5.15

नादत्ते कस्यचित्पापं न चैव सुकृतं विभुः ।
अज्ञानेनावृतं ज्ञानं तेन मुह्यन्ति जन्तवः ॥
nādatte kasyacitpāpaṃ na caiva sukṛtaṃ vibhuḥ |
ajñānenāvṛtaṃ jñānaṃ tena muhyanti jantavaḥ ||
Swami Sivananda (1887–1963)Bhagavad Gita
15. The Lord accepts neither the demerit nor even the merit of any; knowledge is enveloped by ignorance, thereby beings are deluded.
Sri Vishwesha Tirtharu (1931–2019)Gitasaroddhara
5.14–5.18 · ಜ್ಞಾನಿಯ ಸಮದೃಷ್ಟಿ
ಜ್ಞಾನಿಯ ಸಮದೃಷ್ಟಿ ಪ್ರತಿಯೊಬ್ಬರ ವ್ಯವಹಾರಗಳ ಹಿನ್ನೆಲೆಯಲ್ಲಿಯೂವರಮಾತ್ಮನ ಶಕ್ತಿಯನ್ನು ಕಾಣುವ ಬ್ರಹ್ಮಜ್ಞಾನಿಗಳು ಪ್ರಪಂಚದ ದರ್ಶನ, ವ್ಯವಹಾರಗಳಲ್ಲಿಯೂ ದಿವ್ಯ ಆನಂದವನ್ನೇ ಅನುಭವಿಸಬಲ್ಲರು. ಪ್ರತಿಯೊಂದು ವಸ್ತುವಿನಲ್ಲೂ ಪರಮಾತ್ಮನ ದಿವ್ಯರೂಪದ ದರ್ಶನವನ್ನು ವಡೆಯುತ್ತಿರುವ ಅವರು ಈ ಪ್ರಾವಂಚಿಕ ಸಂಪರ್ಕದಿಂದ ವಿಚಲಿತರೂ ವಿಕಾರವಶರೂ ಆಗಲಾರರು. ವಿದ್ಯಾವಿನಯ ಸಂಪನ್ನರಾದ ಸಜ್ಜನರಲ್ಲಿಯೂ ಹಿಂಸಾಜೀವಿಗಳೆನಿಸಿದ ಅನಾಗರಿಕ ಕ್ರೂರ ಮನುಷ್ಯರಲ್ಲಿಯೂ ಹುದುಗಿದ ಭಗವತ್ತತ್ತ್ವವನ್ನು ಅವರು ಕಾಣಬಲ್ಲರು. ಈ ಪ್ರಪಂಚದಲ್ಲಿ ಎಷ್ಟೇ ಭೇದ, ವೈಚಿತ್ರ್ಯಗಳಿದ್ದರೂ ಈ ಜಗತ್ತಿನಲ್ಲಿ ಅಂತರ್ಯಾಮಿ ಎನಿಸಿದ ಜಗತ್ಫಚೋದಕ ಶಕ್ತಿಯಾದ ಪರಮಾತ್ಮನು ಎಲ್ಲ ಕಡೆಗಳಲ್ಲಿಯೂ ಏಕರೂವವಾಗಿ ನೆಲೆಸಿರುವನು. ಪ್ರವಂಚದಲ್ಲಿ ವ್ಯವಹರಿಸುವಾಗ ಭಗವಂತನ ಈ ಸಮತೆಯ ದರ್ಶನವಾದವನಿಗೆ ಬಾಹ್ಯ ಪ್ರಪಂಚದ ಏರುಪೇರುಗಳು ಮತ್ತು ವಿಕೃತಿ, ಸಂಸ್ಕೃತಿಗಳ ದರ್ಶನದಿಂದ ಯಾವುದೇ ಕ್ಟೋಭವಾಗುವುದಿಲ್ಲ. ಎಲ್ಲಿ ನೋಡಿದರೂ ಭಗವಂತನ ಚಿದಾನಂದಮಯರೂಪ ಮತ್ತು ಅವನ ಅದ್ಭುತ ಶಕ್ತಿಕ್ರಿಯಾವಿಲಾಸವಿಭ್ರಮಗಳನ್ನು ಕಾಣುವ ಯೋಗಿಯು ಪ್ರಪಂಚದ ಪ್ರತಿಯೊಂದು ಪದಾರ್ಥದಲ್ಲಿಯೂ ಆನಂದವನ್ನೇ ಅನುಭವಿಸುವನು. ಶ್ರೀಮಧ್ವಾಚಾಯರು ಸಂನ್ಯಾಸಿಯಾಗಲು ಹೊರಟಾಗ ಎದುರಿಗೆ ಇದ್ದಹೊಲ ಮರಗಳ ಕಡೆಗೂ ನಮಸ್ಕರಿಸುತ್ತಿದ್ದುದನ್ನು ಕಂಡು ಅಚ್ಚರಿಗೊಂಡ ಅವರ ಬಂಧುಗಳು ಇದೇನು ನಿನ್ನ ಈ ವಿಚಿತ್ರ ವ್ಯವಹಾರವೆಂದು ಕೇಳಲು, ನನ್ನ ಪ್ರೀತಿಯ ವಸ್ತುವು ಎಲ್ಲಕಡೆಗಳಲ್ಲಿಯೂ ಗೋಚರವಾಗುತ್ತಿರುವಾಗ ಅದಕ್ಕೆ ತಲೆಬಾಗದೆ ಹೇಗೆ ಇರಲಿ ಎಂದರಂತೆ. ಹೀಗೆ ಜ್ಞಾನಿಗಳಿಗೆ ಎಲ್ಲಿನೋಡಿದರೂ ಮಂಗಲಮಯದರ್ಶನ ಹಾಗೂ ನಿತ್ಯಾನಂದದ ಅನುಭವವೇ ದೊರೆಯು ್ರರವುದರಿಂದ ವೈಷಮ್ಯಪೂರಿತವಾದ ರುದ್ರಬೀಭತ್ತವೆನಿಸಿದ ಈಈ ಜಗತ್ತಿಗೆ ಅವರು ಹೆದರುವುದಿಲ್ಲ. ಜಗತ್ತಿನ ಎಲ್ಲ ಪದಾರ್ಥಗಳಲ್ಲಿಯೂ ಏಕರೂಪವಾಗಿ ಭಗವಚ್ಛಕ್ತಿ ಪ್ರವಹಿಸಿಕೊಂಡಿದೆ. ವಿದ್ಯುಚ್ಛಕ್ತಿಯು ಎಲ್ಲ ಕಡೆಗಳಲ್ಲಿಯೂ ಒಂದೇ ರೀತಿಯಿಂದ ಹರಿಯುತ್ತಿದ್ದರೂ ಬಲ್ಬ್‌ಗಳಿಗನುಗುಣವಾಗಿ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಅದು ಅಭಿವ್ಯಕ್ತವಾಗುವಂತೆ, ಭಗವಂತನು ಎಲ್ಲರಲ್ಲಿಯೂ ಏಕಪ್ರಕಾರವಾಗಿ ಅನುಸೂತ್ಯನಾಗಿದ್ದರೂ ಅಧಿಷ್ಠಾನವಾದ ಪದಾರ್ಥ ಹಾಗೂ ವ್ಯಕ್ತಿಯ ಸ್ವರೂಪ, ಯೋಗ್ಯತೆಗಳಿಗನುಸಾರವಾಗಿ ಪ್ರಕಟನಾಗುತ್ತಿರುವನು. ದುಷ್ಠರಲ್ಲಿ ಭಗವಂತನ ಸನ್ನಿಧಾನವಿದ್ದರೂ ಅವರ ದೌಷ್ಟ್ಯ, ದರ್ಪಗಳಲ್ಲಿ ಅಡಗಿದ ಭಗವತ್ತತ್ತ್ವವನ್ನು ಕಾಣುವುದು ಸಾಮಾನ್ಯ ಜನರಿಗೆ ಸಾಧ್ಯವಾಗದ ಕಾರ್ಯವಾಗಿದ್ದರೆ ದುಷ್ಟ ಶಿಷ್ಟರಿಬ್ಬರಲ್ಲಿಯೂ ಭಗವಂತನ ಹಾಗೂ ಅವನ ಏಕತ್ವದ ದರ್ಶನವನ್ನು ಪಡೆಯುವ ಭಾಗ್ಯ ಜ್ಞಾನಿಗಳದ್ದಾಗಿದೆ. ಪರಮಾತ್ಮನು ಎಲ್ಲರಲ್ಲಿಯೂ ಒಂದೇರೀತಿಯಿಂದ ವ್ಯಾಪ್ತನಾಗಿದ್ದರೂ ಆಯಾಯ ವ್ಯಕ್ತಿಗಳ ಸ್ವಭಾವ ಮತ್ತು ಮೂಲಭೂತ ಅಭಿರುಚಿಗಳನ್ನನುಸರಿಸಿ ಜಗತ್ತಿನಲ್ಲಿ ದುಷ್ಟ ಶಿಷ್ಟರ ವಿಭಾಗ ವ್ಯವಸ್ಥೆಯಾಗಿದೆ. ಪರಮಾತ್ಮನು ಎಲ್ಲ ಕಡೆ ಇದ್ದಾನೆ ಎಂಬುದರಿಂದ ಸಜ್ಜನರು, ದುರ್ಜನರು ಎಲ್ಲರೂ ಸಮಾನರು ಎಂಬುದಾಗಿ ಸಮತೆಯ ಅರ್ಥವಿಪರ್ಯಾಸವನ್ನು ನಾವುಮಾಡಬಾರದು. ಪಂಡಿತಾಃ ಸಮದರ್ಶಿನಃ ॥ ಈ ವಾಕ್ಯವನ್ನು ನಾನಾ ರೀತಿಯಿಂದ ವಿಪರೀತವಾಗಿ ಎಳೆಯುವ ಪ್ರಯತ್ನವು ನಡೆದಿದೆ. ಪ್ರತಿಯೊಬ್ಬನಿಗೂ ಅವನ ಸದ್ಗುಣ, ಸತ್ಯಾರ್ಯಗಳಿಗನುಗುಣವಾಗಿ ಗೌರವ ಪುರಸ್ಕಾರಗಳು ಲಭಿಸುತ್ತಿದ್ದರೆ ಆ ಸಮಾಜವು ಹಿತಕರವಾದ ರೀತಿಯಲ್ಲಿ ಬೆಳೆಯಬಹುದು. ಸಜ್ಜನಿಕೆ. ಹಾಗೂ ದೌರ್ಜನ್ಯಗಳಲ್ಲಿ ಯಾವ ಭೇದಭಾವವನ್ನೂ ಇಟ್ಟುಕೊಳ್ಳದೆ ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಬೇಕೆನ್ನುವ ಸಮತೆಯನ್ನು ಯಾರೂ ಅಪೇಕ್ಷಿಸಲಾರರು. ಅದರಂತೆ ಜ್ಞಾನಿಗಳೂ ವಾಮರರೂ ಕ್ರಿಯಾಶೀಲರೂ ಅಲಸರೂ ಸೌಜನ್ಯಸದ್ಗುಣ ಶಾಲಿಗಳೂ ದುರ್ನಡತೆಯವರೂ ಈ ಎಲ್ಲರಲ್ಲಿಯೂ ಭಗವಂತನು ನೆಲೆಸಿದ್ದರೂ ಅವರವರ ಅಂತಸ್ತಿಗೆ ಅನುಗುಣವಾಗಿ ಸಮಾಜದಲ್ಲಿ ಸ್ಥಾನಮಾನಗಳನ್ನು ನೀಡುವುದೇ ನಿಜವಾದಸಮತೆ ಎನಿಸುವುದು. ಚಿಕ್ಕಮಕ್ಕಳು ಹಾಗೂ ದೊಡ್ಡವರಿಗೆ ಒಂದೇರೀತಿಯಾಗಿ ಆಹಾರವಿತರಣೆಯನ್ನು ಮಾಡಿದಲ್ಲಿ ಅದು ಸಮತೆ ಎನಿಸಲಾರದು. ಜ್ಞಾನ, ಸದ್ಗುಣ, ಸತ್ಯಾರ್ಯಗಳಿಗನುಸಾರವಾಗಿ ಮಾಡುವತರತಮ ಭಾವವೇನಿಜವಾದ ಸಾಮ್ಯದೃಷ್ಟಿಯಾಗುವುದು. ವ್ಯಕ್ತಿಯ ದುಡಿತ, ಸೇವೆಗಳಿಗೆ ಅನುಸಾರವಾಗಿ ಪ್ರತಿಫಲದಲ್ಲಿ ಹೆಚ್ಚು ಕಡಿಮೆ ಮಾಡಿದರೆ ವೈಷಮ್ಯದ ಆರೋಪವನ್ನು ಯಾರೂಮಾಡಲಾರರು. ಅದರ ಬದಲಾಗಿ ಅತ್ಯಂತ ಬುದ್ಧಿವಂತನಾದ ವಿದ್ಯಾರ್ಥಿಯನ್ನು ಕಡಿಮೆ ಅಂಕವನ್ನು ವಡೆದ ವಿದ್ಯಾರ್ಥಿಯೊಂದಿಗೆಸಮವಾಗಿ ನಡೆಸಿದರೆ ಅದನ್ನೇ ವೈಷಮ್ಯ ಪಕ್ಷಪಾತವೆಂದು ಕರೆಯಲಾಗುತ್ತದೆ. ದೇಶದಲ್ಲಿ ಸುಜನ-ದುರ್ಜನ ವಿವೇಕವನ್ನು ಮಾಡದೆ ರಾಜ್ಯಭಾರವನ್ನು ನಡೆಸಿದಲ್ಲಿ ಅದು ಅರಾಜಕತೆಗೆ ಆಹ್ವಾನವಿತ್ತಂತೆ. ಈ ಎಲ್ಲ ವಿಚಾರವನ್ನು ಗಮನಿಸಿಕೊಂಡು ಗೀತೆಯ ""ಸಮದರ್ಶಿನಃ' ಎಂಬುದರ ಭಾವವನ್ನು ನಾವು ತಿಳಿದುಕೊಳ್ಳಬೇಕು. ಶ್ರೇಷ್ಠ ವ್ಯಕ್ತಿಗಳಲ್ಲಿಯೂ, ಕನಿಷ್ಠ ಮನುಷ್ಯರಲ್ಲಿಯೂ ಸುಜನರಲ್ಲಿಯೂ ದುರ್ಜನರಲ್ಲಿಯೂ ಪರಮಾತ್ಮ ನೇನೋವಏಕರೂಪದಲ್ಲಿ ನೆಲೆಸಿರುವನು. ಬೇರೆ ಬೇರೆ ಯಂತ್ರಗಳಲ್ಲಿ ವಿದ್ಯುತ್ತು ಏಕರೂಪವಾಗಿ ಹರಿಯುತ್ತಿದ್ದರೂ ಅವುಗಳ ಸ್ವಭಾವ ರಚನೆಗಳಿಗೆ ಅನುಗುಣವಾಗಿ ಅವುಗಳಿಂದ ಭಿನ್ನ ಭಿನ್ನಕಾರ್ಯಗಳು ನಡೆಯುತ್ತವೆ. ವಿದ್ಯುತ್ತು ಏಕರೂಪವಾಗಿ ಹರಿಯುತ್ತಿದ್ದರೂ ಎಲ್ಲ ಯಂತ್ರಗಳೂ ಒಂದೇಕಾರ್ಯವನ್ನು ಮಾಡಲಾರವು, ಒಂದೇ ರೀತಿಯಲ್ಲಿ ಮಾಡಲಾರವು. ಅದರಂತೆ ಜೀವರ ಸ್ವಭಾವಗಳಿಗನುಸಾರವಾಗಿ ಈ ಜಗತ್ತಿನಲ್ಲಿ ವೃತ್ಯಾಸವು ಅನಿವಾರ್ಯವೇ ಆಗಿದೆ. ಪರಮಾತ್ಮ: ನು ಜಗತ್ತಿನಲ್ಲಿ ವ್ಯಾಪಿಸಿದ್ದ ರೂಸ್ವಭಾವ ಗುಣಗಳ ಆಧಾರದಲ್ಲಿರುವ ಈ ಲೋಕಪ್ರವೃತ್ತಿಯನ್ನು ಬದಲಿಸಲಾರನು. ಸ್ವಭಾವಸ್ತು ಪ್ರವರ್ತತೇ । ಪ್ರತಿಯೊಂದು ಲೋಕವ್ಯವಹಾರಕ್ಕೂ ಸ್ವಯಂಭುವಾದ ಪರಮಾತ್ಮ ಮತ್ತು ವ್ಯಕ್ತಿಯ ಮೂಲಭೂತ ಸ್ವಭಾವ ಇವೆರಡೂ ಕಾರಣವಾಗಿರುವುದರಿಂದ ವೈಷಮ್ಯತಕ್ಟರಹಿತನಾದ ಭಗವಂತನು ಇದ್ದೂ ಜಗತ್ತಿನಲ್ಲಿ ಹೀಗೇಕೆ ಒಬ್ಬೊಬ್ಬರು. ಒಂದೊಂದುರೀತಿಯಿಂದ ವರ್ತಿಸುತ್ತಿದ್ದಾ ರೆಂದು ಆಕ್ಬೇಪಿಸಲು ಅವಕಾಶವಿಲ್ಲ. ತತ್ರ ತತ್ರ ಸ್ಥಿತೋ ವಿಷ್ಣು ಸ್ಪತ್ತಚ್ಛಕ್ತಿಃ ಪ್ರಬೋಧಯನ್‌ ॥ ಪ್ರತಿಯೊಂದು ಜಡ-ಚೇತನದಲ್ಲೂ ಇದ್ದು ಅವರವರ ಸ್ವಭಾವ ಹಾಗೂ ಶಕ್ತಿಗಳನ್ನು ಪ್ರಬೋಧನೆ ಮಾಡುವುದೇಪರಮಾತ್ಮನ ಸೃಷ್ಟಿಯ ವಿಧಾನವಾಗಿದೆ. ಲೋಕದಲ್ಲಿಎಲ್ಲಗಿಡಗಳಿಗೂ ಸರಿಯಾದನೀರು, ಗೊಬ್ಬರಗಳನ್ನು ಹಾಕಿದರೂ ಅವುಗಳ ಬೀಜದಮೂಲ ಸ್ವಭಾವಕ್ಕನುಗುಣವಾಗಿ ಹಣ್ಣುಗಳ ರಸ-ರುಚಿಗಳಲ್ಲಿ ಭೇದವು ಉಂಟಾದಲ್ಲಿ ತೋಟಗಾರನು ಅದಕ್ಕೆ ಹೊಣೆಗಾರನಾಗುವನೆ? ಅದರಂತೆ ಸೃಷ್ಟಿಯ ಈ ವೈವಿಧ್ಯ ವಿಭಿನ್ನತೆಗಳಿಗೆ ಜೀವ, ಜಡರ ಮೂಲಭೂತ ವ್ಯಕ್ತಿತ್ವ ಅಭಿರುಚಿಗಳೇ ಹಿನ್ನೆಲೆಯಾಗಿರುವುದರಿಂದ ಭಗವಂತನನ್ನೂ ಅವನ ಸಮತೆಯನ್ನೂ ನಾವು ದೂಷಿಸಲಾರೆವು. ನಾದತ್ತೇ ಕಸ್ಯಚಿತ್‌ ಪಾಪಂನ ಚೈವ ಸುಕೃತಂ ವಿಭುಃ ಸರ್ವಕರ್ತನೂ ಸರ್ವವ್ಯಾಪಿಯೂ ಆದ ವರಮಾತ್ಮನು ಒಂದು ನೀತಿ, ನಿಯಮವನ್ನು ಆಧರಿಸಿಯೇ ಜಗತ್ತಿನ ವ್ಯವಹಾರವನ್ನು ನಡೆಸುವುದರಿಂದ ಯಾವ ವೈಷಮ್ಯ ದೋಷಕ್ಕೂ ಆತನು ಪಾತ್ರನಾಗಲಾರ. ಮಾನವರಸತ್‌, ಅಸತ್‌ ಕಾರ್ಯಗಳಿಂದ ಆಗುವ ಸುಕೃತ, ದುಷ್ಕತ ಲೇಪವೂ ಅವನಿಗೆ ಇರುವುದಿಲ್ಲ. ಅದರಂತೆ ಅಧಿಷ್ಠುನವಾದ ಜೀವ-ಜಡರಲ್ಲಿರುವ ಮೂಲಭೂತ ಗುಣದೋಷಗಳ ಪರಿಣಾಮ ಆಘಾತಗಳು ಅವುಗಳಲ್ಲಿ ನೆಲೆಸಿರುವ ಪರಮಾತ್ಛನಿಗೆ ಸ್ವಲ್ಪವೂ ಆಗುವುದಿಲ್ಲ. ಅವನು ಎಂದೆಂದಿಗೂ ವರಿಶುದ್ಧನೂ ಗುಣಪೂರ್ಣನೂ ಆಗಿರುವನು. ವಸ್ತುಭೇದದಿಂದ ಅವನ ಅಭಿವ್ಯಕ್ತಿಯ ತಾರತಮ್ಯವಿರಬಹುದಾದರೂ ಅವನ ಸ್ವರೂಪಕ್ಕೆ ಯಾವ ಚ್ಯತಿ, ವಿಕಾರಗಳೂ ಬಾಹ್ಯ ಪದಾರ್ಥಗಳ ಸಂಪರ್ಕದಿಂದ ಉಂಟಾಗಲಾರವು. ಆದುದರಿಂದಲೇ ಅಸಂಗನೆಂದು ಪರಮಾತ್ಮನನ್ನು ಉಪನಿಷತ್ತುಗಳು ವರ್ಣಿಸಿರುತ್ತವೆ. ವಿಷಮೇಷ್ಟಪಿ ಜೀವೇಷು ಸಮೋ ವಿಷ್ಣು ಸದೈವ ತು। -ಗೀತಾತಾತ್ಪರ್ಯ ಸರ್ವೋತ್ತಮ ಚೈತನ್ಯವೆನಿಸಿದ ಪರಮಾತ್ಮನು ವಿಚಿತ್ರ ವಿಭಿನ್ನ ಪ್ರವೃತ್ತಿಯ ಈ ಎಲ್ಲ ಜೀವ-ಜಡ ಪ್ರಪಂಚದಲ್ಲಿ ಅನುಸ್ಯೂತನಾಗಿ ನೆಲೆಸಿದ್ದರೂ ಅವುಗಳ ಸಂಪರ್ಕದಿಂದ ಯಾವುದೇವಿಕೃತಿ, ವಿಷಮತೆಗಳನ್ನು ಅವನು ಪಡೆದಿರುವುದಿಲ್ಲ. ಅವನು ಎಂದೆಂದಿಗೂ ನಿರ್ವಿಕಾರನೂ ಏಕರೂಪನೂ ಆಗಿರುವನು. ಬಾಹ್ಯವಸ್ತುವನ್ನು ಅವಲೋಕಿಸುವುದರ ಜೊತೆಗೆ ಈ ನಿರ್ವಿಕಾರವಾದ ಪರತತ್ತ್ವದ ದರ್ಶನವಾಗುವುದರಿಂದಲೇ ಪ್ರಪಂಚದ ಮಧ್ಯದಲ್ಲಿದ್ದರೂ ಜ್ಞಾನಿಯು ಈ ಅನುಪಮ ಆನಂದವನ್ನು ಸವಿಯುವನು.
