆಗೆ
ಉಳಿಯುವುದು ಜೀವಸ್ವಭಾವ ಮಾತ್ರ.
ಜೀವಕ್ಕೆ ಅನಾಧಿನಿತ್ಯವಾಗಿ ಅಂಟಿದ ಸ್ವಭಾವ- ಸಾತ್ವಿಕ ರಾಜಸ ಮತ್ತು ತಾಮಸಗಳ ಸಮ್ಮಿಶ್ರಣ. ಸಾತ್ವಿಕರು
ಎಂದರೆ ಅವರಲ್ಲಿ ಸಾತ್ವಿಕ ಗುಣ ಪ್ರಮಾಣ ಹೆಚ್ಚು. ಯಾರಲ್ಲಿ ಯಾವ ಗುಣ ಪ್ರಧಾನವೋ ಆತ ಆ ಗುಂಪಿಗೆ
ಸೇರುತ್ತಾನೆ. ಈ ಮೂರು ವಿಧವಾದ ಜೀವಜಾತ ತನ್ನ ಸ್ವಭಾವಕ್ಕೆ ಅಧೀನವಾಗಿ ನಡೆದುಕೊಳ್ಳುತ್ತದೇ ಹೊರತು,
ತಾನು ಹೇಗೆ ಮಾಡಬೇಕು ಎಂದು ತೀರ್ಮಾನ ಮಾಡಿ ತನ್ನನ್ನು ರೂಪಿಸಿಕೊಳ್ಳುವ ಸ್ವತಂತ್ರ ಕರ್ತ್ಯತ್ವ
ಅದಕ್ಕೆರುವುದಿಲ್ಲ.
ಸ್ವಭಾವ ನಮ್ಮ ಅಥೀನ ಅಲ್ಲ, ಅಂದಮೇಲೆ ಆ ಸ್ವಭಾವದ ಅಭಿವ್ಯಕ್ತಿ ನನ್ನ ಸ್ವಾತಂತ್ರ್ಯದಲ್ಲಿಲ್ಲ. ಮತ್ತೆ ಆ
ಸ್ವಭಾವದ ಅಭಿವ್ಯಕ್ತಿ ಹೇಗೆ? ಸ್ವಭಾವಕ್ಕೆ ತಕ್ಕಂತೆ ಬೆಳೆಯುವುದು ಯಾರ ಅಧೀನವಾಗಿ? ಸ್ವಭಾವಕ್ಕೆ ಆ ಶಕ್ತಿ
ಎಲ್ಲಿಂದ ಬಂತು? ಈ ಎಲ್ಲಾ ಪ್ರಶ್ನೆಗೆ ಇದೇ ಶ್ಲೋಕದಲ್ಲಿ ಉತ್ತರವಿದೆ. ಅದಕ್ಕಾಗಿ ನಾವು ಈ ಶ್ಲೋಕದಲ್ಲಿ
ಅಡಗಿರುವ ಇನ್ನೊಂದು ಅರ್ಥವನ್ನು ನೋಡಬೇಕು. ನಮಗೆ ಕರ್ತೃತ್ವವಿಲ್ಲ ಹಾಗೂ ಕರ್ಮದಲ್ಲಿ ಇಂತದ್ದೇ ಫಲ
ಬರಬೇಕು ಎನ್ನುವ ಸ್ವಾತಂತ್ರ್ಯವಿಲ್ಲ. ತಾನೇ ತಾನಾಗಿ ತನ್ನನ್ನು ಬಿತ್ತಿಕೊಂಡು ತಾನೇ ಮರವಾಗಿ ಬೆಳೆದು
ಹಣ್ಣನ್ನು ಕೊಡುವ ಶಕ್ತಿ ಜೀವಕ್ಕಿಲ್ಲ. ಸ್ವತಂತ್ರನಾದ ಭಗವಂತ ಸೃಷ್ಟಿ ಎನ್ನುವ ತೋಟ ನಿರ್ಮಿಸಿ, ಅಲ್ಲಿ ಒಬ್ಬ
ತೋಟಗಾರನಂತೆ, ಜೀವ ಎನ್ನುವ ಬೀಜವನ್ನು ಬಿತ್ತಿ ಬೆಳೆಸುತ್ತಾನೆ. ಅದರಿಂದ ನಮ್ಮ ದೇಹ ಎನ್ನುವ ಮರ
ಬೆಳೆಯುತ್ತದೆ ಮತ್ತು ಅದರಿಂದ ಕಹಿಯಾದ, ಹುಳಿಯಾದ ಅಥವಾ ಸಿಹಿಯಾದ ಹಣ್ಣು ಜೀವ ಸ್ವಭಾವದಂತೆ
