5.17

तद्बुद्धयस्तदात्मानस्तन्निष्ठास्तत्परायणाः ।
गच्छन्त्यपुनरावृत्तिं ज्ञाननिर्धूतकल्मषाः ॥
tadbuddhayastadātmānastanniṣṭhāstatparāyaṇāḥ |
gacchantyapunarāvṛttiṃ jñānanirdhūtakalmaṣāḥ ||
Swami Sivananda (1887–1963)Bhagavad Gita
17. Their intellect absorbed in That, their self being That; established in That, with That as their supreme goal, they go whence there is no return, their sins dispelled by knowledge.
Sri Vishwesha Tirtharu (1931–2019)Gitasaroddhara
5.14–5.18 · ಜ್ಞಾನಿಯ ಸಮದೃಷ್ಟಿ
ಜ್ಞಾನಿಯ ಸಮದೃಷ್ಟಿ ಪ್ರತಿಯೊಬ್ಬರ ವ್ಯವಹಾರಗಳ ಹಿನ್ನೆಲೆಯಲ್ಲಿಯೂವರಮಾತ್ಮನ ಶಕ್ತಿಯನ್ನು ಕಾಣುವ ಬ್ರಹ್ಮಜ್ಞಾನಿಗಳು ಪ್ರಪಂಚದ ದರ್ಶನ, ವ್ಯವಹಾರಗಳಲ್ಲಿಯೂ ದಿವ್ಯ ಆನಂದವನ್ನೇ ಅನುಭವಿಸಬಲ್ಲರು. ಪ್ರತಿಯೊಂದು ವಸ್ತುವಿನಲ್ಲೂ ಪರಮಾತ್ಮನ ದಿವ್ಯರೂಪದ ದರ್ಶನವನ್ನು ವಡೆಯುತ್ತಿರುವ ಅವರು ಈ ಪ್ರಾವಂಚಿಕ ಸಂಪರ್ಕದಿಂದ ವಿಚಲಿತರೂ ವಿಕಾರವಶರೂ ಆಗಲಾರರು. ವಿದ್ಯಾವಿನಯ ಸಂಪನ್ನರಾದ ಸಜ್ಜನರಲ್ಲಿಯೂ ಹಿಂಸಾಜೀವಿಗಳೆನಿಸಿದ ಅನಾಗರಿಕ ಕ್ರೂರ ಮನುಷ್ಯರಲ್ಲಿಯೂ ಹುದುಗಿದ ಭಗವತ್ತತ್ತ್ವವನ್ನು ಅವರು ಕಾಣಬಲ್ಲರು. ಈ ಪ್ರಪಂಚದಲ್ಲಿ ಎಷ್ಟೇ ಭೇದ, ವೈಚಿತ್ರ್ಯಗಳಿದ್ದರೂ ಈ ಜಗತ್ತಿನಲ್ಲಿ ಅಂತರ್ಯಾಮಿ ಎನಿಸಿದ ಜಗತ್ಫಚೋದಕ ಶಕ್ತಿಯಾದ ಪರಮಾತ್ಮನು ಎಲ್ಲ ಕಡೆಗಳಲ್ಲಿಯೂ ಏಕರೂವವಾಗಿ ನೆಲೆಸಿರುವನು. ಪ್ರವಂಚದಲ್ಲಿ ವ್ಯವಹರಿಸುವಾಗ ಭಗವಂತನ ಈ ಸಮತೆಯ ದರ್ಶನವಾದವನಿಗೆ ಬಾಹ್ಯ ಪ್ರಪಂಚದ ಏರುಪೇರುಗಳು ಮತ್ತು ವಿಕೃತಿ, ಸಂಸ್ಕೃತಿಗಳ ದರ್ಶನದಿಂದ ಯಾವುದೇ ಕ್ಟೋಭವಾಗುವುದಿಲ್ಲ. ಎಲ್ಲಿ ನೋಡಿದರೂ ಭಗವಂತನ ಚಿದಾನಂದಮಯರೂಪ ಮತ್ತು ಅವನ ಅದ್ಭುತ ಶಕ್ತಿಕ್ರಿಯಾವಿಲಾಸವಿಭ್ರಮಗಳನ್ನು ಕಾಣುವ ಯೋಗಿಯು ಪ್ರಪಂಚದ ಪ್ರತಿಯೊಂದು ಪದಾರ್ಥದಲ್ಲಿಯೂ ಆನಂದವನ್ನೇ ಅನುಭವಿಸುವನು. ಶ್ರೀಮಧ್ವಾಚಾಯರು ಸಂನ್ಯಾಸಿಯಾಗಲು ಹೊರಟಾಗ ಎದುರಿಗೆ ಇದ್ದಹೊಲ ಮರಗಳ ಕಡೆಗೂ ನಮಸ್ಕರಿಸುತ್ತಿದ್ದುದನ್ನು ಕಂಡು ಅಚ್ಚರಿಗೊಂಡ ಅವರ ಬಂಧುಗಳು ಇದೇನು ನಿನ್ನ ಈ ವಿಚಿತ್ರ ವ್ಯವಹಾರವೆಂದು ಕೇಳಲು, ನನ್ನ ಪ್ರೀತಿಯ ವಸ್ತುವು ಎಲ್ಲಕಡೆಗಳಲ್ಲಿಯೂ ಗೋಚರವಾಗುತ್ತಿರುವಾಗ ಅದಕ್ಕೆ ತಲೆಬಾಗದೆ ಹೇಗೆ ಇರಲಿ ಎಂದರಂತೆ. ಹೀಗೆ ಜ್ಞಾನಿಗಳಿಗೆ ಎಲ್ಲಿನೋಡಿದರೂ ಮಂಗಲಮಯದರ್ಶನ ಹಾಗೂ ನಿತ್ಯಾನಂದದ ಅನುಭವವೇ ದೊರೆಯು ್ರರವುದರಿಂದ ವೈಷಮ್ಯಪೂರಿತವಾದ ರುದ್ರಬೀಭತ್ತವೆನಿಸಿದ ಈಈ ಜಗತ್ತಿಗೆ ಅವರು ಹೆದರುವುದಿಲ್ಲ. ಜಗತ್ತಿನ ಎಲ್ಲ ಪದಾರ್ಥಗಳಲ್ಲಿಯೂ ಏಕರೂಪವಾಗಿ ಭಗವಚ್ಛಕ್ತಿ ಪ್ರವಹಿಸಿಕೊಂಡಿದೆ. ವಿದ್ಯುಚ್ಛಕ್ತಿಯು ಎಲ್ಲ ಕಡೆಗಳಲ್ಲಿಯೂ ಒಂದೇ ರೀತಿಯಿಂದ ಹರಿಯುತ್ತಿದ್ದರೂ ಬಲ್ಬ್‌ಗಳಿಗನುಗುಣವಾಗಿ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಅದು ಅಭಿವ್ಯಕ್ತವಾಗುವಂತೆ, ಭಗವಂತನು ಎಲ್ಲರಲ್ಲಿಯೂ ಏಕಪ್ರಕಾರವಾಗಿ ಅನುಸೂತ್ಯನಾಗಿದ್ದರೂ ಅಧಿಷ್ಠಾನವಾದ ಪದಾರ್ಥ ಹಾಗೂ ವ್ಯಕ್ತಿಯ ಸ್ವರೂಪ, ಯೋಗ್ಯತೆಗಳಿಗನುಸಾರವಾಗಿ ಪ್ರಕಟನಾಗುತ್ತಿರುವನು. ದುಷ್ಠರಲ್ಲಿ ಭಗವಂತನ ಸನ್ನಿಧಾನವಿದ್ದರೂ ಅವರ ದೌಷ್ಟ್ಯ, ದರ್ಪಗಳಲ್ಲಿ ಅಡಗಿದ ಭಗವತ್ತತ್ತ್ವವನ್ನು ಕಾಣುವುದು ಸಾಮಾನ್ಯ ಜನರಿಗೆ ಸಾಧ್ಯವಾಗದ ಕಾರ್ಯವಾಗಿದ್ದರೆ ದುಷ್ಟ ಶಿಷ್ಟರಿಬ್ಬರಲ್ಲಿಯೂ ಭಗವಂತನ ಹಾಗೂ ಅವನ ಏಕತ್ವದ ದರ್ಶನವನ್ನು ಪಡೆಯುವ ಭಾಗ್ಯ ಜ್ಞಾನಿಗಳದ್ದಾಗಿದೆ. ಪರಮಾತ್ಮನು ಎಲ್ಲರಲ್ಲಿಯೂ ಒಂದೇರೀತಿಯಿಂದ ವ್ಯಾಪ್ತನಾಗಿದ್ದರೂ ಆಯಾಯ ವ್ಯಕ್ತಿಗಳ ಸ್ವಭಾವ ಮತ್ತು ಮೂಲಭೂತ ಅಭಿರುಚಿಗಳನ್ನನುಸರಿಸಿ ಜಗತ್ತಿನಲ್ಲಿ ದುಷ್ಟ ಶಿಷ್ಟರ ವಿಭಾಗ ವ್ಯವಸ್ಥೆಯಾಗಿದೆ. ಪರಮಾತ್ಮನು ಎಲ್ಲ ಕಡೆ ಇದ್ದಾನೆ ಎಂಬುದರಿಂದ ಸಜ್ಜನರು, ದುರ್ಜನರು ಎಲ್ಲರೂ ಸಮಾನರು ಎಂಬುದಾಗಿ ಸಮತೆಯ ಅರ್ಥವಿಪರ್ಯಾಸವನ್ನು ನಾವುಮಾಡಬಾರದು. ಪಂಡಿತಾಃ ಸಮದರ್ಶಿನಃ ॥ ಈ ವಾಕ್ಯವನ್ನು ನಾನಾ ರೀತಿಯಿಂದ ವಿಪರೀತವಾಗಿ ಎಳೆಯುವ ಪ್ರಯತ್ನವು ನಡೆದಿದೆ. ಪ್ರತಿಯೊಬ್ಬನಿಗೂ ಅವನ ಸದ್ಗುಣ, ಸತ್ಯಾರ್ಯಗಳಿಗನುಗುಣವಾಗಿ ಗೌರವ ಪುರಸ್ಕಾರಗಳು ಲಭಿಸುತ್ತಿದ್ದರೆ ಆ ಸಮಾಜವು ಹಿತಕರವಾದ ರೀತಿಯಲ್ಲಿ ಬೆಳೆಯಬಹುದು. ಸಜ್ಜನಿಕೆ. ಹಾಗೂ ದೌರ್ಜನ್ಯಗಳಲ್ಲಿ ಯಾವ ಭೇದಭಾವವನ್ನೂ ಇಟ್ಟುಕೊಳ್ಳದೆ ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಬೇಕೆನ್ನುವ ಸಮತೆಯನ್ನು ಯಾರೂ ಅಪೇಕ್ಷಿಸಲಾರರು. ಅದರಂತೆ ಜ್ಞಾನಿಗಳೂ ವಾಮರರೂ ಕ್ರಿಯಾಶೀಲರೂ ಅಲಸರೂ ಸೌಜನ್ಯಸದ್ಗುಣ ಶಾಲಿಗಳೂ ದುರ್ನಡತೆಯವರೂ ಈ ಎಲ್ಲರಲ್ಲಿಯೂ ಭಗವಂತನು ನೆಲೆಸಿದ್ದರೂ ಅವರವರ ಅಂತಸ್ತಿಗೆ ಅನುಗುಣವಾಗಿ ಸಮಾಜದಲ್ಲಿ ಸ್ಥಾನಮಾನಗಳನ್ನು ನೀಡುವುದೇ ನಿಜವಾದಸಮತೆ ಎನಿಸುವುದು. ಚಿಕ್ಕಮಕ್ಕಳು ಹಾಗೂ ದೊಡ್ಡವರಿಗೆ ಒಂದೇರೀತಿಯಾಗಿ ಆಹಾರವಿತರಣೆಯನ್ನು ಮಾಡಿದಲ್ಲಿ ಅದು ಸಮತೆ ಎನಿಸಲಾರದು. ಜ್ಞಾನ, ಸದ್ಗುಣ, ಸತ್ಯಾರ್ಯಗಳಿಗನುಸಾರವಾಗಿ ಮಾಡುವತರತಮ ಭಾವವೇನಿಜವಾದ ಸಾಮ್ಯದೃಷ್ಟಿಯಾಗುವುದು. ವ್ಯಕ್ತಿಯ ದುಡಿತ, ಸೇವೆಗಳಿಗೆ ಅನುಸಾರವಾಗಿ ಪ್ರತಿಫಲದಲ್ಲಿ ಹೆಚ್ಚು ಕಡಿಮೆ ಮಾಡಿದರೆ ವೈಷಮ್ಯದ ಆರೋಪವನ್ನು ಯಾರೂಮಾಡಲಾರರು. ಅದರ ಬದಲಾಗಿ ಅತ್ಯಂತ ಬುದ್ಧಿವಂತನಾದ ವಿದ್ಯಾರ್ಥಿಯನ್ನು ಕಡಿಮೆ ಅಂಕವನ್ನು ವಡೆದ ವಿದ್ಯಾರ್ಥಿಯೊಂದಿಗೆಸಮವಾಗಿ ನಡೆಸಿದರೆ ಅದನ್ನೇ ವೈಷಮ್ಯ ಪಕ್ಷಪಾತವೆಂದು ಕರೆಯಲಾಗುತ್ತದೆ. ದೇಶದಲ್ಲಿ ಸುಜನ-ದುರ್ಜನ ವಿವೇಕವನ್ನು ಮಾಡದೆ ರಾಜ್ಯಭಾರವನ್ನು ನಡೆಸಿದಲ್ಲಿ ಅದು ಅರಾಜಕತೆಗೆ ಆಹ್ವಾನವಿತ್ತಂತೆ. ಈ ಎಲ್ಲ ವಿಚಾರವನ್ನು ಗಮನಿಸಿಕೊಂಡು ಗೀತೆಯ ""ಸಮದರ್ಶಿನಃ' ಎಂಬುದರ ಭಾವವನ್ನು ನಾವು ತಿಳಿದುಕೊಳ್ಳಬೇಕು. ಶ್ರೇಷ್ಠ ವ್ಯಕ್ತಿಗಳಲ್ಲಿಯೂ, ಕನಿಷ್ಠ ಮನುಷ್ಯರಲ್ಲಿಯೂ ಸುಜನರಲ್ಲಿಯೂ ದುರ್ಜನರಲ್ಲಿಯೂ ಪರಮಾತ್ಮ ನೇನೋವಏಕರೂಪದಲ್ಲಿ ನೆಲೆಸಿರುವನು. ಬೇರೆ ಬೇರೆ ಯಂತ್ರಗಳಲ್ಲಿ ವಿದ್ಯುತ್ತು ಏಕರೂಪವಾಗಿ ಹರಿಯುತ್ತಿದ್ದರೂ ಅವುಗಳ ಸ್ವಭಾವ ರಚನೆಗಳಿಗೆ ಅನುಗುಣವಾಗಿ ಅವುಗಳಿಂದ ಭಿನ್ನ ಭಿನ್ನಕಾರ್ಯಗಳು ನಡೆಯುತ್ತವೆ. ವಿದ್ಯುತ್ತು ಏಕರೂಪವಾಗಿ ಹರಿಯುತ್ತಿದ್ದರೂ ಎಲ್ಲ ಯಂತ್ರಗಳೂ ಒಂದೇಕಾರ್ಯವನ್ನು ಮಾಡಲಾರವು, ಒಂದೇ ರೀತಿಯಲ್ಲಿ ಮಾಡಲಾರವು. ಅದರಂತೆ ಜೀವರ ಸ್ವಭಾವಗಳಿಗನುಸಾರವಾಗಿ ಈ ಜಗತ್ತಿನಲ್ಲಿ ವೃತ್ಯಾಸವು ಅನಿವಾರ್ಯವೇ ಆಗಿದೆ. ಪರಮಾತ್ಮ: ನು ಜಗತ್ತಿನಲ್ಲಿ ವ್ಯಾಪಿಸಿದ್ದ ರೂಸ್ವಭಾವ ಗುಣಗಳ ಆಧಾರದಲ್ಲಿರುವ ಈ ಲೋಕಪ್ರವೃತ್ತಿಯನ್ನು ಬದಲಿಸಲಾರನು. ಸ್ವಭಾವಸ್ತು ಪ್ರವರ್ತತೇ । ಪ್ರತಿಯೊಂದು ಲೋಕವ್ಯವಹಾರಕ್ಕೂ ಸ್ವಯಂಭುವಾದ ಪರಮಾತ್ಮ ಮತ್ತು ವ್ಯಕ್ತಿಯ ಮೂಲಭೂತ ಸ್ವಭಾವ ಇವೆರಡೂ ಕಾರಣವಾಗಿರುವುದರಿಂದ ವೈಷಮ್ಯತಕ್ಟರಹಿತನಾದ ಭಗವಂತನು ಇದ್ದೂ ಜಗತ್ತಿನಲ್ಲಿ ಹೀಗೇಕೆ ಒಬ್ಬೊಬ್ಬರು. ಒಂದೊಂದುರೀತಿಯಿಂದ ವರ್ತಿಸುತ್ತಿದ್ದಾ ರೆಂದು ಆಕ್ಬೇಪಿಸಲು ಅವಕಾಶವಿಲ್ಲ. ತತ್ರ ತತ್ರ ಸ್ಥಿತೋ ವಿಷ್ಣು ಸ್ಪತ್ತಚ್ಛಕ್ತಿಃ ಪ್ರಬೋಧಯನ್‌ ॥ ಪ್ರತಿಯೊಂದು ಜಡ-ಚೇತನದಲ್ಲೂ ಇದ್ದು ಅವರವರ ಸ್ವಭಾವ ಹಾಗೂ ಶಕ್ತಿಗಳನ್ನು ಪ್ರಬೋಧನೆ ಮಾಡುವುದೇಪರಮಾತ್ಮನ ಸೃಷ್ಟಿಯ ವಿಧಾನವಾಗಿದೆ. ಲೋಕದಲ್ಲಿಎಲ್ಲಗಿಡಗಳಿಗೂ ಸರಿಯಾದನೀರು, ಗೊಬ್ಬರಗಳನ್ನು ಹಾಕಿದರೂ ಅವುಗಳ ಬೀಜದಮೂಲ ಸ್ವಭಾವಕ್ಕನುಗುಣವಾಗಿ ಹಣ್ಣುಗಳ ರಸ-ರುಚಿಗಳಲ್ಲಿ ಭೇದವು ಉಂಟಾದಲ್ಲಿ ತೋಟಗಾರನು ಅದಕ್ಕೆ ಹೊಣೆಗಾರನಾಗುವನೆ? ಅದರಂತೆ ಸೃಷ್ಟಿಯ ಈ ವೈವಿಧ್ಯ ವಿಭಿನ್ನತೆಗಳಿಗೆ ಜೀವ, ಜಡರ ಮೂಲಭೂತ ವ್ಯಕ್ತಿತ್ವ ಅಭಿರುಚಿಗಳೇ ಹಿನ್ನೆಲೆಯಾಗಿರುವುದರಿಂದ ಭಗವಂತನನ್ನೂ ಅವನ ಸಮತೆಯನ್ನೂ ನಾವು ದೂಷಿಸಲಾರೆವು. ನಾದತ್ತೇ ಕಸ್ಯಚಿತ್‌ ಪಾಪಂನ ಚೈವ ಸುಕೃತಂ ವಿಭುಃ ಸರ್ವಕರ್ತನೂ ಸರ್ವವ್ಯಾಪಿಯೂ ಆದ ವರಮಾತ್ಮನು ಒಂದು ನೀತಿ, ನಿಯಮವನ್ನು ಆಧರಿಸಿಯೇ ಜಗತ್ತಿನ ವ್ಯವಹಾರವನ್ನು ನಡೆಸುವುದರಿಂದ ಯಾವ ವೈಷಮ್ಯ ದೋಷಕ್ಕೂ ಆತನು ಪಾತ್ರನಾಗಲಾರ. ಮಾನವರಸತ್‌, ಅಸತ್‌ ಕಾರ್ಯಗಳಿಂದ ಆಗುವ ಸುಕೃತ, ದುಷ್ಕತ ಲೇಪವೂ ಅವನಿಗೆ ಇರುವುದಿಲ್ಲ. ಅದರಂತೆ ಅಧಿಷ್ಠುನವಾದ ಜೀವ-ಜಡರಲ್ಲಿರುವ ಮೂಲಭೂತ ಗುಣದೋಷಗಳ ಪರಿಣಾಮ ಆಘಾತಗಳು ಅವುಗಳಲ್ಲಿ ನೆಲೆಸಿರುವ ಪರಮಾತ್ಛನಿಗೆ ಸ್ವಲ್ಪವೂ ಆಗುವುದಿಲ್ಲ. ಅವನು ಎಂದೆಂದಿಗೂ ವರಿಶುದ್ಧನೂ ಗುಣಪೂರ್ಣನೂ ಆಗಿರುವನು. ವಸ್ತುಭೇದದಿಂದ ಅವನ ಅಭಿವ್ಯಕ್ತಿಯ ತಾರತಮ್ಯವಿರಬಹುದಾದರೂ ಅವನ ಸ್ವರೂಪಕ್ಕೆ ಯಾವ ಚ್ಯತಿ, ವಿಕಾರಗಳೂ ಬಾಹ್ಯ ಪದಾರ್ಥಗಳ ಸಂಪರ್ಕದಿಂದ ಉಂಟಾಗಲಾರವು. ಆದುದರಿಂದಲೇ ಅಸಂಗನೆಂದು ಪರಮಾತ್ಮನನ್ನು ಉಪನಿಷತ್ತುಗಳು ವರ್ಣಿಸಿರುತ್ತವೆ. ವಿಷಮೇಷ್ಟಪಿ ಜೀವೇಷು ಸಮೋ ವಿಷ್ಣು ಸದೈವ ತು। -ಗೀತಾತಾತ್ಪರ್ಯ ಸರ್ವೋತ್ತಮ ಚೈತನ್ಯವೆನಿಸಿದ ಪರಮಾತ್ಮನು ವಿಚಿತ್ರ ವಿಭಿನ್ನ ಪ್ರವೃತ್ತಿಯ ಈ ಎಲ್ಲ ಜೀವ-ಜಡ ಪ್ರಪಂಚದಲ್ಲಿ ಅನುಸ್ಯೂತನಾಗಿ ನೆಲೆಸಿದ್ದರೂ ಅವುಗಳ ಸಂಪರ್ಕದಿಂದ ಯಾವುದೇವಿಕೃತಿ, ವಿಷಮತೆಗಳನ್ನು ಅವನು ಪಡೆದಿರುವುದಿಲ್ಲ. ಅವನು ಎಂದೆಂದಿಗೂ ನಿರ್ವಿಕಾರನೂ ಏಕರೂಪನೂ ಆಗಿರುವನು. ಬಾಹ್ಯವಸ್ತುವನ್ನು ಅವಲೋಕಿಸುವುದರ ಜೊತೆಗೆ ಈ ನಿರ್ವಿಕಾರವಾದ ಪರತತ್ತ್ವದ ದರ್ಶನವಾಗುವುದರಿಂದಲೇ ಪ್ರಪಂಚದ ಮಧ್ಯದಲ್ಲಿದ್ದರೂ ಜ್ಞಾನಿಯು ಈ ಅನುಪಮ ಆನಂದವನ್ನು ಸವಿಯುವನು.
Bannanje Govindacharya (1936–2020)Bhagavad Gita Pravachana
ತತ್‌ ಬುದ್ಧಯಃ ತತ್‌ ಆತ್ಮಾನಃ ತತ್‌ ನಿಷ್ಠಾಃ ತತ್‌ ಪರಾಯಣಾಃ | ಗಚ್ಛಂತಿ ಅಪುನಃ ಆವೃತ್ತಿಮ್‌ ಜ್ಞಾನ ನಿರ್ಧೂತ ಕಲ್ಮಷಾಃ -ಅವನಲ್ಲೇ ಬಗೆ ನೆಟ್ಟವರು, ಅವನೇ ಸ್ವಾಮಿಯೆಂದು ನಂಬಿದವರು, ಅವನಲ್ಲೇ ನೆಲೆಗೊಡವರು, ಅವನಿಗೇ ಶರಣಾದವರು, ಅವನನ್ನು ಕಂಡು ಬಾಳ ಕೊಳೆಯನ್ನು ಕಳೆದುಕೊಂಡವರು ಮತ್ತೆ ಮರಳಿಬಾರದ ತಾಣಕ್ಕೆ ತೆರಳುತ್ತಾರೆ. ಅಜ್ಞಾನವನ್ನು ಅಳಿಸುವ ಮಾರ್ಗವನ್ನು ಕೃಷ್ಣ ಇಲ್ಲಿ ಸೊಗಸಾಗಿ ವಿವರಿಸಿದ್ದಾನೆ. ಮೊದಲನೆಯದಾಗಿ ಭಗವಂತನಲ್ಲೇ ಬುದ್ಧಿಯನ್ನಿಡುವುದು(ತತ್‌ ಬುದ್ಧಯಃ); ನಮ್ಮ ಮನಸ್ಸು ಎಲ್ಲಾ ವಿಷಯಗಳನ್ನು ಗ್ರಹಿಸುತ್ತದೆ, ಬುದ್ಧಿ ತೀರ್ಮಾನ ಮಾಡುತ್ತದೆ. ನಾವು ಭಗವಂತನಲ್ಲಿ ಸ್ಥಿರವಾಗಿ ನಮ್ಮ ಬುದ್ಧಿಯನ್ನು ಇಟ್ಟರೆ ಆತ ನಮ್ಮ ಬುದ್ಧಿಯಲ್ಲಿ ಬಂದು