Bannanje Govindacharya (1936–2020)Bhagavad Gita Pravachana
ನ ಆದತ್ತೇ ಕಸ್ಯಚಿತ್‌ ಪಾಪಮ್‌ ನ ಚ ಏವ ಸುಕೃತಮ್‌ ವಿಭುಃ | ಅಜ್ಞಾನೇನ ಆವೃತಮ್‌ ಜ್ಞಾನಮ್‌ ತೇನ ಮುಹ್ಯಂತಿ ಜಂತವಃ -ಜಡಕ್ಕಿಂತ ಮಿಗಿಲೆನಿಸಿದ ಜೀವ ಯಾರ ಪಾಪವನ್ನೂ ತೊಡೆಯಲಾರ; ಪುಣ್ಯವನ್ನು ಕೂಡಾ. [ಯಾವ ಜೀವಿಯ ಪಾಪ-ಪುಣ್ಯಗಳ ನಂಟೂ ಭಗವಂತನಿಗಿಲ್ಲ.]ಅರಿವಿಗೆ ಅವಿದ್ಯೆಯ ಮುಸುಕಿದೆ. ಅದರಿಂದ ಜನರು ಮೈಮರೆಯುತ್ತಾರೆ. ಈ ಶ್ಲೋಕವನ್ನು 'ಜೀವದ' ಪರವಾಗಿ ಮತ್ತು 'ಭಗವಂತ'ನ ಪರವಾಗಿ ಎರಡು ರೂಪದಲ್ಲಿ ನೋಡಬಹುದು. “ಜೀವದ' ಪರದಲ್ಲಿ ನೋಡಿದಾಗ ವಿಭುಃ ಎನ್ನುವ ಪದ ವಿಶಿಷ್ಟ, ವೈವಿಧ್ಯ, ವಿವಿಧ ಇತ್ಯಾದಿ ಅರ್ಥವನ್ನು ಕೊಡುತ್ತದೆ. ಜಡಕ್ಕಿಂತ ವಿಶಿಷ್ಟನಾಗಿ-ಇಚ್ಛೆ, ಯೋಚನೆ, ಜ್ಞಾನ ಇರುವ ಜೀವ ವಿಶಿಷ್ಟ. ಬೇರೆಬೇರೆ ಜನ್ಮದಲ್ಲಿ ಬೇರೆಬೇರೆ ಜೀವಿಯಾಗಿ. ಹುಟ್ಟಬಹುದಾದ ಜೀವ, ಒಂದು ಜನ್ಮದಲ್ಲೇ ಅನೇಕ ವೈವಿಧ್ಯತೆಯನ್ನು ಕಾಣಬಹುದು. ಉದಾಹರಣೆಗೆ: ಮನುಷ್ಯನಾದವನು ಶ್ರೀಮಂತನಾಗಿ Dad ಸುಪ್ಪತ್ತಿಗೆಯಲ್ಲಿ ಬದುಕಬಹುದು, ದಾರಿದ್ರ್ಯದಲ್ಲಿರಬಹುದು. ದೊಡ್ಡ ವಿದ್ವಾಂಸನಾಗಿ ಬದುಕಬಹುದು ಅಥವಾ ಏನೂ ಅರಿವಿಲ್ಲದ ಮೂಢನಾಗಿ ಬದುಕಬಹುದು. ಈ ರೀತಿಯ ವೈವಿದ್ಯತೆ ಜೀವದಲ್ಲಿದೆ-ಅದಕ್ಕಾಗಿ ಜೀವ ವಿಭುಃ. ಒಂದೇ ಜನ್ಮದಲ್ಲಿ ಹುಟ್ಟಿ ಸಾಯುವ ತನಕ ಅನೇಕ ಮಜಲುಗಳಲ್ಲಿ ಅನೇಕ ವೈವಿಧ್ಯತೆಯನ್ನು ನಾವು ಅನುಭವಿಸಬಹುದು. ಶ್ರೀಮಂತನಾಗಿದ್ದವನು ಎಲ್ಲವನ್ನೂ ಕಳೆದುಕೊಂಡು ದಾರಿದ್ರ್ಯವನ್ನು ಪಡೆಯಬಹುದು. ಹೀಗಾದಾಗ ನಾವು ಅದರ ಹಿಂದೆ ಏನೇನೋ ಕಾರಣಗಳನ್ನು ಹುಡುಕುತ್ತೇವೆ. ಸಾಮಾನ್ಯವಾಗಿ ನಾವು ಮಾಡುವ ಮೊದಲ ಕೆಲಸ ಯಾವುದೋ ಜ್ಯೋತಿಷಿಗಳಲ್ಲಿ ಹೋಗಿ ಪ್ರಶ್ನೆ ಹಾಕುವುದು. ಹಾಗೆ ಕೇಳಿದಾಗ ಅವರು ಯಾರೋ ವಾಮಾಚಾರ(॥/॥॥