5.18

विद्याविनयसम्पन्ने ब्राह्मणे गवि हस्तिनि ।
शुनि चैव श्वपाके च पण्डिताः समदर्शिनः ॥
vidyāvinayasampanne brāhmaṇe gavi hastini |
śuni caiva śvapāke ca paṇḍitāḥ samadarśinaḥ ||
Sri Madhvacharya (1238–1317)Bhagavad Gita Tatparya Nirnaya
‘विषमेष्वपि जीवेषु समो विष्णुः सदैव तु। यत्तृणादिगतस्यापि गुणाः पूर्णा हरेःसदा’ इति च॥18॥
Swami Sivananda (1887–1963)Bhagavad Gita
18. Sages look with an equal eye on a Brahmin endowed with learning and humility, on a cow, on an elephant, and even on a dog and an outcaste.
Sri Vishwesha Tirtharu (1931–2019)Gitasaroddhara
5.14–5.18 · ಜ್ಞಾನಿಯ ಸಮದೃಷ್ಟಿ
ಜ್ಞಾನಿಯ ಸಮದೃಷ್ಟಿ ಪ್ರತಿಯೊಬ್ಬರ ವ್ಯವಹಾರಗಳ ಹಿನ್ನೆಲೆಯಲ್ಲಿಯೂವರಮಾತ್ಮನ ಶಕ್ತಿಯನ್ನು ಕಾಣುವ ಬ್ರಹ್ಮಜ್ಞಾನಿಗಳು ಪ್ರಪಂಚದ ದರ್ಶನ, ವ್ಯವಹಾರಗಳಲ್ಲಿಯೂ ದಿವ್ಯ ಆನಂದವನ್ನೇ ಅನುಭವಿಸಬಲ್ಲರು. ಪ್ರತಿಯೊಂದು ವಸ್ತುವಿನಲ್ಲೂ ಪರಮಾತ್ಮನ ದಿವ್ಯರೂಪದ ದರ್ಶನವನ್ನು ವಡೆಯುತ್ತಿರುವ ಅವರು ಈ ಪ್ರಾವಂಚಿಕ ಸಂಪರ್ಕದಿಂದ ವಿಚಲಿತರೂ ವಿಕಾರವಶರೂ ಆಗಲಾರರು. ವಿದ್ಯಾವಿನಯ ಸಂಪನ್ನರಾದ ಸಜ್ಜನರಲ್ಲಿಯೂ ಹಿಂಸಾಜೀವಿಗಳೆನಿಸಿದ ಅನಾಗರಿಕ ಕ್ರೂರ ಮನುಷ್ಯರಲ್ಲಿಯೂ ಹುದುಗಿದ ಭಗವತ್ತತ್ತ್ವವನ್ನು ಅವರು ಕಾಣಬಲ್ಲರು. ಈ ಪ್ರಪಂಚದಲ್ಲಿ ಎಷ್ಟೇ ಭೇದ, ವೈಚಿತ್ರ್ಯಗಳಿದ್ದರೂ ಈ ಜಗತ್ತಿನಲ್ಲಿ ಅಂತರ್ಯಾಮಿ ಎನಿಸಿದ ಜಗತ್ಫಚೋದಕ ಶಕ್ತಿಯಾದ ಪರಮಾತ್ಮನು ಎಲ್ಲ ಕಡೆಗಳಲ್ಲಿಯೂ ಏಕರೂವವಾಗಿ ನೆಲೆಸಿರುವನು. ಪ್ರವಂಚದಲ್ಲಿ ವ್ಯವಹರಿಸುವಾಗ ಭಗವಂತನ ಈ ಸಮತೆಯ ದರ್ಶನವಾದವನಿಗೆ ಬಾಹ್ಯ ಪ್ರಪಂಚದ ಏರುಪೇರುಗಳು ಮತ್ತು ವಿಕೃತಿ, ಸಂಸ್ಕೃತಿಗಳ ದರ್ಶನದಿಂದ ಯಾವುದೇ ಕ್ಟೋಭವಾಗುವುದಿಲ್ಲ. ಎಲ್ಲಿ ನೋಡಿದರೂ ಭಗವಂತನ ಚಿದಾನಂದಮಯರೂಪ ಮತ್ತು ಅವನ ಅದ್ಭುತ ಶಕ್ತಿಕ್ರಿಯಾವಿಲಾಸವಿಭ್ರಮಗಳನ್ನು ಕಾಣುವ ಯೋಗಿಯು ಪ್ರಪಂಚದ ಪ್ರತಿಯೊಂದು ಪದಾರ್ಥದಲ್ಲಿಯೂ ಆನಂದವನ್ನೇ ಅನುಭವಿಸುವನು. ಶ್ರೀಮಧ್ವಾಚಾಯರು ಸಂನ್ಯಾಸಿಯಾಗಲು ಹೊರಟಾಗ ಎದುರಿಗೆ ಇದ್ದಹೊಲ ಮರಗಳ ಕಡೆಗೂ ನಮಸ್ಕರಿಸುತ್ತಿದ್ದುದನ್ನು ಕಂಡು ಅಚ್ಚರಿಗೊಂಡ ಅವರ ಬಂಧುಗಳು ಇದೇನು ನಿನ್ನ ಈ ವಿಚಿತ್ರ ವ್ಯವಹಾರವೆಂದು ಕೇಳಲು, ನನ್ನ ಪ್ರೀತಿಯ ವಸ್ತುವು ಎಲ್ಲಕಡೆಗಳಲ್ಲಿಯೂ ಗೋಚರವಾಗುತ್ತಿರುವಾಗ ಅದಕ್ಕೆ ತಲೆಬಾಗದೆ ಹೇಗೆ ಇರಲಿ ಎಂದರಂತೆ. ಹೀಗೆ ಜ್ಞಾನಿಗಳಿಗೆ ಎಲ್ಲಿನೋಡಿದರೂ ಮಂಗಲಮಯದರ್ಶನ ಹಾಗೂ ನಿತ್ಯಾನಂದದ ಅನುಭವವೇ ದೊರೆಯು ್ರರವುದರಿಂದ ವೈಷಮ್ಯಪೂರಿತವಾದ ರುದ್ರಬೀಭತ್ತವೆನಿಸಿದ ಈಈ ಜಗತ್ತಿಗೆ ಅವರು ಹೆದರುವುದಿಲ್ಲ. ಜಗತ್ತಿನ ಎಲ್ಲ ಪದಾರ್ಥಗಳಲ್ಲಿಯೂ ಏಕರೂಪವಾಗಿ ಭಗವಚ್ಛಕ್ತಿ ಪ್ರವಹಿಸಿಕೊಂಡಿದೆ. ವಿದ್ಯುಚ್ಛಕ್ತಿಯು ಎಲ್ಲ ಕಡೆಗಳಲ್ಲಿಯೂ ಒಂದೇ ರೀತಿಯಿಂದ ಹರಿಯುತ್ತಿದ್ದರೂ ಬಲ್ಬ್‌ಗಳಿಗನುಗುಣವಾಗಿ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಅದು ಅಭಿವ್ಯಕ್ತವಾಗುವಂತೆ, ಭಗವಂತನು ಎಲ್ಲರಲ್ಲಿಯೂ ಏಕಪ್ರಕಾರವಾಗಿ ಅನುಸೂತ್ಯನಾಗಿದ್ದರೂ ಅಧಿಷ್ಠಾನವಾದ ಪದಾರ್ಥ ಹಾಗೂ ವ್ಯಕ್ತಿಯ ಸ್ವರೂಪ, ಯೋಗ್ಯತೆಗಳಿಗನುಸಾರವಾಗಿ ಪ್ರಕಟನಾಗುತ್ತಿರುವನು. ದುಷ್ಠರಲ್ಲಿ ಭಗವಂತನ ಸನ್ನಿಧಾನವಿದ್ದರೂ ಅವರ ದೌಷ್ಟ್ಯ, ದರ್ಪಗಳಲ್ಲಿ ಅಡಗಿದ ಭಗವತ್ತತ್ತ್ವವನ್ನು ಕಾಣುವುದು ಸಾಮಾನ್ಯ ಜನರಿಗೆ ಸಾಧ್ಯವಾಗದ ಕಾರ್ಯವಾಗಿದ್ದರೆ ದುಷ್ಟ ಶಿಷ್ಟರಿಬ್ಬರಲ್ಲಿಯೂ ಭಗವಂತನ ಹಾಗೂ ಅವನ ಏಕತ್ವದ ದರ್ಶನವನ್ನು ಪಡೆಯುವ ಭಾಗ್ಯ ಜ್ಞಾನಿಗಳದ್ದಾಗಿದೆ. ಪರಮಾತ್ಮನು ಎಲ್ಲರಲ್ಲಿಯೂ ಒಂದೇರೀತಿಯಿಂದ ವ್ಯಾಪ್ತನಾಗಿದ್ದರೂ ಆಯಾಯ ವ್ಯಕ್ತಿಗಳ ಸ್ವಭಾವ ಮತ್ತು ಮೂಲಭೂತ ಅಭಿರುಚಿಗಳನ್ನನುಸರಿಸಿ ಜಗತ್ತಿನಲ್ಲಿ ದುಷ್ಟ ಶಿಷ್ಟರ ವಿಭಾಗ ವ್ಯವಸ್ಥೆಯಾಗಿದೆ. ಪರಮಾತ್ಮನು ಎಲ್ಲ ಕಡೆ ಇದ್ದಾನೆ ಎಂಬುದರಿಂದ ಸಜ್ಜನರು, ದುರ್ಜನರು ಎಲ್ಲರೂ ಸಮಾನರು ಎಂಬುದಾಗಿ ಸಮತೆಯ ಅರ್ಥವಿಪರ್ಯಾಸವನ್ನು ನಾವುಮಾಡಬಾರದು. ಪಂಡಿತಾಃ ಸಮದರ್ಶಿನಃ ॥ ಈ ವಾಕ್ಯವನ್ನು ನಾನಾ ರೀತಿಯಿಂದ ವಿಪರೀತವಾಗಿ ಎಳೆಯುವ ಪ್ರಯತ್ನವು ನಡೆದಿದೆ. ಪ್ರತಿಯೊಬ್ಬನಿಗೂ ಅವನ ಸದ್ಗುಣ, ಸತ್ಯಾರ್ಯಗಳಿಗನುಗುಣವಾಗಿ ಗೌರವ ಪುರಸ್ಕಾರಗಳು ಲಭಿಸುತ್ತಿದ್ದರೆ ಆ ಸಮಾಜವು ಹಿತಕರವಾದ ರೀತಿಯಲ್ಲಿ ಬೆಳೆಯಬಹುದು. ಸಜ್ಜನಿಕೆ. ಹಾಗೂ ದೌರ್ಜನ್ಯಗಳಲ್ಲಿ ಯಾವ ಭೇದಭಾವವನ್ನೂ ಇಟ್ಟುಕೊಳ್ಳದೆ ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಬೇಕೆನ್ನುವ ಸಮತೆಯನ್ನು ಯಾರೂ ಅಪೇಕ್ಷಿಸಲಾರರು. ಅದರಂತೆ ಜ್ಞಾನಿಗಳೂ ವಾಮರರೂ ಕ್ರಿಯಾಶೀಲರೂ ಅಲಸರೂ ಸೌಜನ್ಯಸದ್ಗುಣ ಶಾಲಿಗಳೂ ದುರ್ನಡತೆಯವರೂ ಈ ಎಲ್ಲರಲ್ಲಿಯೂ ಭಗವಂತನು ನೆಲೆಸಿದ್ದರೂ ಅವರವರ ಅಂತಸ್ತಿಗೆ ಅನುಗುಣವಾಗಿ ಸಮಾಜದಲ್ಲಿ ಸ್ಥಾನಮಾನಗಳನ್ನು ನೀಡುವುದೇ ನಿಜವಾದಸಮತೆ ಎನಿಸುವುದು. ಚಿಕ್ಕಮಕ್ಕಳು ಹಾಗೂ ದೊಡ್ಡವರಿಗೆ ಒಂದೇರೀತಿಯಾಗಿ ಆಹಾರವಿತರಣೆಯನ್ನು ಮಾಡಿದಲ್ಲಿ ಅದು ಸಮತೆ ಎನಿಸಲಾರದು. ಜ್ಞಾನ, ಸದ್ಗುಣ, ಸತ್ಯಾರ್ಯಗಳಿಗನುಸಾರವಾಗಿ ಮಾಡುವತರತಮ ಭಾವವೇನಿಜವಾದ ಸಾಮ್ಯದೃಷ್ಟಿಯಾಗುವುದು. ವ್ಯಕ್ತಿಯ ದುಡಿತ, ಸೇವೆಗಳಿಗೆ ಅನುಸಾರವಾಗಿ ಪ್ರತಿಫಲದಲ್ಲಿ ಹೆಚ್ಚು ಕಡಿಮೆ ಮಾಡಿದರೆ ವೈಷಮ್ಯದ ಆರೋಪವನ್ನು ಯಾರೂಮಾಡಲಾರರು. ಅದರ ಬದಲಾಗಿ ಅತ್ಯಂತ ಬುದ್ಧಿವಂತನಾದ ವಿದ್ಯಾರ್ಥಿಯನ್ನು ಕಡಿಮೆ ಅಂಕವನ್ನು ವಡೆದ ವಿದ್ಯಾರ್ಥಿಯೊಂದಿಗೆಸಮವಾಗಿ ನಡೆಸಿದರೆ ಅದನ್ನೇ ವೈಷಮ್ಯ ಪಕ್ಷಪಾತವೆಂದು ಕರೆಯಲಾಗುತ್ತದೆ. ದೇಶದಲ್ಲಿ ಸುಜನ-ದುರ್ಜನ ವಿವೇಕವನ್ನು ಮಾಡದೆ ರಾಜ್ಯಭಾರವನ್ನು ನಡೆಸಿದಲ್ಲಿ ಅದು ಅರಾಜಕತೆಗೆ ಆಹ್ವಾನವಿತ್ತಂತೆ. ಈ ಎಲ್ಲ ವಿಚಾರವನ್ನು ಗಮನಿಸಿಕೊಂಡು ಗೀತೆಯ ""ಸಮದರ್ಶಿನಃ' ಎಂಬುದರ ಭಾವವನ್ನು ನಾವು ತಿಳಿದುಕೊಳ್ಳಬೇಕು. ಶ್ರೇಷ್ಠ ವ್ಯಕ್ತಿಗಳಲ್ಲಿಯೂ, ಕನಿಷ್ಠ ಮನುಷ್ಯರಲ್ಲಿಯೂ ಸುಜನರಲ್ಲಿಯೂ ದುರ್ಜನರಲ್ಲಿಯೂ ಪರಮಾತ್ಮ ನೇನೋವಏಕರೂಪದಲ್ಲಿ ನೆಲೆಸಿರುವನು. ಬೇರೆ ಬೇರೆ ಯಂತ್ರಗಳಲ್ಲಿ ವಿದ್ಯುತ್ತು ಏಕರೂಪವಾಗಿ ಹರಿಯುತ್ತಿದ್ದರೂ ಅವುಗಳ ಸ್ವಭಾವ ರಚನೆಗಳಿಗೆ ಅನುಗುಣವಾಗಿ ಅವುಗಳಿಂದ ಭಿನ್ನ ಭಿನ್ನಕಾರ್ಯಗಳು ನಡೆಯುತ್ತವೆ. ವಿದ್ಯುತ್ತು ಏಕರೂಪವಾಗಿ ಹರಿಯುತ್ತಿದ್ದರೂ ಎಲ್ಲ ಯಂತ್ರಗಳೂ ಒಂದೇಕಾರ್ಯವನ್ನು ಮಾಡಲಾರವು, ಒಂದೇ ರೀತಿಯಲ್ಲಿ ಮಾಡಲಾರವು. ಅದರಂತೆ ಜೀವರ ಸ್ವಭಾವಗಳಿಗನುಸಾರವಾಗಿ ಈ ಜಗತ್ತಿನಲ್ಲಿ ವೃತ್ಯಾಸವು ಅನಿವಾರ್ಯವೇ ಆಗಿದೆ. ಪರಮಾತ್ಮ: ನು ಜಗತ್ತಿನಲ್ಲಿ ವ್ಯಾಪಿಸಿದ್ದ ರೂಸ್ವಭಾವ ಗುಣಗಳ ಆಧಾರದಲ್ಲಿರುವ ಈ ಲೋಕಪ್ರವೃತ್ತಿಯನ್ನು ಬದಲಿಸಲಾರನು. ಸ್ವಭಾವಸ್ತು ಪ್ರವರ್ತತೇ । ಪ್ರತಿಯೊಂದು ಲೋಕವ್ಯವಹಾರಕ್ಕೂ ಸ್ವಯಂಭುವಾದ ಪರಮಾತ್ಮ ಮತ್ತು ವ್ಯಕ್ತಿಯ ಮೂಲಭೂತ ಸ್ವಭಾವ ಇವೆರಡೂ ಕಾರಣವಾಗಿರುವುದರಿಂದ ವೈಷಮ್ಯತಕ್ಟರಹಿತನಾದ ಭಗವಂತನು ಇದ್ದೂ ಜಗತ್ತಿನಲ್ಲಿ ಹೀಗೇಕೆ ಒಬ್ಬೊಬ್ಬರು. ಒಂದೊಂದುರೀತಿಯಿಂದ ವರ್ತಿಸುತ್ತಿದ್ದಾ ರೆಂದು ಆಕ್ಬೇಪಿಸಲು ಅವಕಾಶವಿಲ್ಲ. ತತ್ರ ತತ್ರ ಸ್ಥಿತೋ ವಿಷ್ಣು ಸ್ಪತ್ತಚ್ಛಕ್ತಿಃ ಪ್ರಬೋಧಯನ್‌ ॥ ಪ್ರತಿಯೊಂದು ಜಡ-ಚೇತನದಲ್ಲೂ ಇದ್ದು ಅವರವರ ಸ್ವಭಾವ ಹಾಗೂ ಶಕ್ತಿಗಳನ್ನು ಪ್ರಬೋಧನೆ ಮಾಡುವುದೇಪರಮಾತ್ಮನ ಸೃಷ್ಟಿಯ ವಿಧಾನವಾಗಿದೆ. ಲೋಕದಲ್ಲಿಎಲ್ಲಗಿಡಗಳಿಗೂ ಸರಿಯಾದನೀರು, ಗೊಬ್ಬರಗಳನ್ನು ಹಾಕಿದರೂ ಅವುಗಳ ಬೀಜದಮೂಲ ಸ್ವಭಾವಕ್ಕನುಗುಣವಾಗಿ ಹಣ್ಣುಗಳ ರಸ-ರುಚಿಗಳಲ್ಲಿ ಭೇದವು ಉಂಟಾದಲ್ಲಿ ತೋಟಗಾರನು ಅದಕ್ಕೆ ಹೊಣೆಗಾರನಾಗುವನೆ? ಅದರಂತೆ ಸೃಷ್ಟಿಯ ಈ ವೈವಿಧ್ಯ ವಿಭಿನ್ನತೆಗಳಿಗೆ ಜೀವ, ಜಡರ ಮೂಲಭೂತ ವ್ಯಕ್ತಿತ್ವ ಅಭಿರುಚಿಗಳೇ ಹಿನ್ನೆಲೆಯಾಗಿರುವುದರಿಂದ ಭಗವಂತನನ್ನೂ ಅವನ ಸಮತೆಯನ್ನೂ ನಾವು ದೂಷಿಸಲಾರೆವು. ನಾದತ್ತೇ ಕಸ್ಯಚಿತ್‌ ಪಾಪಂನ ಚೈವ ಸುಕೃತಂ ವಿಭುಃ ಸರ್ವಕರ್ತನೂ ಸರ್ವವ್ಯಾಪಿಯೂ ಆದ ವರಮಾತ್ಮನು ಒಂದು ನೀತಿ, ನಿಯಮವನ್ನು ಆಧರಿಸಿಯೇ ಜಗತ್ತಿನ ವ್ಯವಹಾರವನ್ನು ನಡೆಸುವುದರಿಂದ ಯಾವ ವೈಷಮ್ಯ ದೋಷಕ್ಕೂ ಆತನು ಪಾತ್ರನಾಗಲಾರ. ಮಾನವರಸತ್‌, ಅಸತ್‌ ಕಾರ್ಯಗಳಿಂದ ಆಗುವ ಸುಕೃತ, ದುಷ್ಕತ ಲೇಪವೂ ಅವನಿಗೆ ಇರುವುದಿಲ್ಲ. ಅದರಂತೆ ಅಧಿಷ್ಠುನವಾದ ಜೀವ-ಜಡರಲ್ಲಿರುವ ಮೂಲಭೂತ ಗುಣದೋಷಗಳ ಪರಿಣಾಮ ಆಘಾತಗಳು ಅವುಗಳಲ್ಲಿ ನೆಲೆಸಿರುವ ಪರಮಾತ್ಛನಿಗೆ ಸ್ವಲ್ಪವೂ ಆಗುವುದಿಲ್ಲ. ಅವನು ಎಂದೆಂದಿಗೂ ವರಿಶುದ್ಧನೂ ಗುಣಪೂರ್ಣನೂ ಆಗಿರುವನು. ವಸ್ತುಭೇದದಿಂದ ಅವನ ಅಭಿವ್ಯಕ್ತಿಯ ತಾರತಮ್ಯವಿರಬಹುದಾದರೂ ಅವನ ಸ್ವರೂಪಕ್ಕೆ ಯಾವ ಚ್ಯತಿ, ವಿಕಾರಗಳೂ ಬಾಹ್ಯ ಪದಾರ್ಥಗಳ ಸಂಪರ್ಕದಿಂದ ಉಂಟಾಗಲಾರವು. ಆದುದರಿಂದಲೇ ಅಸಂಗನೆಂದು ಪರಮಾತ್ಮನನ್ನು ಉಪನಿಷತ್ತುಗಳು ವರ್ಣಿಸಿರುತ್ತವೆ. ವಿಷಮೇಷ್ಟಪಿ ಜೀವೇಷು ಸಮೋ ವಿಷ್ಣು ಸದೈವ ತು। -ಗೀತಾತಾತ್ಪರ್ಯ ಸರ್ವೋತ್ತಮ ಚೈತನ್ಯವೆನಿಸಿದ ಪರಮಾತ್ಮನು ವಿಚಿತ್ರ ವಿಭಿನ್ನ ಪ್ರವೃತ್ತಿಯ ಈ ಎಲ್ಲ ಜೀವ-ಜಡ ಪ್ರಪಂಚದಲ್ಲಿ ಅನುಸ್ಯೂತನಾಗಿ ನೆಲೆಸಿದ್ದರೂ ಅವುಗಳ ಸಂಪರ್ಕದಿಂದ ಯಾವುದೇವಿಕೃತಿ, ವಿಷಮತೆಗಳನ್ನು ಅವನು ಪಡೆದಿರುವುದಿಲ್ಲ. ಅವನು ಎಂದೆಂದಿಗೂ ನಿರ್ವಿಕಾರನೂ ಏಕರೂಪನೂ ಆಗಿರುವನು. ಬಾಹ್ಯವಸ್ತುವನ್ನು ಅವಲೋಕಿಸುವುದರ ಜೊತೆಗೆ ಈ ನಿರ್ವಿಕಾರವಾದ ಪರತತ್ತ್ವದ ದರ್ಶನವಾಗುವುದರಿಂದಲೇ ಪ್ರಪಂಚದ ಮಧ್ಯದಲ್ಲಿದ್ದರೂ ಜ್ಞಾನಿಯು ಈ ಅನುಪಮ ಆನಂದವನ್ನು ಸವಿಯುವನು.