ಅಭಿವ್ಯಕ್ತವಾಗುತ್ತದೆ. ಆದ್ದರಿಂದ ಕೆಟ್ಟಕೆಲಸ(ಕಹಿ) ಒಳ್ಳೆಯಕೆಲಸ(ಸಿಹಿ) ಎನ್ನುವುದು... ನಮ್ಮ
ಸ್ವಭಾವವನ್ನವಲಂಬಿಸಿದೆಯೇ ಹೊರತು ಭಗವಂತನನ್ನಲ್ಲ. ತೋಟಗಾರ ಎಂದೂ ಮೆಣಸಿನ ಗಿಡಕ್ಕೆ ಖಾರವಾದ
ನೀರನ್ನು ಹರಿಸುವುದಿಲ್ಲ. ಎಲ್ಲಾ ಗಿಡದಂತೆ ಆ ಗಿಡವನ್ನೂ ಪೋಷಿಸಿ ಬೆಳೆಸುತ್ತಾನೆ. ಆದರೆ ಅದು ಖಾರವಾದ
ಹಣ್ಣನ್ನು ತನ್ನ ಸ್ವಭಾವದಂತೆ ಕೊಡುತ್ತದೆ. ಹಾಗೇ ಭಗವಂತ ಅನಾಥಿನಿತ್ಯವಾದ ಜೀವದ ಸ್ವಭಾವಕ್ಕೆ ತಕ್ಕಂತೆ
ಕ್ರಿಯೆ ಮಾಡಿಸಿದ ಹಾಗೇ ಕ್ರಿಯೆ ನಡೆಯಿತು.
ಕೆಲವೊಮ್ಮೆ ನಾವು ಯೋಚಿಸಿದ್ದಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತೇವೆ. ಏಕೆಂದರೆ. ನಮ್ಮ ಮನಸ್ಸು ಮತ್ತು
ಬುದ್ಧಿಯ ವಿಚಾರ ಸರಣಿ(!೧16160038! approach) ಬೇರೆ, ನಾವು ಮಾಡುವುದು ಬೇರೆ. ಈ ಕಾರಣಕ್ಕಾಗಿ
ಕೆಲವರು ಹೊರಗಿನಿಂದ ಒಂದು ಮಾತನಾಡಿ ಒಳಗಿನಿಂದ ಅದಕ್ಕೆ ವ್ಯತಿರಿಕ್ತವಾದದ್ದನ್ನು ಮಾಡುತ್ತಾರೆ.
ದುರ್ಯೋಧನ ಕೂಡಾ "ನಾನು ಮಾಡುತ್ತಾ ಇರುವುದು ತಪ್ಪು ಎನ್ನುವುದು ನನಗೆ ತಿಳಿದಿದೆ" ಎಂದು
ಹೇಳಿರುವುದನ್ನು ಇಲ್ಲಿ ನಾವು ಗಮನಿಸಬೇಕು. ಆತನಿಗೆ ಧರ್ಮ ಯಾವುದು ಎಂದು ತಿಳಿದಿತ್ತು. ಆದರೂ ಆತ
ತನ್ನ ಸ್ವಭಾವದಂತೆ ನಡೆದ. ಆದ್ದರಿಂದ ನಮ್ಮ ತಿಳುವಳಿಕೆ ಬೇರೆ, ನಮ್ಮ ಕ್ರಿಯೆ ಬೇರೆ. ನಮ್ಮ ಸ್ವಭಾವ ನಮ್ಮೆಲ್ಲಾ
ಅಧ್ಯಯನ, ಬುದ್ದಿ, ವಿಚಾರವಾದವನ್ನು ಬದಿಗೊತ್ತಿ ನಮ್ಮಿಂದ ಸ್ವಭಾವಕ್ಕನುಗುಣವಾದ ಕೆಲಸವನ್ನು ಮಾಡಿಸಿ
ಬಿಡುತ್ತದೆ. ಇದನ್ನೇ ಕೃಷ್ಣ ಇಲ್ಲಿ " ಸ್ವಭಾವಸ್ತು ಪ್ರವರ್ತತೇ" ಎಂದಿರುವುದು. ನಿನ್ನ ಸ್ವಭಾವ ಎಂತಹದ್ದೋ-
ಅಂತಹದ್ದೇ ನಿನ್ನ ಪ್ರವೃತ್ತಿ. ಅದಕ್ಕನುಗುಣವಾಗಿ ಭಗವಂತ ನಿನ್ನನ್ನು ಬೆಳೆಸುತ್ತಾನೆ. ಯಾರಲ್ಲಿ ಯಾವ
ಸ್ವಭಾವವಿದೆಯೋ ಅದೇ ರೀತಿ ಅವರಿರಬೇಕೇ ಹೊರತು ಇನ್ನೊಬ್ಬರಂತಲ್ಲ. ಮಾವಿನ ಹಣ್ಣು ಹುಳಿಯಾದರೆ
ಅದು ಕೆಟ್ಟ ಹಣ್ಣು, ಅದೇ ಹುಣಸೆ ಹಣ್ಣು ಹೆಚ್ಚು ಹುಳಿಯಾದಂತೆ ಹೆಚ್ಚು ಉತ್ತಮ. ಆದ್ದರಿಂದ ತಾಮಸರು
ತಾಮಸರಂತಿರುವುದು ಅವರ ಸಹಜ ಧರ್ಮ. ಯಾರ್ಯಾರ ಸಹಜ ಸ್ವಭಾವ ಎಂತದ್ದೋ ಅಂತೆಯೇ ಸಹಜ
ಸ್ವಭಾವದಲ್ಲಿ ಬೆಳೆಸುವ ಕ್ರಿಯೆಯನ್ನು ಸ್ವತಂತ್ರನಾದ ಭಗವಂತ ಮಾಡಿದ. ಎಲ್ಲವುದರ ಫಲವನ್ನು
ಕೊಡುವವನೂ ಅವನೇ. ಅವನಿಗೆ ಎಂದೂ ಬಂಧನವಿಲ್ಲ.
ಹೀಗೆ ಈ ಶ್ಲೋಕ ನಮ್ಮೆಲ್ಲಾ ಸಂಶಯಗಳಿಗೆ ಉತ್ತರರೂಪದಲ್ಲಿದೆ. ನಮ್ಮ ಸಂಶಯ ಅತ್ಯಂತ ಗಾಢ. ಮನಸ್ಸಿಗೆ
ಬರುವ ಸಂಶಯವನ್ನು ನಿವಾರಿಸಬಹುದು ಆದರೆ ಬುದ್ದಿಗೆ ಬರುವ ಸಂಶಯ (Intellectual 60ಟ00ವನ್ನು
ನಿವಾರಿಸುವುದು ಕಷ್ಟ. ಪ್ರಾಚೀನ ಶಾಸ್ತ್ರಕಾರರು ಮನಃಶಾಸ್ತ್ರದ ಪ್ರಕಾರ ಇದನ್ನು 'ಸ್ಥಿರಸಂಶಯ' ಎಂದು
ಕರೆದರು. ನಮ್ಮಲ್ಲಿರುವ ಭೌತಿಕ ಕೊಳೆ ಜಗತ್ತಿನಲ್ಲಿ 'ಎಲ್ಲರಿಗಿಂತ ನಾನು ಬುದ್ಧಿವಂತ' ಎಂದು
ತಿಳಿದುಕೊಳ್ಳುವಂತೆ ಮಾಡುತ್ತದೆ. ಇದರಿಂದ ನಾವು ಸತ್ಯದ ಕಡೆಗೆ ಮನಸ್ಸನ್ನು ಒಗ್ಗಿಸಿಕೊಳ್ಳುವುದಿಲ್ಲ ಹಾಗೂ
ಅದರಿಂದ ನಮಗೆ ನಂಬಿಕೆ ಬರುವುದಿಲ್ಲ. ನಾವು ಯಾವುದೇ ಕೆಲಸ ಮಾಡಿದರೂ ಅದನ್ನು ತಿಳಿದು-ನಂಬಿ
ಮಾಡಬೇಕು. ಅದಕ್ಕೋಸ್ಕರ ಪ್ರತೀ ಹೆಜ್ಜೆಯಲ್ಲೂ ಶಾಸ್ತ್ರೀಯ ಅನುಭಾವ ಮುಖ್ಯ. ನಾನು ಅಂದರೇನು, ಸ್ವಭಾವ
ಅಂದರೇನು, ನನ್ನ ಸ್ವಭಾವವನ್ನು ನಿಯಂತ್ರಿಸುವ ಆ ಶಕ್ತಿ ಯಾವುದು, ಕೈಹಿಡಿದು ನಡೆಸುವವ ಮತ್ತು ಫಲ
ಕೊಡುವವ ಯಾರು, ಇತ್ಯಾದಿ ವಿಚಾರ ತಿಳಿದಾಗ ಅಲ್ಲಿ ಅಹಂಕಾರಕ್ಕೆ ಎಡೆಯಿಲ್ಲ.
ಇಲ್ಲಿ ನಮಗೆ ಒಂದು ಪ್ರಶ್ನೆ ಬರಬಹುದು. ಭಗವಂತ ನಮಗೆ ಶಿಕ್ಷೆ ಏಕೆ ಕೊಡುತ್ತಾನೆ ಎಂದು. ದೇವರು ನಮಗೆ ಶಿಕ್ಷೆ
ಕೊಡುವುದು ದ್ವೇಷದಿಂದಲ್ಲ, ಅದರ ಹಿಂದಿರುವುದು ಅಪಾರ-ಅನಂತವಾದ ಕಾರುಣ್ಯ. ತಾಯಿ ಮಗುವಿಗೆ ಶಿಕ್ಷೆ
ಕೊಡುವ ಹಿಂದಿರುವ ಕಾರುಣ್ಯ ಹೇಗೋ ಹಾಗೆ. ಜೀವನದಲ್ಲಿ ಬರುವ ದುಃಖ ದುರಿತಗಳಿಂದ ಜೀವ
ಪಾಕವಾಗುತ್ತದೆ. ಜೀವನದಲ್ಲಿ ನಮಗೆ ಬರುವ ತಾಪತ್ರಯಗಳ ತಾಪಕ್ಕೆ ನಾವು ಬೇಯಬೇಕು, ಬೆಂದು
ಪಕ್ವವಾಗಬೇಕು. ಜೀವನದಲ್ಲಿ ಕಷ್ಟವನ್ನು ನೋಡದವನು ಎಂದೂ ಬೆಳೆಯುವುದಿಲ್ಲ. ಅವರಿಗೆ ಇನ್ನೊಬ್ಬರ ಸುಖ-
ದುಃಖ ಅರ್ಥವಾಗುವುದಿಲ್ಲ. ಜೀವ ಪಕ್ವವಾಗುವುದೇ ಕಷ್ಟಗಳು ಬಂದಾಗ. ಇದು ಭಗವಂತ ನಮಗೆ ಕೊಡುವ
ಶಿಕ್ಷೆಯ ಹಿಂದಿರುವ ಕಾರುಣ್ಯ. ನಮ್ಮ ಪತನದ ಹಿಂದೆ ಒಂದು ಉದ್ಧಾರದ ಬೀಜವಿರುತ್ತದೆ. ದುಃಖದ ಹಿಂದೆ
ಸುಖದ ಬೀಜವಿರುತ್ತದೆ. ಹೀಗೆ ಶಾಸ್ತ್ರೀಯವಾಗಿ ನೋಡಿದಾಗ ಇಡೀ ಪ್ರಪಂಚದ ಹಿಂದೆ ಇರುವ ವಿಶ್ವಶಕ್ತಿ, ಮಹಾ
ಕಾರುಣ್ಯಮೂರ್ತಿಯಾಗಿ ನಮ್ಮನ್ನು ರಕ್ಷಿಸುತ್ತಿದೆ. ಎನ್ನುವ ಎಚ್ಚರ ಬರುತ್ತದೆ. ಏಳಲು ಬಲವಿಲ್ಲದ ಮಗುವನ್ನು
ತಾಯಿ ಹೇಗೆ ನೋಡಿಕೊಳ್ಳುತ್ತಾಳೇ, ಹಾಗೇ ಭಗವಂತ ನಮ್ಮನ್ನು ಪ್ರತೀಕ್ಷಣವೂ ರಕ್ಷಿಸುತ್ತಿದ್ದಾನೆ. ಇದು
ಅಧ್ಯಾತ್ಮ ಮಾರ್ಗದಲ್ಲಿ ನಿರಂತರ ಇರಬೇಕಾದ ಅಂತಃಪ್ರಜ್ಞೆ.
Bibek Debroy (1955–2024)The Bhagavad Gita
(14)
‘The atman19 doesn’t create ownership in the body, nor action. Nor does it
create a relation with the fruits of action. Nature20 acts.’