0೧01911) ಮಾಡಿದ್ದರಿಂದ ನೀನು ನಷ್ಟ ಅನುಭವಿಸುತ್ತಿರುವುದು ಇತ್ಯಾದಿಯಾಗಿ ಹೇಳುತ್ತಾರೆ. ಆದರೆ ಇಲ್ಲಿ ಕೃಷ್ಣ ಹೇಳುತ್ತಾನೆ: "ಯಾರ ಪಾಪವನ್ನೂ ನೀನು ತೆಗೆದುಕೊಳ್ಳಲು ಬರುವುದಿಲ್ಲ ಹಾಗೂ ಇನ್ನೊಬ್ಬರ ಪುಣ್ಯ ನಮಗೆ ಸಿಗುವುದಿಲ್ಲ. ನಾವು ಏನು ಅನುಭವಿಸುತ್ತೇವೇ ಅದು ನಾವು ಮಾಡಿದ ಕರ್ಮಫಲ” ಎಂದು. ಈ ಕಾರಣದಿಂದ ಇನ್ನೊಬ್ಬರಿಂದ ನಾವು ಹಾಳಾದೆವು ಎಂದು ತಿಳಿಯುವುದು ತಪ್ಪು ಎನ್ನುವುದು ಇಲ್ಲಿ ಸ್ಪಷ್ಟ ಹಾಗಿದ್ದರೆ ವಾಮಾಚಾರ ಇತ್ಯಾದಿ ಮಾಡಲು ಬರುವುದಿಲ್ಲವೋ, ಅದರಿಂದ ತೊಂದರೆ ಆಗುವುದು ಸುಳ್ಳೋ, ಎಂದರೆ -ನಮ್ಮ ಸುಕೃತದ ಫಲ ನಮ್ಮನ್ನು ರಕ್ಷಣೆ ಮಾಡುವಷ್ಟು ಕಾಲ ಯಾವ ವಾಮಾಚಾರವೂ ನಮ್ಮನ್ನು ಏನೂ ಮಾಡುವುದಿಲ್ಲ. ಇದನ್ನು ಜ್ಯೋತಿಷಿಗಳು "ನಿಮ್ಮ ಗ್ರಹಗತಿ ಚೆನ್ನಾಗಿತ್ತು ಆದ್ದರಿಂದ ಈವರೆಗೆ ಏನೂ ಆಗಿಲ್ಲ, ಆದರೆ ಈಗ ಅದು ಕೆಟ್ಟಿದೆ" ಇತ್ಯಾದಿಯಾಗಿ ಹೇಳುತ್ತಾರೆ. ಇಲ್ಲಿ ಗ್ರಹಗತಿ ಕೆಟ್ಟಿದೆ ಎಂದರೆ ನಮ್ಮ ಪಾಪದ ಫಲ ಪಕ್ವವಾಗಿದೆ ಎಂದರ್ಥ. ಆದ್ದರಿಂದ ಯಾರು ನಮ್ಮ ಮೇಲೆ ಕೃತ್ರಿಮ ಪ್ರಯೋಗ ಮಾಡಿದರೂ, ಅದರಿಂದ ನಮಗೆ ಅನಿಷ್ಠವಾಗಬೇಕಾದರೆ ನಾವು ಹಿಂದೆ ಅನಿಷ್ಠಕರ್ಮ ಮಾಡಿರಬೇಕು. ಅದರ ಫಲವಾಗಿ ಇಲ್ಲಿ ನಮಗೆ ಅದು ಅನುಭವಕ್ಕೆ ಬರುತ್ತದೆ. ನಮ್ಮ ದೋಷಗಳು, ನಮ್ಮ ಬಡತನ, ನಮ್ಮ ಅಜ್ಞಾನ, ರೋಗ-ರುಜಿನ ಇತ್ಯಾದಿಗಳಿಗೆ ಇನ್ನೊಬ್ಬರನ್ನು ತೋರಿಸುವುದು, ಅವರಿಂದ ಹೀಗಾಯ್ತು ಎನ್ನುವುದು ತಪ್ಪು. ನಮಗೆ ರೋಗ ಉಲ್ಬಣವಾಗಿ ಅದನ್ನು ಅನುಭವಿಸುವ ಪ್ರರಾಬ್ಧಕರ್ಮ ಇದ್ದರೆ ಅದನ್ನು ಯಾರಿಂದಲೂ ತಪ್ಪಿಸಲು ಬರುವುದಿಲ್ಲ. ಇದಕ್ಕಾಗಿ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ತಪ್ಪು. ಯಾರೋ ಮಾಡಿದ ಪಾಪಕರ್ಮದ ಫಲವನ್ನು ನಾನು ಅನುಭವಿಸುವುದಿಲ್ಲ. ನಾನು ಮಾಡಿದ ಪಾಪ ಕರ್ಮದ ಫಲವನ್ನೇ ನಾನು ಅನುಭವಿಸುವುದು. ಭಕ್ತನ ಪರ ಪುರೋಹಿತ ಮಾಡುವ ಕರ್ಮ ಭಕ್ತನಿಗೆ ಬರುತ್ತದೆ; ತಂದೆಯ ಪರ ಮಗ ಮಾಡುವ ಕರ್ಮ ತಂದೆಗೆ ಬರಬಹುದು... ಇದು. ಒಬ್ಬರ ಪರ ಇನ್ನೊಬ್ಬರು... ಮಾಡಿದ ಕರ್ಮ. ಈ ವಿಚಾರವನ್ನು BR BRDBBITT (Exception) ನಾವು ಅನುಭವಿಸುವುದು ನಾವೇ ಮಾಡಿದ ಕರ್ಮಫಲವೇ ಹೊರತು ಇನ್ನೊಬ್ಬರದ್ದಲ್ಲ. ಜನರಿಗೆ ಸರಿಯಾದ ಅರಿವಿಲ್ಲದ ಕಾರಣ 