Bannanje Govindacharya (1936–2020)Bhagavad Gita Pravachana
ವಿದ್ಯಾ ವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ | ಶುನಿ ಚ ಏವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ -ನಿಜವಾದ ಪಂಡಿತ-ವಿದ್ಯಾವಿನಯಸಂಪನ್ನ, ಬ್ರಾಹ್ಮಣವರ್ಣ, ಆಕಳು, ಆನೆ, ನಾಯಿ, ಹೊಲಗೇಡಿ ಹೀನ ಮಾನವನಲ್ಲಿ ಕೂಡಾ ಏಕರೂಪನಾದ ಭಗವಂತನನ್ನು ಕಾಣಬಲ್ಲ. ಈ ಶ್ಲೋಕ ಬಹಳ ಮಂದಿಗೆ ಅರ್ಥವಾಗುವುದಿಲ್ಲ ಅಥವಾ ಅರ್ಥವಾಗದೇ ಅಪಾರ್ಥ ಮಾಡಿಕೊಳ್ಳುವವರೇ ಹೆಚ್ಚು. ಒಬ್ಬ ಸಾಧಕನ ಉಪಾಸನೆಯಲ್ಲಿ ಇರಬೇಕಾದ ಇನ್ನೊಂದು ಮುಖವನ್ನು ಕೃಷ್ಣ ಇಲ್ಲಿ ವಿವರಿಸಿದ್ದಾನೆ. ಇದು ತುಂಬಾ ಒಳ ನೋಟವನ್ನು ಅಪೇಕ್ಷಿಸುವ ಶ್ಲೋಕ. ಇಲ್ಲಿ ಮೂರು ತರಹದ ಮನುಷ್ಯನ ಸ್ಥಿತಿಯನ್ನು ಮತ್ತು ಮೂರು ತರಹದ ಪ್ರಾಣಿಗಳ ಸ್ಥಿತಿಯನ್ನು ಕೃಷ್ಣ ವಿವರಿಸಿದ್ದಾನೆ. ಮಾನವರಲ್ಲಿ: ವಿದ್ಯಾವಿನಯಸಂಪನ್ನ, ಬ್ರಾಹ್ಮಣ ಮತ್ತು ಶ್ವಪಾಕ. ಪ್ರಾಣಿಗಳಲ್ಲಿ: ಗೋವು, ಆನೆ ಮತ್ತು ನಾಯಿ. ಮನುಷ್ಯರಲ್ಲಿ ಜ್ಞಾನದ ತುತ್ತ ತುದಿಯನ್ನು ತಲುಪಿದವ ಮತ್ತು ಅತ್ಯಂತ ಶ್ರೇಷ್ಠ “ವಿದ್ಯಾ ವಿನಯಸಂಪನ್ನ'. ವೇದದ ಕೆಲವು ಭಾಗವನ್ನು ಪ್ರಾಮಾಣಿಕವಾಗಿ ಮನನ ಮಾಡಿ ಉಪಾಸನೆ ಮಾಡುವವ ಬ್ರಾಹ್ಮಣ. (ಇಲ್ಲಿ ಹೇಳುವ ಬ್ರಾಹ್ಮಣ-ಬ್ರಾಹ್ಮಣವರ್ಣ; ಜಾತಿ ಅಲ್ಲ. ಈ ಬಗ್ಗೆ ವಿಶೇಷವಾಗಿ ಹಿಂದಿನ ಅಧ್ಯಾಯದಲ್ಲಿ ವಿಶ್ಲೇಶಿಸಿದ್ದೇವೆ). ಸಮಸ್ತ ವೇದವನ್ನು ಓದಿ ಆ ವೇದೋಕ್ತವಾದ ವಿಧಾನವನ್ನು ಜೀವನದಲ್ಲಿ ಅಳವಡಿಸಿಕೊಂಡವ ವೇದಜ್ಞ. ವೇದದ ಅಂತರಂಗದ ಅರ್ಥವನ್ನು ತಿಳಿದವ 'ವೇದ ಅರ್ಥಜ್ಞ'-ಆತನೇ “ವಿದ್ಯಾ ವಿನಯಸಂಪನ್ನ' ಮಾನವರಲ್ಲಿ ಅತೀ ಕೀಳು ಅಂದರೆ ಶ್ವಪಾಕ. ಶ್ವಪಾಕ ಎಂದರೆ ನಾಯಿಯ ಮಾಂಸ ತಿನ್ನುವವ ಎಂದರ್ಥ. ಅಂದರೆ ಆತನಿಗೆ ಯಾವ ಸಂಸ್ಕಾರವೂ ಇಲ್ಲ, ಹೊಟ್ಟೆಗಾಗಿ ಏನನ್ನಾದರೂ ತಿನ್ನುವವ. ಇದು ಮನುಷ್ಯನ ಅಧಃಪತನದ ಪರಾಕಾಷ್ಠೆಯನ್ನು ಹೇಳುವಂತಾದ್ದು. ಹೀಗೆ ಅತ್ಯಂತ ಎತ್ತರಕ್ಕೇರಿದ ವಿದ್ಯಾವಿನಯಸಂಪನ್ನ, ಅದರಿಂದ ಕೆಳಗೆ ಬ್ರಾಹ್ಮಣವರ್ಣ, ಅತ್ಯಂತ ಕೆಳಗೆ ಶ್ವಪಾಕ. ಪ್ರಾಣಿಗಳಲ್ಲಿ ಗವ(ಗೋವು) ಅತ್ಯಂತ ಶ್ರೇಷ್ಠ ಪ್ರಾಣಿ. ಅದರ ನಂತರ ಮಧ್ಯಮ ಹಸ್ತಿನಿ(ಆನೆ), ಕೊನೆಗೆ ನಾಯಿ. ಪ್ರಾಚೀನರು ಮನಸ್ಸನ್ನು ಯಾವುದು ಶುದ್ಧಗೊಳಿಸುತ್ತದೇ, ಅದನ್ನು ‘DY’ ಎಂದು ತೀರ್ಮಾನ ಮಾಡಿದರು. ಉದಾಹರಣೆಗೆ ಜಿಂಕೆ ಮತ್ತು ಹುಲಿ ಚರ್ಮ ಮನಸ್ಸನ್ನು ಏಕಾಗ್ರ ಮಾಡಲು ಸಹಕರಿಸುತ್ತದೆ.ಭೂಮಿಯಲ್ಲಿನ ಕೆಟ್ಟ ಕಂಪನ ಧ್ಯಾನದ ಕಾಲದಲ್ಲಿ ನಮ್ಮ ದೇಹವನ್ನು ಪ್ರವೇಶಿಸದಂತೆ ತಡೆಯಲು ಈ ಚರ್ಮವನ್ನು ಉಪಯೋಗಿಸುತ್ತಾರೆ. ಆದ್ದರಿಂದ ಅದು ಶುದ್ಧ ಮತ್ತು ಶ್ರೇಷ್ಠ... ಅದೇ ರೀತಿ ಗೋವು; ಈ ಪ್ರಾಣಿಯಲ್ಲಿ ಯಾವಾಗಲೂ ಸಾತ್ವಿಕವಾದ ಸ್ಪಂದನ(ರ[೩೪೦/0)ವಿರುತ್ತದೆ. ಹಸುವಿನಲ್ಲಿರುವ ಇನ್ನೊಂದು ಶ್ರೇಷ್ಠ ಅಂಶ ಎಂದರೆ: ಈ ಪ್ರಪಂಚದಲ್ಲಿ ಎಲ್ಲಾ ಪ್ರಾಣಿಗಳ ಮಲ-ಮೂತ್ರ ವರ್ಜ್ಯ. ಆದರೆ ಹಸುವಿನ ಮಲ ಮೂತ್ರ ಶ್ರೇಷ್ಠ. ಹೀಗೆ ಪ್ರಾಣಿಗಳಲ್ಲಿ ಹಸು ಅತ್ಯಂತ ಶ್ರೇಷ್ಠ. ಗೃಹಪ್ರವೇಶ ಕಾಲದಲ್ಲಿ ಹಸುವನ್ನು ಮೊದಲು ಮನೆಯೊಳಗೆ ತರುವುದಕ್ಕೆ ಇದೇ ಕಾರಣ. ಪ್ರಾಚೀನರು ನಾಯಿಯನ್ನು ಅತ್ಯಂತ ಕೆಳವರ್ಗ ಎಂದು ಪರಿಗಣಿಸಿದರು. ನಮಗೆ ತಿಳಿದಂತೆ ನಾಯಿ ತನ್ನ ಯಜಮಾನನಿಗಾಗಿ ತನ್ನ ಪ್ರಾಣವನ್ನೇ ಕೊಡಲು ಸಿದ್ಧವಿರುವ ಸಾಕು ಪ್ರಾಣಿ. ಆದರೆ ಇದು ಅತಿ ಹೆಚ್ಚು ತಾಮಸಿಕ ಸ್ಪಂದನ(/೩೪೦೧)ವಿರುವ ಪ್ರಾಣಿ. ಆದ್ದರಿಂದ ನಾಯಿಯಿಂದ ನಮ್ಮ ಮಾನಸಿಕ ಅಭಿವೃದ್ಧಿಗೆ ಏನೂ ಪೋಷಣೆ ಇಲ್ಲ. ಈ ಕಾರಣದಿಂದ ನಾಯಿಯನ್ನು ಪ್ರಾಚೀನರು ಅತ್ಯಂತ ಕನಿಷ್ಠ ಸ್ಥಾನದಲ್ಲಿರಿಸಿದರು. ನಾಯಿಯನ್ನು ಎಂದೂ ಮನೆಯೊಳಗೆ ಸೇರಿಸದಿರಲು ಇದು ಕಾರಣ. ಹೀಗೆ ಪ್ರಾಣಿಗಳಲ್ಲಿ ಹಸು ಶ್ರೇಷ್ಠ, ಆನೆ ಮಧ್ಯಮ ಮತ್ತು ನಾಯಿ ಕನಿಷ್ಠ. ಇಲ್ಲಿ ಕೃಷ್ಣ ಹೇಳುತ್ತಾನೆ: “ಪಂಡಿತಾಃ. ಸಮದರ್ಶಿನಃ” ಎಂದು. ಅಂದರೆ. ಪಂಡಿತರು ಸಮದೃಷ್ಟಿ ಉಳ್ಳವರಾಗಿರುತ್ತಾರೆ ಎಂದರ್ಥ. ಅವರು. ಪ್ರತಿಯೊಂದರಲ್ಲೂ, ಅದರೊಳಗಿರುವ ಭಗವಂತನ ವಿಶೇಷ ಅಭಿವ್ಯಕ್ತವನ್ನು ಕಾಣುತ್ತಾರೆ. ಹಸುವಾಗಿರಲಿ, ನಾಯಿಯಾಗಿರಲಿ, ವಿದ್ಯಾವಿನಯಸಂಪನ್ನರಾಗಿರಲಿ ಏನೇ ಇರಲಿ. ಏಕೆಂದರೆ ಭಗವಂತ ಸರ್ವಾಂತರ್ಯಮಿ, ಆತ ಎಲ್ಲರ ಒಳಗೂ ಇದ್ದಾನೆ. ಆತನ ಅಭಿವ್ಯಕ್ತಿ ಮಾತ್ರ ಬೇರೆ ಬೇರೆ. ಆತ ಒಂದೊಂದು ಜೀವಿಯಲ್ಲೂ ಒಂದೊಂದು ಅನನ್ಯ ಅಸಾಧಾರಣ NOPE (Exclusive ೦೩1 )ದಿಂದ ಅಭಿವ್ಯಕ್ತನಾಗುತ್ತಾನೆ. ಉದಾಹರಣೆಗೆ: ಮುಟ್ಟಿದರೆ ಮುನಿ ಗಿಡ (Touch me not); ಯಾರಿಗೂ ಬೇಡವಾಗಿ ಬೆಳೆಯುವ ಈ ಗಿಡದಲ್ಲಿ ಅಮೋಘವಾದ ಔಷಧೀಯ ಗುಣವಿದೆ. ಈ ಗಿಡವನ್ನು (ಹೂ ರಹಿತ) ಜಜ್ಜಿ ಬಟ್ಟೆಯಲ್ಲಿ ಕಟ್ಟಿ ಗಂಜಿಯ ಜೊತೆಗೆ ಬೇಯಿಸಿ, ಆ ಗಂಜಿಯನ್ನು ಸೇವಿಸಿದರೆ ಅಥವಾ ಈ ಗಿಡದ ಕಷಾಯಮಾಡಿ ಕುಡಿದರೆ, ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೇ ಮೂಲವ್ಯಾಧಿ(೧॥65) ಗುಣಮುಖವಾಗುತ್ತದೆ. ಅದೇ ರೀತಿ ಜೇನುನೊಣ: ಹೂವಿಂದ ರಸವನ್ನು ಹೀರಿ ಜೇನನ್ನು ತಯಾರಿಸುವ ಅಸಾಧಾರಣ ಶಕ್ತಿ ಇರುವುದು ಈ ಪುಟ್ಟ ಹುಳದಲ್ಲಿ. ನಮ್ಮ ತಾಂತ್ರಿಕತೆಯಿಂದ ಕೃತಕವಾಗಿ ಜೇನನ್ನು ತಯಾರಿಸಲು ಬರುವುದಿಲ್ಲ. ಈ ಪ್ರಪಂಚದಲ್ಲಿ ಏನೇನು ಹುಟ್ಟುತ್ತದೋ ಅದರೊಳಗೆ ವಿಶಿಷ್ಟ ಶಕ್ತಿಯಾಗಿ ತುಂಬಿರುವ, ನಿಯಾಮಕ ಶಕ್ತಿಯಾದ ಜನೇಶ್ವರ ಭಗವಂತನನ್ನು ಅಪರೋಕ್ಷ ಜ್ಞಾನಿಗಳು ಪ್ರತ್ರಿಯೊಂದರಲ್ಲೂ ಕಾಣುತ್ತಾರೆ. ನಾಯಿ ಇರಲಿ, ಹಸು ಇರಲಿ, ಶ್ವಪಾಕನಿರಲಿ, ವಿದ್ಯಾವಿನಯಸಂಪನ್ನನಿರಲಿ. ಪಂಡಿತ-ಎಲ್ಲವುದರಲ್ಲೂ ಆ ಭಗವಂತನ ಮಹಿಮೆಯನ್ನೇ ಕಾಣುತ್ತಾನೆ. ತಾನು ಎಲ್ಲವುದರಲ್ಲೂ ಅಂತರ್ಯಾಮಿಯಾಗಿ ಅತ್ಯಂತ ಶುದ್ಧನಾಗಿ ತುಂಬಿದ್ದು, ನಿರ್ಲಿಪ್ತನಾಗಿ, ಒಂದೊಂದು ವಸ್ತುವಿಗೆ ಒಂದೊಂದು ರೀತಿಯ ವಿಶಿಷ್ಟ ಶಕ್ತಿಯನ್ನು ಕೊಡುವ ಭಗವಂತ, ಈ ಅನಂತ ಪ್ರಪಂಚವನ್ನು ಸೃಷ್ಟಿ ಮಾಡಿ ನಮ್ಮ ಕಣ್ಣ ಮುಂದೆ ಇಟ್ಟ. ಇಂತಹ ಭಗವಂತನ ಮಹಿಮೆಯನ್ನು ಪ್ರತಿಯೊಂದು ವಸ್ತುವಿನಲ್ಲೂ ನೋಡಿ ಅನುಸಂಧಾನ ಮಾಡಬೇಕು. ಆತ ಎಲ್ಲಾ ಕಡೆಯೂ ಜ್ಞಾನಾನಂದಪೂರ್ಣನಾಗಿ, ಸರ್ವಗುಣಪೂರ್ಣ- ಸರ್ವಗತನಾಗಿ, ಪ್ರತಿಯೊಂದು ಅಣು-ಕಣದೊಳಗೆ ತುಂಬಿದ್ದಾನೆ ಎನ್ನುವ ಅನುಸಂಧಾನ -ಅಪರೋಕ್ಷ ಜ್ಞಾನಕ್ಕೆ
Bibek Debroy (1955–2024)The Bhagavad Gita
(18) ‘The wise look equally upon a brahmana, who is learned and humble, a cow, an elephant, a dog and an outcaste.’24