5.19

इहैव तैर्जितः सर्गो येषां साम्ये स्थितं मनः ।
निर्दोषं हि समं ब्रह्म तस्माद् ब्रह्मणि ते स्थिताः ॥
ihaiva tairjitaḥ sargo yeṣāṃ sāmye sthitaṃ manaḥ |
nirdoṣaṃ hi samaṃ brahma tasmād brahmaṇi te sthitāḥ ||
Swami Sivananda (1887–1963)Bhagavad Gita
19. Even here (in this world) birth (everything) is overcome by those whose minds rest in equality; Brahman is spotless indeed and equal; therefore, they are established in Brahman.
Bannanje Govindacharya (1936–2020)Bhagavad Gita Pravachana
ಇಹ ಏವ ತೈಃ ಜಿತಃ ಸರ್ಗಃ ಯೇಷಾಮ್‌ ಸಾಮ್ಯೇ ಸ್ಥಿತಮ್‌ ಮನಃ | ನಿರ್ದೋಷಮ್‌ ಹಿ ಸಮಮ್‌ ಬ್ರಹ್ಮ ತಸ್ಮಾತ್‌ ಬ್ರಹ್ಮಣಿ ತೇ ಸ್ಥಿತಾಃ -ಭಗವಂತನ ಏಕ ರೂಪತೆಯಲ್ಲಿ ಬಗೆ ನೆಟ್ಟವರು ಇಲ್ಲಿದ್ದೇ ಈ ಬಾಳನ್ನು ಗೆದ್ದವರು. ಭಗವಂತ ಎಲ್ಲೆಡೆಯೂ ದೋಷದ ನಂಟಿರದ ಏಕರೂಪಿ. ಆದ್ದರಿಂದ ಹೀಗೆ ತಿಳಿದವರು ಭಗವಂತನಲ್ಲಿ ನೆಲೆಗೊಂಡವರು. ಎಲ್ಲಾ ಕಡೆ ಇರುವ ಸರ್ವಗುಣಪೂರ್ಣ ಭಗವಂತ ಎಲ್ಲಾ ವಸ್ತುವಿನಲ್ಲಿಯೂ ತುಂಬಿದ್ದಾನೆ. ಎನ್ನುವ ಅನುಸಂಧಾನದಲ್ಲಿ ನಮ್ಮ ಮನಸ್ಸು ನೆಟ್ಟಾಗ ಹುಟ್ಟು ಸಾವಿನ ಆಚೆಗಿನ ಮೋಕ್ಷದ ಬಾಗಿಲು ನಮಗೆ ತೆರೆದಂತೆ. ಭಗವಂತ ಯಾವ ವಸ್ತುವಿನಲ್ಲಿದ್ದರೂ ಅವನಿಗೆ ದೋಷವಿಲ್ಲ, ಆತ ಎಲ್ಲಾ ಕಡೆ ನಿರ್ದುಷ್ಟ್ಠನಾಗಿದ್ದಾನೆ. ಯಾವ ಅಧಿಷ್ಠಾನದಲ್ಲಿದ್ದರೂ ಕೂಡಾ ಆತ ನಿರ್ಲಿಪ್ತನಾಗಿ ಅಲ್ಲಿ ತುಂಬಿದ್ದಾನೆ. ಇದನ್ನು ತಿಳಿದವರ ಮನಸ್ಸು ಭಗವಂತನಲ್ಲಿ ನೆಲೆ ನಿಂತಿರುತ್ತದೆ. ಆದ್ದರಿಂದ ಅವರು ಮರಳಿ ಬಂಧನಕ್ಕೊಳಗಾಗದೇ ಶಾಶ್ವತ ಮೋಕ್ಷವನ್ನು ಪಡೆಯುತ್ತಾರೆ. ಹಿಂದಿನ ಶ್ಲೋಕದಲ್ಲಿ ಕೃಷ್ಣ ಆಧ್ಯಾತ್ಮಿಕವಾಗಿ ಭಗವಂತನ ರೂಪದ ಸಮದೃಷ್ಟಿ ಬಗ್ಗೆ ವಿವರಿಸಿದ. ಮುಂದಿನ ಶ್ಲೋಕದಲ್ಲಿ ಅದಕ್ಕೆ ಪೂರಕವಾಗಿ ಸಾಮಾಜಿಕವಾಗಿ ನಮ್ಮ ಬದುಕಿನಲ್ಲಿ ಹೇಗೆ ಸಮದೃಷ್ಟಿ ಬೆಳೆಸಿಕೊಳ್ಳಬೇಕು ಎನ್ನುವುದನ್ನು ವಿವರಿಸುತ್ತಾನೆ.
Bibek Debroy (1955–2024)The Bhagavad Gita
(19) ‘Those whose minds are established in equality overcome the earth in this world.25 Because the brahman is equal and without fault, therefore, they26 remain established in the brahman.’