'ಇನ್ನೊಬ್ಬರಿಂದ ನನಗೆ ತೊಂದರೆ ಆಯ್ತು' ಎಂದು ತಿಳಿಯುತ್ತಾರೆ. ಇದಕ್ಕೆಲ್ಲಾ ಮೂಲಕಾರಣ ಕರ್ಮದ ಬಗ್ಗೆ, ಜೀವದಬಗ್ಗೆ, ಪರಮಾತ್ಮನ ಬಗ್ಗೆ ಸರಿಯಾದ ಅರಿವು ಇಲ್ಲದಿರುವುದು. ಜ್ಞಾನವೆನ್ನುವುದು ಅಜ್ಞಾನದ ಮುಸುಕಿನಲ್ಲಿ ಮುಚ್ಚಿಹೋಗಿ ಅದರಿಂದ ತಪ್ಪು ತಿಳುವಳಿಕೆ ಹಾಗೂ ಮೋಹದ ಭ್ರಾಂತಿ ನಮ್ಮನ್ನು ಆವರಿಸಿರುವುದು. ಈ ಶ್ಲೋಕದ ಇನ್ನೊಂದು ಮುಖ ನೋಡಿದರೆ 'ವಿಭುಃಃ ಅಂದರೆ ಸರ್ವಸಮರ್ಥನಾದ, ಸರ್ವಗತನಾದ ಭಗವಂತ. ಈ ಅರ್ಥದಲ್ಲಿ ನೋಡಿದಾಗ: ಭಗವಂತನಿಗೆ ಯಾವ ಕರ್ಮದ ಲೇಪವೂ ಇಲ್ಲ. ಆತ ಜೀವ ಸ್ವರೂಪದಲ್ಲಿನ ಅಂತರವನ್ನು ಗುರುತಿಸಿ ಅದಕ್ಕೆ ತಕ್ಕಂತೆಯೇ ಬೆಳವಣಿಗೆಯನ್ನು ಕೊಡುತ್ತಾನೆ. ಆತ ಎಂದೂ ಪಕ್ಷಪಾತಿ ಅಲ್ಲ. (Equal treatment of unequal is discrimination). ಪಾಪ-ಪುಣ್ಯ ಎರಡರ ಲೇಪವೂ ಆತನಿಗಿಲ್ಲ. ಆದರೆ ಭಗವಂತನ ಈ ಕರ್ಮಸಿದ್ಧಾಂತ, ಆತನ ಸರ್ವಸಮರ್ಥತೆ, ಮತ್ತು ಅವನ ನಿರ್ಲಿಪ್ತತೆ, ಇದರ ಅರಿವು ಬಹಳ ಜನಕ್ಕೆ ತಿಳದಿಲ್ಲ-ಆದ್ದರಿಂದ ಭಗವಂತನ ಬಗೆಗೆ ಗೊಂದಲಕ್ಕೊಳಗಾಗುತ್ತಾರೆ. 'ನಮಗೆ ಸ್ವತಂತ್ರವಾದ ಕರ್ತ್ಯತ್ವವಿಲ್ಲ, ನಾವು ಆತನ ಅಧೀನ' ಎನ್ನುವ ವಿಚಾರದಲ್ಲಿ ನಾವು ಸದಾ ಗೊಂದಲಕ್ಕೊಳಗಾಗುತ್ತೇವೆ. ಎಲ್ಲವನ್ನೂ ಭಗವಂತನೇ ಮಾಡುವುದಾದರೆ ಪಾಪ ಕರ್ಮಗಳು ನಮಗೇಕೆ ಅನ್ನುವ ಪ್ರಶ್ನೆ ಹೆಚ್ಚಿನವರನ್ನು ಕಾಡುತ್ತದೆ. ಎಷ್ಟು ಅಧ್ಯಯನ ಮಾಡಿದರೂ ಈ ಕರ್ಮಸಿದ್ಧಾಂತ ಅರ್ಥವಾಗುವುದಿಲ್ಲ. ಇದಕ್ಕೆ ಕಾರಣ ಅರಿವಿನ ಅಭಾವ. ಈ ಅರಿವು ಕೇವಲ ಓದುವುದರಿಂದ ಬರುವುದಿಲ್ಲ. ಅದನ್ನು ಗ್ರಹಿಸಿ-ಗ್ರಹಿಸಿ, ಅನುಭವಿಸಿ ಮನವರಿಕೆ ಮಾಡಿಕೊಳ್ಳಬೇಕು. ಇದನ್ನು ಕೃಷ್ಣ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾನೆ.
Bibek Debroy (1955–2024)The Bhagavad Gita
(15) ‘The omnipresent lord doesn’t accept the sins or the good deeds of anybody. Knowledge is shrouded in ignorance. That is why beings are deluded.’