ಕೂರುತ್ತಾನೆ. ಇದಕ್ಕಾಗಿ. ನಾವು ಭಗವಂತನ ಕುರಿತಾಗಿ ನಮ್ಮ ಅರಿವನ್ನು ಬೆಳೆಸಿಕೊಳ್ಳಬೇಕು. ಭಗವಂತನ ವಿಷಯದ ನಿರಂತರ ಸಾಧನೆಯಿಂದ ನಾವು ಭಗವಂತನಲ್ಲಿ ನಮ್ಮ ಬುದ್ಧಿಯನ್ನು ನೆಲೆಗೊಳಿಸಿದಾಗ, ಭಗವಂತ ನಮ್ಮ ಬುದ್ಧಿಯಲ್ಲಿ ನೆಲೆಗೊಳ್ಳುತ್ತಾನೆ. ಭಗವಂತನಿಗೆ ನಿನ್ನ ಆತ್ಮವನ್ನು, ನಿನ್ನ ಮನಸ್ಸನ್ನು ಅರ್ಪಿಸು(ತತ್‌ ಆತ್ಮಾನಃ); ಅವನು ನಿನ್ನ ಸ್ವಾಮಿಯಾಗಲಿ, ನೀನು 'ಭಗವಂತನೇ ಸದಾ ನನ್ನನ್ನು ಮಾರ್ಗದರ್ಶನ ಮಾಡುವ ಪ್ರಭು, ಅವನ ನಿಯಂತ್ರಣದಲ್ಲಿ ನನ್ನ ಬದುಕು ಮಾಂಗಲಿಕವಾಗಿ ನಡೆಯಲಿ' ಎಂದು ನಿರಂತರ ಪ್ರಾರ್ಥನೆ ಮಾಡು. ಭಗವಂತನಲ್ಲಿ ನಿಷ್ಠೆ(ತತ್‌ ನಿಷ್ಠಾಃ) ಇಲ್ಲದೇ ಇದ್ದರೆ ಏನನ್ನೂ ಮಾಡಲು ಸಾಧ್ಯವಿಲ್ಲ. ನಿಷ್ಠಾ ಅಂದರೆ ಭಕ್ತೆ. ಆದ್ದರಿಂದ ಭಗವಂತನಲ್ಲಿ ಸದಾ ಭಕ್ತಿ ಇರಬೇಕು. ಭಕ್ತಿ ಇಲ್ಲದೆ ಧ್ಯಾನ, ಪೂಜೆ ಮಾಡುವುದರಿಂದ ಯಾವುದೇ ಉಪಯೋಗವಿಲ್ಲ. ಒಮ್ಮೆ ನಮಗೆ ಭಗವಂತನ ಬಗ್ಗೆ ಜ್ಞಾನ ಬಂದರೆ ಭಕ್ತಿ ತನ್ನಷ್ಟಕ್ಕೆ ತಾನೇ ಬರುತ್ತದೆ. ಜ್ಞಾನವಿಲ್ಲದ ಭಕ್ತಿ-ಮೂಡಭಕ್ತಿ. ಜ್ಞಾನವಿದ್ದು ಭಕ್ತಿ ಇಲ್ಲದಿದ್ದರ(ಲಹಂಕಾರದಿಂದ) ಆ ಜ್ಞಾನದಿಂದ ಯಾವ ಉಪಯೋಗವೂ ಇಲ್ಲ, ಅದು ಶುಷ್ಕ ಪಾಂಡಿತ್ಯವೆನಿಸುತ್ತದೆ. ಹೀಗೆ ಮನಸ್ಸು-ಬುದ್ದಿಯನ್ನು ಭಗವಂತನಲ್ಲಿ ನೆಲೆಸಿ ಜ್ಞಾನಪೂರ್ವಕ ಭಕ್ತಿಯನ್ನು ರೂಢಿಸಿಕೊಂಡಾಗ, ಎಲ್ಲಕ್ಕಿಂತ ದೊಡ್ಡ ಆಶ್ರಯ ಭಗವಂತ(ತತ್‌ ಪರಾಯಣಾಃ) ಎನ್ನುವ ಅರಿವು ಬರುತ್ತದೆ. ಇದರಿಂದ ಸಂಸಾರವೇ ಸರ್ವಸ್ವ ಎನ್ನುವ ಭ್ರಮೆ ಹೊರಟು ಹೋಗುತ್ತದೆ. ಪುರಂದರದಾಸರು ಹೇಳಿದಂತೆ: "ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ". ಅಂದರೆ ಈ ಸಂಸಾರ ಶಾಶ್ವತ ಅಲ್ಲ ಹಾಗೂ ಯಾವಾಗ ಇಲ್ಲಿಂದ ಹೊರಡಬೇಕೋ ನಮಗೆ ಗೊತ್ತಿಲ್ಲ. ಹಾಗಿರುವಾಗ 'ನನ್ನದು' ಎನ್ನುವ ಅಹಂಕಾರ ಏಕೆ? ಇದು ಪಲಾಯನವಾದವಲ್ಲ, ನಾವು ಯಾವುದನ್ನೂ ಬಿಡಬೇಕಾಗಿಲ್ಲ, ಆದರೆ ಅದೇ ಸರ್ವಸ್ವ ಎನ್ನುವ ಭ್ರಮೆಯನ್ನು ಬಿಡುವುದು ಅಷ್ಟೇ. ಭಗವಂತ ಕೊಟ್ಟಿದ್ದಾನೆ, ಕೊಟ್ಟಷ್ಟು ಕಾಲ ಇಟ್ಟಷ್ಟು ಕಾಲ ಇರುವುದು. ಅದೇ ರೀತಿ ಯಾವ ತತ್ತ್ವಾಭಿಮಾನಿ ದೇವತೆಗಳನ್ನೂ ನಾವು ತಿರಸ್ಕರಿಸಬಾರದು. ಅವರು ನಮಗೆ ಭಗವಂತನನ್ನು ಸೇರುವ ಮಾರ್ಗ ತೋರಿಸುವ ಭಗವಂತನ ಪರಿವಾರ, ಆದರೆ ಅವರೇ ಸರ್ವಸ್ವ ಅಲ್ಲ. ಎಲ್ಲಕ್ಕೆಂತ ಮೇಲೆ ಎಲ್ಲರಿಗೂ ಆಶ್ರಯವಾಗಿರತಕ್ಕಂತಹ ಪರತತ್ವದ ಎಚ್ಚರದೊಂದಿಗೆ ನಿನ್ನ ಪಾಲಿಗೆ ಬಂದ ಕರ್ತವ್ಯವನ್ನು ಭಗವಂತನ ಪ್ರಸಾದವೆಂದು ಮಾಡು. ಓಡಿಹೋಗಬೇಡ, ಸಂಸಾರದಲ್ಲಿ ಬದುಕು, ಭಗವಂತ ಏನು ಕೊಟ್ಟ ಅದನ್ನು ಸ್ವೀಕರಿಸು. ನಿನ್ನೆಲ್ಲಾ ಸರ್ವಸ್ವವನ್ನು 'ಪರಮ ರಕ್ಷಕ ಭಗವಂತ' ಎಂದು ಅವನಲ್ಲಿ ಅರ್ಪಿಸು. ಹೀಗೆ ಬದುಕುವುದರಿಂದ, ನಮ್ಮ ಆತ್ಮಕ್ಕೆ ಅಂಟಿದ ಕೊಳೆ ತೊಳೆದು ಹೋಗುತ್ತದೆ, ಮನಸ್ಸು ಸ್ವಚ್ಛವಾಗುತ್ತದೆ. ಆಗ ಜ್ಞಾನ ಬೆಳಗುತ್ತದೆ-ಭಗವಂತನ ಸಾಕ್ಷಾತ್ಕ್ಮಾರವಾಗುತ್ತದೆ. ಇದರಿಂದ ಮತ್ತೆ ಮರಳಿ ಬಾರದ ಶಾಶ್ವತ ಮೋಕ್ಷವನ್ನು ಜೀವ ಪಡೆಯಬಲ್ಲ.
Bibek Debroy (1955–2024)The Bhagavad Gita
(17) ‘Those whose intellect is focused on that,22 egos are focused on that, devotion is focused on that and adherence is focused on that, those in whom sins have been destroyed through knowledge, those beings are not reborn.’23